Tag: AIUDF

  • Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

    Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

    ಗುವಾಹಟಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧ (Pahalgam Terror Attack) ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು (Pakistan) ಸಮರ್ಥಿಸಿಕೊಂಡಿದ್ದ ಎಐಯುಡಿಎಫ್‌ ಶಾಸಕ ಅಮಿನುಲ್‌ ಇಸ್ಲಾಂ ಅವರನ್ನ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

    ನಾಗಾಂವ್ ಜಿಲ್ಲೆಯ ನಿವಾಸದಲ್ಲಿ ಶಾಸಕರನ್ನ ಬಂಧಿಸಲಾಗಿದೆ. ಪಕ್ಷದ ಶಾಸಕರ ಹೇಳಿಕೆ ಕುರಿತು ರಾಜ್ಯದ ವಿರೋಧಪಕ್ಷವಾಗಿರುವ ಎಐಯುಡಿಎಫ್ (AIUDF) ಅಂತರ ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

    ಪಾಕಿಸ್ತಾನ ಸಮರ್ಥಿಸಿಕೊಂಡಿರುವ ಶಾಸಕರ ವಿಡಿಯೋ ನೋಡಿದ್ದೇವೆ. ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಶಾಸಕರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ

  • ʻಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆʼ ರದ್ದು – ಸಂಪುಟ ನಿರ್ಧಾರಕ್ಕೆ ಕಾಂಗ್ರೆಸ್‌ ಆಕ್ಷೇಪ; ಸಭಾತ್ಯಾಗ

    ʻಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆʼ ರದ್ದು – ಸಂಪುಟ ನಿರ್ಧಾರಕ್ಕೆ ಕಾಂಗ್ರೆಸ್‌ ಆಕ್ಷೇಪ; ಸಭಾತ್ಯಾಗ

    – ಬಾಲ್ಯ ವಿವಾಹ ತಡೆಯೋ ನಿಟ್ಟಿನಲ್ಲಿ ಕಾಯ್ದೆ ರದ್ದು ಎಂದು ಅಸ್ಸಾಂ ಸಿಎಂ ಸ್ಪಷ್ಟನೆ
    – ನಾನು ಬದುಕಿರುವವರೆಗೂ ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ – ಹಿಮಂತ ಬಿಸ್ವಾ ಶರ್ಮಾ

    ದಿಸ್ಪುರ: ಉತ್ತರಾಖಂಡ (Uttarakhand) ಸರ್ಕಾರ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೊಳಿಸಿದ ಬೆನ್ನಲ್ಲೇ ಅಸ್ಸಾಂ (Assam) ಕ್ಯಾಬಿನೆಟ್ ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ 1935’ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ವಿಚಾರವಾಗಿ ಸದನದಲ್ಲಿಂದು ಚರ್ಚೆ ನಡೆಯಿತು. ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಐಯುಡಿಎಫ್ ತೀವ್ರವಾಗಿ ಖಂಡಿಸಿ, ಸಭಾತ್ಯಾಗ ಮಾಡಿದವು.

    ಸೋಮವಾರ ಅಸ್ಸಾಂ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ವ್ಯಾಪಕ ಟೀಕೆಯ ನಂತರ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕಾಯ್ದೆ ರದ್ದುಪಡಿಸಿದ್ದಕ್ಕೆ ಸ್ಪಷ್ಟನೆ ನೀಡಿದರು. ಬಾಲ್ಯವಿವಾಹ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ‌ʻಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆʼಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ನಾನು ಬದುಕಿರುವವರೆಗೂ ಅಸ್ಸಾಂನಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ದಿಟ್ಟ ಉತ್ತರ ನೀಡಿದರು. ಇದನ್ನೂ ಓದಿ: ಹಿಂದೂಗಳಿಗೆ ಮತ್ತೆ ಜಯ- ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

    ಈ ನಡುವೆಯೂ ಸರ್ಕಾರದ ನಿರ್ಧಾರ ಖಂಡಿಸಿದ ಕಾಂಗ್ರೆಸ್‌, ಮೂಲ ಮಸೂದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸದೇ ತಿದ್ದುಪಡಿಗಳನ್ನು ಮಾಡಬಹುದಿತ್ತು ಎಂದು ಆಗ್ರಹಿಸಿತು. ನಂತರ ಸರ್ಕಾರದ ನಿರ್ಧಾರ ವಿರೋಧಿಸಿ ಸಭಾತ್ಯಾಗ ಮಾಡಿತು. ಎಐಯುಡಿಎಫ್ ಶಾಸಕರೂ ಸಹ ಅಸ್ಸಾಂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದ್ಯಾವುದನ್ನೂ ಪರಿಗಣಿಸದೇ ಸ್ಪಿಕರ್‌ ಸದನದ ಪಟ್ಟಿಮಾಡಿದ ವ್ಯವಹಾರವನ್ನು ಮುಂದುವರಿಸಿದ್ದರಿಂದ ಎಐಯುಡಿಎಫ್‌ ಶಾಸಕರೂ ಸಭಾತ್ಯಾಗ ಮಾಡಿದರು. ವಿರೋಧ ಪಕ್ಷದ ಸಿಪಿಐ(ಎಂ) ಶಾಸಕ ಮತ್ತು ಏಕೈಕ ಪಕ್ಷೇತರ ಶಾಸಕರು ಸದನದಲ್ಲಿ ಇದ್ದರು. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್‌ಗೆ ಶಾಕ್- ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

    ಕಳೆದ ಶುಕ್ರವಾರ ಅಸ್ಸಾಂ ಸಂಪುಟ ಅಸ್ಸಾಂ ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ – 1935’ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ಈಗ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿಯೇ ಬರುತ್ತವೆ. ಇದು ಯುಸಿಸಿ ಸಾಧಿಸುವತ್ತ ಒಂದು ಹೆಜ್ಜೆ ಎಂದು ಸಂಪುಟ ಸಚಿವರು ಬಣ್ಣಿಸಿದ್ದರು. ಇದನ್ನೂ ಓದಿ: ಯುಪಿಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ; ಅಖಿಲೇಶ್‌ ಯಾದವ್‌ ಜೊತೆ ರಾಹುಲ್‌ ಗಾಂಧಿ ಸೆಲ್ಫಿ

  • ಭೂಮಿ ಫಲವತ್ತಾಗಿದ್ರೆ ಉತ್ತಮ ಬೆಳೆ – ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ

    ಭೂಮಿ ಫಲವತ್ತಾಗಿದ್ರೆ ಉತ್ತಮ ಬೆಳೆ – ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ

    ನವದೆಹಲಿ: ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಸಲಹೆ ನೀಡಿ ವಿವಾದಕ್ಕೀಡಾಗಿದ್ದಾರೆ.

    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಸ್ಲಿಂ (Muslims) ಪುರುಷರು 20 ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದ್ರೆ ಹಿಂದೂಗಳು ಮದುವೆಗೆ ಮುನ್ನ ಒಬ್ಬೊಬ್ಬರು ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ, ಜೀವನವನ್ನು ಆನಂದಿಸಿ ಹಣ ಉಳಿಸುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

    ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅಜ್ಮಲ್, 40 ವರ್ಷ ವಯಸ್ಸಿನ ನಂತರ ಹಿಂದೂಗಳು ಪೋಷಕರ ಒತ್ತಡದಲ್ಲಿ ಮದುವೆಯಾಗುತ್ತಾರೆ. ಹಾಗಾದ್ರೆ ಅವರು 40ರ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಫಲವತ್ತಾದ ಭೂಮಿಯಲ್ಲಿ ಬಿತ್ತನೆ ಮಾಡಿದ್ರೆ ಮಾತ್ರ ಉತ್ತಮ ಬೆಳೆಗಳನ್ನು ಬೆಳೆಯಲು ಸಾಧ್ಯ. ಆದ್ದರಿಂದ ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು. 18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಡಿ.6 ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇವೆ – ಬೊಮ್ಮಾಯಿಗೆ ʼಮಹಾʼ ಸಚಿವರ ಸವಾಲು

    ಇದೇ ವೇಳೆ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು (Shraddha Walker Murder Case) ಉಲ್ಲೇಖಿಸಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ಲವ್ ಜಿಹಾದ್ (Love Jihad) ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅಸ್ಸಾಂ ಸಿಎಂ ದೇಶದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು. ಆದ್ರೆ ಅವರನ್ನ ತಡೆಯೋರು ಯಾರು. ನೀವು ಬೇಕಿದ್ರೆ ನಾಲ್ಕೈದು ಲವ್ ಜಿಹಾದ್ ನಡೆಸಿ, ನಮ್ಮ ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ, ನಾವು ಅದನ್ನ ಸ್ವಾಗತ ಮಾಡುತ್ತೇವೆಯೇ ಹೊರತು ಜಗಳವಾಡುವುದಿಲ್ಲ. ಹಾಗೆ ಮಾಡಿದ್ರೆ ನಿಮ್ಮಲ್ಲೂ ಎಷ್ಟು ಶಕ್ತಿಯಿದೆ ಎಂದು ನೋಡಬಹುದು ಎಂದು ಲೇವಡಿ ಮಾಡಿದ್ದಾರೆ.

    ಇತ್ತೀಚೆಗೆ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಲವ್ ಜಿಹಾದ್ ಅಂಶ ಉಲ್ಲೇಖಿಸಿದ್ದ ಅಸ್ಸಾಂ ಸಿಎಂ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • BJP ಸಂಸದರ ಪತ್ನಿಯರು ಅಡುಗೆ ಮನೆ ಹೇಗೆ ನಿಭಾಯಿಸ್ತಾರೆ: AIUDF ಮುಖ್ಯಸ್ಥ ಪ್ರಶ್ನೆ

    BJP ಸಂಸದರ ಪತ್ನಿಯರು ಅಡುಗೆ ಮನೆ ಹೇಗೆ ನಿಭಾಯಿಸ್ತಾರೆ: AIUDF ಮುಖ್ಯಸ್ಥ ಪ್ರಶ್ನೆ

    ನವದೆಹಲಿ: ಆಹಾರ ಪದಾರ್ಥ, ಇಂಧನ ಹಾಗೂ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯಿಂದಾಗಿ ಪ್ರತಿ ಪಕ್ಷಗಳು ಬಿಜೆಪಿ ವಿರುದ್ಧ ಕಿಡಿಕಾರಿವೆ. ಈ ನಡುವೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಸಹ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿ ಕಾರಿದ್ದಾರೆ. ಭಾರತದ ಹಣ, ಹಣಕಾಸು ಸಚಿವರ ಬಳಿಯಿದೆ. ಒಬ್ಬ ವ್ಯಕ್ತಿಯು ಖರಿದಿಸಲು ಎಷ್ಟು ಖರ್ಚು ಮಾಡಬೇಕು ಎಂದು ಅವರು ಹೇಗೆ ತಿಳಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗಿನ ಉದ್ವಿಗ್ನದ ಮಧ್ಯೆ ತೈವಾನ್ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ

    ಬೆಲೆ ಏರಿಕೆ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ. ಯಾವ ಸಚಿವರಿಗೂ ಹಣದುಬ್ಬರವಿಲ್ಲ. ಬಿಜೆಪಿ ಸಂಸದರು ತಮ್ಮ ಪತ್ನಿಯರಿಗೆ ಅಡುಗೆ ಮನೆ ಹೇಗೆ ನಡೆಸುತ್ತಿದ್ದಾರೆ ಎಂದು ಕೇಳಬೇಕು. 2024 ರಲ್ಲಿ ಹಣದುಬ್ಬರವು ಅವರ ಸರ್ಕಾರವನ್ನೇ ತಿನ್ನುತ್ತದೆ. ಈಗಾಗಲೇ ಇದರ ಬೆಳವಣಿಗೆಯನ್ನು ಗಮನಿಸುತ್ತಿರಬೇಕು ಎಂದು ಎಐಯುಡಿಎಫ್ ಮುಖ್ಯಸ್ಥರು ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವಾಸುಕಿ ವೈಭವ್ ಎಂಟ್ರಿ: ದೊಡ್ಮನೆಯಲ್ಲಿ ‘ಏನ್ ಕಿತ್ತು ದಬ್ಬಾಕ್ತಿಯೋ’ ಎಂದ ಗಾಯಕ

    ರಾಷ್ಟ್ರೀಯ ಕಾಂಗ್ರೆಸ್ ಬೆಲೆ ಏರಿಕೆ, ಜಿಎಸ್‌ಟಿ ನೀತಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]