Tag: Akhanda Srinivas Murthy

  • ಎಂಎಲ್‍ಎ ಮನೆ ಬೆಂಕಿಗೂ ನನಗೂ ಸಂಬಂಧವಿಲ್ಲ – ಸಿಸಿಬಿ ಎದುರು ಸಂಪತ್‍ರಾಜ್ ಹೇಳಿಕೆ

    ಎಂಎಲ್‍ಎ ಮನೆ ಬೆಂಕಿಗೂ ನನಗೂ ಸಂಬಂಧವಿಲ್ಲ – ಸಿಸಿಬಿ ಎದುರು ಸಂಪತ್‍ರಾಜ್ ಹೇಳಿಕೆ

    ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಸಂಪತ್ ರಾಜ್, ಶಾಸಕನ ಮನೆಗೆ ಬೆಂಕಿ ಹಾಕಿದವರಿಗೂ ನನಗೂ ಸಂಬಂಧ ಇಲ್ಲ. ನಾನು ಶಾಸಕನ ಮನೆಗೆ ಬೆಂಕಿ ಹಚ್ಚಿಸಿಲ್ಲ. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಯಾವ ಕಾರಣಕ್ಕೆ ಬಂಧಿಸಿದ್ರಿ..?, ನಾನು ಮಾಡಿರೋ ತಪ್ಪಾದ್ರೂ ಏನು ಎಂದು ಪ್ರಶ್ನಿಸಿದ್ದಾರೆ.

    ಬೆಂಕಿ ಹಚ್ಚಿಸೋದಾಗಿದ್ರೆ ಹಿಂದೂಗಳ ಕೈಯಲ್ಲೇ ಹಚ್ಚಿಸುತ್ತಿದ್ದೆ. ಮುಸ್ಲಿಮರನ್ನ ಯಾಕೆ ಬಳಸಿಕೊಳ್ಳಬೇಕಿತ್ತು. ನಾವೆಲ್ಲ ಓಡಾಡಿ ಅಖಂಡ ಶ್ರೀನಿವಾಸಮೂರ್ತಿಯನ್ನ ಗೆಲ್ಲಿಸಿದ್ದು, ಇವರೆಲ್ಲ ಹೀಗೆ ಮಾಡ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಜಮೀರ್ ಸ್ಟೇಷನ್ ಬಳಿ ಬಂದಾಗ ನಾನು ಹೋಗ್ಬೋದಿತ್ತಲ್ಲ ಎಂದು ಸಂಪತ್ ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ

    ಅರುಣ್, ಸಂತೋಷ್‍ನನ್ನ ಭೇಟಿಯಾಗಿದ್ದು ನಿಜ. ಹಾಗಂತ ಬೆಂಕಿ ಹಚ್ಚಿ ಅಂತ ನಾನು ಹೇಳಿಲ್ಲ. ನಾನು ಎಲ್ಲೂ ತಲೆ ಮರೆಸಿಕೊಂಡು ಓಡಿ ಹೋಗಿರಲಿಲ್ಲ. ಕೋವಿಡ್ ಇದ್ದ ಕಾರಣ ಐಸೋಲೇಷನ್‍ನಲ್ಲಿದ್ದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯಾರಿಗೂ ತೊಂದರೆ ಆಗಬಾರದು ಅಂತ ಮನೆಯಲ್ಲೇ ಐಸೊಲೇಟ್ ಆಗಿದ್ದೆ ಎಂದು ಬಂಧನದಲ್ಲಿರುವ ಸಂಪತ್ ರಾಜ್ ಸಿಸಿಬಿ ಪೊಲೀಸರ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸಂಪತ್ ರಾಜ್ ತಪ್ಪಿತಸ್ಥ ಅನ್ನೋದನ್ನು ಪೊಲೀಸರು ಪ್ರೂವ್ ಮಾಡ್ಲಿ: ಸಿದ್ದರಾಮಯ್ಯ

    ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನನ್ನ ಸಿಸಿಬಿ ಪೊಲೀಸರು ಕೊನೆಗೂ ಬೆಂಗಳೂರಲ್ಲೆ ಬಂಧಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ರಾತ್ರಿ 9 ಗಂಟೆಗೆ ಸಂಪತ್ ರಾಜ್ ನನ್ನ ಬಂಧಿಸಿರೋ ಸಿಸಿಬಿ, ಬೆಳಗ್ಗೆ ಎಂಟು ಗಂಟೆಗೆ ಸಿಸಿಬಿ ಕಚೇರಿಗೆ ಕರೆತಂದ್ರು. ಬಳಿಕ ತನಿಖಾಧಿಕಾರಿಗಳಾದ ಎಸಿಪಿ ವೇಣುಗೋಪಾಲ್, ಡಿಸಿಪಿ ಕುಮಾರ್ ಮಧ್ಯಾಹ್ನಾದವರೆಗೂ ವಿಚಾರಣೆ ನಡೆಸಿದರು. ಬಳಿಕ ನಾಲ್ಕು ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಂಪತ್ ರಾಜ್ ನನ್ನ 10 ದಿನ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿಕೊಂಡ್ರು. ಆದರೆ ನ್ಯಾಯಾಧೀಶರು 2 ದಿನ ಪಿಸಿ ಕಸ್ಟಡಿಗೆ ಅಂದರೆ 19 ರವರೆಗೆ ತನಕ ಪಿಸಿ ಕಸ್ಟಡಿಗೆ ಕೊಟ್ಟು ಆದೇಶ ಹೊರಡಿಸಿದರು. ಇದನ್ನೂ ಓದಿ: ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಆರೋಗ್ಯ ಸರಿ ಇರಲಿಲ್ಲ ಅಷ್ಟೇ: ಡಿಕೆಶಿ

  • ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಆರೋಗ್ಯ ಸರಿ ಇರಲಿಲ್ಲ ಅಷ್ಟೇ: ಡಿಕೆಶಿ

    ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಆರೋಗ್ಯ ಸರಿ ಇರಲಿಲ್ಲ ಅಷ್ಟೇ: ಡಿಕೆಶಿ

    – ಕಾನೂನಿಗೆ ಗೌರವ ಕೊಡ್ತಾರೆ

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬರೋಬ್ಬರಿ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ ನನ್ನು ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಪತ್ ರಾಜ್ ಓಡಿ ಹೋಗಿರಲಿಲ್ಲ. ಅವರ ಆರೋಗ್ಯ ಸರಿ ಇರಲಿಲ್ಲ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು. ಕಾನೂನನ್ನು ದುರುಪಯೋಗ ಮಾಡಿಕೊಳ್ಳುವ ಒಂದು ವರ್ಗ ಇದೆ. ಸಂಪತ್ ರಾಜ್ ಕಾನೂನಿಗೆ ಗೌರವ ಕೊಡ್ತಾರೆ. ಕಾಂಗ್ರೆಸ್ಸಿನವರ ಮೇಲೆ ತೊಂದರೆ ಕೊಡಲು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.  ಇದನ್ನೂ ಓದಿ: ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

    ಪೊಲೀಸರು ಏನು ಕ್ರಮ ತಗೆದುಕೊಳ್ತಿದ್ದಾರೆ ಅನ್ನೋದನ್ನ ನೋಡ್ತಿದ್ದೀವಿ. ಸಂಪತ್ ರಾಜ್ ಓಡಿ ಹೋಗಿರಲಿಲ್ಲ. ಅವರ ಆರೋಗ್ಯ ಸರಿ ಇರಲಿಲ್ಲ. ಪೊಲೀಸರು ಯಾವ ಕ್ರಮ ತಗೆದುಕೊಂಡಿದ್ದಾರೆ ಅನ್ನೋದು ಕೂಡ ಗೊತ್ತಿದೆ. ಅಧಿಕಾರದಲ್ಲಿ ಇರುವವರು ಅಧಿಕಾರವನ್ನ ಬಳಸಿಕೊಂಡು ಕಾಂಗ್ರೆಸ್ಸನ್ನು ಟಾರ್ಗೆಟ್ ಮಾಡ್ತಿದ್ದಾರೆ. ಕಾಂಗ್ರೆಸ್ಸಿನ ಎಲ್ಲಾ ನಾಯಕರನ್ನ ಮುಗಿಸಬೇಕು ಅಂತ ಈ ರೀತಿ ಮಾಡಲಾಗುತ್ತಿದೆ ಎಂದು ಡಿಕೆಶಿ ಕಿಡಿಕಾರಿದರು.  ಇದನ್ನೂ ಓದಿ: ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ: ಅಖಂಡ

    ಒಬ್ಬರ ವೈಯಕ್ತಿಕ ಹೇಳಿಕೆ ಮೇಲೆ ನಾನು ಕ್ರಮ ತೆಗೆದುಕೊಳ್ಳೋಕೆ ಆಗಲ್ಲ. ಅಖಂಡ ಏನೇ ಇದ್ದರೂ ಬಂದು ನನ್ನ ಬಳಿ ಮಾತಾಡಲಿ. ನನ್ನ ಮನೆ ಇದೆ, ಪಕ್ಷದ ಕಚೇರಿ ಇದೆ. ಇಲ್ಲಿ ಬಂದು ಮಾತಾಡಲಿ. ಸಂಪತ್ ರಾಜ್ ಓಡಿ ಹೋಗಿದ್ದಾರೆ ಅಂತ ಹೇಳಿದವರು ಯಾರು…? ಕಾನೂನಿಗಿಂತ ಸಂಪತ್ ರಾಜ್ ಮೇಲಲ್ಲ ಡಿಕೆಶಿಯೂ ಮೇಲಲ್ಲ. ಬಿಜೆಪಿಯವರೇ ಕಾನೂನನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ ಎಂದು ಗರಂ ಆದರು.

  • ಸಂಪತ್‍ರಾಜ್‍ನ ಪಕ್ಷದಿಂದ ಉಚ್ಛಾಟಿಸುವಂತೆ ಮನವಿ ಮಾಡ್ತೀನಿ: ಅಖಂಡ

    ಸಂಪತ್‍ರಾಜ್‍ನ ಪಕ್ಷದಿಂದ ಉಚ್ಛಾಟಿಸುವಂತೆ ಮನವಿ ಮಾಡ್ತೀನಿ: ಅಖಂಡ

    ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಬಳಿ ಮನವಿ ಮಾಡುತ್ತೇನೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅಪರಾಧಿ ಅಪರಾಧಿನೆ. ಯಾರೇ ಅಪರಾಧಿ ಆಗಿದ್ದರೂ ಶಿಕ್ಷೆ ಕೊಡಬೇಕು. ನಾನು ಯಾರ ಜೊತೆಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಶಾಸಕನಾಗಿ ಕೆಲಸ ಮಾಡಿಲ್ಲ. ಪಬ್ಲಿಕ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

    ನಾನು ಎಲ್ಲಾ ವಾರ್ಡಿನಲ್ಲಿ ಕಾರ್ಪೊರೇಟರ್ ಗಳ ಜೊತೆ ಚೆನ್ನಾಗೆ ಇದ್ದೆ. ಕಾರ್ಯಕ್ರಮಗಳಿಗೆ ಅವರ ಜೊತೆಗೆ ಪೂಜೆ ಮಾಡುತ್ತಿದ್ದೆ. ನನ್ನನ್ನು ಹತ್ಯೆ ಮಾಡುವಂತದ್ದು ಏನು ಮಾಡಿದ್ದೆ. ಸಂಪತ್ ರಾಜುನಾ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತ ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಬಳಿ ಹೋಗಿ ಒತ್ತಾಯ ಮಾಡ್ತೀನಿ. ನನ್ನ ಪ್ರಾಣ ತೆಗಿಯಲು ಮುಂದಾಗಿದ್ದರು ಅವರನ್ನ ಪಕ್ಷದಿಂದ ಉಚ್ಚಾಟಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ

    ನಾನು ಪಕ್ಷ ಸೇರುವಾಗ ಸೇರಿಸಿಕೊಳ್ಳಬಾರದು ಅಂತ ಗಲಾಟೆ ಮಾಡಿದ್ದರು. ಆದರೆ ಚಾರ್ಜ್ ಶೀಟ್ ನೋಡಿದ್ರೆ ಹೀಗೆ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಅಂತವರಿಂದ ಪಕ್ಷಕ್ಕೆ ಕೆಟ್ಟ ಹೆಸರು ಅಂತವರು ಪಕ್ಷದಲ್ಲಿ ಇರಬಾರದು. ನಾಳೆ ಡಿಕೆಶಿಯನ್ನ ಭೇಟಿ ಮಾಡಿ ಮಾತಾಡುತ್ತೇನೆ. ನನ್ನ ಮನವಿಗೆ ಸ್ಪಂದಿಸ್ತಾರೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ

    ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ

    – ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶ
    – ಪುಂಡರಿಗೆ ಉಚಿತ ಪೆಟ್ರೋಲ್‌

    ಬೆಂಗಳೂರು: ದೇವರ ಜೀವನಹಳ್ಳಿ (ಡಿಜೆ ಹಳ್ಳಿ), ಕಾಡುಗೊಂಡನ ಹಳ್ಳಿ(ಕೆಜೆ ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್‍ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರುವ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

    ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಅಂಶ ಉಲ್ಲೇಖವಾಗಿದೆ.

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಪುಲಕೇಶಿ ನಗರದ ಕೈ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಹಣಕಾಸಿನ ಸಹಾಯ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್ ಎಂದು ತಿಳಿದುಬಂದಿದೆ.

    ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಉಚಿತವಾಗಿ ಪೆಟ್ರೋಲ್ ನೀಡಿದ್ದರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದ. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

    ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. ಶಾಸಕರ ಹೆಸರು ಕೆಡಿಸಲು ಒಳ್ಳೆಯ ಸಮಯಕ್ಕೆ ಕೆಲವು ಮುಖಂಡರು ಕಾದಿದ್ದರು. ನವೀನ್ ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಸಕ್ರಿಯರಾಗಿ ಈ ಗಲಭೆ ನಡೆಸಿದ್ದಾರೆ ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

    50 ಪುಟಗಳ ಮಧ್ಯಂತರ ಚಾರ್ಜ್ ಶೀಟ್‌ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

    ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎ ಆರ್ ಝಾಕೀರ್ ಅವರ ವಿಚಾರಣೆ ನಡೆಸಿಲ್ಲ. ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್‌ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸದ್ಯಕ್ಕೆ ಸಂಪತ್‌ ರಾಜ್‌ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.

    ಪ್ರತಿಭಟನೆ: ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರಸ್ತೆಯಲ್ಲಿರುವ ಸಂಪತ್ ರಾಜ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಒತ್ತಾಯಿಸಿದರು.

  • ಎಫ್‌ಬಿ ಪೋಸ್ಟ್‌ ನೆಪ ಮಾತ್ರ – ಅಖಂಡ ಮನೆಗೆ ಬೆಂಕಿ ಹಂಚಿದ್ದು ಪೂರ್ವನಿಯೋಜಿತ ಸಂಚು

    ಎಫ್‌ಬಿ ಪೋಸ್ಟ್‌ ನೆಪ ಮಾತ್ರ – ಅಖಂಡ ಮನೆಗೆ ಬೆಂಕಿ ಹಂಚಿದ್ದು ಪೂರ್ವನಿಯೋಜಿತ ಸಂಚು

    – ಸಿಸಿಬಿ ಪೊಲೀಸರಿಂದ 850 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
    – ಮಧ್ಯಂತರ ಚಾರ್ಜ್‌ಶೀಟ್‌ನಲ್ಲಿ ಸಂಪತ್‌ ರಾಜ್‌ 51ನೇ ಆರೋಪಿ

    ಬೆಂಗಳೂರು: ದೇವರಜೀವನಹಳ್ಳಿ(ಡಿಜೆ ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆಜೆ ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

    60 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗಿದ್ದರಿಂದ ಇಂದು ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. 850 ಪುಟಗಳ ಮಧ್ಯಂತರ ಚಾರ್ಜ್ ಶೀಟ್‌ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

    ಪ್ರಕರಣದ ತನಿಖೆಯಲ್ಲಿ ಟೆಕ್ನಿಕಲ್ ಮತ್ತು ಡಿಜಿಟಲ್ ಸಾಕ್ಷ್ಯಗಳೇ ಪ್ರಮುಖ ಪಾತ್ರ ವಹಿಸಿದೆ. ವಿಡಿಯೋ ಎವಿಡೆನ್ಸ್ ಆರೋಪಿಗಳ ಪಾಲಿಗೆ ಮುಳುವಾಗಿದೆ. 30ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಬರೋಬ್ಬರಿ 52 ಆರೋಪಿಗಳ ವಿರುದ್ದ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮುಂದೆ ತನಿಖೆ ಬಳಿಕ ಉಳಿದ ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಹೇಳಿದೆ.

    ಸದ್ಯದ ಮಟ್ಟಿಗೆ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ರಿಲೀಫ್‌ ಸಿಕ್ಕಿದೆ. ಸಂಪತ್ ರಾಜ್ ಅನಾರೋಗ್ಯ ಸಂಬಂಧ ಡಾಕ್ಟರ್ ನೀಡಿದ ಪ್ರಮಾಣಪತ್ರವನ್ನು ಲಗತ್ತಿಸಲಾಗಿದೆ. ಸಂಪತ್‌ ರಾಜ್‌ ಅವರಿಗೆ ಕೋವಿಡ್ ಲಕ್ಷಣಗಳು ಇನ್ನೂ ಹೋಗಿಲ್ಲ. ಅಲ್ಲದೆ ಎದೆ ನೋವು, ಬಿಪಿ, ಶುಗರ್ ಇದೆ ಎಂದು ವೈದ್ಯರು ವರದಿ ನೀಡಿದ್ದರು. ಸಂಪತ್ ರಾಜ್ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಸಿಸಿಬಿ ಪೊಲೀಸರು ಮೆಡಿಕಲ್‌ ವರದಿ ಪಡೆದುಕೊಂಡಿದ್ದರು.

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಪ್ರತಿಭಟನೆ ಮಾಡಲು ಹೋದವರು ಬೇರೆಯವರ ಕುಮ್ಮಕ್ಕಿಗೆ ಕಿವಿಗೊಟ್ಟು ಬೆಂಕಿ ಹಾಕಿದ್ದಾರೆ. ನವೀನ್ ಫೇಸ್‌ಬುಕ್‌ ಪೋಸ್ಟ್ ಕೇವಲ ನೆಪಮಾತ್ರ. ಈ ಪೋಸ್ಟ್ ವಿರುದ್ಧ ಪ್ರತಿಭಟನೆ ನಡೆಸಲು ಮುಸ್ಲಿಂ ಮುಖಂಡರು ಮುಂದಾಗಿದ್ದರು. ಆದರೆ ಪ್ರತಿಭಟನೆಯನ್ನ ಕೆಲವರು ದುರುಪಯೋಗ ಮಾಡಿಕೊಂಡು ಶಾಸಕರ ಮೇಲಿನ ದ್ವೇಷದಿಂದ ಗಲಭೆಗೆ ಸಂಚು ರೂಪಿಸಿದರು.

    ಅಖಂಡ ಶ್ರೀನಿವಾಸ ಮೂರ್ತಿ ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗಲಭೆಗೆ ಕುಮ್ಮಕ್ಕು ನೀಡಲಾಯಿತು. ರಾಜಕೀಯ ವೈಷಮ್ಯ ಸಾಧಿಸಲು ಶಾಸಕರ ಮನೆ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಯಿತು. ಅರುಣ್ ರಾಜ್ ಮತ್ತು ಮುಜಾಹೀದ್ ಅಖಂಡ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಇಬ್ಬರ ಕುಮ್ಮಕ್ಕಿನಿಂದ ಪ್ರತಿಭಟನಾಕಾರರು ಬೆಂಕಿ ಹಂಚಿದ್ದರು. ಇಬ್ಬರು ಆರೋಪಿಗಳ ಮೊಬೈಲಿನಲ್ಲಿ ವಾಟ್ಸಪ್‌ ಚಾಟ್‌ ಮತ್ತು ಕರೆ ಮಾಹಿತಿಯಲ್ಲಿ ಸಂಚಿನ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.

    52 ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು ಎಲ್ಲರ ಕಾಲ್ ಡಿಟೈಲ್ಸ್, ವಾಟ್ಸಪ್ ಚಾಟಿಂಗ್ ಸಂಗ್ರಹಿಸಲಾಗಿದೆ. ಅರುಣ್ ರಾಜ್ ಮತ್ತು ಮುಜಾಹೀದ್ ಪ್ರತಿಭಟನಾಕಾರರ ಜೊತೆ ಮಾತಾನಾಡುತ್ತಿದ್ದರು ಎಂದು ಗಲಭೆ ವೇಳೆ ಇದ್ದ ವ್ಯಕ್ತಿಗಳು ಸಾಕ್ಷ್ಯ ಹೇಳಿದ್ದಾರೆ. ಒಟ್ಟು 100ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ.

    ಪೂರ್ವ ನಿಯೋಜಿತ ಸಂಚು:
    ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. ಶಾಸಕರ ಹೆಸರು ಕೆಡಿಸಲು ಒಳ್ಳೆಯ ಸಮಯಕ್ಕೆ ಕೆಲವು ಮುಖಂಡರು ಕಾದಿದ್ದರು. ನವೀನ್ ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಸಕ್ರಿಯರಾಗಿ ಈ ಗಲಭೆ ನಡೆಸಿದ್ದಾರೆ ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

    ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎ ಆರ್ ಝಾಕೀರ್ ಅವರ ವಿಚಾರಣೆ ನಡೆಸಿಲ್ಲ. ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್‌ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸದ್ಯಕ್ಕೆ ಸಂಪತ್‌ ರಾಜ್‌ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.

  • ಪ್ಲೀಸ್ ನಮ್ಮ ಮಕ್ಕಳನ್ನು ಬಿಡಿಸಿ ಕೊಡಿ- ಅಖಂಡಗೆ ಪೋಷಕರು ಮನವಿ

    ಪ್ಲೀಸ್ ನಮ್ಮ ಮಕ್ಕಳನ್ನು ಬಿಡಿಸಿ ಕೊಡಿ- ಅಖಂಡಗೆ ಪೋಷಕರು ಮನವಿ

    ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರು ಇಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಈ ವೇಳೆ ಸ್ಟೇಷನ್ ಮುಂದೆ ಮತ್ತೆ ಭಾರೀ ಹೈಡ್ರಾಮ ನಡೆಯಿತು.

    ನಮ್ಮ ಮಕ್ಕಳನ್ನು ಹಿಡಿದು ತಂದಿದ್ದಾರೆ. ಅವರೆಲ್ಲ ಯಾವ ತಪ್ಪು ಕೂಡ ಮಾಡಿಲ್ಲ. ಸುಖಾ ಸುಮ್ಮನೆ ಮಕ್ಕಳನ್ನು ಎಳೆದು ತಂದಿದ್ದಾರೆ. ಅವರನ್ನ ಬಿಡಿಸಿಕೊಡಿ ಎಂದು ಪೋಷಕರು ಶಾಸಕರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ನಾನೇ ಠಾಣೆಗೆ ಬಂದಿದ್ದೆ. ನಮ್ಮ ಕ್ಷೇತ್ರದ ಅಮಾಯಕರಿಗೆ ತೊಂದರೆ ಆಗಬಾರದು. ಅಪರಾಧಿಗಳಿಗೆ ಶಿಕ್ಷೆಯಾಗಲಿ. ವಿಡಿಯೋಗಳಲ್ಲಿ ಇರೋರಿಗೆ ಶಿಕ್ಷೆಯಾಗಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆರೋಪಿಗಳ ಬೆನ್ನಿಗೆ ನಿಂತ್ರಾ ಅನ್ನೋ ಅನುಮಾನ ಮೂಡಿದೆ.

    ನಮ್ಮ ಕ್ಷೇತ್ರದಲ್ಲಿ ಅಮಾಯಕರು ಮತ್ತು ಕೂಲಿ ಕಾರ್ಮಿಕರು ಇದ್ದಾರೆ. ನನಗೆ ಯಾವ ಹೈಕಮಾಂಡ್ ಒತ್ತಡವೂ ಇಲ್ಲ. ಘಟನೆಯಲ್ಲಿ ತೊಂದರೆಗೆ ಒಳಗಾಗಿರುವವರಿಗೆ ಪರಿಹಾರ ಕೊಡಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

    ಒಟ್ಟಿನಲ್ಲಿ ಬಂಧಿತ ಗಲಭೆಕೊರರಲ್ಲಿ ಅಮಾಯಕರನ್ನ ಬಿಡಲು ಶಾಸಕರು ಠಾಣೆಗೆ ಬಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಹೋಗಿದ್ದಾರೆ. ಅಷ್ಟೇ ಅಲ್ಲ ಶಾಸಕರ ಮಾತಿನಂತೆ ಒಂದಷ್ಟು ಬಂಧಿತ ಗಲಭೆಕೊರರನ್ನ ಬಿಡುಗಡೆ ಮಾಡಲು ತಯಾರಿ ಕೂಡ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ರಾಜಕೀಯವಾಗಿ ನನ್ನ ಮುಗಿಸ್ಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳೀಬಾರದಿತ್ತು: ಅಖಂಡ ಕಣ್ಣೀರು

    ರಾಜಕೀಯವಾಗಿ ನನ್ನ ಮುಗಿಸ್ಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳೀಬಾರದಿತ್ತು: ಅಖಂಡ ಕಣ್ಣೀರು

    ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಣ್ಣೀರು ಹಾಕಿದ್ದಾರೆ.

    ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರನ್ನು ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ಅಖಂಡ ಅವರು, ನನಗೆ ಈ ರೀತಿ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಸಾಕಷ್ಟು ಆಸ್ತಿ ಪತ್ರ ಹಾಳಾಗಿದೆ. ಡೈರಿ ಎಲ್ಲಾ ಸುಟ್ಟು ಹೋಗಿದೆ. ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿಯೇ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಣ್ಣೀರು ಹಾಕಿದರು.

    ನನ್ನ ಮೇಲೆ ದ್ವೇಷ ಇದ್ದರೆ ರಾಜಕೀಯವಾಗಿ ಮುಗಿಸಲಿ. ನಾನು ಅಂದು ಸಿಕ್ಕಿದ್ರೆ ಜೀವಂತವಾಗಿ ಸುಡುತ್ತಾ ಇದ್ರು. ಜೀವಂತವಾಗಿಯೇ ಸುಡಲು ಪ್ಲಾನ್ ಕೂಡ ಮಾಡಿದ್ರು. ನಾನು ಗೆದ್ದೇ ಗೆಲ್ತೀನಿ ಸರ್. ಇದನ್ನು ಸಹಿಸೋಕೆ ಆಗದೆ ಈ ರೀತಿ ಮಾಡುತ್ತಾರೆ. ನಾನು ಪಕ್ಷಾಂತರವಾಗಿ ಚುನಾವಣೆ ಸ್ಪರ್ಧಿಸಿದ್ರೂ ಗೆಲ್ತೀನಿ ಸರ್. ನನಗೆ ನನ್ನ ಜನ ಇದ್ದಾರೆ. ಇವತ್ತು ಅವರೇ ತಿರುಗಿ ಬಿದ್ರಾ ಅನ್ನೋ ಅನುಮಾನ ಇದೆ ಎಂದಿದ್ದಾರೆ. ಇದನ್ನೂ ಓದಿ: ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

    ಘಟನೆಯಿಂದ ಇಂದು ನನ್ನ ಹೆಂಡತಿ ಮಕ್ಕಳೆಲ್ಲಾ ಬೀದಿಯಲ್ಲಿ ನಿಂತಿದ್ದಾರೆ. ನಾನು ಎಷ್ಟೇ ಸಂಪಾದನೆ ಮಾಡಿದರೂ ಪ್ರಯೋಜನ ಆಗಲಿಲ್ಲ. ನಮ್ಮ ಪಕ್ಷದವರೇ ನನಗೆ ಈ ರೀತಿ ಡ್ಯಾಮೇಜ್ ಮಾಡುತ್ತಾರೆ. ನಾನು ಕಾರ್ಪೊರೇಟರ್ ಗಳ ಜೊತೆ ಚೆನ್ನಾಗಿಯೇ ಇದ್ದೆ. ಯಾರಿಗೂ ನಾನು ಹಿಂಸೆ ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ

    ಟೆಂಡರ್ ಅಲ್ಲೂ ಯಾರಿಗೂ ಮೋಸ ಮಾಡಿಲ್ಲ. ಖಲೀಂ ಪಾಷಾ ನನ್ನನ್ನು ಬೈಯಾ ಅಂತ ಚೆನ್ನಾಗಿಯೇ ಇದ್ದ. ಅವನಿಗೂ ನನ್ನ ಮೇಲೆ ಹೇಗೆ ದ್ವೇಷ ಬಂತೋ ಗೊತ್ತಿಲ್ಲ ಎಂದು ಸುಮಾರು 2 ಗಂಟೆಗಳ ಕಾಲ ನಡೆದ ವಿಚಾರಣೆಯ ವೇಳೆ ಅಖಂಡ ಕಣ್ಣೀರುಡುತ್ತಲೇ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?

  • ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವ್ರ ಲಿಸ್ಟ್ ಇದೆ: ಅಶೋಕ್

    ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವ್ರ ಲಿಸ್ಟ್ ಇದೆ: ಅಶೋಕ್

    – ಅಖಂಡರನ್ನ ಬಿಜೆಪಿಗೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲ

    ಬೆಂಗಳೂರು: ಕೊತ್ತಂಬರಿ, ಕರಿಬೇವಿನ ಸೊಪ್ಪು ತರೋಕೆ ಹೋದವರ ಲಿಸ್ಟ್ ಎಲ್ಲಾ ಇದೆ. ಯಾವ ಯಾವ ಕಾಂಗ್ರೆಸ್ ನಾಯಕರ ಕೈಲಿ ಕೊತ್ತಂಬರಿ, ಕರಿಬೇವಿನ ಸೊಪ್ಪು ಇದೆ ಅಂತ ಮಾಹಿತಿ ಇದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಸೆಳೆಯಲು ಬಿಜೆಪಿ ಒತ್ತಡ ಹಾಕ್ತಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಬಿಜೆಪಿಗೆ ಕರೆಯೋದೇ ಇಲ್ಲ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಎಸ್‍ಡಿಪಿಐ, ಶಾಸಕರು ಹಾಗೂ ಕಾರ್ಪೊರೇಟರ್ ಮೂವರ ನಡುವೆ ಆಗಿರುವ ಗಲಾಟೆ ಇದು. ಇದು ತ್ರಿಕೋನ ಫೈಟ್. ಕೊಲೆಯಾದ್ರೆ, ತಿದ್ದುಕೊಳ್ಳಲು ಅವಕಾಶವಿದೇಯೇ ಎಂದು ಪ್ರಶ್ನಿಸಿದ ಅವರು, ಕೆ.ಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖ ಬಟಾಬಯಲಾಗಿದೆ. ಅಖಂಡ ಶ್ರೀನಿವಾಸ ಮತ್ತು ಸ್ಥಳೀಯರ ಜೊತೆ ಸಂಬಂಧ ಚೆನ್ನಾಗಿ ಇರಲಿಲ್ಲ ಎಂದು ಸ್ವತಃ ಕಾಂಗ್ರೆಸ್ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಒಳ ರಾಜಕೀಯವೇ ಗಲಭೆಗೆ ಕಾರಣ ಅನ್ನೋದು ಬಯಲಾದಂತಾಗಿದೆ ಎಂದರು.

    ಜಮೀರ್ ಅವರು ಅಖಂಡ ಅವರಿಗೆ ಈಗ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಖಂಡ ಶ್ರೀನಿವಾಸ ಸುಟ್ಟು ಹೋಗಿರುವ ಮನೆ ವಾಪಸ್ ಸಿಗುತ್ತಾ?. ಅಖಂಡ ಕುಟುಂಬದವರು ಕಟ್ಟಿಸಿದ ಮನೆ ಅದಾಗಿತ್ತು. ಈಗ ಜಮೀರ್ ಆ ಥರದ, ಪ್ರೀತಿಯಿದ್ದ ಮನೆ ಕಟ್ಟಿಸ್ತಾರಾ?, ಶಾಸಕರ ತಾಯಿಯ ತಾಳಿ ಸುಟ್ಟು ಹೋಗಿದೆ. ಅದನ್ನ ಕೊಡಲಿಕ್ಕೆ ನಿಮ್ಮಿಂದ ಆಗುತ್ತಾ ಎಂದು ಜಮೀರ್ ಗೆ ತಿರುಗೇಟು ನಿಡಿದರು.

    ನಮ್ಮ ಸಮಾಜದಿಂದ ಅವರಿಗೆ ಮನೆ, ಕಾರು ಕೊಡ್ತೇವೆ ಎಂದ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೊತ್ತಂಬರಿ ಸೊಪ್ಪು ರಾತ್ರಿ ಒಂದು ಗಂಟೆಗೆ ಸಿಗುತ್ತಾ?. ಕಾಂಗ್ರೆಸ್ಸಿನವರು ಕೊತ್ತಂಬರಿ, ಕರಿಬೇವು ಸೊಪ್ಪು ಕತೆ ಬಿಡಿ. ಕಾರಣ ಇಲ್ಲದೇ ನಡೆದ ಘಟನೆ ಇದು. ಕಾಂಗ್ರೆಸ್ಸಿನ ಒಳ ಜಗಳದ ದಳ್ಳೂರಿಯಿಂದಾಗಿ ಗಲಭೆ ನಡೆದು ಬೆಂಗಳೂರಿಗೆ ಕಪ್ಪುಚುಕ್ಕೆ ಮಾಡುವ ಹಾಗಾಯಿತು ಎಂದು ಕಿಡಿಕಾರಿದರು.

    ಅಡಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ. ಮಾತು ಆಡಿದರೆ ಹೋಯ್ತು. ಮುತ್ತು ಒಡೆದ್ರೆ ಹೋಯ್ತು ಅನ್ನೋ ಹಾಗೇ ಡಿಕೆ ಶಿವಕುಮಾರ್, ಗೃಹ ಸಚಿವರ ವಿರುದ್ಧ ಮಾತಾಡಿದ್ದು ಸರಿಯಲ್ಲ. ರಾಜಕಾರಣದಲ್ಲಿ ಸಾಕಷ್ಟು ಆಸೆಗಳನ್ನ ಇಟ್ಟುಕೊಂಡಿರುವ ನಿಮಗೆ ಇಂತಹ ಹೇಳಿಕೆಗಳಿಂದ ಹಿನ್ನಡೆಯಾಗುತ್ತೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಮಾತಾಡ್ತಾ ಇಲ್ಲ. ನಾವು ಬ್ಯಾನ್ ಮಾಡಿ ಅಂತ ಹೇಳ್ತಿದ್ದೇವೆ. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎಂದರು.

    ಎಸ್‍ಡಿಪಿಐ ಬ್ಯಾನ್ ಮಾಡೋಕೆ ಬೇಕಾದ ಎಲ್ಲಾ ವರದಿ ರೆಡಿ ಮಾಡುತ್ತಿದ್ದೇವೆ. 20 ಕೊಲೆಗಳಲ್ಲಿ ಎಸ್‍ಡಿಪಿಐ ಕೈವಾಡ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಅದೆಲ್ಲಾ ವರದಿ ಮಾಡಿ ಬ್ಯಾನ್ ಮಾಡೋಕೆ ವರದಿ ಸಿದ್ಧವಾಗ್ತಿದೆ. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖ. ಪೊಲೀಸ್ ಮೇಲೆ ಕಾಂಗ್ರೆಸ್ ಮಾಡುವ ಆರೋಪ ಸರಿಯಲ್ಲ ಎಂದರು.

  • ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಒತ್ತಡ ಹೇರುತ್ತಿದೆಯಾ ಬಿಜೆಪಿ ಸರ್ಕಾರ?

    ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಒತ್ತಡ ಹೇರುತ್ತಿದೆಯಾ ಬಿಜೆಪಿ ಸರ್ಕಾರ?

    ಬೆಂಗಳೂರು: ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಇಂಥಾದ್ದೇ ಹೇಳಿಕೆ ಕೊಡಿ ಅಂತಾ ನಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

    ಗಲಭೆಗೆ ಕಾಂಗ್ರೆಸ್ಸಿನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳೇ ಕಾರಣ ಎಂದಿದ್ದ ಗೃಹ ಸಚಿವರನ್ನು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಾತು ಹೇಳಲು ಬೊಮ್ಮಾಯಿ ಯಾರು, ಅವರೇನು ಇನ್ಸ್‍ಪೆಕ್ಟರ್ರಾ..? ಆಯೋಗನಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರ ಒಳ ತಂತ್ರದಿಂದಲೇ ಗಲಭೆ ನಡೆದಿದೆ ಎಂದು ತಿರುಗೇಟು ನೀಡಿದ್ದಾರೆ. ಪಾಲಿಕೆ ಸದಸ್ಯರಿಗೆ ನೊಟೀಸ್ ಕೊಟ್ಟು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ನಾವಿದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಈ ಸರ್ಕಾರದಲ್ಲಿ ಒಬ್ಬ ಸಚಿವ, ಶಾಸಕನನ್ನು ನಿಯಂತ್ರಿಸಲು ಅವರಿಂದಲೇ ಸಾಧ್ಯ ಆಗ್ತಿಲ್ಲ ಎಂದು ಸರ್ಕಾರವನ್ನು ಡಿಕೆಶಿ ಟೀಕಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನೊಟೀಸ್ ಕೊಟ್ರೆ ತಪ್ಪೇನು? ತಪ್ಪು ಮಾಡದಿದ್ರೆ ಏಕೆ ಹೆದರಬೇಕು? ನಾವು ಯಾರನ್ನು ಬ್ಲಾಕ್ ಮೇಲೆ ಮಾಡ್ತಿಲ್ಲ ಎಂದಿದ್ದಾರೆ. ಶಾಸಕರು ಭದ್ರತೆ ಕೇಳಿದ್ದಾರೆ. ಕೊಟ್ಟಿದ್ದೀವಿ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಇನ್ನು ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ. ಅವರು ಯಾಕೆ ಆ ರೀತಿ ಹೇಳಿದ್ರೋ ಗೊತ್ತಿಲ್ಲ ಎಂದಿದ್ದಾರೆ. ಇದೇ ವೇಳೆ, ತಮಗೆ ಸರ್ಕಾರ ಇನ್ನೂ ರಕ್ಷಣೆ ಒದಗಿಸಿಲ್ಲ ಅಂತಲೂ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೂ ಮುನ್ನ ಶಾಸಕ ಅಖಂಡಗೆ ಮೆಲುದನಿಯಲ್ಲಿ, ಒತ್ತಡದ ಬಗ್ಗೆ ಮಾತಾಡ್ಬೇಡ ಅಂತಾ ಡಿಕೆಶಿ ಸೂಚನೆ ನೀಡಿದ್ರು. ಆದ್ರೆ ಡಿಕೆಶಿ ಮಾತನ್ನು ಶಾಸಕ ಅಖಂಡ ಪರಿಗಣಿಸಲ್ಲ. ಇನ್ನು ಗೃಹಸಚಿವರ ವಿರುದ್ಧ ಏಕವಚನ ಪದ ಪ್ರಯೋಗಕ್ಕೆ ಡಿಕೆಶಿ ಸಂಜೆ ವಿಷಾದ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರ ಹುದ್ದೆ ಬಗ್ಗೆ ತಮಗೆ ಗೌರವವಿದೆ. ಮಾತನಾಡುವ ಭರದಲ್ಲಿ ತಪ್ಪಾಗಿದೆ ಅಂತಲೂ ಸ್ಪಷ್ಪಪಡಿಸಿದ್ದಾರೆ.

  • ಕಾಂಗ್ರೆಸ್ಸೊಳಗಿನ ಬಣ ರಾಜಕೀಯಕ್ಕೆ ಅಖಂಡ ಶ್ರೀನಿವಾಸಮೂರ್ತಿ ಬಲಿಪಶು: ಸಿ.ಟಿ.ರವಿ

    ಕಾಂಗ್ರೆಸ್ಸೊಳಗಿನ ಬಣ ರಾಜಕೀಯಕ್ಕೆ ಅಖಂಡ ಶ್ರೀನಿವಾಸಮೂರ್ತಿ ಬಲಿಪಶು: ಸಿ.ಟಿ.ರವಿ

    ಚಿಕ್ಕಮಗಳೂರು: ಕಾಂಗ್ರೆಸ್ ಒಳಗಿನ ಬಣ ರಾಜಕೀಯಕ್ಕೆ ಬಲಿಪಶು ಅಖಂಡ ಶ್ರೀನಿವಾಸ್ ಮೂರ್ತಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ನವೀನ್ ಸಮರ್ಥನೆಗೂ ನಿಂತುಕೊಂಡಿಲ್ಲ. ನವೀನ್ ಪ್ರತಿಕ್ರಿಯೆ ನೀಡಿದ್ದಾನೆ. ನಾನು ರಾಮ-ಕೃಷ್ಣನ ಬಗ್ಗೆ ಹಾಕಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು ಎಂದು. ಅದರ ಬಗ್ಗೆಯೂ ತನಿಖೆಯಾಗಬೇಕು. ತಪ್ಪು ಮಾಡಿದ್ದರೆ ನವೀನ್‍ಗೂ ಶಿಕ್ಷೆಯಾಗಬೇಕು. ರಾಮ-ಕೃಷ್ಣನ ಮೇಲೆ ಪೋಸ್ಟ್ ಹಾಕಿದವರ ಮೇಲೂ ಶಿಕ್ಷೆಯಾಗಬೇಕು. ಆ ಮೂಲಕ ಕಾನೂನು ಕೈಗೆತ್ತಿಕೊಂಡಿರೋರ್ಗೂ ಶಿಕ್ಷೆ ಆಗಬೇಕು ಎಂದಿದ್ದಾರೆ.

    ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದು ಪ್ರಾಯೋಜಿತವಾಗಿರುವಂತಹ ದಾಳಿ ಎಂದರು. ಈಗ ಏಕೆ ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಬಾಯಿ ಮುಚ್ಚಿಕೊಂಡು ಇದ್ದಾರೆ. ಎಲ್ಲಿದೆ ಅಹಿಂದಾ ಪ್ರೇಮ. ರೋಷನ್ ಬೇಗ್ ಕೊಟ್ಟದ್ದು ಒಂದೇ ಸ್ಟೇಟ್ಮೆಂಟ್. ಒಂದೇ ಸ್ಟೇಟ್ಮೆಂಟ್‍ಗೆ ಅವರನ್ನ ಪಕ್ಷದಿಂದ ಅಮಾನತು ಮಾಡಿದರು. ಆರು ಬಾರಿ ಎಂ.ಎಲ್.ಎ. ಆಗಿದ್ದವರು. 30 ವರ್ಷ ಕಾಂಗ್ರೆಸ್ ಪಾರ್ಟಿಯ ಲೀಡ್ರು. ಒಂದೇ ಸ್ಟೇಟ್ಮೆಂಟ್‍ಗೆ ಉಚ್ಛಾಟನೆ. ತನ್ವೀರ್ ಸೇಠ್ ಮೇಲೆ ಮಾರಾಣಾಂತಿಕ ಹಲ್ಲೆ ಆಯ್ತು. ಏನಾಯ್ತು? ಏನಿಲ್ಲ. ಅಂದ್ರೆ ಏನ್ ಪ್ರೀತಿ. ಈಗ ಅಹಿಂದಾದಲ್ಲಿ ಯಾವ್ಯಾವುದನ್ನ ಕೈಬಿಟ್ಟಿದ್ದಾರೆಂದು ನೋಡಬಹುದಲ್ಲ ಎಂದರು.

    ಬುದ್ಧಿ ಜೀವಗಳು ಲದ್ದಿ ತಿನ್ನುತ್ತಿರಬಹುದು ಎಂದ ಸಿ.ಟಿ.ರವಿ, ನೆಪ ಏನೇ ಇರಬಹುದು. ಟಾರ್ಗೇಟ್ ಆಗಿರೋದು ಹಿಂದೂಗಳು. ವಾಹನ ಸುಟ್ಟಿದ್ದಾರೆ. ಮನೆಗಳ ಮೇಲೆ ದಾಳಿ ಆಗಿದೆ. ಸಿಕ್ಕವರ ಮೇಲೆಲ್ಲಾ ಆಗಿಲ್ಲ. ಪೊಲೀಸ್ ಹಾಗೂ ಹಿಂದೂಗಳ ಟಾರ್ಗೆಟ್ ಆಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂದಿದ್ದಾರೆ.