Tag: Akshata

  • ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಬಿಗ್ ಬಾಸ್ ನೀಡಿದ ಆಟಗಳು ಸಖತ್ ಮಜಾ ಕೊಟ್ಟಿದೆ. ಫನ್ ಎನಿಸುವ ಈ ಆಟದಲ್ಲಿ ಮನೆಯ ಸದಸ್ಯರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುನ್ನು ನೀಡಡಲಾಗಿತ್ತು. ಅದರಲ್ಲಿ ಪವರ್ ಸ್ಟಾರ್ ಟೀಂ 110, ಟೀಂ ಜಿಂಕಾಲಕ ಟೀಂ ಪಡೆದುಕೊಂಡಿದ್ದು 20 ಅಂಕ. ಈ ಆಟದಲ್ಲಿ ಟೀಂ ಪವರ್ ಸ್ಟಾರ್ ನಿಂದ ಜಯಶ್ರೀ ಬಂದಿದ್ದರು. ಹೆಚ್ಚು ಉತ್ತರವನ್ನು ಅವರೇ ನೀಡಿದ್ದರು.

    ಗೆದ್ದ ಬಳಿಕ ಚೈತ್ರಾ ಬಳಿ ಆ ಖುಷಿಯನ್ನು ವ್ಯಕ್ತಪಡಿಸಿದರು. ಒಬ್ಬರಿಗೆ ಶಕ್ತಿ ಕೊಟ್ಟರೆ ಇನ್ನೊಬ್ಬರಿಗೆ ಯುಕ್ತಿ ಕೊಟ್ಟಿರುತ್ತಾನೆ ಎಂದು ಅವತ್ತೇ ಹೇಳಿದ್ದೆ ಅಂತ ಕುಣಿದು ಕುಪ್ಪಳಿಸಿದ್ದಾಳೆ. ಬಳಿಕ ದೇವರ ಬಳಿ ಹೋಗಿ ತನ್ನ ಕೋರಿಕೆ ಈಡೇರಿಸಿದ್ದಕ್ಕಾಗಿ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ಗೆಲುವು ತುಂಬಾ ಮುಖ್ಯವಾಗಿತ್ತು ಬೇಕೆ ಬೇಕು ಅಂತ. ದೇವರು ನಂಗೆ ಆ ಗೆಲುವು ಕೊಟ್ಟ. ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಮೂರ್ನಾಲ್ಕು ಸಲ ಹೇಳಿದ ಜಯಶ್ರೀ, ಲೈಫ್ ನಲ್ಲಿ ಸೋತವರಿಗೆ ಹಠ ಇರುತ್ತೆ ಅಂತ ನಾನು ಎಲ್ಲರನ್ನು ಕರೆದುಕೊಂಡೆ. ನಾನು ಸದಸ್ಯರನ್ನು ಸೆಲೆಕ್ಟ್ ಮಾಡಿದಾಗ ಇವಳು ದಡ್ಡಿ, ಅವಳು ಬುದ್ಧಿವಂತೆ, ಇನ್ಯಾರೋ ಕ್ಲೆವರ್, ದಡ್ಡತನ ಮಾಡಿಕೊಂಡಳು ಅಂತ ಇನ್ಯಾರೋ ಮಾತನಾಡಿಕೊಂಡರು ಎಂದು ಜಯಶ್ರೀ ಹೇಳಿದ್ದೇ ತಡ ದೊಡ್ಡ ಗಲಾಟೆಯೇ ನಡೆದಿದೆ.

    ಅಲ್ಲಿಯೇ ಇದ್ದ ಅಕ್ಷತಾ ಅದಕ್ಕೆ ಕ್ಲಾರಿಟಿ ಕೊಡುವುದಕ್ಕೆ ಬಂದಾಗ, ಜಯಶ್ರೀ ತಿರುಗೇಟು ನೀಡಿದ್ದಾಳೆ. ನಾನು ಖುಷಿಯಲ್ಲಿದ್ದೀನಿ. ಆ ಖುಷಿ ಮೂಮೆಂಟ್ ಎಂಜಾಯ್ ಮಾಡಬೇಕು. ನಿನ್ನ ಮಾತು ಕೇಳುವುದಕ್ಕೆ ಇಷ್ಟಪಡಲ್ಲ ಎಂದು ಕಿವಿ ಮುಚ್ಚಿಕೊಂಡಿದ್ದಾಳೆ. ಇದು ಸ್ಟುಪ್ಪಿಡಿಟಿ. ಆಕೆ ಬೆಳಗ್ಗೆನೆ ಮೆನ್ಶನ್ ಮಾಡಿದ್ದಳು. ಸೋನುನು ಏನೂ ಇಲ್ಲ. ಒಂದು ಟಾಸ್ಕ್ ಅಷ್ಟೆ ವಿನ್ ಆಗಿರೋದು ಅಂತ ಹೇಳಿದ್ದಳು ಎಂದಾಗ ಮತ್ತೆ ಜಯಶ್ರೀ ತಿರುಗಿಬಿದ್ದಿದ್ದಾಳೆ. ಬೇರೆಯವರನ್ನ ದಡ್ಡರು ಅಂತ ಹೇಳಿಲ್ಲ ಹೋಗಮ್ಮ ಸುಮ್ಮನೆ ಎಂದು ರೇಗಿದ್ದಾಳೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಆದರೆ ಇಷ್ಟಕ್ಕೆ ಅಕ್ಷತಾ ಬಿಡಬೇಕಲ್ಲ. ನೋವೇ ಚಾನ್ಸೆ ಇಲ್ಲ. ನನ್ನ ಖುಷಿ ಮೂಮೆಂಟ್ ನ ಎಂಜಾಯ್ ಮಾಡುವುದಕ್ಕೆ ಬಿಡು ಅಂತ ಕಿವಿ ಮುಚ್ಚಿಕೊಂಡು ಓಡಿ ಹೋಗಿದ್ದ ಜಯಶ್ರೀ ಹಿಂದೆ ಹಿಂದೆಯೇ ಅಕ್ಷತಾ ಹೋಗಿದ್ದಾಳೆ. ಮಾತನಾಡುವಾಗ ಯೋಚನೆ ಮಾಡಿ ಮಾತಾಡು ಜಯಶ್ರೀ. ನಾನು ಖುಷಿನೇ ಪಟ್ಟಿದ್ದೀನಿ. ಅದರೆ ಅದನ್ನು ಅಷ್ಟು ದೊಡ್ಡದ್ದನ್ನು ಮಾಡಿ ಮಾತಾಡುವ ಅವಶ್ಯಕತೆ ಇಲ್ಲ ಎಂದು ಅಕ್ಷತಾ ಹೇಳಿದ್ದಾಳೆ. ಇನ್ನು ಜಯಶ್ರೀ ಕೂಡ ಅದೇ ಸ್ಟೈಲ್ ನಲ್ಲಿ ಮನೆಯಲ್ಲೆಲ್ಲಾ ಓಡಾಡಿ, ನಾನು ದೇವರ ಹತ್ತಿರ ಮಾತನಾಡುವುದಕ್ಕೂ ಬಿಡಲ್ಲ ಎಂದು ಗೋಳಾಡಿದ್ದಾಳೆ.

    ಇತ್ತ ಸೋನು ಮತ್ತು ರಾಕೇಶ್ ಕುಳಿತಿದ್ದಾಗ ಅಕ್ಷತಾ ನಡೆದ್ದನ್ನು ಹೇಳಿದ್ದಾಳೆ. ದೇವರತ್ರ ನಿಂತು ಎಲ್ಲಾ ಹೇಳುತ್ತಿದ್ದಳು. ಕ್ಲೆವರ್ ಚಾಯ್ಸ್ ಬಗ್ಗೆ ಹೇಳುತ್ತಿದ್ದಳು. ಆ ಮಾತನ್ನು ನನಗೆ ಹೇಳಿದ್ದು. ಎಲ್ಲಾರು ನನ್ನ ಡಬ್ಬ ಅಂತ ಅಂದುಕೊಂಡಿದ್ದರು ಅಂತ ಬೇರೆ ಬೇರೆ ಮಾತು ಬಂತು. ಆಗ ನಾನು ಹೋಗಿ ಹೇಳಿದೆ. ಜಯಶ್ರೀ ಅದು ಹಂಗ್ ಇರಲಿಲ್ಲ. ನೀನು ಸೋನು ಇದ್ದರೂ ನಡೆಯುತ್ತೆ. ಇಲ್ಲದೆ ಇದ್ದರೂ ನಡೆಯುತ್ತೆ ಅಂತ ಬೆಳಗ್ಗೆ ಹೇಳಿದ್ದೆ. ಅದನ್ನು ಓಪನ್ ಮಾಡಿರಲಿಲ್ಲ ಈಗ ಓಪನ್ ಮಾಡಿದೆ ಎಂದಿದ್ದೆ ತಡ, ಅಕ್ಷತಾ ಮಾತಿಗೆ ಆ ಕಡೆ ಸೋನು ಕೆಂಡಾಮಂಡಲವಾಗಿದ್ದಾಳೆ. ಇತ್ತ ಜಯಶ್ರೀ, ಚೈತ್ರಾ, ನಂದಿನಿ ಮುಂದೆ ಎಲ್ಲಾ ಅಳುತ್ತಲೇ ಹೇಳಿದ್ದಾಳೆ. ನಾನು ಖುಷಿಯಲ್ಲಿದ್ದಾಗ ಬಂದಿದ್ದಾಳೆ. ನಂದೊಂದು ಎಲ್ಲಿ ಇಡಲಿ ಅಂತ ಬರುತ್ತಾಳೆ ಎಂದಾಗ ನಂದಿನಿ ಕೂಡ ಜಯಶ್ರೀಗೆ ಸಮಾಧಾನ ಮಾಡಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಏನ್ಗೊತ್ತಾ ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಲೇಝಿ: ನಿವೇದಿತಾ ಗೌಡ

    ಏನ್ಗೊತ್ತಾ ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಲೇಝಿ: ನಿವೇದಿತಾ ಗೌಡ

    – ಅಕ್ಷತಾ ಹೇಳಿದ ಮಾತಿನಿಂದ ಕಣ್ಣೀರಿಟ್ಟ ಬೊಂಬೆ

    ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿಗೆ ಅತಿಥಿಯಾಗಿ ಎಂಟ್ರಿ ಪಡೆದಿರುವ ನಿವೇದಿತಾ ಗೌಡ, ಬಿಗ್ ಮನೆಯಲ್ಲಿರುವ ಸೊಳ್ಳೆಗಳು ತುಂಬಾನೇ ಲೇಜಿ ಅಂತ ಹೇಳಿದ್ದಾರೆ.

    ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಗ್‍ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ನಿವೇದಿತಾ ಗೌಡ, ಜಯಶ್ರೀ ಮತ್ತು ಜೀವಿತಾ ಹರಟೆ ಹೊಡೆಯುತ್ತಿದ್ದರು. ಈ ವೇಳೆ ನಿವೇದಿತಾ ಗೌಡ, ಬಿಗ್‍ಬಾಸ್ ಮನೆಯ ಸೊಳ್ಳೆಗಳು ತುಂಬಾನೇ ಲೇಝಿ. ಅವುಗಳನ್ನು ಕೈಯಿಂದ ದೂರ ಹೋಗುವಂತೆ ಸನ್ನೆ ಮಾಡಿದ್ರು ಹೋಗಲ್ಲ. ನಮ್ಮ ಮನೆಯಲ್ಲಿ ಸ್ವಲ್ಪ ಕೈ ಶೇಕ್ ಮಾಡಿದ್ರು ಹಾರಿ ಹೋಗುತ್ತೆ. ಇವತ್ತು ಬಾತ್‍ರೂಮಿನಲ್ಲಿ ಸೊಳ್ಳೆಯೊಂದು ನನ್ನ ಕೈ ಮೇಲೆ ಕುಳಿತಿತ್ತು. ಕೈ ಅಲ್ಲಾಡಿಸಿದ್ರು ಹೋಗದೇ ಅಲ್ಲೇ ಪ್ರಾಣ ಬಿಡ್ತು ಎಂದು ನಿವೇದಿತಾ ಗೌಡ ಹೇಳಿ ನಕ್ಕರು.

    ಮನೆಯ ಸದಸ್ಯರಿಗೆ ಬಿಗ್‍ಬಾಸ್ ಹೊಸ ಟಾಸ್ಕ್ ನೀಡಿದ್ರು. ಎಲ್ಲರೂ ಹುಂಡಿಯಲ್ಲಿರುವ ಚೀಟಿ ತೆಗೆದು ಅದರಲ್ಲಿರುವ ಮೂರು ಪದಗಳು ಮನೆಯಲ್ಲಿ ಯಾರಿಗೆ ಹೊಂದಾಣಿಕೆ ಆಗುತ್ತೆ ಅಂತ ಹೇಳಿ ಸೂಕ್ತ ಕಾರಣ ತಿಳಿಸಬೇಕೆಂದು ಬಿಗ್‍ಬಾಸ್ ಆದೇಶಿಸಿದ್ದರು. ಅಕ್ಷತಾರಿಗೆ ಸಿಕ್ಕ ಚೀಟಿಯಲ್ಲಿ ಸಹೋದರ, ತಾಯಿ ಮತ್ತು ಕುಟುಂಬಕ್ಕೆ ಸೇರಲ್ಲ ಎಂಬ ಪದಗಳು ಸಿಕ್ಕಿದ್ದವು. ನವೀನ್ ಸಜ್ಜು ನನ್ನ ಸಹೋದರ, ರಾಕೇಶ್ ತಾಯಿ ಮತ್ತು ನಿವೇದಿತಾ ಗೌಡ ಕುಟುಂಬಕ್ಕೆ ಸೇರಲ್ಲ ಅಂತಾ ಹೇಳಿದ್ದರು.

    ಬೊಂಬೆ ಕಣ್ಣೀರು:
    ನಿವೇದಿತಾ ಮನೆಗೆ ಬಂದಾಗಿಂದಲೂ ನಮ್ಮೆಲ್ಲರ ಜೊತೆ ಹೊಂದಾಣಿಕೆ ಆಗ್ತಿಲ್ಲ. ಅವಳಿಗೆ ಹೆಲ್ಪಿಂಗ್ ನೇಚರ್ ಕಡಿಮೆ. ಕಳೆದ ಸೀಸನ್ ನಲ್ಲಿಯೂ ನಿವೇದಿತಾ ನಮ್ಮವಳು ಅಂತ ಅನ್ನಿಸಲಿಲ್ಲ. ನಮ್ಮ ಮನೆ ಹುಡುಗಿ, ನಮ್ಮ ಊರು ಹುಡುಗಿ ಅನ್ನೋ ಭಾವನೆ ನನಗೆ ಬರಲಿಲ್ಲ. ಹಾಗಾಗಿ ಕುಟುಂಬಕ್ಕೆ ಸೇರದ ವ್ಯಕ್ತಿ ನಿವೇದಿತಾ ಎಂಬ ಕಾರಣವನ್ನ ಅಕ್ಷತಾ ನೀಡಿದರು. ಸೀಸನ್ 5ರ ಮಾತು ಇಲ್ಲಿ ಬೇಡ. ನಾನು ಬಂದು ಮೂರು ದಿನ ಆಯ್ತು. ಕಳೆದ ಸೀಸನ್ ಬಗ್ಗೆ ಮಾತನಾಡೋದು ಸೂಕ್ತವಲ್ಲ ಎಂದು ನಿವೇದಿತಾ ಗೌಡ ಭಾವುಕರಾದ್ರು.

    ತಿರುಗೇಟು ಕೊಟ್ಟ ಬೊಂಬೆ:
    ಚೀಟಿ ಎತ್ತುವ ಸರದಿ ನಿವೇದಿತಾರಿಗೆ ಬಂದಿತ್ತು. ಚೀಟಿಯಲ್ಲಿ ಒಳ್ಳೆಯ ಮನಸ್ಸು, ಕೆಟ್ಟ ಮನಸ್ಸು ಮತ್ತು ಕೊಳಕು ಮನಸ್ಸು ಬಂದಿತ್ತು. ಧನರಾಜ್ ಒಳ್ಳೆಯ ಮನಸ್ಸು, ಆ್ಯಂಡಿ ಕೊಳಕು ಮನಸ್ಸು ಮತ್ತು ಅಕ್ಷತಾ ಕೆಟ್ಟ ಮನಸ್ಸು ಎಂಬ ಹೆಸರುಗಳನ್ನು ಸೂಚಿಸಿದ್ರು. ಅಕ್ಷತಾರಿಗೆ ನಾನು ಇದೂವರೆಗೂ ಪರ್ಸನಲ್ ಆಟ್ಯಾಕ್ ಮಾಡಿಲ್ಲ. ಅವರ ಬಗ್ಗೆ ನಾನು ಹಿಂದುಗಡೆ ಮಾತನಾಡಿಲ್ಲ. ಅಕ್ಷತಾರ ವಿಚಾರವನ್ನೇ ಇದೂವರೆಗೂ ಪ್ರಸ್ತಾಪ ಮಾಡಿಲ್ಲ. ಕಳೆದ ಸೀಸನ್ ಮಾತುಗಳು ಇಲ್ಲಿ ಬೇಕಾಗಿರಲಿಲ್ಲ. ಅನಾವಶ್ಯಕ ಮಾತು ಆಡಿದ್ದರಿಂದ ಅಕ್ಷತಾರಿಗೆ ಕೆಟ್ಟ ಮನಸ್ಸು ನೀಡುತ್ತೇನೆ ಎಂದು ಹೇಳುವ ಮೂಲಕ ನಿವೇದಿತಾ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

    ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

    ಬೆಂಗಳೂರು: ಹಾಲಿವುಡ್ ಕಥೆಗಾರನ ಕಥೆ ಮತ್ತು ಒಂದಷ್ಟು ಹೊಸತನಗಳ ಜೊತೆಗೇ ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರ ತೆರೆಗೆ ಬಂದಿದೆ. ಪ್ರೇಕ್ಷಕರು ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ ಮಾಡಿದ ಹಾರರ್ ಅನುಭವವೊಂದನ್ನು ಮನಸು ತುಂಬಿಕೊಂಡಿದ್ದಾರೆ!

    ಅಮೆರಿಕ ಕನ್ನಡಿಗ ಹೇಮಂತ್ ಕೃಷ್ಣಪ್ಪ ಅವರೇ ನಿರ್ಮಾಣ ಮಾಡಿ, ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರೋ ಚಿತ್ರ ಉದ್ದಿಶ್ಯ. ಆರಂಭದಿಂದಲೂ ಹೊಸತೇನೋ ಇದೆ ಎಂಬ ಕುತೂಹಲ ಕಾಯ್ದಿಟ್ಟುಕೊಂಡಿದ್ದ ಈ ಚಿತ್ರವೀಗ ಅದಕ್ಕೆ ತಕ್ಕುದಾದ ಫೀಲ್ ಒಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸಫಲವಾಗಿದೆ.

    ಮೈಸೂರು ಮೃಗಾಲಯದಲ್ಲಿ ಹಠಾತ್ತನೆ ಸತ್ತು ಬಿದ್ದ ಪ್ರಾಣಿಗಳು ಮತ್ತು ಕೆಲ ವ್ಯಕ್ತಿಗಳು. ಇದೊಂದು ಕೊಲೆ ಎಂಬುದು ಮೇಲು ನೋಟಕ್ಕೇ ಗೊತ್ತಾಗುವಂತಿದ್ದರೂ ಅದಕ್ಕೆ ಕಾರಣವೇನು, ಇದರ ಹಿಂದಿರೋರು ಯಾರೆಂಬುದು ಕಗ್ಗಂಟು. ಅದನ್ನು ಬಿಡಿಸಲು ಯಂಗ್ ಆಂಡ್ ಎನರ್ಜೆಟಿಕ್ ಸಿಐಡಿ ಆಫೀಸರ್ ಆಗಮನ. ಯಾವುದಕ್ಕೂ ಕೇರ್ ಮಾಡದ ಈ ಅಧಿಕಾರಿಯನ್ನು ತನಿಖೆಯ ಜಾಡು ಭೀಕರ ಮಾಂತ್ರಿಕನೊಬ್ಬನ ಮಾಂತ್ರಿಕ ಮಂಡಲಕ್ಕೆ ತಂದು ನಿಲ್ಲಿಸುತ್ತೆ. ಈತನ ಸುತ್ತ ಮೂವರು ಹುಡುಗೀರ ದರ್ಶನವೂ ಆಗುತ್ತೆ. ಅಲ್ಲಿಂದಲೇ ಹಾರರ್ ಕಥನವೂ ತೆರೆದುಕೊಳ್ಳುತ್ತೆ. ಆದರೆ ಈ ಹಾರರ್ ವಿಧಾನವೂ ತಾಂತ್ರಿಕ ಶ್ರೀಮಂತಿಕೆ ಹೊಂದಿದೆ ಎಂಬುದು ಈ ಚಿತ್ರದ ಅಸಲೀ ಶಕ್ತಿ.

    ಒಟ್ಟಾರೆಯಾಗಿ ಸಿಐಡಿ ಅಧಿಕಾರಿಯಾಗಿಯೂ ಅಬ್ಬರಿಸಿರುವ ಹೇಮಂತ್ ಕೃಷ್ಣಪ್ಪ, ಮಾಮೂಲಾದ ಕಥೆಯನ್ನೂ ಭಿನ್ನ ಬಗೆಯಲ್ಲಿ ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರಾಗಿಯೂ ಅವರ ಕೆಲಸ ಮುಖ್ಯವಾಗುತ್ತದೆ. ಇದಕ್ಕೆ ಎಲ್ಲ ಪಾತ್ರಧಾರಿಗಳೂ ಸಾಥ್ ನೀಡಿದ್ದಾರೆ. ಅರ್ಚನಾ ಗಾಯಕವಾಡ್, ಅಕ್ಷತಾ ಮತ್ತು ಇಚ್ಚಾ ಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಹಿನ್ನೆಲೆ ಸಂಗೀತ ಇಡೀ ಚಿತ್ರಕ್ಕೆ ಶಕ್ತಿ ತುಂಬಿದರೆ ತಾಂತ್ರಿಕ ಶ್ರೀಮಂತಿಕೆ ಅದಕ್ಕೆ ಸಾಥ್ ನೀಡಿದೆ. ಒಂದಷ್ಟು ಕೊರತೆಗಳಿದ್ದರೂ ಒಂದೊಳ್ಳೆ ಚಿತ್ರ ನೋಡಿದ ಅನುಭವವನ್ನಂತೂ ಉದ್ದಿಶ್ಯ ನೀಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಳ್ಳಿ ಘಮಲಿನ ‘ಚಂಪಾ’ಕಲಿಯಂಥಾ ‘ಪರಸಂಗ’!

    ಹಳ್ಳಿ ಘಮಲಿನ ‘ಚಂಪಾ’ಕಲಿಯಂಥಾ ‘ಪರಸಂಗ’!

    ಹೊಸಾ ಅಲೆ ಹಳೇ ಸೆಲೆಗಳೆಲ್ಲವೂ ಝಗಮಗಿಸುವ ಕಥೆಗಳ ಬೆಂಬೀಳೋದೇ ಹೆಚ್ಚಾದ್ದರಿಂದ ಹಳ್ಳಿ ಘಮಲಿನ ಕಥೆಗಳೇ ಅಪರೂಪವಾಗಿ ಬಿಟ್ಟಿವೆ. ಹಾಗೊಂದು ವೇಳೆ ಅಂಥಾ ಚಿತ್ರಗಳು ತೆರೆ ಕಂಡರೂ ಎಲ್ಲದರಲ್ಲಿಯೂ ವೀಕ್ ನೆಸ್ ಪ್ರಾಬ್ಲಮ್ಮಿನಿಂದ ಸೊರಗಿರುತ್ತವೆ. ಆದರೆ ಎಲ್ಲ ವಿಚಾರದಲ್ಲಿಯೂ ದಷ್ಟ ಪುಷ್ಟವಾಗಿರುವ ಮಿತ್ರಾ ಅಭಿನಯದ ಪರಸಂಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುತ್ತಾ ಸಾರಾಸಗಟಾಗಿ ಎಲ್ಲರನ್ನು ಥೇಟರಿನತ್ತ ಸೆಳೆಯುತ್ತಿದೆ.

    ಪ್ರೇಕ್ಷಕರ ಬಾಯಿ ಮಾತಿಂದಲೇ ಥೇಟರು ತುಂಬಿಸಿಕೊಂಡ ಚಿತ್ರಗಳು ಗೆದ್ದವೆಂದೇ ಅರ್ಥ. ಸದ್ಯ ಪರಸಂಗವೂ ಅಂಥಾದ್ದೇ ವಾತಾವರಣ ಸೃಷ್ಟಿಸಿರೋದರಿಂದ ಇದು ಗೆದ್ದ ಲಕ್ಷಣ ಎಂಬುದನ್ನು ಸಪರೇಟಾಗಿ ಹೇಳೋ ಅವಶ್ಯಕತೆಯಿಲ್ಲ!

    ಯಾರಾದರೂ ಕಾಯಿಲೆ ಬಿದ್ದರೆ ಬೊಂಬೆಯೊಂದನ್ನು ತಯಾರಿಸಿ ಕಾಯಿಲೆಯನ್ನು ಅದರೊಳಗೆ ತುಂಬಿಸೋ ನಂಬಿಕೆಯಿಂದ ಅದನ್ನು ಗಡಿಯಾಚೆ ಬಿಟ್ಟು ಬರುವ ಒಂದು ಸಂಪ್ರದಾಯವಿದೆ. ಹಳ್ಳಿಗಾಡುಗಳಲ್ಲಿ ಇದು ಈಗಲೂ ಅಳಿದುಳಿದುಕೊಂಡಿದೆ. ಆ ಹಳ್ಳಿಯಲ್ಲಿ ತನ್ನ ವಿಧವೆ ತಾಯಿಯ ಜೊತೆ ಬದುಕುತ್ತಾ, ಊರ ಗೌಡನ ಮನೆಯಲ್ಲಿ ಚಾಕರಿ ಮಾಡಿಕೊಂಡಿರೋ ತಿಮ್ಮ ಕೂಡಾ ಗೊಂಬೆ ದಾಟಿಸುವ ವೃತ್ತಿಯನ್ನೂ ನಡೆಸಿಕೊಂಡು ಬಂದಿರುತ್ತಾನೆ. ಇಂಥವನಿಗೆ ಎತ್ತಣಿದ್ದೆಂತಲಿಂದಲೂ ಮ್ಯಾಚ್ ಆಗದ ಬೊಂಬೆಯಂಥಾ ಹುಡುಗಿಯೇ ಮಡದಿಯಾಗಿ ಬಂದು ಬಿಡುತ್ತಾಳೆ.

    ಚಂಪಾ ಹೆಸರಿನ ಈ ಚೆಲುವೆ ಪರಿಸ್ಥಿತಿಯ ಸಂಕೋಲೆಗೆ ಸಿಲುಕಿ ತನಗೆ ಹೊಂದದ ತಿಮ್ಮನನ್ನು ಮದುವೆಯಾಗುತ್ತಾಳೆ. ಈ ನಡುವೆ ತಿಮ್ಮ ಮಡದಿನ ಮಾತು ಕೇಳಿ ಚಂಪಾ ಚಾಟ್ಸ್ ಎಂಬ ಹೋಟೆಲು ಶುರುವಿಟ್ಟುಕೊಂಡೇಟಿಗೆ ಚಂಪಾಕಲಿಯಂಥಾ ಚಂಪಾಳ ಮೇಲೆ ಇಡೀ ಊರ ಕಣ್ಣು ಬೀಳುತ್ತದೆ. ಚಂಪಾ ಕೂಡಾ ಅಂಥಾ ಪಡ್ಡೆಗಳ ಜೊತೆ ಮೆತ್ತಗೆ ನವರಂಗಿಯಾಟ ಶುರು ಮಾಡಿಕೊಳ್ಳುತ್ತಾಳೆ.

    ಆದರೆ ಊರೆಲ್ಲ ಏನೇ ಹೇಳಿದರೂ ತಿಮ್ಮ ಮಾತ್ರ ತನ್ನ ಹೆಂಡತಿ ಪರಮ ಪತಿವ್ರತೆ ಎಂದೇ ನಂಬಿ ಕೂತಿರುತ್ತಾನೆ. ಹೀಗಿರುವಾಗಲೇ ಚಂಪಾ ಚಾಟ್ಸ್ ಎದುರಿಗೇ ಕ್ಲಿನಿಕ್ಕು ತೆರೆಯೋ ಸ್ಫುರದ್ರೂಪಿ ವೈದ್ಯನೂ ಚಂಪಾಳ ಬಾಧೆಗೆ ಟ್ರೀಟ್ ಮೆಂಟು ಶುರು ಮಾಡಿದಾಕ್ಷಣ ತಿಮ್ಮನ ಬದುಕಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಅದರಾಚೆಗಿನದ್ದು ಅಸಲೀ ಆಹ್ಲಾದ. ನಿರ್ದೇಶಕ ಕೆ.ಎಂ. ರಘು ತಾನೊಬ್ಬ ಅಪ್ಪಟ ಹಳ್ಳಿ ಘಮಲಿನ ಕಥೆ ಹೇಳೇ ಪಾರಂಗತ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಧೃಡಪಡಿಸಿದ್ದಾರೆ.

    ಹಾಸ್ಯ ನಟರಾಗಿ ಬ್ರ್ಯಾಂಡ್ ಆಗಿದ್ದ ಮಿತ್ರಾ ಈ ಹಿಂದೆ ರಾಗ ಚಿತ್ರದ ಮೂಲಕ ಆ ಸೀಮೆ ದಾಟಿಕೊಂಡಿದ್ದರು. ಪರಸಂಗ ಚಿತ್ರದ ತನ್ಮಯ ನಟನೆಯಿಂದ ಯಾವ ಪಾತ್ರಕ್ಕೂ ಸೈ ಎನಿಸಿದ ಓರ್ವ ಅಪ್ಪಟ ಕಲಾವಿದನಾಗಿ ಮಿತ್ರಾ ಪ್ರೇಕ್ಷಕರನ್ನು ಮುಟ್ಟಿದ್ದಾರೆ. ಇನ್ನು ನಾಯಕಿ ಅಕ್ಷತಾ ಈ ಪಾತ್ರವನ್ನು ಮೈ ಮನಸುಗಳಿಗೆ ತುಂಬಿಕೊಂಡು ನಟಿಸೋ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲವ ಕನಸನ್ನು ಖಂಡಿತಾ ನನಸು ಮಾಡಿಕೊಂಡಿದ್ದಾರೆ. ವೈದ್ಯನಾಗಿ ನಟಿಸಿರೋ ಮನೋಜ್, ಕನೆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಸೇರಿದಂತೆ ಎಲ್ಲರದ್ದೂ ಮಾಗಿದ ನಟನೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡರದ್ದೂ ಮನಸಲ್ಲುಳಿಯುವ ಪಾತ್ರ. ನಿರ್ದೇಶಕ, ಕ್ಯಾಮೆರಾ, ಸಂಗೀತ ಸೇರಿದಂತೆ ತಾಂತ್ರಿಕವಾಗಿಯೂ ವಿಶಿಷ್ಟವಾದ ಫೀಲ್ ಕೊಡುವ ಮೂಲಕ ಪರಸಂಗ ಚಿತ್ರ ಗೆಲುವಿನತ್ತ ದಾಪುಗಾಲಿಡುತ್ತಿದೆ.

  • ಪರಸಂಗದ ಹುಡುಗಿ ಅಕ್ಷತಾ!

    ಪರಸಂಗದ ಹುಡುಗಿ ಅಕ್ಷತಾ!

    – ಇದು ಬಹುಕಾಲದಿಂದ ಬಯಸಿದ್ದ ಕಥೆಯಂತೆ!

    ಬೆಂಗಳೂರು: ಮಿತ್ರಾ ನಾಯಕನಾಗಿ ನಟಿಸಿರುವ ಪರಸಂಗ ಚಿತ್ರದ ನಾಯಕಿಯಾಗಿ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಡುತ್ತಿರುವಾಕೆ ಅಕ್ಷತಾ. ಮಂಗಳೂರು ಮೂಲದ ಅಕ್ಷತಾ ಈ ಹಿಂದೆ ಒಂದಷ್ಟು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ವರ್ಷಾಂತರಗಳ ಕಾಲದಿಂದ ಹೊಂದಿದ್ದ ಆಸೆ ಪರಸಂಗದ ಮೂಲಕ ಕೈಗೂಡಿದೆ.

    ಪರಭಾಷಾ ಚಿತ್ರಗಲ್ಲಿ ನಟಿಸಿದ್ದ ಅಕ್ಷತಾಗೆ ಬಹು ಕಾಲದ ಕನಸಾಗಿದ್ದದ್ದು ಕನ್ನಡ ಚಿತ್ರರಂಗ. ಇಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ಉತ್ಕಟ ಬಯಕೆ ಹೊಂದಿದ್ದ ಆಕೆಗೆ ಒಂದೊಳ್ಳೆ ಪಾತ್ರದ ಮೂಲಕವೇ ಪರಿಚಯವಾಗೋ ಹಂಬಲವಿತ್ತು. ಈ ನಡುವೆ ಒಂದಷ್ಟು ಕಥೆಗಳನ್ನೂ ಕೇಳಿದ ಅಕ್ಷತಾಗೆ ತೃಪ್ತಿಯಾಗಿರಲಿಲ್ಲ. ತಾನು ಬಯಸುವಂಥಾ ವಿಶಿಷ್ಟವಾದ ಕಥೆ ಮತ್ತು ಪಾತ್ರ ಸಿಕ್ಕ ಮೇಲೆಯೇ ಕನ್ನಡಕ್ಕೆ ಎಂಟ್ರಿ ಕೊಡುವ ಅಚಲ ನಿರ್ಧಾರ ಮಾಡಿ ಕೂತಿದ್ದ ಅಕ್ಷತಾಗೆ ಮಿತ್ರಾ ಅವರ ಮೂಲಕ ಸಿಕ್ಕಿದ್ದು ಪರಸಂಗ ಚಿತ್ರದ ನಾಯಕಿಯಾಗೋ ಅವಕಾಶ!

    ಈ ಚಿತ್ರದ ಕಥೆ ಕೇಳಿದಾಕ್ಷಣವೇ ಅಕ್ಷತಾ ಇಂಪ್ರೆಸ್ ಆಗಿದ್ದರಂತೆ. ಅದರಲ್ಲಿಯೂ ವಿಶೇಷವಾಗಿ ಸಿದ್ಧಸೂತ್ರಗಳನ್ನು ಬದಿಗಿಟ್ಟು ಹೊಸತನಕ್ಕಾಗಿ ಹಾತೊರೆಯುತ್ತಿದ್ದ ಇಡೀ ಚಿತ್ರ ತಂಡದ ಎನರ್ಜಿ ಅವರಿಗಿಷ್ಟವಾಗಿ ಮರು ಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ. ಪರಸಂಗ ಚಿತ್ರದಲ್ಲಿ ಅಕ್ಷತಾರದ್ದು ಎಲ್ಲ ಮಹಿಳೆಯರನ್ನೂ ಕಾಡುವಂಥಾ ಪಾತ್ರ. ನೆಗೆಟಿವ್ ಶೇಡ್ ಕೂಡಾ ಇರುವ ಈ ಪಾತ್ರ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ಭರವಸೆ ಅಕ್ಷತಾರದ್ದು.

    ನಾಯಕಿಯಾಗಬೇಕೆಂಬ ಆಸೆ ಹೊತ್ತು ಸಿಕ್ಕ ಕಥೆಯನ್ನೆಲ್ಲ ಒಪ್ಪಿಕೊಳ್ಳದೆ ತಾನು ಬಯಸೋ ಪಾತ್ರ ಅರಸಿ ಬರುವವರೆಗೂ ಅಚಲವಾಗಿ ಕಾದು ಕೂತಿದ್ದ ಅಕ್ಷತಾ ತನ್ನ ಪರಸಂಗದ ಪಾತ್ರವನ್ನು ಸ್ವೀಕರಿಸಿ ಹರಸುವಂತೆ ಕನಡದ ಪ್ರೇಕ್ಷಕರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

    ಕೆ ಎಂ ರಘು. ನಿರ್ದೇಶನದ ಪರಸಂಗ ಚಿತ್ರದ ಪ್ರಧಾನ ಪಾತ್ರದಲ್ಲಿ ಮಿತ್ರ, ಅಕ್ಷತ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಕಾಮಿಡಿ ಕಿಲಾಡಿಗಳು ನಟರುಗಳಾದ ಗೋವಿಂದೇ ಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದೆ ಚಂದ್ರ ಪ್ರಭ ಇದ್ದಾರೆ. ಹರ್ಷ ವರ್ಧನರಾಜ್ ಸಂಗೀತ, ಸುಜೈ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಈ `ಪರಸಂಗ’ ಒಳಗೊಂಡಿದೆ.