Tag: ajendra shetty

  • ಫೈನಾನ್ಶಿಯರ್ ಕೊಲೆ- ಆರೋಪಿ ಅನೂಪ್ ಪೊಲೀಸ್ ಕಸ್ಟಡಿಗೆ

    ಫೈನಾನ್ಶಿಯರ್ ಕೊಲೆ- ಆರೋಪಿ ಅನೂಪ್ ಪೊಲೀಸ್ ಕಸ್ಟಡಿಗೆ

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಪಾಲುದಾರ ಅನೂಪ್ ಶೆಟ್ಟಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ಆಗಸ್ಟ್ 9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

    ಗೆಳೆಯ ಅಜೇಂದ್ರನನ್ನು ಕೊಲೆಗೈದು ಆತನ ಕಾರಿನಲ್ಲೇ ಅನೂಪ್ ಗೋವಾಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಆರೋಪಿಯ ಬಂಧನವಾಗಿದೆ. ಇದನ್ನೂ ಓದಿ: ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್- ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಅಂದರ್

    ಅಜೇಂದ್ರ ಶೆಟ್ಟಿಯ ಚಿನ್ನದ ಚೈನ್, ಆಭರಣಗಳು, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ. ಪ್ರಕರಣದಲ್ಲಿ ಬೇರೆ ಯಾರಾದ್ರೂ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಇನ್ನಷ್ಟು ಕೂಲಂಕುಶ ತನಿಖೆ ಆಗಬೇಕಾಗಿದೆ. ಆರೋಪಿಯ ವಿಚಾರಣೆ ಕೂಡ ಮಾಡಬೇಕಾಗಿದೆ ಎಂದು ಎಸ್ ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು. ಇದನ್ನೂ ಓದಿ: ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು

  • ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್- ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಅಂದರ್

    ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್- ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಅಂದರ್

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಡ್ರೀಮ್ ಫೈನಾನ್ಸ್ ಮಾಲೀಕ ಅಜೆಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಲುದಾರ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಕುಂದಾಪುರ ಪೊಲೀಸರು 24 ಗಂಟೆಯೊಳಗೆ ಬೇಧಿಸಿದ್ದಾರೆ. ಆರೋಪಿ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಸೆರೆಹಿಡಿದು ಉಡುಪಿಗೆ ಕರೆತರುತ್ತಿದ್ದಾರೆ. ಪಾಲುದಾರನೇ ಕೊಲೆಗಾರ ಎಂಬ ಸಂಶಯದಿಂದ ಅನುಪ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್

    ಶುಕ್ರವಾರ ರಾತ್ರಿ, ಕಾಳಾವರದ ಡ್ರೀಮ್ ಫೈನಾನ್ಸ್ ನ ಮಾಲಕ ಅಜೆಂದ್ರ ಶೆಟ್ಟಿಯನ್ನು, ಡ್ರಾಗರ್ ನಿಂದ ಇರಿದು ಕೊಲೆಗೈಯಲಾಗಿತ್ತು. ಕತ್ತುಸೀಳಿ ಕೊಂದು ಪರಾರಿಯಾದ ಕೊಲೆಗಾರ ಬೇರೆ ಯಾರು ಅಲ್ಲ, ಅಜೇಂದ್ರ ಶೆಟ್ಟಿಯ ಫೈನಾನ್ಸ್ ಪಾರ್ಟ್ನರ್ ಅನೂಪ್ ಶೆಟ್ಟಿ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ಮೃತನ ಮನೆಯವರು ಈ ಬಗ್ಗೆ ನೇರ ಆರೋಪವನ್ನು ಕೂಡ ಮಾಡಿದ್ದರು. ಕೊಲೆಗೈದ ಅನೂಪ್ ಶೆಟ್ಟಿ ಅಜೇಂದ್ರ ಶೆಟ್ಟಿಯ ಕಾರನ್ನು ಬಳಸಿ ಪರಾರಿಯಾಗಲು ಯತ್ನಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾಕ್ಕೆ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ಮಾಡಿದ್ದ. ಕುಂದಾಪುರ ಪೊಲೀಸರು ಕೊಲೆ ನಡೆದು 24 ಗಂಟೆಯೊಳಗೆ ಅನೂಪ್ ಶೆಟ್ಟಿ ಯನ್ನು ವಶಕ್ಕೆ ಪಡೆದಿದ್ದಾರೆ.

    ಸತ್ತವನ ಕಾರಿನಲ್ಲೇ ಆರೋಪಿ ಎಸ್ಕೇಪ್..!

    ಡ್ರೀಮ್ ಫೈನಾನ್ಸ್ ವ್ಯವಹಾರದಲ್ಲಿ ಪಾಲುದಾರ ಅನೂಪ್ ಶೆಟ್ಟಿ ಈ ಕೃತ್ಯ ಎಸಗೋದಕ್ಕೆ ಐಶಾರಾಮಿ ಕಾರು ಕಾರಣ ಎನ್ನಲಾಗಿದೆ. ಸಮಯ ಕಳೆಯುತ್ತಿದ್ದಂತೆ ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಮತ ಬಂತು. ಬಡ್ಡಿ ವ್ಯವಹಾರದ ಲಾಭಾಂಶದ ಹಣವನ್ನು ಅನೂಪ್ ಶೆಟ್ಟಿಗೆ ಅಜೇಂದ್ರ ಶೆಟ್ಟಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ತಗಾದೆ ಉಂಟಾಗಿತ್ತು. ಇಬ್ಬರ ನಡುವಿನ ಪಟ್ರ್ನರ್‍ಶಿಪ್ ಡೀಲ್ ಮೂರು ತಿಂಗಳ ಹಿಂದೆ ರದ್ದಾಗಿತ್ತು. ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಅಜೇಂದ್ರ ಶೆಟ್ಟಿ ಮೂರು ತಿಂಗಳ ಅವಧಿಯಲ್ಲಿ ಎರಡು ಐಶಾರಾಮಿ ಕಾರು ಖರೀದಿಸಿದ್ದರು. ಹೊಸದಾಗಿ ಖರೀದಿಸಿದ ಈ ಕಾರು ಅನೂಪ್ ಶೆಟ್ಟಿಯ ಕಣ್ಣು ಕುಕ್ಕುತ್ತಿತ್ತು. ಕೊಲೆಯಾದ ದಿನ ಇಪ್ಪತ್ತು ಸಾವಿರ ಕೇಳಿದ್ದ ಅನೂಪ್, ಹಣ ಕೊಡದಿದ್ದರೆ ಕೊಲ್ಲೋದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೇ ಬಂದಿದ್ದ. ಅಜೇಂದ್ರ ಶೆಟ್ಟಿ ಹಣ ಕೊಡಲು ನಿರಾಕರಿಸಿದಾಗ, ಡ್ರಾಗರ್ ನಿಂದ ಕತ್ತುಸೀಳಿ ಕೊಂದು ಅದೇ ಐಶಾರಾಮಿ ಕಾರಿನಲ್ಲಿ ಪರಾರಿಯಾಗಿದ್ದ.

    ಅನೂಪ್ ಶೆಟ್ಟಿ ಕುಡಿದ ಅಮಲಿನಲ್ಲಿ, ಗಾಂಜಾ ಸೇವಿಸಿ ಗೆಳೆಯನನ್ನು ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಘಟನೆ ಹಿಂದೆ ಇತರೆ ಆರೋಪಿಗಳ ಕೈವಾಡ ಇದೆಯೇ ಎಂಬ ದೃಷ್ಟಿಯಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್

    ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ಯುಸಿನೆಸ್ ಪಾರ್ಟ್ನರ್ ಅನೂಪ್ ಶೆಟ್ಟಿ ಮೇಲೆ ಕೃತ್ಯದ ಆರೋಪವಿದೆ.

    ಕಾಳಾವಾರದ ಡ್ರೀಮ್ ಫೈನಾನ್ಸ್ ಅನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಅನೂಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ 2017ರಿಂದ ನಡೆಸುತ್ತಿದ್ದರು. ಇಬ್ಬರ ನಡುವೆ ಕಳೆದ ನಾಲ್ಕು ವರ್ಷಗಳಿಂದ ಸಂಬಂಧ ಅನ್ಯೋನ್ಯ ಇತ್ತು. ಹಣಕಾಸಿನ ಮತ್ತು ಬಡ್ಡಿ ವಿಚಾರದಲ್ಲಿ ಕೆಲ ಅಭಿಪ್ರಾಯ ಬೇಧಗಳು ಇದ್ದರೂ ಚೆನ್ನಾಗಿ ನಡೆಸಿಕೊಂಡು ಬಂದಿದ್ದರು. ಇತ್ತೀಚಿನ ದಿನದಲ್ಲಿ ಇಬ್ಬರ ನಡುವೆ ಕೊಂಚ ವೈಷಮ್ಯ ಏರ್ಪಟ್ಟಿತ್ತು ಎಂಬ ಮಾಹಿತಿಯನ್ನು ಪೊಲೀಸರು ಹೇಳಿದ್ದಾರೆ.

    ಅಜೇಂದ್ರ ಕಳೆದ ರಾತ್ರಿ ಮನೆಗೆ ಬರದಿದ್ದಾಗ ನಾನು ಮತ್ತು ಗೆಳೆಯರಾದ ರಕ್ಷಿತ್, ಜಯಕರ, ಪ್ರಥ್ವೀಶ್ ಹುಡುಕಾಡುತ್ತಾ ಫೈನಾನ್ಸ್ ಗೆ ಬಂದೆವು. ಈ ವೇಳೆ ಫೈನಾನ್ಸ್ ಗೆ ಶಟರ್ ಹಾಕಲಾಗಿತ್ತು, ಆದರೆ ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕುಳಿತ ಭಂಗಿಯಲ್ಲಿ ಇದ್ದ. ಕೊಲೆಯಾದ ಸ್ಥಿತಿಯಲ್ಲಿ ನಾವು ನೋಡಿದೆವು. ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರನ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದಿರುವ ಗಾಯಗಳಾಗಿದೆ. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದೆ ಎಂದೆನಿಸುತ್ತದೆ.

    ಶುಕ್ರವಾರ ರಾತ್ರಿ ಕಚೇರಿಯಲ್ಲಿ ಇಬ್ಬರು ಒಟ್ಟಿಗೆ ಇದ್ದರು. ನೋಡಿದ ಸ್ಥಳೀಯರು ಇದನ್ನು ಹೇಳುತ್ತಾರೆ ಎಂದರು. ಹರಿತವಾದ ಆಯುಧ ಬಳಸಿರುವುದು ಪುಷ್ಟಿ ನೀಡುತ್ತಿದೆ. ಹಣಕಾಸಿನ ವಿಚಾರದ ಬಗ್ಗೆ ಹೇಳಿದ್ದ, ಆದರೆ ಮನಸ್ತಾಪದ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗ ಆತನ ಪಾರ್ಟ್ನರ್ ನನ್ನ ತಮ್ಮನನ್ನು ಕೊಲೆ ಮಾಡಿದ್ದಾನೆ. ಕೊಲೆಗೆ ಸಂಬಂಧಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಜೇಂದ್ರ ಸಹೋದರ ಮಾಧ್ಯಮದ ಮುಂದೆ ಕಣ್ಣೀರಿಟ್ಟರು. ಇದನ್ನೂ ಓದಿ: ಕುಂದಾಪುರದಲ್ಲಿ ಡ್ರೀಮ್ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ

    ಅನೂಪ್ ಶೆಟ್ಟಿ ಬುಲೆಟ್ ಬೈಕ್ ಫೈನಾನ್ಸ್ ಎದುರುಗಡೆ ಇದ್ದು, ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರಿನಲ್ಲಿ ಅನೂಪ್ ಎಸ್ಕೇಪ್ ಆಗಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯಾಗುತ್ತಿದೆ. ಅನೂಪ್ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಗೆಳೆಯರು, ಪೊಲೀಸರು ಹೇಳಿದ್ದಾರೆ.

    ಉಡುಪಿ ಎಸ್‍ಪಿ ವಿಷ್ಣುವರ್ಧನ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಫೋರೆನ್ಸಿಕ್ ತಜ್ಞರ ತಂಡ ಪರಿಶೀಲನೆ ನಡೆಸಿದೆ. ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗಾರನ ಪತ್ತೆ, ಬಂಧನ ಇನ್ನೂ ಆಗಿಲ್ಲ.