Tag: aishwaryaa

  • ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಹೈದರಾಬಾದ್: ಕಾಲಿವುಡ್ ನಟ ಧನುಷ್ ಹಾಗೂ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಂತಾಗಿದೆ. ಆದರೆ ಈ ಜೋಡಿ ಹೈದರಾಬಾದ್‍ನ ಐಷಾರಾಮಿ ಹೋಟೆಲ್‍ವೊಂದರಲ್ಲಿ ಇಬ್ಬರು ತಂಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

    ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಐಷಾರಾಮಿ ಹೋಟೆಲ್‍ವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ಇದ್ದಾರೆ. ಹಾಗಂದ ಮಾತ್ರಕ್ಕೆ ಇಬ್ಬರು ಒಟ್ಟಿಗೆ ಇದ್ದಾರೆ ಎಂದೇನಲ್ಲ. ವೃತ್ತಿ ಕಾರಣದಿಂದಾಗಿ ಹೈದಾರಾಬಾದ್‍ನಲ್ಲಿ ಬೀಡುಬಿಟ್ಟಿರುವ ಈ ಮಾಜಿ ದಂಪತಿ ಒಂದೇ ಹೋಟೆಲ್‍ನಲ್ಲಿ ಇದ್ದಾರೆ ಅಷ್ಟೇ. ಸದ್ಯ ಇಂಥದ್ದೊಂದು ಮಾಹಿತಿ ಸಿಕ್ಕಿದೆ. ಅಧಿಕೃತವಾಗಿ ವಿಚ್ಛೇದನ ಘೋಷಣೆ ಮಾಡಿರುವ ಇಬ್ಬರು, ಅದನ್ನೇ ಯೋಚಿಸುತ್ತ ಕುಳಿತಿಲ್ಲ. ಬದಲಾಗಿ, ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರದಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳೋಕೆ ಇಷ್ಟಪಡುವುದಿಲ್ಲ. ಆದರೆ ಸೆಲೆಬ್ರಿಟಿ ವಲಯದಲ್ಲಿ ಹಾಗಾಗುವುದಿಲ್ಲ. ಒಂದೇ ಇಂಡಸ್ಟ್ರಿಯಲ್ಲಿ ಇದ್ದರೆ ಪರಸ್ಪರ ಭೇಟಿ ಆಗುವ ಸಂದರ್ಭ ಒದಗಿ ಬರುತ್ತದೆ. ಈಗ ಧನುಷ್ ಹಾಗೂ ಐಶ್ವರ್ಯಾಗೆ ಹೀಗೆಯೇ ಆಗಿದೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

    ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಜನವರಿ 17ರಂದು ಅಧಿಕೃತವಾಗಿ ಈ ವಿಚಾರವನ್ನು ಇಬ್ಬರು ಕೂಡ ಘೋಷಣೆ ಮಾಡಿದ್ದರು. ಇದು ಧನುಷ್, ರಜನಿಕಾಂತ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ , ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ . ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಅದೇ ಪೋಸ್ಟ್ ಅನ್ನು ಹೆಸರು ಬದಲಾಯಿಸಿ, ಐಶ್ವರ್ಯಾ ಕೂಡ ಶೇರ್ ಮಾಡಿಕೊಂಡಿದ್ದರು.