ಟಾಲಿವುಡ್‌ನ ಕಲಾವಿದರ ಕುಟುಂಬದಿಂದ ಬಂದ ನಟ ಅಖಿಲ್ ಅಕ್ಕಿನೇನಿ (Akhil Akkineni) ಸಿನಿಮಾ ರಂಗದಲ್ಲಿ ಮಾತ್ರ ಹೇಳಿಕೊಳ್ಳುವ ಮಟ್ಟಿಗೆ ಸಕ್ಸಸ್ ಕಾಣುತ್ತಿಲ್ಲ. ಅಣ್ಣ ನಾಗಚೈತನ್ಯ (Naga Chaitanya) ಕ್ಲಿಕ್ ಆಗಿದ್ದಾರೆ. ಆದರೆ ಅಖಿಲ್‌ಗೆ ಬ್ರೇಕ್ ಕೊಡುವ ಸಿನಿಮಾಗಳು ಸಿಗುತ್ತಿಲ್ಲ. 2023ರಲ್ಲಿ ತೆರೆಕಂಡ ಎಜೆಂಟ್ ಸಿನಿಮಾ ಭಾರೀ ಸೋಲು ಕಂಡಿತ್ತು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅಖಿಲ್.
2023ರಲ್ಲಿ ತೆರೆಕಂಡ ಎಜೆಂಟ್ ಸಿನಿಮಾ ಅಖಿಲ್ ಕೆರಿಯರ್‌ಗೆ ಭಾರೀ ಆಘಾತ ತಂದೊಡ್ಡಿತ್ತು. ಬಳಿಕ ಇದೇ ವರ್ಷ ಜೂನ್ 6ರಂದು ಮುಂಬೈ ಮೂಲದ ನಟಿ ಝೈನಬ್ ರಾವ್ದ್ಜೀ ಜೊತೆ ಹಸೆಮಣೆ ಏರಿದ್ದರು. ವೈವಾಹಕ ಜೀವನಕ್ಕೆ ಕಾಲಿಟ್ಟ ಬಳಿಕ ಲೆನಿನ್ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಳ್ಳಲು ಪ್ಲ್ಯಾನ್ ನಡೆಸಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ʻರಾವಣಂʼ

ಈ ಸಿನಿಮಾದ ನಾಯಕಿಯಾಗಿ ಮೊದಲಿಗೆ ನಟಿ ಶ್ರೀಲೀಲಾ (Sreeleela) ಅವರನ್ನು ಆಯ್ಕೆ ಮಾಡಲಾಗಿತ್ತು ಚಿತ್ರತಂಡ. ಇದೀಗ ಈ ಸಿನಿಮಾದಿಂದ ಶ್ರೀಲೀಲಾಗೆ ಗೆಟ್‌ಪಾಸ್ ಕೊಡಲಾಗಿದೆಯಂತೆ. ಶ್ರೀಲೀಲಾ ಜಾಗಕ್ಕೆ ನಟಿ ಭಾಗ್ಯಶ್ರೀ ಬೋರ್ಸೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೊದಲು ಭಾಗ್ಯಶ್ರೀ ಯಾರಿಯಾನ್-2, ಚಂದು ಚಾಂಪಿಯನ್ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಕಬಿನಿ ಡ್ಯಾಂಗೆ ಶಿವಣ್ಣ ದಂಪತಿ ಭೇಟಿ
ಭಾಗ್ಯಶ್ರೀ ಬೋರ್ಸೆ ಸದ್ಯ ವಿಜಯ್ ದೇವರಕೊಂಡ (Vijay Devarakonda) ಅವರ ಕಿಂಗ್‌ಡಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೆ ಟಾಲಿವುಡ್‌ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಿಸ್ಸಿಕ್ ಬೆಡಗಿಗೆ ಮತ್ತೊಂದು ಅವಕಾಶ ಕೈತಪ್ಪಿದೆ.



ಬಹುಕಾಲದ ಗೆಳತಿ ಝೈನಾಬ್ (Jainab (Ravdjee) ಜೊತೆ ಅಖಿಲ್ ಜೂನ್ 6ರಂದು ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ ನಡೆಯಲಿದೆ ಎಂದು ವರದಿ ಆಗಿದೆ. ಬಳಿಕ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ಆರತಕ್ಷತೆ ಕಾಯಕ್ರಮ ಜರುಗಲಿದೆ ಎನ್ನಲಾಗಿದೆ. ಈ ಬಗ್ಗೆ ಅಕ್ಕಿನೇನಿ ಕುಟುಂಬದಿಂದ ಅಧಿಕೃತ ಮಾಹಿತಿ ಘೋಷಿಸಬೇಕಿದೆ. ಇದನ್ನೂ ಓದಿ:
ಝೈನಾಬ್ ರಾವಡ್ಜಿ ಅವರನ್ನು ಅಖಿಲ್ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಈ ಬಗ್ಗೆ ಸ್ವತಃ ನಾಗಾರ್ಜುನ ರಿವೀಲ್ ಮಾಡಿದ್ದರು.
ಹೆಚ್ಚು ಗ್ಲ್ಯಾಮರಸ್ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಶ್ರೀಲೀಲಾ ‘ಭಗವಂತ ಕೇಸರಿ’ ಚಿತ್ರದ ಬಳಿಕ ಮತ್ತೊಮ್ಮೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಸಿನಿಮಾದಲ್ಲಿ ಖಡಕ್ ಆಗಿ ಡೈಲಾಗ್ ಹೊಡೆದು ರಗಡ್ ಅವತಾರ ತಾಳಿರೋ ಅಖಿಲ್‌ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಸಿನಿಮಾಗೆ ‘ಲೆನಿನ್’ (Lenin) ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಮೊದಲ ಝಲಕ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:


ಅಖಿಲ್ ಅಕ್ಕಿನೇನಿ 30ನೇ ವರ್ಷದ ಹುಟ್ಟುಹಬ್ಬಕ್ಕೆ ನಟಿ ಸಮಂತಾ ವಿಶೇಷವಾಗಿ ಶುಭಕೋರಿದ್ದಾರೆ. ಹ್ಯಾಪಿ ಬರ್ತ್‌ಡೇ ಅಖಿಲ್. ನಿಮಗೆ ಒಳ್ಳೆದಾಗಲಿ, ದೇವರು ಒಳ್ಳೆಯದು ಮಾಡಲಿ ಎಂದು ಸಮಂತಾ ಶುಭಕೋರಿದ್ದಾರೆ. ಇದು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:










