Tag: Ajay Devgan

  • 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    2020ನೇ ಸಾಲಿನ ಸಿನಿಮಾಗಳಿಗೆ ಇಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 68ನೇ ನ್ಯಾಷನಲ್ ಫಿಲ್ಮ್ಂ ಫೆಸ್ಟಿವಲ್‌ಗೆ 30 ಭಾಷೆಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳ ಅರ್ಜಿ ಸಲ್ಲಿಸಿದ್ದವು. ಇಂದು ನವದೆಹಲಿಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    1954ರಿಂದ ರಾಷ್ಟ್ರ ಪ್ರಶಸ್ತಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಈಗ 68ನೇ ನ್ಯಾಷನಲ್ ಫಿಲ್ಮ್ಂ ಫೆಸ್ಟಿವಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಭಾರತ ಸರ್ಕಾರವು ಚಲನಚಿತ್ರೋತ್ಸವ ಜವಬ್ದಾರಿ ಹೊತ್ತುಕೊಂಡಿದೆ. ಕೋವಿಡ್‌ನಿಂದ ರಾಷ್ಟ್ರ ಪ್ರಶಸ್ತಿ ಕಾರ್ಯವನ್ನ ಮುಂದೂಡಲಾಗಿತ್ತು. 2020ರ ಸಾಲಿನಲ್ಲಿ ಸಾಧನೆ ಮಾಡಿದ ಪ್ರತಿಭೆಗೆ ಗುರುತಿಸಿ, ಗೌರವಿಸಲಾಗಿದೆ. ಇದನ್ನೂ ಓದಿ: Breaking- 68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ : ಡೊಳ್ಳು, ತಲೆದಂಡ, ನಾದದ ನವನೀತ ಸಿನಿಮಾಗಳಿಗೆ ರಾಷ್ಟ್ರ ಗರಿ

    ಚಲನಚಿತ್ರ ನಿರ್ಮಾಪಕರಾದ ವಿಪುಲ್ ಶಾ ಮತ್ತು ಅನುರಾಗ್ ಠಾಕೂರ್ ಅವರನ್ನ ಭೇಟಿ ಮಾಡಿ, 68ನೇ ರಾಷ್ಟ್ರ ಪ್ರಶಸ್ತಿಯ ಕುರಿತು ವರದಿ ಸಲ್ಲಿಸಲಾಯಿತು. ಯಾರಿಗೆಲ್ಲಾ ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಕುರಿತ ಡಿಟೈಲ್ಸ್ ಇಲ್ಲಿದೆ.

    ಅತ್ಯುತ್ತಮ ಚಲನಚಿತ್ರ: ಸೂರರೈ ಪೋಟ್ರು

    ಅತ್ಯುತ್ತಮ ನಿರ್ದೇಶಕ: ಸಚಿ, ಅಯ್ಯಪ್ಪನಂ ಕೊಶಿಯಮ್

    ಅತ್ಯುತ್ತಮ ಮನರಂಜನೆ ಚಿತ್ರ: ತಾನ್ಹಾಜಿ

    ಅತ್ಯುತ್ತಮ ನಟ: ಸೂರ್ಯ (ಸೂರರೈ ಪೋಟ್ರು)
    ಅಜಯ್ ದೇವಗನ್ ( ತಾನ್ಹಾಜಿ)

    ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ( ಸೂರರೈ ಪೋಟ್ರು)

    ಅತ್ಯುತ್ತಮ ಪೋಷಕ ನಟಿ: ಬಿಜು ಮೆನನ್( ಅಯ್ಯಪ್ಪನಂ ಕೋಶಿಯಂ)

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ದಿಗ್ಗಜ ನಟರ ವಿರುದ್ಧ ದೂರು ದಾಖಲು

    ಬಾಲಿವುಡ್ ದಿಗ್ಗಜ ನಟರ ವಿರುದ್ಧ ದೂರು ದಾಖಲು

    ಮಾಜಕ್ಕೆ ಹಾನಿ ಮಾಡುವಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ, ನಟಿಯರು ಹಾಗೂ ಸಿಲೆಬ್ರಿಟಿಗಳ ಬಗ್ಗೆ ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಕನ್ನಡ ಸಿನಿಮಾ ರಂಗದಲ್ಲಿ ಹಣಕ್ಕಾಗಿ ಆನ್‌ಲೈನ್ ಆಟಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಕಲಾವಿದರ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈಗಲೂ ಅದು ಮುಂದುವರಿದಿದೆ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಹಾಗೆಯೇ ಈ ವಿರೋಧದ ಅಲೆಯು ಬಾಲಿವುಡ್‌ನಲ್ಲೂ ಮುಂದುವರಿದಿದೆ. ಆನ್‌ಲೈನ್ ಜೂಜು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರ ಮೇಲೆ ಮುಂಬೈನಲ್ಲಿ ದೂರು ಕೊಟ್ಟಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಈ ನಟರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಮುಂಬೈ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹೋರಾಟಗಾರ ತಮನ್ನಾ ಹಶ್ಮಿ ಎನ್ನುವವರು ದೂರು ನೀಡಿದ್ದು, ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ನಟರು ಭಾಗಿಯಾಗಿ ಯುವ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಅಮಿತಾಭ್ ಬಚ್ಚನ್, ಅಜಯ್ ದೇವಗನ್, ಶಾರುಖ್ ಖಾನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಕಲಾವಿದರ ಹೆಸರನ್ನು ದೂರಿನಲ್ಲಿ ಹೆಸರಿಸಿ, ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಹಶ್ಮಿ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಈ ಹಿಂದೆಯೂ ಬಾಲಿವುಡ್‌ನಲ್ಲಿ ಇಂಥದ್ದೊಂದು ಅಭಿಯಾನ ಶುರುವಾಗಿತ್ತು. ಐಎಎಸ್ ಅಧಿಕಾರಿಯೊಬ್ಬರು ನಡೆಸಿದ ಅಭಿಯಾನದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಇದೀಗ ಹಶ್ಮಿ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ದೂರು ಕೊಟ್ಟ ಕೆಲವೇ ಗಂಟೆಗಳಲ್ಲೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 467, 468, 439 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದೆ. ವಿಚಾರಣೆಯನ್ನು ಮೇ 27ಕ್ಕೆ ನಗದಿ ಪಡಿಸಿದೆ ಎಂದು ಹಶ್ಮಿ ತಿಳಿಸಿದ್ದಾರೆ.

  • ಕಿಚ್ಚ ಸುದೀಪ್ ವಿರುದ್ಧ ಮತ್ತೆ ತೊಡೆತಟ್ಟಿದ ಅಜಯ್ ದೇವಗನ್

    ಕಿಚ್ಚ ಸುದೀಪ್ ವಿರುದ್ಧ ಮತ್ತೆ ತೊಡೆತಟ್ಟಿದ ಅಜಯ್ ದೇವಗನ್

    ಹಿಂದಿ ರಾಷ್ಟ್ರೀಯ ಭಾಷೆ ವಿಚಾರವಾಗಿ ಈಗಾಗಲೇ ಒಂದು ಸುತ್ತ ಟ್ವಿಟ್ ವಾರ್ ಮಾಡಿದ್ದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಈ ವಿವಾದ ತಣ್ಣಗಾಗುತ್ತಿದ್ದಂತೆಯೇ ಮತ್ತೊಮ್ಮೆ ಒಬ್ಬರಿಗೊಬ್ಬರು ತೊಡೆತಟ್ಟಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಗಳ ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಹಲವು ತಿಂಗಳ ಹಿಂದಿಯೇ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿತ್ತು. ಜುಲೈ 28 ರಂದು ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಈಗ ಅದೇ ತಿಂಗಳು, ಅದೇ ವಾರದಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರವೂ ಕೂಡ ರಿಲೀಸ್ ಆಗುತ್ತಿದೆ. ಜುಲೈ 29 ರಂದು ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. 2 ಡಿ ಮತ್ತು 3 ಡಿಯಲ್ಲಿಯೂ ಸಿನಿಮಾ ಮೂಡಿ ಬಂದಿದೆ. ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅಜಯ್ ದೇವಗನ್ ಅವರ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಸಖತ್ ಕುತೂಹಲವಂತೂ ಮೂಡಿಸಿದೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಸುದೀಪ್ ಅವರ ವಿಕ್ರಾಂತ್ ರೋಣ ಮತ್ತು ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಕಾಕತಾಳೀಯವಾದರೂ, ಅಭಿಮಾನಿಗಳು ಮಾತ್ರ ಅದನ್ನು ಬೇರೆ ರೀತಿಯಲ್ಲೇ ಅರ್ಥೈಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ ರಂಗದವರ ಪಿತೂರಿ ಎನ್ನುವ ಮಾತೂ ಕೇಳಿ ಬರುತ್ತಿವೆ. ಏನೇ ಅಗಲಿ, ಒಳ್ಳೆಯ ಪೈಪೋಟಿ ನಡೆದರೆ ಸಾಕು ಎನ್ನುತ್ತಾರೆ ಚಿತ್ರೋದ್ಯಮಿಗಳು.

  • ನಾನು ಸುದೀಪ್ ಸಾಹೇಬರ ಪರ ಎಂದು ಹೇಳಬೇಕೆ?- ಯೋಗರಾಜ್ ಭಟ್

    ನಾನು ಸುದೀಪ್ ಸಾಹೇಬರ ಪರ ಎಂದು ಹೇಳಬೇಕೆ?- ಯೋಗರಾಜ್ ಭಟ್

    ಹಿಂದಿ ರಾಷ್ಟ್ರ ಭಾಷೆಯೇ ಇಲ್ಲವೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟರ ನಡುವೆ ಶೀತಲ ಸಮರ ಶುರುವಾಗಿದೆ. ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ನಡುವೆ ಶುರುವಾದ ಈ ವಾರ್ ಇಡೀ ಚಿತ್ರರಂಗ, ರಾಜಕೀಯ ರಂಗಕ್ಕೆ ವ್ಯಾಪಿಸಿದೆ.

    yogaraj bhat (3)

    ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಸುದೀಪ್ ಖಡಕ್ ಸಂದೇಶ ರವಾನಿಸಿದ್ದರು. ಅದಕ್ಕೆ ಪ್ರತಿಯಾಗಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಟ್ವಿಟ್ ಮಾಡಿ ರಾಷ್ಟ್ರ ಭಾಷೆ ಹಿಂದಿ ಅಲ್ಲ ಅಂದಮೇಲೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು -ಯೋಗರಾಜ್ ಭಟ್

    SUDEEP

    ಇದಕ್ಕೆ ಪ್ರತಿಕ್ರಿಯಿಸಿದ್ದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು ಎಂದು ಹೇಳಿದ್ದರು. ಅವರ ಈ ಹೇಳಿಕೆಯೂ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ

    ಈ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿರುವ ಅವರು, ನಮಸ್ತೆ ರಾಷ್ಟ್ರೀಯ ಭಾಷೆ ವಿಚಾರವಾಗಿ ಮಾಧ್ಯಮ ಮಿತ್ರರು ಕೇಳಿದಾಗ, ಪ್ರತಿಕ್ರಿಯ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೆಯೇ ಹೊರತು. ರಾಷ್ಟ್ರ ಭಾಷೆ ಹಿಂದಿಯೇ ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನ ಪ್ರಕಾರವಾಗಿ ರಾಷ್ಟ್ರೀಯ ಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತು ಚರ್ಚೆ ಎಲ್ಲರಿಗೂ ಹೋಗಿ ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಿಡ್‌ನೈಟ್‌ನಲ್ಲಿ ಸಮಂತಾಗೆ ಸರ್ಪ್ರೈಸ್ ನೀಡಿದ ವಿಜಯ್ ದೇವರಕೊಂಡ: ವಿಡಿಯೋ ವೈರಲ್

    Yogaraj_Bhat_Photo

    ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದ ಮಾತ್ರಕ್ಕೆ ಅದು ರಾಷ್ಟ್ರಭಾಷೆಯಾಗುವುದಿಲ್ಲ. ಈ ಕಾರಣಕ್ಕಾಗಿ ನಾನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಕನ್ನಡದಲ್ಲಿ ಅಂತ್ಯ ಹಾಡಲೆತ್ನಿಸಿದ್ದೇನೆಯೇ ಹೊರತು ಬೇರೇನೂ ಇಲ್ಲ. ನನ್ನ ಕನ್ನಡ, ನನ್ನ ಭಾಷಾ ಸ್ವಾಭಿಮಾನ, ಕನ್ನಡ ಸೇವೆ, ಕನ್ನಡ ತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ. ನಾನು ನನ್ನ ಸನ್ಮಿತ್ರರಾದ ಸುದೀಪ್ ಸಾಹೇಬರ ಪರ ಎಂದು ತಮಗೆಲ್ಲಾ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ಭಾಷೆ ಸಿರಿಗನ್ನಡಂ ಗೆಲ್ಗೆ’ ಎಂದು ಬರೆದುಕೊಂಡಿದ್ದಾರೆ.

  • ಅಜಯ್ ದೇವಗನ್ ವಿರುದ್ಧವೇ ನಿಂತ ಬಾಲಿವುಡ್ ಇಬ್ಬರೂ ಸ್ಟಾರ್ ನಟರು

    ಅಜಯ್ ದೇವಗನ್ ವಿರುದ್ಧವೇ ನಿಂತ ಬಾಲಿವುಡ್ ಇಬ್ಬರೂ ಸ್ಟಾರ್ ನಟರು

    ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪಿಕೊಳ್ಳದಿದ್ದರೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡಬೇಡಿ ಎಂದು ನಿನ್ನೆಯಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ್ದರು. ಈ ಹೇಳಿಕೆಗೆ ಕಾರಣ ಸುದೀಪ್ ಅವರು ಆಡಿದ ಮಾತುಗಳಾಗಿತ್ತು. ಆದರೆ, ಅದರ ಹಿಂದೆ ಬೇರೆಯೇ ಕಾರಣವಿದೆ ಎಂದಿದ್ದಾರೆ ಬಾಲಿವುಡ್ ನ ಇಬ್ಬರು ಸ್ಟಾರ್ ನಟರು.  ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಿಯಲ್ ಹೀರೋ ಸೋನು ಸೂದ್, ‘ಸಿನಿಮಾಗಳಿಗೆ ಯಾವುದೇ ಭಾಷೆಯಿಲ್ಲ. ರಂಜಿಸುವುದಷ್ಟೇ ಅದರ ಭಾಷೆ. ಸಿನಿಮಾಗಳ ವಿಷಯದಲ್ಲಿ ಭಾಷೆಯನ್ನು ಎಳೆದು ತರಬಾರದು. ನಾವೆಲ್ಲರೂ ಒಂದೇ ಎಂದು ರಂಜಿಸಬೇಕು’ ಎಂದು ಅಜಯ್ ದೇವಗನ್ ಗೆ ಕಿವಿ ಹಿಂಡುವಂತೆ ಹೇಳಿಕೆ ಕೊಟ್ಟಿದ್ದಾರೆ. ಕಲಾವಿದರು ಯಾವುದೇ ಕಾರಣಕ್ಕೂ ಈ ರೀತಿ ಕಿತ್ತಾಟ ಮಾಡಬಾರದು ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ಫ್ಯಾಮಿಲಿ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಮನೋಜ್ ಬಾಜಪೇಯಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣದವರ ಸಿನಿಮಾಗಳ ಹಿಂದಿಯಲ್ಲಿ ಗೆಲ್ಲುತ್ತಿವೆ. ನೂರಾರು ಕೋಟಿ ವ್ಯವಹಾರ ಮಾಡಲಾಗುತ್ತಿದೆ. ಹಾಗಾಗಿ ಭಾಷೆಯನ್ನು ಮುಂದಿಟ್ಟುಕೊಂಡು ವಾತಾವರಣವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಬಾಲಿವುಡ್ ನಟರು ಎಂದು ಪರೋಕ್ಷವಾಗಿ ಅಜಯ್ ದೇವಗನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಅಲ್ಲದೇ, ಹಿಂದಿ ರಾಷ್ಟ್ರ ಭಾಷೆಯ ವಿಚಾರ ಸಿನಿಮಾಗಳಿಗೆ ಸಂಬಂಧಿಸಿದ್ದಲ್ಲ. ಅದನ್ನು ಕಲಾವಿದರು ಈ ರೀತಿಯಲ್ಲಿ ಎಳೆದಾಡುವುದು ಸರಿಯಾದದ್ದು ಅಲ್ಲ. ಮನರಂಜನೆಯ ಇಂಡಸ್ಟ್ರಿ ಒಂದೇ ಎಂದು ಎಲ್ಲರೂ ಕೆಲಸ ಮಾಡಬೇಕು ಎಂದು ಕೆಲವರು ಸಲಹೆ ಕೊಟ್ಟಿದ್ದಾರೆ. ಈ ಚರ್ಚೆ ಈಗ ಕೇವಲ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಮಾತ್ರ ಉಳಿದುಕೊಂಡಿಲ್ಲ, ರಾಜಕಾರಣಿಗಳು ಮತ್ತು ಕನ್ನಡ ಪರ ಹೋರಾಟಗಾರರು ಕೂಡ ಅಜಯ್ ದೇವಗನ್ ವಿರುದ್ಧ ಕಿಡಿಕಾರಿದ್ದಾರೆ.

  • ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

    ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ಪ್ರಾರಂಭವಾಗಿತ್ತು. ಮೊದಲು ಅಜಯ್, ಹಿಂದಿ ರಾಷ್ಟ್ರ ಭಾಷೆ. ನೀವು ಒಪ್ಪಿಕೊಳ್ಳದೇ ಇದ್ದರೆ ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ ಎಂದು ಕಿಚ್ಚ ಸುದೀಪ್ ಅವರನ್ನು ಟ್ವೀಟ್‍ನಲ್ಲಿ ನೇರವಾಗಿ ಕೇಳಿದ್ದಾರೆ. ಈ ಟ್ವೀಟ್‍ಗೆ ಚಂದನವನದ ನಟ-ನಟಿಯರು ಸೇರಿದಂತೆ ಅನೇಕರು ವಿರೋಧಿಸಿದ್ದು, ಸುದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಡಿಕೆಶಿ ಇಂದು ಟ್ವೀಟ್‍ನಲ್ಲಿ, ಭಾರತದಲ್ಲಿ ಸರಿಸುಮಾರು 19,500 ಮಾತೃಭಾಷೆಗಳಿವೆ. ಭಾರತದೆಡೆಗಿನ ಪ್ರೀತಿ ಪ್ರತಿಯೊಂದು ಭಾಷೆಯಲ್ಲಿಯೂ ಏಕರೀತಿಯಲ್ಲಿ ವ್ಯಕ್ತವಾಗುತ್ತದೆ. ಯಾವುದೇ ಭಾಷೆಯು ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸದಂತೆ ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ಹೆಮ್ಮೆಯ ಕನ್ನಡಿಗನಾಗಿ ಮತ್ತು ಕಾಂಗ್ರೆಸ್ಸಿಗನಾಗಿ ನೆನಪಿಸಬಯಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ಧ್ವನಿಗೂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಕನ್ನಡ ಮತ್ತು ಆಂಗ್ಲ ಎರಡು ಭಾಷೆಯಲ್ಲಿಯೂ ಟ್ವೀಟ್ ಮಾಡಿರುವ ಡಿಕೆಶಿ, ತಮ್ಮ ಕಾಂಗ್ರೆಸ್ ಪಕ್ಷ ಎಲ್ಲ ಭಾಷೆಯನ್ನು ಒಟ್ಟಿಗೆ ತಂದು, ಏಕತೆ ಸಾಧಿಸಿತ್ತು ಎಂದು ಬರೆದುಕೊಂಡಿದ್ದಾರೆ. ಅಜಯ್ ಅವರ ಟ್ವೀಟ್ ಖಂಡಿಸಿ ರಾಜಕೀಯ ಗಣ್ಯರು ಸೇರಿದಂತೆ ದಕ್ಷಿಣ ಭಾರತದ ಸಿನಿತಾರೆಯರು ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.

  • ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ

    ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ದನಿಗೂಡಿಸಿದ ಸಿಎಂ ಬೊಮ್ಮಾಯಿ

    ಮ್ಮ ರಾಷ್ಟ್ರ ಭಾಷೆ ಹಿಂದಿ ಅಲ್ಲ ಎನ್ನುವ ಸುದೀಪ್ ಹೇಳಿಕೆಗೆ ವ್ಯಾಪಾಕ ಬೆಂಬಲ ವ್ಯಕ್ತವಾಗುತ್ತಿದೆ. ನಿನ್ನೆ ಸಿನಿಮಾ ರಂಗದ ಗಣ್ಯರು ಮತ್ತು ಮಾಜಿ ಮುಖ್ಯಮಂತ್ರಿಗಳು ಕಿಚ್ಚನ ಪರ ನಿಂತಿದ್ದರು. ಹಿಂದಿ ರಾಷ್ಟ್ರ ಭಾಷೆ ಆಗಲು ಸಾಧ್ಯವೇ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದರು. ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ‘ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಸುದೀಪ್ ಹೇಳಿದ್ದು ಸರಿಯಿದೆ. ನಮ್ಮ ಪ್ರಾದೇಶಿಕ ಭಾಷೆಯೇ ಸಾರ್ವಭೌಮ. ಆಯಾ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಇರುತ್ತದೆ. ಸುದೀಪ್ ಅದನ್ನು ಸರಿಯಾಗಿಯೇ ಹೇಳಿದ್ದಾರೆ ಎಂದು ಸುದೀಪ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

    ಸುದೀಪ್ ಅವರ ಆ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ರಾಷ್ಟ್ರ ಭಾಷೆ. ಅದನ್ನು ಒಪ್ಪಿಕೊಳ್ಳದೇ ಇದ್ದರೆ ಹಿಂದಿ ಭಾಷೆಗೆ ಇತರ ಭಾಷೆಯ ಸಿನಿಮಾಗಳನ್ನು ಡಬ್ ಮಾಡುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದರು. ಅಜಯ್ ದೇವಗನ್ ಈ ಟ್ವಿಟ್ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

  • 100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್  ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    100 ಎಕರೆ ಪ್ರದೇಶದಲ್ಲಿ ಆರ್.ಆರ್.ಆರ್ ಕನ್ನಡ ಪ್ರಿರಿಲೀಸ್ ಇವೆಂಟ್ : ಯಾರೆಲ್ಲ ಬರ್ತಾರೆ ಗೊತ್ತಾ?

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕನ್ನಡ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ. ಮಾರ್ಚ್ 19ರಂದು ನಡೆಯಲಿರುವ ಈ ಇವೆಂಟ್ ಗಾಗಿ 100 ಎಕರೆ ಪ್ರದೇಶ ಸಿದ್ಧಗೊಳ್ಳುತ್ತಿದೆ. 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಲಿರುವ ಈ ಕಾರ್ಯಕ್ರಮದಲ್ಲಿ ತೆಲುಗು, ತಮಿಳು ಮತ್ತು ಕನ್ನಡದ ಸ್ಟಾರ್ ನಟರು ಭಾಗಿಯಾಗುತ್ತಿರುವುದು ವಿಶೇಷ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಈ ಇವೆಂಟ್ ಅನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದ್ದು, ಪುನೀತ್ ನೆನಪಿನಲ್ಲಿ ಹಲವು ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಇದರ ನೇತೃತ್ವವನ್ನು ಶಿವರಾಜ್ ಕುಮಾರ್ ಅವರಿಗೆ ವಹಿಸಲಾಗಿದೆಯಂತೆ.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಮಾತ್ರವಲ್ಲ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ಎಲ್ಲ ರೀತಿಯ ಭದ್ರತೆಯನ್ನೂ ಮಾಡಿಕೊಳ್ಳಲಾಗುತ್ತಿದೆಯಂತೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್ ತೇಜ್, ಜ್ಯೂನಿಯರ್ ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವಗನ್,  ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಕೂಡ ಅಂದು ಭಾಗಿಯಾಗಲಿದ್ದಾರೆ. ಮನರಂಜನೆ ಕಾರ್ಯಕ್ರಮ ಮತ್ತು ಚಿತ್ರತಂಡದೊಂದಿಗೆ ಸಂವಾದ ಕೂಡ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.

  • ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮುಂಬೈ: ಬಾಲಿವುಡ್ ಸ್ಟಾರ್ ನಟ ಮತ್ತು ಮಹೀಂದ್ರಾ ಗ್ರೂಪ್‍ನ ರಾಯಭಾರಿ ಅಜಯ್ ದೇವಗನ್ ಶೂಟಿಂಗ್ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ.

    ಮಹೀಂದ್ರಾ ಟ್ರಕ್ ಮತ್ತು ಬಸ್ ತಯಾರಿಕಾ ವಿಭಾಗದ ರಾಯಭಾರಿ ಅಜಯ್ ದೇವಗನ್ ಅವರನ್ನು ಒಳಗೊಂಡ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ, ಜಾಹೀರಾತನ್ನು ಚಿತ್ರೀಕರಿಸುವಾಗ ಅಜಯ್ ದೇವಗನ್ ಸಿಟ್ಟು ಮಾಡಿಕೊಳ್ಳುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಲಾಗಿತ್ತು. ಇದನ್ನೂ ಓದಿ:  1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    ವೀಡಿಯೋದಲ್ಲಿ ಏನಿದೆ?
    ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ, ಅಜಯ್ ‘ಯೆ ಬಾರ್ ಬಾರ್ ಸ್ಕ್ರಿಪ್ಟ್ ಕ್ಯೂನ್ ಬದಲ್ ರಹೇ ಹೋ?(ಸ್ಕ್ರಿಪ್ಟ್ ಏಕೆ ನಿರಂತರವಾಗಿ ಬದಲಾಯಿಸಲಾಗುತ್ತಿದೆ?) ಎಂದು ಸಿಟ್ಟಾಗಿ ಶೂಟಿಂಗ್ ವೇಳೆ ಗರಂ ಆಗಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆಗ ಶೂಟಿಂಗ್‍ನಲ್ಲಿದ್ದ ಒಬ್ಬರು ಸ್ಕ್ರಿಪ್ಟ್ ಕೇವಲ ನಾಲ್ಕು ಬಾರಿ ಬದಲಾಯಿಸಲಾಗಿದೆ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ಅಜಯ್ ನಿಟ್ಟುಸಿರು ಬಿಡುತ್ತಾರೆ. ವೀಡಿಯೋ ನಂತರ ‘ವೀಕ್ಷಿಸುತ್ತಿರಿ’ ಇನ್ನೂ ಹೆಚ್ಚು ಬರಲಿದೆ ಎಂದು ಬರೆದುಕೊಳ್ಳಲಾಗಿದೆ.

    ಈ ಮೂಲಕ ಮಹೀಂದ್ರ ಗ್ರೂಪ್ ಅಜಯ್ ಸಿಟ್ಟಾಗುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಿದ್ದು, ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಈ ಮೂಲಕ ತಿಳಿಯುತ್ತೆ. ಈ ವೀಡಿಯೋ ಶೇರ್ ಮಾಡಿದ ಅವರು, ಮಹೀಂದ್ರಾ ಟ್ರಕ್ ಬಸ್ ಚಿತ್ರೀಕರಣದಲ್ಲಿ ಅಜಯ್ ದೇವಗನ್ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡಿದ್ದಾರೆ ಎಂದು ನನಗೆ ತಿಳಿಸಲಾಯಿತು. ಕೊನೆಗೆ ಇದು ತಮಾಷೆಗಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹೊಸ ರೀತಿಯ ಪ್ರಚಾರದ ವೀಡಿಯೋ ನೋಡಿದ ನೆಟ್ಟಿಗರು ಒಂದು ನಿಮಿಷ ಶಾಕ್ ಆಗಿದ್ದು, ಪೂರ್ತಿ ವೀಡಿಯೋ ನೋಡಿದ ಮೇಲೆ ಇದನ್ನು ಪ್ರಚಾರಕ್ಕೆ ಮಾಡಿದ್ದಾರೆ ಎಂಬುದು ತಿಳಿದುಬರುತ್ತೆ. ನೆಟ್ಟಿಗರು, ‘ಜಾಹೀರಾತು ಮಾಡಲು ಉತ್ತಮ ಮಾರ್ಗ’ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಇಂದಿರಾನಗರ ಕಾ ಗುಂಡಾ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಈ ಟ್ವೀಟ್ ರೀ-ಟ್ವೀಟ್ ಮಾಡಿ ಅಜಯ್, ಈ ಶೂಟ್ ಅದ್ಭುತವಾಗಿತ್ತು ಎಂದು ಬರೆದುಕೊಂಡಿದ್ದಾರೆ.

  • RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    ಮುಂಬೈ: ‘ಆರ್‌ಆರ್‌ಆರ್’ ಸಿನಿಮಾ ದೇಹವಾದರೆ ಅಜಯ್ ದೇವಗನ್ ಆತ್ಮ ಮತ್ತು ಆಲಿಯಾ ಭಟ್ ಶಕ್ತಿ ಎಂದು ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ.

    ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್’ ಜನವರಿ 7 ರಂದು ರಿಲೀಸ್ ಆಗುವುದೆಂದು ಚಿತ್ರತಂಡ ತಿಳಿಸಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಈ ವೇಳೆ ಸಂದರ್ಶನವೊಂದರಲ್ಲಿ ವರದಿಗಾರರು, ಈ ಸಿನಿಮಾದಲ್ಲಿ ಆಲಿಯಾ ಮತ್ತು ಅಜಯ್ ದೇವಗನ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ಯ ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಅದಕ್ಕೆ ಉತ್ತರಿಸಿದ ರಾಜಮೌಳಿ, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ಪಾತ್ರಗಳು ಬಹಳ ಮುಖ್ಯವಾಗಿವೆ. ನಾವು ಆರ್‌ಆರ್‌ಆರ್ ಅನ್ನು ದೇಹವಾಗಿ ನೋಡಿದರೆ, ಅಜಯ್ ಸರ್ ಈ ಚಿತ್ರದಲ್ಲಿ ಆತ್ಮ. ಈ ಸಿನಿಮಾದಲ್ಲಿ ಎರಡು ಶಕ್ತಿಗಳಿವೆ. ಅವರನ್ನು ಸಮತೋಲನಗೊಳಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರುವ ಒಬ್ಬ ವ್ಯಕ್ತಿ ಇದ್ದಾರೆ. ಅವರೇ ಸೀತೆ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ಎಂದು ಉತ್ತರಿಸಿದರು.

    ಅಜಯ್ ಮತ್ತು ಆಲಿಯಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾನು ಪ್ರೇಕ್ಷಕರನ್ನು ಮೋಸ ಮಾಡಲು ಹೋಗುವುದಿಲ್ಲ. ಆಲಿಯಾ ಮತ್ತು ಅಜಯ್ ಅವರ ಪಾತ್ರ ಈ ಸಿನಿಮಾದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ಅಲ್ಲದೇ ಅವರಿಬ್ಬರು ನಾಯಕರಿಗಿಂತ ಹೆಚ್ಚು ಮುಖ್ಯರಾಗಿದ್ದಾರೆ ಎಂದು ಉತ್ತರಿಸಿದರು.

    ಆರ್‌ಆರ್‌ಆರ್ ಸಿನಿಮಾದಲ್ಲಿ 1920 ರ ದಶಕ ಪೌರಾಣಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಆಧರಿಸಿದ ಕಾಲ್ಪನಿಕ ಕಥೆ ಇದೆ. ಈ ಭಾಗದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್, ಕೊಮ್ಮರಮ್ ಭೀಮ್ ಪಾತ್ರದಲ್ಲಿ ಜೂ.ಎನ್‍ಟಿಆರ್ ಅಭಿನಯಿಸಿದ್ದಾರೆ. ಸೀತಾ ಪಾತ್ರದಲ್ಲಿ ಆಲಿಯಾ ಕಾಣಿಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಜೂನಿಯರ್ ಎನ್‍ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಕನಿ, ಅಲಿಸನ್ ಡೂಡಿ, ರೇ ಸ್ಟೀವನ್ಸನ್ ಒಳಗೊಂಡಂತೆ ‘ಆರ್‍ಆರ್‍ಆರ್’ ಸಿನಿಮಾ ಬಹುದೊಡ್ಡ ತಾರಾ ಬಳಗವನ್ನು ಹೊಂದಿದೆ.

    ಈ ಸಿನಿಮಾವನ್ನು ಮುಂದಿನ ವರ್ಷ ಜ.7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಆದರೆ ಪ್ರಸ್ತುತ ಕೊರೊನಾ ಹರಡುತ್ತಿರುವ ಹಿನ್ನೆಲೆ ಇದು ಇನ್ನು ಮುಂದೆ ಹೋಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳಿಂದ ತಿಳಿದುಬರುತ್ತಿದೆ.