Tag: Ajai Rao

  • ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಬೆಂಗಳೂರು: ಇದು ನನ್ನ ವೈಯಕ್ತಿಕ ವಿಚಾರ. ಇದನ್ನ ನಾವು ಪರಿಹಾರ ಮಾಡಿಕೊಳ್ಳುತ್ತೇವೆ ಎಂದು ನಟ ಅಜಯ್‌ ರಾವ್‌ (Ajai Rao) ಹೇಳಿದ್ದಾರೆ.

    ನಾವು ಗೌರವಯುತವಾಗಿ ಪರಿಹಾರ ಮಾಡುತ್ತೇವೆ. ಈಗ ನಾನು ಪ್ರತಿಕ್ರಿಯಿಸಿ ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗುವುದು ಬೇಡ. ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

    ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವ ಪತ್ನಿ ಸ್ವಪ್ನಾ ರಾವ್ (Swapna Rao) ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ (Swapna) ಇಬ್ಬರು 2014 ರ ಡಿಸೆಂಬರ್‌ನಲ್ಲಿ ಪ್ರೇಮ ವಿವಾಹವಾಗಿದ್ದರು. ಇದನ್ನೂ ಓದಿ: ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಅಜಯ್ರಾವ್ಬಾಳಲ್ಲಿ ಬಿರುಗಾಳಿ!

    ಕುಟುಂಬಸ್ಥರ ಸಮ್ಮುಖದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಇದ್ದು ಇಬ್ಬರು ಅನ್ಯೋನ್ಯವಾಗಿದ್ದರು.

    ಇತ್ತೀಚಿಗೆ ದಂಪತಿ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಯುದ್ಧಕಾಂಡ ಸಿನಿಮಾಕ್ಕಾಗಿ ಸಾಕಷ್ಟು ಸಾಲ ಮಾಡಿದ್ದ ಅಜಯ್ ರಾವ್ ಇದರಿಂದ ಕಂಗೆಟ್ಟಿದ್ದರು ಎನ್ನಲಾಗಿದೆ.

    2003 ರಲ್ಲಿ ಬಿಡುಗಡೆಯಾದ ಎಕ್ಸ್‌ಕ್ಯೂಸ್‌ಮೀ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಅಜಯ್ ರಾವ್, ಇದೇ ವರ್ಷ ಬಿಡುಗಡೆ ಆದ ಯುದ್ಧಕಾಂಡ 2 ಸಿನಿಮಾನಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಸಹ ಮಾಡಿದ್ದರು.

  • ಅಜಯ್ ರಾವ್ ನಟನೆಯ ‘ಸರಳ ಸುಬ್ಬರಾವ್’ ಚಿತ್ರದ ಸಾಂಗ್ ರಿಲೀಸ್

    ಅಜಯ್ ರಾವ್ ನಟನೆಯ ‘ಸರಳ ಸುಬ್ಬರಾವ್’ ಚಿತ್ರದ ಸಾಂಗ್ ರಿಲೀಸ್

    ‘ಯುದ್ಧಕಾಂಡ’ ಚಿತ್ರದ ಬಳಿಕ ಅಜಯ್ ರಾವ್ (Ajai Rao) ನಟನೆಯ ‘ಸರಳ ಸುಬ್ಬರಾವ್’ (Sarala Subbarao) ಸಿನಿಮಾದ ‘ರಂಗೋಲಿ’ ಹಾಡು ಬಿಡುಗಡೆ ಆಗಿದೆ. ನಾಯಕಿ ಮಿಶಾ ಜೊತೆ ರೆಟ್ರೋ ಸ್ಟೈಲಿನಲ್ಲಿ ‘ಕೃಷ್ಣ’ ಅಜಯ್ ರಾವ್ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ರೆಡ್ಡಿ ಮಗನ ಜೊತೆ ಶ್ರೀಲೀಲಾ ಡ್ಯುಯೆಟ್- ‘ಜೂನಿಯರ್’ ಚಿತ್ರದ ಸಾಂಗ್ ಔಟ್

    ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿರುವ ‘ಸರಳ ಸುಬ್ಬರಾವ್’ ಚಿತ್ರದ ಸಾಂಗ್ ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡನ್ನು ಕವಿರಾಜ್ ಅವರು ಬರೆದಿದ್ದು, ಸಂಚಿತ್ ಹೆಗ್ಡೆ ಹಾಡಿದ್ದಾರೆ. ಈ ಸಾಂಗ್ ಯೂಟ್ಯೂಬ್‌ನಲ್ಲಿ ಭರ್ಜರಿ ವಿವ್ಸ್ ಆಗ್ತಿದೆ.

    ‘ಸರಳ ಸುಬ್ಬರಾವ್’ ಎಂಬುದು ಚಿತ್ರದ ನಾಯಕ, ನಾಯಕಿಯ ಹೆಸರಾಗಿದೆ. ಇದು 1971ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ರೆಟ್ರೊ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಮಂಜು ಸ್ವರಾಜ್ ಮಾತನಾಡಿ, ಅಜಯ್ ರಾವ್ ಅವರ ಅಭಿನಯಕ್ಕೆ ಅವರೇ ಸಾಟಿ. ಪಂಜಾಬಿ ಹುಡುಗಿ ಮಿಶಾ ಕನ್ನಡ ಅರ್ಥ ಮಾಡಿಕೊಂಡು ಅಭಿನಯಿಸಿದ್ದು, ನಿಜಕ್ಕೂ ಖುಷಿಯ ವಿಚಾರ. ರಂಗಾಯಣ ರಘು, ವೀಣಾ ಸುಂದರ್, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ನಮ್ಮ ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿದೆ ಎಂದು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಗೃಹಪ್ರವೇಶದ ಸಂಭ್ರಮದಲ್ಲಿ ‘ಪುಷ್ಪ-2’ ನಟಿ ಅನಸೂಯ

    ಅಜಯ್ ರಾವ್ ಮಾತನಾಡಿ, ಈ ಚಿತ್ರದಲ್ಲಿ ನಟಿಸಿರುವುದು ನನ್ನ ವೈಯಕ್ತಿಕ ಹಾಗೂ ವೃತ್ತಿಜೀವನದ ಹೆಮ್ಮೆ. ಅಂತಹ ಒಂದು ಸುಂದರ ಸಾಂಸಾರಿಕ ಚಿತ್ರ ಸರಳ ಸುಬ್ಬರಾವ್. ಈ ಚಿತ್ರ ಭಾರತೀಯ ಚಿತ್ರರಂಗದ ಸುವರ್ಣ ಯುಗಕ್ಕೆ ಟ್ರಿಬ್ಯುಟ್ ಎಂದರು ತಪ್ಪಾಗಲಾರದು. ನಾನು ಚಿಕ್ಕವಯಸ್ಸಿನಲ್ಲಿ ಸೂಪರ್ ಮ್ಯಾನ್ ಮುಂತಾದ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ನಾನೇ ಸೂಪರ್ ಹೀರೋ ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲೂ ನಾನು ಸೂಪರ್ ಹೀರೊ. ಏಕೆಂದರೆ ಇದು 50 ವರ್ಷಗಳ ಹಿಂದೆ ನಡೆಯುವ ಕಥೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯ ಉಡುಗೆಗಳನ್ನು ಹಾಕಿದಾಗ ನಾನು ನನ್ನ ಪಾತ್ರದಲ್ಲಿ ವರನಟ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರನ್ನು ನೋಡಿದ್ದೇನೆ. ಎಷ್ಟು ಜನಕ್ಕೆ ಸಿಗುತ್ತದೆ ಇಂತಹ ಅವಕಾಶ. ಇಂತಹ ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದಗಳು ಎಂದಿದ್ದಾರೆ.

    ಮೊದಲ ಬಾರಿಗೆ ಇಂತಹ ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಿದ್ದು, ಬಹಳ ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಮಿಶಾ ನಾರಂಗ್.

    ಮಂಜು ಸ್ವರಾಜ್ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಅಜಯ್ ರಾವ್ ಅವರ ಸಹಕಾರ ಅಪಾರ. ಇಡೀ ಚಿತ್ರತಂಡ ನನಗೆ ಪ್ರೋತ್ಸಾಹ ನೀಡಿದ್ದಾರೆ. ಅದರಿಂದ ಒಂದೊಳ್ಳೆ ಕೌಟುಂಬಿಕ ಚಿತ್ರ ನಿಮ್ಮ ಮುಂದೆ ಬರುತ್ತಿದೆ ಎಂದು ನಿರ್ಮಾಪಕ ಲೋಹಿತ್ ನಂಜುಂಡಯ್ಯ ತಿಳಿಸಿದರು.

    ಒಟ್ನಲ್ಲಿ ‘ಯುದ್ಧಕಾಂಡ’ ಸಿನಿಮಾ ಬಳಿಕ ‘ಸರಳ ಸುಬ್ಬರಾವ್’ ಚಿತ್ರದ ಟೈಟಲ್‌ನಿಂದ ಮತ್ತು ಹಾಡಿನಿಂದ ಗಮನ ಸೆಳೆಯುತ್ತಿದೆ. ರೆಟ್ರೋ ಗೆಟಪ್‌ನಲ್ಲಿ ಅಜಯ್ ಅವರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ ಸಲ್ಲಿಕೆ – ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ ರಚಿತಾ ರಾಮ್

    ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ ಸಲ್ಲಿಕೆ – ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ ರಚಿತಾ ರಾಮ್

    ರಾಮನಗರ: ಲವ್ ಯು ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತ ಮಂಗಳವಾರ ಚಿತ್ರದ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

    ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ: ಅಜಯ್ ರಾವ್ ರಾಮನಗರ ಜಿಲ್ಲೆ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ಎಫ್‍ಐಆರ್ ನಲ್ಲಿ ಇತರರೆಂದು ನಮೂದಿಸಿದ ಹಿನ್ನೆಲೆ ನೀರಿಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆಂದು ತಿಳಿದು ಬಂದಿದೆ. ಇದನ್ನೂ ಓದಿ: ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

    ಹೇಳಿಕೆ ದಾಖಲಿಸಿದ ರಚಿತಾ ರಾಮ್:
    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಯ ಡಿವೈಎಸ್‍ಪಿ ಮೋಹನ್ ಕುಮಾರ್ ಮುಂದೆ ಹಾಜರಗಿ ಹೇಳಿಕೆ ದಾಖಲಿಸಿದ್ದಾರೆ. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ ರಾಮ್, ನಾನು ಸ್ಥಳದಲ್ಲಿ ಇರಲಿಲ್ಲ, ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆ. ಹಾಗಾಗಿ ಇಷ್ಟೇ ವಿಚಾರವನ್ನ ತಿಳಿಸಿದ್ದೇನೆ. ನಾನು ಸ್ಥಳದಲ್ಲಿ ಇರಲಿಲ್ಲ, ಅದನ್ನ ಹೇಳಲು ಬಂದಿದ್ದೇನೆ. ಆ ನಟನ ಸಾವು ಹೇಗಾಯ್ತು? ಅಲ್ಲಿ ಏನಾಯ್ತು ಅಂತ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಮಗಾರಿ ವೀಡಿಯೋ ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ: ಪ್ರತಾಪ್ ಸಿಂಹ ತಿರುಗೇಟು

    ನಾನು ಹಳೆ ಶೆಡೂಲ್ ನಲ್ಲಿ ಇದ್ದೇ, ಆದರೆ ಇದು ಹೊಸ ಶೆಡ್ಯೂಲ್ ಶೂಟಿಂಗ್ ನಡೆದಿದೆ. ಫೈಟಿಂಗ್ ಸೀನ್ ನಲ್ಲಿ ನಟಿಗೆ ಕೆಲಸ ಇರಲ್ಲ. ಹಾಗಾಗಿ ಯಾವ ರೀತಿಯ ಶೂಟ್ ಕಂಪೋಸ್ ಮಾಡಿದ್ದರೂ ಎಂಬ ಮಾಹಿತಿ ಇಲ್ಲ. ಉದ್ದೇಶಪೂರ್ವಕವಾಗಿ ಯಾವುದೇ ಘಟನೆ ನಡೆದಿಲ್ಲ. ಆದರೆ ಯಾವುದೇ ದೃಶ್ಯಗಳಿದ್ದರೂ ಮುಂಜಾಗ್ರತ ಕ್ರಮವಹಿಸಬೇಕು. ಇನ್ನೂ ಅಜಯ್ ರಾವ್ ಸ್ಥಳದಲ್ಲಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಇವತ್ತಿಗೆ ನನ್ನ ವಿಚಾರಣೆ ಮುಗಿದಿದೆ, ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದು ಹೇಳಿದರು.

  • ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

    ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

    – ಹೈಟೆನ್ಷನ್ ವೈರ್ ಇರೋದು ಫೈಟರ್ ಮಾಸ್ಟರ್​​​ಗೆ ಗೊತ್ತಿರಬೇಕಿತ್ತು

    ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು. ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವಾಗ ಫೈಟ್ ಮಾಸ್ಟರ್ ವಿನೋದ್ ಗಮನಿಸಬೇಕಿತ್ತು. ಈ ಮೊದಲು ಅಲ್ಲಿ ಹೈಟೆನ್ಷನ್ ವೈರ್ ಇದ್ದಿದ್ದರಿಂದ ನಾನು ಆ ದೃಶ್ಯ ಮಾಡಲ್ಲ ಅಂತ ಹೇಳಿದ್ದೆ ಎಂದು ಲವ್ ಯು ರಚ್ಚು ಸಿನಿಮಾದ ನಾಯಕ ನಟ ಅಜಯ್ ರಾವ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಜಯ್ ರಾವ್, ಅಲ್ಲಿ ನನ್ನ ಸೀನ್ ಇರದ ಕಾರಣ ದೂರದಲ್ಲಿ ಕುಳಿತಿದ್ದೆ. ಇದ್ದಕ್ಕಿದ್ದಂತೆ ಶಾರ್ಟ್ ಸಕ್ರ್ಯೂಟ್ ರೀತಿಯಲ್ಲಿ ಸೌಂಡ್ ಕೇಳಿಸಿದಾಗ, ನನ್ನ ಹುಡುಗರು ಬಂದು ವಿಷಯ ಹೇಳಿದರು. ಕಳೆದ ಐದು ದಿನಗಳಿಂದ ಈಗಲ್ ಟನ್ ಬಳಿಯಲ್ಲಿ ಸಾಹಸ ಚಿತ್ರೀಕರಣ ನಡೆಯುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಚಿತ್ರೀಕರಣ ನಡೆಸೋದು ಕಷ್ಟದ ಕೆಲಸ. ನಮ್ಮ ಟೀಂ ನಿರ್ಮಿಸಿದ ವಾಟರ್ ಟ್ಯಾಂಕ್ ಬಳಿ ಫೈಟ್ ಸೀನ್ ಇತ್ತು. ಆದ್ರೆ ನಾನು ಬೇಡ ಅಂತ ಹೇಳಿದ್ದಕ್ಕೆ ಅಜಯ್ ಎಲ್ಲದಕ್ಕೂ ಹಿಂದೇಟು ಹಾಕ್ತಾರೆ ಅನ್ನೋ ಮಾತುಗಳು ಕೇಳಿ ಬಂದವು ಎಂದು ಬೇಸರದ ಮಾತುಗಳನ್ನಾಡಿದರು.

    ಒಬ್ಬ ಹುಡುಗ ಹೈಟೆನ್ಷನ್ ವೈರ್ ಬಳಿಯಲ್ಲಿದ್ದನಾ ಅಥವಾ ರೂಪ್ ಎಳೆಯುತ್ತಿದ್ದನಾ ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಮತ್ತೋರ್ವ ಹುಡುಗ ಬಿದ್ದು ಗಾಯಗೊಂಡಿದ್ದು ಮಾತ್ರ ಕಾಣಿಸಿತು. ಸದ್ಯ ಆ ಹುಡುಗ ಹುಷಾರಾಗಿದ್ದಾನೆ. ಅಷ್ಟರಲ್ಲಿ ಫೈಟರ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈಗಲೂ ಕೂಡ ನನ್ನ ಕೈಕಾಲು ನಡಗುತ್ತಿದೆ. ಇದಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಫೈಟ್ ಮಾಸ್ಟರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನನ್ನಿಂದ ಏನಾದ್ರೂ ಸಹಾಯ ಬೇಕಾದ್ರೆ ಬರುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದೇನೆ ಎಂದು ತಿಳಿಸಿದರು.

    ಏನಿದು ಘಟನೆ?:
    ಬಿಡದಿಯ ಈಗಲ್‍ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣವಿದೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಹೈಟೆನ್ಷನ್ ವೈರ್ ತಗುಲಿ 35 ವರ್ಷದ ವಿವೇಕ್ ಎಂಬವವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

  • ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು

    – ಅಜಯ್ ರಾವ್, ರಚಿತಾ ರಾಮ್ ಅಭಿನಯದ ಚಿತ್ರ

    ಬೆಂಗಳೂರು: ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದ್ದು, ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವನ್ನಪ್ಪಿದ್ದಾರೆ.

    35 ವರ್ಷದ ವಿವೇಕ್ ಮೃತ ಫೈಟರ್. ಬಿಡದಿಯ ಈಗಲ್‍ಟನ್ ರೆಸಾರ್ಟ್ ಬಳಿಯಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರಕ್ಕೆ ಗುರುದೇಶಪಾಂಡೆ ನಿರ್ಮಾಣವಿದೆ.

    ಕಳೆದ ಐದು ದಿನಗಳಿಂದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ಮುಂಜಾಗ್ರತ ಕ್ರಮಗಳ ತೆಗೆದುಕೊಂಡಿದ್ರಾ ಅಥವಾ ಇಲ್ಲವಾ ಎಂಬುದರ ಮಾಹಿತಿ ಲಭ್ಯವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಫೈಟ್ ಮಾಸ್ಟರ್ ವಿನೋದ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಲಕ್ಷ್ಮಿಯಂತೆ ಎಂಟ್ರಿ ಕೊಟ್ಟ ಅಜಯ್ ರಾವ್ ಪುತ್ರಿ: ವಿಡಿಯೋ ನೋಡಿ

    ಲಕ್ಷ್ಮಿಯಂತೆ ಎಂಟ್ರಿ ಕೊಟ್ಟ ಅಜಯ್ ರಾವ್ ಪುತ್ರಿ: ವಿಡಿಯೋ ನೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ನಟ ಅಜಯ್ ರಾವ್ ಅವರ ಪುತ್ರಿ ಚರಿಷ್ಮಾ ಲಕ್ಷ್ಮಿಯಂತೆ ಮನೆಗೆ ಎಂಟ್ರಿ ಕೊಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ.

    ಅಜಯ್ ಅವರ ಪತ್ನಿ ಸ್ವಪ್ನ ರಾವ್ ಅವರು ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮಗಳಿಗೆ ಸಾಂಪ್ರದಾಯಿಕ ಉಡುಪು ಹಾಕಿದ್ದಾರೆ. ಅಲ್ಲದೆ ಬ್ಯಾಕ್‍ಗ್ರೌಂಡ್‍ನಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಹಾಕಿ ಚರಿಷ್ಮಾ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದಲ್ಲಿ ಯಶ್ ಮಗಳ ನಗುವಿನ ಮೋಡಿ

    ಸ್ವಪ್ನ ಅವರು ಚರಿಷ್ಮಾ ವಿಡಿಯೋ ಜೊತೆ ಆಕೆಯ ಫೋಟೋ ಹಾಗೂ ಫ್ಯಾಮಿಲಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, “ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಸ್ವಪ್ನ ರಾವ್ ಅವರು ತಮ್ಮ ಮಗಳು ಚರಿಷ್ಮಾಗೆ ಬಸವಣ್ಣನಂತೆ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋವನ್ನು ಕೂಡ ಅವರು ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ನಮ್ಮನೆ ಪುಟ್ಟ ಬಸವಣ್ಣ” ಎಂದು ಬರೆದುಕೊಂಡಿದ್ದರು. ಸ್ವಪ್ನ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿ ಕ್ಯೂಟ್ ಪಿಕ್ ಎಂದು ಕಮೆಂಟ್ ಮಾಡಿದ್ದರು.

     

    View this post on Instagram

     

    Nammane putta Basavanna????

    A post shared by Sapna Rao (@sapnajairao) on

    ಅಜಯ್ ಅವರು ಡಿಸೆಂಬರ್ 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

  • ಪತ್ನಿಗೆ ವಿಶ್ ಮಾಡಿ ನಟ ಅಜಯ್‍ರಿಂದ ಮಗಳ ಫೋಟೋ ರಿವೀಲ್

    ಪತ್ನಿಗೆ ವಿಶ್ ಮಾಡಿ ನಟ ಅಜಯ್‍ರಿಂದ ಮಗಳ ಫೋಟೋ ರಿವೀಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ಮಂಗಳವಾರ ಅಜಯ್ ಅವರ ಪತ್ನಿ ಸ್ವಪ್ನಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗಾಗಿ ನಟ ಅಜಯ್ ತಮ್ಮ ಫೇಸ್‍ಬುಕ್‍ನಲ್ಲಿ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಪತ್ನಿ ಜೊತೆ ಇರುವ ಮಗಳ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

    ಅಜಯ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಹುಟ್ಟುಹಬ್ಬದ ಶುಭಾಶಯಗಳು ಸ್ವಪ್ನಾ ಮುಂಬರುವ ವರ್ಷದಲ್ಲಿ ನಿನಗೆ ಖುಷಿ ಸಿಗಲಿ. ಈ ದಿನದಂದು ನಾನು ನನ್ನ ಮಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಿದ್ದೇನೆ” ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

    ಅಜಯ್ ಮಗಳ ಫೋಟೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಜಯ್ ಅವರ ಪತ್ನಿ ಸ್ವಪ್ನಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕಮೆಂಟ್ ಮಾಡಿದ್ದಾರೆ.

    ಅಜಯ್ ಡಿ. 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು. ಅಜಯ್ ರಾವ್ ಅವರ ಪತ್ನಿ ಸ್ವಪ್ನಾ ರಾವ್ ನ. 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಅಜಯ್ ರಾವ್ ಅವರು ತಮ್ಮ ಪತ್ನಿ ಸ್ವಪ್ನಾ ಹಾಗೂ ಪುಟ್ಟ ಕಂದಮ್ಮನ ಜೊತೆ ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆಗಿತ್ತು.

    ಅಜಯ್ ರಾವ್ ಡಿ. 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನಾ ಅವರು ಎಂಜಿನಿಯರ್ ಪದವಿ ಪಡೆದಿದ್ದು, ಅಜಯ್ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್. ಆಡಂಭರ ಇಲ್ಲದೆ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ತಾಯಿಗೆ ತಕ್ಕ ಮಗ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್

    ತಾಯಿಗೆ ತಕ್ಕ ಮಗ ಲಿರಿಕಲ್ ಸಾಂಗ್ ವೀಡಿಯೋ ರಿಲೀಸ್

    ಬೆಂಗಳೂರು: ಚಿತ್ರದ ಫಸ್ಟ್ ಲುಕ್ ಮೂಲಕವೇ ಭರವಸೆ ಮೂಡಿಸಿದ್ದ ನಟ ಅಜಯ್ ರಾವ್ ಅಭಿನಯದ `ತಾಯಿಗೆ ತಕ್ಕ ಮಗ’ ಚಿತ್ರ ಮೊದಲ ಹಾಡಿನ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.

    `ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂದು ಸಾಗುವ ಹಾಡು ಸಾಹಿತಿ ಜಯಂತ್ ಕಾಯ್ಕಿಣಿ ಲೇಖನದಲ್ಲಿ ಮೂಡಿ ಬಂದಿದ್ದು, ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಹಾಗೂ ರವೀಂದ್ರನಾಥ್ ಅವರು ಧ್ವನಿ ನೀಡಿದ್ದು ಕೇಳುಗರಲ್ಲಿ ಹೊಸ ಭಾವನೆಯನ್ನು ಮೂಡಿಸುತ್ತಿದೆ.

    ಅಜಯ್ ರಾವ್‍ರ 25 ಸಿನಿಮಾವಾಗಿ ತೆರೆಗೆ ಬರುತ್ತಿರುವ ತಾಯಿಗೆ ತಕ್ಕ ಮಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರ ಶಶಾಂಕ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಜುದಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಅಜಯ್‍ರಾವ್ ಹಾಗೂ ನಾಯಕಿ ಆಶಿಕಾ ರಂಗನಾಥ್ ನಡುವಿನ ರೊಮ್ಯಾಟಿಂಕ್ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿರುವ ಈ ಹಾಡು ಕುತೂಹಲ ಮೂಡಿಸುತ್ತಿದೆ. ಈ ಹಿಂದಿನ ಚಿತ್ರದಲ್ಲಿ ಅಜಯ್ ರಾವ್ ಲುಕ್ ಬದಲಾಗಿದ್ದರೂ ಹಾಡಿನಲ್ಲಿ ಅದೇ ಲವ್ ಬಾಯ್ ಇಮೇಜ್ ನೋಡುಗರಿಗೆ ಕಾಣಸಿಗುತ್ತಿದೆ.

    ಪ್ರೇಕ್ಷಕರ ನಡುವೆ ಲವ್ವರ್ ಬಾಯ್ ಆಗಿಯೇ ನೆಲೆ ನಿಂತ ನಟ ಅಜಯ್ ರಾವ್ ಏಕಾಏಕಿ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಚಿತ್ರದ ವಿಶೇಷವಾಗಿ ಎಕ್ಸ್ ಕ್ಯೂಸ್ ಮಿ ಚಿತ್ರದ ಬಳಿಕ ಸುಮಲತಾ ಅಂಬರೀಶ್ ಮತ್ತೆ ಅಜಯ್ ರಾವ್‍ಗೆ ತಾಯಿ ತೆರೆಮೇಲೆ ಬರುತ್ತಿರುವುದು ಎಲ್ಲರಲ್ಲೂ ಮತ್ತಷ್ಟು ಕುತೂಹಲ ಮೂಡಿಸಿದೆ. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಬಳಿಕ ಮತ್ತೆ ಶಂಶಾಕ್, ಅಜಯ್ ರಾವ್ ಜೋಡಿ ಒಂದಾಗಿದ್ದು ಅಕ್ಟೋಬರ್ ವೇಳೆಗೆ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv