Tag: Ajit Jogi

  • ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ವಿಧಿವಶ

    ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ವಿಧಿವಶ

    ರಾಯ್‍ಪುರ್: ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ (74) ರಾಯ್‍ಪುರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.

    ಛತ್ತೀಸ್‍ಗಢ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಜೋಗಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಮೇ 9ರಿಂದ ರಾಯ್‍ಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ರೇಣು ಜೋಗಿ, ಛತ್ತೀಸ್‍ಗಢದ ಶಾಸಕ ಮತ್ತು ಮಗ ಅಮಿತ್ ಜೋಗಿ ಇದ್ದಾರೆ.

    ಜೋಗಿ ಅವರು ಛತ್ತೀಸ್‍ಗಢ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ 2000 ನವೆಂಬರ್ ನಿಂದ 2003ರ ನವೆಂಬರ್ ವರೆಗೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಜೋಗಿ ಅವರು ಮತ್ತು ಅವರ ಮಗ ಉಪಚುನಾವಣೆಯ ವಿವಾದದಲ್ಲಿ ಸಿಲುಕಿದ ನಂತರ 2016ರಲ್ಲಿ ಕಾಂಗ್ರೆಸ್‍ನಿಂದ ಹೊರ ಬಂದರು. ಬಳಿಕ ಜನತಾ ಕಾಂಗ್ರೆಸ್ ಛತ್ತೀಸ್‍ಗಢ ಪಕ್ಷವನ್ನು ಕಟ್ಟಿದ್ದರು.

  • ನಾನೇ ಸಿಎಂ, ಮಾಯಾವತಿ ಪಿಎಂ: ಅಜಿತ್ ಜೋಗಿ

    ನಾನೇ ಸಿಎಂ, ಮಾಯಾವತಿ ಪಿಎಂ: ಅಜಿತ್ ಜೋಗಿ

    ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಪ್ರಧಾನಿ ಆಗುತ್ತಾರೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಜನತಾ ಕಾಂಗ್ರೆಸ್ ಛತ್ತೀಸಗಢ್ (ಜೆಸಿಸಿ)ಯ ಅಜಿತ್ ಜೋಗಿ ಹೇಳಿದ್ದಾರೆ.

    ಛತ್ತೀಸಗಢ ವಿಧಾನಸಭಾ ಚುನಾವಣೆ ಎದುರಿಸಲು ಬಿಎಸ್‍ಪಿ ಹಾಗೂ ಜೆಸಿಸಿ ಮೈತ್ರಿ ಸಿದ್ಧತೆ ನಡೆಸಿದೆ. ಹೀಗಾಗಿ ಅಜಿತ್ ಜೋಗಿ ನಾನೇ ಮುಖ್ಯಮಂತ್ರಿ ಆಗುತ್ತೇನೆ. ಈ ಮೂಲಕ ನಮ್ಮ ಮೈತ್ರಿ ಪಕ್ಷಗಳು ಹೆಚ್ಚು ಸ್ಥಾನ ಗಳಿಸಿದರೆ ಮಾಯಾವತಿ ಅವರು ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಪಕ್ಷಗಳ ಮೇಲೆ ಮಾಯಾವತಿ ಅವರಿಗೆ ನಂಬಿಕೆ. ಹೀಗಾಗಿ ಅವರು ಪ್ರಾದೇಶಿಕ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡುತ್ತೇವೆ. ಈ ಮೈತ್ರಿಯಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಅಂತಾ ನಿರ್ಧಾರವಾಗಿಲ್ಲ. ಆದರೆ ಮಾಯಾವತಿ ಅವರೇ ಪ್ರಧಾನಿ ಅಭ್ಯರ್ಥಿ ಎನ್ನುವುದು ನನ್ನ ವೈಯಕ್ತಿಕ ವಿಚಾರ ಅಷ್ಟೇ. ದಲಿತ ಮಹಿಳೆಯಾಗಿರುವ ಮಾಯಾವತಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಜಿತ್ ಜೋಗಿ ಯಾರು?:
    ಅಜಿತ್ ಜೋಗಿ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ರಾಜಕೀಯಕ್ಕೆ ಕಾಲಿಟ್ಟ ಜೋಗಿ ಅವರು 1986ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್‍ನಲ್ಲಿ ಇದ್ದರು. ಆದರೆ ವೈಮನಸ್ಸು ಉಂಟಾಗಿ 2016ರಂದು ಕಾಂಗ್ರೆಸ್ ತೊರೆದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಜನತಾ ಕಾಂಗ್ರೆಸ್ ಛತ್ತೀಸಗಢ್ (ಜೆಸಿಸಿ) ಪಕ್ಷ ಕಟ್ಟಿ, ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/