Tag: akshaya trithiya

  • ಮ್ಯಾಂಗೋ ವಾರ್ ಬಳಿಕ ಇನ್ನೊಂದು ವಾರ್ ಶುರು- ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಅಭಿಯಾನ

    ಮ್ಯಾಂಗೋ ವಾರ್ ಬಳಿಕ ಇನ್ನೊಂದು ವಾರ್ ಶುರು- ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಅಭಿಯಾನ

    ಬೆಂಗಳೂರು: ಹಲಾಲ್, ಜಟ್ಕಾ, ಮ್ಯಾಂಗೋ ವಾರ್ ಬಳಿಕ ಇದೀಗ ಇನ್ನೊಂದು ವಾರ್ ಆರಂಭವಾಗಿದೆ. ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ ಶುರುವಾಗಿದ್ದು, ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಕ್ಯಾಂಪೈನ್ ಆರಂಭವಾಗಿದೆ.

    ಹೌದು. ಇದೀಗ ರಾಜ್ಯದಲ್ಲಿ ಧಾರ್ಮಿಕ ದಂಗಲ್ ಮತ್ತೆ ಮುಂದುವರಿದಿದೆ. ಹಿಜಾಬ್ ನಿಂದ ಶುರುವಾದ ಧಾರ್ಮಿಕ ದಂಗಲ್, ಈಗ ಅಕ್ಷಯ ತೃತೀಯ ಹಬ್ಬಕ್ಕೂ ನಂಟು ಹೊಂದಿಸುತ್ತಿದೆ. ಯುಗಾದಿಯಲ್ಲಿ ಹೇಗೆ ಹಲಾಲ್ ಕಟ್ ವಿರೋಧಿಸಿದ್ರೋ ಹಾಗೇಯ ಮತ್ತೊಂದು ಅಭಿಯಾನ ಶುರುವಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡವೆಂದ ಬಿಎಸ್‌ವೈ

    ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡೋರ ಸಂಖ್ಯೆ ಹೆಚ್ಚು. ಅದಕ್ಕಾಗಿ ಅಕ್ಷಯ ತೃತೀಯ ದಿನ ಹಿಂದೂಗಳ ಚಿನ್ನದಂಗಡಿಯಲ್ಲೇ ಚಿನ್ನ ಖರೀದಿಸಿ. ಚಿನ್ನ ಖರೀದಿ ಮಾಡುವಾಗ ಯಾವ ಧರ್ಮದವರು ಅಂಗಡಿ ಅಂತ ನೋಡಿ ಖರೀದಿಸಿ. ಅನ್ಯ ಧರ್ಮದವರ ಬಳಿ ಚಿನ್ನ ಖರೀದಿ ಬೇಡವೇ ಬೇಡ ಎಂಬ ಹೊಸ ಅಭಿಯಾನ ಶುರುವಾಗಿದೆ.

    ಮುಸ್ಲಿಂ ಜ್ಯುವೆಲ್ಲರಿ ಬಳಿ ಚಿನ್ನ ಖರೀದಿಸದಂತೆ ಹಿಂದೂ ಸಂಘಟನೆಗಳು ಕರೆ ನೀಡಿವೆ. ಈ ಟ್ವಿಟ್ಟರ್ ಅಭಿಯಾನಕ್ಕೆ ಶ್ರೀರಾಮಸೇನೆ ಬೆಂಬಲ ನೀಡಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ

  • ಅಕ್ಷಯ ತೃತೀಯದಂದು ಯಶ್-ರಾಧಿಕಾ ಮಗಳ ಫೋಟೋ ರಿವೀಲ್!

    ಅಕ್ಷಯ ತೃತೀಯದಂದು ಯಶ್-ರಾಧಿಕಾ ಮಗಳ ಫೋಟೋ ರಿವೀಲ್!

    ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಪಲ್ ಎಂದೇ ಖ್ಯಾತರಾಗಿರುವ ಯಶ್, ರಾಧಿಕಾ ಪಂಡಿತ್ ದಂಪತಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಯಶ್ ಮಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದು ಮೇ 7ರಂದು ಮಗಳ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ ಹೇಳಿದ್ದಾರೆ.

    ಹೌದು. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ, ಮೇ 7ರಂದು ಅಕ್ಷಯ ತೃತೀಯವಿದೆ. ಹೀಗಾಗಿ ಆ ಶುಭ ದಿನದಂದೇ ಮಗಳ ಫೋಟೋವನ್ನು ನಿಮ್ಮೆಲ್ಲರ ಮುಂದಿಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನು, ಯಶ್ ನಿಮ್ಮನ್ನು ಪ್ರೀತಿಸ್ತೇವೆ, ಆರಾಧಿಸ್ತೇವೆ: ವೈದ್ಯೆಯ ಬರ್ತ್ ಡೇಗೆ ರಾಧಿಕಾ ವಿಶ್

     ಫೇಸ್ ಬುಕ್ ನಲ್ಲಿ ಬರೆದಿದ್ದೇನು?:
    ಅಪ್ಪ-ಮಗಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನೀವೆಲ್ಲರೂ ನಮ್ಮ ಪುಟ್ಟ ದೇವತೆಯನ್ನು ನೋಡಲು ಅತ್ಯಂತ ಹುರುಪಿನಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಆಸೆಯನ್ನು ನಿರಾಸೆ ಮಾಡುವುದಿಲ್ಲ. ಆದ್ದರಿಂದ ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ ಎಂದು ಅಪ್ಪ ಹಾಗೂ ಮಗಳ ಅರ್ಧ ಫೋಟೋ ಹಾಕಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗಳು, ಪತ್ನಿ ಜೊತೆ ರಾಕಿಂಗ್ ಸ್ಟಾರ್ ಮಾತು

    ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2018ರ ಡಿಸೆಂಬರ್ 2ರಂದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಇದುವರೆಗೂ ತಮ್ಮ ಮಗಳ ಫೋಟೋವನ್ನು ಎಲ್ಲೂ ಪ್ರಕಟಿಸಿರಲಿಲ್ಲ. ಹೀಗಾಗಿ ಇದೇ ತಿಂಗಳ 7ರಂದು ಅಭಿಮಾನಿಗಳಿಗಾಗಿ ಮಗಳ ಫೋಟೋ ಬಿಡುಗಡೆ ಮಾಡಲಿದ್ದಾರೆ.