Tag: Ajjampir Khadri

  • 10 ಸಾವಿರ ಲೀಡ್‌ನಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ: ಅಜ್ಜಂಪೀರ್ ಖಾದ್ರಿ

    10 ಸಾವಿರ ಲೀಡ್‌ನಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ: ಅಜ್ಜಂಪೀರ್ ಖಾದ್ರಿ

    ಹಾವೇರಿ: ಸದ್ಯದ ಸುತ್ತಿನಲ್ಲಿ ಬಿಜೆಪಿ ಲೀಡ್ ಇರಬಹುದು ಆದರೆ ಮುಂದಿನ ಸುತ್ತಲಿನ ಕಾಂಗ್ರೆಸ್ ಪರ ಆಗುತ್ತದೆ. 10 ಸಾವಿರ ಲೀಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಮಂಪೀರ್ ಖಾದ್ರಿ (Ajjampir Khadri) ಭವಿಷ್ಯ ನುಡಿದಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ (By Election) ಗೆಲ್ಲುವ ನಿರೀಕ್ಷೆ ಇದೆ. ಮೊದಲ ಸುತ್ತಿನಲ್ಲಿ 400 ಮತಗಳ ಹಿನ್ನಡೆ ಇದ್ದೇವೆ. ಪ್ರತಿ ಚುನಾವಣೆಯಲ್ಲಿ 5 ಸಾವಿರ ಹಿನ್ನಡೆ ಇರುತ್ತಿದ್ದೆವು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತವಾಗಿದೆ. ನನ್ನ ತ್ಯಾಗ ಅನ್ನೋದಕ್ಕಿಂತ ಸಿದ್ದರಾಮಯ್ಯ, ಡಿಕೆಶಿ, ಜಮೀರ್‌ರವರಿಂದ ಅಭಿವೃದ್ಧಿ ಕೆಲಸ ಆಗಿದೆ. ಹಾಗಾಗಿ ಸಿದ್ದರಾಮಯ್ಯನವರ ಜನಪರ ಆಡಳಿತವನ್ನು ಜನರು ಒಪ್ಪಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

    ನನ್ನ ಹೇಳಿಕೆಯನ್ನು ವಿವಾದ ಮಾಡಲು ಬಿಜೆಪಿ (BJP) ಹೊರಟಿದೆ. ಸೋಲುವ ಭಯದಿಂದ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ. ಎಷ್ಟೇ ಅಪಪ್ರಚಾರ ಮಾಡಿದರೂ ಗೆಲ್ಲುವುದು ಮಾತ್ರ ಕಾಂಗ್ರೇಸ್ ಅಭ್ಯರ್ಥಿ. ಸದ್ಯದ ಸುತ್ತಿನಲ್ಲಿ ಬಿಜೆಪಿ ಲೀಡ್ ಇರಬಹುದು ಆದರೆ ಮುಂದಿನ ಸುತ್ತಲಿನ ಕಾಂಗ್ರೆಸ್ ಪರ ಆಗುತ್ತದೆ. ಸದ್ಯ ಬಿಜೆಪಿ ಬೆಂಬಲ ಇರುವ ಮತಗಟ್ಟೆಗಳ ಮತ ಎಣಿಕೆ ನಡೆಯುತ್ತಿದೆ ಹೀಗಾಗಿ ಬಿಜೆಪಿಗೆ ಲೀಡ್ ಬರುತ್ತಿದೆ. ಆದರೆ ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಸಮಬಲ ಸಾಧಿಸಿದೆ. ಹಾಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200+ ಕ್ಷೇತ್ರಗಳಲ್ಲಿ ಮುನ್ನಡೆ

    ಪ್ರವೇಶ ಪತ್ರವಿಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಅಜ್ಮಂಪೀರ್ ಖಾದ್ರಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿಷೇಧ ಮಾಡಲಾಗಿತ್ತು. ಪೊಲೀಸರು ಮಾರ್ಗ ಮಧ್ಯದಲ್ಲಿಯೇ ಖಾದ್ರಿ ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಮಾತಿಗೆ ಸಿಟ್ಟಾಗಿ ಖಾದ್ರಿ ಹೊರ ನಡೆದಿದ್ದಾರೆ. ಇದನ್ನೂ ಓದಿ: Maharashtra Election Results: ಬಿಷ್ಣೋಯ್‌ ಗ್ಯಾಂಗ್‌ನಿಂದ ಹತ್ಯೆಯಾಗಿದ್ದ ಬಾಬಾ ಸಿದ್ದಿಕಿ ಪುತ್ರನಿಗೆ ಹಿನ್ನಡೆ

  • ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ

    ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ

    ಹಾವೇರಿ: ಅಂಬೇಡ್ಕರ್ (B R Ambedkar) ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು ಎಂದು ಶಿಗ್ಗಾಂವಿಯ (Shiggaon) ‘ಕೈ’ ಮುಖಂಡ ಅಜ್ಜಂಪೀರ್ ಖಾದ್ರಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು. ಆರ್.ಬಿ ತಿಮ್ಮಾಪುರ್ ಹೋಗಿ ರಹೀಮ್ ಖಾನ್, ಡಾ.ಜಿ ಪರಮೇಶ್ವರ್ ಬದಲು ಫೀರ್ ಸಾಹೇಬ್, ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್ ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಆದರೆ ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲೀಂ ದರ್ಗಾ ಇದೆ. ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದು ಸೋಮವಾರ ಶಿಗ್ಗಾಂವಿಯ ಹನುಮಂತ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದಿದ ಆದಿಜಾಂಬವ ಜಾಗೃತಿ ಸಮಾವೇಶ ಖಾದ್ರಿ (Ajjampir Khadri) ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ಈ ಬೆನ್ನಲ್ಲೇ, ಖಾದ್ರಿ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ. ಇಷ್ಟೆಲ್ಲಾ ಆದಮೇಲೆ, ಅಜ್ಜಂಪೀರ್ ಖಾದ್ರಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Madikeri| ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ – ಪ್ರಕರಣ ಇತ್ಯರ್ಥ

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಾನು ಎಲ್ಲೋ ಕಾರ್ಯಕ್ರಮದಲ್ಲಿ ಕೇಳಿದ್ದೆ, ಅದನ್ನು ನಿನ್ನೆ ಭಾಷಣ ಮಾಡುವಾಗ ಹೇಳಿದ್ದೇನೆ. ನಮ್ಮ ಕ್ಷೇತ್ರದಲ್ಲಿ ನಾವು ದಲಿತ ಬಾಂಧವರು ತುಂಬಾ ಪ್ರೀತಿಯಿಂದ ಇದ್ದೇವೆ. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಇದರಿಂದ ಯಾವುದೇ ತಪ್ಪು ಸಂದೇಶ ಹೋಗುವುದಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಅಂಬೇಡ್ಕರ್, ವಾಲ್ಮೀಕಿ ಎಲ್ಲರ ಫೋಟೋ ಹಾಕಿದ್ದೇನೆ. ನಾವೆಲ್ಲರೂ ಜೊತೆಗೆ ಉತ್ತಮವಾದ ಸಂಬಂಧ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Shiggaon| ವಿವಾದದ ಬಳಿಕ ಸಂತೆ ಮೈದಾನದಲ್ಲಿ ಹಸಿರು ಬಾವುಟ, ಭಗವಾಧ್ವಜ ತೆರವು

  • ಶಿಗ್ಗಾಂವಿಯ ಕಾಂಗ್ರೆಸ್ ಬಂಡಾಯ ಶಮನ- ಕೊನೆಗೂ ನಾಮಪತ್ರ ವಾಪಸ್ ಪಡೆದ ಅಜ್ಜಂಪೀರ್ ಖಾದ್ರಿ

    ಶಿಗ್ಗಾಂವಿಯ ಕಾಂಗ್ರೆಸ್ ಬಂಡಾಯ ಶಮನ- ಕೊನೆಗೂ ನಾಮಪತ್ರ ವಾಪಸ್ ಪಡೆದ ಅಜ್ಜಂಪೀರ್ ಖಾದ್ರಿ

    ಹಾವೇರಿ: ಶಿಗ್ಗಾಂವಿ ಉಪಚುನಾವಣೆ (Shiggaon By Election) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇವತ್ತು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ (Ajjappir Khadri) ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.

    ಹುಬ್ಬಳ್ಳಿಯಿಂದ (Hubballi) ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಆಗಮಿಸಿ ಖಾದ್ರಿ, ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಖಾದ್ರಿ ಸೂಕ್ತವಾದ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್

    ಜಮೀರ್ ಜೊತೆಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ವಾಪಸ್ ಪಡೆದುಕೊಂಡು ಕಾಂಗ್ರೆಸ್ ಪಕ್ಷದ ಯಾಸಿರ್‌ಖಾನ್ ಪಠಾಣ್‌ಗೆ ಬೆಂಬಲ ಸೂಚಿಸಿದರು. ನನಗೆ ಟಿಕೆಟ್ ಸಿಗಬೇಕಿತ್ತು, ಆದರೆ ಸಿಕ್ಕಿಲ್ಲ. ಸಿದ್ದರಾಮಯ್ಯ (Siddaramaiah), ಡಿಕೆಶಿ ಸೇರಿದಂತೆ ಪ್ರಮುಖ ನಾಯಕರು ಮಾತನಾಡಿದ್ದು, ಸಿಎಂಗೆ ಬೆಂಬಲ ಸೂಚಿಸಿದ್ದೇನೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

    ಕೊನೆಗೆ ಸಚಿವ ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಖಾನ್ ಮತ್ತು ಯಾಸಿರ್ ಖಾನ್ ಪಠಾಣ್ ಖಾದ್ರಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು, ಚುನಾವಣಾ ಪ್ರಚಾರಕ್ಕೆ ತೆರಳಿದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ
    ಬಂಡಾಯ ಶಮನದ ನಂತರ ಅಜ್ಜಂಪೀರ್ ಖಾದ್ರಿ ಮಾತನಾಡಿ, ಕಾಂಗ್ರೆಸ್ (Congress) ಪಕ್ಷದ ಪ್ರಮುಖ ಮುಖಂಡರು ಮಾತನಾಡಿದ್ದಾರೆ. ಪಕ್ಷ ಮುಖ್ಯ, ಅಲ್ಲಿ ಕಾಂಗ್ರೆಸ್ ಗೆಲ್ಲವುದು ಮುಖ್ಯ. ಬಿಜೆಪಿ (BJP) ಸೋಲಿಸೋದು ಮುಖ್ಯ. ಪಠಾಣ್ ಗೆಲ್ಲಿಸಲು ಮಾತುಕೊಟ್ಟು ಬಂದಿದ್ದೇನೆ. ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಭಿನ್ನಾಭಿಪ್ರಾಯ ಏನಿದ್ದರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ನಮ್ಮ ಮನೆಯಲ್ಲಿ ಕೆಲವು ಭಿನ್ನಾಭಿಪ್ರಾಯ ಇದ್ದವು. ಅವರಿಗೆ ಟಿಕೆಟ್ ತಪ್ಪಿಸಬೇಕು ಅಂತಾ ರೌಡಿಶೀಟರ್ ಎಂದು ಹೇಳಿದ್ದು ನಿಜ. ನನಗೆ ಟಿಕೆಟ್ ಸಿಗಬೇಕು ಅಂತಾ ಹಾಗೆ ಹೇಳಿದ್ದೆ, ನನ್ನ ಸಂಸ್ಕೃತಿ ಅದಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

  • ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ

    ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ

    – ಶಿಗ್ಗಾಂವಿ ಕಾಂಗ್ರೆಸ್ ಬಂಡಾಯ ಶಮನ

    ಹುಬ್ಬಳ್ಳಿ: ನಾಳೆ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಜೊತೆಗೆ ತೆರಳಿ ನಾಮಪತ್ರ (Nomination Paper) ವಾಪಸು ಪಡೆಯುತ್ತೇನೆ ಎಂದು ಶಿಗ್ಗಾಂವಿ (Shiggaon) ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ (Ajjampir Khadri) ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕರು ನನ್ನ ಜೊತೆಗೆ ಮಾತನಾಡಿದ್ದಾರೆ. ಟಿಕೆಟ್ ಸಿಗದೇ ಇರುವ ಕಾರಣ ಅಸಮಾಧಾನ ಆಗಿದ್ದು ನಿಜ. ನಮ್ಮ ಅಭಿಮಾನಿಗಳು ನಾಮಪತ್ರ ಸಲ್ಲಿಕೆ ಮಾಡು ಅಂತ ಒತ್ತಾಯ ಮಾಡಿದ್ದರು. ಅದಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೆ. ಆದರೆ ಸಿಎಂ, ಡಿಸಿಎಂ ನಮ್ಮ ಆಪ್ತರ ಜೊತೆಗೆ ಮಾತನಾಡಿದ್ದಾರೆ. ನಾನು ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಸಲುವಾಗಿ ನಾನು ನಾಮಪತ್ರ ವಾಪಸು ಪಡೆಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್

    ಇನ್ನೂ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವೆ. ಬಿಜೆಪಿ ಸೋಲಿಸಲು ಎಲ್ಲಾ ಪ್ರಯತ್ನ ಮಾಡುವೆ. ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ

    ತೀವ್ರ ಪೈಪೋಟಿ ನಡುವೆ ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪಾಲಾಯಿತು. ಪಠಾಣ್ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತನಗೆ ಟಿಕೆಟ್ ಸಿಗಲಿಲ್ಲ ಎಂದು ಅಜ್ಜಂಪೀರ್ ಮುನಿಸಿಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

    ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದು, ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ. ಬುಧವಾರ (ಅ.30) ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಇದನ್ನೂ ಓದಿ:  ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

  • ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಶಮನವಾಗಿದೆ- ಡಿಕೆಶಿ

    ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಶಮನವಾಗಿದೆ- ಡಿಕೆಶಿ

    ಬೆಂಗಳೂರು: ಶಿಗ್ಗಾಂವಿ (Shiggaon) ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar) ತಿಳಿಸಿದ್ದಾರೆ.

    ಈ ಬಗ್ಗೆ ಸಭೆ ಬಳಿಕ ಮಾತನಾಡಿದ ಅವರು, ಕಾರ್ಯಕರ್ತರ ಒತ್ತಾಯದ ಮೇರೆಗೆ  ಅಜ್ಜಂಪೀರ್  ಖಾದ್ರಿ (Ajjampir Khadri) ಪಕ್ಷೇತರವಾಗಿ ನಾಮಿನೇಷನ್ ಹಾಕಿದ್ದಾರೆ. ಖಾದ್ರಿ ಅವರನ್ನ ನಾನೇ ಕಾಂಗ್ರೆಸ್ ಗೆ (Congress) ಕರೆದುಕೊಂಡು ಬಂದಿದ್ದೆ. ಕಳೆದ ಚುನಾವಣೆಯಲ್ಲಿ ಖಾದ್ರಿಗೆ ಟಿಕೆಟ್ ಕೊಡಬೇಕಿತ್ತು. ಈ ಬಾರಿಯೂ ಪಕ್ಷ ಪಠಾಣ್‌ಗೆ ಟಿಕೆಟ್ ಕೊಟ್ಟಿದೆ. ಖಾದ್ರಿ ಅವರಿಗೆ ನಾವು ಅಧಿಕಾರ ಕೊಡುತ್ತೇವೆ. ಖಾದ್ರಿ ಪ್ರಾಮಾಣಿಕ ವ್ಯಕ್ತಿ. ಸಿಎಂ ಕೂಡಾ ಮನವೊಲಿಕೆ ಮಾಡಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಈಗ ಏನು ಹೇಳುವುದಕ್ಕೆ ಆಗುವುದಿಲ್ಲ. 30ನೇ ತಾರೀಕಿನಂದು ವಾಪಸ್ ಪಡೆಯುತ್ತಾರೆ. ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕಾರವಾರ| ಗಾಂಜಾ ಜೊತೆ ನಿಷೇಧಿತ ಮಾದಕ ವಸ್ತು ವಶ; ನಾಲ್ವರ ಬಂಧನ

    ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಮಾತನಾಡಿ, ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ, ಪ್ರಾಮಾಣಿಕ ಕಾರ್ಯಕರ್ತ. ಬೊಮ್ಮಾಯಿ ಮೇಲೆ ಕಡಿಮೆ ಅಂತರದಲ್ಲಿ ಸೋತಿದ್ದೆ. ನಾನು ಗೆದ್ದಿದ್ದರೆ ಬೊಮ್ಮಾಯಿ ಸಿಎಂ ಆಗುತ್ತಿರಲಿಲ್ಲ. ನಾನು ಜನತಾ ಪರಿವಾರದಲ್ಲಿ ಇದ್ದೆ. ನಮಗೆ ಪಕ್ಷ ಮುಖ್ಯ. ವ್ಯಕ್ತಿ ಮುಖ್ಯ ಅಲ್ಲ. ಸಿಎಂ ಸೇರಿ ಎಲ್ಲರು ರಕ್ಷಣೆ ಕೊಡೋ ಮಾತು ಹೇಳಿದ್ದಾರೆ. ಪಕ್ಷ ಗೆಲ್ಲಬೇಕು ಎಂದು ಹೇಳಿದ್ದಾರೆ. ನನಗೆ ಅನ್ಯಾಯ ಆಗಿದೆ ಅಂತ ಹೇಳಿದ್ದೇನೆ. ನಾನು ಕ್ಷೇತ್ರದ ಕಾರ್ಯಕರ್ತರಿಗೆ ತೊಂದರೆ ಕೋಡುವುದಕ್ಕೆ ಆಗುವುದಿಲ್ಲ. ಕಾರ್ಯಕರ್ತರ ಜೊತೆ ನಾಳೆ ಮಾತಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

    ನನ್ನ ಬದ್ಧತೆಗೆ ನಾನು ಬದ್ದನಾಗಿ ಇರುತ್ತೇನೆ. ಸಿಎಂ, ಡಿಸಿಎಂ ಹೇಳಿದಂತೆ ಕೇಳುತ್ತೇನೆ. ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು. ಕಾರ್ಯಕರ್ತರ ಜೊತೆ ಮಾತಾಡೋಕೆ ಸಮಯ ಕೇಳಿದ್ದೇನೆ. ಕಾರ್ಯಕರ್ತರನ್ನು ಸಿಎಂ, ಡಿಸಿಎಂ ಹತ್ತಿರ ಕರೆದುಕೊಂಡು ಬರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸತೀಶ್ ಸೈಲ್‌ಗೆ 6 ಕೇಸ್‌ನಲ್ಲಿ 7 ವರ್ಷ ಜೈಲು – ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ: ಡಿಕೆಶಿ

  • ಶಿಗ್ಗಾಂವಿ ಕಾಂಗ್ರೆಸ್‌ ಬಂಡಾಯ ಶಮನ – ಅಜ್ಜಂಪೀರ್‌ ಮನವೊಲಿಸುವಲ್ಲಿ ಸಿಎಂ ಯಶಸ್ವಿ

    ಶಿಗ್ಗಾಂವಿ ಕಾಂಗ್ರೆಸ್‌ ಬಂಡಾಯ ಶಮನ – ಅಜ್ಜಂಪೀರ್‌ ಮನವೊಲಿಸುವಲ್ಲಿ ಸಿಎಂ ಯಶಸ್ವಿ

    ಬೆಂಗಳೂರು/ಹಾವೇರಿ: ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದಕ್ಕೆ ಬಂಡಾಯವೆದ್ದಿದ್ದ ಅಜ್ಜಂಪೀರ್‌ ಖಾದ್ರಿ (Ajjampir Khadri) ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಯಶಸ್ವಿಯಾಗಿದ್ದಾರೆ.

    ತೀವ್ರ ಪೈಪೋಟಿ ನಡುವೆ ಶಿಗ್ಗಾಂವಿ (Shiggaon) ಕಾಂಗ್ರೆಸ್‌ ಟಿಕೆಟ್‌ ಯಾಸಿರ್‌ ಅಹ್ಮದ್‌ ಖಾನ್‌ ಪಠಾಣ್‌ ಪಾಲಾಯ್ತು. ಪಠಾಣ್‌ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದರು. ತನಗೆ ಟಿಕೆಟ್‌ ಸಿಗಲಿಲ್ಲ ಎಂದು ಅಜ್ಜಂಪೀರ್‌ ಮುನಿಸಿಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ

    ಬಂಡಾಯ ಶಮನ ಜವಾಬ್ದಾರಿಯನ್ನು ಜಮೀರ್‌ಗೆ ವಹಿಸಲಾಗಿತ್ತು. ಅಜ್ಜಂಪೀರ್‌ ಮನವೊಲಿಸುವ ಸಚಿವ ಜಮೀರ್‌ ಅವರ ಪ್ರಯತ್ನ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಸಿಎಂ ನಿವಾಸಕ್ಕೆ ರೆಬೆಲ್‌ ನಾಯಕನನ್ನು ಕರೆತಂದಿದ್ದರು.

    ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ಅಜ್ಜಂಪೀರ್‌ ಬಂಡಾಯ ಶಮನಗೊಳಿಸಿದ್ದಾರೆ. ಇದರಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಮತ ವಿಭಜನೆಯ ಆತಂಕ ದೂರವಾಗಿದೆ. ಇದನ್ನೂ ಓದಿ: ಧರ್ಮ ಕಾರ್ಯಗಳ ಮೂಲಕ ಶೃಂಗೇರಿ ಮಠ ಮುಂಚೂಣಿಯಲ್ಲಿದೆ: ಡಿಕೆಶಿ

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸಿಎಂ, ಶಿಗ್ಗಾಂವ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರ ಜೊತೆ ಮಾತುಕತೆ ನಡೆಸಿ, ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆಯುವಂತೆ ತಿಳಿಸಿದೆ. ಈ ವೇಳೆ ಅವರು ತಮ್ಮ ನಾಮಪತ್ರ ಹಿಂಪಡೆಯುವ ಜೊತೆಗೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ ಎಂದಿದ್ದಾರೆ.

    ಶಿಗ್ಗಾಂವಿಯಲ್ಲಿ ಖಾದ್ರಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಕಳೆದ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು. ಆದರೆ, ಉಪಚುನಾವಣೆಗೆ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಸೆಯಾಯಿತು. ಬಂಡಾಯವೆದ್ದು ನಾಮಪತ್ರ ಸಲ್ಲಿಕೆ ಮಾಡಿದ್ದರು.

    ಈ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ವಿರುದ್ಧ ಡ್ಯಾಮೇಜಿಂಗ್‌ ಹೇಳಿಕೆಗಳು ಹೊರಬಂದವು. ಯಾಸಿರ್‌ ಒಬ್ಬ ರೌಡಿಶೀಟರ್‌ ಎಂದೆಲ್ಲ ಬಿಂಬಿಸಲಾಯಿತು. ಇದು ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂಬುದನ್ನು ಅರಿತು ಖಾದ್ರಿ ಮನವೊಲಿಸುವ ಪ್ರಯತ್ನ ನಡೆಯಿತು. ಈ ಪ್ರಯತ್ನದಲ್ಲಿ ಸಿಎಂ ಕೊನೆಗೂ ಯಶಸ್ವಿಯಾಗಿದ್ದಾರೆ.