Tag: Ajaneesh Lokanath

  • ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

    ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

    ನ್ನಡದ ‘ಕಾಂತಾರ’ (Kantara) ಸಂಗೀತ ಡೈರೆಕ್ಟರ್ ಅಜನೀಶ್ ಲೋಕನಾಥ್ (Ajaneesh Lokanath)  ಅವರಿಗೆ ಬೇಡಿಕೆ ಜಾಸ್ತಿಯಾಗಿದೆ. ಪರಭಾಷೆಗಳಿಂದ ಅಜನೀಶ್‌ಗೆ ಬುಲಾವ್ ಬರುತ್ತಿದೆ. ತೆಲುಗು ಆಯ್ತು ಮರಾಠಿ (Marati) ಚಿತ್ರರಂಗದತ್ತ ಮುಖ ಮಾಡಿದ್ದಾರೆ.

    ಅಜನೀಶ್ ಲೋಕನಾಥ್ ಪರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲೂ ತಮ್ಮ ಸಂಗೀತ ಪ್ರತಿಭೆಯನ್ನ ಅದ್ಭುತ ಹಾಡುಗಳನ್ನ ನೀಡುವ ಮೂಲಕ ಅಲ್ಲಿಯ ಜನರ ಮನಸ್ಸು ಕದ್ದಿಯುತ್ತಿದ್ದಾರೆ. ‘ಕಾಂತಾರ’ (Kantara) ಮೂಲಕ ಎಲ್ಲೆಡೆ ಚಿರಪರಿಚಿತರಾಗಿರೋ ಅಜನೀಶ್ ಇದೀಗ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಮಹಾಭಾರತ ಸಿನಿಮಾ ಮಾಡುವ ಕನಸಿನ ಯೋಜನೆ ಬಗ್ಗೆ ರಾಜಮೌಳಿ ಮಾಸ್ಟರ್‌ ಪ್ಲ್ಯಾನ್

    ಇತ್ತೀಚಿನ ಅಜನೀಶ್ ಲೋಕನಾಥ್ ‘ವಿರೂಪಾಕ್ಷ’ (Veerupaksha Film) ಸಿನಿಮಾದಲ್ಲೂ ಒಂದು ಅದ್ಭತ ಹಾಡನ್ನ ಮಾಡಿಕೊಟ್ಟಿದ್ದಾರೆ. ಸಾಯಿ ಧರ್ಮ ತೇಜ್, ಗಾಳಿಪಟ 2 ನಾಯಕಿ ಸಂಯುಕ್ತಾ ಈ ಹಾಡಿಗೆ ಅಭಿನಯಿಸಿದ್ದಾರೆ. ಈಗ ಈ ಹಾಡು ರಿಲೀಸ್ ಕೂಡ ಆಗಿದೆ. ಇದರ ಹೊರತಾಗಿ ಅಜನೀಶ್ ಮೊನ್ನೆ ರಿಲೀಸ್ ಆದ ‘ಸರಿ’ (Sari Film) ಸಿನಿಮಾ ಮೂಲಕ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಕೂಡ ಸಂಗೀತ ಮಾಡಿದ್ದಾರೆ. ಕನ್ನಡದ ‘ದಿಯಾʼ ಹೀರೋ ಪೃಥ್ವಿ ಅಂಬರ್ ನಟಿಸಿರುವ ಸಿನಿಮಾ ಇದಾಗಿದೆ. ‘ದಿಯಾ’ ಚಿತ್ರವನ್ನೇ ಮರಾಠಿ ‘ಸರಿ’ ಟೈಟಲ್‌ನಲ್ಲಿ ಸಿನಿಮಾ ಮಾಡಲಾಗಿದೆ.

    ಅಜನೀಶ್ ಲೋಕನಾಥ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಆದರೆ ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿರಲಿಲ್ಲ. ಈಗ ಅದು ಕೂಡ ಆಗಿದೆ. ಮೇ-5 ರಂದು ಮರಾಠಿ ಭಾಷೆಯ ಸರಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿವೆ ಅನ್ನುವ ಮಾಹಿತಿ ಕೂಡ ಇದೆ. ಮರಾಠಿಗರು ಕೂಡ ಅಜನೀಶ್ ಸಂಗೀತಕ್ಕೆ ಫಿದಾ ಆಗಿದ್ದಾರೆ. ಇನ್ನೂ ಕನ್ನಡದ ಕಾಂತಾರ 2ಗೂ ಅಜನೀಶ್‌ ಮ್ಯೂಸಿಕ್‌ ಕಂಪೋಸ್‌ ಮಾಡಲಿದ್ದಾರೆ.

  • ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಬೆಂಗಳೂರು: ಜಾನಿ ಮೇರಾ ನಾಮ್ ಚಿತ್ರದ ನಂತರ ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ರಚಿತಾ ರಾಮ್ ಮತ್ತು ವಿಜಿ ಒಟ್ಟಾಗಿ ನಟಿಸಿರೋ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

    ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೇರೊಂದು ಲೋಕವನ್ನೇ ಸೃಷ್ಟಿಸಿದ್ದ ಚಿತ್ರ ತಂಡ ಅಲ್ಲಿಯೇ ಐವತ್ತು ದಿನಗಳ ಚಿತ್ರೀಕರಣವನ್ನೂ ಪೂರೈಸಿಕೊಂಡಿತ್ತು. ಅಂದಹಾಗೆ ಈ ಚಿತ್ರ ದುನಿಯಾ ಟಾಕೀಸ್ ಲಾಂಛನದಲ್ಲಿ ದುನಿಯಾ ವಿಜಯ್ ಸ್ವತಃ ನಿರ್ಮಾಣ ಮಾಡುತ್ತಿರೋ ಮೊದಲ ಚಿತ್ರ. ಇದೊಂದು ತೆರನಾಗಿ ಜಾನಿ ಮೇರಾ ನಾಮ್ ಚಿತ್ರದ ಮುಂದುವರೆದ ಭಾಗವಿದ್ದಂತೆ. ಈ ಚಿತ್ರದಲ್ಲಿಯೂ ರಂಗಾಯಣ ರಘು ಮತ್ತು ವಿಜಿ ಕಾಂಬಿನೇಷನ್ ಪ್ರಮುಖ ಆಕರ್ಷಣೆ. ಇನ್ನುಳಿದಂತೆ ರಚಿತಾ ರಾಮ್ ವಿಜಯ್ ಜೋಡಿಯಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ರಚಿತಾ ರಾಮ್ ಈ ಚಿತ್ರದ ಮೂಲಕ ಮೊದಲ ಸಲ ದುನಿಯಾ ವಿಜಿ ಜೊತೆ ನಟಿಸಿದ್ದಾರೆ. ರಚಿತಾ ಇಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಮಿಕ್ಸ್ ಮಾಡಿ ಮಾತಾಡೋ ವೆಸ್ಟರ್ನ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ವಿಶೇಷವಾದ ಹಾಡಿನಲ್ಲಿ ವಿಜಯ್ ದೇಹವನ್ನು ಸಜ್ಜುಗೊಳಿಸಿಕೊಂಡು ನಟಿಸಿದ್ದಾರಂತೆ. ನಿರ್ದೇಶಕ ಪ್ರೀತಂ ಗುಬ್ಬಿ ಕನಸಿನಂತೆ ವಿಶೇಷವಾದ ಸೆಟ್ ಹಾಕಲೆಂದೇ ಒಂದೂವರೆ ಕೋಟಿ ವ್ಯಯಿಸಲಾಗಿತ್ತು. ವಿಜಯ್ ಮತ್ತು ರಂಗಾಯಣ ರಘು ಕಾಂಬಿನೇಷನ್ನು ಈ ಚಿತ್ರದ ಆಕರ್ಷಣೆಗಳಲ್ಲಿ ಮುಖ್ಯ ವಿಚಾರ ಎಂಬುದು ಚಿತ್ರತಂಡದ ಭರವಸೆ. ಇದಲ್ಲದೇ ರಂಗಾಯಣ ರಘು ಮತ್ತು ವಿಜಿ ಎಂಟು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಅಸಲೀ ವಿಶೇಷ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಹಾಡುಗಳು ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ.