Tag: Ajjampur

  • ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಕೊಲೆ – ಕಿಲಾಡಿ ಸೊಸೆ, ಪ್ರಿಯಕರ ಅರೆಸ್ಟ್

    ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಕೊಲೆ – ಕಿಲಾಡಿ ಸೊಸೆ, ಪ್ರಿಯಕರ ಅರೆಸ್ಟ್

    ಚಿಕ್ಕಮಗಳೂರು: ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯನ್ನು ಕೊಲೆ ಮಾಡಿದ್ದ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು (Lover) ಅಜ್ಜಂಪುರ (Ajjampur) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಆಶ್ವಿನಿ ಹಾಗೂ ಆಂಜನೇಯ ಎಂದು ಗುರುತಿಸಲಾಗಿದೆ. ಆರೋಪಿಗಳು ಆ.10 ರಂದು ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆ ದೇವಿರಮ್ಮಳನ್ನು ಕೊಂದಿದ್ದರು. ಬಳಿಕ ಮನೆಯಲ್ಲಿ ಹಣ ಕದ್ದಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಮಾಜಿ ಸಚಿವರ ಮನೆಯಲ್ಲಿ 7 ಲಕ್ಷ ನಗದು, ಚಿನ್ನಾಭರಣ ದೋಚಿದ ನೇಪಾಳಿ ದಂಪತಿ

    ಆರಂಭದಲ್ಲಿ ಕುಟುಂಬಸ್ಥರು ಸಹಜ ಸಾವು ಎಂದು ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಆದರೆ ಹಣ ಕಳ್ಳತನ ಆಗಿದ್ದು ಗಮನಿಸಿ, ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು,  ಸೊಸೆಯ ವಿಚಾರಣೆ ನಡೆಸಿದ್ದರು. ಈ ವೇಳೆ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಆ.28ರಂದು ಹೂತ ಶವ ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

    ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 218 ಗ್ರಾಂ ಚಿನ್ನ (Gold), 16 ಲಕ್ಷ ರೂ. ಮೌಲ್ಯದ ಟಿಟಿ ವಾಹನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎನ್.ಆರ್‌ಪುರ | ಸ್ಮಶಾನವಿಲ್ಲದೇ ಭದ್ರಾ ನದಿಯ ನಡುಗಡ್ಡೆಯಲ್ಲಿ ಶವಸಂಸ್ಕಾರ – 20 ವರ್ಷಗಳಿಂದ ಸಮಸ್ಯೆಗೆ ಸಿಗದ ಮುಕ್ತಿ 

  • ಚಿರತೆಯ ಬೋನಿನ ಬಾಗಿಲು ತೆರೆದು ಅಧಿಕಾರಿಗಳ ಯಡವಟ್ಟು – ಸ್ಥಳೀಯರ ಆಕ್ರೋಶ

    ಚಿರತೆಯ ಬೋನಿನ ಬಾಗಿಲು ತೆರೆದು ಅಧಿಕಾರಿಗಳ ಯಡವಟ್ಟು – ಸ್ಥಳೀಯರ ಆಕ್ರೋಶ

    ಚಿಕ್ಕಮಗಳೂರು: ಬೋನಿನಲ್ಲಿ ಸೆರೆಯಾದ ಚಿರತೆಯನ್ನು (Leopard) ಹತ್ತಿರದಿಂದ ನೋಡಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಬಾಗಿಲನ್ನು ತೆಗೆದು ಅದನ್ನು ಕೆರಳಿಸಿದ ಘಟನೆ ಅಜ್ಜಂಪುರ (Ajjampur) ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಯ ಈ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ನಾರಾಯಣಪುರ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು. ಜನ ಹೊಲ, ಹದ್ದೆ-ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಮಕ್ಕಳು ಕೂಡ ಶಾಲೆಗೆ ಹೋಗಲು ಭಯಪಡುತ್ತಿದ್ದರು. ಹಾಗಾಗಿ ಅರಣ್ಯ ಇಲಾಖೆಯವರು (Forest Department) ಗ್ರಾಮದ ಶಿವಯ್ಯ ಎಂಬವರ ಮನೆ ಬಳಿ ಬೋನನ್ನು ಇಟ್ಟಿದ್ದರು. ಶುಕ್ರವಾರ (ಆ.15) ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತ್ತು. ಇದನ್ನೂ ಓದಿ: ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ – ತುರ್ತು ಭೂಸ್ಪರ್ಶ; ತಪ್ಪಿದ ದುರಂತ

    ಇಂದು (ಆ.16) ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಯಾಗಿದ್ದ ಬೋನಿನ ಬಾಗಿಲನ್ನ ಅರ್ಧ ತೆಗೆದು ಅದನ್ನು ಕೆರಳಿಸಿದ್ದಾರೆ. ಚಿರತೆ ಭಯವಾಗಿ ದಾಳಿಗೆ ಯತ್ನಿಸಿದಾಗ ತಕ್ಷಣ ಬಾಗಿಲು ಹಾಕಿದ್ದಾರೆ. ಅಧಿಕಾರಿಗಳ ಈ ವರ್ತನೆಯ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಪಾಯಕಾರಿ ಪ್ರಾಣಿಯ ಜೊತೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ – ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ

  • ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ

    ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ

    ಚಿಕ್ಕಮಗಳೂರು: ಟಿಕೆಟ್ ಸಿಗದ ಹಿನ್ನೆಲೆ ಮನನೊಂದು ಬಿಜೆಪಿ ಕಾರ್ಯಕರ್ತನೋರ್ವ (BJP Worker) 100 ಅಡಿ ಎತ್ತರದ ಟವರ್ (Tower) ಏರಿ ಆತ್ಮಹತ್ಯೆಯ ಬೆದರಿಕೆ ಒಡ್ಡಿರುವ ಘಟನೆ ಜಿಲ್ಲೆಯ ಅಜ್ಜಂಪುರ (Ajjampur) ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

    ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿರುವ ರಂಗಪ್ಪ ಬೋವಿಯನ್ನು ಕೆಳಗಿಳಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಹಾಸಪಡುತ್ತಿದ್ದಾರೆ. ಟಿವಿಯವರು ಬಂದು ಮುಖ ಹಾಗೂ ಲೋಗೋ ತೋರಿಸುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ ಎಂದು ರಂಗಪ್ಪ ಹಠಕಟ್ಟಿದ್ದಾನೆ.

    ನಾನು ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ಎಸ್‌ಸಿ, ಎಸ್‌ಟಿ ಸಮಾಜಕ್ಕೆ ಮುಂದೆ ಆಗುತ್ತದೆ ಎಂದು ಹೇಳುವುದಕ್ಕಿಂತ ಹಿಂದಿನಿಂದಲೂ ಕೂಡ ಅನ್ಯಾಯವಾಗಿದೆ. ದಲಿತ ಜನರಲ್ಲಿ ಒಗ್ಗಟ್ಟಿಲ್ಲ ಎಂಬ ಭಾವನೆ ಮೂಡಿದೆ. ನೀವೆಲ್ಲ ಸೇರಿ ನನ್ನನ್ನು ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ. ಇಲ್ಲವಾದರೆ ಕೆಳಗೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಕೆ – ನಾಣ್ಯ ಎಣಿಸಿ ಸುಸ್ತಾದ ಅಧಿಕಾರಿಗಳು

    ನನ್ನನು ಏಳುವರೆ ವರ್ಷದ ಹಿಂದೆ ಕರೆದರು. ನೋಡೋದಕ್ಕೆ ಒಳ್ಳೆಯ ಆಳು. ನಿನ್ನನ್ನು ನೋಡಿದರೆ ಜನ ಹೆದರುತ್ತಾರೆ, ಹಣ ಕೊಡುತ್ತಾರೆ. ರೌಡಿಸಂ ಹಾಗೂ ರಿಯಲ್ ಎಸ್ಟೇಟ್‌ಗೆ ಬಾ ಎಂದು ಕರೆದರು. ಆದರೆ ನಾನು ಹೋಗಲಿಲ್ಲ. ನನಗೆ ಡಿಗ್ರಿ ಹಾಗೂ ಡಬಲ್ ಡಿಗ್ರಿ ಓದಿರುವ ಮೂವರು ಮಕ್ಕಳಿದ್ದಾರೆ. ಅವರಿಗೂ ಕೂಡಾ ಫೋನ್ ಆಪರೇಷನ್ ಮೂಲಕ ಕೆಲಸ ಸಿಗದಂತೆ ಮಾಡಿದ್ದಾರೆ. ನನ್ನ ಖಾತೆಯಲ್ಲಿದ್ದ ಹಣವನ್ನೂ ಹ್ಯಾಕ್ ಮಾಡಿದ್ದಾರೆ. ನಾನು ಶಿಕ್ಷಕರು, ಸೈನಿಕರು, ಆರಕ್ಷಕರಿಗೆ ತುಂಬಾ ಬೆಲೆ ಕೊಡುತ್ತೇನೆ. ನಾನು ಸತ್ತರೂ ಕೂಡ ನನ್ನ ಮಕ್ಕಳಿಗಾದರೂ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ.

    ನನಗಾದ ನೋವು ಬೇರೆ ಯಾವ ಸಣ್ಣ ಹಾಗೂ ಬಡ ಸಮಾಜಗಳಿಗೆ ಆಗಬಾರದು ಎಂದು ಹೇಳಿದ್ದು, ಟವರ್ ಹತ್ತಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ಆತ ಉದ್ಭವ ಆಂಜನೇಯ ಸ್ವಾಮಿ, ನಿರಂಜನ ಸ್ವಾಮೀಜಿಗೆ ವಂದನೆ ತಿಳಿಸಿದ್ದಾನೆ. ಆತನನ್ನು ಟವರ್‌ನಿಂದ ಕೆಳಗಿಳಿಸಲು ಅಜ್ಜಂಪುರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನಿರ್ಧಾರದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಜೆ.ಪಿ ನಡ್ಡಾ