Tag: Alanda

  • ಕಲಬುರಗಿ | ಪೋಕ್ಸೊ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ

    ಕಲಬುರಗಿ | ಪೋಕ್ಸೊ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ

    ಕಲಬುರಗಿ: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

    ಅಪರಾಧಿ ಯುವಕನನ್ನು ಆಳಂದ (Alanda) ತಾಲ್ಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (28) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕರ್ನಾಟಕದ ನಾಲ್ವರು ಜಡ್ಜ್‌ಗಳ ವರ್ಗಾವಣೆಗೆ ಶಿಫಾರಸು

    2023ರ ಜು.15ರಂದು ಆಳಂದ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಪುಸ್ತಕವೊಂದನ್ನು ತರಲು ಮತ್ತೊಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಅಪರಾಧಿ ಗುಂಡೇರಾವ ಬಾಲಕಿಯನ್ನು ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಉಸಿರುಗಟ್ಟಿಸಿ ಸಾಯಿಸಿ, ಪಕ್ಕದ ಹೊಲದಲ್ಲಿದ್ದ ಬಾವಿಯೊಂದರಲ್ಲಿ ಶವವನ್ನು ಬೀಸಾಡಿ ಹೋಗಿದ್ದ. ಈ ಕುರಿತು ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖಾಧಿಕಾರಿ ಭಾಸು ಚವ್ಹಾಣ ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಪೋಕ್ಸೊ ಕಾಯ್ದೆಯಡಿ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ, ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಕಾನೂನು ಪ್ರಾಧಿಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಮೃತ ಬಾಲಕಿಯ ತಾಯಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.

    ನಿಂಬರ್ಗಾ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಇದನ್ನೂ ಓದಿ: ನೆಲಕ್ಕೆ ಬಿದ್ರೂ ಬಿಡದೆ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ವಿಂಗ್ ಕಮಾಂಡರ್ ದರ್ಪ

  • Kalaburagi| ಒಂದೇ ರಾತ್ರಿ 6 ಮನೆ ಕಳ್ಳತನ- 4.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

    Kalaburagi| ಒಂದೇ ರಾತ್ರಿ 6 ಮನೆ ಕಳ್ಳತನ- 4.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

    ಕಲಬುರಗಿ: ಕಳ್ಳರು ತಮ್ಮ ಕೈ ಚಳಕ ತೋರಿಸಿ ಒಂದೇ ರಾತ್ರಿಯಲ್ಲಿ 6 ಮನೆಗಳಿಗೆ ಕನ್ನ ಹಾಕಿ 4.87 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕಲುಬುರಗಿಯ (Kalaburagi) ಆಳಂದ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಬುಧವಾರ ತಡರಾತ್ರಿ ಗ್ರಾಮದ ಬಸವರಾಜ ಬಿರಾದಾರ್ ಎಂಬುವವರು ಮಹಾರಾಷ್ಟ್ರದ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಅವರ ಮನೆಯ ಅಲ್ಮೇರಾದಲ್ಲಿದ್ದ 4.87 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ. ಅದೇ ರೀತಿ ಬೆಂಗಳೂರಿಗೆ ವಲಸೆ ಹೋಗಿರುವ ಐದು ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚಿದ್ದಾರೆ. ಬಳಿಕ ಮನೆಗಳಲ್ಲಿನ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಎಸೆದು ಖದೀಮರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕೂಡಲೇ ಶರಣಾಗಿ ಇಲ್ದಿದ್ರೆ ಕಾರ್ಯಾಚರಣೆ ಮಾಡ್ತೇವೆ- ಕಾಡಲ್ಲಿ ಅವಿತಿರುವ ನಕ್ಸಲರಿಗೆ ಪ್ರಣಬ್ ಮೊಹಂತಿ ಎಚ್ಚರಿಕೆ

    ಘಟನಾ ಸ್ಥಳಕ್ಕೆ ಸಿಪಿಐ ಪ್ರಕಾಶ್ ಯಾತನೂರು, ಪಿಎಸ್‌ಐ ಸಿದ್ದರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನರೋಣಾ (Narona) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ | ಮೈತ್ರಿ ಕೂಟಕ್ಕೆ ಮುನ್ನಡೆ, ಕಾಂಗ್ರೆಸ್‌ಗೆ ಬಿಗ್ ಶಾಕ್!

  • ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು

    ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು

    – ಮಧ್ಯಾಹ್ನದವರೆಗೆ ಇತ್ತು ನಮಾಜ್‍ಗೆ ಅವಕಾಶ

    ಕಲಬುರಗಿ: ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ (Ladle Mashak Dargah Aland) ಮುಸ್ಲಿಮರ ಪ್ರಾರ್ಥನೆಯ ಬಳಿಕ ಇದೀಗ ಶಿವಲಿಂಗ ಪೂಜೆಯನ್ನು ನೆರವೇರಿಸಲಾಗಿದೆ.

    ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ನಿಮಿತ್ತ ಪೂಜೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನಲೆ ಇಂದು ಸಂಜೆ ಆಂದೋಲಾ ಶ್ರೀಗಳ ನೇತೃತ್ವದಲ್ಲಿ 15 ಮಂದಿ ಹಿಂದೂಗಳು ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ರುದ್ರಾಭಿಷೇಕ, ಗಣೇಶ ಪೂಜೆ, ಗಂಗಾ ಪೂಜೆ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಹೀಗೆ ಸುಮಾರು 1 ಗಂಟೆಗಳ ಕಾಲ ಶಿವಲಿಂಗಕ್ಕೆ ಪೂಜೆ ನೆರವೇರಿದೆ.

    ಪೂಜೆ ಬಳಿಕ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಪ್ರತಿಕ್ರಿಯಿಸಿ, ನಾವು ಸತತ ಮೂರು ವರ್ಷದಿಂದ ಸಹ ರಾಘವ ಚೈತನ್ಯ ಪೂಜೆ ಮಾಡಿದ್ದೇವೆ. ದುರಂತ ಅಂದ್ರೆ ನಮ್ಮ ಧರ್ಮದ ಶಿವಲಿಂಗ ಪೂಜೆಗೆ ನ್ಯಾಯಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ನ್ಯಾಯಾಲಯಕ್ಕೆ ನಾನು ಅಭಿನದಂನೆ ಸಲ್ಲಿಸುತ್ತೇನೆ. ನಮ್ಮ ಹೋರಾಟ ಈಗ ನಿರಂತರ ಆಗಿರುತ್ತದೆ. ಕೆಲ ಜಿಹಾದಿ ಮನಸ್ಥಿತಿ ಇರುವ ಹಿನ್ನೆಲೆ ಇಷ್ಟು ಬಂದೋಬಸ್ತ್ ಮಾಡಬೇಕಾಗುತ್ತದೆ. ರಾಘವ ಚೈತನ್ಯರ ಇತಿಹಾಸ ತೆಗೆದು ನ್ಯಾಯಾಲಯದಲ್ಲಿ ಸಲ್ಲಿಸಿ ದೇವಾಲಯ ನಿರ್ಮಾಣ ಮಾಡಲು ಅನುಮತಿಗೆ ಹೋರಾಟ ನಡೆಸುತ್ತೇವೆ ಎಂದರು. ಇದನ್ನೂ ಓದಿ: Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

    ಇತ್ತ ಮುಸ್ಲಿಮರಿಗೂ ಸಹ 12.30 ರಿಂದ 3.30ರವರೆಗೆ ಪ್ರಾರ್ಥನೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ದರ್ಗಾದ ಸುತ್ತಲೂ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 12 ಮಂದಿ ಮುಸ್ಲಿಮರು ಲಾಡ್ಲೆ ಮಶಾಕ್ ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಆಗಿದ್ದಾರೆ. ಪ್ರಾರ್ಥನೆ ಬಳಿಕ ದರ್ಗಾ ಕಮಿಟಿಯ ಅಧ್ಯಕ್ಷ ಮೋಯಿಜ್ ಅನ್ಸರಿ, ಮೊಹಮದ್ ಅಫಜಲ್ ಅನ್ಸಾರಿ ಪ್ರತಿಕ್ರಿಯಿಸಿ, ನಮಗೆ ಹಾಗೂ ಹಿಂದೂಗಳಿಗೆ 15 ಜನರಂತೆ ಪ್ರಾರ್ಥನೆ ಹಾಗೂ ಪೂಜೆ ಕೋರ್ಟ್ ಆದೇಶ ನೀಡಿತ್ತು. ಅದರಂತೆ ನಾವು ಇಂದು 12 ಮಂದಿ ಪ್ರಾರ್ಥನೆ ಮಾಡಿ ವಾಪಸ್ ಬಂದಿದ್ದೇವೆ. ನಾವು ಆಳಂದನಲ್ಲಿ ಹಿಂದೂ-ಮುಸ್ಲಿಮರು ಎಲ್ಲರೂ ಅಣ್ಣ-ತಮ್ಮರ ಹಾಗೆ ಇದ್ದೇವೆ. ಆದರೆ ಕೆಲವರ ರಾಜಕೀಯದಿಂದ ಗಲಾಟೆ ಆಗಿ ಇವಾಗ ಪೊಲೀಸ್ ಭದ್ರತೆ ನೀಡಬೇಕಾಗಿದೆ ಎಂದರು.

    ನಾವು ಎಲ್ಲರು ಒಂದಾಗೆ ಇದ್ದೇವೆ. ಮತ್ತೆ ಒಟ್ಟಿಗೆ ಇರುತ್ತೇವೆ. ಆದರೆ ಇವಾಗ ಚುನಾವಣೆ ಬರ್ತಿದೆ, ಹಾಗಾಗಿ ಇಲ್ಲದೊಂದು ಸಮಸ್ಯೆ ಕ್ರಿಯೇಟ್ ಮಾಡ್ತಾರೆ. ಆದರೆ ಆಳಂದನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

  • ಬೀದಿಗೆ ಬಂದ ಕಲಬುರಗಿಯ ಹೊಸಮಠದ ಜಗಳ

    ಬೀದಿಗೆ ಬಂದ ಕಲಬುರಗಿಯ ಹೊಸಮಠದ ಜಗಳ

    ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಮಠದ ಪೀಠಕ್ಕಾಗಿ ದಶಕದ ಹಿಂದೆ ರಕ್ತದೋಕುಳಿ ಹರಿದಿದ್ದು ಇತಿಹಾಸ. ಇದೀಗ ಅದೇ ಸಾಲಿಗೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಗ್ರಾಮದ ಹೊಸಮಠ ಇದೀಗ ಸುದ್ದಿಯಲ್ಲಿದೆ. ಅಕ್ಟೋಬರ್ 29ರಂದು ಈ ಮಠದ ಪೀಠಾಧಿಪತಿಯಾಗಲು ಶ್ರೀ ಚೆನ್ನಮಲ್ಲದೇವರು ಸಜ್ಜಾಗಿದ್ದಾರೆ.

    ಶ್ರೀ ಚೆನ್ನಮಲ್ಲದೇವರು ಪೀಠಾಧಿಪತಿ ಆಗೋದನ್ನು ಈ ಮಠದ ಮೂಲ ಮಠವಾದ ಶ್ರೀಗುರುಬಸವೇಶ್ವರ ಬ್ರಹನ್ಮಠದ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸ್ವಾಮೀಜಿಯ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಹೀಗಾಗಿ ಮಠದ ಪೀಠ ಸ್ವಿಕರಿಸಲು ಸ್ವಾಮೀಜಿಯನ್ನು ಬಿಡಲ್ಲ ಅಂತಿದ್ದಾರೆ.

    ಒಂದೆಡೆ ಚೆನ್ನಮಲ್ಲದೇವರು ಸ್ವಾಮೀಜಿಗೇ ವಿರೋಧವಿದ್ರೆ, ಇತ್ತ ನರೋಣಾ ಗ್ರಾಮದ ಜನ ಶ್ರೀಗಳ ಬೆನ್ನಿಗೆ ನಿಂತಿದ್ದಾರೆ. ಮೂಲ ಮಠದ ವಿರೋಧ ಕುರಿತು ಚೆನ್ನಮಲ ಸ್ವಾಮೀಜಿಯನ್ನು ಕೇಳಿದ್ರೆ, ನಾನೇ ಮೂಲ ಮಠದ ಸ್ವಾಮಿ ಆಗಬೇಕಿತ್ತು. ಆದರೆ ಷಡ್ಯಂತ್ರ ಮಾಡಿ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಇನ್ನಿತರ ಮಠಾಧೀಶರ ಕೈವಾಡವಿದೆ ಎಂದು ಶ್ರೀ ಚೆನ್ನಮಲ್ಲದೇವರು ಆರೋಪಿಸುತ್ತಾರೆ.

    ಮೂಲ ಮಠ ಮತ್ತು ಶಾಖಾ ಮಠದ ಜಗಳದಿಂದ ಇದೀಗ ಗ್ರಾಮದಲ್ಲಿ ಆತಂಕ ಮೂಡಿದೆ. ಈ ಎರಡು ಮಠಗಳ ಜಗಳ ತಾರಕಕೆರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಶಾಸಕರ ಅವಧಿಯ ಕಾಮಗಾರಿಗಳಿಗೆ ಬ್ರೇಕ್ ಹಾಕಿದ ಹಾಲಿ ಶಾಸಕ

    ಮಾಜಿ ಶಾಸಕರ ಅವಧಿಯ ಕಾಮಗಾರಿಗಳಿಗೆ ಬ್ರೇಕ್ ಹಾಕಿದ ಹಾಲಿ ಶಾಸಕ

    ಕಲಬುರಗಿ: ವಿಧಾನಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದು ಹೋಗಿವೆ. ಆದರೆ ಆಳಂದ ಕ್ಷೇತ್ರದಲ್ಲಿ ಮಾತ್ರ ಹಾಲಿ, ಮಾಜಿ ಶಾಸಕರ ಕಾಮಗಾರಿಯ ಕಮಿಷನ್ ರಾಜಕೀಯ ಮುಂದುವರಿದಿದೆ. ಇದೀಗ ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಬಿದ್ದಿದೆ.

    ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಆಳಂದ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ ನೀಡಿದ್ದರು. ಆದರೆ ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಕೆಲವೇ ಮತಗಳಲ್ಲಿ ಸೋಲು ಕಂಡಿದ್ದು, ಇದೀಗ ಅವರ ಅವಧಿಯಲ್ಲಿ ನಡೆದ ಕಾಮಗಾರಿಗೆ ಹಾಲಿ ಶಾಸಕ ಸುಭಾಷ್ ಗುತ್ತೇದಾರ ಬ್ರೇಕ್ ಹಾಕಿದ್ದಾರೆ. ಕಮಿಷನ್ ನೀಡಿ ಇಲ್ಲ ಅಂದರೆ ಕೆಲಸ ಬಿಡಿ ಅಂತ ಗುತ್ತಿಗೆದಾರರಿಗೆ ಹೇಳಿದ್ದಾರಂತೆ. ಹೀಗಾಗಿ 65 ಕೋಟಿ ರೂ. ಕಾಮಗಾರಿಯ ವಿವಿಧ ಕೆಲಸಗಳನ್ನು ನಿಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರು ಹಾಲಿ ಶಾಸಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

    ಕ್ಷೇತ್ರದಲ್ಲಿ ಪ್ರಮುಖವಾಗಿ ಮಿನಿ ವಿಧಾನಸೌಧ, ಅಮರ್ಜಾ ಡ್ಯಾಂ, ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಈ ಬಗ್ಗೆ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ಕೇಳಿದರೆ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಬಿ.ಆರ್ ಪಾಟೀಲ್ ಇಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂಗೆ ಸುಪ್ರೀಂನಿಂದ 25 ಲಕ್ಷ ರೂ. ದಂಡ

    ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂಗೆ ಸುಪ್ರೀಂನಿಂದ 25 ಲಕ್ಷ ರೂ. ದಂಡ

    ಬೆಂಗಳೂರು: ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ದುರ್ಬಳಕೆ ಮಾಡಿದ್ದಕ್ಕೆ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಅವರಿಗೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ.

    ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡುವ ಸಂಬಂಧ ಅಬ್ರಾಹಂ ಪಿಐಎಲ್ ಸಲ್ಲಿಸಿದ್ದರು. ಖಾಸಗಿಯವರು ಜಾಗ ನೀಡಿದ್ದರೂ ಸರ್ಕಾರಿ ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಬ್ರಾಹಂ ಪಿಐಎಲ್‍ನಲ್ಲಿ ದೂರಿದ್ದರು.

    ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಪಿಐಎಲ್ ದುರ್ಬಳಕೆ ಮಾಡಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ದಂಡವನ್ನು ಎರಡು ವಾರದಲ್ಲಿ ಕಟ್ಟುವಂತೆ ಸೂಚಿಸಿದೆ. ಪ್ರಕರಣ ಸಂಬಂಧಪಟ್ಟಂತೆ ರಾಜ್ಯದ ಪರ ಅಡ್ವೋಕೇಟ್ ಜನರಲ್ ಮಧುಸೂದನ್ ವಾದ ಮಂಡಿಸಿದ್ದರು.

    ಏನಿದು ಪ್ರಕರಣ?: ಅಳಂದ ಪಟ್ಟಣದ ಸಮೀಪ ನಗರದ ವ್ಯಕ್ತಿಯೊಬ್ಬರು ಸರ್ವೆ ನಂ. 264 ರ ಜಾಗದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಮಾಡಲು ದಾನವಾಗಿ ನೀಡಿದ್ದರು. ಆದರೆ ನಗರದಿಂದ 8 ಕಿ.ಮೀ. ದೂರದಲ್ಲಿರುವ 8 ಕಿ.ಮೀ ದೂರದಲ್ಲಿ ಸೇರಿದ ಸರ್ವೆ ನಂ 696 ರಲ್ಲಿ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

     

  • ನವಿಲು ರಕ್ಷಿಸಲು  ಹೋಗಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಕಾರು ಸೇತುವೆಗೆ ಡಿಕ್ಕಿ

    ನವಿಲು ರಕ್ಷಿಸಲು ಹೋಗಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಕಾರು ಸೇತುವೆಗೆ ಡಿಕ್ಕಿ

    ಕಲಬುರಗಿ: ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅವರ ಕಾರು ಶನಿವಾರ ರಾತ್ರಿ ಅಪಘಾತಕೊಳ್ಳಗಾಗಿದ್ದು, ಬೆಳಮಗಿ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ.

    ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಬಳಿ ಮಾಜಿ ಸಚಿವರ ಕಾರು ಅಪಘಾತಕ್ಕೆ ಒಳಗಾಗಿದೆ. ಕಲಬುರಗಿಯಿಂದ ಬೆಳಮಗಿ ಬರುವ ವೇಳೆಯಲ್ಲಿ ರಸ್ತೆಯಲ್ಲಿ ನವಿಲು ಬಂದಿದೆ. ನವಿಲನ್ನು ತಪ್ಪಿಸಲು ಹೋದ ಚಾಲಕ ಪಕ್ಕದ ಸೇತುವೆಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.

    ಬೆಳಮಗಿ ಅವರ ತಲೆ ಮತ್ತು ಬೆನ್ನಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಸದ್ಯ ಬೆಳಮಗಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆಯಿಲ್ಲ. ನಾನು ಚೆನ್ನಾಗಿದ್ದೇನೆ ಎಂದು ಮಾಜಿ ಸಚಿವ ರೇವುನಾಯಕ್ ಬೆಳಮಗಿ ಹೇಳಿದ್ದಾರೆ.

    ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮಠಕ್ಕೆ ಬಂದ ಭಕ್ತೆಯನ್ನೇ ಪಟಾಯಿಸಿ ಕೈ ಕೊಟ್ಟ ಕಾಮಿ ಸ್ವಾಮೀಜಿ

    ಮಠಕ್ಕೆ ಬಂದ ಭಕ್ತೆಯನ್ನೇ ಪಟಾಯಿಸಿ ಕೈ ಕೊಟ್ಟ ಕಾಮಿ ಸ್ವಾಮೀಜಿ

    ಕಲಬುರಗಿ: ಮಠಕ್ಕೆ ಭಕ್ತೆಯಾಗಿ ಬಂದ ಭಕ್ತಳನ್ನೆ ಪಟಾಯಿಸಿ ಮದುವೆಯಾಗಿ ನಂತರ ಕೈ ಕೊಟ್ಟ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಭಾ ಮಠದ ಪ್ರಕಾಶ್ ಪುರಾಣಿಕ್ ಮಹಿಳೆಯನ್ನು ವಂಚಿಸಿ ಈಗ ಅರೆಸ್ಟ್ ಆಗಿದ್ದಾನೆ.

    ಏನಿದು ಪ್ರಕರಣ?
    ಮಠಕ್ಕೆ ಬಂದ ಭಕ್ತೆಯನ್ನು ಮಠದ ಪೀಠಾಧಿಪತಿಯಾದ ಪ್ರಕಾಶ್ ಪುರಾಣಿಕ ಮುತ್ಯಾ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದ. ಈ ಪ್ರೀತಿ ಮದುವೆಯ ಸಂಬಂಧಕ್ಕೆ ತಿರುಗಿ 2010 ರಲ್ಲಿ ಇಬ್ಬರು ಶ್ರೀಶೈಲಕ್ಕೆ ಹೋಗಿ ಮದುವೆಯಾಗಿದ್ದರು. 7 ವರ್ಷ ಚೆನ್ನಾಗಿ ಸಂಸಾರ ನಡೆಸಿದ ಪ್ರಕಾಶ್ ಮುತ್ಯ ಇತ್ತೀಚಿಗೆ ಯುವತಿಗೇ ಕೈ ಕೊಟ್ಟು ಮೊಬೈಲ್ ಸ್ವೀಚ್ ಆಫ್ ಮಾಡಿ ಪರಾರಿಯಾಗಿದ್ದ.

    7 ವರ್ಷ ಸಂಸಾರ ಮಾಡಿದ್ರರೂ ಸ್ವಾಮೀಜಿ ಮಹಾನಂದಳಿಗೆ ಮಕ್ಕಳಾಗದಂತೆ ಔಷಧಿ ನೀಡಿದ್ದಾನೆ. ಅಷ್ಟೇ ಅಲ್ಲ ಮಹಾನಂದಳಿಗಾಗಿ ಕಲಬುರಗಿ ನಗರದಲ್ಲಿ ಕಟ್ಟಿಸಿದ ಮನೆ ಸಹ ಸ್ವಾಮೀಜಿ ಇದೀಗ ಭಕ್ತರ ಹೆಸರಿನಲ್ಲಿ ನೋಂದಾಯಿಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೇ ಮನೆ ಬಿಡುವಂತೆ ರೌಡಿಗಳ ಮೂಲಕ ಹೆದರಿಸುತ್ತಿದ್ದಾನೆ. ಹೀಗಾಗಿ ಕೂಡಲೇ ಪ್ರಕಾಶ್ ಮುತ್ಯಾನ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹಿಸಿವೆ.

    ಈ ಕುರಿತು ಕಲಬುರಗಿ ನಗರದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಾಮಿ ಸ್ವಾಮಿಯನ್ನು ಬಂಧಿಸಿದ್ದಾರೆ.