Tag: alcohol

  • ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದ ಏಳು ಜನರ ಸಾವು

    ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದ ಏಳು ಜನರ ಸಾವು

    ಮುಂಬೈ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಏಳು ಜನರು ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆ ಮಹಾರಾಷ್ಟ್ರದ ಯವತಮಲ್ ಜಿಲ್ಲೆಯಲ್ಲಿ ನಡೆದಿದೆ. ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಏಳು ಜನರು ಸಹ ಸಾವನ್ನಪ್ಪಿದ್ದಾರೆ.

    ತೆಲಿ ಫೀಲ್ ವ್ಯಾಪ್ತಿಯ ದತ್ತಾ ಲಾಂಜೇವಾರ್ ಮತ್ತು ನೂತನ್ ಸ್ಯಾನಿಟೈಸರ್ ಕುಡಿದು ಮನೆಗೆ ತೆರಳಿದ್ದರು. ರಾತ್ರಿ ಇಬ್ಬರಿಗೀ ತಲೆನೋವು ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರ ಸಾವಾಗಿದೆ.

    ಆಯತ್ ನಗರದಲ್ಲಿ ಸಂತೋಷ್ ಮೆಹ್ರಾ, ಗಣೇಶ್ ನಾಂದೇಕರ್, ಗಣೇಶ್ ಶೆಲಾರ್ ಮತ್ತು ಸುನಿಲ್ ಡೆಂಗಲೆ ಸಹ ಸ್ಯಾನಿಟೈಸರ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೋರ್ವನ ಹೆಸರು ತಿಳಿದು ಬಂದಿಲ್ಲ.

    ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಘೋಷಣೆಯ ಪರಿಣಾಮ ಮದ್ಯದಂಗಡಿಗಳು ಬಂದ್ ಆಗಿವೆ. ಮದ್ಯಪಾನ ಪ್ರಿಯರು ಅಂಗಡಿಗಳತ್ತ ಹೆಜ್ಜೆ ಹಾಕಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

  • ದೆಹಲಿಯಲ್ಲಿ ಲಾಕ್‍ಡೌನ್ ಘೋಷಣೆ – ಬಾರ್ ಮುಂದೆ ಜನಸಾಗರ

    ದೆಹಲಿಯಲ್ಲಿ ಲಾಕ್‍ಡೌನ್ ಘೋಷಣೆ – ಬಾರ್ ಮುಂದೆ ಜನಸಾಗರ

    ನವದೆಹಲಿ: ಲಾಕ್‍ಡೌನ್ ಘೋಷಣೆ ಆಗುತ್ತಿದ್ದಂತೆ  ಬಾರ್‌ಗಳ ಮುಂದೆ ಜನ ಮುಗಿಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.

    ಕೊರೊನಾ ಹೆಚ್ಚಾಗುತ್ತಿರುವ ಕಾರಣದಿಂದಾಗಿ ದೆಹಲಿಯಲ್ಲಿ ಇಂದಿನಿಂದ ಒಂದುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‍ಡೌನ್ ಜಾರಿಯಲ್ಲಿ ಇರಲಿದೆ. ಲಾಕ್‍ಡೌನ್ ಆದೇಶ ಹೊರಬೀಳುತ್ತಿದ್ದಂತೆ ಮದ್ಯಪ್ರಿಯರು ಬಾರ್ ಮುಂದೆ ಸಾಲುಗಟ್ಟಿನಿಂತಿದ್ದರು. ನಾ ಮುಂದು.. ತಾ ಮುಂದು.. ಎಂದು ಒಂದು ವಾರಕ್ಕೆ ಆಗುವಷ್ಟು ಮದ್ಯವನ್ನು ಕೊಂಡುಕೊಳ್ಳುತ್ತಿದ್ದರು.

    ದೆಹಲಿಯ ಖಾನ್ ಮಾರ್ಕೆಟ್‍ನ ಬಾರ್‍ವೊಂದರ ಮುಂದೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಉದ್ದುದ್ದದ ಕ್ಯೂ ನಿಂತಿರೋದು ಕಂಡುಬಂದಿದೆ. ದೆಹಲಿಯ ಹಲವೆಡೆ ಪೊಲೀಸರು ಈಗಾಗಲೇ ಬ್ಯಾರಿಕೇಡ್‍ಗಳನ್ನು ಹಾಕಿ ಭದ್ರತೆ ಒದಗಿಸಿದ್ದಾರೆ.

    “ಇಂಜೆಕ್ಷನ್ ನಿಂದ ಪ್ರಯೋಜನವಾಗಲ್ಲ. ಆಲ್ಕೋಹಾಲ್‍ನಿಂದಲೇ ಪ್ರಯೋಜನವಾಗುತ್ತದೆ. ನನಗೆ ಔಷಧಿಯಿಂದ ಏನು ಪರಿಣಾಮ ಆಗಲ್ಲ. ಒಂದು ಪೆಗ್ ಹಾಕಿದ್ರೆನೆ ಎಫೆಕ್ಟ್. ನಾನು ಇಲ್ಲಿಯವರೆಗೆ ಆಸ್ಪತ್ರೆಗೆ ಹೋಗಿಲ್ಲ. ಮಂದೆನೂ ಬಚಾವ್ ಆಗುತ್ತೇನೆ” ಎಂದು ಶಿವಪುರ ಗೀತಾ ಕಾಲೋನಿಯ ಅಂಗಡಿಯೊಂದರಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆಯೊಬ್ಬರು ಹೇಳಿದ್ದಾರೆ.

    ಲಾಕ್‍ಡೌನ್ ವೇಳೆ ಆಹಾರ, ಮೆಡಿಕಲ್ ಸೇರಿದಂತೆ ಅತ್ಯಗತ್ಯ ಸೇವೆಗಳಿಗೆ ಯಾವುದೇ ಪ್ರತಿಬಂಧ ಇರೋದಿಲ್ಲ. ಮದುವೆಯಲ್ಲಿ ಕೇವಲ 50 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಎಲ್ಲರೂ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಮದುವೆಗೆ ಪಾಸ್ ನೀಡಲಾಗುತ್ತದೆ ಎಂದು ಕೆಲವಷ್ಟು ರೂಲ್ಸ್‍ಗಳನ್ನು ನೀಡಿ ಏಪ್ರಿಲ್ 26ರ ತನಕ ದೆಹಲಿಯಲ್ಲಿ ಲಾಕ್‍ಡೌನ್ ಇರಲಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

  • ಕುಡಿದ ಅಮಲಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಮೇಲೆ ವ್ಯಕ್ತಿ ಡ್ಯಾನ್ಸ್

    ಕುಡಿದ ಅಮಲಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಮೇಲೆ ವ್ಯಕ್ತಿ ಡ್ಯಾನ್ಸ್

    ಲಕ್ನೋ: ಕೋವಿಡ್-19 ಭೀತಿಯಿಂದ ಈ ಬಾರಿ ದೇಶಾದ್ಯಂತ ಹೋಳಿ ಹಬ್ಬವನ್ನು ಅಷ್ಟಾಗಿ ಜನರು ಆಚರಿಸಲಾಗಲಿಲ್ಲ. ಆದರೆ ಉತ್ತರ ಪ್ರದೇಶದ ಪ್ರತಾಪ್‍ಗಢದಲ್ಲಿ ಹೋಳಿಹಬ್ಬದಂದು ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಏರಿ ಡ್ಯಾನ್ಸ್ ಮಾಡಿದ್ದಾನೆ.

    ಸೋಮವಾರ ಮಧ್ಯಾಹ್ನ ವ್ಯಕ್ತಿಯೋರ್ವ ಮದ್ಯ ಸೇವಿಸಿ, ನಡೆಯಲು ಸಾಧ್ಯವಾಗದಿದ್ದರೂ ಸಹ ಮೆಟ್ಟಿಲುಗಳನ್ನು ಹತ್ತಿ ವಾಟರ್ ಟ್ಯಾಂಕ್ ಮೇಲಕ್ಕೆ ತಲುಪಿದ್ದಾನೆ.

    ಬಳಿಕ ತನ್ನ ಮೊಬೈಲ್‍ನಲ್ಲಿ ಹಾಡನ್ನು ಪ್ಲೇ ಮಾಡಿ ಕೊಂಚವೂ ಭಯವಿಲ್ಲದೇ ನೃತ್ಯ ಮಾಡಲು ಆರಂಭಿಸಿದ್ದಾನೆ. ಇದನ್ನು ಕಂಡು ಭಯಗೊಂಡ ದಾರಿ ಹೋಕರು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ತಮ್ಮ ಮೊಬೈಲ್‍ನಲ್ಲಿ ವೀಡಿಯೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ನಂತರ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಹಲವಾರು ಹರಸಾಹಸ ಪಟ್ಟು ವ್ಯಕ್ತಿಯನ್ನು ರಕ್ಷಿಸಿದರು. ಅದೃಷ್ಟವಶತ್ ಜರುಗಬೇಕಿದ್ದ ಅನಾಹುತವನ್ನು ತಪ್ಪಿಸಿದರು.

  • ಕಳ್ಳಬಟ್ಟಿ ಸೇವಿಸಿ ಯುವಕ ಸಾವು

    ಕಳ್ಳಬಟ್ಟಿ ಸೇವಿಸಿ ಯುವಕ ಸಾವು

    ವಿಜಯಪುರ: ಕಳ್ಳಬಟ್ಟಿ ಮದ್ಯ ಸೇವಿಸಿ ಯುವಕ ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾ. ಜಾಲಗೇರಿ ತಾಂಡಾ-1 ರಲ್ಲಿ ಘಟನೆ ನಡೆದಿದೆ.

    ಸಹದೇವ ಜುಮ್ಮನ್ನಗೊಳ ಸಾವಿಗೀಡಾದ ವ್ಯಕ್ತಿ. ಈತ ಕಳ್ಳಬಟ್ಟಿ ಸೇವಿಸಿ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

    ಸಹದೇವ ಜಿಲ್ಲೆಯ ಬಬಲೇಶ್ವರ ನಿವಾಸಿಯಾಗಿದ್ದು, ತಾಯಿ ತವರೂರು ಜಾಲಗೇರಿಯಲ್ಲೇ ವಾಸವಿದ್ದ. ಜಾಲಗೇರಿ ತಾಂಡಾದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಸೇವನೆಯಿಂದಲೇ ಯುವಕನ ಸಾವಾಗಿದೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಳ್ಳಬಟ್ಟಿ ಮದ್ಯ ಮಾರುವವರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ಕೋಲ್ಕತ್ತಾ: 22 ವರ್ಷದ ಮಹಿಳೆಯೊಬ್ಬಳು 56 ವರ್ಷದ ತಂದೆಯನ್ನು ಊಟಕ್ಕೆಂದು ಕರೆದೊಯ್ದು ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಮಹಿಳೆ ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್ ನಿವಾಸಿಯಾಗಿದ್ದು, ಭಾನುವಾರ ರಾತ್ರಿ ತನ್ನ ತಂದೆಯೊಂದಿಗೆ ರೆಸ್ಟೋರೆಂಟ್‍ಗೆ ತೆರಳಿ ಮದ್ಯ ಕುಡಿಸಿದ್ದಾಳೆ. ಬಳಿಕ ಇಬ್ಬರು ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ತಂದೆ ನಿದ್ರೆಗೆ ಜಾರಿದ ನಂತರ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತಂತೆ ವಿಚಾರಣೆ ವೇಳೆ ಮಹಿಳೆ, ತಾನು ಚಿಕ್ಕವಳಿದ್ದಾಗಲೆ ತಾಯಿ ತೀರಿಕೊಂಡಿದ್ದು, ನಂತರ ತಂದೆ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ಭಾವನಾತ್ಮಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.

    ಮಹಿಳೆ ಮದುವೆ ನಂತರ ಹಿಂಸೆ ನೀಡುವುದನ್ನು ನಿಲ್ಲಿಸಿದ್ದ ತಂದೆ, ಮದುವೆ ಮುರಿದು ಮಹಿಳೆ ಮನೆಗೆ ಹಿಂದಿರುಗಿದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು ಎಂದು ತಿಳಿಸಿದ್ದಾಳೆ. ಸದ್ಯ ಮಹಿಳೆಯ ಚಿಕ್ಕಪ್ಪ ಘಟನೆ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಮಹಿಳೆ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಕುಡಿಯಲು ಹಣ ನೀಡದ ಪತ್ನಿ – ಚಾಕುವಿನಿಂದ ಇರಿದು ತಾನೂ ಚುಚ್ಚಿಕೊಂಡ ಪತಿರಾಯ

    ಕುಡಿಯಲು ಹಣ ನೀಡದ ಪತ್ನಿ – ಚಾಕುವಿನಿಂದ ಇರಿದು ತಾನೂ ಚುಚ್ಚಿಕೊಂಡ ಪತಿರಾಯ

    ದಾವಣಗೆರೆ: ಕುಡಿಯಲು ಹಣ ಕೊಡಲಿವೆಂದು ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ಚಾಕುವಿನಿಂದ ಚುಚ್ಚಿಕೊಂಡಿರುವ ಘಟನೆ ದಾವಣಗೆರೆಯ ಅಮರಾವತಿಯಲ್ಲಿ ನಡೆದಿದೆ.

    ಸೌಭಾಗ್ಯಮ್ಮ (50) ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡಲ್ಲವೆಂದು ಪತಿ ಪರಶುರಾಮ(54) ಕೊಲೆ ಮಾಡಿ ತಾನು ಚಾಕುವಿನಿಂದ ಇರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.

    ದಂಪತಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅಮರಾವತಿ ಗ್ರಾಮದ ನಿವಾಸಿಗಳಾಗಿದ್ದಾರೆ. ಕುಡಿಯಲು ಪತ್ನಿ ಹಣ ನೀಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿರಾಯ ಚಾಕುನಿಂದ ಪತ್ನಿಗೆ ಇರಿದಿದ್ದಾನೆ. ಕೊನೆಗೆ ತಾನೂ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಡಿಯಲು ದುಡ್ಡು ಕೇಳಿದಾಗ ಕೊಡದ ಪತ್ನಿಯ ಮೇಲೆ ಸಿಟ್ಟು ಬಂದು ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

  • ಬೆಳಗಾವಿ ಉಪಚುನಾವಣೆಗೆ ಮದ್ಯ ಸಂಗ್ರಹ – 13 ಲಕ್ಷ ಮೌಲ್ಯದ ಮದ್ಯ ಜಪ್ತಿ

    ಬೆಳಗಾವಿ ಉಪಚುನಾವಣೆಗೆ ಮದ್ಯ ಸಂಗ್ರಹ – 13 ಲಕ್ಷ ಮೌಲ್ಯದ ಮದ್ಯ ಜಪ್ತಿ

    ಬೆಳಗಾವಿ: ಲಕ್ಷಾಂತರ ರೂಪಾಯಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಇಬ್ಬರು ವ್ಯಕ್ತಿಗಳು ಆರ್ಮಿ ಮತ್ತು ಅಂತಾರಾಜ್ಯ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಸಿಬಿಐ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಡಿಸಿಪಿ ವಿಕ್ರಮ್ ಆಮ್ಟೆ ನೇತೃತ್ವದ ಸಿಸಿಐಬಿ ಎಸಿಪಿ ನಾರಾಯಣ ಭರಮನಿ, ಪಿಐ ಸಂಜೀವ ಕಾಂಬಳೆ ತಂಡ ಕಾರ್ಯಾಚರಣೆ ನಡೆಸಿದೆ.

    ಈ ವೇಳೆ ರಾಜೇಶ್ ನಾಯಿಕ, ಶಂಕರ್ ದೇಸನೂರ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಳಿ ಇದ್ದ ವಿವಿಧ ಬ್ರ್ಯಾಂಡ್‍ನ 13 ಲಕ್ಷ ಮೌಲ್ಯದ 547 ಮದ್ಯದ ಬಾಟಲಿಗಳನ್ನು ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ ಮುಂಬರುವ ಲೋಕಸಭೆ ಉಪ ಚುನಾವಣೆ ಸಮಯದಲ್ಲಿ ಮಾರಾಟ ಮಾಡಲು ಮದ್ಯ ಬಾಟಲಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

  • ಬಾರಿನಲ್ಲಿ ಎಣ್ಣೆ ಪಾರ್ಟಿ – ವಿದ್ಯಾರ್ಥಿಗಳ ಕಪಾಳಕ್ಕೆ ಬಿತ್ತು ಪ್ರಾಂಶುಪಾಲರ ಏಟು

    ಬಾರಿನಲ್ಲಿ ಎಣ್ಣೆ ಪಾರ್ಟಿ – ವಿದ್ಯಾರ್ಥಿಗಳ ಕಪಾಳಕ್ಕೆ ಬಿತ್ತು ಪ್ರಾಂಶುಪಾಲರ ಏಟು

    ಮಡಿಕೇರಿ: ಕಾಲೇಜು ಸಮೀಪದಲ್ಲೇ ಇದ್ದ ಬಾರಿಗೆ ಹೋಗಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರೊಬ್ಬರು ರೆಡ್ ಹ್ಯಾಂಡ್ ಅಗಿ ಹಿಡಿದು ಕಪಾಳಕ್ಕೆ ಹೊಡೆದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.

    ವಿರಾಜಪೇಟೆ ನಗರದ ಪ್ರತಿಷ್ಠಿತ ಕಾಲೇಜೊಂದರ ಐದು ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಬಾರಿಗೆ ಹೋಗಿ ಎಣ್ಣೆ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದರು. ವಿಷಯ ತಿಳಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮದಲೈ ಮುತ್ತು ಅವರು ಬಾರಿಗೆ ತೆರಳಿ ವಿದ್ಯಾರ್ಥಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬುದ್ಧಿವಾದ ಹೇಳಿ ಇಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

    ಪ್ರಾಂಶುಪಾಲರಾದ ಮದಲೈ ಮುತ್ತು ಇಬ್ಬರಿಗೆ ಕಪಾಳ ಮೋಕ್ಷ ಮಾಡುತ್ತಿದ್ದಂತೆ, ಜೊತೆಗಿದ್ದ ವಿದ್ಯಾರ್ಥಿಯೋರ್ವ ಅಲ್ಲಿಂದ ಕಾಲ್ಕಿಳಲು ಮುಂದಾಗಿದ್ದಾನೆ. ತಕ್ಷಣವೇ ಆ ವಿದ್ಯಾರ್ಥಿಯನ್ನು ಹಿಡಿದು ಆತನಿಗೂ ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.

    ವಿದ್ಯಾರ್ಥಿಗಳಿಗೆ ಬಾರ್‍ನಲ್ಲಿ ಎಣ್ಣೆ ಸಪ್ಲೈ ಮಾಡಿದ ಬಾರಿನ ಮ್ಯಾನೇಜರ್ ಗೆ ಕ್ಲಾಸ್ ತೆಗೆದುಕೊಂಡಿರುವ ಕಾಲೇಜಿನ ಪ್ರಾಂಶುಪಾಲರು, ಶಾಲೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ನೋಡಿ ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳಿ ಕಾಲೇಜಿಗೆ ಕಳುಹಿಸುವ ಜವಾಬ್ದಾರಿ ತಮಗೂ ಇರುತ್ತದೆ. ಆದರೆ ಹಣದ ಆಸೆಗೆ ಈ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೀವೇ ಮದ್ಯವನ್ನು ನೀಡಿರುವುದು ಸರಿಯಲ್ಲ, ಈ ಕುರಿತು ನಿಮ್ಮ ಬಾರಿನ ಮೇಲೆ ಸಂಬಂಧಿಸಿದ ಇಲಾಖೆಗೆ ದೂರು ನೀಡುವುದಾಗಿ ಅಕ್ರೋಶ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳಿಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.

  • ಗೋವಾದಲ್ಲಿ ಮದ್ಯಪಾನ ಮಾಡೋ ಮುನ್ನ ಹುಷಾರ್ – ಬೀಳುತ್ತೆ ಬಾರೀ ದಂಡ

    ಗೋವಾದಲ್ಲಿ ಮದ್ಯಪಾನ ಮಾಡೋ ಮುನ್ನ ಹುಷಾರ್ – ಬೀಳುತ್ತೆ ಬಾರೀ ದಂಡ

    ಪಣಜಿ: ರಜೆ ಸಮಯದಲ್ಲಿ ಗೋವಾ ಪ್ರವಾಸಕ್ಕೆ ತೆರಳಿ ಅಲ್ಲಿನ ಕಡಲ ತೀರದಲ್ಲಿ ಮದ್ಯಪಾನ ಮಾಡುವ ಯೋಚನೆ ನಿಮಗೇನಾದರೂ ಇದ್ದರೆ ಈಗಲೇ ಜಾಗೃತರಾಗಿರಿ. ಇದರಿಂದ ನೀವೇ ತೊಂದರೆಗೆ ಸಿಲುಕಿ ಹಾಕಿಕೊಳ್ಳಬಹುದು. ಯಾಕಂದ್ರೆ ಇನ್ನು ಮುಂದೆ ಗೋವಾ ಕಡಲ ತೀರಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸಲು ಗೋವಾ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

    ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಹಲವು ಪ್ರದೇಶಗಳು ಬಾಟಲಿಗಳ ಕಸದ ರಾಶಿಯಿಂದ ತುಂಬಿದ್ದನ್ನು ಗಮನಿಸಿದ ಗೋವಾ ಪ್ರವಾಸೋದ್ಯಮ ಇಲಾಖೆ, ಇನ್ನು ಮುಂದೆ ಕಡಲ ತೀರದಲ್ಲಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ಜನರಿಗೆ 10,000 ರೂ. ದಂಡ ವಿಧಿಸಲು ಮುಂದಾಗಿದೆ. ಅಲ್ಲದೇ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಸಲುವಾಗಿ ಕೆಲವು ಮಂಡಳಿ(ಬೋರ್ಡ್)ಗಳನ್ನು ಸ್ಥಾಪಿಸಲಾಗಿದೆ ಎಂದು ಗೋವಾ ಪ್ರವಾಸೋದ್ಯಮ ನಿರ್ದೇಶಕ ಮೆನಿನೊ ಡಿಸೋಜಾ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

    ರಾಜ್ಯದ ಪ್ರವಾಸೋದ್ಯಮ ಇಲಾಖೆ ತಿದ್ದುಪಡಿ ಕಾಯ್ದೆಯನ್ನು ಪೊಲೀಸರ ಮೂಲಕ ಜಾರಿಗೊಳಿಸಿದ್ದು, ಪ್ರವಾಸಿ ಪೊಲೀಸ್ ಪಡೆ ಇದ್ದರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ 2019ರ ಜನವರಿಯಲ್ಲಿ ರಾಜ್ಯ ಸರ್ಕಾರವು ಪ್ರವಾಸಿ ವ್ಯಾಪಾರ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಿ ಅದರ ಅನ್ವಯ ಕಡಲ ತೀರದಲ್ಲಿ ಕುಡಿಯುವ ಒಬ್ಬ ವ್ಯಕ್ತಿಗೆ 2,000 ರೂ. ಮತ್ತು ಗುಂಪುಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸಲಾಗಿತ್ತು.

    ಅಲ್ಲದೆ ಶುಕ್ರವಾರ ಗೋವಾದಲ್ಲಿ ನಡೆಸಿದ ಕೊರೊನಾ ವೈರಸ್ ಪರೀಕ್ಷೆಯಲ್ಲಿ 83 ಜನರಿಗೆ ಪಾಸಿಟಿವ್ ಬಂದಿದ್ದು, ಸೋಂಕಿನಿಂದ 105 ಜನ ಚೇತರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಇಲ್ಲಿಯವರೆಗೂ ಗೋವಾದಲ್ಲಿ ಸೋಂಕಿತರ ಸಂಖ್ಯೆ 51,709ಕ್ಕೆ ತಲುಪಿದ್ದು, ಈ ಪೈಕಿ 50,088 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಹಾಗೂ 744 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ 877 ಸಕ್ರಿಯ ಪ್ರಕರಣಗಳು ಉಳಿದಿದೆ.

  • ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    – ಪತ್ನಿ ಹಣ ಕೊಡದಿದ್ದಕ್ಕೆ ಕಂದಮ್ಮನನ್ನೇ ಮಾರಿದ

    ಹೈದರಾಬಾದ್: ಮದ್ಯದ ಚಟಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಹೊಸ ವರ್ಷದ ಸಂಭ್ರಮಾಚರಣೆಗೆ ಮದ್ಯ ಖರೀದಿಸಲು ತನ್ನ ಮಗನನ್ನೇ ಮಾರಾಟಕ್ಕಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜು ಮತ್ತು ಸಾರಾ ದಂಪತಿ ಮಲಕ್‍ಪೇಟೆ ಏರಿಯಾ ಆಸ್ಪತ್ರೆಯ ಬಳಿ ಫುಟ್‍ಪಾತ್‍ನಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು. ದಂಪತಿಗೆ 6 ತಿಂಗಳ ಗಂಡು ಮಗುವೊಂದಿತ್ತು. ಹೊಸ ವರ್ಷದ ಗುಂಗಿನಲ್ಲಿದ್ದ ರಾಜು ತನ್ನ ಪತ್ನಿ ಸಾರಾ ಜೊತೆ ಮದ್ಯ ಖರೀದಿಸಲು ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದರಿಂದ ತನ್ನ 6 ತಿಂಗಳ ಮಗುವನ್ನೇ ಮಾರಾಟ ಮಾಡಲು ಹೊರಟಿದ್ದಾನೆ.

    ಹೊಸ ವರ್ಷದ ಆಚರಣೆಗಾಗಿ ಮದ್ಯಕುಡಿಯಲು ಹಣ ಕೊಡದಿದ್ದ ಪತ್ನಿಯ ವಿರುದ್ಧ ಕೋಪಗೊಂಡ ರಾಜು ತನ್ನ ಆರು ತಿಂಗಳ ಗಂಡು ಮಗುವನ್ನು ಆಫ್ರೀನ್ ಎಂಬ ಏಜೆಂಟ್‍ನ ಸಹಾಯದಿಂದ ಮಾರಾಟ ಮಾಡಲು ಯತ್ನಿಸಿದ್ದಾನೆ. ಅದರಂತೆ ಏಜೆಂಟ್, ಗಂಡು ಮಗುವನ್ನು ಬಯಸುವ ಗ್ರಾಹಕರನ್ನು ಸಂಪರ್ಕಿಸಿ 70,000 ರೂಪಾಯಿಗೆ ಮಾರಾಟ ಮಾಡಿ ಕೊಡುವುದಾಗಿ ರಾಜುಗೆ ತಿಳಿಸಿದ್ದಾನೆ.

    ಆಫ್ರೀನ್ ಮಗುವಿನೊಂದಿಗೆ ಎಬ್ಬಿ ನಗರಕ್ಕೆ ಕರೆದುಕೊಂಡು ಬಂದು ಮಾರಾಟ ಮಾಡುತ್ತಿರುವುದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಚಾದರ್‍ಘಾಟ್ ಪೊಲೀಸರು, ರಾಜು ಮತ್ತು ಆಫ್ರೀನ್ ನಡುವೆ ಹಣದ ವಿಚಾರವಾಗಿ ಚೌಕಾಸಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಸಿಸಿಟಿವಿ ಆಧಾರದ ಮೂಲಕ ಮಗುವನ್ನು ಮಾರಾಟ ಮಾಡಿದ ಸ್ಥಳವನ್ನು ಗುರುತು ಮಾಡಿ ಮಗುವನ್ನು ರಕ್ಷಿಸಿದ್ದಾರೆ. ರಾಜು ಮತ್ತು ಆಫ್ರೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಾದರ್‍ಘಾಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.