Tag: Ajaneesh Loknath Hombale Films

  • ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಗಿಫ್ಟ್

    ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಗಿಫ್ಟ್

    ನ್ನಡ ಚಿತ್ರರಂಗಕ್ಕೆ ಕೆ‌.ಜಿ.ಎಫ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಸಿರುವ “ಕಾಂತಾರ” ಚಿತ್ರದ ಮೊದಲ ಹಾಡು ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಹೆಸರಾಂತ ನಟ – ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿರುವುಲ್ಲದೆ, ನಾಯಕರಾಗೂ ನಟಿಸಿದ್ದಾರೆ.

    ಪ್ರಮೋದ್ ಮರವಂತೆ ರಚಿಸಿರುವ “ಸಿಂಗಾರ ಸಿರಿಯೆ” ಎಂಬ  ಮನಮೋಹಕ ಹಾಡಿನಲ್ಲಿ  ಜಾನಪದ ಸೊಗಡನ್ನು ಎತ್ತಿಹಿಡಿಯಲಾಗಿದೆ.  ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಈಗಾಗಲೇ ಸಿನಿಮಾದ ಟೀಸರ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಿದ್ದು, ಸಾಕಷ್ಟು ನಿರೀಕ್ಷೆ ಕೂಡ ಮೂಡಿಸಿದೆ. ರಿಷಬ್ ಶೆಟ್ಟಿ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಬಹುತೇಕವಾಗಿ ಹಿಟ್ ಆಗುತ್ತಿರುವುದರಿಂದ, ಈ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ಲದೇ, ಈ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳ ಚಿತ್ರ ಪ್ರೇಕ್ಷಕರನ್ನೂ ರಂಜಿಸಲಿದೆಯಂತೆ. ಅಂದಹಾಗೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]