Tag: alcohol

  • ಹೊಸ ವರ್ಷಾಚರಣೆಯಲ್ಲಿ ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!

    ಹೊಸ ವರ್ಷಾಚರಣೆಯಲ್ಲಿ ಕುಡಿದವರಿಗೆ ಡ್ರಾಪ್ ಹೋಮ್ ಸೌಲಭ್ಯ!

    ಡಿಸ್ಪುರ್: ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ನೀಡುವ ಹಾಗೂ ಕಫ್ರ್ಯೂ ನಿಯಮಗಳ ಬಗ್ಗೆ ಕೇಳಿಬರುತ್ತಿದೆ. ಆದರೆ ಅಸ್ಸಾಂನ ಬಿಸ್ವಂತ್ ಜಿಲ್ಲೆಯಲ್ಲಿ ಮಾತ್ರ ಹೊಸ ವರ್ಷಾಚರಣೆಗೆ ಉತ್ತೇಜನ ನೀಡುತ್ತಿದ್ದು, ಕುಡುಕರಿಗೆ ಹೊಸದೊಂದು ಸೌಲಭ್ಯವನ್ನೂ ಒದಗಿಸುತ್ತಿದೆ.

    ಡ್ರಂಕ್ ಆಂಡ್ ಡ್ರೈವ್ ನಿಂದಾಗುವ ಅಪಘಾತಗಳನ್ನು ತಪ್ಪಿಸಲು ಅಸ್ಸಾಂನ ಬಿಸ್ವಂತ್ ಜಿಲ್ಲಾಡಳಿತ ಎರಡು ಸಹಾಯವಾಣಿಯನ್ನು ಸ್ಥಾಪಿಸಿದೆ. ಹೊಸವರ್ಷದಲ್ಲಿ ಮದ್ಯಪಾನ ಮಾಡಿದವರನ್ನು ಮನೆಗೆ ಬಿಡಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದೆ. ಹೊಸ ವರ್ಷದ ಕಾರ್ಯಕ್ರಮದಿಂದ ಕುಡುಕರನ್ನು ಅವರ ಮನೆಗಳಿಗೆ ಬಿಡಲು ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ತಡೆಗೆ ಮತ್ತಷ್ಟು ಟಫ್ ರೂಲ್ಸ್ – ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ 50:50 ರೂಲ್ಸ್ ಜಾರಿ

    ಅತಿಯಾದ ಮದ್ಯ ಸೇವನೆಯಿಂದ ಅಪಘಾತ ಸಂಭವಿಸಬಹುದು ಎಂದು ಭಾವಿಸುವ ಜನರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಡ್ರಾಪ್ ಹೋಮ್ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ವಾಹನಗಳನ್ನು ನಿಯೋಜಿಸಲಾಗಿದೆ. ಡಿಸೆಂಬರ್ 31ರಂದು ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಬಿಸ್ವಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಲೀನಾ ಡೋಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷವನ್ನು ಆಚರಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆಚರಣೆಯ ಸಮಯದಲ್ಲಿ ಯಾರಾದರೂ ಕುಡಿದು ಮನೆಗೆ ಹಿಂದಿರುಗಲು ಸಾಧ್ಯವಾಗದಿದ್ದರೆ ಅಂತಹವರಿಗೆ ಜಿಲ್ಲಾಡಳಿತ ನೆರವಿನೊಂದಿಗೆ ಪೊಲೀಸ್ ಇಲಾಖೆ ವಾಹನ ವ್ಯವಸ್ಥೆ ಮಾಡಿದೆ ಎಂದರು. ಇದನ್ನೂ ಓದಿ: ಜನಸಂಪರ್ಕ ಬೆಳೆಸಿಕೊಳ್ಳಿ – ಜಿ.ಪಂ. ಸಿಇಓಗಳಿಗೆ ಬೊಮ್ಮಾಯಿ ಸಲಹೆ

    ಈ ಉದ್ದೇಶಕ್ಕಾಗಿ ಸ್ಥಾಪಿಸಲಾದ ಎರಡು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇವೆ ಅಸ್ಸಾಂನ ಬಿಸ್ವಂತ್ ಜಿಲ್ಲೆಗೆ ಮಾತ್ರ ಅನ್ವಯವಾಗುತ್ತದೆ.

  • 800 ವರ್ಷಗಳ ಹಿಂದೆ ಮದ್ಯ ಸಂಗ್ರಹಿಸಿಡುತ್ತಿದ್ದ ಅವಶೇಷಗಳು ಪತ್ತೆ

    800 ವರ್ಷಗಳ ಹಿಂದೆ ಮದ್ಯ ಸಂಗ್ರಹಿಸಿಡುತ್ತಿದ್ದ ಅವಶೇಷಗಳು ಪತ್ತೆ

    ಬೀಜಿಂಗ್: ಸರಿಸುಮಾರು 800 ವರ್ಷಗಳ ಹಿಂದೆ ಮದ್ಯದ ಸಂಗ್ರಹಿಸಿಡಲು ಬಳಸುತ್ತಿದ್ದ ಅವಶೇಷಗಳು ಮಧ್ಯ ಚೀನಾದಲ್ಲಿ ಪತ್ತೆಯಾಗಿವೆ.

    ಈ ವಿಚಾರವಾಗಿ ಮಾಹಿತಿ ನೀಡಿದ ಪುರಾತತ್ವ ಶಾಸ್ತ್ರಜ್ಞರು, ಮಣ್ಣಿನ ಮಡಿಕೆಯಲ್ಲಿ ಮದ್ಯ ಸಂಗ್ರಹಿಸಿಟ್ಟಿಡುತ್ತಿರುವುದು ಪತ್ತೆಯಾಗಿದೆ. ಇದು ಸುಮಾರು 800 ವರ್ಷಗಳ ಹಿಂದಿನದ್ದಾಗಿದೆ. ಚೀನಾದ ಜನರು ಮೊನಾಸ್ಕಸ್ ಅಲ್ಕೋಹಾಲ್ ತಯಾರಿಸಲು ಬಳಸುತ್ತಿದ್ದರು ಅನ್ನೋದಕ್ಕೆ ಪುರಾವೆ ಸಿಕ್ಕಿವೆ ಎಂದು ತಿಳಿಸಿದ್ದಾರೆ.

    ALCOHOL

    ಚೀನಾದ ಸಾಂಸ್ಕ್ರತಿಕ ತಾಣ ಹೆನಾನ್ ಪ್ರಾಂತ್ಯದ ಪೀಲಿಗಾಂಗ್‍ನಲ್ಲಿ 2 ಮಣ್ಣಿನ ಮಡಿಕೆಗಳು ಪತ್ತೆ ಆಗಿವೆ ಎಂದು ಚೀನಾದ ಪುರಾತತ್ವ ಇಲಾಖೆಯ ಅಧಿಕಾರಿ ಯೊಂಗ್‍ಕಿಯಾಂಗ್ ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋ, ರಾತ್ರಿ ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ಧ್ವಂಸ – ಸ್ಥಳೀಯರ ಆಕ್ರೋಶ

    ಇಲ್ಲಿ ಪತ್ತೆಯಾಗಿರುವ ಮಡಿಕೆಗಳು ಮದ್ಯ ತುಂಬಲು ಮತ್ತು ಮದ್ಯ ತಯಾರಿಸಲು ಬಳಸುಲಾಗುತ್ತಿತ್ತು ಅನ್ನೋದು ಸ್ಪಷ್ಟವಾಗುತ್ತಿದೆ. ಪೀಲಿಗಾಂಗ್ ಪ್ರಾಂತ್ಯವು ಚೀನಾದ ಅತ್ಯಂತ ಪ್ರಾಚೀನ ಕಾಲದ ಪ್ರದೇಶವಾಗಿದೆ.  ಇದನ್ನೂ ಓದಿ: ಸಿಎಂ ಭಾವುಕ ಭಾಷಣಕ್ಕೆ ಸಿ.ಎಂ ಇಬ್ರಾಹಿಂ ಲೇವಡಿ

  • ಮದ್ಯಕ್ಕೆ ಹತ್ತು ರೂ. ನೀಡದ್ದಕ್ಕೆ ಸ್ನೇಹಿತನನ್ನೇ ಕೊಂದ್ರು

    ಮದ್ಯಕ್ಕೆ ಹತ್ತು ರೂ. ನೀಡದ್ದಕ್ಕೆ ಸ್ನೇಹಿತನನ್ನೇ ಕೊಂದ್ರು

    ಮುಂಬೈ: ಮದ್ಯಕ್ಕೆ ಹತ್ತು ರೂ. ನೀಡಲು ನಿರಾಕರಿಸಿದ 50 ವರ್ಷದ ವ್ಯಕ್ತಿಯನ್ನು ಆತನ ಇಬ್ಬರು ಸ್ನೇಹಿತರು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.

    ಭಗವತ್ ಸೀತಾರಾಮ್ ಫೇಸ್ (50) ಮೃತದುರ್ದೈವಿಯಾಗಿದ್ದು, ಆತನ ಇಬ್ಬರು ಸ್ನೇಹಿತರಾದ 40 ವರ್ಷದ ವಿನೋದ್ ಲಕ್ಷ್ಮಣ್ ವಾಂಖೆಡೆ ಮತ್ತು 35 ವರ್ಷದ ದಿಲೀಪ್ ತ್ರ್ಯಂಬಕ್ ಬೊಡ್ಡೆ ಮದ್ಯದಂಗಡಿಗೆ ಕುಡಿಯಲು ಹೋಗಿದ್ದಾರೆ. ಬಳಿಕ ಭಗವತ್ ಸೀತಾರಾಮ್‍ಗೆ ಹತ್ತು ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಹಣ ನೀಡಲು ನಿರಾಕರಿಸಿದ ಭಗವತ್ ಸೀತಾರಾಮ್ ಅಂಗಡಿಯಿಂದ ಹೊರಗೆ ಹೋಗುತ್ತಿದ್ದಂತೆಯೇ ಆತನ ತಲೆಗೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ಇದರಿಂದ ಗಂಭೀರವಾಗಿ ಗಾಯಗೊಂಡ ಭಗವತ್ ಸೀತಾರಾಮ್ ಪ್ರಜ್ಞೆತಪಿ ಕೆಳಗೆ ಬಿದ್ದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮಾಹಿತಿ ದೊರೆತ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಒಂದು ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿ ಪತ್ನಿ ಎಸ್ಕೇಪ್

  • ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಮಡಿಕೇರಿ: ಕಳ್ಳರು ಕದಿಯೋದಾದ್ರೆ ಚಿನ್ನಾಭರಣವನ್ನೋ, ನಗದನ್ನೋ ಇಲ್ಲ ಬೆಲೆ ಬಾಳುವ ವಸ್ತುಗಳ ಕದಿಯೋದು ಸರ್ವೆಸಾಮಾನ್ಯ. ಆದರೆ ಇಲ್ಲೊಬ್ಬ ಕೊರಗಜ್ಜ ದೇವರಿಗೆ ಇಟ್ಟ ನೈವೇದ್ಯ ಎರಡು ಪ್ಯಾಕೇಟ್ ಮದ್ಯವನ್ನು ಎಗರಿಸಿದ್ದಾನೆ.

    ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್‍ನಲ್ಲಿ ಕೊರಗಜ್ಜನ ದೇವಾಲಯವಿದೆ. ಅಲ್ಲಿಗೆ ಬಂದ ಕಳ್ಳನೊಬ್ಬ ದೇವಾಲಯದ ಹೊರಗೆ ನಿಂತು ದೇವಾಲಯದ ಒಳಗೆ ಎಣ್ಣೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿದ್ದಾನೆ. ಯಾರು ಇಲ್ಲದಿರುವುದನ್ನು ಮನಗಂಡಿದ್ದೇ ತಡ ದೇವಾಲಯದ ಒಳಗೆ ಬಂದವನೇ ಎರಡು ಪ್ಯಾಕೇಟ್ ಎಣ್ಣೆಯನ್ನು ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದೆಲ್ಲವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೊರಗಜ್ಜನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ಫೋಟೋ ವೈರಲ್

    ಇನ್ನೊಂದು ವಿಷಯ ಎಂದರೆ ದೇವರ ಮುಂದೆ ಸಾಕಷ್ಟು ಪ್ಯಾಕೇಟ್ ಮದ್ಯ ಇದ್ದರು ಆತ ಎಲ್ಲವನ್ನು ತೆಗೆದುಕೊಂಡು ಹೋಗಿಲ್ಲ. ಬದಲಾಗಿ ತನಗೆ ಅಗತ್ಯವಿದ್ದಷ್ಟು ಎರಡು ಪ್ಯಾಕೇಟ್ ಗಳನ್ನು ಮಾತ್ರ ಕೊಂಡೊಯ್ದು ತನ್ನ ಅಗತ್ಯವನ್ನು ಪೂರೈಸಿಕೊಂಡಿದ್ದಾನೆ. ಎಣ್ಣೆ ಎಗರಿಸಿರುವುದು ಗಮನಕ್ಕೆ ಬಂದ ಕೊರಗಜ್ಜ ದೇವರ ಅರ್ಚಕ ಎಣ್ಣೆ ಕದ್ದವನಿಗೆ ಶಿಕ್ಷೆ ಕೊಡುವಂತೆ ಹರಕೆ ಕಟ್ಟಿದ್ದಾರೆ. ಇದಾದ ಬಳಿಕ ಎಣ್ಣೆ ಕದ್ದವನ ಆರೋಗ್ಯದಲ್ಲಿ ವ್ಯತ್ಯಯವಾಗಿ ಬಳಿಕ ದೇವರಿಗೆ ತಪ್ಪು ಕಾಣಿಕೆ ನೀಡಿದ ಪ್ರಸಂಗ ಕೂಡ ನಡೆದಿದೆ. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಕೊರಗಜ್ಜನ ಮಹಿಮೆ ಅಥವಾ ಪವಾಡ ಹೆಚ್ಚಿದ್ದು, ತಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಮದ್ಯ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿಯನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುವುದು ವಾಡಿಕೆಯಾಗಿದೆ.

  • 9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    ಲಂಡನ್: ಬ್ರಿಟಿಷ್ ವ್ಯಕ್ತಿಯೋರ್ವ 9 ಗಂಟೆಯಲ್ಲಿ 51 ಪಬ್ ಸುತ್ತಾಡುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಹೌದು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನವೆಲ್ಲ ಪ್ರಯತ್ನಿಸಿದರೂ 7-8 ಪಬ್‍ಗಳಿಗೆ ಹೋಗಿ ಬರಬಹುದು. ಆದರೆ ಕೇಂಬ್ರಿಡ್ಜ್ ಶೈರ್‍ನ ಸೇಂಟ್ ನಿಯೋಟ್ಸ್‌ನ ಮ್ಯಾಟಿ ಎಲ್ಲಿಸ್, 8 ಗಂಟೆ, 52 ನಿಮಿಷ ಮತ್ತು 37 ಸೆಕೆಂಡುಗಳಲ್ಲಿ ಒಟ್ಟು 51 ಪಬ್‍ಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆಯಲು ಪ್ರತಿ ಪಬ್‍ನಲ್ಲಿಯೂ ಕನಿಷ್ಠ 125 ಮಿಲಿ ಕುಡಿದಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಕಿತ್ತಳೆ ರಸ ಮತ್ತು ಡಯಟ್ ಕೋಕ್ ಅನ್ನು ಅವರ ಆರೋಗ್ಯಕ್ಕೆ ಉತ್ತಮ ಎಂದು ನಾಲ್ಕು ಪಿಂಟ್ ಬಿಯರ್ ಜೊತೆಗೆ ಸೇವಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

     

    View this post on Instagram

     

    A post shared by Matt Ellis (@smilinggrape)

    ಈ ಕುರಿತಂತೆ ಮಾತನಾಡಿದ ಅವರು, ನನ್ನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಾಗಿ ಕುಡಿಯುವುಲ್ಲ. ಬಹುಶಃ ಹಲವು ವರ್ಷಗಳ ಹಿಂದೆ ನಾನು ಆಲ್ಕೋಹಾಲ್ ಯುಕ್ತಪಾನೀಯಗಳನ್ನು ಸೇವಿಸುತ್ತಿದ್ದೆ. ಆದರೆ ಈಗ ಅಲ್ಲ “ಎಂದು ಹೇಳಿದ್ದಾರೆ. ಅಲ್ಲದೇ 24 ಗಂಟೆಯೊಳಗೆ ಅತೀ ಹೆಚ್ಚು ಪಬ್ ಮತ್ತು ನೈಟ್ ಕ್ಲಬ್‍ಗಳಿಗೆ ಭೇಟಿ ನೀಡಲು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

  • ದಸರಾ, ಕಾವೇರಿ ತೀರ್ಥೋದ್ಭವ ಹಿನ್ನೆಲೆ ಕೊಡಗಿನಲ್ಲಿ ಮದ್ಯ ಮಾರಾಟ ಬಂದ್

    ದಸರಾ, ಕಾವೇರಿ ತೀರ್ಥೋದ್ಭವ ಹಿನ್ನೆಲೆ ಕೊಡಗಿನಲ್ಲಿ ಮದ್ಯ ಮಾರಾಟ ಬಂದ್

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪದಲ್ಲಿ ಅಕ್ಟೋಬರ್ 14 ಮತ್ತು 15ರಂದು ನಡೆಯಲಿರುವ ಆಯುಧ ಪೂಜೆ ಮತ್ತು ದಸರಾ ಕಾರ್ಯಕ್ರಮ ಹಾಗೂ ಅಕ್ಟೋಬರ್ 17ರಂದು ನಡೆಯಲಿರುವ ಕಾವೇರಿ ತೀರ್ಥೋದ್ಭವದ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.

    ಮಡಿಕೇರಿ ಗೋಣಿಕೊಪ್ಪದಲ್ಲಿ ಈ ಬಾರಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅಕ್ಟೋಬರ್ 14ರ ಬೆಳಗ್ಗೆ 6ಗಂಟೆಯಿಂದ 16ರ ಬೆಳಗ್ಗೆ 6ಗಂಟೆಯವರೆಗೆ ಮಡಿಕೇರಿ ನಗರ ಠಾಣೆ ಮತ್ತು ಗೋಣಿಕೊಪ್ಪ ಠಾಣೆ ಸರಹದ್ದಿನ 10 ಕಿ.ಮೀ.ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ ನಿಧನ

    ಮತ್ತೊಂದಡೆ ಅಕ್ಟೋಬರ್ 17ರಂದು ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಅಕ್ಟೋಬರ್ 16ರ ಬೆಳಗ್ಗೆ 6 ಗಂಟೆಯಿಂದ 18ರ ಬೆಳಗ್ಗೆ 6 ಗಂಟೆಯವರೆಗೆ ಭಾಗಮಂಡ ಠಾಣಾ ಸರಹದ್ದಿನ 20 ಕಿ.ಮೀ. ವ್ಯಾಪ್ತಿಯೊಳಗೆ ಬರುವ (ಚೇರಂಬಾಣೆ ಸೇರಿದಂತೆ) ಎಲ್ಲಾ ಗ್ರಾಮಗಳಲ್ಲಿರುವ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಕ್ಲಬ್, ಹೊಟೇಲ್‍ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ಕಡಿತ – ಬೆಸ್ಕಾಂನಿಂದ ಮಾಹಿತಿ

  • ಜ್ಯೂಸ್ ಎಂದು ಆಲ್ಕೊಹಾಲ್ ಸೇವಿಸಿ 5ರ ಬಾಲಕ ದುರ್ಮರಣ

    ಜ್ಯೂಸ್ ಎಂದು ಆಲ್ಕೊಹಾಲ್ ಸೇವಿಸಿ 5ರ ಬಾಲಕ ದುರ್ಮರಣ

    ಚೆನ್ನೈ: ಹಣ್ಣಿನ ಜೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್‍ನಲ್ಲಿ ನಡೆದಿದೆ.

    ರಾಕೇಶ್(5) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಆತನ 62 ವರ್ಷದ ತಾತ ಚಿನ್ನಸ್ವಾಮಿ ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. ಇದನ್ನು ನೋಡಿದ ಬಾಲಕ ಜ್ಯೂಸ್ ಎಂದು ಕುಡಿದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜ್ಯೂಸ್ ಎಂದು ತಪ್ಪು ತಿಳಿದ ರಾಕೇಶ್ ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಏಕಾಏಕಿ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ

  • ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

    ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

    ಗ್ವಾಲಿಯರ್: ಕುಡಿದ ಅಮಲಿನಲ್ಲಿ 22 ವರ್ಷದ ಮಾಡೆಲ್ ಒಬ್ಬಳು ಸೇನಾ ವಾಹನದ ಮೇಲೆ ದಾಳಿ ನಡೆಸಿ ರಂಪಾಟ ಮಾಡಿರುವ ಘಟನೆ ಬುಧವಾರ ರಾತ್ರಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

    delhi model

    ಯುವತಿ ದೆಹಲಿ ಮೂಲದ ಮಾಡೆಲ್ ಆಗಿದ್ದು, ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿ, ಸೇನಾ ವಾಹನವನ್ನು ನಿಲ್ಲಿಸಿ ಅದರ ಮೇಲೆ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

    delhi model

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವತಿ ಸೇನೆಯ ವಾಹನವನ್ನು ನಿಲ್ಲಿಸಿ ಹೆಡ್‍ಲೈಟ್‍ಗೆ ಪದೇ, ಪದೇ ಒದ್ದು, ಹಾನಿಗೊಳಿಸಿದ್ದಾಳೆ. ಅಲ್ಲದೇ ಆಕೆಯನ್ನು ತಡೆಯಲು ಬಂದ ಸೇನಾಧಿಕಾರಿಯನ್ನು ಹಿಂದಕ್ಕೆ ತಳ್ಳಿದ್ದಾಳೆ ಮತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾಳೆ. ಇನ್ನೂ ಈ ಘಟನೆ ಪಡವ್ ಪೊಲೀಸ್ ಠಾಣೆಗೆ ವರದಿಯಾಗುತ್ತಿದ್ದಂತೆಯೇ, ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.  ಇದನ್ನೂ ಓದಿ: ‘ಧಾರವಾಡಿ ಎಮ್ಮೆ’ ತಳಿಗೆ ದೊರೆತಿದೆ ರಾಷ್ಟ್ರಮಟ್ಟದ ಮಾನ್ಯತೆ!

    ಈ ಕುರಿತಂತೆ ಪಡವ್ ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್, ಯುವತಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾಳೆ. ಸೇನೆಯ ಕಡೆಯಿಂದ ಯಾವುದೇ ದೂರುಗಳಿಲ್ಲ. ಇದೀಗ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಕೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಯಿಂದ ಗ್ವಾಲಿಯರ್‌ಗೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಬಂದಿದ್ದು, ನಗರದ ಹೋಟೆಲ್‍ನಲ್ಲಿ ತಂಗಿರುವುದಾಗಿ ತಿಳಿಸಿದ್ದಾರೆ.

  • ಫುಲ್ ಟೈಟು..ನಡುರಸ್ತೆಯಲ್ಲೇ ಫೈಟು – ಎದುರಿಗಿದ್ದವನಿಗೆ ಬಿತ್ತು ದೊಣ್ಣೆ ಏಟು!

    ಫುಲ್ ಟೈಟು..ನಡುರಸ್ತೆಯಲ್ಲೇ ಫೈಟು – ಎದುರಿಗಿದ್ದವನಿಗೆ ಬಿತ್ತು ದೊಣ್ಣೆ ಏಟು!

    ಹಾಸನ: ಕುಡಿದ ಅಮಲಿನಲ್ಲಿ ಇಬ್ಬರು ಅಪರಿಚಿತರು ಹುಚ್ಚಾಟ ಮೆರೆದಿರುವ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ.

    ನಿಟ್ಟೂರು ಸರ್ಕಲ್‍ನ ನಡುರಸ್ತೆಯಲ್ಲೇ ತೂರಾಡುತ್ತಾ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಎಣ್ಣೆ ನಶೆಯಲ್ಲಿ ಕಿತ್ತಾಟ ಅತಿರೇಕಕ್ಕೆ ಹೋಗಿದೆ. ಪರಿಣಾಮ ದೊಣ್ಣೆಯಿಂದ ಎದುರಿಗಿದ್ದವನ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ್ದು, ಆತ ಅಲ್ಲೆ ಕುಸಿದು ಬಿದ್ದಿದ್ದಾನೆ.

    ಕೂಡಲೇ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಗೊಳಗಾದವನ ಸ್ಥಿತಿ ಗಂಭೀರವಾಗಿದೆ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿಲ್ಲ. 2 ದಿನದ ಹಿಂದೆ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗ್ತಿದೆ. ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್

  • ಕುಡಿದು ಅಡ್ಡಾಡುತ್ತಿದ್ದ ತಂದೆಯ ಮೇಲೆ ಮಕ್ಕಳಿಂದಲೇ ಹಲ್ಲೆ

    ಕುಡಿದು ಅಡ್ಡಾಡುತ್ತಿದ್ದ ತಂದೆಯ ಮೇಲೆ ಮಕ್ಕಳಿಂದಲೇ ಹಲ್ಲೆ

    ಹಾವೇರಿ: ಹೆತ್ತ ತಂದೆಯ ಮೇಲೆಯೇ ಮಕ್ಕಳು ಹಲ್ಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪಾಕ್ಟ್ – ರಸ್ತೆ ಗುಂಡಿಗಳನ್ನು ಮುಚ್ಚಲು ಟಾಸ್ಕ್ ಫೋರ್ಸ್ ರಚಿಸಿದ ಬಿಬಿಎಂಪಿ

    haveri

    ಯಲ್ಲಪ್ಪ ವಡ್ಡರ(70) ಹಲ್ಲೆಗೊಳಗಾದವರಾಗಿದ್ದಾರೆ. ಮಕ್ಕಳಾದ ಆನಂದ್ ಮತ್ತು ಜಗದೀಶ್ ತಂದೆ ಯಲ್ಲಪ್ಪ ವಡ್ಡರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳು ಯಲ್ಲಪ್ಪರನ್ನು ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ:ತಾನೇ ಎಷ್ಟು ಬೇಕೋ ಅಷ್ಟು ನೀರು ಸೇದಿಕೊಂಡು ಕುಡಿದ ಆನೆ- ವೀಡಿಯೋ ವೈರಲ್

    ತಂದೆ ಕುಡಿತದ ದಾಸನಾಗಿದ್ದು, ಗ್ರಾಮದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಕುಡಿದು ಅಡ್ಡಾಡುತ್ತಿದ್ದರು. ಇದರಿಂದ ಬೇಸತ್ತ ಮಕ್ಕಳು ತಂದೆ ಎನ್ನುವುದನ್ನು ಮರೆತು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾರೆ. ಈ ಘಟನೆ ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.