Tag: Akhanda Srinivasmurthy

  • ಸಿದ್ದರಾಮಯ್ಯ ಸಿಎಂ ಕ್ಯಾಂಡಿಡೇಟ್ ಎಂದು ಘೋಷಿಸಿದರೆ 150 ಸೀಟ್ ಫಿಕ್ಸ್: ಅಖಂಡ

    ಸಿದ್ದರಾಮಯ್ಯ ಸಿಎಂ ಕ್ಯಾಂಡಿಡೇಟ್ ಎಂದು ಘೋಷಿಸಿದರೆ 150 ಸೀಟ್ ಫಿಕ್ಸ್: ಅಖಂಡ

    ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಸ್ಥಾನ ಕಾಂಗ್ರೆಸ್ಸಿಗೆ ಬರಲಿದೆ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, 2013 ರಿಂದ 18ರ ವರೆಗೆ ಕರ್ನಾಟಕ ಮುಖ್ಯಮಂತ್ರಿ ಆಗಿದ್ದವರು ಸಿದ್ದರಾಮಯ್ಯ. ಜನರ ಕೂಡ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂತಿದ್ದಾರೆ. ನನ್ನ ಅಭಿಪ್ರಾಯ ಕೂಡ ಅದೇ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್​ಗೆ ಇನ್ನೂ ವಯಸ್ಸಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ: ರಾಮಪ್ಪ

    ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ರಾಜ್ಯಕ್ಕೆ ಒಳ್ಳೇದಾಗುತ್ತದೆ. ಸಿದ್ದರಾಮಯ್ಯ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ನಮ್ಮ ನಾಯಕರು. ನಮ್ಮನ್ನ ಪಕ್ಷಕ್ಕೆ ಕರೆದುಕೊಂಡು ಬಂದವರು ಸಿದ್ದರಾಮಯ್ಯ. ಡಿ.ಕೆ ಶಿವಕುಮಾರ್ ಪಕ್ಷದ ನಾಯಕರು. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಸೀಟ್ ಬರುತ್ತೆ ಎಂದರು.

    ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಘೋಷಣೆ ವಿಚಾರವಾಗಿ ಹೈಕಮಾಂಡ್ ಭೇಟಿ ಮಾಡಬೇಕಾದರೆ. ಎಲ್ಲರೂ ಕೂತು ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎನ್ನುವ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬ ಕೂಗಿಗೆ ಇನ್ನೋರ್ವ ಶಾಸಕ ಧ್ವನಿಗೂಡಿಸಿದ್ದಾರೆ.

  • ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ

    ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ

    ಬೆಂಗಳೂರು: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಚೀಫ್ ಜಸ್ಟೀಸ್ ಆದೇಶ, ಸ್ವಾಮೀಜಿ ಮನವಿ ಮೇರೆಗೆ ಕ್ರಮ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ್ ಆಗ್ರಹಿಸಿದ್ದಾರೆ.

    ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣದ ಎ-57 ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಕೊನೆಗೂ ಬಂಧಿಸಲಾಗಿದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಖಂಡ, 3 ಜನ ಕಾರ್ಪೊರೇಟರ್‍ಗಳಿಗೂ ಶಿಕ್ಷೆ ಆಗಲೇಬೇಕು. ತಪ್ಪಿತಸ್ಥರಿಂದಲೇ ನಷ್ಟದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಪತ್ ರಾಜ್ ತಲೆಮರೆಸಿಕೊಂಡಿದ್ದರು. ಸಂಪತ್ ಹಿಡಿಯೋಕೆ ಸಿಸಿಬಿ ಪೊಲೀಸರು ಹೈರಾಣಾಗಿದ್ದು, ಇದೀಗ ಬರೋಬ್ಬರಿ ತಿಂಗಳ ಬಳಿಕ ಸಂಪತ್ ರಾಜ್ ನನ್ನು ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

    ಅಖಂಡ ಮನೆಗೆ ಬೆಂಕಿ ಹಾಕಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಪತ್ ರಾಜ್ ಕೊರೊನಾ ಹಿನ್ನೆಲೆಯಲ್ಲಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ದಾಖಲಾಗಿದ್ದು, ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆ ಬಳಿಕ ನಾಗರಹೊಳೆ ತಮಿಳುನಾಡು, ಗೋವಾ ಹಾಗೂ ಬೆಂಗಳೂರು ಅಂತ ತಲೆ ಮರೆಸಿಕೊಳ್ಳುವ ಮೂಲಕ ಪದೇ ಪದೇ ಸ್ಥಳ ಬದಲಾಯಿಸ್ತಿದ್ದರು. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಎಸ್ಕೇಪ್ ಆಗುತ್ತಿದ್ದರು.

    ಸಂಪತ್ ಪತ್ತೆ ಮಾಡದಿದ್ದಕ್ಕೆ ಹೈಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಇತ್ತೀಚೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಅಸಮಾಧಾನ ಹೊರ ಹಾಕಿದ್ದರು. ರಾಷ್ಟ್ರೀಯ ಅಧ್ಯಕ್ಷರೇ ನ್ಯಾಯ ಕೊಡಿಸಬೇಕು ಎಂದಿದ್ದರು. ಸದ್ಯ ಸಂಪತ್ ರಾಜ್ ನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ರಾತ್ರಿಯಿಡೀ ಪೊಲೀಸರು ಸಂಪತ್ ರಾಜ್ ನನ್ನು ಡ್ರಿಲ್ ಮಾಡಿದ್ದು, ಇಂದು ಮಧ್ಯಾಹ್ನದ ವೇಳೆ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.

  • 11 ಪುಟಗಳ ಹೇಳಿಕೆಗೆ ಕಾರ್ಪೋರೇಟರ್​ಗಳು ಜೈಲಿಗೆ ಹೋಗ್ತಾರಾ?

    11 ಪುಟಗಳ ಹೇಳಿಕೆಗೆ ಕಾರ್ಪೋರೇಟರ್​ಗಳು ಜೈಲಿಗೆ ಹೋಗ್ತಾರಾ?

    ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಸಂಬಂಧ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ 11 ಪುಟಗಳ ಹೇಳಿಕೆ ನೀಡಿದ್ದಾರೆ. ಪೊಲೀಸರ ಮುಂದೆ ಕಣ್ಣೀರು ಹಾಕಿರೋ ಅಖಂಡ, ಮಾಜಿ ಮೇಯರ್ ಮತ್ತು ಡಿ ಜೆ ಹಳ್ಳಿ ಕಾರ್ಪೋರೇಟರ್ ಸಂಪತ್‍ರಾಜ್, ಪುಲಿಕೇಶಿ ನಗರ ಕಾರ್ಪೋರೇಟರ್ ಅಬ್ದುಲ್ ರಕಿಬ್ ಝಾಕೀರ್, ನಾಗವಾರ ಕಾರ್ಪೋರೇಟರ್ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ವಿರುದ್ಧ ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ದಳ್ಳುರಿ ಸಂಬಂಧ ಖಲೀಂ ಪಾಷಾ ಮತ್ತು ಸಂಪತ್‍ರಾಜ್ ಪಿಎ ಅರುಣ್‍ನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ಝಾಕೀರ್ ಮತ್ತು ಸಂಪತ್‍ರಾಜ್ ಫೋನ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಕಾರ್ಪೋರೇಟರ್ ಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೂಲಗಳ ಪ್ರಕಾರ ಸದ್ಯ ಇರುವ ಸಾಕ್ಷ್ಯಗಳು ಮತ್ತು ಹೇಳಿಕೆಯ ಆಧಾರದಲ್ಲಿ ಸಂಪತ್‍ರಾಜ್ ಮತ್ತು ಅಬ್ದುಲ್ ರಕೀಬ್ ಝಾಕೀರ್ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡುವ ಸಾಧ್ಯತೆಯೂ ಇದೆ.

    2018ರ ವಿಧಾನಸಭೆ ಚುನಾವಣೆಯಲ್ಲಿ ಸಂಪತ್‍ರಾಜ್‍ಗೆ ಟಿಕೆಟ್ ಮಿಸ್ ಆಗಿತ್ತು. ಜೆಡಿಎಸ್‍ನಿಂದ ಬಂದಿದ್ದ ಅಖಂಡಗೆ ಟಿಕೆಟ್ ನೀಡಿದ್ದರಿಂದ ಸಂಪತ್‍ರಾಜ್ ನಿರಾಸೆ ಆಗಿತ್ತು. ಅತ್ಯಧಿಕ ಮತಗಳಿಂದ ಪುಲಿಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಗೆಲುವು ಸಾಧಿಸುತ್ತಾರೆ. ಆದ್ರೆ ಪುಲಿಕೇಶಿನಗರ ಬದಲು ಸಿ.ವಿ.ರಾಮನ್ ನಗರದಲ್ಲಿ ಸ್ಪರ್ಧಿಸಿದ್ದ ಸಂಪತ್‍ರಾಜ್‍ಗೆ ಸೋಲು ಅನುಭವಿಸುತ್ತಾರೆ. ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್‍ಗೂ ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಆರಂಭದಲ್ಲೇ ದ್ವೇಷವಿತ್ತು ಎನ್ನಲಾಗಿದೆ.

    ಮುಂದಿನ ವಿಧಾನಸಭಾ ಚುನಾವಣೆಗೆ ಪುಲಿಕೇಶಿನಗರದ ಮೇಲೆ ಸಂಪತ್‍ರಾಜ್ ಕಣ್ಣಿಟ್ಟಿದ್ದರು. ಹೀಗಾಗಿ ನನ್ನ ವಿರುದ್ಧ ಕಾರ್ಪೋರೇಟರ್ ಗಳ ಜೊತೆಗೆ ಸೇರಿಕೊಂಡು ಪಿತೂರಿ ನಡೆಸಿ ಮುಸ್ಲಿಮರನ್ನು ಎತ್ತಿಕಟ್ಟಲು ಹುನ್ನಾರ ನಡೆಸಿದ್ದರು. ಜೆಡಿಎಸ್ ಬಿಟ್ಟ ಬಳಿಕ ನನ್ನ ವಿರುದ್ಧ ವಾಜಿದ್ ಪಾಷಾ ದ್ವೇಷ ಬೆಳೆಸಿಕೊಂಡಿದ್ದರು. ಸಗಾಯಿಪುರ ವಾರ್ಡ್‍ನಲ್ಲಿ ಸೋತಿದ್ದ ಎಸ್‍ಡಿಪಿಐನ ಮುಜಾಮಿಲ್‍ಗೂ ನನ್ನ ವಿರುದ್ಧ ದ್ವೇಷ ಇತ್ತು. ಗಲಭೆ ದಿನ ನಾನೇನಾದರೂ ಸಿಕ್ಕಿದ್ದರೆ ನನ್ನನ್ನು ಜೀವಂತವಾಗಿ ಸುಟ್ಟು ಬಿಡುತ್ತಿದ್ದರು. ಮುಂದಿನ ಎಲೆಕ್ಷನ್‍ನಲ್ಲೂ ನಾನು ಗೆದ್ದೇ ಗೆಲ್ತೀನಿ, ಪಕ್ಷಾಂತರ ಮಾಡಿ ಸ್ಪರ್ಧಿಸಿದ್ರೂ ಗೆಲ್ತೀನಿ. ನಾನು ಗೆಲ್ತೀನಿ ಅಂತ ಗೊತ್ತಿದ್ದೇ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಗುಮಾನಿ ಇತ್ತು. ಆದ್ರೆ ಇಷ್ಟರ ದೊಡ್ಡ ಮಟ್ಟಿಗೆ ಸಂಚು ಮಾಡ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.