Tag: Akkineni Nagarjun

  • ನಟನೆಗೆ ಗುಡ್ ಬೈ, ರಾಜಕೀಯ ಅಖಾಡಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

    ನಟನೆಗೆ ಗುಡ್ ಬೈ, ರಾಜಕೀಯ ಅಖಾಡಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ?

    ಟಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಅಕ್ಕಿನೇನಿ ನಾಗಾರ್ಜುನ (Akkineni nagarjuna) ಇದೀಗ ರಾಜಕೀಯದತ್ತ ಮುಖ ಮಾಡಲಿದ್ದಾರೆ. ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ಅಖಾಡಕ್ಕೆ ನಾಗಾರ್ಜುನ ಎಂಟ್ರಿ ಕೊಡಲಿದ್ದಾರಂತೆ.

    ಸಿನಿಮಾ ಸ್ಟಾರ್‌ಗಳು ರಾಜಕೀಯ (Politics) ರಂಗಕ್ಕೆ ಎಂಟ್ರಿ ಕೊಡುವುದು ಹೊಸ ವಿಚಾರವಲ್ಲ. ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಮಿಂಚಿದ ಹಾಗೆ ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿರುವವರಿದ್ದಾರೆ. ಇದೀಗ ಸಿನಿಮಾರಂಗದಿಂದ ರಾಜಕೀಯಕ್ಕೆ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಡಲಿದ್ದಾರಂತೆ ಹಾಗಂತ ಟಿಟೌನ್ ಈ ವಿಚಾರ ಸಖತ್ ಸದ್ದು ಮಾಡಿದೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ಟಾಲಿವುಡ್‌ನ ಸ್ಟಾರ್ ಆಗಿ ಮಿಂಚ್ತಿರುವ ನಾಗಾರ್ಜುನ (Nagarjuna) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ನಾಗಾರ್ಜುನ ಅವರು ಪೊಲಿಟಿಕ್ಸ್ ಕಡೆಗೆ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಆಸಕ್ತಿಯಿದೆ ಎಂಬ ಸುದ್ದಿ ಸೌಂಡ್ ಮಾಡುತ್ತಿದೆ. ಇನ್ನೂ ಈ ವಿಚಾರದ ಬಗ್ಗೆ ನಾಗಾರ್ಜುನ ಅವರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

    ನಾಗಾರ್ಜುನ ಅವರು ಮುಂಬರುವ ಆಂಧ್ರ ಪ್ರದೇಶ ಚುನಾವಣೆಯಲ್ಲಿ ವಿಜಯವಾಡ ಕ್ಷೇತ್ರದಿಂದ ನಿಲ್ಲುವ ಸಾಧ್ಯತೆಯಿದೆ. ವೈಸಿಪಿ ಪಕ್ಷದಿಂದ ನಿಲ್ಲುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರರಂಗದಲ್ಲಿ ಇದೀಗ ಬೇಡಿಕೆ ಇರುವಾಗಲೇ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆರತಕ್ಷತೆಯ ಸಂಭ್ರಮದಲ್ಲಿದ್ದ ನಾಗಾರ್ಜುನ್ ಕುಟುಂಬಕ್ಕೆ ಮರುದಿನವೇ ದೊಡ್ಡ ಶಾಕ್: ಹೊತ್ತಿ ಉರಿದ ಸ್ಟುಡಿಯೋ

    ಆರತಕ್ಷತೆಯ ಸಂಭ್ರಮದಲ್ಲಿದ್ದ ನಾಗಾರ್ಜುನ್ ಕುಟುಂಬಕ್ಕೆ ಮರುದಿನವೇ ದೊಡ್ಡ ಶಾಕ್: ಹೊತ್ತಿ ಉರಿದ ಸ್ಟುಡಿಯೋ

    ಹೈದರಾಬಾದ್: ನಗರದ ಬಂಜಾರ ಹಿಲ್ಸ್ ನಲ್ಲಿರುವ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಒಡೆತನದ ಅನ್ನಪೂರ್ಣ ಸ್ಟುಡಿಯೋ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದೆ.

    ಸುಮಾರು 14 ಸಾವಿರ 800 ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಟುಡಿಯೋ ಬೆಂಕಿಗಾಹುತಿ ಆಗಿದೆ. ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡ ಕೇವಲ ಎರಡು ಗಂಟೆಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ನಂದಿಸುವಲ್ಲಿ ಯಶಸ್ವಿಯಾದರೂ, ಬೆಂಕಿಯ ಕೆನ್ನಾಲಿಗೆಗೆ ಸ್ಟುಡಿಯೋದಲ್ಲಿದ್ದ ಎಲ್ಲಾ ಸಾಮಗ್ರಿಗಳು ಭಸ್ಮವಾಗಿವೆ.

    1975 ರಲ್ಲಿ ನಾಗಾರ್ಜುನ್ ತಂದೆ ನಾಗೇಶ್ವರ್ ರಾವ್ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದರು. ಅಕ್ಕಿನೇನಿ ಕುಟುಂಬದವರ ಸಿನಿಮಾ ಸೇರಿದಂತೆ ಅನೇಕ ನಟರ ಸಿನಿಮಾಗಳ ಚಿತ್ರೀಕರಣ ನಡೆದಿವೆ.

    ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಟುಡಿಯೋದಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೂ ಬೆಂಕಿ ಸ್ಟುಡಿಯೋದ ಎಲ್ಲ ಭಾಗಗಳಲ್ಲಿ ವ್ಯಾಪಿಸಿದ್ದು, ಭಯಭೀತರಾದ ಸಿಬ್ಬಂದಿ ಹೊರಗಡೆ ಓಡಿ ಬಂದಿದ್ದಾರೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ನಾಗಾರ್ಜುನ್ ಭಾನುವಾರ ಮಗನ ಆರತಕ್ಷತೆಯನ್ನು ಅದ್ಧೂರಿಯಾಗಿ ಮಾಡಿ ಸಂಭ್ರಮಿಸಿದ್ದರು. ನಾಗಾರ್ಜುನ ಕುಟುಂಬಕ್ಕೆ ಆರತಕ್ಷತೆಯ ಮರುದಿನವೇ ದೊಡ್ಡ ಶಾಕ್ ಎದುರಾಗಿದೆ. ಆರತಕ್ಷತೆಯ ಸಂಭ್ರಮದಲ್ಲಿ ನಿರತವಾಗಿದ್ದ ಅಕ್ಕಿನೇನಿ ಕುಟುಂಬಕ್ಕೆ ಈ ಘಟನೆ ಅತೀವ ನೋವುಂಟು ಮಾಡಿದೆ.

    https://twitter.com/BCC_movienews/status/930084452016910336