Tag: Akbaruddin Owaisi

  • ಅಕ್ಬರುದ್ದೀನ್‌ ಓವೈಸಿಗೆ ಹಂಗಾಮಿ ಸ್ಪೀಕರ್‌ ಪಟ್ಟ – ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ ಶಾಸಕರು

    ಅಕ್ಬರುದ್ದೀನ್‌ ಓವೈಸಿಗೆ ಹಂಗಾಮಿ ಸ್ಪೀಕರ್‌ ಪಟ್ಟ – ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ ಶಾಸಕರು

    ಹೈದರಾಬಾದ್: ಎಐಎಂಐಎಂ‌ (AIMIM) ಪಕ್ಷದ ಅಕ್ಬರುದ್ದೀನ್ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ವಿರೋಧಿಸಿ ತೆಲಂಗಾಣ ಬಿಜೆಪಿ ಇಂದು (ಶುಕ್ರವಾರ) ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದೆ. ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಜವಾಬ್ದಾರಿಯನ್ನು ಹಂಗಾಮಿ ಸ್ಪೀಕರ್‌ಗೆ ವಹಿಸಲಾಗಿತ್ತು.

    ವಿಧಾನಸಭಾ ಚುನಾವಣೆಯಲ್ಲಿ ಗೋಶಾಮಹಲ್‌ನಿಂದ ಗೆದ್ದಿದ್ದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು, ಎಐಎಂಐಎಂ ಮುಂದೆ ಜೀವಂತ ಇರುವವರೆಗೂ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಪೂರ್ಣಾವಧಿ ಸ್ಪೀಕರ್ ನೇಮಕವಾದ ಬಳಿಕವಷ್ಟೇ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯ (ಅಕ್ಬರುದ್ದೀನ್ ಓವೈಸಿ) ಮುಂದೆ ನಾನು ಪ್ರಮಾಣ ವಚನ ಸ್ವೀಕರಿಸಬಹುದೇ ಎಂದು ರಾಜಾ ಸಿಂಗ್ ಕೇಳಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಮಾತನಾಡಿ, ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಸಂಪ್ರದಾಯ. ಅದಕ್ಕೆ ವಿರುದ್ಧವಾದ ಓವೈಸಿ ನೇಮಕವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ನಿಲುವು ವ್ಯಕ್ತಪಡಿಸಿದ್ದಾರೆ.

    ಒವೈಸಿ ಅವರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಚುನಾಯಿತ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ಶಾಸಕರು ಸಮಾರಂಭ ಬಹಿಷ್ಕರಿಸಿದ್ದಾರೆ. ಇದನ್ನೂ ಓದಿ: ಐಸಿಸ್‌ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

    ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಅವರು ತಮ್ಮ ಹಿಂದಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಂತೆ ಎಐಎಂಐಎಂಗೆ ಹೆದರುತ್ತಾರೆ. ಹೀಗಾಗಿ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.

    ಹಂಗಾಮಿ ಸ್ಪೀಕರ್ ಮಾಡಬಹುದಾದ ಅನೇಕ ಹಿರಿಯ ಶಾಸಕರಿದ್ದಾರೆ. ಆದರೆ ಹೊಸ ಮುಖ್ಯಮಂತ್ರಿ ಅಲ್ಪಸಂಖ್ಯಾತರು ಮತ್ತು ಎಐಎಂಐಎಂ ನಾಯಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

  • ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ಹೈದರಾಬಾದ್:‌ ತೆಲಂಗಾಣ ರಾಜ್ಯ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ (Akbaruddin Owaisi) ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಹೊಸ ಸರ್ಕಾರ ಸ್ಥಾಪನೆಯಾದ ಬಳಿಕ ಶನಿವಾರ ಆರಂಭವಾಗಿರುವ ರಾಜ್ಯ ವಿಧಾನಸಭೆಯ (Telangana Legislative Assembly) ಮೊದಲ ಅಧಿವೇಶನಕ್ಕೆ ಹಂಗಾಮಿ ಸ್ಪೀಕರ್‌ ಆಗಿ ಅಕ್ಬರುದ್ದೀನ್ ಓವೈಸಿ ಅವರನ್ನು ನೇಮಕ ಮಾಡಲಾಗಿದ್ದು, ರಾಜ್ಯಪಾಲ ತಮಿಳಿಸೈ ಸೌಂದರರಾಜನ್ (Tamilisai Soundararajan) ಪ್ರಮಾಣ ವಚನ ಬೋಧಿಸಿದ್ದಾರೆ. ಇದನ್ನೂ ಓದಿ: ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ಭಾರತದ ಸಂವಿಧಾನದ 180ನೇ ವಿಧಿಯ ಷರತ್ತು (1) ರ ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ತೆಲಂಗಾಣ ರಾಜ್ಯಪಾಲರು ಅಕ್ಬರುದ್ದೀನ್ ಓವೈಸಿ ಅವರನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ (Telangana Assembly Speaker), ಆಗಿ ನೇಮಿಸಿದ್ದಾರೆ. ಚುನಾಯಿತ ಸದಸ್ಯರಲ್ಲಿ ಒಬ್ಬರನ್ನು ಸ್ಪೀಕರ್‌ ಆಗಿ‌ ನೇಮಿಸುವವರೆಗೆ ಅಕ್ಬರುದ್ದೀನ್‌ ಸ್ಪೀಕರ್‌ ಆಗಿ ಅಧಿವೇಶನ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಐಸಿಸ್‌ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ ಕಾಂಗ್ರೆಸ್‌ 64 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢವಾಗಿದ್ದ ಭಾರತ್‌ ರಾಷ್ಟ್ರ ಸಮಿತಿ 39 ಹಾಗೂ ಬಿಜೆಪಿ 8 ಸ್ಥಾನಗಳನ್ನ ಪಡೆದುಕೊಂಡಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ ಅವರು ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಸಿಎಂ ಹುದ್ದೆ ಅಲಂಕರಿಸಿದ ಖ್ಯಾತಿ ಗಳಿಸಿದ್ದಾರೆ.

  • ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ‘ಬೊಗಳುವ ನಾಯಿ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಕ್ಬರುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

    ದೇಶದಲ್ಲಿ ಧ್ವನಿವರ್ಧಕಗಳ ಕುರಿತಂತೆ ಬಿಸಿ, ಬಿಸಿ ಚರ್ಚೆ ನಡೆಯುತ್ತಿದ್ದು, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ದಿಷ್ಟ ಡೆಸಿಬಲ್, ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಿರ್ದಿಷ್ಟ ಮಿತಿಯ ಧ್ವನಿವರ್ಧಕಗಳನ್ನು ಬಳಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಹೋರಾಡಿ, ರಮ್ಯಾ ವಿರುದ್ಧ ಅಲ್ಲ – ಡಿಕೆಶಿ ಬೆಂಬಲಿಗರಿಗೆ ಮಹದೇವಪ್ಪ ಟಾಂಗ್

    loudspeakers

    ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಗೆ ಅಕ್ಬರುದ್ದೀನ್ ಓವೈಸಿ ಅವರು ಭೇಟಿ ನೀಡಿದ್ದರು. ಈ ವೇಳೆ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಕ್ಬರುದ್ದೀನ್ ಓವೈಸಿ ಅವರು, ಸಿಂಹಗಳು ನಡೆದಾಡುವಾಗ ನಾಯಿ ಬೊಗಳುತ್ತದೆ ಎಂದು ರಾಜ್ ಠಾಕ್ರೆ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ನಾಯಿ ಬೊಗಳುತ್ತಿದ್ದರೆ, ಬೊಗಳಲಿ ಬಿಡಿ, ಬೊಗಳುವುದೇ ನಾಯಿಯ ಕೆಲಸ. ಆದರೆ ಸಿಂಹದ ನಡೆಯಲ್ಲಿ ಗಾಂಭೀರ್ಯ ಇರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ

  • ದ್ವೇಷ ಭಾಷಣ ಕೇಸ್‌ – ಅಕ್ಬರುದ್ದೀನ್‌ ಓವೈಸಿ ಖುಲಾಸೆ

    ದ್ವೇಷ ಭಾಷಣ ಕೇಸ್‌ – ಅಕ್ಬರುದ್ದೀನ್‌ ಓವೈಸಿ ಖುಲಾಸೆ

    ಹೈದರಾಬಾದ್‌: ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಎಐಎಂಎಂ ನಾಯಕ ಅಕ್ಬರುದ್ದೀನ್‌ ಓವೈಸಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

    ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ 2012ರ ಡಿಸೆಂಬರ್‌ನಲ್ಲಿ ನಿರ್ಮಲ್ ಮತ್ತು ನಿಜಾಮಾಬಾದ್ ಜಿಲ್ಲೆಯಲ್ಲಿ ಅಕ್ಬರುದ್ದೀನ್‌ ಓವೈಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಾಗಿತ್ತು. ವಾದ, ಪ್ರತಿವಾದ ಆಲಿಸಿದ್ದ ಕೋರ್ಟ್‌ ಇಂದು ತೀರ್ಪು ನೀಡುವುದಾಗಿ ಪ್ರಕಟಿಸಿತ್ತು.

    ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧ ಒಂದು ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಐಪಿಸಿಯ ವಿವಿಧ ಸೆಕ್ಷನ್‌ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು.

    ಕೇಸ್‌ ದಾಖಲಾದ ಬಳಿಕ ಬಂಧನಕ್ಕೆ ಒಳಗಾಗಿದ್ದ ಅಕ್ಬರುದ್ದೀನ್‌ ಓವೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೆಜಿಎಫ್ 2 ರಿಲೀಸ್ ಇಲ್ಲ: ಅಭಿಮಾನಿಗಳ ಪ್ರತಿಭಟನೆ, ಸಿ.ಟಿ ರವಿ ಭರವಸೆ

    ಸಿಐಡಿ ಪೊಲೀಸರು 2016ರಲ್ಲಿ ನಿಜಾಮಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರೆ ಅದೇ ವರ್ಷ ನಿರ್ಮಲ್‌ ಜಿಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ನಿಜಾಮಾಬಾದ್ ಪ್ರಕರಣದಲ್ಲಿ ಒಟ್ಟು 41 ಸಾಕ್ಷಿಗಳು, ನಿರ್ಮಲ್‌ ಪ್ರಕರಣದಲ್ಲಿ 33 ಜನರನ್ನು ವಿಚಾರಣೆ ನಡೆಸಲಾಗಿತ್ತು.

  • ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    – ಎಐಎಂಐಎಂ ಸೋತ್ರೂ ಪರವಾಗಿಲ್ಲ ಬಿಜೆಪಿ ಗೆಲ್ಲಬಾರದು

    ಹೈದರಾಬಾದ್: ಮುಂಬರುವ ತೆಲಂಗಾಣ ಪುರಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ, ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತರೂ ಪರವಾಗಿಲ್ಲ ಬಿಜೆಪಿ ಗೆಲುವು ಸಾಧಿಸಬಾರದು. ಎಐಎಂಐಎಂ ಮುಖಂಡರು ನಿಜಾಮಾಬಾದ್‍ನ ಉಪಮೇಯರ್ ಆಗಿದ್ದ ಕಾಲವೊಂದಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ನಿಜಾಮಾಬಾದ್ ಕ್ಷೇತ್ರದಿಂದ ಬಿಜೆಪಿ ಆಯ್ಕೆಯಾಗಿದೆ. ಎಐಎಂಐಎಂ ಗೆಲ್ಲುವುದು ನಿಮಗೆ ಇಷ್ಟವಿಲ್ಲದಿದ್ದರೆ ಪರವಾಗಿಲ್ಲ, ಬಿಜೆಪಿಯನ್ನು ಸೋಲಿಸಿ ಎಂದು ಮುಸ್ಲಿಂ ಸಮುದಾಯದ ಜೊತೆ ಮನವಿ ಮಾಡಿಕೊಂಡಿದ್ದಾರೆ.

    ನಿಜಾಮಾಬಾದ್ ಸಂಸದೀಯ ಸ್ಥಾನವನ್ನು ಗೆದ್ದ ಬಿಜೆಪಿ ಮೇಯರ್ ಹುದ್ದೆಯನ್ನೂ ಅಲಂಕರಿಸುವ ಸಾಧ್ಯತೆ ಇದೆ. ಹೀಗಾಗಿ ನೀವು ಒಗ್ಗಟ್ಟಾಗಿ ನಿಲ್ಲಬೇಕಿದೆ. ಈ ಮೂಲಕ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಬೇಕು ಎಂದು ಮತದಾರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ ಜನರ ಆಶೀರ್ವಾದವನ್ನು ಬಯಸುತ್ತೇನೆ. ನೀವು ಒಗ್ಗಟ್ಟಿನಿಂದ ಇರುವುದನ್ನು ನೋಡಲು ಇಷ್ಟಪಡುತ್ತಿರುವೆ ಎಂದು ಮತದಾರರ ಮನವೊಲಿಸಲು ಪ್ರಯತ್ನಿಸಿದರು.

    ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಸಿಕಂದರಾಬಾದ್, ನಿಜಾಮಾಬಾದ್, ಕರೀಂನಗರ ಹಾಗೂ ಆದಿಲಾಬಾದ್ ಕ್ಷೇತ್ರಗಳಿಂದ ಗೆಲುವು ಸಾಧಿಸಿದೆ. ಆದರೆ ಎಐಎಂಐಎಂ ಕೇವಲ ಒಂದೇ ಒಂದು ಕ್ಷೇತ್ರವಾದ ಹೈದರಾಬಾದ್‍ನಿಂದ ಜಯಗಳಿಸಿದೆ.

  • ಚೌಕಿದಾರನಿಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕ್ತೀನಿ: ಅಕ್ಬರುದ್ದೀನ್ ಓವೈಸಿ

    ಚೌಕಿದಾರನಿಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕ್ತೀನಿ: ಅಕ್ಬರುದ್ದೀನ್ ಓವೈಸಿ

    ಹೈದರಾಬಾದ್: ವಿವಾದತ್ಮಕ ಹೇಳಿಕೆಯಿಂದಲೇ ಸುದ್ದಿಯಾಗಿ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿಯವರ ಚೌಕಿದಾರ ಹೇಳಿಕೆ ತಿರುಗೇಟು ನೀಡಿದ್ದಾರೆ. ಚೌಕಿದಾರ್ ಎಂದು ಹೇಳುವ ಮೋದಿ ತಲೆಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕಿ ನಿಲ್ಲಿಸುತ್ತೇನೆ ಎಂಬ ಹೇಳಿಕೆ ನೀಡಿದ್ದು ಬಿಜೆಪಿ ನಾಯಕರ ಕೆಂಗಣ್ಣಿಗೆ ಅಕ್ಬರುದ್ದೀನ್ ಗುರಿಯಾಗಿದ್ದಾರೆ.

    ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸೋದರನಾಗಿರುವ ಅಕ್ಬರುದ್ದೀನ್ ಓವೈಸಿ, ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಲವೊಮ್ಮೆ ಚಾಯ್‍ವಾಲ್ ಅಂತಾರೆ, ಮತ್ತೊಮ್ಮೆ ನಾನೊಬ್ಬ ಫಕೀರ್ ಎಂದು ಹೇಳಿಕೊಳ್ಳುತ್ತಾರೆ. ಕೆಲವೊಂದು ಚರಂಡಿಯಿಂದ ಗ್ಯಾಸ್ ತಯಾರಿಸುವಂತೆ ಹೇಳಿದ್ರೆ, ಇದೀಗ ನಾನೊಬ್ಬ ಚೌಕಿದಾರ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂತಹ ವ್ಯಕ್ತಿಗೆ ನೀವು ವೋಟ್ ಹಾಕುತ್ತಿದ್ದೀರಿ ಎಂಬುದನ್ನು ಮತದಾರರು ತಿಳಿದುಕೊಳ್ಳಬೇಕಿದೆ ಎಂದರು.

    ಚಾಯ್‍ವಾಲ್ ಆದ್ರೆ ಚಾಯ್ ಕಿಟಲಿ, ಒಲೆ ನೀಡುತ್ತೇನೆ. ಬೇಕಾದರೆ ಚಹಾ ತಯಾರಿಸಲು ಟೀ ಪುಡಿಯನ್ನು ಕೊಡುತ್ತೇನೆ. ಈಗ ಚಾಯ್‍ವಾಲ್ ನಿಂದ ಚೌಕಿದಾರನಾಗಿ ಬದಲಾಗಿದ್ದರಿಂದ ಅವರ ಇಚ್ಛೆಯಂತೆ ತಲೆಗೊಂಡು ಟೋಪಿ, ಕೊರಳಲ್ಲಿ ಸೀಟಿ ಹಾಕುತ್ತೇನೆ ಎಂದು ಮೋದಿ ವಿರುದ್ಧ ಅಕ್ಬರುದ್ದೀನ್ ಗುಡುಗಿದ್ದಾರೆ.