Tag: Akatakata

  • `ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್

    `ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್

    ಣ್ಣದ ಲೋಕದಲ್ಲಿ ದಿನ ಕಳೆದಂತೆ ಹೊಸ ಹೊಸ ನಾಯಕಿಯರ ಪರಿಚಯವಾಗ್ತಿದೆ. ಆದ್ರೆ ಪ್ರತಿಭೆಯ ಜೊತೆಗೆ ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರ್ತಾರೆ. ಈ ಸಾಲಿನಲ್ಲಿ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಕೂಡ ಒಬ್ಬರು.

    ಈಗಾಗಲೇ ಮಹಿರಾ, ಗಿಲ್ಕಿ, ತಲೆದಂಡ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ವಿಶೇಷ ಪಾತ್ರಗಳ ಮೂಲಕ ಮೋಡಿ ಮಾಡಿರೋ ನಟಿ ಚೈತ್ರಾ ಈಗ `ಅಕಟಕಟ’ ಸಿನಿಮಾದಲ್ಲಿ ನಾಯಕಿಯಾಗಿ  ಕಾಣಿಸಿಕೊಳ್ತಿದ್ದಾರೆ..

     

    ಈ ಹಿಂದೆ `ಪುಕ್ಸಟ್ಟೆ ಲೈಫು’ ಚಿತ್ರ ನಿರ್ಮಾಣ ಮಾಡಿದ್ದ ನಾಗರಾಜ್ ಸೋಮಯಾಜಿ ಇದೀಗ `ಅಕಟಕಟ’ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. `ಅಕಟಕಟ’ ಸಿನಿಮಾದಲ್ಲಿ ಜಾನಕಿ ಎಂಬ ಚೈತ್ರಾ ಆಚಾರ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದ ನಾಯಕಿಯ ಲುಕ್‌ನ್ನ ಚಿತ್ರತಂಡ ಇದೀಗ ರಿವೀಲ್ ಮಾಡಿದೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ,ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಳ್ತಿದ್ದಾರೆ. ಇಂಥ ನಾಯಕಿಯ ಬದುಕಿಗೆ ನಾಯಕ ಎಂಟ್ರಿ ಕೊಟ್ಟಾಗ ಏನಾಗುತ್ತೇ ಅನ್ನೋದೇ ಚಿತ್ರದ ಸ್ಟೋರಿ. ಇದನ್ನು ಓದಿ: ಪುಷ್ಪ-2ನಲ್ಲೂ ಸಮಂತಾ- ಆದ್ರೆ ಐಟಂ ಸಾಂಗ್‌ನಲ್ಲಿ ಅಲ್ಲ?

    ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಫೋಟೋಗ್ರಾಫರ್,ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಈಗ `ಅಕಟಕಟ’ ಸಿನಿಮಾಗೆ ಚಿತ್ರಕಥೆ ಬರೆದು ಡೈರೆಕ್ಷನ್ ಕೂಡ ನಿರ್ದೇಶಕ ನಾಗರಾಜ್ ಅವರೇ ಮಾಡ್ತಿದ್ದಾರೆ. ಸದ್ಯ ಭಿನ್ನ ಟೈಟಲ್‌ನಿಂದ ಗಮನ ಸೆಳೆಯುತ್ತಿರೋ `ಅಕಟಕಟ’ ಚಿತ್ರ, ಮುಂದಿನ ದಿನಗಳಲ್ಲಿ ಅದ್ಯಾವ ರೀತಿ ಸೌಂಡ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

  • ಅಕಟಕಟ ಹುಡುಗಿಯ ಅಂತರಂಗ: ಹೊಸ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್

    ಅಕಟಕಟ ಹುಡುಗಿಯ ಅಂತರಂಗ: ಹೊಸ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್

    ಟಿ ಚೈತ್ರಾ ಜೆ ಆಚಾರ್ ‘ಬ್ಲಿಂಕ್’ ಸಿನಿಮಾ ನಂತರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅಕಟಕಟ ಹೆಸರಿನ ಈ ಸಿನಿಮಾದಲ್ಲಿ ಗ್ಲಾಮರ್ ಗೊಂಬೆ ಚೈತ್ರಾ, ಮಧ್ಯಮದ ವರ್ಗದ ಕುಟುಂಬದ ಹೆಣ್ಣು ಮಗಳ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.

    ಅಕಟಕಟ ಸಿನಿಮಾವನ್ನು ನಾಗರಾಜ್ ಸೋಮಯಾಜಿ ನಿರ್ದೇಶಿಸಿಸುತ್ತಿದ್ದು, ಈ ಸಿನಿಮಾದಲ್ಲಿ ಮತ್ತೊಬ್ಬ ಹೊಸ ಪ್ರತಿಭೆಗೆ ನರ್ತನ್ ಗೆ ಅವಕಾಶ ನೀಡಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಚೈತ್ರಾ ಜೆ ಆಚಾರ್ ತಮ್ಮ ಪಾತ್ರದ ಕುರಿತಾಗಿ ಕೆಲವು ಹಿಂಟ್ ಬಿಟ್ಟುಕೊಟ್ಟಿದ್ದಾರೆ.  ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ‘ನಾನು ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಾನಕಿ ಎನ್ನುವ ಪಾತ್ರವನ್ನು ನಿರ್ವಹಿಸುತ್ತೇನೆ. ಜಾನಕಿ ಜೀವನದಲ್ಲಿ ಒಳ್ಳೆಯ ವಿಚಾರ, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾಳೆ. ಏಕೆಂದರೆ ತನ್ನ ಜೀವನವನದ ದಿಕ್ಕನ್ನು ಬದಲಾಯಿಸುವ ಏಕೈಕ ವಿಷಯ ಶಿಕ್ಷಣ ಎಂದು ಆಕೆ ಭಾವಿಸುತ್ತಾಳೆ. ಈ ಸಿನಿಮಾದಲ್ಲಿ ನಾನು ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಚೈತ್ರ ಆಚಾರ್.


    ‘ವೃತ್ತಿ ಬದುಕಿನ ಆರಂಭಿಕ ಹಂತದಲ್ಲಿ ಇಂತಹ ಸವಾಲಿನ ಪಾತ್ರಗಳು ಸಿಕ್ಕಿರುವುದು ನನ್ನ ಅದೃಷ್ಟವಾಗಿದೆ. ಗ್ಲಾಮರಸ್, ನಟನೇ ಎಂದು ಪಾತ್ರಗಳನ್ನು ನಾನು ಎಂದು ವರ್ಗೀಕರಿಸುವುದಿಲ್ಲ. ನನಗೆ ಸಿಕ್ಕ ಪಾತ್ರಗಳನ್ನು ಮಾಡುತ್ತೇನೆ. ಒಳ್ಳೆಯ ಪಾತ್ರಗಳು ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಸ್ಕ್ರಿಪ್ಟ್‌ಗಳನ್ನು  ಆಯ್ಕೆ ಮಾಡುವಾಗಲೂ ನಾನು, ಈ ಸಿನಿಮಾ ನಂತರ ನಾನು ಏನಾದರೂ ಹೊಸತು ಕಲಿಯಬೇಕು. ಹಾಗಿದ್ದರೆ ಆ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.

  • ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

    ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

    ಸಂಚಾರಿ ರಂಗಭೂಮಿಯಲ್ಲಿ ಪಳಗಿ ತಮ್ಮದೇ ಆದ ರಂಗತಂಡ ಕಟ್ಟಿಕೊಂಡು ತಮ್ಮ ಪ್ರತಿಭೆ ಓರೆಗೆ ಹಚ್ಚುತ್ತ ಗಮನ ಸೆಳೆಯುತ್ತಿರುವವರು ನಿರ್ದೇಶಕ ನಾಗರಾಜ್ ಸೋಮಯಾಜಿ. ದಿ ಬೆಸ್ಟ್ ಆಕ್ಟರ್ ಟೆಲಿ ಫಿಲಂ ಮೂಲಕ ಸಖತ್ ಸಂಚಲನ ಸೃಷ್ಟಿಸಿರುವ ಇವರು ತಮ್ಮ ಕೆಲಸದ ಗುಣಮಟ್ಟವನ್ನು ತೋರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿರ್ಮಾಪಕರಾಗಿಯೂ ಪಳಗಿರುವ ಇವರು ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನದತ್ತ  ತೊಡಗಿಕೊಂಡಿದ್ದಾರೆ. ಅಂದ್ಹಾಗೆ ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರದ ಹೆಸರು ‘ಅಕಟಕಟ’.

    ‘ಅಕಟಕಟ’ ಟೈಟಲ್ ಕೇಳಿದಾಕ್ಷಣ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಈ ಮೊದಲೇ ಕೇಳಿಬಂದಿತ್ತಲ್ವಾ? ಲೂಸ್ ಮಾದ ಯೋಗಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಲ್ಲವೇ.? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ನಾಗರಾಜ್ ಸೋಮಯಾಜಿ ಲೂಸ್ ಮಾದ ಯೋಗಿಗೆ ಸಿನಿಮಾ ಡೈರೆಕ್ಟ್ ಮಾಡಬೇಕಿತ್ತು. ಆದ್ರೆ ಇದೆಲ್ಲ ಈಗ ಹಳೆಯ ಸುದ್ದಿ. ಹಾಗೆಂದು ಅಕಟಕಟ ಪ್ರಾಜೆಕ್ಟ್ ನಿಂತಿಲ್ಲ. ಇದೀಗ ಹೊರಬಿದ್ದಿರುವ ಹೊಸ ಸುದ್ದಿಯಂದ್ರೆ ನಾಗರಾಜ್ ಸೋಮಯಾಜಿ ಅಕಟಕಟ ಸಿನಿಮಾ ಮೂಲಕ ಹೊಸಮುಖವನ್ನು ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ. ಆದ್ರೆ ಆ ನಟ ಯಾರು ಅನ್ನೋದಕ್ಕೆ ಉತ್ತರ ಜನವರಿ 14ಕ್ಕೆ ಸಿಗಲಿದೆ.

    ‘ಅಕಟಕಟ’ ಸಿನಿಮಾ ಸಬ್ಜೆಕ್ಟ್ ನೊಂದಿಗೆ ಮತ್ತೆ ಬಂದಿರುವ ನಿರ್ದೇಶಕರು ಚಿತ್ರದ ನಾಯಕ ನಟ ಯಾರು, ಚಿತ್ರತಂಡದಲ್ಲಿ ಯಾರ‍್ಯಾರು ಇರ್ತಾರೆ, ನಿರ್ಮಾಪಕರು ಯಾರು ಇದೆಲ್ಲವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಜನವರಿ 14ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದು ಅಂದೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದ್ದು, ಜನವರಿ 14ರ ಸಂಕ್ರಾಂತಿ ಹಬ್ಬದಂದು ಅಕಟಕಟ ಚಿತ್ರಕ್ಕೆ ಹೊಸ ಆರಂಭ ಸಿಗಲಿದೆ.