Tag: ajmad baig

  • ಅಪ್ಪ-ಅಮ್ಮನ ಹೆಸ್ರನ್ನೇ ರಸ್ತೆಗೆ ನಾಮಕರಣ ಮಾಡಲು ಮುಂದಾದ ಅಜ್ಮದ್ ಬೇಗ್

    ಅಪ್ಪ-ಅಮ್ಮನ ಹೆಸ್ರನ್ನೇ ರಸ್ತೆಗೆ ನಾಮಕರಣ ಮಾಡಲು ಮುಂದಾದ ಅಜ್ಮದ್ ಬೇಗ್

    ಬೆಂಗಳೂರು: ಬಾಪೂಜಿನಗರದ ರಸ್ತೆಗಳಿಗೆ ಮರುನಾಮಕಾರಣ ವಿವಾದ ಮತ್ತೆ ಸುದ್ದಿಯಾಗಿದೆ. ಬಾಪೂಜಿನಗರ ವಾರ್ಡ್ ಕಾರ್ಪೋರೇಟರ್ ಅಜ್ಮದ್ ಬೇಗ್ ಅವರ ತಂದೆ – ತಾಯಿ ಹೆಸರನ್ನೇ ನಾಮಕರಣ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಬಂದಿದೆ.

    ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ರಸ್ತೆಗೆ “ಗಪೂರ್ ರಸ್ತೆ ಮತ್ತು ಪೈಪ್‍ಲೈನ್ ರೈಲ್ವೆ ಗೇಟ್ ಅಂಡರ್‍ಪಾಸ್ ನಿಂದ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಮಿಷಿನ್ ಎಚ್ ಸ್ವೀಟ್ ರಸ್ತೆಗೆ ಫಾತಿಮಾ ಬೀ ಬಡಾವಣೆ ಎಂದು ಹೆಸರಿಡಲು ಪಾಲಿಕೆಯಲ್ಲಿ ಅನುಮೋದನೆ ಸಿಕ್ಕಿದೆ. ಇದು ಗಪೂರ್ ಮತ್ತು ಫಾತಿಮಾ ಎಂಬ ಹೆಸರುಗಳು ಕಾರ್ಪೋರೆಟರ್ ತಂದೆ – ತಾಯಿಯದು ಎಂಬ ಮಾಹಿತಿ ಹರಿದಾಡುತ್ತಿದೆ.

    ಈ ಬೆಳವಣಿಗೆ ಕಾರ್ಪೋರೇಟರ್ ವಿರುದ್ಧ ಮತ್ತಷ್ಟು ವಿವಾದವನ್ನ ಸೃಷ್ಟಿಸಿದೆ. ಇಷ್ಟಾದ್ರೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ ಜಿ .ಪರಮೇಶ್ವರ್ ಮಾತ್ರ ಪ್ರಸ್ತಾವನೆ ಸರ್ಕಾರದ ಅಂಗಳ ತಲುಪಿದಾಗ ಕ್ರಮ ಕೈಗೊಳ್ಳುವೆ ಎಂದಿದ್ದಾರೆ.

    ಹಾಗಾದ್ರೆ ಯಾವ ರೋಡ್ ಗೆ ಯಾವ ಹೆಸ್ರಿಟ್ಟಿದ್ದಾರೆ ಅಂತ ನೋಡೋದಾದ್ರೆ..
    * ಶಾಮಣ್ಣ ಗಾರ್ಡನ್ ಅಂಡರ್‍ಪಾಸ್‍ನ ಅಂಡರ್ ಪಾಸ್ ರಸ್ತೆಗೆ ಗಪೂರ್ ರೋಡ್
    * ಸುನ್ನಿ ಚೌಕ್‍ನಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರೋಡ್‍ಗೆ ಸುಬಾನಿಯಾ ಮಸೀದಿ ರೋಡ್
    * ಸಂತೋಷ್ ಟೆಂಟ್‍ನಿಂದ ಶೋಭಾ ಟೆಂಟ್‍ವರೆಗಿನ ರೋಡ್‍ಗೆ ಜಾಮಿಯಾ ಮಸೀದಿ ರೋಡ್
    * ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸ್ತೆಗೆ ಖುದಾದತ್ ಮಸೀದಿ ರೋಡ್


    * ಬಾಪೂಜಿನಗರ 1ನೇ ಮೇನ್ ರೋಡ್‍ಗೆ ಹೀರಾ ಮಸೀದಿ ರೋಡ್
    * ಪೈಪ್‍ಲೈನ್ ರೈಲ್ವೇ ಗೇಟ್ ಅಂಡರ್‍ಪಾಸ್‍ನಿಂದ ರಾಗಿ ಮಿಷನ್ ಹೆಚ್ ಸ್ಟ್ರೀಟ್‍ವರೆಗಿನ ಪ್ರದೇಶಕ್ಕೆ ಫಾತೀಮಾ ಬೀ ಬಡಾವಣೆ
    * ಪೈಪ್‍ಲೈನ್ ರಸ್ತೆ, 6ನೇ ಮುಖ್ಯರಸ್ತೆಯಿಂದ ಸ್ಟಾರ್ಮ್‍ವಾಟರ್ ಡ್ರೈನ್‍ವರೆಗಿನ ಪ್ರದೇಶಕ್ಕೆ ಅಮಿರ್ ಕಲಿಮಿ ನಗರ

    ಸದ್ಯ ಅಪ್ಪ- ಅಮ್ಮನ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಪಾಲಿಕೆಯಲ್ಲಿ ಒಪ್ಪಿಗೆ ಪಡೆದಿದ್ದ ಅಜ್ಮದ್ ಬೇಗ್ ನಡೆಗೆ ಬಿಜೆಪಿ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv