Tag: Alcohol Bottle

  • ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್

    ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್

    ಪಾಟ್ನಾ: ಬಿಹಾರದಲ್ಲಿ (Bihar) 2016 ರಿಂದ ಮದ್ಯ ಮಾರಾಟ ನಿಷೇಧವಾಗಿದೆ. ಹೀಗಾಗಿ ರಾಜ್ಯದ ಜನ ಆಲ್ಕೋಹಾಲ್ (Alcohol) ಎಲ್ಲಿ ಸಿಗುತ್ತದೆ ಅಂತಾ ಕಾಯುತ್ತಿದ್ದಾರೆ. ಅಂತೆಯೇ ಇದೀಗ ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮದ್ಯದ ಬಾಟ್ಲಿಗಳನ್ನು ಯುವಕರನ್ನು ಕಸಿದುಕೊಂಡು ಓಡಿಹೋಗಿದ್ದಾರೆ.

    ಯುವಕರು ಬಾಟ್ಲಿ ಹಿಡಿದುಕೊಂಡು ಓಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿದೇಶಿ ಮದ್ಯ ತುಂಬಿದ್ದ ಕಾರು ಮತ್ತು ಇನ್ನೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಸಹಾಯ ಮಾಡುದ ಉದ್ದೇಶದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕಾರೊಳಗೆ ಆಲ್ಕೋಹಾಲ್ ಬಾಟ್ಲಿಗಳಿರುವುದನ್ನು ಅವರು ಗಮನಿಸಿದ್ದು, ಕೈಗೆ ಸಿಕ್ಕಿ ಬಾಟ್ಲಿಗಳೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಇಬ್ಬರು ಬಾಟ್ಲಿಗಳನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಉಳಿದ ಮಂದಿಯೂ ಕೈಗೆ ಸಿಕ್ಕ ಬಾಟ್ಲಿಗಳನ್ನು ಹಿಡಿದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳದಲ್ಲಿದ್ದವರೊಬ್ಬರು ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    ಇತ್ತ ಅಪಘಾತದ ಮಾಹಿತಿ ಅರಿತ ದೋಭಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಪೊಲೀಸರು ಬಂದಿದ್ದನ್ನು ಲೆಕ್ಕಿಸದೇ ಜನ ಮದ್ಯದ ಬಾಟ್ಲಿಗಳಿಗಾಗಿ ಜನ ಮುಗಿಬಿದ್ದಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆಯ ಸಹಾಯಕ ಕಮಿಷನರ್ ಪ್ರೇಮ್ ಪ್ರಕಾಶ್ ಮಾತನಾಡಿ, ವೀಡಿಯೋದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರನ್ನು ಗುರುತಿಸಲಾಗುತ್ತಿದೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ನವದೆಹಲಿ: ದೆಹಲಿ ಮೆಟ್ರೋ (Delhi Metro) ರೈಲುಗಳಲ್ಲಿ ಪ್ರಯಾಣಿಕರು 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು (Alcohol Bottle) ಪ್ರಯಾಣದ ವೇಳೆ ಸಾಗಿಸಲು ಅನುಮತಿ ನೀಡಿದ ಡಿಎಂಆರ್‌ಸಿ (DMRC) ನಿರ್ಧಾರಕ್ಕೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಅಬಕಾರಿ ನಿಯಮಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ನಿಯಮ ಬದಲಿಸಲು ಅದು ಸೂಚಿಸಿದೆ.

    ಅಬಕಾರಿ ಕಾಯ್ದೆಯ ಪ್ರಕಾರ 1 ಸೀಲ್ ಮಾಡಿದ ಮದ್ಯದ ಬಾಟಲಿಯ ರಮ್, ವೋಡ್ಕಾ ಮತ್ತು ವಿಸ್ಕಿಯನ್ನು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಬಹುದು. ಆದರೆ ಮೆಟ್ರೋದಲ್ಲಿ 2 ಬಾಟಲಿ ಸಾಗಿಸಲು ಅನುಮತಿ ನೀಡಿದೆ.

    ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ಎನ್‌ಸಿಆರ್ ನಗರಗಳಾದ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್ ನಡುವೆ ಸಂಚರಿಸುತ್ತಿದೆ. ಇದು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಹಿನ್ನೆಲೆ ರಾಜ್ಯದ ಅಬಕಾರಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಆಕ್ಷೇಪಿಸಿದೆ.

    ಅಲ್ಲದೆ ದೆಹಲಿಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಆದರೆ ಗುರುಗ್ರಾಮದಂತಹ ನಗರಗಳಲ್ಲಿ 18 ವರ್ಷ ವಯಸ್ಸಿನವರಿಗೆ ಮದ್ಯವನ್ನು ಮಾರಾಟ ಮಾಡಬಹುದು. ಮೆಟ್ರೋ ಹೊಸ ನಿಯಮದಿಂದ ಅಪ್ರಾಪ್ತ ವಯಸ್ಕರು ಇತರ ಸ್ಥಳಗಳಿಂದ ಮೆಟ್ರೋ ರೈಲುಗಳ ಮೂಲಕ ಮದ್ಯವನ್ನು ತಂದು ದೆಹಲಿಯಲ್ಲಿ ಸೇವಿಸಬಹುದು ಎಂದು ಅಧಿಕಾರಿಗಳು ಆರೋಪಿಸಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಬಾಟಲಿಗಳನ್ನು ತಂದರೆ ಅಬಕಾರಿ ನಿಯಮ ಉಲ್ಲಂಘನೆಯಾಗದಂತೆ 2 ಮದ್ಯದ ಬಾಟಲಿಗಳನ್ನು ಒಯ್ಯುವ ನಿಯಮವನ್ನು ಬದಲಾಯಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು.

    ಅಬಕಾರಿ ಇಲಾಖೆಯ ಕಾಳಜಿಯ ಅನುಗುಣವಾಗಿ ಪರೀಕ್ಷಿಸಲು ಭದ್ರತಾ ಏಜೆನ್ಸಿಗೆ ತಿಳಿಸಲಾಗುವುದು. ಪ್ರಯಾಣಿಕರು ಗಡಿಯಾಚೆಗಿನ ಸಾಗಣೆಯ ಸಮಯದಲ್ಲಿ ಮದ್ಯವನ್ನು ಸಾಗಿಸಲು ಸಂಬಂಧಿಸಿದ ರಾಜ್ಯ ಅಬಕಾರಿ ಇಲಾಖೆಯ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನಸೌಧದ ಒಳಗೆ ಎಣ್ಣೆ ಬಾಟ್ಲಿ ತಂದ ಪೊಲೀಸ್ ಪೇದೆ- ಕೈ ಜಾರಿ ಬಿದ್ದು ಪೀಸ್, ಪೀಸ್

    ವಿಧಾನಸೌಧದ ಒಳಗೆ ಎಣ್ಣೆ ಬಾಟ್ಲಿ ತಂದ ಪೊಲೀಸ್ ಪೇದೆ- ಕೈ ಜಾರಿ ಬಿದ್ದು ಪೀಸ್, ಪೀಸ್

    ಬೆಂಗಳೂರು: ಪೊಲೀಸ್ ಪೇದೆಯೊಬ್ಬ ವಿಧಾನಸೌಧ (Vidhanasoudha) ದೊಳಗೆ ಎಣ್ಣೆ ಬಾಟ್ಲಿ ತಂದು ಫಜೀತಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.

    ಹೌದು. ಕೆಂಗಲ್ ಗೇಟ್ (Kengal Gate) ಬಳಿ ಪೊಲೀಸಪ್ಪನ ಎಣ್ಣೆ ಬಾಟ್ಲಿ ಪುರಾಣ ನಡೆದಿದೆ. ವಿಧಾನಸೌಧ ಒಳಗಡೆಯಿಂದ ಹೊರೆಗೆ ಹೋಗುತ್ತಿದ್ದ ಮಫ್ತಿಯಲ್ಲಿದ್ದ ಪೊಲೀಸ್ ಪೇದೆ, ಬ್ಯಾಗ್ ನಲ್ಲಿ ಮದ್ಯದ ಬಾಟ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಹೊರಗೆ ಹೋಗುವಾಗ ಬಾಟ್ಲಿ ಕೈ ಜಾರಿ ಬಿದ್ದಿದೆ. ಪರಿಣಾಮ ಪೀಸ್ ಪೀಸ್ ಆಗಿದೆ. ಆತುರವಾಗಿ ಚೂರಾದ ಬಾಟ್ಲಿ ಪೀಸ್ ಎತ್ತಿಕೊಂಡು ಪೇದೆ ಅಲ್ಲಿಂದ ಹೋಗಿದ್ದಾರೆ.

    ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಮಾಧ್ಯಮದವರು ಸ್ಥಳಕ್ಕೆ ತೆರಳಿದ್ದು, ಕ್ಯಾಮೆರಾ ಕಂಡ ಕೂಡಲೇ ಪೊಲೀಸ್ ಪೇದೆ ವಿಧಾನಸೌಧದಿಂದ ಪರಾರಿಯಾಗಿದ್ದಾರೆ. ಸದ್ಯ ವಿಧಾನಸೌಧ ಭದ್ರತೆ ಪೊಲೀಸರು, ಬಾಟ್ಲಿ ತಂದ ಪೊಲೀಸ್ ಪೇದೆ ಯಾರು ಅಂತ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಬೇಕು- ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

    ಹಾಗಾದ್ರೆ ವಿಧಾನಸೌಧಕ್ಕೆ ಮದ್ಯದ ಬಾಟ್ಲಿ ಬಂದಿದ್ದು ಹೇಗೆ?, ಭದ್ರತೆ ತಪ್ಪಿಸಿ ಮದ್ಯದ ಬಾಟ್ಲಿ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?, ವಿಧಾನಸೌಧದ ಒಳಗಿಂದ ಮದ್ಯದ ಬಾಟ್ಲಿ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದರು..?, ಪೊಲೀಸರೇ ಹೀಗೆ ಮಾಡಿದ್ರೆ ವಿಧಾನಸೌಧಕ್ಕೆ ರಕ್ಷಣೆ ಹೇಗೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

  • ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಕೆಲ ದುಷ್ಕರ್ಮಿಗಳು ಕೆಆರ್ ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಮನೆಯೊಂದರ ಮುಂದಿದ್ದ ಹಸುವನ್ನು ಎಳೆದೊಯ್ದು, ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆ ಮಾಡಿದ್ದಾರೆ.

    ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಮೃತ ಹಸುವಿನ ಮಾಲೀಕ. ಎಂದಿನಂತೆ ಶನಿವಾರ ರಾತ್ರಿಯೂ ಹಸುವನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಹಸುವನ್ನು ಎಳೆದೊಯ್ದು ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದಾರೆ.

    ಕೊಲೆ ಗೈದ ಮನೆಯು ನಿರ್ಜನ ಪ್ರದೇಶದಲ್ಲಿದ್ದು, ಇಲ್ಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ವ್ಯಸನಕ್ಕೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಹಸುವನ್ನು ಎಳೆದುಕೊಂಡು ಬಂದು, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

    ಹಸುವನ್ನೇ ನಂಬಿಕೊಂಡು ನಾರಾಯಣಪ್ಪ ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಹಾಲು ಕೊಡುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ದಿಕ್ಕು ತೋಚದಂತಾಗಿದ್ದು, ಬಡಕುಟುಂಬಕ್ಕೆ ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.

  • ಜಿಲ್ಲಾಸ್ಪತ್ರೆಯ ಶೌಚಾಲಯಗಳೇ ಬಾರ್- ಕಸದ ಬುಟ್ಟಿಯಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪ್ಯಾಕೆಟ್

    ಜಿಲ್ಲಾಸ್ಪತ್ರೆಯ ಶೌಚಾಲಯಗಳೇ ಬಾರ್- ಕಸದ ಬುಟ್ಟಿಯಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪ್ಯಾಕೆಟ್

    ಚಿಕ್ಕಬಳ್ಳಾಪುರ: ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯಗಳೇ ಕುಡುಕುರ ಪಾಲಿನ ಬಾರ್‍ಗಳಾಗಿದ್ದು, ಶೌಚಾಲಯಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಪಾಕೆಟ್‍ಗಳು ಕಾಣಿಸುತ್ತಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದು ಆರೋಗ್ಯ ಸಚಿವರ ಜಿಲ್ಲೆಯ ಪಕ್ಕದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರೋ ಘಟನೆ.

    ಚಿಕ್ಕಬಳ್ಳಾಪುರದ ಆಸ್ಪತ್ರೆಯ ಶೌಚಾಲಯಗಳಲ್ಲಿ ಕಸದ ಬುಟ್ಟಿಗಳಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪಾಕೆಟ್ ಗಳು ಸಿಗುತ್ತಿವೆ. ಆರೋಗ್ಯ ಭಾಗ್ಯ ಕರುಣಿಸುವ ಆಸ್ಪತ್ರೆಯಲ್ಲೇ ಕದ್ದು ಮುಚ್ಚಿ ಮದ್ಯ ಸೇವನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಆಸ್ಪತ್ರೆಯ ಶೌಚಾಲಯಗಳಲ್ಲಿನ ಕಿಟಕಿ, ಪಾರ್ಕಿಂಗ್ ಪ್ಲಾಟ್ ಸೇರಿದಂತೆ ಆಸ್ಪತ್ರೆಯ ನಿರ್ಜನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್ ಗಳು ಕಣ್ಣಿಗೆ ರಾಚುತ್ತಿದ್ದು, ಜಿಲ್ಲಾಸ್ಪತ್ರೆ ಕುಡುಕರ ಪಾಲಿನ ಸ್ವರ್ಗ ಎಂಬಂತಾಗಿದೆ. ಇದರಿಂದ ರೋಗಿಗಳು ಶೌಚಾಲಯಕ್ಕೆ ಹೋಗಲು, ಆಸ್ಪತ್ರೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ ಕುಡುಕ ಮಹಾಶಯರು ಆಸ್ಪತ್ರೆಯನ್ನೇ ಬಾರ್‍ಗಳಾಗಿ ಮಾಡಿದ್ದಾರೆ.

    ಅಧಿಕಾರಿಗಳು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.