Tag: Akshar Patel

  • IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

    IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

    ಮುಂಬೈ: 2025ರ ಐಪಿಎಲ್‌ ಆವೃತ್ತಿಗಾಗಿ ಉಳಿಕೆ ಆಟಗಾರರ ಪಟ್ಟಿ ರಿಲೀಸ್‌ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯು ನಾಯಕ ರಿಷಭ್‌ ಪಂತ್‌ (Rishabh Pant) ಸೇರಿ ಹಲವು ಸ್ಟಾರ್‌ ಆಟಗಾರರನ್ನೇ ಹೊರಗಿಟ್ಟು, ಆಲ್‌ರೌಂಡರ್‌ ಹಾಗೂ ಬೌಲರ್‌ಗಳಿಗೆ ಮಣೆಹಾಕಿದೆ.

    ನಿರೀಕ್ಷೆಯಂತೆ ರಿಷಬ್‌ ಪಂತ್‌ ಅವರನ್ನು ಉಳಿಕೆ ಪಟ್ಟಿಯಿಂದ ಕೈಬಿಟ್ಟಿದ್ದು, ಓರ್ವ ವಿದೇಶಿ ಆಟಗಾರ ಸೇರಿದಂತೆ ನಾಲ್ವರನ್ನು ಧಾರಣೆ ಮಾಡಿಕೊಂಡಿದೆ. ಅಕ್ಟರ್‌ ಪಟೇಲ್‌ (Akshar Patel) ಅತಿ ಹೆಚ್ಚು ಸಂಭಾವನೆ ಗಳಿಸಿದ್ದು, ಮುಂದಿನ ಕ್ಯಾಪ್ಟನ್‌ ಆಗಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: IPL Retention | ಡುಪ್ಲೆಸಿ ಔಟ್‌, ಆರ್‌ಸಿಬಿಯಲ್ಲಿ ತ್ರಿಬಲ್‌ ಸ್ಟಾರ್‌; ಕೊಹ್ಲಿ ಸಂಭಾವನೆಯಲ್ಲಿ ದಿಢೀರ್‌ 6 ಕೋಟಿ ಏರಿಕೆ

    ಯಾರಿಗೆ ಎಷ್ಟು ಮೊತ್ತ?
    * ಅಕ್ಷರ್‌ ಪಟೇಲ್‌ – 16.5 ಕೋಟಿ ರೂ.
    * ಕುಲ್ದೀಪ್‌ ಯಾದವ್‌ – 13.25 ಕೋಟಿ ರೂ.
    * ಟ್ರಿಸ್ಟನ್‌ ಸ್ಟಬ್ಸ್‌ – 10 ಕೋಟಿ ರೂ.
    * ಅಭಿಷೇಕ್‌ ಪೊರೆಲ್‌ – 4 ಕೋಟಿ ರೂ.

    ಸಿಎಸ್‌ಕೆಗೆ ಪಂತ್?‌
    ಹರಾಜು ಪ್ರಕ್ರಿಯೆ ಶುರುವಾದ ಆರಂಭದಿಂದಲೂ ರಿಷಭ್‌ ಪಂತ್‌ ಡೆಲ್ಲಿ ತಂಡವನ್ನು ತೊರೆಯುತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ನಿರೀಕ್ಷೆಯಂತೆ ಫ್ರಾಂಚೈಸಿ ಅವರನ್ನು ಕೈಬಿಟ್ಟಿದೆ. ಸದ್ಯ ಅವರು ಸಿಎಸ್‌ಕೆ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಸ್‌ಕೆ ಫ್ರಾಂಚೈಸಿಯು ಒಂದು ಆರ್‌ಟಿಎಂ ಕಾರ್ಡ್‌ ಆಯ್ಕೆ ಬಾಕಿ ಉಳಿಸಿಕೊಂಡಿದ್ದು, ರಿಷಭ್‌ ಪಂತ್‌ ಅವರನ್ನ ಖರೀದಿ ಮಾಡಲಿದೆ. ಈಗಾಗಲೇ ಧೋನಿ ಫ್ರಾಂಚೈಸಿ ಮಾಲೀಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

    ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ. ಇದನ್ನೂ ಓದಿ: IPL Retention | ರೋಹಿತ್‌, ಪಾಂಡ್ಯಗಿಂತಲೂ ಬುಮ್ರಾ ದುಬಾರಿ – ಮುಂಬೈನಲ್ಲಿ ವಿದೇಶಿ ಆಟಗಾರರಿಗೆ ಕೊಕ್‌

  • ಕೊನೆ ಓವರಿನಲ್ಲಿ 22 ರನ್, ಧವನ್ ಸೆಂಚುರಿ- ಡೆಲ್ಲಿಗೆ 5 ವಿಕೆಟ್ ಗೆಲುವು

    ಕೊನೆ ಓವರಿನಲ್ಲಿ 22 ರನ್, ಧವನ್ ಸೆಂಚುರಿ- ಡೆಲ್ಲಿಗೆ 5 ವಿಕೆಟ್ ಗೆಲುವು

    -ಪ್ಲೇ ಆಫ್ ಪ್ರವೇಶಿಸಿದ ಅಯ್ಯರ್ ಪಡೆ

    ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದ ಅಂತಿಮ ಓವರಿನಲ್ಲಿ 20 ರನ್ ಸಿಡಿಸಿದ ಡೆಲ್ಲಿ ಆಟಗಾರ ಅಕ್ಷರ್ ಪಟೇಲ್ ತಂಡಕ್ಕೆ 5 ವಿಕೆಟ್‍ಗಳ ರೋಚಕ ಗೆಲುವನ್ನು ತಂದುಕೊಟ್ಟಿದ್ದಾರೆ. ಚೆನ್ನೈ ವಿರುದ್ಧ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಡೆಲ್ಲಿ ಪಡೆ 14 ಅಂಕಗಳನ್ನು ಪಡೆದುಕೊಂಡಿದೆ. ಅಲ್ಲದೇ ಪ್ಲೇ ಆಫ್ ಪ್ರವೇಶಿಸುವುದು ಖಚಿತವಾಗಿದೆ.

    ಅಂತಿಮ ಓವರ್ ನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಈ ವೇಳೆ ಬೌಲ್ ಮಾಡಿದ ಜಡೇಜಾ ಬೌಲಿಂಗ್ ಮೊದಲ ಎಸೆತದಲ್ಲಿ ಧವನ್ 1 ರನ್ ಗಳಿಸಿದರೆ, 2ನೇ ಮತ್ತು 3ನೇ ಎಸೆತವನ್ನು ಅಕ್ಷರ್ ಪಟೇಲ್ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಚೆನ್ನೈ ತಂಡದ ಸೋಲು ಖಚಿತವಾಗಿತ್ತು. ಓವರಿನ 4ನೇ ಎಸೆತದಲ್ಲಿ 2 ರನ್ ಓಡಿದ ಅಕ್ಷರ್, 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಪರಿಣಾಮ ಡೆಲ್ಲಿ ತಂಡ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ಜಯ ಪಡೆಯಿತು.

    180 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಲ್ಲೇ ಎಡವಿತು. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲೂ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇತ್ತ ಮೊದಲ ಓವರ್ ನಲ್ಲಿ ವಿಕೆಟ್ ಪಡೆದಿದ್ದು ಮಾತ್ರವಲ್ಲದೇ ದೀಪಕ್ ಚಹರ್ ಯಾವುದೇ ರನ್ ಬಿಟ್ಟು ಕೊಡದೆ ಮೇಡನ್ ಸಾಧನೆ ಮಾಡಿದರು. 5ನೇ ಓವರಿನ ಮೊದಲ ಎಸೆತದಲ್ಲಿ 10 ಎಸೆತಗಳಲ್ಲಿ 8 ರನ್ ಗಳಿಸಿದ್ದ ರಹಾನೆ ವಿಕೆಟ್ ಪಡೆದ ಚಹರ್ ಡೆಲ್ಲಿಗೆ 2ನೇ ಹೊಡೆತ ನೀಡಿದರು. ಪವರ್ ಪ್ಲೇ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ 41 ರನ್ ಗಳಿಸಿತ್ತು.

    ವಿಕೆಟ್ ಕಳೆದುಕೊಳ್ಳುತ್ತಿದ್ದರು ಮತ್ತೊಂದು ಬದಿಯಲ್ಲಿ ರನ್ ಗಳಿಸುತ್ತಾ ಸಾಗುತ್ತಿದ್ದ ಧವನ್ ಎರಡು ಜೀವದಾನಗಳನ್ನು ಪಡೆಯುವುದರೊಂದಿಗೆ ಅರ್ಧ ಶತಕ ಗಳಿಸಿ ಮುನ್ನುಗುತ್ತಿದ್ದರು. ಪಂದ್ಯದಲ್ಲಿ 3 ಜೀವದಾನ ಪಡೆದ ಧವನ್ ಅಂತಿಮವಾಗಿ 58 ಎಸೆತಗಳಲ್ಲಿ ಸಿಕ್ಸರ್, 14 ಬೌಂಡರಿಗಳೊಂದಿಗೆ 101 ರನ್ ಗಳಿಸಿದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. ಉಳಿದಂತೆ ಡೆಲ್ಲಿ ಪರ ಅಯ್ಯರ್ 23 ರನ್, ಸ್ಟೋಯ್ನಿಸ್ 24 ರನ್, ಅಲೆಕ್ಸ್ ಕ್ಯಾರಿ 4 ರನ್ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡುಪ್ಲೆಸಿಸ್ 58 ರನ್, ರಾಯುಡು 45* ರನ್, ರವೀಂದ್ರ ಜಡೇಜಾ 33* ರನ್‍ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು. ಡೆಲ್ಲಿ ಪರ ಅನ್ರಿಕ್ ನಾಟ್ರ್ಜೆ 2 ವಿಕೆಟ್ ಪಡೆದರೆ, ದೇಶಪಾಂಡೆ ಮತ್ತು ರಬಾಡಾ ತಲಾ 1 ವಿಕೆಟ್ ಪಡೆದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡಕ್ಕೆ ಮೊದಲ ಓವರಿನ 3ನೇ ಎಸೆತದಲ್ಲೇ ಶಾಕ್ ಕೊಟ್ಟ ದೇಶಪಾಂಡೆ ಶೂನ್ಯಕ್ಕೆ ಸ್ಯಾಮ್ ಕರ್ರನ್ ರನ್ನು ಪೆವಿಲಿಯನ್‍ಗಟ್ಟಿದರು. ಆ ಬಳಿಕ ಬಂದ ವ್ಯಾಟ್ಸನ್, ಡೆಫ್ಲೆಸಿಸ್ ಜೋಡಿ 2ನೇ ವಿಕೆಟ್‍ಗೆ 87 ರನ್ ಗಳ ಜೊತೆಯಾಟ ನೀಡಿ ಡೆಲ್ಲಿ ಬೌಲರ್ ಗಳನ್ನು ಕಾಡಿತ್ತು. ತಂಡದ ರನ್ ವೇಗ ಹೆಚ್ಚಿಸುವ ಪ್ರಯತ್ನದಲ್ಲಿ ವ್ಯಾಟ್ಸನ್ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 58 ರನ್ ಗಳಿಸಿದ್ದ ಡುಫ್ಲೆಸಿಸ್‍ರ ವಿಕೆಟ್ ಪಡೆದು ರಬಾಡಾ ಮಿಂಚಿದರು.

    3 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರು. ಈ ವೇಳೆಗೆ ಚೆನ್ನೈ 16.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಸ್ಲಾಗ್ ಓವರ್ ಗಳಲ್ಲಿ ಅಂಬಟಿ ರಾಯುಡು, ಜಡೇಜಾ ಸ್ಫೋಟಕ ಪ್ರದರ್ಶನದಿಂದಾಗಿ ನಿಗದಿತ 29 ಓವರ್ ಗಳಲ್ಲಿ 179 ರನ್ ಗಳಿಸಿತು. ರಾಯುಡು, ಜಡೇಜಾ ಜೋಡಿ 5ನೇ ವಿಕೆಟ್‍ಗೆ 21 ಎಸೆತಗಳಲ್ಲಿ ಅರ್ಧ ಶತಕದ ಜೊತೆಯಾಟ ನೀಡಿತ್ತು.

  • ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    – ನಿಯಮ ಬದಲಿಸಿ ಎಂದ ನೆಟ್ಟಿಗರು

    ನವದೆಹಲಿ: ಕಿಂಗ್ಸ್ ಇಲೆವನ್ ವಿರುದ್ಧದ ಪಂದ್ಯವನ್ನು ದೆಹಲಿ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗ ಗೆದ್ದುಕೊಂಡರೂ ಈ ಪಂದ್ಯದಲ್ಲಿ ಕಾಲಿನ್ ಇನ್‍ಗ್ರಾಮ್ ಕ್ಯಾಚ್ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಸದ್ಯ ಸೂಪರ್ ಫಿಟ್ ಫೀಲ್ಡರ್ ಗಳ ಸಂಖ್ಯೆ ಸದ್ಯ ಹೆಚ್ಚಾಗುತ್ತಲೇ ಇದ್ದು, ಪಂಜಾಬ್ ವಿರುದ್ಧ ಪಂದ್ಯದಲ್ಲೂ ಕಾಲಿನ್ ಇನ್‍ಗ್ರಾಮ್ ಸೂಪರ್ ಕ್ಯಾಚ್ ಪಡೆದಿದ್ದಾರೆ. ಕಾಲಿನ್, ಅಕ್ಷರ್ ಇಬ್ಬರ ಜೋಡಿ ಕ್ಯಾಚ್ ಪಡೆಯುವಲ್ಲಿ ಮೋಡಿ ಮಾಡಿದ್ದು, ಪಂದ್ಯದ 12ನೇ ಓವರಿನ 2ನೇ ಎಸೆತದಲ್ಲಿ ಗೇಲ್ ಬೀಸಿದ ಸಿಕ್ಸರ್ ರನ್ನು ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದ ಇನ್‍ಗ್ರಾಮ್ ನಾನು ಬೌಂಡರಿ ಗೆರೆ ದಾಟುತ್ತಿದ್ದೇನೆ ಎಂದು ಅರಿವಾಗುತ್ತಿದಂತೆ ಅಲ್ಪ ದೂರದಲ್ಲಿದ್ದ ಅಕ್ಷರ್ ಗೆ ಬಾಲ್ ಪಾಸ್ ಮಾಡಿ ಕ್ಯಾಚ್ ಪೂರ್ಣಗೊಳಿಸುವಂತೆ ಮಾಡಿದ್ರು.

    ಅಕ್ಷರ್ ಕ್ಯಾಚ್ ಪೂರ್ಣಗೊಳಿಸಿದ ಪರಿಣಾಮ 37 ಎಸೆತಗಳಲ್ಲಿ 69 ರನ್ ಗಳಿಸಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಗೇಲ್ ಪೆವಿಲಿಯನ್ ಸೇರಿದರು. ಅಲ್ಲದೇ ಕ್ಯಾಚ್ ಪಡೆಯುವ ವೇಳೆ ಇನ್‍ಗ್ರಾಮ್ ತೋರಿದ ಸಮಯ ಪ್ರಜ್ಞೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕ್ಯಾಚ್ ಪಡೆಯಲು ಇನ್‍ಗ್ರಾಮ್ ಶ್ರಮವಹಿಸಿದ್ದರೂ ಕೂಡ ನಿಯಮಗಳಂತೆ ಈ ಕ್ಯಾಚ್ ಅಕ್ಷರ್ ಪಟೇಲ್ ಖಾತೆಗೆ ಸೇರಿತ್ತು. ಈ ನಿಯಮಗಳ ಬಗ್ಗೆಯೂ ಹಲವರು ಪ್ರಶ್ನೆ ಮಾಡಿದ್ದು, ನಿಯಮಗಳ ಬದಲಾವಣೆ ಅಗತ್ಯ ಇದೆ ಎಂದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 163 ರನ್ ಸಿಡಿಸಿದ ಪಂಜಾಬ್ ಡೆಲ್ಲಿಗೆ 164 ರನ್ ಗಳ ಗುರಿ ನೀಡಿತು. ಸವಾಲಿನ ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ 19.4 ಓವರಿನಲ್ಲೇ ಗೆಲುವಿನ ರನ್ ಗಳಿಸಿ 5 ವಿಕೆಟ್ ಜಯ ಪಡೆಯಿತು. ಪಂದ್ಯಲ್ಲಿ ಧವನ್ 56 ರನ್ (41 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ 58 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದ್ದರೆ, ಅಷ್ಟೇ ಅಂಕ ಪಡೆದಿರುವ ಡೆಲ್ಲಿ ಕಡಿಮೆ ರನ್ ರೇಟ್ ಕಾರಣದಿಂದ 3ನೇ ಸ್ಥಾನ ಪಡೆದುಕೊಂಡಿದೆ.