Tag: Ajmer

  • ಅಜ್ಮೀರ್ ಹೋಟೆಲ್‌ನಲ್ಲಿ ಅಗ್ನಿ ಅವಘಡ – ಮಗುವನ್ನು ರಕ್ಷಿಸಲು 3ನೇ ಮಹಡಿಯಿಂದ ಎಸೆದ ತಾಯಿ

    ಅಜ್ಮೀರ್ ಹೋಟೆಲ್‌ನಲ್ಲಿ ಅಗ್ನಿ ಅವಘಡ – ಮಗುವನ್ನು ರಕ್ಷಿಸಲು 3ನೇ ಮಹಡಿಯಿಂದ ಎಸೆದ ತಾಯಿ

    • ನಾಲ್ವರು ಸಾವು, 8 ಮಂದಿಗೆ ಗಾಯ – ರಕ್ಷಣಾ ಕಾರ್ಯಾಚರಣೆ ವೇಳೆ ಮೂರ್ಛೆ ಹೋದ ಪೊಲೀಸರು!

    ಜೈಪುರ್‌: ಅಜ್ಮೀರ್‌ನ ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಮಹಿಳೆಯೊಬ್ಬರು ತಮ್ಮ ಮಗುವನ್ನು ರಕ್ಷಿಸಲು 3ನೇ ಮಹಡಿಯಿಂದ ಎಸೆದಿದ್ದಾರೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಹಲವರು ಗಾಯಗೊಂಡಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನ ಒಟ್ಟಾಗಿ ಓಡಿದ್ದರಿಂದ ನೂಕುನುಗ್ಗಲು ಸಂಭವಿಸಿತ್ತು. ಹೋಟೆಲ್‌ ಕಿರಿದಾದ ಓಣಿಯಲ್ಲಿದ್ದು, ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುವಾಗ ಅನೇಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೂರ್ಛೆ ಹೋಗಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ: ವಿಜಯೇಂದ್ರ

    ಅವಘಡದಲ್ಲಿ ಎಂಟು ಜನ ಗಾಯಗೊಂಡಿದ್ದಾರೆ. ಅವರನ್ನು ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ಈಗ ಮುಗಿದಿದೆ. ಬೆಂಕಿಯನ್ನು ನಂದಿಸಲಾಗಿದೆ ಎಂದು ನಗರ ಎಡಿಎಂ ಗಜೇಂದ್ರ ಸಿಂಗ್ ರಾಥೋಡ್ ದೃಢಪಡಿಸಿದ್ದಾರೆ. ಇನ್ನೂ, ವಿದ್ಯುತ್ ಫಲಕದಿಂದ ಬೆಂಕಿ ಹೊತ್ತಿಕೊಂಡಿತು. ಅದು ಸ್ವಲ್ಪ ಸಮಯದಲ್ಲೇ ಭಾರೀ ಅಗ್ನಿ ಅವಘಡಕ್ಕೆ ಕಾರಣವಾಯಿತು ಎಂದು ಹೋಟೆಲ್ ವ್ಯವಸ್ಥಾಪಕರು ಹೇಳಿದ್ದಾರೆ. ಇದನ್ನೂ ಓದಿ:‌ ಅಫ್ಘಾನ್‍ನಿಂದ ಭಾರತಕ್ಕೆ ಸರಕು ಸಾಗಾಟ – ಪಾಕ್‍ನಿಂದ ಅನುಮತಿ

  • ರೈಲು ಹಳಿ ಮೇಲೆ ಸಿಮೆಂಟ್ ಬ್ರಿಕ್ಸ್ – ಮತ್ತೊಂದು ದುಷ್ಕೃತ್ಯಕ್ಕೆ ಸಂಚು

    ರೈಲು ಹಳಿ ಮೇಲೆ ಸಿಮೆಂಟ್ ಬ್ರಿಕ್ಸ್ – ಮತ್ತೊಂದು ದುಷ್ಕೃತ್ಯಕ್ಕೆ ಸಂಚು

    – ರಾಜಸ್ಥಾನ ಅಜ್ಮೀರ್ ಬಳಿ ದೃಷ್ಕೃತ್ಯ

    ರಾಜಸ್ಥಾನ: ಕಾನ್ಪುರದ ಬಳಿಕ ರಾಜಸ್ಥಾನದ (Rajasthan) ಅಜ್ಮೇರ್‌ನಲ್ಲಿ (Ajmer) ಹಳಿ ಮೇಲೆ ವಸ್ತುಗಳನ್ನು ಇರಿಸಿ ರೈಲು ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಘಟನೆ ಬೆಳಕಿಗೆ ಬಂದಿದೆ.

    ಅಜ್ಮೀರ್‌ನಿಂದ ಅಹಮದಾಬಾದ್‌ಗೆ (Ahmedabad) ಹೋಗುವ ಮಾರ್ಗ ಮಧ್ಯೆ ಹಳಿಯ ಎರಡು ಬದಿಗಳಲ್ಲಿ ಸಿಮೆಂಟ್ ಇಟ್ಟಿಗೆ ಇರಿಸಲಾಗಿತ್ತು. ಸಿಮೆಂಟ್ ಇಟ್ಟಿಗೆಗೆ ಡಿಕ್ಕಿ ಹೊಡೆದರೂ ಗೂಡ್ಸ್ ರೈಲಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಬಳಿಕ ರೈಲ್ವೆ ಚಾಲಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!

    ಅಜ್ಮೀರ್‌ನ ಫುಲೇರಾದಿಂದ ಗುಜರಾತ್‌ನ (Gujarat) ಅಹಮದಾಬಾದ್‌ಗೆ ರೈಲು ಪ್ರಯಾಣಿಸುತ್ತಿದ್ದಾಗ ಮಂಗಳವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಇದನ್ನೂ ಓದಿ: ಬೇಲೂರು ಬಿಕ್ಕೋಡಿನಲ್ಲಿ ಜಲಕ್ರೀಡೆಯಾಡಿದ 20ಕ್ಕೂ ಹೆಚ್ಚು ಕಾಡಾನೆಗಳು

    ತಪಾಸಣೆ ನಡೆಸಿದಾಗ, ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ 100 ಕಿಲೋಗ್ರಾಂಗಳಷ್ಟು ತೂಕದ ದೊಡ್ಡ ಕಾಂಕ್ರೀಟ್ ಇಟ್ಟಿಗೆ ಇಡಲಾಗಿತ್ತು. ಈ ಸಂಬಂಧ ಮಾಂಗಲ್ಯವಾಸ್ ಠಾಣೆಯಲ್ಲಿ ಆರ್‌ಪಿಎಫ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

    ಭಾನುವಾರವಷ್ಟೇ ಕಾನ್ಪುರದಲ್ಲಿ (Kanpur) ಕಾಳಿಂದಿ ಎಕ್ಸ್ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್ ಇರಿಸಿದ್ದು, ರೈಲು ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು, ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತ ತಪ್ಪಿದೆ. ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆಗೆ (ಆರ್‌ಪಿಎಫ್) ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ರೈಲು ಅಪಘಾತವನ್ನು ತಪ್ಪಿಸಲಾಯಿತು. ಇದನ್ನೂ ಓದಿ: ಕಾರ್ಕಳ ರೇಪ್‌ ಕೇಸ್ ತನಿಖೆ ಚುರುಕು – ಮಾದಕ ವಸ್ತುಗಳ ಜಾಲದ ಬೆನ್ನು ಬಿದ್ದ ಖಾಕಿ

  • ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ

    ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ

    ಜೈಪುರ: ಜಮೀನಿನಲ್ಲಿ ಮಣ್ಣು ತೆಗೆಯುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಘಟನೆ ರಾಜಸ್ಥಾನದ (Rajasthan) ಅಜ್ಮೀರ್ (Ajmer) ಜಲ್ಲೆಯ ಬೇವಾರ್‌ನಲ್ಲಿ ನಡೆದಿದೆ.

    ಆರೋಪಿಯನ್ನು ಭ್ಗಾಗ ಎಂದು ಗುರುತಿಸಲಾಗಿದೆ. ಆರೋಪಿಯ ಸೋದರಳಿಯ ಹಮೀದ್‍ನ ಜಮೀನಿನಲ್ಲಿ ಮಣ್ಣು ತೆಗೆಯುತ್ತಿದ್ದ. ಇದನ್ನು ಪ್ರಶ್ನಿಸಿದ ಸೋದರಳಿಯನ ಮೇಲೆ ಆರೋಪಿ ತನ್ನ ಬಳಿ ಇದ್ದ ಡಬಲ್ ಬ್ಯಾರೆಲ್ ರೈಫಲ್‍ನಿಂದ (Double Barrel Rifle) ಗುಂಡು ಹಾರಿಸಿದ್ದಾನೆ. ತಕ್ಷಣವೇ ಗಾಯಗೊಂಡಿದ್ದ ಹಮೀದ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದಿಶಾ ಪಟಾನಿ ಜಿಪ್ ಲೆಸ್ ಪ್ಯಾಂಟ್ : ನೆಟ್ಟಿಗರಿಂದ ನಟಿಗೆ ಮಂಗಳಾರತಿ ಗುಂಡು ಹಾರಿಸುವ ದೃಶ್ಯವನ್ನು ಸಂತ್ರಸ್ತನೇ ಸೆರೆಹಿಡಿದಿದ್ದು, ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಓಟಿಪಿ ಬರದೇ ವೋಟಿಲ್ಲ- ಮೊಬೈಲ್ ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ

  • ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ 5 ಮಂದಿ ನೀರುಪಾಲು

    ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ 5 ಮಂದಿ ನೀರುಪಾಲು

    ಜೈಪುರ: ನವರಾತ್ರಿಯ ದುರ್ಗಾದೇವಿ ಮೂರ್ತಿ ವಿಸರ್ಜನೆಯ (Durga idol immersion) ವೇಳೆ ಮಳೆ ನೀರಿನಿಂದ ತುಂಬಿದ್ದ ಹಳ್ಳದಲ್ಲಿ (ditch) ಮುಳುಗಿ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಅಜ್ಮೇರ್‌ದಲ್ಲಿ (Ajmer) ಬುಧವಾರ ನಡೆದಿದೆ.

    ಮೃತರನ್ನು ಪವನ್ ರಾಯ್ಗರ್(35), ಗಜೇಂದ್ರ ರಾಯ್ಗರ್(28), ರಾಹುಲ್ ಮೇಘವಾಲ್(24), ಲಕ್ಕಿ ಬೈರ್ವಾ(21) ಹಾಗೂ ರಾಹುಲ್ ರಾಯ್ಗರ್(20) ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

    ವರದಿಗಳ ಪ್ರಕಾರ ಯುವಕರು ಮೂರ್ತಿ ವಿಸರ್ಜನೆಗೆಂದು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಹಳ್ಳ ಹೆಚ್ಚು ಆಳವಿಲ್ಲ ಎಂದು ಭಾವಿಸಿ ಯುವಕರು ಕೆಳಗೆ ಇಳಿದಿದ್ದು, ಅದು ಹೆಚ್ಚು ಆಳವಿದ್ದುದರಿಂದ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಸಿಬ್ಬಂದಿಯಿಂದಲೇ 12 ಕೋಟಿ ದರೋಡೆ – ಗುರುತು ಮುಚ್ಚಿಡಲು ಬುರ್ಕಾ ಧರಿಸಿದ

    ಘಟನೆ ನಾಸಿರಾಬಾದ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

    ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

    ಜೈಪುರ: ಸಹಜವಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಥವಾ ಜೈಲಿನಲ್ಲಿರುವ ಕೈದಿಗಳಿಗೆ ತುರ್ತು ಅಥವಾ ಅನಿವಾರ್ಯ ಕಾರಣಗಳಿಗೆ ಪೆರೋಲ್ ನೀಡಲಾಗುತ್ತದೆ. ಆದರೆ, ಇಲ್ಲೊಬ್ಬ ಕೈದಿಗೆ ಹೆಂಡತಿಯನ್ನು ಗರ್ಭಿಣಿ ಮಾಡಲು ರಾಜಸ್ಥಾನ್ ಹೈಕೋರ್ಟ್ 15 ದಿನ ಪೆರೋಲ್ ಮಂಜೂರು ಮಾಡಿದೆ.

    pregnent woman

    ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರ ದ್ವಿಸದಸ್ಯ ಪೀಠವು ಅಜ್ಮೀರ್ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 34 ವರ್ಷದ ನಂದ್‌ಲಾಲ್ (ಕೈದಿ) ಅವರ ಪತ್ನಿ ರೇಖಾ ಅವರ ಸಂತಾನದ ಹಕ್ಕು ಆಧಾರದ ಮೇಲೆ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ಚಾಮರಾಜನಗರದ ಲಿಪ್‌ಲಾಕ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಪೊಲೀಸರು 

    ಇದಕ್ಕಾಗಿ 50 ಸಾವಿರ ರೂ.ಗಳ ವೈಯಕ್ತಿಕ ಜಾಮೀನು ಬಾಂಡ್ ಹಾಗೂ ತಲಾ 25,000ಕ್ಕೆ ಎರಡು ಜಾಮೀನು ಬಾಂಡ್‌ಗಳನ್ನು ಪೆರೋಲ್‌ಗೆ ನೀಡಿದ್ದು, ಏಪ್ರಿಲ್ 20ರಿಂದ 15 ದಿನಗಳವರೆಗೆ ಕೈದಿಯನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: 13 ವರ್ಷದ ಬಾಲಕಿ ಮೇಲೆ 80 ಮಂದಿ 8 ತಿಂಗಳಿಂದ ಅತ್ಯಾಚಾರ

    court order law

    ಅಪರಾಧಿಯ ಜೈಲುವಾಸ ಆತನ ಹೆಂಡತಿಯ ಲೈಂಗಿಕ ಅಪೇಕ್ಷೆಗಳು ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಋಗ್ವೇದ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಕೈದಿಗಳಿಗೆ 15 ದಿನಗಳ ಪೆರೋಲ್ ನೀಡಲು ಅವರು ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಪರಿಗಣಿಸಲಾಗಿದೆ. 16 ಸಂಸ್ಕಾರಗಳಲ್ಲಿ ಮಗುವನ್ನು ಗರ್ಭಧರಿಸುವುದು ಮಹಿಳೆಯ ಮೊದಲ ಮತ್ತು ಅಗತ್ಯ ಹಕ್ಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿ ಕೈದಿಗೆ ಪೆರೋಲ್ ನೀಡಿದೆ.

  • ಚಿನ್ನಾಭರಣ ಸಮೇತ ಗ್ಯಾಸ್ ಸಿಲಿಂಡರ್ ಹೊತ್ತೊಯ್ದ ಕಳ್ಳರು

    ಚಿನ್ನಾಭರಣ ಸಮೇತ ಗ್ಯಾಸ್ ಸಿಲಿಂಡರ್ ಹೊತ್ತೊಯ್ದ ಕಳ್ಳರು

    – 50 ಸಾವಿರ ನಗದು, ದುಬಾರಿ ಬಟ್ಟೆ ಕಳ್ಳತನ

    ಜೈಪುರ: ಚಿನ್ನಾಭರಣ ಸಮೇತ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಕಳ್ಳರು ಹೊತ್ತೊಯ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮನೆಯ ಮಾಲೀಕರು ವೈದ್ಯಕೀಯ ಚೆಕಪ್ ಗಾಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ.

    ಅಜ್ಮೇರ್ ಜಿಲ್ಲೆಯ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಶೀಲ ಬಿ ಬ್ಲಾಕ್ ನಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಮಾಲೀಕ ದೀಪ್‍ಚಂದ್ ಗುಪ್ತಾ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಗುಪ್ತಾ ಕುಟುಂಬದ ಜೊತೆ ಉದಯಪುರಕ್ಕೆ ತೆರಳಿದ್ದರು. ಮನೆಗೆ ಬಂದಾಗ ಹಾಕಿದ್ದ ಬೀಗ ಮುರಿಯಲಾಗಿತ್ತು. ಮನೆಯಲ್ಲಿದ್ದ 50 ಸಾವಿರ ನಗದು, ಚಿನ್ನಭರಣ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನವಾಗಿದೆ.

    ಕಳ್ಳತನ ಸಂಬಂಧ ಗುಪ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 50 ಸಾವಿರ ನಗದು, ಚಿನ್ನದ ಮಂಗಲಸೂತ್ರ, ಕುಂಡಲ್, ಕಾಲ್ಗೆಜ್ಜೆ, ಕೆಲ ದುಬಾರಿ ಬೆಲೆಯ ಬಟ್ಟೆ ಮತ್ತು ಗ್ಯಾಸ್ ಸಿಲಿಂಡರ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ತಬ್ಲಿಘಿ ಬಳಿಕ ಅಜ್ಮೀರ ನಂಜು – ಬೆಳಗಾವಿ ಎಸ್‍ಪಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಬ್ಲಿಘಿ ಬಳಿಕ ಅಜ್ಮೀರ ನಂಜು – ಬೆಳಗಾವಿ ಎಸ್‍ಪಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ/ಚಿಕ್ಕೋಡಿ: ಭಾನುವಾರ ಬೆಳಗಾವಿ ಜಿಲ್ಲೆಯ ಜನ ಸಂಡೇ ಮೂಡ್‍ನಲ್ಲಿರುವಾಗಲೇ ರಾಜ್ಯದ ಹೆಲ್ತ್ ಬುಲೆಟಿನ್ ದೊಡ್ಡ ಆಘಾತವನ್ನೇ ನೀಡಿದೆ. ಇಂದು ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲೆಟಿನ್ ನಲ್ಲಿ ಅಜ್ಮೀರದಿಂದ ಬೆಳಗಾವಿಗೆ ಮರಳಿ ಬಂದ 22 ಜನರಿಗೆ ಕೊರೊನಾ ಸೋಂಕು ಇರುವದು ದೃಢವಾಗಿದ್ದು, ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ 107ಕ್ಕೇ ಏರಿದೆ. ಕೊರೊನಾ ವೈರಸ್ ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹಾ ದಾಳಿ ನಡೆಸಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ 22 ಸೋಂಕಿತರು ಪತ್ತೆಯಾಗಿದ್ದು, ಇವರೆಲ್ಲರೂ ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ಭಾಗದವರು ಎಂದು ತಿಳಿದು ಬಂದಿದೆ.

    ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಸಿ ಮಂದಿರಗಳಲ್ಲಿ ಅಡುಗೆ ಕೆಲಸವನ್ನು ಈ ಕುಟುಂಬಗಳು ಮಾಡುತ್ತಿದ್ದವು. ತಬ್ಲಿಘ್ ಜಮಾತ್ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೀರ್ ರಿಟರ್ನ್ ನಂಟು ಶುರುವಾಗಿದೆ. ಅಜ್ಮೀರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ. ಅಜ್ಮೀರ ಪ್ರವಾಸಕ್ಕೆ ತೆರಳಿ ವಾಪಸ್ ರಾಜ್ಯಕ್ಕೆ ಆಗಮಿಸಿದ್ದ 38 ಜನ ಪ್ರವಾಸಿಗರಲ್ಲಿ 31 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಬೆಳಗಾವಿಯ 22 ಜನ ಹಾಗೂ 8 ಬಾಗಲಕೋಟೆಯವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಮಾರ್ಚ್ 17ರಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 7 ಕುಟುಂಬಗಳ 38 ಜನ ಸೇರಿ ಅಜ್ಮೀರಕ್ಕೆ ಬೆಳಗಾವಿಯಿಂದ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು. ಮೂರು ದಿನ ಅಜ್ಮೀರ ಪ್ರವಾಸದ ಬಳಿಕ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ದಿನಗಳ ಕಾಲ ಅಜ್ಮೀರದಲ್ಲಿಯೇ ಉಳಿದಿದ್ದರು. ಬಳಿಕ ಅಜ್ಮೀರದಿಂದ ಅನುಮತಿ ಪಡೆದು ಮೇ. 3ರಂದು ಬೆಳಗಾವಿ ಗಡಿಯ ಕುಗನೊಳ್ಳಿಗೆ ಆಗಮಿಸಿದ್ದರು. ಬಳಿಕ ಜಿಲ್ಲಾಡಳಿತ ಅಜ್ಮೀರದಿಂದ ಬಂದ ಎಲ್ಲರನ್ನೂ ನಿಪ್ಪಾಣಿಯ ಗವಾನಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಹಾರಾಷ್ಟ್ರದ ಗಡಿಯಿಂದ ಈ ಕುಟುಂಬಗಳನ್ನು ಕರ್ನಾಟಕಕ್ಕೆ ಪ್ರವೇಶ ನೀಡಿ ಕ್ವಾರಂಟೈನ್ ಮಾಡಿಸಿದ್ದರು. ಹೀಗಾಗಿ ಎಸ್‍ಪಿ ಅವರ ಈ ನಿರ್ಧಾರದಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಈ ಕುಟುಂಬಗಳು ಬಂದ ಸಂದರ್ಭದಲ್ಲಿ ಇವರ ಕೆಲ ಸಂಬಂಧಿಗಳು ಹಾಗೂ ಅವರ ಸ್ನೇಹಿತರು ಅವರನ್ನು ಭೇಟಿ ಆಗಿ ಊಟ ನೀಡಿ ಬಂದಿದ್ದಾರೆ. ಈಗ ಅವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.

  • ನಮಗೆ ರಾಜಸ್ಥಾನದಲ್ಲಿ ಗಂಟಲು ದ್ರವದ ಪರೀಕ್ಷೆ ಮಾಡಿಲ್ಲ: ಅಜ್ಮೀರ್ ಯಾತ್ರಿ

    ನಮಗೆ ರಾಜಸ್ಥಾನದಲ್ಲಿ ಗಂಟಲು ದ್ರವದ ಪರೀಕ್ಷೆ ಮಾಡಿಲ್ಲ: ಅಜ್ಮೀರ್ ಯಾತ್ರಿ

    ಬೆಂಗಳೂರು: ನಮಗೆ ಗಂಟಲು ದ್ರವದ ಪರೀಕ್ಷೆಯನ್ನು ರಾಜಸ್ಥಾನ ಸರ್ಕಾರ ಮಾಡಿಲ್ಲ ಎಂದು ಅಜ್ಮೀರ್ ದರ್ಗಾಕ್ಕೆ ಹೋಗಿದ್ದ ಯಾತ್ರಿ ದಾವಲ್ ಅವರು ಹೇಳಿದ್ದಾರೆ.

    ರಾಜಸ್ಥಾನದ ಅಜ್ಮೀರ್‍ನಲ್ಲಿರುವ ದರ್ಗಾಕ್ಕೆ ಹೋಗಿ ರಾಜ್ಯಕ್ಕೆ ವಾಪಸ್ ಅದ ಸುಮಾರು 38 ಜನರ ಪೈಕಿ 31 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಈ ಯಾತ್ರಿಗಳ ಗಂಟಲು ದ್ರವನ್ನು ಪರೀಕ್ಷೆ ಮಾಡದೇ ಕೇವಲ ಬ್ಲಡ್ ಟೆಸ್ಟ್ ಮಾಡಿ ರಾಜಸ್ಥಾನ ಸರ್ಕಾರ ನೆಗೆಟಿವ್ ಎಂದು ರೀಪೋರ್ಟ್ ನೀಡಿರುವ ಭಯಾನಕ ವಿಚಾರ ತಿಳಿದು ಬಂದಿದೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ದಾವಲ್ ಅವರು, ನಾವು 38 ಮಂದಿ ಒಟ್ಟಿಗೆ ಮಾರ್ಚ್ 19 ರಂದು ಅಜ್ಮೀರ್ ಗೆ ಹೋಗಿದ್ದೇವು. ಜೊತೆಗೆ ನಾವು ಮಾರ್ಚ್ 22ರಂದು ವಾಪಸ್ ಬರಬೇಕಿತ್ತು. ಆದರೆ ಲಾಕ್‍ಡೌನ್ ಆದ ಕಾರಣ ಅಲ್ಲೇ ಸಿಕ್ಕಿ ಹಾಕಿಕೊಂಡಿವೆ. ಆ ದರ್ಗಾಗೆ ವಿವಿಧ ರಾಜ್ಯದ ಸುಮಾರು 4 ಸಾವಿರ ಮಂದಿ ಬಂದಿದ್ದರು. ನಮ್ಮ ರಾಜ್ಯದಿಂದಲೂ ಸುಮಾರು 400 ರಿಂದ 500 ಜನ ಹೋಗಿದ್ದೇವು ಎಂದು ಹೇಳಿದ್ದಾರೆ.

    ಲಾಕ್‍ಡೌನ್ ಆದ ನಂತರ ನಾವು ಅಲ್ಲೇ ಉಳಿದಿದ್ದೇವು. ರಾಜಸ್ಥಾನದಲ್ಲಿ ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ನಮ್ಮನ್ನು ಪರೀಕ್ಷೆ ಮಾಡಿದರು. ಥರ್ಮಲ್ ಟೆಸ್ಟ್ ಮತ್ತು ಬ್ಲಡ್ ಪರೀಕ್ಷೆ ಮಾಡಿದರು. ಗಂಟಲು ದ್ರವದ ಪರೀಕ್ಷೆ ಮಾಡಲಿಲ್ಲ. ನಂತರ ನಮಗೆ ವರದಿ ನೀಡಿದ್ದು, ನಮ್ಮೆಲ್ಲರ ವರದಿ ನೆಗೆಟಿವ್ ಬಂದಿತ್ತು. ಹೀಗಾಗಿ ನಾವು ನಮ್ಮ ಸ್ವಂತ ಹಣದಿಂದ ಬಸ್ಸನ್ನು ಮಾಡಿಕೊಂಡು ರಾಜ್ಯಕ್ಕೆ ವಾಪಸ್ ಬಂದಿದ್ದೇವೆ ಎಂದು ದಾವಲ್ ತಿಳಿಸಿದ್ದಾರೆ.

    ನಾವು ರಾಜಸ್ಥಾನದಿಂದ ಬರುವಾಗ ಮಧ್ಯೆ ಎಲ್ಲಿಯೂ ಕೆಳಗೆ ಇಳಿದಿಲ್ಲ. ನೇರವಾಗಿ ರಾಜ್ಯಕ್ಕೆ ಬಂದಿದ್ದೇವೆ. ಅಲ್ಲಿಂದ ನಮ್ಮನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ನಡುವೆ ನಮಗೆ ಕೊರೊನಾ ಹೇಗೆ ಬಂತು ಎಂದು ಗೊತ್ತಿಲ್ಲ. ಕರ್ನಾಟಕಕ್ಕೆ ಬಂದ ನಂತರ ನಮ್ಮ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಯಿತು. ಆದರೆ ರಾಜಸ್ಥಾನದಲ್ಲಿ ಮಾಡಿರಲಿಲ್ಲ. ಈ ಕಾರಣದಿಂದ ಬಂದಿರಬಹುದು ಎಂದು ದಾವಲ್ ಒಪ್ಪಿಕೊಂಡಿದ್ದಾರೆ.

  • ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ಜೈಪುರ: ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ ತೆಗೆಯುವುದು ವಿಡಿಯೋ ಮಾಡುವುದು ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡು ಎಫ್‍ಐಆರ್ ದಾಖಲಿಸಲಾಗುವುದು ಎಂದು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಕೊರೊನಾ ವೈರಸ್ ಭೀತಿಗೆ ದೇಶ ಲಾಕ್‍ಡೌನ್ ಆಗಿ 15ಕ್ಕೂ ಹೆಚ್ಚಿನ ದಿನಗಳಾಗಿವೆ. ಈ ನಡುವೆ ಕೆಲವರಿಗೆ ಊಟ ನೀರು ಸಿಗದೆ ಪರಾದಾಡುತ್ತಿದ್ದಾರೆ. ಈ ರೀತಿಯ ನಿರ್ಗತಿಕರಿಗೆ ಕೆಲವರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಅಜ್ಮೀರ್ ಜಿಲ್ಲೆಯ ಡಿಸಿ ವಿಶ್ವ ಮೋಹನ್ ಶರ್ಮಾ ಆದೇಶ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿ ವಿಶ್ವ ಮೋಹನ್ ಶರ್ಮಾ, ಲಾಕ್‍ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಬಡವರಿಗೆ ಆಹಾರ ನೀಡುವುದು ಒಳ್ಳೆಯ ಕೆಲಸ. ದೇಶ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಜನರಿಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಆದರೆ ಇದನ್ನೇ ಮುಂದೆ ಇಟ್ಟುಕೊಂಡು ಬಡವರಿಗೆ ಸಹಾಯ ಮಾಡಿ ಅದರ ಫೋಟೋ ತಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

    ಊಟವಿಲ್ಲದವರಿಗೆ ಆಹಾರ ನೀಡಿ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಇದರಿಂದ ಅವರಿಗೇ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಜೊತೆಗೆ ಎಫ್‍ಐಆರ್ ಕೂಡ ಹಾಕಲಾಗುವುದು ಎಂದು ಡಿಸಿ ವಾರ್ನಿಂಗ್ ನೀಡಿದ್ದಾರೆ.

    ಕಳೆದ 16 ದಿನಗಳಿಂದ ದೇಶದಲ್ಲಿ ಹಲವಾರು ಜನರು ಸಂಸ್ಥೆಗಳು ಸೆಲೆಬ್ರಿಟಿಗಳು ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿವೆ. ಆದರೆ ಇದರ ಜೊತೆ ಕೆಲ ಜನರು ಮಾಡಿರುವ ಸಹಾಯವನ್ನು ಫೋಟೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಜ್ಮೀರ್ ಜಿಲ್ಲೆಯಲ್ಲಿ ಆಹಾರವಿಲ್ಲದವರಿಗೆ ಎರಡು ಬಾಳೆಹಣ್ಣು ನೀಡಿ ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಕಾರಣದಿಂದ ಡಿಸಿ ಈ ಆದೇಶ ಹೊರಡಿಸಿದ್ದಾರೆ.

  • ಚುನಾವಣೆಯ ಜಯಕ್ಕಾಗಿ ಅಜ್ಮೀರ್ ದರ್ಗಾಗೆ ರಾಹುಲ್ ಚಾದರ್ ಅರ್ಪಣೆ

    ಚುನಾವಣೆಯ ಜಯಕ್ಕಾಗಿ ಅಜ್ಮೀರ್ ದರ್ಗಾಗೆ ರಾಹುಲ್ ಚಾದರ್ ಅರ್ಪಣೆ

    ಜೈಪುರ್: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲಿ ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚಾದರ್ ಅರ್ಪಿಸಿದ್ದಾರೆ.

    ರಾಜಸ್ಥಾನ ಅಜ್ಮೀರ್ ನಲ್ಲಿರುವ 13ನೇ ಶತಮಾನದ ಸೂಫಿ ಸಂತ ಖ್ವಾಜಾ ಮೊಹಿನ್ನುದ್ದಿನ್ ಚಿಷ್ಠಿ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ, ಚಾದರ್ ಸಮರ್ಪಿಸಿದ್ದಾರೆ. ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನು ಓದಿ: ಬಿಜೆಪಿ ತೊರೆದ ನಾಯಕರೇ ಕಾಂಗ್ರೆಸ್‍ಗೆ ಅಸ್ತ್ರವಾದ್ರು

    ಈ ವೇಳೆ ರಾಜಸ್ಥಾನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಾಜರಿದ್ದರು. ಈ ಮೂಲಕ ರಾಹುಲ್ ಗಾಂಧಿ ವಿಧಾನಸಭೆ ಗೆಲುವಿಗಾಗಿ ದರ್ಗಾ ಮೊರೆ ಹೋಗಿದ್ದು, ಬಳಿಕ ಪುಷ್ಕರ್ ಗೆ ತೆರಳಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಇದನ್ನು ಓದಿ: ಬಿಜೆಪಿಯಿಂದ ಮತ್ತೊಬ್ಬ ನಾಯಕ ಕಾಂಗ್ರೆಸ್‍ಗೆ ಜಂಪ್

    ರಾಜಸ್ಥಾನ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ನವೆಂಬರ್ 12ರಂದು ಪೂರ್ಣಗೊಂಡಿದ್ದು, ಡಿಸೆಂಬರ್ 7ರಂದು ಮತದಾನ ನಡೆಯಲಿದೆ. ಹೀಗಾಗಿ ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಇಳಿದಿದ್ದಾರೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾನವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv