Tag: Akash Srivatsa

  • ವಿಲಾಸ್ ನಾಯಕ್ ಕುಂಚದಲ್ಲಿ ರಮೇಶ್ ಅರವಿಂದ್  ದೈಜಿ

    ವಿಲಾಸ್ ನಾಯಕ್ ಕುಂಚದಲ್ಲಿ ರಮೇಶ್ ಅರವಿಂದ್ ದೈಜಿ

    ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ (Ramesh Aravind) ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ (Akash Srivatsa) ಕೈಜೋಡಿಸಿದ್ದಾರೆ. ನಿನ್ನೆಯಷ್ಟೇ ರಮೇಶ್ ಅರವಿಂದ್ ಅವರ  ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರದ ‘ದೈಜಿ’ (Daiji) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಪೋಸ್ಟರ್ ಅನ್ನು ಖ್ಯಾತ ಕಲಾವಿದ ವಿಲಾಸ್ ನಾಯಕ್ (Vilas Naik) ತಮ್ಮದೇ ಆ ಕುಂಚದಲ್ಲಿ ಸೆರೆ ಹಿಡಿದಿದ್ದಾರೆ. ಆ ಪೇಟಿಂಗ್ ಅನ್ನು ಚಿತ್ರತಂಡಕ್ಕೆ ಅವರು ಅರ್ಪಿಸಿದ್ದಾರೆ.

    ನಿನ್ನೆಯಷ್ಟೇ ಫಸ್ಟ್ ಲುಕ್ ರಿಲೀಸ್ ಆಗಿರುವ ದೈಜಿ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ರವರ ಲೂಸಿಯಾ, ಡಾಲಿ ಧನಂಜಯ್ ಅವರು ನಟಿಸಿದ ‘ಬದ್ಮಾಶ್’ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು.

    ಅಂದಹಾಗೆ ಚಿತ್ರದ ಶೀರ್ಶಿಕೆ ‘ದೈಜಿ’ ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳು. ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಅಥವಾ ಹಾರರ್ ಜ಼ಾನರ್ ಗೆ ಬರುತ್ತದೆ. ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ರವರು ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದಾರೆ.

    ಚಿತ್ರದ ನಾಯಕಿಗಾಗು ಆಗಲೇ ಹುಡುಕಾಟ ಪ್ರಾರಂಭವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ ೨೫ ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ.

    ಇದು ಬಹುಮುಖ ಪ್ರತಿಭೆಯ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡ ನಟ ಶ್ರೀ ರಮೇಶ್ ಅರವಿಂದ ರವರ ೧೦೬ ನೇ ಚಿತ್ರ. ತನ್ನ ಸಿನಿ ಜೀವನದಲ್ಲಿ ವಿಭಿನ್ನ ಪಾತ್ರಗಳಲ್ಲಿಲ್ ಮಿಂಚಿದ ರಮೇಶ್ ರವರ ಸ್ಮರಣೀಯ ಚಿತ್ರಗಳೆಂದರೆ ಅಮೃತವರ್ಶಿಣಿ, ಅಮೆರಿಕ ಅಮೆರಿಕ, ರಾಮ ಶಾಮ ಭಾಮ, ಶಿವಾಜಿ ಸುರತ್ಕಲ್… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಮಿಳಿನಲ್ಲಿ ಡ್ಯೂಯೆಟ್, ಸತಿ ಲೀಲಾವತಿ, ಪಂಚತಂತಿರಂ, ಉತ್ತಮ ವಿಲ್ಲಿನ್, ತೆಲುಗು ಚಿತ್ರರಂಗದಲ್ಲಿ ಲಿಟಲ್ ಸೋಲ್ಜರ್ಸ್, ಮಲಯಾಳಂ ನಲ್ಲಿ ಅವನ್ ಅನಂತಪದ್ಮನಾಭನ್.. ಹೀಗೆ ಬಹು ಭಾಷಾ ತಾರೆಯಾದ ರಮೇಶ್ ಅರವಿಂದ್ ರವರು ದೈಜಿ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವು ಚಿತ್ರೀಕರಣವನ್ನು ಬಹಳ ಹುಮ್ಮಸ್ಸಿನಿಂದ ಎದುರುನೋಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

    ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

    ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದ ಹಾಗೂ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ ‘ಶಿವಾಜಿ ಸುರತ್ಕಲ್ 2’ ಚಿತ್ರ ಕರ್ನಾಟಕದ ಏಳು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.

    ಈ‌ ಸಂತೋಷವನ್ನು ಸಂಭ್ರಮಿಸಲು ನಿರ್ಮಾಪಕ ಅನೂಪ್ ಗೌಡ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ನಟ ರಮೇಶ್ ಅರವಿಂದ್ ಅವರಿಂದ ಐವತ್ತನೇ ದಿನದ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣರಾದ ಕಲಾಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ ಹಾಗೂ ತಮ್ಮ ಚಿತ್ರತಂಡಕ್ಕೆ ನಿರ್ದೇಶಕರು ಹಾಗೂ ನಿರ್ಮಾಪಕರು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?

    ಪೋಸ್ಟರ್ ಬಿಡುಗಡೆ ಮಾಡಿ, ಮಾತನಾಡಿದ್ದ ನಟ ರಮೇಶ್ ಅರವಿಂದ್, ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ಐವತ್ತು ದಿನಗಳನ್ನು ಪೂರೈಸಿರುವುದು ಖುಷಿಯ ಸಂಗತಿ. ಈ ಸಂದರ್ಭದಲ್ಲಿ ನಾನು ಅಭಿಮಾನಿಗಳಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.

    ಚಿತ್ರ ಕಳೆದೆರೆಡು ದಿನಗಳ ಹಿಂದೆ ಐವತ್ತು ದಿನ ಪೂರೈಸಿದೆ.  ಭಾನುವಾರ(ಜೂನ್ 4) 52ನೇ ದಿನ.‌‌ ಇಂದು ಮಧ್ಯಾಹ್ನದ ಶೋ ಕೂಡ ಹೌಸ್ ಫುಲ್ ಆಗಿರುವುದು ಚಿತ್ರತಂಡದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.

  • ಶಿವಾಜಿ ಸುರತ್ಕಲ್ ಮೂರನೇ ಭಾಗದ ಸುಳಿವು ನೀಡಿದ ಚಿತ್ರತಂಡ

    ಶಿವಾಜಿ ಸುರತ್ಕಲ್ ಮೂರನೇ ಭಾಗದ ಸುಳಿವು ನೀಡಿದ ಚಿತ್ರತಂಡ

    ಶಿವಾಜಿ ಸುರತ್ಕಲ್ 2  (Shivaji Surathkal 2)  The Mysterious Case of ಮಾಯಾವಿ ಚಲನಚಿತ್ರವು ಎರಡು ವಾರಗಳ ಯಶಸ್ವಿ ಬೆಳ್ಳಿ ತೆರೆಯ ಓಟದ ನಂತರ ಭರದಿಂದ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಸಂಭ್ರಮದ ವಿಚಾರ ಏನೆಂದರೆ ಹಲವು ಉನ್ನತ ಮಟ್ಟದ ಸಾಧಕರು ಚಿತ್ರವನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ನೆಟ್ ಫ್ಲಿಕ್ಸ್ ನ ಇಂಡಿಯನ್ ಡಿಟೆಕ್ಟಿವ್ ಎನ್ನುವ ಸಾಕ್ಷ್ಯ  ಚಿತ್ರದಲ್ಲಿ ಕಾಣಿಸಿಕೊಂಡ ಹಾಗೂ ಸೂಪರ್ ಕಾಪ್ ಎಂದೇ ಪ್ರಸಿದ್ಧರಾದ  ಶಶಿಕುಮಾರ್, DIG Railways ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪೊಲೀಸ್ ತನಿಖಾ ವಿಧಾನಗಳನ್ನು, ವಿಶೇಷವಾಗಿ ರಮೇಶ್ ಅರವಿಂದ್  (Ramesh Aravind) ಪಾತ್ರವನ್ನು ಬಹಳ ಮೆಚ್ಚಿದ್ದಾರೆ.

    ಡಿಜಿಪಿ ಹಾಗೂ ಐಪಿಎಸ್ ಆಫೀಸರ್ ರೂಪಾ ಮುದ್ಗಲ್ (Roopa Mudgal) ಕೂಡಾ ಚಿತ್ರವನ್ನು ವೀಕ್ಷಿಸಿ ತಂಡದ ಪ್ರಯತ್ನದ ಬಗ್ಗೆ, ಆಕಾಶ್ ಶ್ರೀವತ್ಸ (Akash Srivatsa) ನಿರ್ದೇಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ವಿಶೇಷಾಗಿ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಅವರ ಪಾತ್ರವನ್ನು ಹೊಗಳಿದ್ದಾರೆ. ತಾನೂ ಕೂಡಾ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯಾದ್ದರಿಂದ, ಮೇಘನಾ ಅವರ ಪಾತ್ರ ಇನ್ನಷ್ಟು ಹತ್ತಿರವಾಯಿತು ಎಂದಿದ್ದಾರೆ.

    ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಕೂಡಾ ಚಿತ್ರವನ್ನು ನೋಡಿದರು. ಚಿತ್ರವು ಅವರಿಗೆ ಬಹುವಾಗಿ ಮೆಚ್ಚುಗೆಯಾಗಿ, ತಂಡವು ಮತ್ತಷ್ಟು ಶಿವಾಜಿ ಸುರತ್ಕಲ್ ಚಿತ್ರಗಳನ್ನು ತಯಾರಿಸಲಿ ಎಂದರು. ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ್ ಪ್ರಸಾದ್ ಕೂಡ ಚಿತ್ರವನ್ನು ನೋಡಿ, ಮೆಚ್ಚಿ, ಚಿತ್ರವು ರೋಚಕವಾಗಿಯೂ, ಭಾವನಾತ್ಮಕವಾಗಿಯೂ ಇದೆ ಎಂದು ಹೇಳಿದರು.

    ಚಿತ್ರದ ಸಕ್ಸಸ್ ಮೀಟ್ ರಾಮನಗರದ ಶ್ರವಣ್ ಸಿನಿಮಾಸ್ ನಲ್ಲಿ ಹಾಗೂ ಮೈಸೂರಿನ ಡಿ ಆರ್ ಸಿ ಸಿನಿಮಾಸ್ ನಲ್ಲಿ ನಡೆಸಲಾಯಿತು. ಮೈಸೂರಿನ ಪ್ರದರ್ಶನದಲ್ಲಿ ಸಾಕಷ್ಟು ಜನ ಪೊಲೀಸ್ ಅಧಿಕಾರಿಗಳು ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ, ನಿರ್ಮಾಪಕರಾದ ಅನೂಪ್ ಗೌಡ, ನಟಿಯರಾದ ರಾಧಿಕಾ ನಾರಾಯಣ್, ಸಂಗೀತಾ ಅವರ ಜೊತೆ ವೀಕ್ಷಿಸಿದರು. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಶಿವಾಜಿ ಸುರತ್ಕಲ್ 2 ಚಿತ್ರವು ಮೊದಲನೇ ಚಿತ್ರದ ಕಲೆಕ್ಷನ್ ಗಳನ್ನು ಮುರಿಯುವ ಭರವಸೆ ಹುಟ್ಟಿಸಿ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಚಿತ್ರವು ಒಂದು ಎಮೋಶನಲ್ ಥ್ರಿಲ್ಲರ್ ಎಂದು ಸಾಕಷ್ಟು ಸದ್ದು ಮಾಡಿ, ಶಿವಾಜಿ ಸುರತ್ಕಲ್ 3 ನೇ ಭಾಗವನ್ನೂ ಮಾಡುವ ಭರವಸೆಯನ್ನು ಮೂಡಿಸಿದೆ. ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ, ನಿರ್ಮಾಪಕರಾದ ಅನೂಪ್ ಗೌಡ, ರೇಖಾ ಕೆ ಎನ್ ಚಿತ್ರದ ಯಶಸ್ಸಿನ ಬಗ್ಗೆ ಅಪಾರವಾದ ಸಂತೋಷ ವ್ಯಕ್ತಪಡಿಸಿದ್ದಾರೆ.

  • ‘ಶಿವಾಜಿ ಸುರತ್ಕಲ್ 2’ ಆಗಿ ಪ್ರೇಕ್ಷಕರ ಮುಂದೆ ನಿಂತಿದ್ದಾರೆ ರಮೇಶ್ ಅರವಿಂದ್

    ‘ಶಿವಾಜಿ ಸುರತ್ಕಲ್ 2’ ಆಗಿ ಪ್ರೇಕ್ಷಕರ ಮುಂದೆ ನಿಂತಿದ್ದಾರೆ ರಮೇಶ್ ಅರವಿಂದ್

    ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ರಮೇಶ್ ಅರವಿಂದ್ (Ramesh Aravind) ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’  (Shivaji Suratkal 2) ಇದೇ ಶುಕ್ರವಾರ (ಏಪ್ರಿಲ್ 14) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ‘ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ (Akash Srivatsa) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಹೂರಣ.

     ‘ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ. ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

    ‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್ (Radhika Narayan) , ಮೇಘನಾ ಗಾಂವ್ಕರ್ (Meghana Gaonkar), ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

  • ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಟ್ರೈಲರ್ ರಿಲೀಸ್

    ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಟ್ರೈಲರ್ ರಿಲೀಸ್

    ಮೇಶ್ ಅರವಿಂದ್ (Ramesh Aravind) ನಾಯಕರಾಗಿ  ನಟಿಸಿರುವ ‘ಶಿವಾಜಿ ಸುರತ್ಕಲ್ 2’ (Shivaji Suratkal 2) ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.

    ಶಿವಾಜಿ ಸುರತ್ಕಲ್ 2 ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ‌ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೈಲರ್ ಬಿಡುಗಡೆಯಾಗಿದೆ. ಎಲ್ಲರಲ್ಲೂ ಮನೆ ಮಾಡಿರುವ ‘ಮಾಯಾವಿ ಯಾರು?’ ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ (Akash Srivatsa) ತಿಳಿಸಿದರು.

    “ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಚೆನ್ನಾಗಿದೆ. ಇದೇ ಏಪ್ರಿಲ್ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ’ ಎಂದರು ನಟ ರಮೇಶ್ ಅರವಿಂದ್. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ನನ್ನ ಮಿತ್ರರ ಸಹಕಾರದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್ (Radhika Chetan), ಮೇಘನಾ ಗಾಂವ್ಕರ್ (Meghana Gaonkar), ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

  • ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ (Akash Srivatsa) ನಿರ್ದೇಶನದಲ್ಲಿ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಿವಾಜಿ ಸುರತ್ಕಲ್ 2’ (Shivaji Suratkal 2) ಚಿತ್ರದ ‘ಟ್ವಿಂಕಲ್’ ಹಾಡು ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಹಾಡಿದ್ದಾರೆ.

    ‘ಶಿವಾಜಿ ಸುರತ್ಕಲ್ 1’ ಚಿತ್ರವನ್ನು ನಮ್ಮ ಹಾಗೂ ರಾಹುಲ್ ದ್ರಾವಿಡ್ ಕುಟುಂಬದವರು ಇದೇ ಜಾಗದಲ್ಲಿ ಒಟ್ಟಿಗೆ ನೋಡಿದ್ದೆವು. ಈಗ ‘ಶಿವಾಜಿ ಸುರತ್ಕಲ್ 2’ ತೆರೆಗೆ ಬರಲು ಸಿದ್ದಾವಾಗಿದೆ. ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ ‘ಒಂದಾ ಜೈಲಿಗೆ, ಇಲ್ಲವಾ ಸ್ಮಶಾನಕ್ಕೆ’ ಎಂದು ಪ್ರಸಿದ್ದಿ. ‘ಶಿವಾಜಿ ಸುರತ್ಕಲ್ ೨’ ಚಿತ್ರದಲ್ಲಿ ಶಿವಾಜಿ ಯಾವ ಕೇಸ್? ತೆಗದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ ಎಂದರು ನಟ ರಮೇಶ್ ಅರವಿಂದ್ (Ramesh Aravind).

    ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಟಿ ಸಂಗೀತ ಶೃಂಗೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂಡ ಸ್ಯಾಂಡಿ ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರಮೇಶ್ ಅವರು, ಜೀಪ್ ನಲ್ಲೂ ಸಹ ಕಾಣಿಸಿಕೊಳ್ಳುತ್ತಾರೆ. ಈ ಕುತೂಹಲ ಸದ್ಯಕ್ಕೆ ಹಾಗೆ ಇರಲಿ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗುತ್ತಿದೆ ಅಂದು ಆ ಕುತೂಹಲಕ್ಕೆ ಉತ್ತರ ಸಿಗಲಿದೆ. ಸಹಕಾರ ನೀಡಿದ್ದ ಇಡೀ ನನ್ನ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಆಕಾಶ್ ಶ್ರೀವತ್ಸ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ಈ ಚಿತ್ರದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ, ನನಗೆ “ಅಮೃತ ವರ್ಷಿಣಿ” ಚಿತ್ರದ ಪಾತ್ರ ನೆನಪಾಗುತ್ತದೆ. ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಜನ ಮೆಚ್ಚಿಕೊಳ್ಳುವ ಭರವಸೆಯಿದೆ ಎನ್ನುತ್ತಾರೆ ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ಐದು ಹಾಡುಗಳಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಡುಗಳನ್ನು ಬರೆದಿರುವವರ ಹಾಗೂ ಹಾಡಿರುವವರ ಹೆಸರುಗಳನ್ನು ಪರಿಚಯಿಸಿದರು.

    ಚಿತ್ರದಲ್ಲಿ ಅಭಿನಯಿಸಿರುವ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ (Meghana Gaonkar), ಹಾಡಿನಲ್ಲಿ ನಟಿಸಿರುವ ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ಮುಂತಾದವರು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಮಾತನಾಡಿದರು.

  • ಬಿಡುಗಡೆಗೆ ಸಿದ್ಧವಾಯಿತು ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ

    ಬಿಡುಗಡೆಗೆ ಸಿದ್ಧವಾಯಿತು ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ

    ‘ಶಿವಾಜಿ ಸುರತ್ಕಲ್ 2 – ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ (Shivaji Suratkal 2) ಚಿತ್ರವು ಏಪ್ರಿಲ್ ತಿಂಗಳ 14ನೇ ತಾರೀಖು ಬಿಡುಗಡೆಯಾಗಲಿದೆ ಎಂದು ಚಿತ್ರತಂಡದಿಂದ ತಿಳಿದು ಬಂದಿದೆ. ಆಕಾಶ್ ಶ್ರೀವತ್ಸ (Akash Srivatsa) ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವವರು ಅನೂಪ್ ಗೌಡ ಮತ್ತು ರೇಖಾ ಕೆ ಎನ್. ಚಿತ್ರಕಥೆ ಗೆ ನೆರವು ನೀಡಿ ಸ್ಕ್ರಿಪ್ಟ್ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿರುವ ಈ ಚಿತ್ರ ರಮೇಶ್ ಅರವಿಂದ್ (Ramesh Aravind) ಅವರ 103 ಸಿನಿಮಾ ಆಗಲಿದೆ ‘ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’. ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ ಗುರುಪ್ರಸಾದ್ ಎಂ ಜಿ ಮತ್ತು ದರ್ಶನ್ ಅಂಬಟ್.

    ಪ್ರಸ್ತುತ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಚಿತ್ರದ ಕೊನೆಯ ಹಾಗೂ ಒಂದು ವಿಶಿಷ್ಟ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿದೆ ಚಿತ್ರತಂಡ. ಈ ಹಾಡಿಗೆ ಮೆರಗು ಹೆಚ್ಚಿಸಿದ್ದು 777 ಚಾರ್ಲಿ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ (Sangeeta Sringeri). ಹಾಡಿನ ಕೊರಿಯೋಗ್ರಫಿ ಮಾಡಿದ್ದು ಧನಂಜಯ್ ಮಾಸ್ಟರ್. ಚಿತ್ರದಲ್ಲಿ ರಮೇಶ್ ಅರವಿಂದ್ ರವರ ಜೊತೆ ರಾಧಿಕಾ ನಾರಾಯಣ್ (Radhika Narayan) ಹಾಗೂ ಮೇಘನಾ ಗಾಂವ್ಕರ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ಚಿತ್ರಕ್ಕೆ ಮೆರಗು ತುಂಬಿದ್ದಾರೆ. ಇದನ್ನೂ ಓದಿ: Breaking: ಯುವ ರಾಜ್‌ಕುಮಾರ್‌ಗೆ ನಾಯಕಿಯಾದ `ಕಾಂತಾರ’ ಬ್ಯೂಟಿ ಸಪ್ತಮಿ

    ಮೊದಲ ಕಂತಾದ ರಣಗಿರಿ ರಹಸ್ಯದಲ್ಲ ಶಿವಾಜಿಯ ಅಗಾಧವಾದ ಬುದ್ಧಿವಂತಿಕೆಯನ್ನು ಕೆಲಸಕ್ಕೆ ಹಚ್ಚಿದ್ದು ಎಲ್ಲರಿಗೂ ನೆನಪಿದೆ. ಆದರೆ ಈ ಚಿತ್ರದಲ್ಲಿ ಕೇಸ್ ನಂ 131, ಶಿವಾಜಿಯನ್ನು ಇನ್ನಷ್ಟು ಸಾವಾಲುಗಳಿಗೆ ಒಡ್ಡಲಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಆ ಚಿತ್ರದಲ್ಲಿದ್ದಂತೆಯೇ, ಇಲ್ಲಿಯೂ ಶಿವಾಜಿಯ ಖಾಸಗಿ ಬದುಕಿನ ಒಂದು ಕಿರುನೋಟವೂ ಬರುತ್ತದೆ. ಮೊದಲ ಕಂತಿನಂತೆಯೇ ಈ ಚಿತ್ರವೂ ಒಂದು ಥಿಯೇಟರ್ ಅನುಭವ ಎನ್ನುತ್ತಾರೆ ಆಕಾಶ್. ಚಿತ್ರಕ್ಕೆ ಆರು ತಿಂಗಳು ಶ್ರಮ ವಹಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಜೂಡಾ ಸ್ಯಾಂಡಿ. ಚಿತ್ರದ ಸೌಂಡ್  ಎಫೆಕ್ಟ್ ಕೂಡಾ ರಾಜನ್ ಅವರು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಓಟಿಟಿ, ಟಿವಿಯ ಅನುಭವಕ್ಕಿಂತ, ಮಾಯಾವಿಯ ಜಾಲವನ್ನು ಶಿವಾಜಿ ಹೇಗೆ ಭೇದಿಸುತ್ತಾರೆ ಎಂದು ನೋಡುವುದಕ್ಕೆ ಚಿತ್ರಮಂದಿರದ ವೀಕ್ಷಣೆಯೇ ಸೂಕ್ತ ಎನ್ನುತ್ತಾರೆ ಆಕಾಶ್.

    ಚಿತ್ರದ ನಿರ್ಮಾಪಕರು ಪ್ರತಿ ಹಂತದಲ್ಲಿಯೂ, ಚಿತ್ರದ ಗುಣಮಟ್ಟ ಎಲ್ಲಿಯೂ ಕುಂದದಂತೆ ಮುತುವರ್ಜಿ ವಹಿಸಿದ್ದಾರೆ. ಚಿತ್ರಕಥೆಗೆ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಮೊದಲನೇ ಕಂತಿನಲ್ಲೇ ನಿರೀಕ್ಷೆ ಮೂಡಿಸಿದ್ದ ಶಿವಾಜಿ ಸುರತ್ಕಲ್ ಈಗ ತನ್ನ ಎರಡನೇ ಕಂತಿನೊಂದಿಗೆ ಏಪ್ರಿಲ್ 14 ರಂದು ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿದೆ. ಚಿತ್ರದ ಶೀರ್ಷಿಕೆಯಲ್ಲಿರುವ ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಮೀರಿ ಗೆಲ್ಲುತ್ತಾರೆ – ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗುತ್ತದೆ ಎಂದು ಆಕಾಶ್ ಶ್ರೀವತ್ಸ ಉತ್ಸಾಹದಿಂದ ಹೇಳುತ್ತಾರೆ.

  • ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್

    ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್

    ನ್ನಡ ಚಿತ್ರರಂಗದ ಸುರದ್ರೂಪಿ ಹಾಗೂ ಪ್ರತಿಭಾವಂತ ನಟ ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಸಂದರ್ಭದಲ್ಲಿ ಅವರು ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” (Shivaji Suratkal 2 )ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಟೀಸರ್ (Teaser) ಬಿಡುಗಡೆ ಸಮಾರಂಭ ನಡೆಯಿತು. ಇದನ್ನೂ ಓದಿ:ಕಾಫಿನಾಡು ಚಂದು ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ

    ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ” ಶಿವಾಜಿ ಸುರತ್ಕಲ್” ಚಿತ್ರಕ್ಕೆ ಸಿಕ್ಕ ಪ್ರಶಂಸೆಯೇ ಭಾಗ 2 ಮಾಡಲು ಸ್ಪೂರ್ತಿ. ಥಿಯೇಟರ್ ನಲ್ಲಿ ನಮ್ಮ ಚಿತ್ರ ಚೆನ್ನಾಗಿ ಓಡುತ್ತಿರುವ ಸಂದರ್ಭದಲ್ಲೇ ಲಾಕ್ ಡೌನ್ ಆಯಿತು..ಆನಂತರದ ವಿಷಯ ಎಲ್ಲರಿಗೂ ಗೊತ್ತು. ಆಮೇಲೆ ರಮೇಶ್ ಅರವಿಂದ್ (Ramesh Aravind) ಅವರ ಜೊತೆಗೆ ಸಾಕಷ್ಟು ಚರ್ಚೆ ನಡೆಸಿದ ನಂತರ “ಶಿವಾಜಿ ಸುರತ್ಕಲ್ 2” ಚಿತ್ರಕ್ಕೆ ಚಾಲನೆ ದೊರೆಯಿತು.  ಎರಡನೇ ಭಾಗ ಮಾಡುವುದು ಅಷ್ಟು ಸುಲಭವಲ್ಲ. ಈಗ ಮೊದಲ ಹಾಗಲ್ಲ. ಎಲ್ಲರ ಬಳಿ ಮೊಬೈಲ್ ಇರುವುದರಿಂದ ಸಣ್ಣಸಣ್ಣ ವಿಷಯಗಳನ್ನು ಪ್ರೇಕ್ಷಕ ಗಮನಿಸುತ್ತಿರುತ್ತಾನೆ. ಈ ರೀತಿಯ ತಪ್ಪಾಗಿದೆ ಎಂದು ಆ ತಕ್ಷಣವೇ ತಿಳಿಸುತ್ತಾನೆ. ಅದನೆಲ್ಲಾ ಗಮನಿಸಿ ಚಿತ್ರ ಮಾಡುವ ಜವಾಬ್ದಾರಿ ನಿರ್ದೇಶಕನ ಮೇಲಿರುತ್ತದೆ. “ಶಿವಾಜಿ ಸುರತ್ಕಲ್ 2” ಕಥೆ ಸಹ ಚೆನ್ನಾಗಿದೆ. ಎಲ್ಲರಿಗೂ ಮೆಚ್ಚುಗೆಯಾಗಲಿದೆ. ರಮೇಶ್ ಅರವಿಂದ್ ಸರ್ ಹುಟ್ಟುಹಬ್ಬಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೀವಿ. ಇದು ನನ್ನೊಬ್ಬನ ಚಿತ್ರವಲ್ಲ. ತಂಡದ ಚಿತ್ರ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

    “ಶಿವಾಜಿ ಸುರತ್ಕಲ್” ಸಿಕ್ಕ ಗೆಲುವಿನಿಂದ ಭಾಗ 2  ಮಾಡಲು ಮುಂದಾದ್ದೆವು. ಅದರಲ್ಲೂ ರಮೇಶ್ ಅರವಿಂದ್ ಅವರ ಸಹಕಾರ ಅಪಾರ ಎಂದ ನಿರ್ಮಾಪಕ ಅನೂಪ್ ಗೌಡ, ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ  ಧನ್ಯವಾದ ತಿಳಿಸಿದರು. ನನ್ನ ನಿಮ್ಮ ಸ್ನೇಹಕ್ಕೆ ಮೂರು ದಶಕಗಳಾಗಿದೆ. ಈ ಮೂವತ್ತು ವರ್ಷಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಆದರೆ ಒಂದೇ ಪಾತ್ರವನ್ನು ಎರಡನೇ ಬಾರಿ ಮಾಡುತ್ತಿರುವುದು “ಶಿವಾಜಿ ಸುರತ್ಕಲ್ 2” ಚಿತ್ರದಲ್ಲಿ ಮಾತ್ರ. ನನಗೆ ನಿರ್ದೇಶಕ ಆಕಾಶ್ ಶ್ರೀವತ್ಸ ಹದಿನೈದು ವರ್ಷಗಳಿಂದ ಪರಿಚಯ. “ಆಕ್ಸಿಡೆಂಟ್” ಚಿತ್ರದಲ್ಲಿ ನನ್ನೊಟ್ಟಿಗೆ ಕೆಲಸವನ್ನೂ ಮಾಡಿದ್ದಾರೆ. ಅದ್ಭುತ ನಿರ್ದೇಶಕ. ಒಳ್ಳೆಯ ತಂಡ. “ಶಿವಾಜಿ ಸುರತ್ಕಲ್ 2” ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು‌ ನಾಯಕ ರಮೇಶ್ ಅರವಿಂದ್.

    ನಾನು “ಶಿವಾಜಿ ಸುರತ್ಕಲ್” ಚಿತ್ರದಲ್ಲಿ ರಮೇಶ್ ಸರ್ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಹಾಗಾಗಿ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಭಾಗ ಎರಡು, ಮೂರು ಹೀಗೆ ಮಾಡುತ್ತಿರಿ ಎಂದು ಹೇಳಿದ್ದೀನಿ ಎನ್ನುತ್ತಾರೆ  ನಟಿ ರಾಧಿಕಾ ನಾರಾಯಣ್ (Radhika Narayan). ನನಗೆ ಕೊರೋನ ನಂತರ ಇದು ಮೊದಲ ಪತ್ರಿಕಾಗೋಷ್ಠಿ. ರಮೇಶ್ ಸರ್ ಜೊತೆ ಅಭಿನಯ ಮಾಡುವುದು ನನ್ನ ಬಹು ದಿನಗಳ ಕನಸು. ಅದು ಈಗ ಈಡೇರಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ ಎಂದರು ನಟಿ ಮೇಫನ ಗಾಂವ್ಕರ್ (Meghana Gaonkar). ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಆಚರಣೆ ಸಹ ನಡೆಯಿತು.

    ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ದರ್ಶನ್ – ಗುರುಪ್ರಸಾದ್ ಛಾಯಾಗ್ರಹಣ ಹಾಗೂ ಆಕಾಶ್ ಶ್ರೀವತ್ಸ (Akash Srivatsa)ಸಂಕಲನ ಈ ಚಿತ್ರಕ್ಕಿದೆ. ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ನಾಜರ್, ಆರಾಧ್ಯ, ರಮೇಶ್ ಭಟ್, ಶ್ರೀನಿವಾಸ್ ಪ್ರಭು, ಶೋಭ್ ರಾಜ್, ವಿದ್ಯಾಮೂರ್ತಿ, ವೀಣಾ ಸುಂದರ್, ರಘು ರಮಣಕೊಪ್ಪ, ಮಧುರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ಶಿವಾಜಿ ಸುರತ್ಕಲ್ 2 ಸಿನಿಮಾ ಟೀಸರ್, ನಾಳೆ ಪುಸ್ತಕ ಬಿಡುಗಡೆ

    ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ಶಿವಾಜಿ ಸುರತ್ಕಲ್ 2 ಸಿನಿಮಾ ಟೀಸರ್, ನಾಳೆ ಪುಸ್ತಕ ಬಿಡುಗಡೆ

    ಟ ರಮೇಶ್ ಅರವಿಂದ್ (Ramesh Aravind) ಇಂದು ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಇವರ ಹುಟ್ಟು ಹಬ್ಬಕ್ಕಾಗಿಯೇ ರಮೇಶ್ ನಟನೆಯ ‘ಶಿವಾಜಿ ಸುರತ್ಕಲ್ 2’  (Shivaji Surathkal 2) ಸಿನಿಮಾದ ಟೀಸರ್ (Teaser) ರಿಲೀಸ್ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಾಜಿ ಸುರತ್ಕಲ್ ಸಿನಿಮಾದ ಮುಂದುವರಿಕೆ ಭಾಗವಾಗಿದೆ. ಮೊದಲ ಭಾಗದಲ್ಲೇ ಈ ಸಿನಿಮಾ ಯಶಸ್ಸು ಕಂಡಿದ್ದು, ಎರಡನೇ ಭಾಗ ಕೂಡ ಕುತೂಹಲ ಮೂಡಿಸಿದೆ.

    2020ರಲ್ಲಿ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿತ್ತು. ಆಕಾಶ್ ಶ್ರೀವಾತ್ಸವ್ (Akash Srivatsa) ನಿರ್ದೇಶನದಲ್ಲಿ ಮೂಡಿ ಬಂದಿದ್ದ  ಈ ಸಿನಿಮಾ ಬಾಕ್ಸ್ ಆಫೀಸಿನಲ್ಲೂ ಸಖತ್ ಕಮಾಯಿ ಮಾಡಿತ್ತು. ಹೀಗಾಗಿ ಎರಡನೇ ಭಾಗದಲ್ಲಿ ಈ ಚಿತ್ರವನ್ನು ತಯಾರಿಸಲಾಗುತ್ತಿದೆ. ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಕೇಸ್ ನಂ 131ನ್ನು ಬೇಧಿಸುವಂತಹ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ಈ ನಡುವೆ ರಮೇಶ್ ಅರವಿಂದ್ ಅವರು ಬರೆದ, ಸಾವಣ್ಣ ಪಬ್ಲಿಕೇಷನ್ (Sawanna Books) ಪ್ರಕಟಿಸಿರುವ ‘ಪ್ರೀತಿಯಿಂದ ರಮೇಶ್’ ಯಶಸ್ಸಿನ ಸರಳ ಸೂತ್ರಗಳು ಹೆಸರಿನ ಪುಸ್ತಕವು (Book) ರವಿವಾರ ಬಿಡುಗಡೆ ಆಗುತ್ತಿದ್ದು, ಯಶಸ್ಸಿಗೆ ಸಂಬಂಧಿಸಿದಂತೆ ಬರಹಗಳು ಈ ಪುಸ್ತಕದಲ್ಲಿ ಇವೆ. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯ ವಲಯದಲ್ಲೂ ರಮೇಶ್ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳವಷ್ಟೇ ವೀರಲೋಕ ಪ್ರಕಾಶನವು ರಮೇಶ್ ಅವರ ಮತ್ತೊಂದು ಪುಸ್ತಕವನ್ನು ಪ್ರಕಟಿಸಿತ್ತು. ಈಗ ಮತ್ತೊಂದು ಪುಸ್ತಕ ಓದುಗರ ಮಡಿಲಿಗೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾ ಶಿವರಾತ್ರಿಗೆ ತೆರೆಗೆ ಬರಲಿದೆ ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’?

    ಮಹಾ ಶಿವರಾತ್ರಿಗೆ ತೆರೆಗೆ ಬರಲಿದೆ ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’?

    ಮಹಾ ಶಿವರಾತ್ರಿಯಂದು ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ ಅಭಿನಯಿಸಿರುವ ‘ಶಿವಾಜಿ ಸುರತ್ಕಲ್’ ಚಿತ್ರ ಥ್ರಿಲ್ ನೀಡಲು ಬರ್ತಿದೆ. ಫೆಬ್ರವರಿ 21ರ ಮಹಾ ಶಿವರಾತ್ರಿಗೆ ‘ಶಿವಾಜಿ ಸುರತ್ಕಲ್’ ಚಿತ್ರ ಬಿಡುಗಡೆಯಾಗುತ್ತಿದೆ. ‘ಶಿವಾಜಿ ಸುರತ್ಕಲ್’ ಪತ್ತೇದಾರಿ ಕಥಾನಕ ಸಬ್ಜೆಕ್ಟ್ ಇರೋ ಸಿನಿಮಾ. ರಣಗಿರಿಯಲ್ಲಿ ಅನುಮಾನಾಸ್ಪದವಾಗಿ ನಡಿಯೋ ಕೊಲೆ ರಹಸ್ಯವನ್ನು ಭೇದಿಸುವ ಪಾತ್ರದಲ್ಲಿ ರಮೇಶ್ ಮಿಂಚಿದ್ದಾರೆ. ಸಸ್ಪೆನ್ಸ್ ,ಥ್ರಿಲ್ಲರ್ ಮತ್ತು ಹಾರಾರ್ ಸಬ್ಜೆಕ್ಟ್ ಚಿತ್ರದಲ್ಲಿದೆ. ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ‘ಶಿವಾಜಿ ಸುರತ್ಕಲ್’ ಚಿತ್ರ ಮೂಡಿಬಂದಿದ್ದು ಆರಂಭದಿಂದ ಕುತೂಹಲ ಮೂಡಿಸಿದ್ದ ಈ ಚಿತ್ರ, ಟ್ರೈಲರ್ ಮೂಲಕ ಆ ಕೌತುಕವನ್ನು ದುಪ್ಪಟ್ಟು ಮಾಡಿದೆ.

    ರಮೇಶ್ ಅರವಿಂದ್ ಮೂರು ದಶಕಗಳ ಸಿನಿ ಜೀವನದಲ್ಲಿ ಇದೆ ಮೊದಲ ಬಾರಿ ಡಿಟೆಕ್ಟಿವ್ ಪಾತ್ರದಲ್ಲಿ ಬಣ್ಣಹಚ್ಚಿರೋದು ಈ ಚಿತ್ರದ ವಿಶೇಷ. ಚಿತ್ರದಲ್ಲಿ ನಾಯಕಿಯರಾಗಿ ರಾಧಿಕಾ ನಾರಾಯಣ್, ಆರೋಹಿ ಅಭಿನಯಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ವರ್ಕ್ ‘ಶಿವಾಜಿ ಸುರತ್ಕಲ್’ ಚಿತ್ರಕ್ಕಿದೆ.

    ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದ್ದು, ರೇಖಾ.ಕೆ.ಎನ್, ಅನೂಪ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ‘ಶಿವಾಜಿ ಸುರತ್ಕಲ್’ ಚಿತ್ರ ಫೆಬ್ರವರಿ 21ಕ್ಕೆ ಚಿತ್ರಮಂದಿರಕ್ಕೆ ಬರಲಿದೆ.