Tag: akshatha kukki

  • `ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    `ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    ಕಿರುತೆರೆಯ ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಚೆಲುವೆ ಅಕ್ಷತಾ ಕುಕಿ (Akshatha Kukki) ಅವರು ಸೋಮವಾರ (ಮಾ.27)ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ಎಂಬುವವರ ಜೊತೆ ಅರೆಂಜ್ ಮ್ಯಾರೇಜ್ ಆಗಿದ್ದಾರೆ. ಇದೀಗ ಈ ಜೋಡಿಯ ಮದುವೆಯ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಬಿಗ್ ಬಾಸ್ ಒಟಿಟಿಗೆ ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಅಕ್ಷತಾ ಕುಕಿ ನಟಿಸಿದ್ದಾರೆ.

    ಅಕ್ಷತಾ ಕುಕಿ ಅವರು ಹಸೆಮಣೆ ಏರಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿತ್ತು. ಅವಿನಾಶ್ ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿದುದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಗೋಲ್ಡನ್‌ ಬಣ್ಣದ ಸೀರೆಯಲ್ಲಿ ನಟಿ ಅಕ್ಷತಾ ಮಿಂಚಿದ್ದಾರೆ.

    ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಷತಾ ಅವರ ಮದುವೆಯಲ್ಲಿ ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ. ನವಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ಬೆಡಗಿ ಅಕ್ಷತಾ ಕುಕಿ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ಬೆಡಗಿ ಅಕ್ಷತಾ ಕುಕಿ

    ನ್ನಡದ ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಚೆಲುವೆ ಅಕ್ಷತಾ ಕುಕಿ (Akshatha Kukki) ಅವರು ಸೋಮವಾರ (ಮಾ.27)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ (Avinash) ಎಂಬುವವರ ಜೊತೆ ಅರೆಂಜ್ ಮ್ಯಾರೇಜ್ (Wedding) ಆಗಿದ್ದಾರೆ.

    ಬಿಗ್ ಬಾಸ್ ಒಟಿಟಿಗೆ ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ (Martin) ಚಿತ್ರದಲ್ಲಿ ಧ್ರುವ ಸರ್ಜಾ (Dhruva Sarja)  ಜೊತೆ ಅಕ್ಷತಾ ಕುಕಿ ನಟಿಸಿದ್ದಾರೆ. ಇದನ್ನೂ ಓದಿ:`ಘೋಸ್ಟ್’ ಚಿತ್ರತಂಡ ಸೇರಿದ ಬಾಲಿವುಡ್ ನಟ ಅನುಪಮ್ ಖೇರ್

    ಅಕ್ಷತಾ ಕುಕಿ ಅವರು ಹಸೆಮಣೆ ಏರಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿತ್ತು. ಅವಿನಾಶ್ ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿದಿದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ.

    ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಕಿರುತೆರೆ ಕಲಾವಿದರು, ಸ್ನೇಹಿತರು, ಫ್ಯಾನ್ಸ್ ಶುಭಕೋರುತ್ತಿದ್ದಾರೆ.

  • Bachelorette ಪಾರ್ಟಿಯಲ್ಲಿ ಮಿಂಚಿದ ʻಬಿಗ್ ಬಾಸ್ʼ ಅಕ್ಷತಾ ಕುಕಿ

    Bachelorette ಪಾರ್ಟಿಯಲ್ಲಿ ಮಿಂಚಿದ ʻಬಿಗ್ ಬಾಸ್ʼ ಅಕ್ಷತಾ ಕುಕಿ

    ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಅಕ್ಷತಾ ಕುಕಿ (Akshtha Kukki) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮದುವೆಗೂ ಮಸ್ತ್ ಆಗಿ Bachelorette ಪಾರ್ಟಿಯಲ್ಲಿ ನಟಿ ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ಒಟಿಟಿ ಬಿಗ್ ಬಾಸ್ ಮೂಲಕ ಮನಗೆದ್ದ ಸ್ಪರ್ಧಿ ಅಕ್ಷತಾ ಅವರು `ಮಾರ್ಟಿನ್’ (Martin) ಸಿನಿಮಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಸಿನಿಮಾ ವಿಚಾರ ಬಿಟ್ಟು ತಮ್ಮ ಖಾಸಗಿ ಜೀವನದ ವಿಷ್ಯವಾಗಿ ನಟಿ ಸುದ್ದಿಯಾಗುತ್ತಿದ್ದಾರೆ.

    ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಮಾರ್ಚ್ 27ರಂದು ಅಕ್ಷತಾ ಮದುವೆಯಾಗುತ್ತಿದ್ದಾರೆ. ಅವಿನಾಶ್ (Avinash) ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ನಟಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಬೆಳಿಗಾವಿಯಲ್ಲಿ ಮದುವೆ ನಡೆಯಲಿದೆ. ಮದುವೆಗೂ ಮುನ್ನ Bachelorette Party ಮಾಡಿರುವ ಫೋಟೋಗಳು ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

    ಪಿಂಕ್ ಬಣ್ಣದ ಮಾಡ್ರನ್ ಧರಿಸಿ ಮುದ್ದಾಗಿ ಅಕ್ಷತಾ ಕಾಣಿಸಿಕೊಂಡಿದ್ದಾರೆ.  ನಟಿ ಅಕ್ಷತಾಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಮತ್ತೆ ಜೊತೆಯಾದ ಬಿಗ್‌ ಬಾಸ್‌ ಸ್ಪರ್ಧಿಗಳು

    ಮತ್ತೆ ಜೊತೆಯಾದ ಬಿಗ್‌ ಬಾಸ್‌ ಸ್ಪರ್ಧಿಗಳು

    ಬಿಗ್ ಬಾಸ್ ಒಟಿಟಿ (Bigg Boss Kannada) ಮೂಲಕ ಸದ್ದು ಮಾಡಿದ್ದ ಸ್ಪರ್ಧಿಗಳು ಮತ್ತೆ ಜೊತೆಯಾಗಿದ್ದಾರೆ. ದೊಡ್ಮನೆ ಕಿಲಾಡಿಗಳು ಮೋಜು- ಮಸ್ತಿ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

     

    View this post on Instagram

     

    A post shared by Chythrra (@chythrrahallikeriofficial)

    ಒಟಿಟಿ ಮೂಲಕ ಬಿಗ್ ಬಾಸ್ ಶೋ ಸಂಚಲನ ಸೃಷ್ಟಿಸಿತ್ತು. ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ, ಲೋಕೇಶ್, ಸೋನು ಗೌಡ ಹೀಗೆ ಹಲವರು ಶೋನಲ್ಲಿ ಭಾಗಿಯಾಗುವ ಮೂಲಕ ರಂಗೇರಿತ್ತು. ಇದೀಗ ಸಾಕಷ್ಟು ಸಮಯದ ನಂತರ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳು ಒಟ್ಟಾಗಿದ್ದಾರೆ. ಸಿಕ್ಕಾಪಟ್ಟೆ ಫನ್‌ ಮಾಡಿದ್ದಾರೆ.

    ನಟಿ ಚೈತ್ರಾ ಹಳ್ಳಿಕೇರಿ (Chythrra Hallikeri) ಮನೆಯಲ್ಲಿ ಅಕ್ಷತಾ ಕುಕ್ಕಿ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಲೋಕೇಶ್ ಎಲ್ಲರೂ ಜೊತೆಗೂಡಿದ್ದಾರೆ. ಒಟ್ಟಿಗೆ ಒಂದೊಳ್ಳೆ ಸಮಯ ಕಳೆದಿದ್ದಾರೆ. ಬಳಿಕ ಮಸ್ತ್ ರೀಲ್ಸ್ ಹಾಗೂ ಫೋಟೋಶೂಟ್ ಮಾಡಿದ್ದಾರೆ.

    ನಟಿ ಅಕ್ಷತಾ ಕುಕ್ಕಿ ಅವರ ಮದುವೆಗೆ ಆಹ್ವಾನ ನೀಡಲು ಎಲ್ಲರೂ ಜೊತೆಯಾಗಿದ್ದಾರೆ. ಮಾರ್ಚ್ 27ಕ್ಕೆ ಅವಿನಾಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ರೆಡಿಯಾಗಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಊಹೆಗೂ ಮೀರಿದ ಟ್ವೀಸ್ಟ್‌ಗಳು ನಡೆಯುತ್ತಿದೆ. ದಿನ ಕಳೆದಂತೆ ಮನೆಯ ರಂಗು ಹೆಚ್ಚುತ್ತಿದೆ. ಬಿಗ್ ಬಾಸ್ ಓಟಿಟಿ ಮುಗಿಯಲು ಎರಡು ವಾರಗಳಿವೆ. ಇದೀಗ ಒಬ್ಬಬ್ಬರೇ ಮನೆಯಿಂದ ಎಲಿಮೀನೇಟ್ ಆಗಿ ಹೊರಬರುತ್ತಿದ್ದಾರೆ. ಆದರೆ ಈ ವಾರದ ಡಬಲ್ ಎಲಿಮಿನೇಷನ್ ಮನೆಮಂದಿಗೆ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಹೊರನಡೆದಿದ್ದಾರೆ. ಈ ಎಲ್ಲಾ ಬೆಳವಣಿಕೆಗಳ ನಡುವೆ ಜಯಶ್ರೀ ಆರಾಧ್ಯಗೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ದೊಡ್ಮನೆ ಬಿಗ್ ಬಾಸ್ ಸಾಕಷ್ಟು ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಟಫ್ ಆಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರಕ್ಕೆ ಚೈತ್ರಾ ಮತ್ತು ಅಕ್ಷತಾ ಕುಕ್ಕಿ ಔಟ್ ಆಗಿದ್ದಾರೆ. ಆತ್ಮೀಯ ಗೆಳತಿ ಚೈತ್ರಾ ಅವರಿಗಾಗಿ ಜಯಶ್ರೀ ಗಳಗಳನೆ ಅತ್ತಿದ್ದಾರೆ.

    ಜಯಶ್ರೀ ಅವರಿಗೆ ಮೊದಲಿನಿಂದಲೂ ಚೈತ್ರ ಅವರಿರೊಂದಿಗೆ ಒಳ್ಳೆಯ ಒಡನಾಟವಿತ್ತು. ಮನೆಯಲ್ಲಿ ಇದ್ದಷ್ಟು ದಿನ ಒಬ್ಬರಿಗೊಬ್ಬರು ಕೆಲಸಗಳಲ್ಲಿ ಮತ್ತು ಟಾಸ್ಕ್ನಲ್ಲಿ ಸಾಥ್ ನೀಡುತ್ತಲೇ ಬಂದಿದ್ದರು. ಆದರೆ ಈಗ ಮನೆಯಿಂದ ಚೈತ್ರ ಹೊರನಡೆದಿರುವುದು ಜಯಶ್ರೀ ಅವರಿಗೆ ಒಂಟಿತನ ಕಾಡಿದೆ. ಚೈತ್ರಾ ಎಲಿಮಿನೇಟ್ ಆದ ದಿನವೇ ಜಯಶ್ರೀ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ. ತುಂಬಾ ಒಂಟಿತನ ಫೀಲ್ ಆಗುತ್ತಿದೆ. ತುಂಬಾ ವೀಕ್ ಆದಂತೆ ಅನಿಸುತ್ತಿದೆ. ಎಂದು ಗಳಗಳನೆ ಅತ್ತಿದ್ದಾರೆ. ಈ ವೇಳೆ ಇತರ ಸ್ಪರ್ಧಿಗಳು ಸಮಾಧಾನಿಸಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಹೊರಗಡೆ ಜೀವನದಲ್ಲಿ ಈ ರೀತಿ ಆದಾಗ ಬೇರೆ ಆಯ್ಕೆ ಇರುತ್ತದೆ. ಮೊಬೈಲ್ ಇರುತ್ತದೆ. ಆದರೆ ಇಲ್ಲಿ ಸಂಪೂರ್ಣ ಒಂಟಿ ಎಂದೆನಿಸುತ್ತಿದೆ ಎಂದು ಜಯಶ್ರೀ ಹೇಳಿಕೊಂಡಿದ್ದಾರೆ. ಚೈತ್ರ ಅವರಿಗಾಗಿ ಜಯಶ್ರೀ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ಚೈತ್ರಾ ಹಳ್ಳಿಕೇರಿ – ಅಕ್ಷತಾ ಕುಕ್ಕಿ ಔಟ್

    ಬಿಗ್ ಬಾಸ್ ಮನೆಯಿಂದ ಚೈತ್ರಾ ಹಳ್ಳಿಕೇರಿ – ಅಕ್ಷತಾ ಕುಕ್ಕಿ ಔಟ್

    ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ಹೊಸ ಟ್ವೀಸ್ಟ್ಗಳನ್ನ ಪಡೆದುಕೊಳ್ಳುತ್ತಾ ನೋಡುಗರನ್ನ ಮೋಡಿ ಮಾಡುತ್ತಿದೆ. ಮನೆಯ ಆಟ 27ನೇ ದಿನ ಪೂರೈಸಿದೆ. ಇದೀಗ ಈ ವಾರ ಬಿಗ್ ಬಾಸ್ ಮಂದಿಗೆ ಡಬಲ್ ಶಾಕ್ ಕೊಟ್ಟಂತೆ ಆಗಿದೆ. ದೊಡ್ಮನೆಯಿಂದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಔಟ್ ಆಗಿದ್ದಾರೆ.

    ಪ್ರತಿ ವಾರ ಕಿಚ್ಚನ ವೀಕೆಂಡ್ ಪಂಚಾಯಿತಿಗಾಗಿ ಅಭಿಮಾನಿಗಳು ಕಾದು ಕೂತಿರುತ್ತಾರೆ. ಜತೆಗೆ ವಾರದ ಕಡೆಯಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ ಎಂಬುದರ ಬಗ್ಗೆಯೂ ಕ್ಯೂರಿಯಸ್ ಆಗಿ ಕಾಯುತ್ತಾರೆ. ಇದೀಗ ಈ ವಾರ ದೊಡ್ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಮನೆಯಿಂದ ಡಬಲ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದನ್ನೂ ಓದಿ:ನಾನು ಸಹ ಕೆಟ್ಟ ಸಂಬಂಧ ಹೊಂದಿದ್ದೆ ಎಂದ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ಈಗಾಗಲೇ ಬಿಗ್ ಬಾಸ್ ಮನೆಯಿಂದ ಕಿರಣ್ ಯೋಗೇಶ್ವರ್, ಸ್ಪೂರ್ತಿ ಗೌಡ, ಅರ್ಜುನ್ ರಮೇಶ್, ಲೋಕೇಶ್ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ಈ ವಾರ ಚೈತ್ರಾ ಮತ್ತು ಅಕ್ಷತಾ ಮನೆಯಿಂದ ಹೊರಬಂದಿದ್ದಾರೆ. ಇದೀಗ ಡಬಲ್ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

    ಅಕ್ಷತಾ‌ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ

    ಬಿಗ್ ಬಾಸ್ ಓಟಿಟಿ ಸದ್ಯ ಸಿನಿಪ್ರೇಕ್ಷಕರ ನೆಚ್ಚಿ‌ನ ಶೋ ಆಗಿ ಹೊರಹೊಮ್ಮಿದೆ. ಸದಾ ಒಂದಲ್ಲಾ ಒಂದು ವಿಚಾರವಾಗಿ ದೊಡ್ಮನೆ ಸಖತ್ ಸೌಂಡ್ ಮಾಡುತ್ತಿದೆ. ಸೋನು, ಟಾಸ್ಕ್‌ ಮಾಡುವಾಗ ಅಕ್ಷತಾ ಜತೆ ರಾಕೇಶ್ ಸಲಿಗೆಯಿಂದ ನಡೆದುಕೊಂಡಿದ್ದಾರೆ. ಬಳಿಕ ಸೋನು ರಾಕಿ ಮೇಲೆ ಹುಸಿ ಕೋಪ ತೋರಿದ್ದಾರೆ.

    ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಜೋರಾಗಿದೆ. ಮನೆಯ ಕ್ಯಾಪ್ಟನ್ ಶಿಪ್‌ಗೆ ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ಜಶ್ವಂತ್ ನಂತರ ವಾರದ ಕ್ಯಾಪ್ಟನ್ ಆಗಲು ಬಿಗ್ ಬಾಸ್ ನಯಾ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ 15 ನಿಮಿಷ ಕುಳಿತುಕೊಳ್ಳಬೇಕು. ಯಾರು ಹೆಚ್ಚು ಸಮಯ ಕುರುವರೋ ಅವರೇ ವಿಜೇತರು. ಸೋನು ಕೂಡ ಈ ಟಾಸ್ಕ್‌ನಲ್ಲಿ ಭಾಗವಹಿಸಿದ್ದು, ಸ್ಪರ್ಧಿ ಕುಳಿತಿರುವಾಗ ಇತರೇ ಅವರನ್ನು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ಈ ವೇಳೆ ಸೋನು ಗೌಡ ಮುಂದೆ, ಅಕ್ಷತಾ ಜೊತೆ ರಾಕೇಶ್ ಅಡಿಗ ಬಹಳ ಸಲುಗೆಯಿಂದ ನಡೆದುಕೊಂಡಿದ್ದಾರೆ. ಅವರ ರೊಮ್ಯಾಂಟಿಕ್ ಮಾತಿನಿಂದ ಸೋನು ಎದ್ದು ಬರಲಿ ಎಂಬುದು ರಾಕೇಶ್ ಅಕ್ಷತಾ  ಯೋಚಿಸಿದ್ದರು. ಅದರಂತೆ ಸೋನು ಮುಂದೆ ರಾಕೇಶ್‌ ಮತ್ತು ಅಕ್ಷತಾ ಬಹಳ ಸಲಿಗೆಯಿಂದ ನಡೆದುಕೊಂಡಿದ್ದರು. ಈ ಟಾಸ್ಕ್ ಅನ್ನು ಸೋನು ಯಶಸ್ವಿಯಾಗಿ ಮುಗಿಸಿದ್ದಾರೆ. ನಂತರ ಉದಯ್ ಸೂರ್ಯ ಬಳಿ ವಿಚಾರಿಸಿದ್ದಾರೆ. ಅಕ್ಷತಾ ಮತ್ತು ರಾಕೇಶ್ ಎನು ಮಾಡ್ತಿದ್ದರು ಎಂದು ಉದಯ್‌ ಬಳಿ ಚರ್ಚಿಸಿದ್ದಾರೆ. ಈ ಮೂಲಕ ಸೋನು, ರಾಕೇಶ್ ಮೇಲೆ ಹುಸಿ ಕೋಪ ತೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]