ದಕ್ಷಿಣ ಕನ್ನಡ: ಭಾರತ ತಂಡದ ಕಿಕ್ರೆಟಿಗ ಅಜಿಂಕ್ಯ ರಹಾನೆ (Ajinkya Rahane) ಬಪ್ಪನಾಡು (Bappanadu) ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Sri Durga Parameshwari Temple) ಭೇಟಿ ನೀಡಿ, ದೇವಿ ದರ್ಶನ ಪಡೆದರು.
ಮಂಗಳೂರಿನ ಕರಾವಳಿ ಮೈದಾನದಲ್ಲಿ ಆಯೋಜಿಸಲಾಗಿದ್ದ 10ನೇ ವರ್ಷದ ಪಿಲಿನಲಿಕೆ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಅಜಿಂಕ್ಯ ರಹಾನೆ ಆಗಮಿಸಿದ್ದರು. ಈ ವೇಳೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಜೊತೆ ಕಾರ್ಯದರ್ಶಿ ಡಾ. ಪಿ ವಿ ಶೆಟ್ಟಿ ಬಪ್ಪನಾಡು ಕ್ಷೇತ್ರಕ್ಕೆ ಬರಮಾಡಿಕೊಂಡರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್
ಮುಲ್ಕಿ ವಿಜಯ ರೈತ ಸೊಸೈಟಿಯ ನಿರ್ದೇಶಕ ದೇವಿಪ್ರಸಾದ್ ಕೆಂಪುಗುಡ್ಡೆ, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕೋಲ್ಕತ್ತಾ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 1 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಕೆಕೆಆರ್ 11 ಅಂಕಗಳೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್‌ಗೆ 207 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ರಾಜಸ್ಥಾನದ ಪರ ರಿಯಾನ್ ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ಸಿಡಿಸಿ 95 ರನ್ ಕಲೆ ಹಾಕಿದರು. ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 1 ಸಿಕ್ಸರ್ 5 ಬೌಂಡರಿ ನೆರವಿನಿಂದ 34 ರನ್, ಶಿಮ್ರಾನ್ ಹೆಟ್ಮೆಯರ್ 23 ಎಸೆತಗಲ್ಲಿ 29 ರನ್, ಶುಭಂ ದುಬೆ 14 ಎಸೆತಗಳಲ್ಲಿ 25 ರನ್ ಕಲೆ ಹಾಕಿದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ 2, ಹರ್ಷಿತ್ ರಾಣಾ 2, ಮೊಯಿನ್ ಅಲಿ 2, ವೈಭವ್ ಅರೋರಾ 1 ವಿಕೆಟ್ ಕಬಳಿಸಿದರು.
ಕೆಕೆಆರ್ ಪರ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. ಅಜಿಂಕ್ಯ ರಹಾನೆ 30,ಅಂಗ್ಕ್ರಿಸ್ ರಘುವಂಶಿ 44, ರಹ್ಮನುಲ್ಹಾ ಗುರ್ಬಜ್ 35 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಕೇವಲ 13 ರನ್ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಸುನಿಲ್ ನರೈನ್ ಕೇವಲ ಯುಧ್ವೀರ್ ಸಿಂಗ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. 2ನೇ ವಿಕೆಟ್‌ಗೆ ರೆಹ್ಮನುಲ್ಲಾ ಗುರ್ಬಜ್ ಹಾಗೂ ಅಜಿಂಕ್ಯ ರಹಾನೆ 56 ರನ್ಗಳಿಸಿದರು. ಗುರ್ಬಜ್ 25 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 35 ರನ್‌ಗಳಿಸಿ ತೀಕ್ಷಣ ಬೌಲಿಂಗ್‌ನಲ್ಲಿ ಹೆಟ್ಮೇಯರ್ಗೆ ಕ್ಯಾಚ್ ನೀಡಿದರು. ನಂತರ ರಹಾನೆ ಜೊತೆಗೂಡಿದ ರಘವಂಶಿ ನಿಧಾನವಾಗಿ ವಿಕೆಟ್ ಉಳಿಸಿಕೊಂಡು 31 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ಆಡಿದರು.
ರಹಾನೆ 24 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 30 ರನ್ಗಳಿಸಿದರೆ, ರಘವಂಶಿ 31 ಎಸೆತಗಳಲ್ಲಿ 5 ಬೌಂಡರಿ ಸಹಿತ 44 ರನ್ಗಳಿಸಿದರು. ರಘುವಂಶಿ ರಸೆಲ್ ಜೊತೆಗೆ 61 ರನ್‌ಗಳ ಜೊತೆಯಾಟ ಆಡಿದರು.
ಆರ್‌ಆರ್ ಪರ ಜೋಫ್ರಾ ಆರ್ಚರ್, ಯುದ್ವೀರ್ ಸಿಂಗ್, ಮಹೇಶ್ ತೀಕ್ಷಣ, ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಕೋಲ್ಕತ್ತಾ: ಈಡನ್ ಗಾರ್ಡನ್ ಮೈದಾನದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ವಿರುದ್ಧ 4 ರನ್‌ಗಳ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ.
ಐಪಿಎಲ್ (IPL 2025) ಇತಿಹಾಸದಲ್ಲಿ ಈಡನ್ ಗಾರ್ಡನ್ ಮೈದಾನದಲ್ಲಿ ಅತಿಹೆಚ್ಚು ರನ್ ಗಳಿಸಿದ 3ನೇ ತಂಡ ಎಂಬ ವಿಶೇಷ ಸಾಧನೆಗೆ ಪಾತ್ರವಾಗಿದೆ. 2024ರ ಆವೃತ್ತಿಯಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 262 ರನ್ ಗಳಿಸಿದ ಪಂಬಾಜ್ ಕಿಂಗ್ಸ್ (PBKS) ತಂಡ ಮೊದಲ ಅಗ್ರ ಸ್ಥಾನದಲ್ಲಿದೆ.
ಈಡನ್ ಗಾರ್ಡನ್‌ನಲ್ಲಿ ಅತಿಹೆಚ್ಚು ರನ್ ಸಿಸಿಡಿದ ಟಾಪ್-5 ತಂಡಗಳು
ಪಂಜಾಬ್ ಕಿಂಗ್ಸ್ 262ಕ್ಕೆ 2 – ಕೆಕೆಆರ್ ವಿರುದ್ಧ – 2024
ಕೆಕೆಆರ್ – 261ಕ್ಕೆ 6 – ಪಂಬಾಬ್ ವಿರುದ್ಧ – 2024
ಎಲ್‌ಎಸ್‌ಜಿ – 238ಕ್ಕೆ 3 – ಕೆಕೆಆರ್ ವಿರುದ್ಧ – 2025
ಸಿಎಸ್‌ಕೆ – 235ಕ್ಕೆ 4 – ಕೆಕೆಆರ್ ವಿರುದ್ಧ – 2023
ಕೆಕೆಆರ್ – 234ಕ್ಕೆ 7 – ಲಕ್ನೂ ವಿರುದ್ಧ – 2025
ಸಿಕ್ಸರ್-ಬೌಂಡರಿ ಸುರಿಮಳೆ
ಸಿಕ್ಸರ್ ಬೌಂಡರಿಗಳ ಈ ಭರ್ಜರಿ ಆಟದಲ್ಲಿ ಉಭಯ ತಂಡಗಳಿಂದ ಒಟ್ಟು 25 ಸಿಕ್ಸರ್, 45 ಬೌಂಡರಿಗಳು ಸಿಡಿದವು. ಲಕ್ನೋ ಪರ 15 ಸಿಕ್ಸರ್, 18 ಬೌಂಡರಿ, ಕೆಕೆಆರ್ ಪರ 10 ಸಿಕ್ಸರ್, 27 ಬೌಂಡರಿ ದಾಖಲಾಯಿತು.
ಕೊನೇ ಓವರ್‌ನಲ್ಲಿ ಸೋತ ಕೆಕೆಆರ್
ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯ್ ಬೌಲಿಂಗ್‌ನಲ್ಲಿದ್ದರೆ, ಹರ್ಷಿತ್ ರಾಣಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನೇ ರಾಣ ಬೌಂಡರಿ ಚಚ್ಚಿದರು, ಆದ್ರೆ 2ನೇ ಎಸೆತದಲ್ಲಿ ರನ್ ಕದಿಯುಲ್ಲಿ ವಿಫಲರಾದ ರಾಣಾ 3ನೇ ಎಸೆತದಲ್ಲಿ 1ರನ್ ಕದ್ದರು. ಮುಂದಿನ ಮೂರು ಎಸೆತಗಳಲ್ಲಿ ರಿಂಕು ಸಿಂಗ್ ಕ್ರಮವಾಗಿ 4, 4, 6 ಬಾರಿಸಿದರು. ಆದಾಗ್ಯೂ ಕೆಕೆಆರ್ 4 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಪೇರಿಸಿತು. 239 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.
ಕೋಲ್ಕತ್ತಾ: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ (Rinku Singh), ಹರ್ಷಿತ್ ರಾಣಾ ಸಿಕ್ಸರ್ ಬೌಂಡರಿಗಳ ಹೊಡಿ ಬಡಿ ಆಟದ ಹೊರತಾಗಿಯೂ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿದೆ.
ಕೊನೇ ಓವರ್ ಥ್ರಿಲ್ಲರ್
ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯಿ (Ravi Bishnoi) ಬೌಲಿಂಗ್‌ನಲ್ಲಿದ್ದರೆ, ಹರ್ಷಿತ್ ರಾಣಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನೇ ರಾಣ ಬೌಂಡರಿ ಚಚ್ಚಿದರು, ಆದ್ರೆ 2ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದ ರಾಣಾ 3ನೇ ಎಸೆತದಲ್ಲಿ 1 ರನ್ ಕದ್ದರು. ಮುಂದಿನ ಮೂರು ಎಸೆತಗಳಲ್ಲಿ ರಿಂಕು ಸಿಂಗ್ ಕ್ರಮವಾಗಿ 4, 4, 6 ಬಾರಿಸಿದರು. ಆದಾಗ್ಯೂ ಕೆಕೆಆರ್ 4 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಪೇರಿಸಿತು. 239 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೆಕೆಆರ್ ಭರ್ಜರಿ ಇನ್ನಿಂಗ್ಸ್ ಕಟ್ಟಿತ್ತು. ಪವರ್ ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡರೂ ಸ್ಫೋಟಕ 90 ರನ್ ಕಲೆಹಾಕಿತ್ತು. ಅಜಿಂಕ್ಯಾ ರಹಾನೆ (Ajinkya Rahane), ಸುನೀಲ್ ನರೇನ್, ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ ಹೆಚ್ಚಿಸುತ್ತಲೇ ಸಾಗಿತು. ಇದರಿಂದ ಕೆಕೆಆರ್ ಸುಲಭ ಜಯ ಸಾಧಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದ್ರೆ 15, 16, 17ನೇ ಓವರ್‌ನಲ್ಲಿ ಒಂದೊಂದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಕೆಕೆಆರ್ ಸಂಕಷ್ಟಕ್ಕೀಡಾಯಿತು.
ಕೆಕೆಆರ್ ಪರ ಅಜಿಂಕ್ಯಾ ರಹಾನೆ 35 ಎಸೆತಗಳಲ್ಲಿ 61 ರನ್ (2 ಸಿಕ್ಸರ್, 8 ಬೌಂಡರಿ) ಚಚ್ಚಿದ್ರೆ, ಸುನೀಲ್ ನರೇನ್ 13 ಎಸೆತಗಳಲ್ಲಿ 30 ರನ್ (2 ಸಿಕ್ಸರ್, 4 ಬೌಂಡರಿ), ವೆಂಕಟೇಶ್ ಅಯ್ಯರ್ 45 ರನ್ (29 ಎಸೆತ, 6 ಬೌಂಡರಿ 1 ಸಿಕ್ಸರ್) ಬಾರಿಸಿದ್ರು. ಕೊನೆಯಲ್ಲಿ ರಿಂಕು ಸಿಂಗ್ 15 ಎಸೆತಗಳಲ್ಲಿ 38 ರನ್ ಬಾರಿಸಿದ್ರೆ, ಹರ್ಷಿತ್ ರಾಣಾ 9 ಎಸೆತಗಳಲ್ಲಿ 10 ರನ್ ಕೊಡುಗೆ ನೀಡಿದರು.
ಲಕ್ನೋ ಪರ ಆಕಾಶ್ ದೀಪ್, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಿತ್ತರೆ, ಅವೇಶ್ ಖಾನ್, ದಿಗ್ವೇಷ್ ರಾಥಿ, ರವಿ ಬಿಷ್ಣೋಯಿ, ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಕೋಲಸ್ ಪೂರನ್ (Nicholas Pooran) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 238 ರನ್ ಕಲೆಹಾಕಿತು. ಬ್ಯಾಟಿಂಗ್ ಸ್ನೇಹಿ ಪಿಚ್ ಲಾಭ ಪಡೆದ ಲಕ್ನೋ ತಂಡ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು.
ಆರಂಭಿಕರಾದ ಏಡನ್ ಮಾರ್ಕ್ರಮ್, ಮಿಚೆಲ್ ಮಾರ್ಷ್ (Mitchell Mar) ಜೋಡಿ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 99 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಏಡನ್ ಮಾರ್ಕ್ರಮ್ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಮಾರ್ಷ್ ಜೊತೆಗೂಡಿ ಪೂರನ್ ಸಹ ಅಬ್ಬರಿಸಲು ಶುರು ಮಾಡಿದರು. 2ನೇ ವಿಕೆಟಿಗೆ ಈ ಜೋಡಿ 30 ಎಸೆತಗಳಲ್ಲಿ 71 ರನ್ ಜೊತೆಯಾಟ ನೀಡಿದ್ರೆ 3ನೇ ವಿಕೆಟ್‌ಗೆ ಅಬ್ದುಲ್ ಸಮದ್ ಹಾಗೂ ಪೂರನ್ ಜೋಡಿ ಕೇವಲ 18 ಎಸೆತಗಳಲ್ಲಿ ಸ್ಫೋಟಕ 51 ರನ್ ಗಳ ಜೊತೆಯಾಟ ಪೇರಿಸಿತು. ಇದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ನಿಕೋಲಸ್ ಸಿಡಿಲಬ್ಬರದ ಬ್ಯಾಟಿಂಗ್:
ಪ್ರಸಕ್ತ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ನಿಕೋಲಸ್ ಪೂರನ್ ಪ್ರಸಕ್ತ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 10 ಓವರ್‌ಗಳ ಬಳಿಕ ಕಣಕ್ಕಿಳಿದ ಪೂರನ್ 8 ಭರ್ಜರಿ ಸಿಕ್ಸರ್, 7 ಬೌಂಡರಿಗಳೊಂದಿಗೆ 36 ಎಸೆತಗಳಲ್ಲಿ 87 ರನ್ (241.66 ಸ್ಟ್ರೈಕ್‌ರೇಟ್) ಸಿಡಿಸಿ ಅಜೇಯರಾಗುಳಿದರು. ಇದರೊಂದಿಗೆ ಮಿಚೆಲ್ ಮಾರ್ಷ್ ಸಹ 48 ಎಸೆತಗಳಲ್ಲಿ 81 ರನ್ (5 ಸಿಕ್ಸರ್, 6 ಬೌಂಡರಿ), ಏಡನ್ ಮಾರ್ಕ್ರಮ್ 47 ರನ್ (28 ಎಸೆತ, 2 ಸಿಕ್ಸರ್, 4 ಬೌಂಡರಿ), ಅಬ್ದುಲ್ ಸಮದ್ 6 ರನ್, ಡೇವಿಡ್ ಮಿಲ್ಲರ್ ಅಜೇಯ 4 ರನ್ ಕೊಡುಗೆ ನೀಡಿದರು.
ಕೆಕೆಆರ್ ಪರ ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 51 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರೆ, ಆ್ಯಂಡ್ರೆ ರಸೆಲ್ 2 ಓವರ್‌ಗಳಲ್ಲಿ 32 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.
ಮುಂಬೈ: ಕೆಲ ವರ್ಷಗಳಿಂದ ಮುಂಬೈ (Mumbai) ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಜೊತೆಗಿನ ಸಂಬಂಧ ಹಳಸಿದ್ದರಿಂದ 23 ವರ್ಷದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಗೋವಾ (Goa) ತಂಡಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ.
2025 ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ (Jammu Kashmir) ವಿರುದ್ಧ ಸೋತಿತ್ತು. ಸೋತ ನಂತರ ತಂಡ ಸಭೆಯಲ್ಲಿ ರಹಾನೆ ಮತ್ತು ಕೋಚ್ ಓಂಕಾರ್ ಸಾಲ್ವಿ ಅವರು ಜೈಸ್ವಾಲ್ ಅವರನ್ನು ಟಾರ್ಗೆಟ್ ಮಾಡಿದ್ದರು. ಇದರಿಂದ ಸಿಟ್ಟಾದ ಜೈಸ್ವಾಲ್ ರಹಾನೆ ಕಿಟ್ ಬ್ಯಾಗ್ ಅನ್ನು ಒದ್ದಿದ್ದರು.
ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ 4 ಮತ್ತು 26 ರನ್ ಹೊಡೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 120 ರನ್‌ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟ್ ಆಗಿ 5 ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು.
ರಹಾನೆ ಮತ್ತು ತಂಡದ ಕೋಚ್ ಓಂಕಾರ್ ಸಾಲ್ವಿ ಪಂದ್ಯದ ನಂತರ ಜೈಸ್ವಾಲ್ ಅವರ ಆಟದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಆದರೆ ತಂಡದ ಸೋಲಿಗೆ ತನ್ನನ್ನು ಒಬ್ಬನನ್ನೇ ಹೊಣೆ ಮಾಡಿದ್ದಕ್ಕೆ ಜೈಸ್ವಾಲ್ ಸಿಟ್ಟಾಗಿದ್ದರು.
ರಹಾನೆ ಮತ್ತು ಜೈಸ್ವಾಲ್ ನಡುವಿನ ಸಂಬಂಧ ಹಾಳಾಗಲು ಜಮ್ಮು ಕಾಶ್ಮೀರ ವಿರುದ್ಧ ಸೋಲು ಒಂದೇ ಕಾರಣವಲ್ಲ. 2022 ರಲ್ಲಿ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಎದುರಾಳಿ ತಂಡದ ರವಿತೇಜ ಅವರ ಮೇಲೆ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ಜೈಸ್ವಾಲ್ ಅವರನ್ನು ಮೈದಾನದಿಂದ ರಹಾನೆ ಹೊರಹೋಗುವಂತೆ ಸೂಚಿಸಿದ್ದರು. ಈ ಘಟನೆಯ ಬಳಿಕ ಜೈಸ್ವಾಲ್ ಮತ್ತು ರಹಾನೆ ನಡುವಿನ ಸಂಬಂಧ ಹಳಸಲು ಆರಂಭವಾಯಿತು.
ಜೈಸ್ವಾಲ್ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಿಟ್ಟು ಗೋವಾಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಆಡಳಿತ ಮಂಡಳಿ ಅವರ ವಿನಂತಿಯನ್ನು ಸ್ವೀಕರಿಸಿತ್ತು. ಹೀಗಾಗಿ ಜೈಸ್ವಾಲ್ 2025-26ರ ಋತುವಿನಿಂದ ಗೋವಾ ಪರ ಆಡಲಿದ್ದಾರೆ. ಇದನ್ನೂ ಓದಿ: ಸಿಡ್ನಿ ಸಿಕ್ಸರ್ ಪರ ಆಡಲಿದ್ದಾರೆ ಕೊಹ್ಲಿ!
ಭಾರತದ ಎಲ್ಲ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡದಲ್ಲಿಲ್ಲದಿದ್ದಾಗ ದೇಶೀಯ ಕ್ರಿಕೆಟ್ ಆಡಬೇಕು ಎಂಬ ಬಿಸಿಸಿಐ ಕಟ್ಟುನಿಟ್ಟಿನ ನಿರ್ದೇಶನ ಜಾರಿ ಮಾಡಿದೆ. ನಿರ್ದೇಶನದ ಅನ್ವಯ ಜೈಸ್ವಾಲ್ ಕೊನೆಯದಾಗಿ ಜನವರಿ 23-25ರ ಅವಧಿಯಲ್ಲಿ ನಡೆದ ರಣಜಿ ಟ್ರೋಫಿ ಗ್ರೂಪ್ ಎ ಲೀಗ್ ಸುತ್ತಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ್ದರು.
ಜೈಸ್ವಾಲ್ ಅವರು ಮುಂಬೈನಿಂದ ಗೋವಾಕ್ಕೆ ನಿಷ್ಠೆ ಬದಲಿಸಿದ ಮೂರನೇ ಕ್ರಿಕೆಟರ್ ಆಗಿದ್ದಾರೆ. ಈ ಹಿಂದೆ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ದೇಶ್ ಲಾಡ್ ಅವರು 2022–23 ರಿಂದ ಗೋವಾ ಪರ ಆಡಿದ್ದರು. ಇವರಲ್ಲಿ ಲಾಡ್ ಅವರು ಎಂಸಿಎ ನಿಯಮದಂತೆ ‘ಕೂಲಿಂಗ್ ಆಫ್’ ಅವಧಿ ಪೂರೈಸಿ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ.
ಕೋಲ್ಕತ್ತಾ: ಫಿಲ್ ಸಾಲ್ಟ್ (Phil Salt), ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಅರ್ಧಶತಕ ನೆರವಿನಿಂದ ಆರ್‌ಸಿಬಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್ 2025ರಲ್ಲಿ (IPL 2025) ಆರ್‌ಸಿಬಿ (RCB) ಶುಭಾರಂಭ ಪಡೆದಿದೆ. ತವರಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 175 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 16.2 ಓವರ್‌ಗಳಿಗೆ 177 ರನ್ ಗಳಿಸಿ ಗೆದ್ದು ಬೀಗಿತು.
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಮೊದಲ ಓವರ್‌ನಲ್ಲೇ ಕ್ವಿಂಟನ್ ಡಿಕಾಕ್ (4) ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಈ ವೇಳೆ ಜೊತೆಯಾದ ಸುನಿಲ್ ನರೈನ್ ಮತ್ತು ಅಜಿಂಕ್ಯಾ ರಹಾನೆ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ರಹಾನೆ ಕೇವಲ 25 ಬಾಲ್‌ಗಳಿಗೆ ಫಿಫ್ಟಿ ಬಾರಿಸಿ ಅಬ್ಬರಿಸಿದರು.
ಇತ್ತ ಅಜಿಂಕ್ಯಾ 31 ಎಸೆತಕ್ಕೆ 56 ರನ್ (6 ಫೋರ್, 4 ಸಿಕ್ಸರ್) ಗಳಿಸಿದ್ದರು. ಅತ್ತ ನರೈನ್ 26 ಬಾಲ್‌ಗೆ 44 ರನ್ (5 ಫೋರ್, 3 ಸಿಕ್ಸರ್) ಬಾರಿಸಿದ್ದರು. ರಹಾನೆ ಮತ್ತು ನರೈನ್ ಶತಕದ ಜೊತೆಯಾಟ ಆರ್‌ಸಿಬಿಗೆ ನುಂಗಲಾರದ ತುತ್ತಾಗಿತ್ತು. ಈ ವೇಳೆ ರಶಿಕ್ ಸಲಾಮ್ ಬೌಲಿಂಗ್‌ನಲ್ಲಿ ನರೈನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಸ್ಪಿನ್ ಜಾದು ಮಾಡಿದ ಕೃಣಾಲ್ ಪಾಂಡ್ಯ, ಕೆಕೆಆರ್ ಓಟಕ್ಕೆ ಬ್ರೇಕ್ ಹಾಕಿದರು. ಪ್ರಮುಖ ಬ್ಯಾಟರ್‌ಗಳಾದ ವೆಂಕಟೇಶ್ ಅಯ್ಯರ್ (6), ರಿಂಕು ಸಿಂಗ್ (12) ಇಬ್ಬರನ್ನೂ ಹೊರಹಾಕುವಲ್ಲಿ ಯಶಸ್ವಿಯಾದರು.
ಅಂಗ್‌ಕ್ರಿಶ್ ರಘುವಂಶಿ (30) ರನ್ ಗಳಿಸಿ ಕೆಕೆಆರ್ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು. ಕೊನೆಗೆ ಆರ್‌ಸಿಬಿ ಬೌಲರ್‌ಗಳ ಪರಾಕ್ರಮ ಮುಂದುವರಿದು 174 ರನ್‌ಗಳಿಗೆ ಕೆಕೆಆರ್ ಅನ್ನು ಕಟ್ಟಿಹಾಕಿದರು.
ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ ಉತ್ತಮ ಬೌಲಿಂಗ್ ಪ್ರದರ್ಶನ ತೋರಿ 3 ವಿಕೆಟ್ ಕಿತ್ತು. ಜೋಶ್ ಹ್ಯಾಜಲ್‌ವುಡ್ ಕೂಡ ಕಡಿಮೆ ರನ್ ಕೊಟ್ಟು 2 ವಿಕೆಟ್ ಕಬಳಿಸಿ ಗಮನ ಸೆಳೆದರು. ಇನ್ನು ಯಶ್ ದಯಾಳ್, ರಶಿಕ್ ಸಲಾಮ್, ಸುಯೇಶ್ ಶರ್ಮಾ ತಲಾ 1 ವಿಕೆಟ್ ಕಿತ್ತರು.
175 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಅಬ್ಬರಿಸಿತು. ಓಪನರ್‌ಗಳಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೊತೆಯಾಟ ತಂಡದ ಭದ್ರಬುನಾದಿ ಹಾಕಿಕೊಟ್ಟಿತು. ಇಬ್ಬರು ಕೂಡ ಅರ್ಧಶತಕ ಸಿಡಿಸಿ ಮಿಂಚಿದರು. ಸಾಲ್ಟ್ 31 ಬಾಲ್‌ಗೆ 56 ರನ್ (9 ಫೋರ್, 2 ಸಿಕ್ಸರ್) ಹಾಗೂ ಕೊಹ್ಲಿ 36 ಬಾಲ್‌ಗೆ 56 ರನ್ (4 ಫೋರ್, 3 ಸಿಕ್ಸರ್) ಬಾರಿಸಿದರು.
ಹೊಸ ನಾಯಕನಾಗಿ ಬಂದ ರಜತ್ ಪಾಟೀದಾರ್ ಕೂಡ ಜವಾಬ್ದಾರಿಯುತ (34 ರನ್, 16 ಬಾಲ್, 5 ಫೋರ್, 1 ಸಿಕ್ಸರ್) ಆಟ ಆಡಿದರು. ದೇವದತ್ ಪಡಿಕಲ್ (10), ಲಿಯಾಮ್ ಲಿವಿಂಗ್‌ಸ್ಟೋನ್ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಹೈದರಾಬಾದ್: ಅಗ್ರ ಕ್ರಮಾಂಕದ ಆಟಗಾರರ ಕಳಪೆ ಬ್ಯಾಟಿಂಗ್ ಹಾಗೂ ಕಳಪೆ ಬೌಲಿಂಗ್‌ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (hennai Super Kings) ಎದುರು ಹೀನಾಯ ಸೋಲು ಅನುಭವಿಸಿದೆ. ಸಂಘಟಿತ ಪ್ರದರ್ಶನ ತೋರಿದ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತವರಿನಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು 18.1 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವು ಸ್ಥಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
ಚೇಸಿಂಗ್ ಆರಂಭಿಸಿದ ಹೈದರಾಬಾದ್ ತಂಡದ ಬ್ಯಾಟರ್‌ಗಳು ಆರಂಭದಲ್ಲೇ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದರು. ಪವರ್ ಪ್ಲೇ ನಲ್ಲಿ ಅಭಿಷೇಕ್ ಶರ್ಮಾ (Abhishek Sharma), ಏಡನ್ ಮಾರ್ಕ್ರಮ್ ಹಾಗೂ ಟ್ರಾವಿಸ್ ಹೆಡ್ ಅವರ ಸ್ಫೋಟಕ ಪ್ರದರ್ಶನ ತಂಡದ ಗೆಲುವಿಗೆ ನೆರವಾಯಿತು. ಮೊದಲ ವಿಕೆಟ್‌ಗೆ ಕೇವಲ 2.4 ಓವರ್‌ಗಳಲ್ಲೇ 46 ರನ್ ಸಿಡಿಸಿದ್ದ ಸನ್ ರೈಸರ್ಸ್, 6 ಓವರ್‌ಗಳಲ್ಲಿ ಬರೋಬ್ಬರಿ 78 ರನ್ ಬಾರಿಸಿತ್ತು. ಪವರ್ ಪ್ಲೇ ಬಳಿಕ ಸ್ಪಿನ್ ಬೌಲರ್‌ಗಳು ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರೂ ಗೆಲುವು ಕೈತಪ್ಪಿತು.
ಸನ್ ರೈಸರ್ಸ್ ಪರ 308.33 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 37 ರನ್ (4 ಸಿಕ್ಸರ್, 3 ಬೌಂಡರಿ) ಸಿಡಿಸಿದರು. ಏಡನ್ ಮಾರ್ಕ್ರಮ್ 50 ರನ್ (36 ಎಸೆತ, 1 ಸಿಕ್ಸರ್, 4 ಬೌಂಡರಿ), ಟ್ರಾವಿಸ್ ಹೆಡ್ 31 ರನ್, ಶಾಬಾಜ್ ಅಹ್ಮದ್ 18 ರನ್, ಹೆನ್ರಿಕ್ ಕ್ಲಾಸೆನ್ 10 ರನ್, ನಿತಿಶ್ ಕುಮಾರ್ ರೆಡ್ಡಿ 14 ರನ್ ಗಳಿಸಿದರು. ಸಿಎಸ್‌ಕೆ ಪರ ಮೊಯಿನ್ ಅಲಿ 2 ವಿಕೆಟ್ ಕಿತ್ತರೆ, ದೀಪಕ್ ಚಹಾರ್ ಮತ್ತು ಮಹೀಶ್ ತೀಕ್ಷಣ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ರಚಿನ್ ರವೀಂದ್ರ 12 ರನ್‌ಗಳಿಗೆ ಔಟಾಗುತ್ತಿದ್ದಂತೆ, ನಾಯಕ ರುತುರಾಜ್ ಗಾಯಕ್ವಾಡ್ ಸಹ ಶೀಘ್ರವೇ ಪೆವಿಲಿಯನ್‌ಗೆ ಮರಳಿದರು.
ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ತಂಡಕ್ಕೆ ಅಗತ್ಯ ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ಆದ್ರೆ ಡೆತ್ ಓವರ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರಸರ್ಶನದಿಂದಾಗಿ ಸಿಎಸ್‌ಕೆ 170 ರನ್‌ಗಳ ಗಡಿ ದಾಟುವಲ್ಲಿಯೂ ವಿಫಲವಾಯಿತು. ಸಿಎಸ್‌ಕೆ ಪರ ಶಿವಂ ದುಬೆ 45 ರನ್, ರಹಾನೆ 35 ರನ್, ಜಡೇಜಾ 31 ರನ್, ರುತುರಾಜ್ (Ruturaj Gaikwad) 26 ರನ್, ರಚಿನ್ 12 ರನ್, ಡೇರಿಲ್ ಮಿಚೆಲ್ 13 ರನ್, ಎಂ.ಎಸ್ ಧೋನಿ (MS Dhoni) 1 ರನ್ ಗಳಿಸಿದರು.
ಹೈದರಾಬಾದ್ ಪರ ಅಭಿಷೇಕ್ ಶರ್ಮಾ, ಭುನೇಶ್ವರ್ ಕುಮಾರ್, ಟಿ ನಟರಾಜನ್, ಪ್ಯಾಟ್ ಕಮ್ಮಿನ್ಸ್ (Pat Cummins), ಶಹಬಾಜ್ ಅಹ್ಮದ್ ಹಾಗೂ ಜಯದೇವ್ ಉನದ್ಕಟ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಲಂಡನ್: ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ (WTC) 2ನೇ ಆವೃತ್ತಿಯಲ್ಲಿ ಮೊದಲಬಾರಿಗೆ ಆಸ್ಟ್ರೇಲಿಯಾ (Australia) ಚಾಂಪಿಯನ್ ಪಟ್ಟಕೇರಿದೆ. ಅಗ್ರಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ (Team India) ಸತತ ಎರಡನೇ ಬಾರಿ ಫೈನಲ್‌ನಲ್ಲಿ ಸೋತು ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
2019ರಲ್ಲಿ ಆರಂಭಗೊಂಡ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲೇ ನ್ಯೂಜಿಲೆಂಡ್ (New Zealand) ತಂಡ ಭಾರತದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2ನೇ ಆವೃತ್ತಿಯಲ್ಲಿ ಆಸೀಸ್ ಬೌಲರ್‌ಗಳ ದಾಳಿಗೆ ತುತ್ತಾದ ಭಾರತ ಮತ್ತೊಮ್ಮೆ ಹೀನಾಯ ಸೋಲನುಭವಿಸಿ ಹೊರನಡೆದಿದೆ.
2ನೇ ಇನ್ನಿಂಗ್ಸ್‌ನಲ್ಲಿ 444 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 4ನೇ ದಿನದ ಅಂತ್ಯಕ್ಕೆ 40 ಓವರ್‌ಗಳಲ್ಲಿ 164 ರನ್ ಗಳಿಸಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ದಿನದಂದು ಭಾರತದ ಗೆಲುವಿಗೆ 280 ರನ್‌ಗಳ ಅಗತ್ಯವಿತ್ತು. ಆದರೆ ಇಂದು 22.3 ಓವರ್‌ಗಳಲ್ಲಿ 70 ರನ್ ಗಳಿಸಿದ ಭಾರತ ಅಂತಿಮವಾಗಿ 63.3 ಓವರ್‌ಗಳಲ್ಲಿ 234 ರನ್ ಗಳಿಗೆ ಸರ್ವಪತನ ಕಂಡಿತು. 209 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಸೀಸ್ ಮೊದಲ ಬಾರಿಗೆ ಚಾಂಪಿಯನ್‌ಶಿಪ್ ಜಯಿಸಿತು.
5ನೇ ದಿನದ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ಅಜಿಂಕ್ಯಾ ರಹಾನೆ (Ajinkya Rahane) ಅವರ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಭಾರತದ ಪತನ ಆರಂಭವಾಯಿತು. ಕೊನೆಯ ದಿನ 22.3 ಓವರ್‌ಗಲ್ಲಿ 70 ರನ್ ಗಳಿಸುವಷ್ಟರಲ್ಲೇ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ಹೀನಾಯ ಸೋಲನುಭವಿಸಿತು.
173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 4ನೇ ದಿನದಾಟದಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಉಳಿದ ಒಂದೂವರೆ ದಿನದಲ್ಲಿ ಭಾರತಕ್ಕೆ ಗೆಲ್ಲಲು 444 ರನ್‌ಗಳ ಬೃಹತ್ ಗುರಿ ನೀಡಿತು. ಭಾರತ 4ನೇ ದಿನದ ಅಂತ್ಯಕ್ಕೆ ಪ್ರಮುಖ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು.
ನಾಲ್ಕನೇ ದಿನದಾಟದಲ್ಲಿ ಭಾರತದ ಪರ ಶುಭಮನ್ ಗಿಲ್ (Shubman Gill) ಹಾಗೂ ನಾಯಕ ರೋಹಿತ್ ಶರ್ಮಾ (Rohit Sharma) ಜೋಡಿ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟವಾಡಿದರೆ, ರೋಹಿತ್ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ 2ನೇ ವಿಕೆಟ್‌ಗೆ 51 ರನ್ ಜೊತೆಯಾಟವಾಡಿತು. ನಂತರ ಜೊತೆಗೂಡಿದ ರಹಾನೆ ಹಾಗೂ ವಿರಾಟ್ ಕೊಹ್ಲಿ ಜೋಡಿ ಮುರಿಯದ 4ನೇ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿತು.
ಭಾನುವಾರ ಕೊನೆಯದಿನದ ಇನ್ನಿಂಗ್ಸ್ ಆರಂಭಿಸಿದ ಭಾರತ ಆಸೀಸ್ ಬೌಲರ್‌ಗಳ ದಾಳಿ ಎದುರಿಸುವಲ್ಲಿ ವಿಫಲವಾಯಿತು. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಜೋಡಿ ಔಟಾಗುತ್ತಿದ್ದಂತೆ ತಂಡದ ಒಂದೊಂದೆ ವಿಕೆಟ್ ಪತನಗೊಂಡಿತು. ಅಂತಿಮವಾಗಿ ಭಾರತ 234 ರನ್‌ಗಳಿಗೆ ಸರ್ವಪತನಕಂಡಿತು. ವಿರಾಟ್ ಕೊಹ್ಲಿ 49 ರನ್ (78 ಎಸೆತ, 7 ಬೌಂಡರಿ), ಅಜಿಂಕ್ಯಾ ರಹಾನೆ 46 ರನ್ (108 ಎಸೆತ, 7 ಬೌಂಡರಿ), ಶ್ರೀಕಾರ್ ಭರತ್ 23 ರನ್, ಮೊಹಮ್ಮದ್ ಶಮಿ 13 ರನ್ ಗಳಿಸಿದರು.
ಆಸೀಸ್ ಪರ ಸ್ಪಿನ್ ದಾಳಿ ನಡೆಸಿದ ನಥಾನ್ ಲಿಯಾನ್ 4 ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ 3 ವಿಕೆಟ್, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಹಾಗೂ ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 469/10
ಭಾರತ ಮೊದಲ ಇನ್ನಿಂಗ್ಸ್: 296/10
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 270/8d
ಭಾರತ ಎರಡನೇ ಇನ್ನಿಂಗ್ಸ್: 234/10
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final) ಪಂದ್ಯ ರೋಚಕ ಘಟಕ್ಕೆ ತಲುಪಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಭಾರತ (Team India) 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದು, ಗೆಲುವಿಗೆ 280 ರನ್‌ಗಳ ಅಗತ್ಯವಿದೆ.
173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ (Australia) ತಂಡ 4ನೇ ದಿನದಾಟದಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಉಳಿದ ಒಂದೂವರೆ ದಿನದಲ್ಲಿ ಭಾರತಕ್ಕೆ ಗೆಲ್ಲಲು 444 ರನ್‌ಗಳ ಬೃಹತ್ ಗುರಿ ನೀಡಿತು. ಇದನ್ನೂ ಓದಿ: WTC Final: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ (Steve Smith) ಮತ್ತು ಟ್ರಾವಿಸ್ ಹೆಡ್ (Travis Head) ಶತಕಗಳ ನೆರವಿನಿಂದ 469 ರನ್ ಗಳಿಸಿ ಆಲೌಟ್ ಆಗಿತ್ತು. ಆದ್ರೆ ಭಾರತ ಅಜಿಂಕ್ಯಾ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ 296 ರನ್‌ಗಳಿಗೆ ಸರ್ವಪತನ ಕಂಡಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸೀಸ್ 3ನೇ ದಿನ ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದ್ದರೆ ಇಂದು ಆ ಮೊತ್ತಕ್ಕೆ 147 ರನ್ ಗಳಿಸಿ ಅಂತಿಮವಾಗಿ 84.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 270 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜಾ 13 ರನ್, ಡೇವಿಡ್ ವಾರ್ನರ್ 1 ರನ್, ಮಾರ್ನಸ್ ಲಾಬುಶೇನ್ 41 ರನ್, ಸ್ಟೀವ್ ಸ್ಮಿತ್ 34 ರನ್, ಟ್ರಾವಿಸ್ ಹೆಡ್ 18 ರನ್, ಕ್ಯಾಮರೂನ್ ಗ್ರೀನ್ 25 ರನ್, ಮಿಚೆಲ್ ಸ್ಟಾರ್ಕ್ 41 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 5 ರನ್ ಗಳಿಸಿ ಔಟಾದರೆ ಅಲೆಕ್ಸ್ ಕ್ಯಾರಿ 66 ರನ್ ಗಳಿಸಿ ಅಜೇಯರಾಗುಳಿದರು.
ಶನಿವಾರ ತನ್ನ ಸರದಿ ಆರಂಭಿಸಿದ ಭಾರತದ ಪರ ಶುಭಮನ್ ಗಿಲ್ (Shubman Gill) ಹಾಗೂ ನಾಯಕ ರೋಹಿತ್ ಶರ್ಮಾ (Rohit Sharma) ಜೋಡಿ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟವಾಡಿದರೆ, ರೋಹಿತ್ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ 2ನೇ ವಿಕೆಟ್‌ಗೆ 51 ರನ್ ಜೊತೆಯಾಟವಾಡಿತು. ನಂತರ ಜೊತೆಗೂಡಿದ ರಹಾನೆ ಹಾಗೂ ವಿರಾಟ್ ಕೊಹ್ಲಿ (Virat Kohli) ಜೋಡಿ ಮುರಿಯದ 4ನೇ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿತು.
ರೋಹಿತ್ ಶರ್ಮಾ 43 ರನ್ (60 ಎಸೆತ, 7 ಬೌಂಡರಿ, 1 ಸಿಕ್ಸರ್), ಶುಭಮನ್ ಗಿಲ್ 18 ರನ್, ಚೇತೇಶ್ವರ್ ಪೂಜಾರಾ 27 ರನ್ ಗಳಿಸಿ ಔಟಾದರು. ಇನ್ನೂ ವಿರಾಟ್ ಕೊಹ್ಲಿ 44 ರನ್ (60 ಎಸೆತ, 7 ಬೌಂಡರಿ) ಅಜಿಂಕ್ಯಾ ರಹಾನೆ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಭಾನುವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ (WTC Final) ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದ್ದಾರೆ. ರವೀಂದ್ರ ಜಡೇಜಾ (Ravindra Jadeja), ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್ ಕಮಾಲ್‌ನಿಂದಾಗಿ ಆಸ್ಟ್ರೇಲಿಯಾದ (Australia) ಟಾಪ್ ಬ್ಯಾಟ್ಸ್‌ಮ್ಯಾನ್‌ಗಳು ನೆಲ ಕಚ್ಚಿದ್ದಾರೆ. ಇದರ ಹೊರತಾಗಿಯೂ ಭಾರತ 296 ರನ್‌ಗಳ ಹಿನ್ನಡೆಯಲ್ಲಿದೆ.
3ನೇ ದಿನದ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಶ್ರೀಕಾರ್ ಭರತ್ ಜೋಡಿ ಉತ್ತಮ ರನ್ ಕಲೆಹಾಕುವಲ್ಲಿ ವಿಫಲವಾಯಿತು. ಭರತ್ 5 ರನ್ ಗಳಿಸಿ ಔಟಾದರು. ನಂತರ ಜೊತೆಗೂಡಿದ ಶಾರ್ದೂಲ್ ಠಾಕೂರ್ (Shardul Thakur) ಹಾಗೂ ರಹಾನೆ ಜೋಡಿ 7ನೇ ವಿಕೆಟ್‌ಗೆ 145 ಎಸೆತಗಳಲ್ಲಿ 109 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರಹಾನೆ 89 ರನ್ (129 ಎಸೆತ, 11 ಬೌಂಡರಿ, 1 ಸಿಕ್ಸರ್), ಶಾರ್ದೂಲ್ ಠಾಕೂರ್ 51 ರನ್ (109 ಎಸೆತ, 6 ಬೌಂಡರಿ) ಗಳಿಸಿ ಔಟಾದರು. ಕೊನೆಯಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನವಿಲ್ಲದೇ ಭಾರತ 69.4 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು.
ಇನ್ನೂ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಟಾಪ್ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಜಡೇಜಾ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.
ಉಸ್ಮಾನ್ ಖವಾಜ 13 ರನ್, ಸ್ಟೀವ್ ಸ್ಮಿತ್ (Steve Smith) 34 ರನ್, ಟ್ರಾವಿಸ್ ಹೆಡ್ (Travis Head) 18 ರನ್ ಹಾಗೂ ಡೇವಿಡ್ ವಾರ್ನರ್ ಕೇವಲ 1 ರನ್ ಗಳಿಸಿ ಔಟಾದರು. ಮಾರ್ಕಸ್ ಲಾಬುಶೇನ್ 41 ರನ್ (118 ಎಸೆತ, 3 ಬೌಂಡರಿ), ಕ್ಯಾಮರೂನ್ ಗ್ರೀನ್ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ
2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ 2 ಪ್ರಮುಖ ವಿಕೆಟ್ ಕಿತ್ತರೆ, ಸಿರಾಜ್ ಹಾಗೂ ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್ ಮೊದಲ ಇನ್ನಿಂಗ್ಸ್ ಆಸ್ಟ್ರೇಲಿಯಾ – 469/10 ಮೊದಲ ಇನ್ನಿಂಗ್ಸ್ ಭಾರತ – 296/10