Tag: ajay mishra

  • ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    – ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ

    ಲಕ್ನೋ: ಉತ್ತರಪ್ರದೇಶ ಲಖೀಂಪುರ್ ಹಿಂಸಾಚಾರದಲ್ಲಿ ರೈತರು ಮೃತಪಟ್ಟಿದ್ದಾರೆ. ಆ ಘಟನೆ ವೇಳೆ ನನ್ನ ಮಗ ಅಲ್ಲಿ ಇದ್ದದ್ದು ನಿಜವಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ:  FIR ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ: ಪ್ರಿಯಾಂಕಾ ಗಾಂಧಿ ಕಿಡಿ

    ಇಂದು ಪ್ರತಿಕ್ರಿಯೆ ನೀಡಿರುವ ಅಜಯ್ ಮಿಶ್ರಾ, ರೈತರ ಹತ್ಯೆ ನಡೆದ ಸ್ಥಳದಲ್ಲಿ ನನ್ನ ಮಗ ಇದ್ದುದಕ್ಕೆ ಸಾಕ್ಷಿ ಸಿಕ್ಕಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ. ಅವನು ಅಲ್ಲಿದ್ದ ಎಂಬುದಕ್ಕೆ ಯಾವುದೇ ಫೋಟೋ, ವೀಡಿಯೋಗಳ ಸಾಕ್ಷಿಯಿಲ್ಲ. ಆದರೆ ಆತ ಅಲ್ಲಿರಲಿಲ್ಲ ಎಂಬುದಕ್ಕೆ ನನ್ನ ಬಳಿ ವೀಡಿಯೋ ಸಾಕ್ಷಿಗಳಿವೆ. ವಿನಾಕಾರಣ ಅವನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆಶಿಶ್ ಭಾನುವಾರ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಅಜಯ್ ಮಿಶ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:  ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ

    ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ, ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೇಶವ ಪ್ರಸಾದ್ ಇದ್ದ ಕಾರನ್ನು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಅದರಲ್ಲಿ ಒಂದು ಖಾರು ಚಲಾಯಿಸಿದ್ದು ಅಜಯ್ ಮಿಶ್ರಾ ಅವರ ಮಗ ಆಶಿಶ್ ಎಂದು ಎಫ್‍ಐಆರ್ ದಾಖಲಿಸಲಾಗಿತ್ತು. ಇದನ್ನೂ ಓದಿ:  ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

     

    ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಬಂದಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಜಯ್ ಮಿಶ್ರಾ ಅವರ ಮಗ ಆಶಿಶ್ ಸೇರಿದಂತೆ ಇನ್ನಿತರರ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು, ಅವರ ಮಗನನ್ನು ಬಂಧಿಸಬೇಕೆಂಬ ಒತ್ತಾಯಗಳು ಹೆಚ್ಚಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ, ಲಖಿಂಪುರ ಹಿಂಸಾಚಾರದ ಸ್ಥಳದಲ್ಲಿ ನನ್ನ ಮಗ ಇದ್ದುದು ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಇತ್ತ ಸರ್ಕಾರ ಮೃತ ರೈತರ ಕುಟುಂಬಕ್ಕೆ 45 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದೆ. ಹಾಗೇ ಗಾಯಾಳುಗಳಿಗೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡುವುದಾಗಿ ಹೇಳಿದೆ.

  • ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

    ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

    ಲಕ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಸೇರಿದ ಮಹೀಂದ್ರ ಥಾರ್ ವಾಹನವನ್ನು ಹತ್ತಿಸಿರುವ ವೀಡಿಯೋ ಈಗ ಸಿಕ್ಕಿದೆ. ಆ ವೀಡಿಯೋದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆಯಲ್ಲಿ ತೆರಳ್ತಿದ್ದವರ ಮೇಲೆ ಏಕಾಏಕಿ ವಾಹನವನ್ನು ಹತ್ತಿಸಲಾಗಿದೆ. ಇದನ್ನೂ ಓದಿ: ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು

    ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‍ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಿರುದ್ಧ ರೈತರು ಕಪ್ಪು ಬಾವುಟ ಹಿಡಿದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇವರ ಜೊತೆಗೆ ಬೆಂಗಾವಲು ವಾಹನಗಳ ಸಾಲಿನಲ್ಲಿದ್ದ ಮಹೀಂದ್ರ ಗಾಡಿಯನ್ನು ರೈತರ ಮೇಲೆ ಹತ್ತಿಸಲಾಗಿದ್ದು, ಇದರಲ್ಲಿ ಸಚಿವನ ಪುತ್ರ ಆಶಿಶ್ ಮಿಶ್ರಾ ಇದ್ದ ಎಂದು ರೈತರು ಈಗಾಗಲೇ ಆರೋಪಿಸಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ

    ಈ ವಾಹನದ ಹಿಂಭಾಗದಲ್ಲಿ ಬಿಜೆಪಿ ಪಕ್ಷದ ಬ್ಯಾನರ್‍ನ್ನೂ ಕಟ್ಟಲಾಗಿತ್ತು. ವಾಹನ ಹೋದ ಬಳಿಕ ಅದರ ಹಿಂದೆಯೇ ಇನ್ನೊಂದು ಕಾರು ಕೂಡಾ ಹಾದು ಹೋಗಿದೆ. ಕಾರು ಹತ್ತಿಸಿದ್ದರಿಂದ ನಾಲ್ವರು ರೈತರು ಪ್ರಾಣ ಕಳೆದುಕೊಂಡರು. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಹಿಂದಿ ಸುದ್ದಿವಾಹಿನಿ ಓರ್ವ ವರದಿಗಾರ ಕೂಡಾ ಬಲಿಯಾಗಿದ್ದಾರೆ. ಕೃತ್ಯ ಸಂಬಂಧ ಕೇಂದ್ರ ಸಚಿವನ ಮಗನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

    ಮೃತ ರೈತರ ಕುಟುಂಬಸ್ಥರಿಗೆ 45 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ರೈತರ ಮೇಲೆ ವಾಹನ ಹತ್ತಿಸಿರುವ ಕೃತ್ಯವನ್ನು ಖಂಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‍ಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

  • ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು

    ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು

    ಲಕ್ನೋ: ಕೇಂದ್ರ ಸಚಿವನ ಮಗ ಕಾರು ಹತ್ತಿಸಿದ ಪರಿಣಾಮ ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಆ ಕಾರಿನಲ್ಲಿದ್ದ ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.

    ಲಖೀಂಪುರ್‍ನಲ್ಲಿ ಉಪ ಮುಖ್ಯಮಂತ್ರಿ ಕೇಶವ್‍ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ನೀಡುವ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೆಂಗಾವಲು ವಾಹನಗಳ ಸಾಲಿನಲ್ಲಿ ಬರುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾನ ಪುತ್ರ ಇದ್ದ ರೈತರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಆ ಬಳಿಕ ಅಲ್ಲಿ ಪ್ರತಿಭಟನೆ ಉದ್ರಿಕ್ತಗೊಂಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೂ ಓದಿ: 20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ

    ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಇಳಿಯಬೇಕಿದ್ದ ಹೆಲಿಪ್ಯಾಡ್‍ಗೂ ರೈತ ಸಂಘಟನೆಗಳು ಮುತ್ತಿಗೆ ಹಾಕಿದ್ದವು. ಕೃತ್ಯ ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಇವತ್ತು ದೇಶದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವಂತೆ ರೈತರಿಗೆ ಕರೆ ನೀಡಿವೆ. ಇತ್ತ ಲಖೀಂಪುರ್‍ಗೆ ಹೊರಟ್ಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಗೆ ತಡೆ ಹಾಕಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ರೇಂಜ್‍ರೋವರ್ ಚಾಲನೆ – ನಿಂತಿದ್ದ ವ್ಯಕ್ತಿ ಸಾವು

    ನನ್ನ ಮಗ ಕಾರಿನಲ್ಲಿ ಇರಲಿಲ್ಲ. ರೈತರು ಪ್ರತಿಭಟನೆ ಮಾಡಬಹುದು ಎಂದು ಮೊದಲೇ ತಿಳಿದಿತ್ತು. ಆದರೆ ರೈತರ ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ಸೇರಿಕೊಂಡು ಬಿಜೆಪಿ ಕಾರ್ಯಕರ್ತರಿದ್ದ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದರು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ಸಚಿವರ ಮಗನ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಇತ್ತ ಹಿಂಸಾಚಾರವನ್ನು ಖಂಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಮತ್ತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದ್ದಾರೆ.