Tag: Akshatha Pandavapura

  • ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಪ್ರಶಸ್ತಿ

    ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಪ್ರಶಸ್ತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್‍ವೈಐಎಫ್‍ಎಫ್)ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

    ಪಿಂಕಿ ಎಲ್ಲಿ? ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಈ ಪ್ರಶಸ್ತಿ ಪಡೆದಿದ್ದಾರೆ. ಇದೇ ಸಿನಿಮಾಕ್ಕೆ ಚಿತ್ರಕತೆ ಬರೆದ ಕನ್ನಡದ ಚಿತ್ರ ನಿರ್ದೇಶಕ ಪೃಥ್ವಿ ಕೋಣನೂರ್ ಅವರಿಗೆ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ:  ಹೋಟೆಲ್‍ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್

    ಜೂನ್ 4ರಿಂದ 13ರವರೆಗೆ ವರ್ಚುವಲ್ ಮಾಧ್ಯಮದಲ್ಲಿ 2021ನೇ ಸಾಲಿನ ಎನ್‍ವೈಐಎಫ್‍ಎಫ್ ನಡೆಯಿತು. ಪ್ರಶಸ್ತಿ ವಿಜೇತರಿಗೆ ಆನ್‍ಲೈನ್‍ನಲ್ಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಅಕ್ಷತಾ ಹಾಗೂ ಪೃಥ್ವಿ ಅವರು ಕ್ರಮವಾಗಿ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅಮೆರಿಕದಲ್ಲಿ ಭಾರತೀಯ ಸಿನಿಮಾಗಳಿಗೆ ವೇದಿಕೆ ಕಲ್ಪಿಸುವ ಚಿತ್ರೋತ್ಸವ ಇದಾಗಿದ್ದು, ಇಂಡೋ-ಅಮೆರಿಕನ್ ಆಟ್ರ್ಸ್ ಕೌನ್ಸಿಲ್ (ಐಎಎಸಿ) ಇದನ್ನು ಏರ್ಪಡಿಸುತ್ತದೆ.  ಇದನ್ನೂ ಓದಿ: ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

     

    ಚಿತ್ರೋತ್ಸವದಲ್ಲಿ ಮಹಾತ್ಮ ಗಾಂಧಿ ಕುರಿತಾದ ಸೇವಾ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ, ಲಾಕ್‍ಡೌನ್ ವೇಳೆ ವಿವಾಹಿತ ಮಹಿಳೆಯ ಮನಸ್ಥಿತಿಯನ್ನು ಕಟ್ಟಿಕೊಡುವ ಬಂಗಾಳಿ ಕಿರುಚಿತ್ರ ತಶೇರ್ ಗಾವ್‍ಗೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ, ನಾಸಿರ್‍ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ಜೂನ್ ಸಿನಿಮಾದಲ್ಲಿನ ನಟನೆಗಾಗಿ ಸಿದ್ಧಾರ್ಥ ಮೆನನ್‍ಗೆ ಅತ್ಯುತ್ತಮ ನಟ ಪ್ರಶಸ್ತಿ, ಫೈರ್ ಇನ್ ದಿ ಮೌಂಟೇನ್ಸ್ ಚಿತ್ರಕ್ಕಾಗಿ ಅಜಿತ್ ಪಾಲ್‍ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿವೆ.

    ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಈ ಸಿನಿಮಾದಲ್ಲಿನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ರೋಹಿಣಿ ಸಿಂಧೂರಿ ಪಾತ್ರವನ್ನು ನಿರ್ವಹಿಸಲಿದ್ದಾರೆ

  • ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

    ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

    ಮಂಡ್ಯ: ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಇದನ್ನು ಓದಿ:ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

    ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಸಾಹಿತಿ ಕೃಷ್ಣ ಸ್ವರ್ಣಸಂದ್ರ ಅವರು ರೋಹಿಣಿ ಸಿಂಧೂರಿ ಅವರ ಬಯೋಪಿಕ್‍ನ್ನು ಸಿನಿಮಾ ಮಾಡಲು ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ 2020 ಜೂನ್ 15 ರಂದು ಭಾರತ ಸಿಂಧೂರಿ ಎಂಬ ಟೈಟಲ್‍ನ್ನು ರಿಜಿಸ್ಟರ್ ಮಾಡಿಸಿದ್ದಾರೆ.

    ಈ ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಅವರು ಆರಂಭದಲ್ಲಿ ಮಂಡ್ಯದ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮಾಡಿದ್ದ ಕೆಲಸ ಹಾಗೂ ಸಾಧನೆ ಮತ್ತು ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭಗಳು ಅಲ್ಲದೇ, ಸದ್ಯ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದ ಬೆಳವಣಿಗೆಗಳನ್ನು ಈ ಚಿತ್ರ ಕಥೆಯಲ್ಲಿ ಹೆಣೆಯಲಾಗಿದೆ. ಅಲ್ಲದೇ ಅವರು ಬೆಳೆದು ಬಂದ ಹಾದಿಯನ್ನು ಸಹ ಚಿತ್ರಕಥೆಯಲ್ಲಿ ಸೇರಿಸಲಾಗಿದೆ.

    2020ರಲ್ಲೇ ಈ ಸಿನಿಮಾದ ಹೆಸರನ್ನು ರಿಜಿಸ್ಟರ್ ಮಾಡಿಸಲಾಗಿದ್ದು ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರೇ ಹೊತ್ತಿದ್ದಾರೆ. ಇನ್ನೂ ನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರಿಗೆ ನೀಡಲಾಗಿದೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಈ ಚಿತ್ರ ಸೆಟ್ಟರಲಿದೆ ಎಂದು ಕೃಷ್ಣ ಸ್ವರ್ಣಸಂದ್ರರವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ವಾರಿಯರ್​​​ಗಳಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ

  • ಹೆಣ್ಣು ಮಗುವಿನ ತಾಯಿಯಾದ ಅಕ್ಷತಾ ಪಾಂಡವಪುರ

    ಹೆಣ್ಣು ಮಗುವಿನ ತಾಯಿಯಾದ ಅಕ್ಷತಾ ಪಾಂಡವಪುರ

    ಬೆಂಗಳೂರು: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಬಿಗ್‍ಬಾಸ್ ಸ್ಪರ್ಧಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಹೆಣ್ಣು ಮಗುವಿನ ಜನನವಾಗಿದೆ.

    ಈ ವಿಚಾರವನ್ನು ಸ್ವತಃ ಅಕ್ಷತಾ ಅವರೇ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಈ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜನವರಿ 15ರಂದು ಇನ್ ಸ್ಟಾದಲ್ಲಿ ಗರ್ಭಿಣಿಯಾಗಿದ್ದ ಫೋಟೋ ಹಂಚಿಕೊಂಡು, ಆ ಫೋಟೋದ ಮೇಲೆ ಲಕ್ಷ್ಮಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮಗಳು.. ಥ್ಯಾಂಕ್ಯೂ ಗಾಡ್ ಹೆಣ್ಣು ಮಗು ಎಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ. ಮೂಲಕ ಹುಟ್ಟಿದ ಮಗು ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಈ ಹಿಂದೆ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಕೂಡ ಅಕ್ಷತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇ ದಿನಗಳು ಬಾಕಿ. ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿರೋದಾಗಿ ಅಕ್ಷತಾ ತಮ್ಮ ಎಫ್‍ಬಿಯಲ್ಲಿ ಬರೆದುಕೊಂಡಿದ್ದರು.

    ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅಕ್ಷತಾ ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದು, ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದರು. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಅಕ್ಷತಾ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಅಕ್ಷತಾ ಪಾಂಡವಪುರ ಕನ್ನಡ ಬಿಗ್‍ಬಾಸ್ ಆರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

    ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಎಂಟು ವರ್ಷಗಳ ಹಿಂದೆ ಗುರು-ಹಿರಿಯರ ಸಮ್ಮುಖದಲ್ಲಿ ಅಕ್ಷತಾ- ಪ್ರಸನ್ನ ಮದುವೆ ನಡೆದಿತ್ತು.

  • ಬಿಗ್ ಮನೆಯಲ್ಲಿ ತಾಯಿಯ ಮಾತನ್ನೇ ಧಿಕ್ಕರಿಸಿದ ಅಕ್ಷತಾ

    ಬಿಗ್ ಮನೆಯಲ್ಲಿ ತಾಯಿಯ ಮಾತನ್ನೇ ಧಿಕ್ಕರಿಸಿದ ಅಕ್ಷತಾ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ಅಕ್ಷತಾ ಪಾಂಡವಪುರ ತನ್ನ ತಾಯಿಯ ಮಾತಿಗೆ ಸ್ವಲ್ಪವೂ ಬೆಲೆ ನೀಡದೇ ಮತ್ತೆ ತಮ್ಮ ಗೆಳೆಯ ರಾಕೇಶ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

    ಶನಿವಾರ ಬಿಗ್ ಬಾಸ್ 50 ದಿನಗಳನ್ನು ಪೂರೈಸಿತ್ತು. ಈ ವೇಳೆ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ತಮ್ಮ ಕುಟುಂಬಸ್ಥರ ಆಡಿಯೋವೊಂದು ಬರುತ್ತದೆ ಎಂದು ಹೇಳಿದರು. ಹಾಗೆಯೇ ಅಕ್ಷತಾ ತಾಯಿ ಅವರ ಆಡಿಯೋ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರಸಾರವಾಗಿತ್ತು.

    ಸಂದೇಶವೇನು?
    ನಮಸ್ಕಾರ ಮಗಳೇ. ನೀನು ಚೆನ್ನಾಗಿ ಆಟ ಆಡುತ್ತಿದ್ದೀಯಾ. ಆದರೆ ಕೆಲವೊಂದು ಸಲ ನಿನ್ನ ನೋಡುವುದಕ್ಕೆ ಕಷ್ಟ ಆಗುತ್ತೆ. ನೀನು ರಾಕೇಶ್‍ನಿಂದ ದೂರು ಇದ್ದರೆ ಒಳ್ಳೆಯದು. ನಿನ್ನನ್ನು ನಂಬಿರುವ ಸಾಕಷ್ಟು ಜೀವ ಇಲ್ಲಿದೆ. ಹಾಗಾಗಿ ನೀನು ಎಲ್ಲರನ್ನೂ ಚೆನ್ನಾಗಿ ನೋಡಿಕೋ ಹಾಗೂ ನಿನ್ನ ಆಟವನ್ನು ನೀನು ಯಾರಿಗೂ ಬಿಟ್ಟುಕೊಡಬೇಡ. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಬೇಡ. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ನಿನ್ನ ತಮಾಷೆ ಗುಣ ಇಲ್ಲಿ ಕಾಣಿಸುತ್ತಿಲ್ಲ ಎಂದು ಅಕ್ಷತಾ ತಾಯಿ ಸಂದೇಶ ಕಳುಹಿಸಿದ್ದರು.

    ಈ ಸಂದೇಶ ಬಂದ ಬಳಿಕ ರಾಕೇಶ್, ನನ್ನಿಂದ ದೂರ ಇರಬೇಕೆಂದು ನಿಮ್ಮ ಕುಟುಂಬದವರು ಒಂದು ಸಂದೇಶ ನೀಡಿದ್ದಾರೆ. ನೀವು ಈ ವಿಷಯವನ್ನು ನಿರ್ಧಾರ ಮಾಡಿ. ನಾನು ಈ ವಿಷಯವನ್ನು ನಿಮಗೆ ಬಿಡುವೆ ಹಾಗೂ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಅಕ್ಷತಾಗೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದನ್ನೆಲ್ಲ ನೋಡಿದ್ರೆ ನನ್ನ ಗಂಡನಿಗೆ ಪುಕ..ಪುಕ.. ಅಂತಿರುತ್ತೆ-ಪತಿಯ ಬಗ್ಗೆ ಅಕ್ಷತಾ ಮಾತು

    ಇದನ್ನೆಲ್ಲ ನೋಡಿದ್ರೆ ನನ್ನ ಗಂಡನಿಗೆ ಪುಕ..ಪುಕ.. ಅಂತಿರುತ್ತೆ-ಪತಿಯ ಬಗ್ಗೆ ಅಕ್ಷತಾ ಮಾತು

    ಬೆಂಗಳೂರು: ಬಿಗ್ ಬಾಸ್ ಸೀಸನ್-6ರಲ್ಲಿ ಸ್ಪರ್ಧಿ ಅಕ್ಷತಾ ತಮ್ಮ ಪತಿಯ ಬಗ್ಗೆ ಕಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.

    ಅಕ್ಷತಾ, ರಾಕೇಶ್ ಬಳಿ ತಮ್ಮ ಪತಿಯ ಬಗ್ಗೆ ಕಮೆಂಟ್ ಮಾಡಿದ್ದಾರೆ. ಲೈಟ್ಸ್ ಆಫ್ ಆದ ನಂತರ ಅಕ್ಷತಾ ಹಾಗೂ ರಾಕೇಶ್ ಮೇಕಪ್ ರೂಮಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರು ಡ್ಯಾನ್ಸ್ ಮಾಡಿದ್ದು, ನನ್ನ ಗಂಡ ಇದನ್ನೆಲ್ಲ ನೋಡಿದರೆ, ಪುಕ ಪುಕ ಪುಕ ಅಂತಿರುತ್ತೆ, ಎಲ್ಲಿ ನನ್ನನ್ನು ಬಿಟ್ಟು ಹೋಗಿಬಿಡ್ತಾಳೋ ಎಂಬ ಭಯ ಅವರಲ್ಲಿ ಕಾಡುತ್ತಿರುತ್ತೆ ಎಂದು ಅಕ್ಷತಾ ಹೇಳಿದ್ದಾರೆ.

    ಮೇಕಪ್ ರೂಮಿನಲ್ಲಿದ್ದಾಗ ರಾಕೇಶ್, ನೀನು ಅಪರೂಪದ ಹುಡುಗಿ ಎಂದು ಅಕ್ಷತಾರನ್ನು ಹಾಡಿ ಹೊಗಳಿದ್ದಾರೆ. ನೀನು ಮೊದಲ ಬಾರಿಗೆ ಅಪರೂಪದ ಹುಡುಗಿ ಎಂದು ನನ್ನನ್ನು ಪಾಸಿಟಿವ್ ಆಗಿ ಹೊಗಳಿದ್ದೀಯಾ ಎಂದು ಹೇಳುವ ಮೂಲಕ ಗೆಳಯನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆಗ ರಾಕೇಶ್, ಅಕ್ಷತಾ ಅವರ ಕೈ ಹಿಡಿದು ರೌಂಡ್ ಸುತ್ತಿಸಿ ಡ್ಯಾನ್ಸ್ ಮಾಡಿಸಿದ್ದಾರೆ.

    ಏನ್ ಆಯಿತ್ತೋ ಅಕ್ಷತಾ ಹಾಗೂ ರಾಕೇಶ್ ಅವರೇ, ನೀವು ಮಾತನಾಡುವುದಿಲ್ಲ ಎಂದು ಪ್ರಾಮೀಸ್ ಮಾಡಿದ್ದೀರಿ. 1 ವಾರದಲ್ಲಿ ಮಾತನಾಡದಷ್ಟು 1 ಗಂಟೆಯಲ್ಲಿ ಮಾತನಾಡಿದ್ದೀರಾ ಎಂದು ಸುದೀಪ್ ನಮಗೆ ಕೇಳುತ್ತಾರೆ ಎಂದು ರಾಕೇಶ್ ಹೇಳಿದರು. ಈ ವೇಳೆ ಅಕ್ಷತಾ ನನ್ನ ಗಂಡ ಇದನ್ನೆಲ್ಲ ನೋಡಿದರೆ, ಅವರಿಗೆ ಪುಕ ಪುಕ ಪುಕ ಅಂತಿರುತ್ತೆ, ಎಲ್ಲಿ ಬಿಟ್ಟು ಹೋಗಿಬಿಡ್ತಾಳೋ ಎಂದು ಹೇಳಿದ್ದಾರೆ. ಅಕ್ಷತಾ ಅವರ ಈ ಮಾತಿಗೆ ರಾಕೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಅಕ್ಷತಾ ತಮ್ಮ ಪತಿ ಪ್ರಸನ್ನ ಸಾಗರ್ ಬಗ್ಗೆ ಮಾತನಾಡಿದ್ದನ್ನು ಬಿಗ್ ಬಾಸ್ ಸಂಚಿಕೆಯಲ್ಲಿ ಪ್ರಸಾರ ಮಾಡಿಲ್ಲ. ಆದರೆ ಅಕ್ಷತಾ ಈ ರೀತಿ ಹೇಳಿರುವ ವಿಡಿಯೋವನ್ನು ವೂಟ್ ಆ್ಯಪ್‍ನಲ್ಲಿ ಬರುವ ಅನ್‍ಸೀನ್ ಕಥೆಗಳಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಅಕ್ಷತಾ 6 ವರ್ಷಗಳ ಹಿಂದೆ ರಂಗ ನಿರ್ದೇಶಕ ಪ್ರಸನ್ನ ಸಾಗರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv