Tag: Ajaz Patel

  • 10 ವಿಕೆಟ್ ಕಿತ್ತು ಇತಿಹಾಸ ಬರೆದ ಪಂದ್ಯದ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್

    ವೆಲ್ಲಿಂಗ್ಟನ್: ಕಳೆದ ವರ್ಷ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ಬರೆದಾಗ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಡಲು ನಿರ್ಧರಿಸಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಟೇಲ್, ಹರಾಜಿನಿಂದ ಸಂಗ್ರಹವಾಗುವ ಹಣವನ್ನು ಮಕ್ಕಳ ಆಸ್ಪತ್ರೆಗೆ ವಿವಿಧ ರೂಪದಲ್ಲಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್ ಪಡೆದು ಅಜಾಜ್ ಪಟೇಲ್ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದು ಪಟೇಲ್‌ಗೆ ಟೀಂ ಇಂಡಿಯಾದ ನಾಯಕರಾಗಿದ್ದ ವಿರಾಟ್ ಕೊಹ್ಲಿ ವಿಶೇಷವಾಗಿ ಅಭಿನಂದಿಸಿದ್ದರು. ಅಲ್ಲದೇ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಹಸ್ತಾಕ್ಷರವಿರುವ ಭಾರತೀಯ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

    ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ದಿನ ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ರಿಕೆಟ್ ದಿನಗಳಲ್ಲಿ ಒಂದು ಎಂದಿದ್ದ ಪಟೇಲ್, ಗುರುವಾರ ಸ್ಟಾರ್‌ಶಿಪ್ ಫೌಂಡೇಶನ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಇತಿಹಾಸ ನಿರ್ಮಿಸಿದ ದಿನದಂದು ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಸ್ಟಾರ್‌ಶಿಪ್ ಫೌಂಡೇಶನ್‌ನ ಪ್ಲೇ ಥೆರಪಿಸ್ಟ್‌ಗಾಗಿ ಹಣವನ್ನು ಸಂಗ್ರಹಿಸಲು ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಿತ್ತು ಸಾಧನೆ ಮಾಡಿದ ನನ್ನ ಹಸ್ತಾಕ್ಷರವಿರುವ ಶರ್ಟ್ ಹರಾಜಿಗೆ ಇಡಲಾಗುತ್ತಿದೆ. ಇದರಿಂದ ಬರುವ ಹಣ ಮಕ್ಕಳು ಹಾಗೂ ಅವರ ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಪಟೇಲ್ ತಿಳಿಸಿದ್ದಾರೆ.

  • ಅಜಾಜ್ ಪಟೇಲ್ 10 ವಿಕೆಟ್ ದಾಖಲೆ – ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

    ಅಜಾಜ್ ಪಟೇಲ್ 10 ವಿಕೆಟ್ ದಾಖಲೆ – ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

    ಮುಂಬೈ: ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಭಾರತ ವಿರುದ್ಧ 10 ವಿಕೆಟ್‍ಗಳ ದಾಖಲೆಯೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ರನ್‍ವೇಗಕ್ಕೆ ಕಡಿವಾಣ ಹಾಕಿದರೂ ಕೂಡ ನ್ಯೂಜಿಲೆಂಡ್ ತಂಡ ಪ್ರಥಮ ಇನ್ನಿಂಗ್ಸ್‌ನಲ್ಲಿ ಕುಸಿತಕಂಡು ಹಿನ್ನಡೆ ಅನುಭವಿಸಿದೆ.

    ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿದ್ದ ಭಾರತ ತಂಡಕ್ಕೆ ಎರಡನೇ ದಿನ ಅಜಾಜ್ ಪಟೇಲ್ ಬೌಲಿಂಗ್‍ನಲ್ಲಿ ಕಾಡಿದರು. ಮೊದಲು ವೃದ್ಧಿಮಾನ್ ಸಹಾ 27 ರನ್ (62 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಅಜಾಜ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಶ್ವಿನ್ ಕೂಡ ಶೂನ್ಯ ಸುತ್ತಿ ಹೊರನಡೆದರೆ, 120 ರನ್ ಮಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಯಾಂಕ್ ಅಗರ್ವಾಲ್ ಭರ್ತಿ 150 ರನ್ (311 ಎಸೆತ, 17 ಬೌಂಡರಿ, 4 ಸಿಕ್ಸ್) ಸಿಡಿಸಿ ಅಜಾಜ್ ಪಟೇಲ್‍ಗೆ ದಿನದ ಮೂರನೇ ಬಳಿಯಾದರು. ಇದನ್ನೂ ಓದಿ: ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್

    ನಂತರ ಬಂದ ಅಕ್ಷರ್ ಪಟೇಲ್ 52 ರನ್ (128 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸುದರೊಂದಿಗೆ ಅರ್ಧಶತಕ ಸಿಡಿಸಿ ಔಟ್ ಆದರು. ಜಯಂತ್ ಯಾದವ್ 12 ರನ್ (31 ಎಸೆತ, 2 ಬೌಂಡರಿ) ಮತ್ತು ಮೊಹಮ್ಮದ್ ಸಿರಾಜ್ 4 ರನ್ (1 ಬೌಂಡರಿ) ಬಾರಿಸಿ ಅಜಾಜ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಟೇಲ್ ಎಲ್ಲಾ 10 ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: 10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

    ಅಶ್ವಿನ್, ಸಿರಾಜ್ ದಾಳಿಗೆ ಕಿವೀಸ್ ಪರದಾಟ
    ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ನಾಯಕ ಟಾಮ್ ಲ್ಯಾಥಮ್ 10 ರನ್ (14 ಎಸೆತ, 2 ಬೌಂಡರಿ) ಮತ್ತು ಕೈಲ್ ಜೇಮಿಸನ್ 17 ರನ್ (36 ಎಸೆತ, 2 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಒಂದಂಕಿ ಮೊತ್ತ ದಾಟಲಿಲ್ಲ. ವಿಲ್ ಯಂಗ್ 4, ಡೇರಿಲ್ ಮಿಚೆಲ್ 8, ರಾಸ್ ಟೇಲರ್ 1, ಹೆನ್ರಿ ನಿಕೋಲ್ಸ್ 7, ಟಾಮ್ ಬ್ಲಂಡೆಲ್ 8, ಎಚಿನ್ ರವೀಂದ್ರ 4 ರನ್ ಮತ್ತು ಟಿಮ್ ಸೌಥಿ ಹಾಗೂ ವಿಲಿಯಂ ಸೊಮರ್ವಿಲ್ಲೆ ಶೂನ್ಯ ಸುತ್ತಿದರು. ಟೀಮ್ ಇಂಡಿಯಾ ಪರ ಆರ್. ಅಶ್ವಿನ್ 8 ಓವರ್ ಎಸೆದು 8 ರನ್ ನೀಡಿ 4 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ 4 ಓವರ್ ಎಸೆದು 19 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಅಕ್ಷರ್ ಪಟೇಲ್ 2 ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದು ನ್ಯೂಜಿಲೆಂಡ್ ಕುಸಿತಕ್ಕೆ ಕಾರಣವಾದರು.

    290 ರನ್‍ಗಳ ಮುನ್ನಡೆಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಮಯಾಂಕ್ ಅಗರ್ವಾಲ್ ಅಜೇಯ 38 ರನ್ (75 ಎಸೆತ, 6 ಬೌಂಡರಿ) ಮತ್ತು ಚೇತೇಶ್ವರ ಪೂಜಾರ 29 ರನ್ (51 ಎಸೆತ 3 ಬೌಂಡರಿ, 1 ಸಿಕ್ಸ್) ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ 21 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ದಾಖಲಿಸಿದೆ. ಈ ಮೂಲಕ ಒಟ್ಟು 332 ರನ್‍ಗಳ ಮುನ್ನಡೆ ಪಡೆದುಕೊಂಡಿದ್ದು, 3ನೇ ದಿನ ಬೃಹತ್ ಮೊತ್ತ ಪೇರಿಸಿ ನ್ಯೂಜಿಲೆಂಡ್‍ಗೆ ದೊಡ್ಡ ಟಾರ್ಗೆಟ್ ನೀಡುವ ಯೋಜನೆಯಲ್ಲಿದೆ. ಇದನ್ನೂ ಓದಿ: ಆರ್​ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?

  • ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್

    ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್

    ಮುಂಬೈ: ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಮುಂಬೈ ಮೂಲದ ಅಜಾಜ್ ಪಟೇಲ್ ಭಾರತ ವಿರುದ್ಧ ತವರಿನಲ್ಲಿ ನಡೆದ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.

    ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ತಮ್ಮ ತವರು ನೆಲ ಮುಂಬೈನಲ್ಲಿ 47.5 ಓವರ್ ಎಸೆದ ಅಜಾಜ್ ಪಟೇಲ್ 12 ಓವರ್ ಮೇಡನ್ ಎಸೆದು 119 ರನ್ ನೀಡಿ 10 ವಿಕೆಟ್ ಪಡೆದಿದ್ದಾರೆ. ಈ ಮೂಲಕ ತವರಿನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಆಟಗಾರರ ಪೈಕಿ ಮೊದಲಿಗರಾಗಿದ್ದಾರೆ. ಅಜಾಜ್ ಪಟೇಲ್ 1988ರಲ್ಲಿ ಮುಂಬೈನಲ್ಲಿ ಜನಿಸಿದ್ದರು. ಇದೀಗ ನ್ಯೂಜಿಲೆಂಡ್ ಪರ ಕ್ರಿಕೆಟ್ ಆಡುವ ಪಟೇಲ್ 11 ಟೆಸ್ಟ್ ಪಂದ್ಯಗಳಿಂದ 39 ವಿಕೆಟ್ ಮತ್ತು 7 ಟಿ20 ಪಂದ್ಯದಿಂದ 11 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: 10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

    ಈ ಹಿಂದೆ 2002ರಲ್ಲಿ ಶ್ರೀಲಂಕಾ ತಂಡದ ಮುತ್ತಯ್ಯ ಮುರಳೀಧರನ್ ತಮ್ಮ ತವರು ನೆಲ ಕ್ಯಾಂಡಿಯದಲ್ಲಿ 51 ರನ್‍ಗೆ 9 ವಿಕೆಟ್ ಪಡೆದಿದ್ದರು. ಇದಕ್ಕೂ ಮೊದಲು 1987ರಲ್ಲಿ ಪಾಕಿಸ್ತಾನ ತಂಡದ ಅಬ್ದುಲ್ ಖಾದಿರ್ ತಮ್ಮ ತವರೂರು ಲಾಹೋರ್‌ನಲ್ಲಿ 56 ರನ್‍ಗಳಿಗೆ 9 ವಿಕೆಟ್ ಸಾಧನೆ ಮಾಡಿದ್ದರು. ಇದನ್ನೂ ಓದಿ: ಆರ್​ಸಿಬಿ ಪರ ಮಾತ್ರ ಆಡುತ್ತೇನೆ ಎಂದಿದ್ದ ಚಹಲ್ ಐಪಿಎಲ್ ಭವಿಷ್ಯವೇನು?

    ಅಜಾಜ್ ಪಟೇಲ್ ಭಾರತದಲ್ಲಿ ನೆಲದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಭಾರತದ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಅಜಾಜ್ ಬೌಲಿಂಗ್‍ನಲ್ಲಿ ಭಾರತದ 5 ಮಂದಿ ಆಟಗಾರರು ಕ್ಯಾಚ್ ನೀಡಿ ಔಟಾಗಿದ್ದರೆ, 3 ಮಂದಿ ಎಲ್‍ಬಿಡಬ್ಲ್ಯೂ ಮತ್ತು ಇಬ್ಬರನ್ನು ಬೌಲ್ಡ್ ಮಾಡುವ ಮೂಲಕ 10 ವಿಕೆಟ್ ಕಿತ್ತು ಸಂಭ್ರಮಿಸಿದರು. ಇದನ್ನೂ ಓದಿ: ಓಮಿಕ್ರಾನ್ ನಡುವೆಯೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

    ಅಜಾಜ್ ಪಟೇಲ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ 10 ವಿಕೆಟ್ ಪಡೆದ ಮೂರನೇ ಬೌಲರ್. ಈ ಮೊದಲು 1956ರಲ್ಲಿ ಇಂಗ್ಲೆಂಡ್‍ನ ಆಫ್ ಸ್ಪಿನ್ನರ್ ಜಿಮ್ ಲೇಕರ್, ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ ಕಿತ್ತಿದ್ದರು. 1999ರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ದೆಹಲಿಯ ಫಿರೋಜ್ ಶಾ ಕೋಟ್ಲಾ(ಅರುಣ್ ಜೇಟ್ಲಿ ಮೈದಾನ) ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಎಲ್ಲಾ 10 ವಿಕೆಟ್ ಕಬಳಿಸಿ ಭಾರತದ ಪರ ದಾಖಲೆ ನಿರ್ಮಿಸಿದ್ದರು.

  • 10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

    10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

    ಮುಂಬೈ: ನ್ಯೂಜಿಲೆಂಡ್‌ ಸ್ಪಿನ್ನರ್‌ ಭಾರತೀಯ ಮೂಲದ ಅಜಾಜ್‌ ಪಟೇಲ್‌ ಟೆಸ್ಟ್‌ ಕ್ರಿಕೆಟ್‌ ಇನ್ನಿಂಗ್ಸ್‌ ಒಂದರಲ್ಲಿ 10 ವಿಕೆಟ್‌ ಕಿತ್ತು ಇತಿಹಾಸ ನಿರ್ಮಿಸಿದ್ದಾರೆ.ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಎಲ್ಲಾ 10 ವಿಕೆಟ್‌ ಪಡೆದ ಮೂರನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಈ ಮೊದಲು ಜಿಮ್‌ ಲೇಕರ್ ಮತ್ತು ಅನಿಲ್‌ ಕುಂಬ್ಳೆ ಎಲ್ಲಾ 10 ವಿಕೆಟ್‌ ಪಡೆದಿದ್ದರು. 144 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿದ ಮೂರನೇ ಸ್ಪಿನ್ನರ್ ದಾಖಲೆಯನ್ನು ಅಜಾಜ್‌ ಪಟೇಲ್‌ ಬರೆದಿದ್ದಾರೆ.

    ಮುಂಬೈ ಮೂಲದ ಅಜಾಜ್ ಪಟೇಲ್ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್‌ ಆಗಿದೆ.

    47.5 ಓವರ್‌ ಎಸೆದ ಅಜಾಜ್‌ ಪಟೇಲ್ 12 ಓವರ್‌ ಮೇಡನ್‌ ಎಸೆದು 119 ರನ್‌ ನೀಡಿ 10 ವಿಕೆಟ್‌ ಪಡೆದಿದ್ದಾರೆ. ಭಾರತದಲ್ಲಿ ನೆಲದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್‌ ಅಜಾಜ್‌ ಪಟೇಲ್‌ ಆಗಿದ್ದಾರೆ. ಅಷ್ಟೇ ಅಲ್ಲದೇ ಭಾರತದ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಬೌಲರ್‌ ಎಂಬ ದಾಖಲೆ ಬರೆದಿದ್ದಾರೆ.  5 ಮಂದಿ ಆಟಗಾರರು ಕ್ಯಾಚ್‌ ನೀಡಿ ಔಟಾಗಿದ್ದರೆ 3 ಮಂದಿ ಎಲ್‌ಬಿಡಬ್ಲ್ಯೂ, ಇಬ್ಬರನ್ನು ಅಜಾಜ್‌ ಬೌಲ್ಡ್‌ ಮಾಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ನಡುವೆಯೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

    1956ರಲ್ಲಿ ಇಂಗ್ಲೆಂಡ್‌ನ ಆಫ್‌ ಸ್ಪಿನ್ನರ್ ಜಿಮ್ ಲೇಕರ್, ಆಸ್ಟ್ರೇಲಿಯಾ ವಿರುದ್ದ 10 ವಿಕೆಟ್‌ ಕಿತ್ತಿದ್ದರು. 1999ರಲ್ಲಿ ಕನ್ನಡಿಗ ಅನಿಲ್‌ ಕುಂಬ್ಳೆ ದೆಹಲಿಯ ಫಿರೋಜ್‌ ಶಾ ಕೋಟ್ಲಾ(ಅರುಣ್‌ ಜೇಟ್ಲಿ ಮೈದಾನ) ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ಎಲ್ಲಾ 10 ವಿಕೆಟ್ ಕಬಳಿಸಿ ಭಾರತದ ಪರ ದಾಖಲೆ ನಿರ್ಮಿಸಿದ್ದರು.

    ವಾಂಖೆಡೆ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ 221 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಅಜಾಜ್ ಪಟೇಲ್ ಆರಂಭದಲ್ಲೇ ಶಾಕ್‌ ನೀಡಿದರು. ಇದನ್ನೂ ಓದಿ: ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ

    ತಾವೆಸೆದ ಮೊದಲ ಓವರ್‌ನಲ್ಲೇ ಅಜಾಜ್ ಪಟೇಲ್ ಸತತ 2 ವಿಕೆಟ್ ಕಿತ್ತಿದ್ದರು. ಮಯಾಂಕ್‌ ಅಗರ್‌ವಾಲ್‌ 150 ರನ್‌(311 ಎಸೆತ, 17 ಬೌಂಡರ್‌, 4 ಸಿಕ್ಸರ್‌) ಹೊಡೆದು 8ನೇಯವರಾಗಿ ಔಟಾದರು. ವೃದ್ಧಿಮಾನ್‌ ಸಹಾ 27 ರನ್‌, ಅಕ್ಷರ್‌ ಪಟೇಲ್‌ 52 ರನ್‌(128 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಅಂತಿಮವಾಗಿ ಭಾರತ 109.5 ಓವರ್‌ಗಳಲ್ಲಿ 325 ರನ್‌ ಗಳಿಸಿತು.