Tag: Ajit Kumar

  • ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

    ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

    ಕಾಲಿವುಡ್‌ನ ನಟ ತಲಾ ಅಜಿತ್ (Ajit Kumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 33 ವರ್ಷಗಳು ತುಂಬಿವೆ. ಈ 33 ವರ್ಷಗಳ ಸುದೀರ್ಘ ಪಯಣದಲ್ಲಿ ಅಜಿತ್‌ಕುಮಾರ್ 63 ಸಿನಿಮಾಗಳನ್ನ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ 64ನೇ ಸಿನಿಮಾಗೆ ಸದ್ದಿಲ್ಲದೇ ತಯಾರಿ ಕೂಡಾ ನಡೆಯುತ್ತಿದೆ. 1993ರಲ್ಲಿ ತೆರೆಕಂಡ ಅಮರಾವತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸ್ಪುರದ್ರೂಪಿ ನಾಯಕನಟನಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅಜಿತ್.

    `ಅಮರಾವತಿ’ ಸಿನಿಮಾಗಿಂತಲೂ ಮೊದಲೇ ಬಾಲ ಕಲಾವಿದರಾಗಿ `ಎನ್ ವೀಡು ಎನ್ ಕನವರ್’ ಸಿನಿಮಾದಲ್ಲಿ ನಟಿಸಿದ್ದ ಅಜಿತ್ ಕುಮಾರ್ ಶಾಲಾ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದಾದ ಮೂರುವರ್ಷಗಳ ಬಳಿಕ `ಅಮರಾವತಿ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದವರು. ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಜಿತ್ ಅವರಿಗೆ 33ನೇ ವರ್ಷದ ಸಂಭ್ರಮ. ಈ ಕ್ಷಣವನ್ನ ಅವರ ಅಭಿಮಾನಿಗಳು ಹ್ಯಾಶ್‌ಟ್ಯಾಗ್ ಬಳಸಿ `#33 ಇಯರ್ಸ್‌ ಆಫ್ ಅಜಿತಿಸಂ’ ಅಂತಾ ಸಂಭ್ರಮ ಪಡುತ್ತಿದ್ದಾರೆ. ಇದನ್ನೂ ಓದಿ: ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?

    ಇದೇ ವರ್ಷ ತೆರೆಕಂಡ `ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ನಿರ್ದೇಶಕ ಅಧಿಕ್ ರವಿಚಂದ್ರನ್ ಜೊತೆ ಮತ್ತೆ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಎಕೆ64 ಅನ್ನೋ ವರ್ಕಿಂಗ್ ಟೈಟಲ್‌ನಲ್ಲಿ ಅಜಿತ್ ಮುಂದಿನ ಸಿನಿಮಾ ಅನೌನ್ಸ್ ಮಾಡಲಾಗಿದೆ. ಅಜಿತ್ ಇತ್ತೀಚೆಗೆ ಸಿನಿಮಾಗಿಂತ ಕಾರ್ ರೇಸ್‌ನಲ್ಲೇ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಕಾರ್ ರೇಸ್ ಜೊತೆಗೆ ಸಿನಿಮಾಗೂ ಟೈಮ್ ಕೊಡಲಿದ್ದಾರೆ ಅಜಿತ್.

  • Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

    Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

    – ಎದೆಗೆ ತೀವ್ರ ಹೊಡೆತದಿಂದ ಹೃದಯಕ್ಕೆ ಗಂಭೀರ ಹಾನಿ

    ಚೆನ್ನೈ: ತಮಿಳುನಾಡಿನ ಥಿರುಪ್ಪುವನಮ್ ಪೊಲೀಸ್​ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣವು (Custodial Death Case ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದೀಗ 27 ವರ್ಷದ ದೇಗುಲದ ಸೆಕ್ಯೂರಿಟಿ ಗಾರ್ಡ್​ ಅಜಿತ್ ಕುಮಾರ್ ಮರಣೋತ್ತರ ಪರೀಕ್ಷಾ ವರದಿ ಬಿಡುಗಡೆಯಾಗಿದ್ದು ಆತಂಕಕಾರಿ ಸತ್ಯ ಬಹಿರಂಗಪಡಿಸಿದೆ.

    ಅಜಿತ್ ಕುಮಾರ್ (Ajith Kumar) ಅವರ ಶವಪರೀಕ್ಷೆಯನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಯ (Chennai Hospital) ವೈದ್ಯಕೀಯ ತಜ್ಞರು ನಡೆಸಿದ್ದು, ವರದಿಯ ಪ್ರಕಾರ ಆತನ ದೇಹದ ಮೇಲೆ ಒಟ್ಟು 44 ಗಾಯಗಳು ಕಂಡುಬಂದಿವೆ. ತಲೆಗೆ ತೀವ್ರ ಹೊಡೆತಗಳಿಂದ ಮೆದುಳಿನ ರಕ್ತಸ್ರಾವ ಸಂಭವಿಸಿತ್ತ, ಮುಖದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದಿವೆ.

    ಎದೆಗೆ ತೀವ್ರ ಹೊಡೆತದಿಂದ ಹೃದಯಕ್ಕೆ ಗಂಭೀರ ಹಾನಿಯಾಗಿತ್ತು. ಇದು ಆತನ ಮರಣಕ್ಕೆ ಪ್ರಮುಖ ಕಾರಣವಾಗಿದೆ. ದೇಹದ ಒಳಗಿನ ಅಂಗಾಂಗಗಳಿಗೆ ಗಾಯವಾಗಿದ್ದರಿಂದ ತೀವ್ರ ಆಂತರಿಕ ರಕ್ತಸ್ರಾವ ಸಂಭವಿಸಿತ್ತು. ಕೈ ಮತ್ತು ಕಾಲುಗಳ ಮೇಲೆ ಹಲವು ಗಾಯಗಳು ಮತ್ತು ಮೂಳೆ ಮುರಿತಗಳು ಕಂಡುಬಂದಿವೆ. ಶ್ವಾಸಕೋಶಕ್ಕೆ ಗಾಯವಾಗಿದ್ದರಿಂದ ಉಸಿರಾಟದ ತೊಂದರೆಯೂ ಆತನ ಮರಣಕ್ಕೆ ಕಾರಣವಾಯಿತು.

    ವೈದ್ಯಕೀಯ ತಜ್ಞರ ಪ್ರಕಾರ, ಈ ಗಾಯಗಳು ಕೇವಲ ಆಕಸ್ಮಿಕವಾಗಿ ಉಂಟಾಗಿರಲು ಸಾಧ್ಯವಿಲ್ಲ. ತೀವ್ರವಾದ ದೈಹಿಕ ಹಿಂಸೆ, ಸಾಧಾರಣವಾಗಿ ಬಲವಾದ ವಸ್ತುಗಳಿಂದ ದಾಳಿಯಿಂದ ಈ ಗಾಯಗಳು ಉಂಟಾಗಿವೆ ಎಂದು ಶಂಕಿಸಲಾಗಿದೆ.

    ಘಟನೆಯ ಹಿನ್ನೆಲೆ
    ಅಜಿತ್ ಕುಮಾರ್ ಅವರನ್ನು ಜೂನ್ 29 ರಂದು ಚೆನ್ನೈನ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ, ಕಸ್ಟಡಿಯಲ್ಲಿದ್ದಾಗಲೇ ಆತನ ಮರಣ ಸಂಭವಿಸಿತು. ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ಆರಂಭಿಕವಾಗಿ ಯಾವುದೇ ಸ್ಪಷ್ಟ ವಿವರಣೆ ನೀಡಲಾಗಿರಲಿಲ್ಲ. ಆದರೆ, ಶವಪರೀಕ್ಷೆ ವರದಿಯ ಬಳಿಕ, ಕಸ್ಟಡಿಯಲ್ಲಿ ತೀವ್ರ ಹಿಂಸೆ ನಡೆದಿರುವ ಸಾಧ್ಯತೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.

    ಈ ಘಟನೆಯು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕಸ್ಟಡಿ ಮರಣದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಸ್ಥಳೀಯರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಈ ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆಗೆ ಒತ್ತಾಯಿಸಿವೆ. ಈ ಪ್ರಕರಣವನ್ನು ಸಿಎಂ ಸ್ಟಾಲಿನ್ ಸಿಬಿಐಗೆ ನೀಡಿದ್ದಾರೆ.

  • ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ‘ಧೀರ’ ತೆರೆಗೆ ಬರಲು ಸಿದ್ಧ

    ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ‘ಧೀರ’ ತೆರೆಗೆ ಬರಲು ಸಿದ್ಧ

    ಬೆಂಗಳೂರು: ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದು ತಮಿಳಿನ `ಆರಂಭಂ’ ಸಿನಿಮಾವನ್ನು ಕನ್ನಡದಲ್ಲಿ `ಧೀರ’ ಎಂದು ಹೆಸರಿಟ್ಟು ಡಬ್ ಮಾಡಿ ಬಿಡುಗಡೆಯಾಗಲು ಚಿತ್ರತಂಡ ಸಿದ್ಧವಾಗಿದೆ.

    ಈ ಹಿಂದೆ ತಮಿಳು ನಟ ಅಜಿತ್ ಕುಮಾರ್ ಅಭಿನಯಿಸಿದ ಸಿನಿಮಾ ಕನ್ನಡದಲ್ಲಿ ಡಬ್ ಆಗಿ `ಸತ್ಯದೇವ್ ಐಪಿಎಸ್’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈಗ ಅವರು ಅಭಿನಯಿಸಿರುವ ಮತ್ತೊಂದು ತಮಿಳು ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದೆ.

    ನಟ ಅಜಿತ್ ಅಭಿನಯದ `ಆರಂಭಂ’ ಚಿತ್ರವನ್ನು ಕನ್ನಡದಲ್ಲಿ `ಧೀರ’ ಎಂಬ ಹೆಸರಿನಲ್ಲಿ ಡಬ್ ಮಾಡಿ ತೆರೆಗೆ ತರಲು ನಿರ್ಮಾಪಕರು ಸಿದ್ಧವಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿದು ಸೆನ್ಸಾರ್ ಅನ್ನು ಮುಗಿಸಿ ಚಿತ್ರಮಂದಿರಕ್ಕೆ ಕಾಲಿಡಲು ಸಜ್ಜಾಗಿದೆ.

    ಚಿತ್ರದ ಟೀಸರ್ ಅನ್ನು ಚಿತ್ರತಂಡ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದು, ದರ್ಶನ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಬಿ. ಕೃಷ್ಣಮೂರ್ತಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟ ಆರ್ಯ, ನಟಿ ನಯನತಾರ, ತಾಪ್ಸಿ ಪನ್ನು ಅಭಿನಯಿಸಿದ್ದಾರೆ. ಇದೊಂದು ಲವ್ ಅಂಡ್ ಸಸ್ಪೆನ್ಸ್ ಸಿನಿಮಾವಾಗಿದೆ.

    ಈ ಹಿಂದೆ ಸತ್ಯದೇವ್ ಐಪಿಎಸ್ ಬಿಡುಗಡೆ ಸಂದರ್ಭದಲ್ಲಿ ಜಗ್ಗೇಶ್, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದ ಬಗ್ಗೆ ನಿರ್ಮಾಪಕ ಕೃಷ್ಣಮೂರ್ತಿ ಅವರು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ಗೆ ದೂರು ನೀಡಿದ್ದರು. ಈ ಸಂಬಂಧ ಅಡ್ಡಿಪಡಿಸಿದ್ದಕ್ಕೆ ಸಿಸಿಐ ಸಾರಾ ಗೋವಿಂದ್, ವಾಟಾಳ್ ನಾಗರಾಜ್, ಜಗ್ಗೇಶ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

    ಕೃಷ್ಣಮೂರ್ತಿಯವರು ಕನ್ನಡದಕ್ಕೆ ಡಬ್ ಮಾಡಿರುವ ಮುಂದಿನ ಚಿತ್ರ ಧೀರ ಬಿಡುಗಡೆಗೆ ಯಾರೂ ಯಾವುದೇ ರೀತಿ ಅಡೆ ತಡೆಗಳನ್ನ ಮಾಡಬಾರದೆಂದು ಸಿಸಿಐ ಆದೇಶ ಹೊರಡಿಸಿದೆ. ಹಾಗೆಯೇ ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಗೆ ಆದ ತೊಡಕುಗಳ ಬಗ್ಗೆ ತನಿಖೆ ನಡೆಸುವಂತೆ ಡಿಜಿ (ಇನ್ವೆಸ್ಟಿಗೇಷನ್) ಅವರಿಗೆ ಸಿಸಿಐ ಆದೇಶ ಹೊರಡಿಸಿತ್ತು.