Tag: Alamatti

  • ಸಾಲ ಮಾಡಿಯಾದ್ರೂ ನೀರಾವರಿ ಯೋಜನೆ ಪೂರ್ಣ ಮಾಡ್ತೀವಿ: ಬಿಎಸ್‍ವೈ

    ಸಾಲ ಮಾಡಿಯಾದ್ರೂ ನೀರಾವರಿ ಯೋಜನೆ ಪೂರ್ಣ ಮಾಡ್ತೀವಿ: ಬಿಎಸ್‍ವೈ

    ವಿಜಯಪುರ: ಸಾಲ ಮಾಡಿಯಾದ್ರೂ ನಾವು ಆಲಮಟ್ಟಿ ಕೃಷ್ಣಾ ಮೂರನೇ ಹಂತದ ನೀರಾವರಿ ಯೋಜನೆಗಳನ್ನ ಪೂರ್ಣ ಮಾಡ್ತೇವೆ ಎಂದು ಆಲಮಟ್ಟಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.

    ನಾವೀಗ ಕೊರೊನಾ ಸಂಕಷ್ಟದಲ್ಲಿದ್ದೇವೆ. ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಕೋವಿಡ್ ಕಾರಣಕ್ಕಾಗಿ ನಮ್ಮ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರು.

    ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಸಿಎಂ ಯಡ್ಡಿಯೂರಪ್ಪ ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಿದರು. ನಂತರ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಜೊತೆ ಪ್ರವಾಹ ಮತ್ತು ಮಳೆ ಹಾನಿ ಬಗ್ಗೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಆಲಮಟ್ಟಿ ಜಲಾಶಯದ ಎತ್ತರ ವಿಚಾರದಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ನೀರಾವರಿ ಸಚಿವರು ಕೇಂದ್ರ ಸಚಿವ ಜಲಸಂಪನ್ಮೂಲ ಸಚಿವರನ್ನ ಭೇಟಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇರುವುದು ನಿಜ ಎಂದರು.

    ಸಂಪನ್ಮೂಲ ಕ್ರೂಡಿಕರಣ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಬೆಳೆ ಹಾನಿ, ಮನೆಗಳ ದುರಸ್ತಿಗೆ ಹಣ ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಮುಂದಿನ ತಿಂಗಳು ನಾನು ಪ್ರಧಾನಿ ಅವರನ್ನ ಭೇಟಿ ಮಾಡಿ ಆಲಮಟ್ಟಿ ಜಲಾಶಯದ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದರು.

  • ಏನೇ ತಿಪ್ಪರಲಾಗ ಹಾಕಿದ್ರು ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ

    ಏನೇ ತಿಪ್ಪರಲಾಗ ಹಾಕಿದ್ರು ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ

    ವಿಜಯಪುರ: ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಆದರೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಭ್ರಮೆಯಲ್ಲಿದ್ದಾರೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

    ಕೃಷ್ಣಾನದಿಗೆ ಬಾಗಿನ ಅರ್ಪಿಸಲು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವ ಎಚ್‍ಡಿಕೆ ಮಾತಿಗೆ ಪ್ರತಿಕ್ರಿಯಿಸಿ, ಜೆಡಿಎಸ್ ಪಾತ್ರ ವಹಿಸಲ್ಲ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆಲ್ಲಲಿದೆ ಎಂದು ಹೇಳಿದರು.

    ಬಿಎಸ್‍ವೈ ವಿರುದ್ಧ ಖಾಸಗಿ ವ್ಯಕ್ತಿ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಆದರೆ ಸಚಿವ ಡಿಕೆಶಿವಕುಮಾರ್ ವಿರುದ್ಧ ಅವರು ಮಾಡಿದ್ದೇನು? ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ತಿರುಗೇಟು ನೀಡಿದರು.

    ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ರಾಹುಲ್ ಗಾಂಧಿ ಅವರ ಜೊತೆ ಸಮಾಲೋಚನೆ ನಡೆಸಲಿದ್ದೇನೆ ಎಂದು ಹೇಳಿದರು.

  • ಆಲಮಟ್ಟಿ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ಬಂಗಾರದ ಬೆಳೆ ಬೆಳೆದ ರೈತರು

    ಆಲಮಟ್ಟಿ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ಬಂಗಾರದ ಬೆಳೆ ಬೆಳೆದ ರೈತರು

    ವಿಜಯಪುರ: ಬರ ಬಂದ್ರೆ ಸಾಕು ಸಾಮಾನ್ಯವಾಗಿ ಎಲ್ಲ ರೈತರು ಬೆಚ್ಚಿ ಬೀಳ್ತಾರೆ. ಆದರೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ರೈತರು ಮಾತ್ರ ಆಲಮಟ್ಟಿ ಜಲಾಶಯದ ಹಿನ್ನೀರಿನ ಜಲಾಯನ ಪ್ರದೇಶದಲ್ಲಿ ಬಂಗಾರ ಬೆಳೆ ಬೆಳೆಯುತ್ತಾರೆ.

    ಜಿಲ್ಲೆಯಾದ್ಯಂತ ಭೀಕರ ಬರದಿಂದ ನಲುಗಿ ಹೋಗಿದೆ. ಆದರೆ ಈ ಗ್ರಾಮದ ಗ್ರಾಮಸ್ಥರು ಮಾತ್ರ ಅದನ್ನೇ ಬಂಡವಾಳ ಮಾಡಿಕೊಂಡು ಲಾಭದ ಬೆಳೆ ಬೆಳೆದಿದ್ದಾರೆ. ಈ ಬಾರಿ ಅವಧಿ ಮುನ್ನವೇ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಖಾಲಿಯಾದ ಜಲಾನಯನ ಪ್ರದೇಶದಲ್ಲಿ ಜೋಳ, ಮೆಕ್ಕೆ ಜೋಳ, ಶೇಂಗಾ ಹಾಗು ವಿವಿಧ ತರಕಾರಿಗಳನ್ನು ಬೆಳೆದಿದ್ದು, ಇಲ್ಲಿಯ ಜಮೀನುಗಳು ಮಾತ್ರ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

    ನಮ್ಮ ಸಾಕಷ್ಟು ಜಮೀನುಗಳು ಮುಳುಗಡೆಯಾಗಿದ್ದು, ಅವುಗಳು ಬೇಸಿಗೆಯಲ್ಲಿ ಜಲಾಶಯದ ನೀರು ಹಿಂದೆ ಸರಿಯುವುದರಿಂದ ನಮ್ಮ ಜಮೀನುಗಳು ಖಾಲಿಯಾಗುತ್ತವೆ. ಹಾಗಾಗಿ ನಾವು ಜಮೀನುಗಳಲ್ಲಿ ಅಲ್ಪಾವಧಿಯ ಬೆಳೆಗಳನ್ನು ಬೆಳೆಯುತ್ತಿವೆ. ಈ ಭಾರೀ ಬರಗಾಲವಿದ್ದು, ಹಿನ್ನೀರಿನ ಖಾಲಿ ಪ್ರದೇಶ ತೇವಾಂಶದಿಂದ ಕೂಡಿದ್ದು ಅಲ್ಲಿ ಬೆಳೆಗಳನ್ನೂ ಬೆಳೆದು ಕೊಳ್ಳುತ್ತೇವೆ ಎಂದು ರೈತ ರಾಜು ಹೇಳಿದ್ದಾರೆ.

    ಇನ್ನೂ ಈ ಗ್ರಾಮದಲ್ಲಿ ಕುಡಿಯಲು ನೀರು ಸಹ ಇಲ್ಲ. ಸರ್ಕಾರದಿಂದ ಅಲ್ಲಲ್ಲಿ ಬೋರವೆಲ್‍ಗಳನ್ನು ಕೊರೆದ್ರೂ ಪ್ರಯೋಜನವಾಗಿಲ್ಲ. ಆಲಮಟ್ಟಿ ಜಲಾಶಯದ ಮಡಿಲಿನಲ್ಲಿರುವ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿನ ತೊಂದರೆ ಮಾತ್ರ ತಪ್ಪಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.