Tag: Ajit

  • ಭವಾನಿ ರೇವಣ್ಣ ಕಾರು ಚಾಲಕನ ಬಂಧನ

    ಭವಾನಿ ರೇವಣ್ಣ ಕಾರು ಚಾಲಕನ ಬಂಧನ

    ಬೆಂಗಳೂರು: ಮಹಿಳೆ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ (Bhavani Revanna) ಕಾರು ಚಾಲಕನನ್ನು ಇದೀಗ ಬಂಧಿಸಲಾಗಿದೆ.

    ಇಂದು ಸಂಜೆ ಎಸ್ಐಟಿಯವರು ಅಜಿತ್‌ನನ್ನು ಚಿಕ್ಕಮಗಳೂರಿನಲ್ಲಿ (Chikkamagaluru) ಬಂಧಿಸಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ನೋಟಿಸ್‌ ಕೊಟ್ಟರೂ ಅಜಿತ್‌ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ವಿಶೇಷ ತನಿಖಾ ತಂಡ (SIT) ಪೊಲೀಸರು ಹೊಳೆನರಸೀಪುರದಲ್ಲಿರುವ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದರು.

    ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯ ಜೊತೆಗೆ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ಇದೇ ಅಜಿತ್ ಅನ್ನೋ ಮಾಹಿತಿ ಇತ್ತು. ಹೀಗಾಗಿಯೇ ಅಜಿತ್ ನನ್ನು ಎಸ್‍ಐಟಿಯವರು ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ – ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

  • SIT ನೋಟಿಸ್‍ಗೆ ಭವಾನಿ ಡೋಂಟ್‍ಕೇರ್ ಇತ್ತ ಡ್ರೈವರ್ ಕೂಡ ನಾಪತ್ತೆ

    SIT ನೋಟಿಸ್‍ಗೆ ಭವಾನಿ ಡೋಂಟ್‍ಕೇರ್ ಇತ್ತ ಡ್ರೈವರ್ ಕೂಡ ನಾಪತ್ತೆ

    ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ವಿರುದ್ಧ ಮಹಿಳೆ ಅಪಹರಣ ಪ್ರಕರಣದಲ್ಲಿ ಈಗ ಎಸ್‍ಐಟಿ (SIT) ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. ಒಂದೆಡೆ ಭವಾನಿ ರೇವಣ್ಣಗೆ (Bhavani Revanna) ನೋಟಿಸ್ ಕೊಟ್ಟರೂ ವಿಚಾರಣೆಗೆ ಬಂದಿಲ್ಲ. ಇನ್ನೊಂದೆಡೆ ಭವಾನಿ ಕಾರು ಚಾಲಕ ಕೂಡ ನಾಪತ್ತೆಯಾಗಿದ್ದಾರೆ.

    ನೋಟಿಸ್ ಕೊಟ್ರೂ ನೋ ಯೂಸ್: ಪ್ರಕರಣದಲ್ಲಿ ಭವಾನಿ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳೋದಕ್ಕಾಗಿ ಎಸ್‍ಐಟಿ ವಿಚಾರಣೆಗೆ ಕರೆದಿದೆ. ಈಗಾಗಲೇ 2 ನೋಟಿಸ್ ನೀಡಿದರು ಕೂಡ ಭವಾನಿ ರೇವಣ್ಣ ವಿಚಾರಣೆಗೆ ಬರೋದಿರಲ್ಲಿ ಎಸ್ ಐಟಿಯ ಸಂಪರ್ಕಕ್ಕೂ ಸಿಕ್ಕಿಲ್ಲ. ಅನಾರೋಗ್ಯದ ನೆಪದಿಂದ ಇದೂವರೆಗೂ ವಿಚಾರಣೆಗೆ ಹಾಜರಾಗಿಯೇ ಇಲ್ಲ. ಆದರೆ ಭವಾನಿ ಎಲ್ಲಿದ್ದಾರೆ…? ಭವಾನಿ ಯಾವಾಗ ವಿಚಾರಣೆಗೆ ಬರ್ತಾರೆ ಅಂತ ಕಾದುಕುಳಿತುಕೊಳ್ಳುವ ರೀತಿ ಆಗಿದೆ. ಇದನ್ನೂ ಓದಿ: ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಸಿಎಂ 2ನೇ ಪತ್ರ- ಪ್ರಧಾನಿಗೆ ಬರೆದ ಲೆಟರ್‌ನಲ್ಲಿ ಏನಿದೆ?

    ಭವಾನಿ ಡ್ರೈವರ್ ನಾಪತ್ತೆ: ಇತ್ತ ಭವಾನಿ ರೇವಣ್ಣ ಡ್ರೈವರ್ ನಾಪತ್ತೆಯಾಗಿದ್ದಾನೆ. ಭವಾನಿ ರೇವಣ್ಣ ಡ್ರೈವರ್ ಅಜಿತ್ (Driver Ajit) ನಾಪತ್ತೆಯಾಗಿದ್ದು, ಎಸ್‍ಐಟಿ ಮೂರು ನೋಟಿಸ್ ಕೊಟ್ಟರು ಕೂಡ ವಿಚಾರಣೆಗೆ ಬಂದಿಲ್ಲ. ಇದೀಗ ಎಸ್‍ಐಟಿ ಪೊಲೀಸರು ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದಾರೆ. ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯ ಜೊತೆಗೆ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ಇದೇ ಅಜಿತ್ ಅನ್ನೋ ಮಾಹಿತಿ ಇದೆ. ಹೀಗಾಗಿಯೇ ಅಜಿತ್ ನನ್ನು ಎಸ್‍ಐಟಿಯವರು ಹುಡುಕಾಟ ನಡೆಸಿದ್ದಾರೆ.

  • ತಮಿಳುನಾಡು ಸಿಎಂ ಫಂಡ್‍ಗೆ 25 ಲಕ್ಷ ದೇಣಿಗೆ ನೀಡಿದ ನಟ ಅಜಿತ್

    ತಮಿಳುನಾಡು ಸಿಎಂ ಫಂಡ್‍ಗೆ 25 ಲಕ್ಷ ದೇಣಿಗೆ ನೀಡಿದ ನಟ ಅಜಿತ್

    ಚೆನ್ನೈ: ನಟ ಸೂರ್ಯ ಹಾಗೂ ಸೋಹದರ ಕಾರ್ತಿ ತಮಿಳುನಾಡು ಸರ್ಕಾರಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಬೆನ್ನಲ್ಲೇ ಇದೀಗ ನಟ ಅಜಿತ್ ಕೂಡ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

    ಹೌದು, ಅಜಿತ್ ಅವರು ತಮಿಳುನಾಡು ಸಿಎಂ ರಿಲೀಫ್ ಪಂಡ್ ಗೆ 25 ಲಕ್ಷ ಹಣವನ್ನು ದೇಣಿಗೆ ನೀಡಿದ್ದಾರೆ. ಮಹಾಮಾರಿ ಕೊರೊನಾ ಎಡರನೇ ಅಲೆಯಿಂದಾಗಿ ನಟ ಇಂದು ಬೆಳಗ್ಗೆ ಬ್ಯಾಂಕ್ ಅಕೌಂಟಿಗೆ ಹಣವನ್ನು ವರ್ಗಾಯಿಸಿದ್ದಾರೆ. ಈ ಸಂಬಂಧ ನಟನ ಆಪ್ತ ಸಹಾಯಕ ಸುರೇಶ್ ಚಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

    ಮೇ 11 ರಂದು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರು ಸಾರ್ವಜನಿಕರು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು. ಆ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೆ ಸೂರ್ಯ ಹಾಗೂ ಕಾತೀ ದೇಣಿಗೆ ನೀಡಿದ್ದು, ಇದೀಗ ಅಜಿತ್ ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

  • ತನ್ನ ನೆಚ್ಚಿನ ನಟ ಯಾರೆಂದು ರಿವೀಲ್ ಮಾಡಿದ್ರು ನಯನತಾರಾ

    ತನ್ನ ನೆಚ್ಚಿನ ನಟ ಯಾರೆಂದು ರಿವೀಲ್ ಮಾಡಿದ್ರು ನಯನತಾರಾ

    ಚೆನ್ನೈ: ದಕ್ಷಿಣ ಭಾರತದ ಸುಂದರ ನಟಿ ನಯನ ತಾರಾಗೆ ದೇಶಾದ್ಯಂತ ಅಭಿಮಾನಿಗಳಿದ್ದು, ಅಸಂಖ್ಯಾತ ಅಭಿಮಾನಿಗಳಿಗೆ ನಯನತಾರಾ ನೆಚ್ಚಿನ ತಾರೆಯಾಗಿದ್ದಾರೆ. ಆದ್ರೆ ಈ ಸೌತ್ ಇಂಡಿಯಾ ಬೆಡಗಿಗೆ ಇಷ್ಟವಾದ ನಟ ಯಾರು ಅನ್ನೋ ರಹಸ್ಯವನ್ನು ಸ್ವತಃ ನಯನತಾರಾ ಹೊರಹಾಕಿದ್ದಾರೆ.

    ತಮಿಳುನಾಡಿನಲ್ಲಿ ಇತ್ತೀಚಿಗೆ ನಡೆದ ವಿಕಾದನ್ ಅವಾರ್ಡ್ ಕಾರ್ಯಕ್ರಮದಲ್ಲಿ ನಯನತಾರಾ ಪಾಲ್ಗೊಂಡಿದ್ದರು. ತಮಿಳಿನ ಆರಮ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಯನತಾರಾ ಮುಡಿಗೇರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಪ್ರಶ್ನೆ ಕೇಳಿದಾಗ ಅವರು ತಾಲಾ ಅಜಿತ್ ನನ್ನ ನೆಚ್ಚಿನ ನಟ ಎಂದು ಹೇಳಿದ್ರು.

    ನಯನತಾರಾ ಮಾತಿಗೆ ಇಳೆಯ ದಳಪತಿ ವಿಜಯ್, ವಿಜಯ್ ಸೇತುಪತಿ ಸೇರಿದಂತೆ ಹಲವು ಸ್ಟಾರ್ ನಟರು ಶಿಳ್ಳೆ ಚಪ್ಪಾಳೆ ಹೊಡೆದರು. ನಂತರ ಮರ್ಸಲ್ ವಿಜಯ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ನಯನತಾರಾ, ವಿಜಯ್ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಅವರು ಯಾವಾಗಲು ಕಾಮ್ ಆಗಿರ್ತಾರೆ ಎಂದು ಹೇಳಿದ್ರು. ನಯನತಾರಾ ಅಜಿತ್ ಜೊತೆ ಏಕಾನ್, ಬಿಲ್ಲಾ, ಆರಂಭಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    ನಯನತಾರಾ ಮತ್ತು ಅಜಿತ್ ಇಬ್ಬರು ತೆರೆಯ ಮೇಲೆ ಉತ್ತಮ ಜೋಡಿ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅರಮ್ ಸಿನಿಮಾದ ಮೊದಲು ನಯನತಾರಾ ವಿಕಾದನ್ ಅವಾರ್ಡ್ಸ್  ನಾನುಮ್ ರೌಡಿ ಥಾನ್ ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.