Tag: Akhila Bharath Kannada Sahitya Sammelana

  • 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ವಿವಿಧ ಸಮಿತಿಗಳು ಪ್ರಕಟ

    86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ವಿವಿಧ ಸಮಿತಿಗಳು ಪ್ರಕಟ

    ಹಾವೇರಿ: ಜನವರಿ 6, 7 ಹಾಗೂ 8 ರಂದು ಹಾವೇರಿಯಲ್ಲಿ (Haveri) ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Akhila Bharath Kannada Sahitya Sammelana) ವಿವಿಧ ಕೆಲಸ ಕಾರ್ಯಗಳಿಗೆ ರಚಿಸಲಾದ 16 ಸಮಿತಿಗಳನ್ನು (Committee) ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಭಾನುವಾರ ಪ್ರಕಟಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಜರುಗಿದ ಸ್ವಾಗತ ಸಮಿತಿಯ ಸಭೆಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ರಚಿಸಲಾದ ಸಮಿತಿಗಳ ಗೌರವಾಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳ ಹೆಸರನ್ನು ಪ್ರಕಟಿಸಿದರು.

    ಸಮನ್ವಯ ಸಮಿತಿಯ ಗೌರವಾಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ, ವಿಧಾನಸಭಾ ಮಾಜಿ ಸಭಾಪತಿ ಕೆ.ಬಿ ಕೋಳಿವಾಡ, ಅಧ್ಯಕ್ಷರಾಗಿ ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನೀಲ್ ಕುಮಾರ್, ಉಪಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಎಸ್ ಬನ್ನಿಕೋಡ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

    ಸಮ್ಮೇಳನದ ಸಿದ್ಧತೆ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿಗೆ ಗೌರವಾಧ್ಯಕ್ಷರಾಗಿ ಸಂಸದ ಶಿವಕುಮಾರ್ ಉದಾಸಿ, ಅಧ್ಯಕ್ಷರಾಗಿ ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ಸುರೇಶ್ ಗೌಡ ಬಿ ಪಾಟೀಲ್, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಇದನ್ನೂ ಓದಿ: ತನಿಖೆ ಹೆಸ್ರಲಿ ಟಾರ್ಚರ್ ಕೊಡಬೇಡಿ: ಬಿಬಿಎಂಪಿ ಅಧಿಕಾರಿ ಮನವಿ

    ವೇದಿಕೆ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾಗಿ ಸಚಿವ ಸುನೀಲ್ ಕುಮಾರ್, ಅಧ್ಯಕ್ಷರಾಗಿ ಶಾಸಕ ಹಾಗೂ ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ನೆಹರೂ ಓಲೇಕಾರ, ಸದಸ್ಯ ಕಾರ್ಯದರ್ಶಿಗಳಾಗಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಇದನ್ನೂ ಓದಿ: ಸಿದ್ದು ಪ್ರವಾಸದ ಬಳಿಕ ಕೋಲಾರ ಕ್ಷೇತ್ರದಲ್ಲಿ ಚುರುಕಾದ ಬಿಜೆಪಿ

    Live Tv
    [brid partner=56869869 player=32851 video=960834 autoplay=true]

  • 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ದೇಣಿಗೆ ನೀಡಲು ಜಿಲ್ಲಾಧಿಕಾರಿಗಳ ಮನವಿ

    85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ದೇಣಿಗೆ ನೀಡಲು ಜಿಲ್ಲಾಧಿಕಾರಿಗಳ ಮನವಿ

    ಕಲಬುರಗಿ: ನಗರದಲ್ಲಿ 2020ರ ಫೆಬ್ರುವರಿ 5, 6 ಹಾಗೂ 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವಂತೆ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ.

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಬಿ. ಶರತ್ ಅವರು, ಸಮ್ಮೇಳನವು ಈ ಹಿಂದೆ 1987ರಲ್ಲಿ ಜರುಗಿತ್ತು. ಇದೀಗ 32 ವರ್ಷಗಳ ನಂತರ ಕಲಬುರಗಿಯಲ್ಲಿ ಕನ್ನಡ ಹಬ್ಬ ಆಯೋಜಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಯಶಸ್ವಿಯಾಗಿ ನಡೆಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಅದರಲ್ಲಿ ತಮ್ಮ ಪಾಲುದಾರಿಕೆ ಅತೀ ಶ್ರೇಷ್ಠವಾದದ್ದು. ಅದರಂತೆ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನದ ಅವಶ್ಯಕತೆ ಇರುತ್ತದೆ. ಸಂಘ-ಸಂಸ್ಥೆಗಳು,ಸರ್ಕಾರೇತರ ಸಂಸ್ಥೆಗಳು, ಕಾರ್ಖಾನೆ-ಉದ್ದಿಮೆಗಳು, ವಿವಿಧ ವ್ಯಾಪಾರಿ ಸಂಘಗಳು ಮುಂತಾದವರು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕೆಂದು ಕೋರಿದ್ದಾರೆ.

    ಎಲ್ಲಾ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಕೈಜೋಡಿಸುವಂತೆ ಅವರು ಕೋರಿದ್ದಾರೆ. ದೇಣಿಗೆ ನೀಡಲಿಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಹಣ ವರ್ಗಾಯಿಸಬಹುದಾಗಿದೆ. ಚೆಕ್ ಅಥವಾ ಡಿ.ಡಿ. ಮೂಲಕವೂ ಸಹ ದೇಣಿಗೆ ನೀಡಬಹುದಾಗಿದೆ. ಚೆಕ್ ಮೂಲಕ ದೇಣಿಗೆ ನೀಡಬಯಸುವವರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಚೆಕ್ ನೀಡಬಹುದಾಗಿದೆ.

    ಬ್ಯಾಂಕ್ ಖಾತೆ ವಿವರ
    ಬ್ಯಾಂಕ್ ಖಾತೆ ಹೆಸರು- 85TH ABKSSSK
    ಬ್ಯಾಂಕಿನ ಹೆಸರು-ಸಿಂಡಿಕೇಟ್ ಬ್ಯಾಂಕ್
    ಶಾಖೆ ಹೆಸರು-ಸ್ಟೇಷನ್ ಬಜಾರ, ತಿಮ್ಮಾಪುರಿ ಚೌಕ್, ಕಲಬುರಗಿ
    ಖಾತೆ ಸಂಖ್ಯೆ-13012010153869
    ಐ.ಎಫ್.ಎಸ್.ಸಿ. ಕೋಡ್- SYNB0001301
    ಎಂ.ಐ.ಸಿ.ಆರ್. ಸಂಖ್ಯೆ-585025003