Tag: ak-47

  • ಜಾರ್ಖಂಡ್ ಸಿಎಂ ಆಪ್ತನ ಮನೆ ಮೇಲೆ ಇಡಿ ದಾಳಿ – 2 ಎಕೆ-47 ರೈಫಲ್‌ಗಳು ವಶ

    ಜಾರ್ಖಂಡ್ ಸಿಎಂ ಆಪ್ತನ ಮನೆ ಮೇಲೆ ಇಡಿ ದಾಳಿ – 2 ಎಕೆ-47 ರೈಫಲ್‌ಗಳು ವಶ

    ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಎನ್ನಲಾದ ಪ್ರೇಮ್ ಪ್ರಕಾಶ್ ಅವರ ನಿವಾಸದಲ್ಲಿ ಬುಧವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, 2 ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದೆ.

    100 ಕೋಟಿ ಗಣಿ ಹಗರಣದ ತನಿಖೆಯ ಭಾಗವಾಗಿ ನಡೆಸಿದ ದಾಳಿ ವೇಳೆ ಜಾರಿ ನಿರ್ದೇಶನಾಲಯ ಪ್ರಕಾಶ್ ಅವರ ರಾಂಚಿಯಲ್ಲಿರುವ ಮನೆಯಿಂದ 2 ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದೆ. ಆದರೆ ಹಗರಣದ ಬಗ್ಗೆ ಪ್ರಕಾಶ್ ಅಥವಾ ಸೊರೇನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಬಿಹಾರ ಸ್ಪೀಕರ್‌ ಸ್ಥಾನಕ್ಕೆ ವಿಜಯ್‌ ಕುಮಾರ್‌ ಸಿನ್ಹಾ ರಾಜೀನಾಮೆ

    ದಾಳಿ ವೇಳೆ ಕಪಾಟಿನೊಳಗಡೆ ರೈಫಲ್‌ಗಳು ಕಂಡುಬಂದಿದ್ದು, ಅವು ಕಾನೂನು ಬಾಹಿರವಾಗಿ ಇಟ್ಟುಕೊಳ್ಳಲಾಗಿದೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಇಡಿ ಅದನ್ನು ವಶಪಡಿಸಿಕೊಂಡಿದೆ. ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನ 20 ಸ್ಥಳಗಳಲ್ಲಿ ದಾಳಿ ನಡೆಸಿರುವುದಾಗಿ ಇಡಿ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ಉಗ್ರರ ಸಂಚು ವಿಫಲ – ಟ್ರಕ್ ಜಪ್ತಿ, 6 ಅಕ್ರಮ ಎಕೆ 47 ಗನ್ ಪತ್ತೆ

    ಉಗ್ರರ ಸಂಚು ವಿಫಲ – ಟ್ರಕ್ ಜಪ್ತಿ, 6 ಅಕ್ರಮ ಎಕೆ 47 ಗನ್ ಪತ್ತೆ

    ಶ್ರೀನಗರ: ಭಾರತದಲ್ಲಿ ಕೃತ್ಯ ಎಸಗಲು ಪಾಕಿಸ್ತಾನ ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುವ ಗುಪ್ತಚರ ವರದಿಯ ಬೆನ್ನಲ್ಲೇ ಟ್ರಕ್ ಮೂಲಕ ಅಕ್ರಮವಾಗಿ ಜಮ್ಮು ಕಾಶ್ಮೀರಕ್ಕೆ ಸಾಗಿಸಲಾಗುತ್ತಿದ್ದ 6 ಎಕೆ 47 ಗನ್ ಗಳನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಭಾರತದ ಮೇಲೆ ದಾಳಿ ಮಾಡಲು ಪಾಕ್ ಪ್ರೇರಿತ ಉಗ್ರರು ಕೃತ್ಯ ಎಸಗಲು ಭಾರೀ ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿ ಇರುವಾಗಲೇ ಟ್ರಕ್‍ನಲ್ಲಿ ಅಕ್ರಮ ರೈಫಲ್‍ಗಳು ಪತ್ತೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಅಮೃತಸರದಿಂದ ಜಮ್ಮು ಕಾಶ್ಮೀರ ಕಣಿವೆ ಪ್ರದೇಶಕ್ಕೆ ತೆರಳುತ್ತಿದ್ದ ಟ್ರಕ್ ಒಂದನ್ನು ಕಾಶ್ಮೀರ ಪೊಲೀಸರು ಲಖನ್ಪುರ ಪಟ್ಟಣದ ಬಳಿ ತಡೆ ಹಿಡಿದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6 ಸ್ವಯಂಚಾಲಿತ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಲಾರಿಯಲ್ಲಿ ಇದ್ದ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಈ ಲಾರಿ ಕಾಶ್ಮೀರದ ಜಮ್ಮುವಿನ ನಂಬರ್ ಪ್ಲೇಟ್ ಹೊಂದಿದ್ದು, ಸುಹಿಲ್ ಲಟೂ ಎಂಬ ಮಾಲೀಕನ ಹೆಸರಿನಲ್ಲಿ ನೋಂದಣಿಯಾಗಿದೆ. ಸದ್ಯ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಲಾರಿ ಚಾಲಕ ಹೆಸರು ಜಾವಿದ್ ದಾರ್ ಆಗಿದ್ದು, ಆತ ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿ ಆಗಿದ್ದಾನೆ.

    ಉಳಿದ ಮಾಹಿತಿಗಾಗಿ ಪೊಲೀಸರು ತನಿಖೆ ಮಾಡುತ್ತಿದ್ದು, ಈ ಲಾರಿ ಎಲ್ಲಿಗೆ ಹೋಗುತಿತ್ತು? ಲಾರಿಯಲ್ಲಿ ಸಿಕ್ಕಿರುವ ಎಕೆ-47 ರೈಫಲ್‍ಗಳು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತಿತ್ತು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಇತ್ತೀಚೆಗೆ ಈ ರೀತಿ ಎರಡು ಬಾರಿ ಲಾರಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು.

  • ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

    ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

    ಬಿಜೀಂಗ್: ಹಾಲಿವುಡ್ ನ ಸ್ಟಾರ್ ವಾರ್ಸ್ ಸಿನಿಮಾ ಶ್ರೇಣಿಯಲ್ಲಿ ಕಾಣಿಸಿಕೊಂಡಿರುವ ಕಾಲ್ಪಿನಿಕ ಗನ್ ಗೆ ಚೀನಾ ನೈಜ ರೂಪು ನೀಡಲು ಸಿದ್ಧತೆ ನಡೆಸಿದ್ದು, ಸುಮಾರು ಒಂದು ಕಿಮೀ ದೂರದ ಟಾರ್ಗೆಟ್ ಅನ್ನು ಹೊಡೆದುರುಳಿಸಬಲ್ಲ ಸುಧಾರಿತ ಗನ್ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ.

    ಮಾನವ ದೇಹಕ್ಕೆ ಅತ್ಯಂತ ಮಾರಣಾಂತಿಕ ಲೇಸರ್ ಕಿರಣವನ್ನು ಬಳಸಿಕೊಂಡು ಗನ್ ಅಭಿವೃದ್ಧಿ ಪಡಿಸುತ್ತಿದೆ. ಈ ಕುರಿತು ಸೌತ್ ಚೈನಾ ಮಾರ್ನಿಂಗ್ ಪತ್ರಿಕೆ ವರದಿ ಮಾಡಿದ್ದು, ಝಡ್‍ಕೆಝೆಎಂ-500 ಹೆಸರಿನ ಗನ್ ಅಭಿವೃದ್ಧಿ ಪಡಿಸುತ್ತಿರುವುದಾಗಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಸದ್ಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸುತ್ತಿರುವ ಗನ್ 3 ಕೆಜಿ ತೂಕ ಹೊಂದಿರಲಿದ್ದು, ಎಕೆ47 ಗನ್ ಮಾದರಿಯನ್ನು ಹೊಂದಿರುತ್ತದೆ. ಗನ್ ಸಾಮಥ್ರ್ಯ ಬರಿ ಕಣ್ಣಿಗೆ ಕಾಣದಷ್ಟು ಶಕ್ತಿಯನ್ನು ಹೊಂದಿರಲಿದ್ದು, ಎದುರಾಳಿ ದೇಹದ ಸೀಳುವಂತಹ ಶಕ್ತಿಯನ್ನು ಹೊಂದಿರುತ್ತದೆ. ಗನ್ ರಿಚಾರ್ಜ್ ಮಾಡಲು ಲಿಥಿಯಂ ಬ್ಯಾಟರಿ ಪವರ್ ಕೂಡ ನೀಡಲಾಗುತ್ತಿದ್ದು, 2 ಸೆಕೆಂಡ್ ಗೆ 1 ಸಾವಿರದಷ್ಟು ಲೇಸರ್ ಕಿರಣಗಳನ್ನು ಉಗುಳುವ ಸಾಮಥ್ರ್ಯ ಹೊಂದಿರುತ್ತದೆ. ಅಲ್ಲದೇ ಇದನ್ನು ಕಾರು, ಬೋಟ್ ಮತ್ತು ವಿಮಾನಗಳಲ್ಲಿ ಅಳವಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ.

    ಸದ್ಯ ಈ ಗನ್ ಗಳನ್ನು ಅಭಿವೃದ್ಧಿ ಪಡಿಸಿದ ಬಳಿಕ ಭಯೋತ್ಪಾದನ ಚಟುವಟಿಕೆ ನಡೆಸುವವರ ವಿರುದ್ಧ ಬಳಕೆ ಮಾಡಲು ಚೀನಾ ನಿರ್ಧರಿಸಿದ್ದು, ಗನ್ ಗಳ ಮೊದಲ ಸರಣಿಯನ್ನು ಬಿಡುಗಡೆಗೆ ಸಿದ್ಧಪಡಿಸಲಾಗುತ್ತಿದೆ. ಒಂದೊಮ್ಮೆ ಈ ಪ್ರಯೋಗ ಯಶಸ್ವಿಯಾದರೆ ಚೀನಾ ಅಗಾಧ ಪ್ರಮಾಣದ ಲಾಭ ಪಡೆಯಬಹುದಾಗಿದೆ. ಸದ್ಯ ಒಂದು ಗನ್‍ಬೆಲೆ 10 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

  • ಎಕೆ 47 ಹಿಡಿದುಕೊಂಡು ಕ್ರಿಕೆಟ್ ಆಡಿದ್ರು ಉಗ್ರರು! ವಿಡಿಯೋ ನೋಡಿ

    ಎಕೆ 47 ಹಿಡಿದುಕೊಂಡು ಕ್ರಿಕೆಟ್ ಆಡಿದ್ರು ಉಗ್ರರು! ವಿಡಿಯೋ ನೋಡಿ

    ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ತಂಡವೊಂದು ಎಕೆ 47 ಗನ್ ಗಳನ್ನು ವಿಕೆಟ್ ರೀತಿಯಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು 5 ನಿಮಿಷ ಇರುವ ವಿಡಿಯೋದಲ್ಲಿ 6 ಮಂದಿ ಆಡುವ ದೃಶ್ಯವಿದ್ದು, ಒಬ್ಬಾತ ಮೊಬೈಲ್ ನಲ್ಲಿ ಆಟವನ್ನು ಸೆರೆ ಹಿಡಿದಿದ್ದಾನೆ.

    ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಕ್ರಿಕೆಟ್ ಆಡಿದ್ದಾರೆ ಎಂದು ಹೇಳಲಾಗುತ್ತಿದ್ದು ಯಾವ ಸ್ಥಳದಲ್ಲಿ ಮತ್ತು ಯಾವಾಗ ಆಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

    ಈಗಾಗಲೇ ಭಾರತೀಯ ಸೇನೆ ಜಮ್ಮುಕಾಶ್ಮೀರದಲ್ಲಿ ಉಗ್ರರನ್ನು ಸಾವಿನ ಮನೆಗೆ ಕಳುಹಿಸುತ್ತಿದೆ. ಕೆಲ ತಿಂಗಳ ಕಾರ್ಯಾಚರಣೆಯಲ್ಲಿ ಸೇನೆ 90ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ.

  • ಕಾಶ್ಮೀರದಲ್ಲಿ ಎಕೆ-47 ರೈಫಲ್‍ನೊಂದಿಗೆ ಯೋಧ ನಾಪತ್ತೆ

    ಕಾಶ್ಮೀರದಲ್ಲಿ ಎಕೆ-47 ರೈಫಲ್‍ನೊಂದಿಗೆ ಯೋಧ ನಾಪತ್ತೆ

    ಶ್ರೀನಗರ: ಶಸ್ತ್ರಾಸ್ತ್ರ ಸಮೇತ ಸೇನಾ ಶಿಬಿರದಿಂದ ಓರ್ವ ಸೈನಿಕ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಗಂಟ್‍ಮುಲ್ಲಾ ಪ್ರದೇಶದಲ್ಲಿ ನಡೆದಿದೆ.

    ಬುಧವಾರ ತಡರಾತ್ರಿ ಎಕೆ-47 ರೈಫಲ್ ಹಾಗೂ 3 ಮ್ಯಾಗ್ಜಿನ್‍ಗಳೊಂದಿಗೆ ಯೋಧ ಜಹೂರ್ ಅಹಮದ್ ಠಾಕೂರ್ ಪಾರಾರಿಯಾಗಿದ್ದು, ಯೋಧನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪುಲ್ವಾಮಾ ಮೂಲದವರಾದ ತಾಕೂರ್ ಎಕೆ-47 ರೈಫಲ್‍ನೊಂದಿಗೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಠಾಕೂರ್ ಅವರು ಪ್ರಾದೇಶಿಕ ಸೈನ್ಯದ 173 ಬೆಟಾಲಿಯನ್‍ನಲ್ಲಿ ಎಂಜಿನಿಯರಿಂಗ್ ವಿಭಾದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.