Tag: ajith

  • ಖ್ಯಾತ ನಟ ಅಜಿತ್ ಜೊತೆ ಕಾಣಿಸಿಕೊಂಡ ಸಾನ್ಯಾ ಅಯ್ಯರ್

    ಖ್ಯಾತ ನಟ ಅಜಿತ್ ಜೊತೆ ಕಾಣಿಸಿಕೊಂಡ ಸಾನ್ಯಾ ಅಯ್ಯರ್

    ಮಿಳಿನ ಹೆಸರಾಂತ ನಟ ಅಜಿತ್ (Ajith) ಜೊತೆ ಕಾಣಿಸಿಕೊಂಡಿದ್ದಾರೆ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್. ಯಾವ ಉದ್ದೇಶಕ್ಕಾಗಿ ಅವರು ಅಜಿತ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ವಿಚಾರ ಬಹಿರಂಗ ಪಡಿಸದೇ ಇದ್ದರೂ, ಅಜಿತ್ ಅವರ ಸಿಂಪ್ಲಿಸಿಟಿಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ತಾಯಿ, ಅಜಿತ್ ಜೊತೆ ಫೋಟೋಗೆ ಸಾನ್ಯಾ ಪೋಸ್ ಕೊಟ್ಟಿದ್ದಾರೆ.

    ಸಾನ್ಯಾ  ಅಯ್ಯರ್ ತಮ್ಮ ಚೊಚ್ಚಲ ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಹಿಂದೆ ಪೋಸ್ಟ್ ಮಾಡಿದ್ದರು. ಇದೀಗ ಸಮ್ಮರ್ ಹಾಲಿಡೇ ಕಳೆಯಲ್ಲಿ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ. ಬಹುಶಃ ಅಲ್ಲಿಯೇ ಅಜಿತ್ ಅವರು ಸಿಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

     

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದರು.

  • ಮಧ್ಯ ವಯಸ್ಕರರಿಗೂ ಜೊತೆಗಾರರು ಬೇಕು ಎಂದ ನಟಿ ಸುಧಾರಾಣಿ

    ಮಧ್ಯ ವಯಸ್ಕರರಿಗೂ ಜೊತೆಗಾರರು ಬೇಕು ಎಂದ ನಟಿ ಸುಧಾರಾಣಿ

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಅಜಿತ್ ಸಿನಿಮಾದಿಂದ ಹೊರನಡೆದ ನಯನತಾರಾ ಪತಿ

    ನಟ ಅಜಿತ್ ಸಿನಿಮಾದಿಂದ ಹೊರನಡೆದ ನಯನತಾರಾ ಪತಿ

    ಕಾಲಿವುಡ್‌ನ (Kollywood) ಪ್ರತಿಭಾನ್ವಿತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರು ಇತ್ತೀಚಿಗೆ ಸೂಪರ್ ಸ್ಟಾರ್ ಅಜಿತ್‌ಗೆ (Ajith) ನಿರ್ದೇಶನ ಮಾಡೋದಾಗಿ ಅನೌನ್ಸ್ ಮಾಡಿದ್ದರು. ಇದೀಗ ಶೂಟಿಂಗ್ ಚಾಲನೆ ನೀಡುವ ವೇಳೆಗೆ ಅಜಿತ್ ಸಿನಿಮಾವನ್ನು (Ajith 62) ನಯನತಾರಾ (Nayanatara) ಪತಿ ಕೈಬಿಟ್ಟಿದ್ದಾರೆ. ನಿರ್ಮಾಪಕರು ಕಥೆ ಬದಲಾವಣೆ ಮಾಡಿ ಅಂದಿದ್ದಕ್ಕೆ ಚಿತ್ರದಿಂದ ಹೊರನಡೆದಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ವಿಘ್ನೇಶ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಅಜಿತ್‌ಗೆ ಆ್ಯಕ್ಷನ್ ಕಟ್ ಹೇಳ್ತಿರೋದಕ್ಕೆ ವಿಘ್ನೇಶ್ ಸಂತಸ ವ್ಯಕ್ತಪಡಿಸಿದ್ದರು. ಈಗ ಸಡನ್ ಆಗಿ ಸಿನಿಮಾ ಕೈಬಿಟ್ಟಿರೋದು ಯಾಕೆ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಸಿನಿಮಾ ನಿರ್ಮಾಪಕರಿಗೆ ಕಥೆಯಲ್ಲಿ ಕೊಂಚ ಬದಲಾವಣೆ ಬೇಕಿತ್ತಂತೆ, ಸಣ್ಣ ಪುಟ್ಟ ಬದಲಾವಣೆ ಮಾಡಬಹುದು. ಆದರೆ ಸೆಕೆಂಡ್ ಹಾಫ್ ಫುಲ್ ಬದಲಾಯಿಸುವುದಕ್ಕೆ ಆಗಲ್ಲ ಎಂದು ವಿಘ್ನೇಶ್ ಪ್ರಾಜೆಕ್ಟ್ ಕೈ ಬಿಡುವ ಮನಸ್ಸು ಮಾಡಿದ್ದಾರೆ. ಸಹಿ ಮಾಡಿದ ಮೇಲೆ ನಮ್ಮ ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಬೇಕು ಎಂದು ಹೇಳುತ್ತಾರೆ. ಸಣ್ಣ ಪುಟ್ಟ ಬದಲಾವಣೆ ಅಂದರೆ ಯೋಚನೆ ಮಾಡಬಹುದಿತ್ತು. ಆದರೆ ಸೆಕೆಂಡ್ ಹಾಫ್ ಸಂಪೂರ್ಣ ಬದಲಾಯಿಸಿ ಎಂದು ಒತ್ತಾಯ ಮಾಡುತ್ತಿದ್ದರು. ಸೆಕೆಂಡ್ ಹಾಫ್‌ನಲ್ಲಿ ಬರುವುದೇ ಮುಖ್ಯವಾದ ಕಥೆ ಅದೇ ಬೇಡ ಅಂದರೆ ಹೇಗೆ? ನನ್ನ ಕಥೆಗೆ ಬೆಲೆ ಎಲ್ಲಿದೆ ಎಂದು ವಿಘ್ನೇಶ್ ಮಾತನಾಡಿದ್ದಾರೆ.

    ನನ್ನ ಕಥೆಯನ್ನು ನಾನು ಬದಲಾಯಿಸುವುದಿಲ್ಲ. ತಲಾ ಅಜಿತ್ ಕುಮಾರ್ ಸರ್ ಜೊತೆ ಏನೂ ಸಮಸ್ಯೆ ಇರಲಿಲ್ಲ ಪ್ರತಿಯೊಂದು ಸೂಪರ್ ಆಗಿತ್ತು. ಆದರೆ ನಿರ್ಮಾಪಕರು ಕಿರಿಕಿರಿ ಮಾಡಿಬಿಟ್ಟರು. ನಿರ್ಮಾಪಕರ ಡಿಮ್ಯಾಂಡ್‌ನ ಕೇಳಬಹುದು. ಆದರೆ ಇಡೀ ಕಥೆ ಬದಲಾಯಿಸಬೇಕು ಅಂದ್ರೆ ಯಾಕೆ ನಮ್ಮ ಕತೆಯನ್ನು ಆರಂಭದಲ್ಲಿ ಒಪ್ಪಿಕೊಳ್ಳಬೇಕು? ನಾನು ಬದಲಾಯಿಸುವುದಿಲ್ಲ ಎಂದು ಹೇಳಿ ಹೊರ ಬಂದೆ ಎಂದು ವಿಘ್ನೇಶ್ ಹೇಳಿದ್ದಾರೆ.

  • ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

    ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

    ಲವು ವರ್ಷಗಳಿಂದ ಖ್ಯಾತನಟಿ ಐಶ್ವರ್ಯ ರೈ (Aishwarya Rai) ಯಾವುದೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದರೂ, ದಕ್ಷಿಣದ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಈಗ ಮತ್ತೆ ತಮಿಳಿನ (Tamil) ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ದಕ್ಷಿಣದ ಸಿನಿಮಾಗಳತ್ತ ಅವರು ಚಿತ್ತ ನೆಟ್ಟಿದ್ದಾರೆ.

    ಸಿನಿಮಾಗಳ ಆಯ್ಕೆಯ ವಿಷಯದಲ್ಲಿ ನಾನು ತುಂಬಾ ಚ್ಯೂಸಿಯಾಗಿದ್ದೇನೆ. ಹಾಗಾಗಿ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಐಶ್ವರ್ಯ ಹಲವಾರು ಬಾರಿ ಹೇಳಿದ್ದಿದೆ. ಅವರು ಹೇಳಿದಂತೆ ನಡೆದುಕೊಂಡೂ ಇದ್ದಾರೆ. ಈ ಕಾರಣದಿಂದಾಗಿ ಅವರು ಹೆಚ್ಚೆಚ್ಚು ದಕ್ಷಿಣ ಭಾರತದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಸಿನಿಮಾಗಳ ಘನತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಐಶ್ವರ್ಯ ರೈ ಇದೀಗ ಮತ್ತೊಂದು ತಮಿಳು ಚಿತ್ರಕ್ಕೆ ಸಹಿ ಮಾಡಿದ್ದು, ಅಜಿತ್ ಕುಮಾರ್ (Ajith) ಈ ಸಿನಿಮಾದ ನಾಯಕ ಎಂದು ಹೇಳಲಾಗುತ್ತಿದೆ. ಅಜಿತ್ ನಟನೆಯ ವಾರಿಸು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಬೆನ್ನಲ್ಲೇ ಅವರ ಹೊಸ ಸಿನಿಮಾ ಕೂಡ ಘೋಷಣೆಯಾಗಿದ್ದು, ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ದೇಶಕರು.

    ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು ಲೈಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಈ ಚಿತ್ರದಲ್ಲಿ ಅಜಿತ್ ಹೊಸ ಬಗೆಯ ಹಾಗೂ ರಗಡ್ ಲುಕ್ ಇರುವಂಥ ಪಾತ್ರವನ್ನು ಮಾಡಲಿದ್ದಾರಂತೆ. ಇದು ಅಜಿತ್ ಅವರ 62ನೇ ಸಿನಿಮಾವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಅತೀ ಶೀಘ್ರದಲ್ಲೇ ಸಿನಿಮಾದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳಿನ `ತುನಿವು’ ಸಿನಿಮಾ ರಿಲೀಸ್ ವೇಳೆ, ಅಜಿತ್ ಅಭಿಮಾನಿ ದುರಂತ ಸಾವು

    ತಮಿಳಿನ `ತುನಿವು’ ಸಿನಿಮಾ ರಿಲೀಸ್ ವೇಳೆ, ಅಜಿತ್ ಅಭಿಮಾನಿ ದುರಂತ ಸಾವು

    ಕಾಲಿವುಡ್ (Kollywood) ಅಂಗಳದಲ್ಲಿ ಅಜಿತ್ (Ajith) ನಟನೆಯ `ತುನಿವು’ (thunivu Film) ಸಿನಿಮಾ ಭರ್ಜರಿ ಸದ್ದು ಮಾಡ್ತಿದೆ. ಅಜಿತ್ ನಟನೆಯ ಚಿತ್ರದ ಸಂಭ್ರಮಾಚರಣೆ ಮಧ್ಯೆ ಸಹಜವಾಗಿಯೇ ಇಬ್ಬರು ಫ್ಯಾನ್ಸ್‌ಗಳ ನಡುವೆ ವಾರ್ ಶುರುವಾಗಿದೆ. ಈ ವೇಳೆ ಅಜಿತ್ ಅಭಿಮಾನಿಯೊಬ್ಬನ ದುರಂತ ಸಾವಾಗಿದೆ.

    ತಮಿಳಿನ ಅಜಿತ್ ನಟನೆಯ `ತುನಿವು’ ಸಿನಿಮಾ ರಿಲೀಸ್ ವೇಳೆ ಜಾತ್ರೆಯ ಹಾಗೇ ಚಿತ್ರವನ್ನು ಸ್ವಾಗತಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಟ್ರಕ್ ಮೇಲಿಂದ ಬಿದ್ದು ಸಾವಿಗೀಡಾಗಿದ್ದಾನೆ. ನಡುರಾತ್ರಿ 1 ಗಂಟೆಗೆ ರಿಲೀಸ್ ಆದ ಸಿನಿಮಾವನ್ನ ನೋಡಲು ಅಭಿಮಾನಿಯೊಬ್ಬ ಟ್ರಕ್‌ನಲ್ಲಿ ಬಂದಿದ್ದ, ಸಿನಿಮಾ ಸಂಭ್ರಮದ ವೇಳೆ ಟ್ರಕ್ ಮೇಲೆ ಕೆಲವು ಅಭಿಮಾನಿಗಳು ನಿಂತು ಅಜಿತ್ ಅಜಿತ್ ಎಂದು ಕೂಗುತ್ತಾ ಕುಣಿಯಲು ಆರಂಭಿಸಿದ್ದಾರೆ. ಈ ವೇಳೆ ಟ್ರಕ್‌ನಿಂದ ಕೆಳಗೆ ಬಿದ್ದು ಗಂಭೀರ ಗಾಯಗಳಾಗಿದೆ. ಬಿದ್ದ ರಭಸಕ್ಕೆ ಅಭಿಮಾನಿ ಭರತ್‌ಗೆ (Fan Bharath) ತೀವ್ರ ಪೆಟ್ಟಾಗಿದೆ. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

    ಬಳಿಕ ಅಭಿಮಾನಿ ಭರತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ಮೃತಪಟ್ಟಿದ್ದಾನೆ. ಚೆನ್ನೈನ ರೋಹಿಣಿ ಚಿತ್ರಮಂದಿರದ ಬಳಿ ಇರುವ ಪೂನಮಲ್ಲೆ ಹೆದ್ದಾರಿಯಲ್ಲಿ ಟ್ರಕ್‌ನಿಂದ ಕೆಳಗೆ ಬಿದ್ದು ಸಾವಾಗಿರುವುದು ತಿಳಿದು ಬಂದಿದೆ.

    `ತುನಿವು’ ಸಿನಿಮಾ (Thunivu) ಜನವರಿ 11ಕ್ಕೆ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ವಿಜಯ್ ನಟನೆಯ `ವಾರಿಸು’ (Varisu) ಮುಂದೆ ಅಜಿತ್ ನಟನೆಯ ʻತುನಿವುʼ ಚಿತ್ರ ಸೌಂಡ್‌ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೋಸ್ಟರ್ ಹರಿದು ಬಡಿದಾಡಿಕೊಂಡ ಅಜಿತ್, ವಿಜಯ್ ಫ್ಯಾನ್ಸ್

    ಪೋಸ್ಟರ್ ಹರಿದು ಬಡಿದಾಡಿಕೊಂಡ ಅಜಿತ್, ವಿಜಯ್ ಫ್ಯಾನ್ಸ್

    ಮಿಳು ಸಿನಿಮಾ ರಂಗದ ಇಬ್ಬರು ಸೂಪರ್ ಸ್ಟಾರ್ ಸಿನಿಮಾ ಒಂದೇ ದಿನದಂದು ಬಿಡುಗಡೆ ಆಗಿದೆ. ಅದು ಎಂಟು ವರ್ಷಗಳ ನಂತರ ಈ ಸ್ಟಾರ್ ನಟರ ಚಿತ್ರಗಳು ಮುಖಾಮುಖಿ ಆಗುತ್ತಿವೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ವಾರ್ ಕ್ರಿಯೇಟ್ ಆಗಿತ್ತು. ಆ ಇಬ್ಬರೂ ಕಲಾವಿದರ ಅಭಿಮಾನಿಗಳು ಕೂಡ ಕಳೆದ ಹದಿನೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಜಗಳಕ್ಕೆ ನಾಂದಿ ಹಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿದ್ದ ಗಲಾಟೆ, ಇದೀಗ ನಿಜ ಸ್ವರೂಪ ಪಡೆದುಕೊಂಡಿದೆ.

    ಹೌದು, ಇವತ್ತು ಅಜಿತ್ ನಟನೆಯ ‘ತುಣಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಸಿನಿಮಾ ಏಕಕಾಲಕ್ಕೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ರಿಲೀಸ್ ಆದ ಅಷ್ಟೂ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಈ ಗೆಲುವನ್ನು ಸಂಭ್ರಮಿಸಬೇಕಿದ್ದ ಅಭಿಮಾನಿಗಳು, ಒಬ್ಬರಿಗೊಬ್ಬರು ಪೋಸ್ಟರ್ ಹರಿದುಕೊಂಡು ಕಿತ್ತಾಡಿದ್ದಾರೆ. ಅಭಿಮಾನಿಗಳ ಈ ಅತಿರೇಕಕ್ಕೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ಚೆನ್ನೈನ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮೊದಲು ಅಜಿತ್ ಅಭಿಮಾನಿಗಳು ಪೋಸ್ಟರ್ ಹರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸುದ್ದಿ ಹರಡಿ ಅಜಿತ್ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರ ಮಧ್ಯ ಪ್ರವೇಶವಾಗಿ ಲಾಠಿ ಚಾರ್ಜ್ ಮಾಡುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಡೆದಿದ್ದಾರೆ.

    ಮೊದಲಿನಿಂದಲೂ ಅಜಿತ್ ಮತ್ತು ವಿಜಯ್ ಅಭಿಮಾನಿಗಳು ಹೀಗೆ ಬಡಿದಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಈ ಬಾರಿ ಥಿಯೇಟರ್ ವಿಚಾರವಾಗಿ ತುಣಿವು ಮತ್ತು ವಾರಿಸು ನಿರ್ಮಾಪಕರ ನಡುವೆ ತೀರ್ವ ಸ್ಪರ್ಧಿ ಏರ್ಪಟ್ಟಿತ್ತು. ವಿಜಯ್ ಸಿನಿಮಾಗೆ ಅತೀ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದು ಅಜಿಯ್ ಅವರ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿತ್ತು. ಮೊದಲು ಸೋಷಿಯಲ್ ಮೀಡಿಯಾದಲ್ಲಿ ಹತ್ತಿಕೊಂಡ ದ್ವೇಷದ ಉರಿ, ಇದೀಗ ಚಿತ್ರಮಂದಿರತನಕ ಕಾಲಿಟ್ಟಿದೆ. ಮುಂದೆ ಈ ಗಲಾಟೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕದಲ್ಲಿ ಈ ವಾರ ಪರಭಾಷಾ ಚಿತ್ರಗಳದ್ದೇ ಹಾವಳಿ

    ಕರ್ನಾಟಕದಲ್ಲಿ ಈ ವಾರ ಪರಭಾಷಾ ಚಿತ್ರಗಳದ್ದೇ ಹಾವಳಿ

    ವಾರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ (Theatre) ಸಿಗುತ್ತಾ ಎನ್ನುವ ಆತಂಕ ಎದುರಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಸಾಮಾನ್ಯವಾಗಿ ತೆಲುಗು ಮತ್ತು ತಮಿಳಿನ ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಈ ಬಾರಿಯೂ ಅಂತಹ ದೊಡ್ಡ ಬಜೆಟ್  ಮತ್ತು ಹೆಸರಾಂತ ನಟರೇ ನಟಿಸಿರುವ ಚಿತ್ರಗಳು ತೆರೆ ಕಾಣುತ್ತಿವೆ. ಆ ನಟರ ಚಿತ್ರಗಳು ಕರ್ನಾಟಕದಲ್ಲೂ ಈ ಹಿಂದೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಅವುಗಳಿಂದಾಗಿ ನಾನಾ ಸಮಸ್ಯೆಗಳು ಎದುರಾಗಬಹುದು.

    ತಮಿಳಿನ ಹೆಸರಾಂತ ನಟ ವಿಜಯ್ (Vijay) ಹಾಗೂ ರಶ್ಮಿಕಾ ಮಂದ‍ಣ್ಣ ಕಾಂಬಿನೇಷನ್ ನ ‘ವಾರಿಸು’ ಮತ್ತು ಅಜಿತ್ ಕುಮಾರ್ (Ajith) ನಟನೆಯ ‘ತುನಿವು’ ಸಿನಿಮಾ ಜನವರಿ 11 ರಂದು ತೆರೆ ಕಾಣುತ್ತಿವೆ. ತೆಲುಗಿನ ಖ್ಯಾತ ನಟ ಬಾಲಕೃಷ್ಣ (Balayya) ಮತ್ತು ಕನ್ನಡದ ದುನಿಯಾ ವಿಜಯ್ ವಿಲನ್ ಆಗಿ ನಟಿಸಿರುವ ‘ವೀರಸಿಂಹ ರೆಡ್ಡಿ’ ಚಿತ್ರ ಜನವರಿ 12 ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಅಲ್ಲದೇ, ಜನವರಿ 13ಕ್ಕೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ನಟನೆಯ ‘ವಾಲ್ತೇರು ವೀರಯ್ಯ’ ಕೂಡ ರಿಲೀಸ್ ಆಗುತ್ತಿದೆ. ಈ ಸಿನಿಮಾಗಳಲ್ಲಿ ಕೆಲವು ಕನ್ನಡಕ್ಕೆ ಡಬ್ ಆಗಿಯೂ ಬಿಡುಗಡೆ ಆಗುತ್ತಿವೆ. ಹಾಗಾಗಿ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತವಾ ಎನ್ನುವುದೇ ಆತಂಕಕ್ಕೆ ಕಾರಣವಾಗಿವೆ. ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ

     

    ಎದುರಾಗಬಹುದಾದ ಇಂತಹ ಆತಂಕವನ್ನು ಗಮನಿಸಿಯೇ ತೆಲುಗು ಚಿತ್ರರಂಗ ಈ ಹಿಂದೆ ತೀರ್ಮಾನವೊಂದನ್ನು ತಗೆದುಕೊಂಡಿದೆ. ಮೊದಲ ತೆಲುಗು ಸಿನಿಮಾಗಳಿಗೆ ಥಿಯೇಟರ್ ಕೊಡಬೇಕು. ನಂತರ ಇತರ ಭಾಷೆಯ ಚಿತ್ರಗಳಿಗೆ ಅವಕಾಶ  ನೀಡಬೇಕು ಎಂದು. ಆದರೂ, ತೆಲುಗು ವಿತರಕ ದಿಲ್ ರಾಜು, ಈ ನಿಯಮಕ್ಕೆ ಸೆಡ್ಡು ಹೊಡೆದು ತಮಿಳಿನ ವಾರಿಸು ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ, ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಿಗೆ ರಿಲೀಸ್ ಮಾಡಲು ಹೊರಟಿದ್ದರು. ಈ ವಿಷಯದಲ್ಲಿ ಕೊನೆಗೂ ದಿಲ್ ರಾಜು ಸೋತಿದ್ದಾರೆ. ಚಿತ್ರೋದ್ಯಮದ ಒಗ್ಗಟ್ಟಿನ ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ಥಿಯೇಟರ್ ಗಳು ತೆಲುಗು ಚಿತ್ರಗಳಿಗೆ ಸಿಕ್ಕಿವೆ. ಅಲ್ಲದೇ ಡಬ್ ಸಿನಿಮಾ ರಿಲೀಸ್ ದಿನಾಂಕವನ್ನು ಅವರು ಮೂರು ದಿನಗಳ ಕಾಲ ಮುಂದೂಡಿದ್ದಾರೆ.

    ಕನ್ನಡ ಚಿತ್ರೋದ್ಯಮದಲ್ಲಿ ಇಂತಹ ಯಾವುದೇ ನಿಯಮಗಳಿಲ್ಲ. ಒಗ್ಗಟ್ಟಿನ ಮಂತ್ರವೂ ಇಲ್ಲ. ಹಾಗಾಗಿ ದೊಡ್ಡ ದೊಡ್ಡ ಪರಭಾಷಾ ಚಿತ್ರಗಳು ತೆರೆಕಂಡಾಗ ಕನ್ನಡದ ನಿರ್ಮಾಪಕರು ಥಿಯೇಟರ್ ಗಾಗಿ ಪರದಾಡಿದ ಸಾಕಷ್ಟು ಉದಾಹರಣೆಗಳಿವೆ. ಈ ವಾರ ಕೂಡ ಕನ್ನಡದ ಅನೇಕ ಚಿತ್ರಗಳಿಗೆ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳು ಸಿಗುವುದು ಅನುಮಾನ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ತಂದೆ ಸ್ಮೋಕಿಂಗ್ ಮಾಡುತ್ತಿರಲಿಲ್ಲ, ಯಾವ ಕಾಣದ ಕೈಗಳೂ ಇಲ್ಲ : ನಟ ಧನಂಜಯ್ ಗೆ ಉತ್ತರ ಕೊಟ್ಟ ಅಜಿತ್ ಜಯರಾಜ್

    ನನ್ನ ತಂದೆ ಸ್ಮೋಕಿಂಗ್ ಮಾಡುತ್ತಿರಲಿಲ್ಲ, ಯಾವ ಕಾಣದ ಕೈಗಳೂ ಇಲ್ಲ : ನಟ ಧನಂಜಯ್ ಗೆ ಉತ್ತರ ಕೊಟ್ಟ ಅಜಿತ್ ಜಯರಾಜ್

    ‘ಹೆಡ್ ಬುಷ್’ ಸಿನಿಮಾಗೆ ಸಂಬಂಧ ಪಟ್ಟಂತೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ತಮ್ಮ ತಂದೆಯನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ. ಹಾಗಾಗಿ ತಮ್ಮ ತಂದೆಯ ಕುರಿತಾಗಿ ಸಿನಿಮಾ ಮಾಡಕೂಡದು ಎಂದು ಬೆಂಗಳೂರು ಭೂಗತ ಜಗತ್ತಿನ ಡಾನ್ ಎಂದು ಕರೆಯಿಸಿಕೊಂಡಿದ್ದ ಜಯರಾಜ್ ಪುತ್ರ ಅಜಿತ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಹಾಗೂ ಕಾನೂನು ಸಮರಕ್ಕೂ ಅವರು ಸಿದ್ಧರಾಗಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಈ ಕುರಿತು ಮಾತನಾಡಿದ್ದ ಡಾಲಿ ಧನಂಜಯ್, ನಾವು ಸಿನಿಮಾ ಮಾಡುವ ಕುರಿತು ಅಜಿತ್ ಅವರಿಗೆ ಮೊದಲೇ ಗೊತ್ತಿತ್ತು. ಅವರು ಸಿನಿಮಾಗೆ ಶುಭ ಕೋರಿದ್ದರು. ಈಗ ಏಕಾಏಕಿಯಾಗಿ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೂ ಅಜಿತ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ನಾನು ಯಾರ ಮಾತನ್ನೂ ಕೇಳುವುದಿಲ್ಲ. ಯಾರೂ ನನ್ನ ಹಿಂದೆ ನಿಂತುಕೊಂಡು ಈ ಕೆಲಸ ಮಾಡುತ್ತಿಲ್ಲ. ನನ್ನ ತಾಯಿಗಾಗಿ ನಾನು ಕಾನೂನು ಸಮರಕ್ಕೆ ಮುಂದಾಗಿದ್ದೇನೆ. ನನ್ನ ತಂದೆಯನ್ನು ಏಕವಚನದಲ್ಲಿ ಕರೆದಿದ್ದಾರೆ. ಅವರು ಸ್ಮೋಕಿಂಗ್ ಮಾಡುತ್ತಿದ್ದರು ಎಂದು ಟೀಸರ್ ನಲ್ಲಿ ತೋರಿಸಿದ್ದಾರೆ. ಅವರು ಧೂಮಪಾನ ಮಾಡುತ್ತಿರಲಿಲ್ಲ. ಇದರಿಂದಾಗಿ ನನ್ನ ತಾಯಿಗೆ ನೋವಾಗಿದೆ ಎಂದು ಮಾಧ್ಯಮವೊಂದರ ಜತೆ ಅಜಿತ್ ಮಾತನಾಡಿದ್ದಾರೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

    ಹೆಡ್ ಬುಷ್ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು ಅಗ್ನಿ ಶ್ರೀಧರ್. ಅವರದ್ದೇ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ ಈ ವಿವಾದದ ಕುರಿತು ಶ್ರೀಧರ್ ಕೂಡ ಮಾತನಾಡಿದ್ದಾರೆ. ನನ್ನ ಪುಸ್ತಕದ ಹಕ್ಕು ಪಡೆದು ಸಿನಿಮಾ ಮಾಡಿದ್ದಾರೆ. ಹಾಗಾಗಿ ಅಜಿತ್ ಗೆ ಕೇಳುವಂತಹ ಯಾವುದೇ ಹಕ್ಕಿಲ್ಲ ಎಂದಿದ್ದಾರೆ. ಈ ಪ್ರಶ್ನೆಗೂ ಅಜಿತ್ ಉತ್ತರಿಸಿದ್ದಾರೆ.  ಇದನ್ನೂ ಓದಿ : ನಿಧನರಾದ ಮೋಹನ್ ಜುನೇಜಾ ಹೂವಿನ ಹಾದಿಯಲ್ಲಿ ನಡೆದು ಬಂದವರಲ್ಲ

    ನನ್ನ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಎಂದು ಅವರೇ ಹೇಳಿದ್ದರಿಂದ ನನಗೆ ಕೇಳುವ ಹಕ್ಕಿದೆ. ಈ ಹಿಂದೆ ನಾನು ಚಿಕ್ಕವನು. ಹಾಗಾಗಿ ಪ್ರಶ್ನೆ ಮಾಡಿರಲಿಲ್ಲ. ಈಗ ತಿಳುವಳಿಕೆ ಇದೆ. ಹಾಗಾಗಿ ಪ್ರಶ್ನೆ ಮಾಡುತ್ತಿದ್ದೇನೆ. ಸಿನಿಮಾ ತಂಡ ಏನೇ ಹೇಳಿದರೂ, ನಾನು ಕಾನೂನು ಹೋರಾಟಕ್ಕೆ ಸಿದ್ಧನಾಗಿದ್ದೇನೆ. ಅಲ್ಲಿಂದಲೇ ನ್ಯಾಯ ಪಡೆಯುತ್ತೇನೆ ಅಂತಾರೆ ಅಜಿತ್.

  • ಹೆಂಡತಿ ಜೊತೆ ರೋಮ್ಯಾಂಟಿಕ್ ಮೂಡ್‍ನಲ್ಲಿ ತಲಾ ಅಜಿತ್

    ಹೆಂಡತಿ ಜೊತೆ ರೋಮ್ಯಾಂಟಿಕ್ ಮೂಡ್‍ನಲ್ಲಿ ತಲಾ ಅಜಿತ್

    ಕಾಲಿವುಡ್ ನಟ ತಲಾ ಅಜಿತ್ ಮತ್ತು ಶಾಲಿನಿ ಕ್ಯಾಮೆರಾ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ಈ ದಂಪತಿಯ ಕ್ಯೂಟ್ ಫೋಟೋಗಳು ಮಾತ್ರ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಈ ಜೋಡಿಯ ರೋಮ್ಯಾಂಟಿಕ್ ಫೋಟೋವೊಂದನ್ನು ಶಾಲಿನಿ ಅವರ ಸಹೋದರಿ ಶಾಮ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಅಜಿತ್ ಹಾಗೂ ಶಾಲಿನಿ ಅವರದ್ದು ಲವ್ ಮ್ಯಾರೇಜ್. ಕೇರಳ ಮೂಲದ ಶಾಲಿನಿ ಅವರನ್ನು ಅಜಿತ್ 2000ರ ಏಪ್ರಿಲ್ 24ರಂದು ವಿವಾಹವಾದರು. ಸದ್ಯ ಈ ಜೋಡಿ ಮದುವೆಯಾಗಿ 23 ವರ್ಷ ಕಳೆದಿದ್ದು, ಇವರ ವಿವಾಹ ವಾರ್ಷಿಕೋತ್ಸವಕ್ಕೆ ಶಾಲಿನಿ ಅವರ ಸಹೋದರಿ ಶಾಮ್ಲಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಶುಭಕೋರಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

     

    View this post on Instagram

     

    A post shared by Shamlee (@shamlee_official)

    ಫೋಟೋದಲ್ಲಿ ಅಜಿತ್ ಶಾಲಿನಿ ಅವರನ್ನು ಹಿಂದಿನಿಂದ ತಬ್ಬಿಕೊಂಡು ರೋಮ್ಯಾಂಟಿಕ್ ಆಗಿ ಶಾಲಿನಿ ಅವರ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ 23 ವರ್ಷಗಳ ಒಗ್ಗಟ್ಟಿನ ದಾಂಪತ್ಯ ಎಂದು ಶಾಮ್ಲಿ ಬರೆಯಲಾಗಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಅಜಿತ್ ಹಾಗೂ ಶಾಲಿನಿಗೆ ಅನುಷ್ಕಾ ಕುಮಾರ್, ಅದ್ವಿಕ್ ಕುಮಾರ್ ಎಂಬ ಮುದ್ದಾದ ಮಕ್ಕಳಿದ್ದಾರೆ.  ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

  • ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಮಿಳಿನ ಹೆಸರಾಂತ ನಟ ಅಜಿತ್ ನಟನೆಯ ‘ವಲಿಮೈ’ ಸಿನಿಮಾ  ಜೀ 5 ಒಟಿಟಿಯಲ್ಲಿ ಪ್ರಸಾರವಾಗಲಿದೆ. ಇದೇ ಶುಕ್ರವಾರದಿಂದ ಈ ಸಿನಿಮಾವನ್ನು ನೋಡಬಹುದು ಎಂದು ಜೀ 5 ಹೇಳಿಕೊಂಡಿದೆ. ಕಳೆದ ಫೆಬ್ರವರಿ 25ರಂದು ಪಂಚ ಭಾಷೆಯಲ್ಲಿ ಬಿಡುಗಡೆ ಆಗಿದ್ದ ವಲಿಮೈ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಅಜಿತ್ ಅವರ ಆಕ್ಷನ್ ಬೈಕ್ ಸ್ಟಂಟ್ ಕಂಡು ಫ್ಯಾನ್ಸ್ ಥ್ರಿಲ್ಲ್ ಆಗಿದ್ದರು.

    ಒಟಿಟಿಯಲ್ಲಿ ವಲಿಮೈ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ಚಿತ್ರತಂಡ ಅದ್ಧೂರಿಯಾಗಿ ಪ್ರಮೋಷನ್ ಮಾಡ್ತಿದೆ. ಬರೋಬ್ಬರಿ ಹತ್ತು ಸಾವಿರ ಚದರ ಅಡಿಯಲ್ಲಿ ವಲಿಮೈ ಸಿನಿಮಾದ ಪೋಸ್ಟರ್ ವೊಂದನ್ನು ಜೀ 5ಬಿಡುಗಡೆ ಮಾಡಿ ಚಿತ್ರರಸಿರಕನ್ನು ಅಟ್ರ್ಯಾಕ್ಟ್ ಮಾಡಿದೆ. ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಈವರೆಗೆ ಇಷ್ಟು ದೊಡ್ಡ ಮಟ್ಟದ ಪೋಸ್ಟರ್ ಅನ್ನು ಯಾರು ಬಿಡುಗಡೆ ಮಾಡಿಲ್ಲ ಎನ್ನುವುದು ವಿಶೇಷ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಅಜಿತ್ ನಟನೆಯ ವಲಿಮೈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ.. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಈಗ ಐದು ಭಾಷೆಯಲ್ಲಿ ಪ್ರೀಮಿಯರ್ ಆಗಲಿದೆ.  ವಲಿಮೈ’ ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಅಜಿತ್‌ ಜೊತೆಗೆ ಹುಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಕನ್ನಡದ ನಟ ಅಚ್ಯುತ್ ಕುಮಾರ್ ಮುಂತಾದವರು ಬಣ್ಣ ಹಚ್ಚಿದ್ದಾರೆ.