Tag: Ajay Jadeja

  • ಪಾಂಡ್ಯಗೆ ರೋಹಿತ್ ಶರ್ಮಾ ನಾಯಕತ್ವ ಬಿಟ್ಟುಕೊಡೋದು ಸೂಕ್ತ: ಜಡೇಜಾ

    ಪಾಂಡ್ಯಗೆ ರೋಹಿತ್ ಶರ್ಮಾ ನಾಯಕತ್ವ ಬಿಟ್ಟುಕೊಡೋದು ಸೂಕ್ತ: ಜಡೇಜಾ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಂದು ವಿರಾಟ್ ಕೊಹ್ಲಿ (Virat Kohli) ಅವರಿಗೆ ನಾಯಕತ್ವ ಬಿಟ್ಟುಕೊಟ್ಟಂತೆ ರೋಹಿತ್ ಶರ್ಮಾ (Rohit Sharma) ಅವರೂ ಹಾರ್ದಿಕ್ ಪಾಂಡ್ಯಗೆ (Hardik Pandya) ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡೋದು ಸೂಕ್ತ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ (Ajay Jadeja) ಅಭಿಪ್ರಾಯಪಟ್ಟಿದ್ದಾರೆ.

    ಶ್ರೀಲಂಕಾ (SriLanka) ವಿರುದ್ಧದ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಡೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 229 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ ನಿಗದಿತ 16.4 ಓವರ್‌ಗಳಲ್ಲೇ 137 ರನ್‌ಗಳಿಗೆ ಸರ್ವಪತನ ಕಂಡು, ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿತು. ಹೊಸ ವರ್ಷದ ಆರಂಭದಲ್ಲೇ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಶ್ರೀಲಂಕಾ ಸರಣಿ ಗೆದ್ದ ನಂತರ ಅಜಯ್ ಜಡೇಜಾ ರೋಹಿತ್ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 9 ಸಿಕ್ಸರ್‌, 7 ಬೌಂಡರಿ – 45 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಪಾಂಡ್ಯ ಉಮ್ರಾನ್ ಮಲಿಕ್‌ನನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಎಲ್ಲ ಕೆಲಸಗಳನ್ನು ಸರಿಯಾಗಿ ನಿಭಾಯಿಸಿದ್ದಾರೆ. 2022ರ 15ನೇ ಐಪಿಎಲ್ (IPL) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದಾಗ ಪಾಂಡ್ಯ ತಮ್ಮ ನಾಯಕತ್ವದ ಅರ್ಹತೆ ತೋರಿಸಿದರು. ನಂತರ ಐರ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಯಶಸ್ವಿ ನಾಯಕ ಎನಿಸಿಕೊಂಡರು. ಇದೀಗ ಶ್ರೀಲಂಕಾ ತಂಡ ವಿರುದ್ಧ ಸರಣಿ ಗೆದ್ದು ತಮ್ಮ ಅರ್ಹತೆ ತೋರಿಸಿದ್ದಾರೆ. ಪಾಂಡ್ಯ ತನ್ನ ಆಲ್‌ರೌಂಡರ್ ಕೌಶಲಗಳ ಹೊರತಾಗಿಯೂ ಶ್ರೇಷ್ಠ ನಾಯಕನಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಸೂರ್ಯನ ಸಿಡಿಲಬ್ಬರದ ಶತಕಕ್ಕೆ ಲಂಕಾ ಭಸ್ಮ – ಭಾರತಕ್ಕೆ ಟಿ20 ಸರಣಿ ಕಿರೀಟ

    ರೋಹಿತ್ ಶರ್ಮಾ ಅವರು ಎಂದಿಗೂ ಉತ್ತಮ ನಾಯಕರೇ. ಅತ್ಯುತ್ತಮ ದಾಖಲೆಗಳನ್ನು ಮಾಡಿದ್ದಾರೆ. ಆದ್ರೆ ರಾಜನಾದವರು ಎಂದಿಗೂ ಕಾಯುವುದಿಲ್ಲ, ಮತ್ತೊಬ್ಬರಿಗೆ ಸ್ಥಾನ ಬಿಟ್ಟುಕೊಡಬೇಕು. ಆದ್ದರಿಂದ ಮಹೇಂದ್ರ ಸಿಂಗ್ ಧೋನಿ ಅವರು ವಿರಾಟ್ ಕೊಹ್ಲಿಗೆ ನಾಯಕತ್ವ ಬಿಟ್ಟುಕೊಟ್ಟಂತೆ, ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡಬೇಕು ಎಂದು ಅಜಯ್ ಜಡೇಜಾ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 90ರ ದಶಕದ ಕ್ರಿಕೆಟಿಗನಿಗೆ ಕ್ಲೀನ್ ಬೌಲ್ಡ್ ಆಗಿದ್ದ ಮಾಧುರಿ

    90ರ ದಶಕದ ಕ್ರಿಕೆಟಿಗನಿಗೆ ಕ್ಲೀನ್ ಬೌಲ್ಡ್ ಆಗಿದ್ದ ಮಾಧುರಿ

    ಮುಂಬೈ: 90 ದಶಕದ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ಮಾಧುರಿ ದೀಕ್ಷಿತ್ ಅವರು ಹೆಸರು ಈ ಹಿಂದೆಯೇ ಭಾರತ ಕ್ರಿಕೆಟ್ ತಂಡದ ಆಟಗಾರನೊಂದಿಗೆ ಕೇಳಿಬಂದಿತ್ತು.

    ಹೌದು ಮಾಧುರಿ ದೀಕ್ಷಿತ್ ಅವರ ಹೆಸರು ಟೀಂ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾರೊಂದಿಗೆ ಕೇಳಿ ಬಂದಿತ್ತು. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಗಾಳಿ ಸುದ್ದಿಯಾಗಿ ಬಂದ ಈ ಮಾತುಗಳು ಗಾಳಿಯಲ್ಲೆ ತೆಲಿಹೋಗಿದ್ದವು.

    ಅಜಯ್ ಜಡೇಜಾ ಮತ್ತು ಮಾಧುರಿ ಮೊದಲಿಗೆ ಜಾಹೀರಾತುವೊಂದರ ಫೋಟೋ ಶೂಟ್ ವೇಳೆ ಭೇಟಿಯಾಗಿದ್ದರು. ಈ ವೇಳೆ ಭೇಟಿಯಲ್ಲಿ ಪರಿಚಯವಾಗಿ ನಂತರ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಆಗ ಭಾರತ ಕ್ರಿಕೆಟ್ ತಂಡದ ಖಾಯಂ ಆಟಗಾರನಾಗಿದ್ದ ಅಜಯ್ ಜಡೇಜಾ ನಟಿ ಮಾಧುರಿ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆಗ ತಾನೇ ಸಿನಿಮಾದಲ್ಲಿ ಹಿಟ್ ಮೇಲೆ ಹಿಟ್ ಕೊಡುತ್ತಿದ್ದ ಮಾಧುರಿ ಕೂಡ ಅಜಯ್ ಅವರಿಗೆ ಕ್ಲೀನ್ ಬೌಲ್ಡ್ ಆಗಿದ್ದರು.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಜಯ್ ಹಾಗೂ ಮಾಧುರಿ ಮದುವೆಯಾಗಲು ಕೂಡ ತಯಾರಿ ನಡೆಸಿದ್ದರು. ಆದರೆ ರಾಜಮನೆತನದ ಹುಡಗನಗಿದ್ದ ಅಜಯ್ ಮಾಧುರಿಯನ್ನು ಮದುವೆಯಾಗುವುದು ಅವರ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಇವರ ಪ್ರೀತಿ ಮುರಿದು ಬಿತ್ತು. ಆ ನಂತರ ಅಜಯ್ ಕ್ರಿಕೆಟ್‍ನಲ್ಲಿ ಬ್ಯುಸಿಯಾದರು, ಬಾಲಿವುಡ್‍ನಲ್ಲಿ ಹೆಚ್ಚು ಅವಕಾಶಗಳು ಬರುತ್ತಿದ್ದ ಕಾರಣ ಮಾಧುರಿ ಸಹ ಸಿನಿಮಾ ಮಾಡುತ್ತಾ ಅಜಯ್ ಜೊತೆಗಿನ ಪ್ರೀತಿಗೆ ಬ್ರೇಕ್ ಹಾಕಿದರು.

    ಇದಾದ ನಂತರ ಅಜಯ್ ಜಡೇಜಾ ಫಿಕ್ಸಿಂಗ್‍ನಲ್ಲಿ ಸಿಕ್ಕಿಬಿದ್ದು ಐದು ವರ್ಷ ನಿಷೇಧಕ್ಕೆ ಒಳಗಾದರು. ಈ ಮೂಲಕ 1992 ರಿಂದ 2000ದ ವರೆಗೆ ಭಾರತ ತಂಡಕ್ಕಾಗಿ ಆಡಿದ್ದ ಅಜಯ್ ಜಡೇಜಾ ಅವರ ಕ್ರಿಕೆಟ್ ಜೀವನ ಮುಗಿದು ಹೋಗಿತ್ತು. ಆದರೆ ಈ ನಡುವೆ ಬಾಲಿವುಡ್‍ನಲ್ಲಿ ರಾಣಿಯಾಗಿ ಮೆರೆದ ಮಾಧುರಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಲಿವುಡ್ ಸಿನಿರಂಗದಲ್ಲಿ ಮೇರು ನಟಿಯಾಗಿ ಬೆಳೆದು ನಿಂತರು.

    ಅಜಯ್ ನಂತರ ಸಂಜಯ್ ದತ್ ಅವರ ಪ್ರೀತಿ ಬಲೆಯಲ್ಲಿ ಸಿಲುಕಿದ ಮಾಧುರಿ ಕೆಲ ಕಾಲ ದತ್ ಜೊತೆ ಡೇಟಿಂಗ್ ಕೂಡ ಮಾಡುತ್ತಿದ್ದರು. 1991 ರಲ್ಲಿ ಸಾಜನ್ ಸಿನಿಮಾದ ಸಮಯದಲ್ಲಿ ಸಂಜಯ್ ಮತ್ತು ಮಾಧುರಿಗೆ ಪ್ರೇಮಂಕುರವಾಗಿತ್ತು. ಈ ನಡುವೆ ಸಂಜಯ್ ದತ್ ಅವರು, ಕಳ್ ನಾಯಕ್ ಸಿನಿಮಾದಲ್ಲಿ ನಟಿಸುವಾಗ ಜೈಲಿಗೆ ಹೋದರು. ಆಗ ಇವರಿಬ್ಬರ ಪ್ರೀತಿಯೂ ಮುರಿದು ಬಿತ್ತು. ನಂತರ ಮಾಧುರಿ 1999ರಲ್ಲಿ ಶ್ರೀರಾಮ್ ಮಾಧವ್ ನೆನೆಯನ್ನು ಮದುವೆಯಾದರು.