Tag: Aishwarya Rajinikanth

  • ‘ಲಾಲ್ ಸಲಾಂ’ ಶೂಟಿಂಗ್ ಮುಗಿಸಿದ ಐಶ್ವರ್ಯಾ ರಜನಿಕಾಂತ್

    ‘ಲಾಲ್ ಸಲಾಂ’ ಶೂಟಿಂಗ್ ಮುಗಿಸಿದ ಐಶ್ವರ್ಯಾ ರಜನಿಕಾಂತ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರ ಐಶ್ಯರ್ಯಾ (Aishwarya Rajinikanth) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಾಲ್ ಸಲಾಂ’ ಸಿನಿಮಾದ ಬಹುತೇಕ ಶೂಟಿಂಗ್ (Shooting) ಮುಗಿದಿದೆ. ಕೊನೆಯ ದಿನದ ಚಿತ್ರೀಕರಣ ಮುಗಿಸಿದ ಐಶ್ವರ್ಯಾ ತಮ್ಮ ತಂಡದ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದ್ದು, ಈ ಚಿತ್ರದಲ್ಲಿ ರಜನಿಕಾಂತ್ (Rajinikanth) ಕೂಡ ಪಾತ್ರ ಮಾಡಿದ್ದಾರೆ.  ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ (Lal Salam) ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀದಿದ್ದಾರೆ. ಮೊನ್ನೆಯಷ್ಟೇ ಈ  ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜಿನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆದಿತ್ತು.

     

    1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಜನಿಕಾಂತ್ ಲುಕ್ ಚೆನ್ನಾಗಿಲ್ಲ: ನೇರವಾಗಿ ಕಾಮೆಂಟ್ ಮಾಡಿದ ಫ್ಯಾನ್ಸ್

    ರಜನಿಕಾಂತ್ ಲುಕ್ ಚೆನ್ನಾಗಿಲ್ಲ: ನೇರವಾಗಿ ಕಾಮೆಂಟ್ ಮಾಡಿದ ಫ್ಯಾನ್ಸ್

    ನಿನ್ನೆಯಷ್ಟೇ ಐಶ್ವರ್ಯ ರಜನಿಕಾಂತ್ (Rajinikanth) ನಿರ್ದೇಶನದಲ್ಲಿ ಮೂಡಿ ಬಂದ ಲಾಲ್ ಸಲಾಮ್ (Lal Salam) ಸಿನಿಮಾದ ರಜನಿಕಾಂತ್ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್ ನೋಡಿದ ರಜನಿ ಅಭಿಮಾನಿಗಳು ನಿರಾಸೆ ವ್ಯಕ್ತ ಪಡಿಸಿದ್ದಾರೆ. ಸೂಪರ್ ಸ್ಟಾರ್ ತೋರಿಸಿದ ರೀತಿಯೇ ಚೆನ್ನಾಗಿಲ್ಲ ಎಂದು ರಜನಿ ಮಗಳ ವಿರುದ್ಧವೇ ಕಾಮೆಂಟ್ ಮಾಡಿದ್ದಾರೆ.

    ಐಶ್ವರ್ಯ ರಜನಿಕಾಂತ್ (Aishwarya Rajinikanth) ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಸಿನಿಮಾ ಲಾಲ್ ಸಲಾಂ. ಈ ಚಿತ್ರದಲ್ಲಿ ತಲೈವ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ಮೊಹಿದ್ದೀನ್ ಭಾಯ್ (Mohiddin Bhai) ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಶೇರ್ವಾನಿ ಉಡುಪು ಧರಿಸಿ ಸನ್‌ಗ್ಲಾಸ್ ತೊಟ್ಟು  ತಲೆಗೆ ಟೋಪಿ ಹಾಕಿ ಎಂಟ್ರಿಕೊಟ್ಟಿದ್ದಾರೆ ಸೂಪರ್ ಸ್ಟಾರ್. ಇದನ್ನೂ ಓದಿ:ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು, ಹೇಳಿದ ಮಾತು ಹಿಂಪಡೆದ ಸಂಬರ್ಗಿ

    ವಿಷ್ಣು ವಿಶಾಲ್ ಮತ್ತು ವಿಕ್ರಾಂತ್  ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ, ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.  ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

    ಇಂಡಿಯನ್, ಕೈದಿ ನಂಬರ್-150, ೨.೦, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೌಸ್ ಲಾಲ್ ಸಲಾಂ ಚಿತ್ರ ನಿರ್ಮಾಣ ಮಾಡುತ್ತಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ.

  • ಧನುಷ್ ವಿಚ್ಛೇದನಕ್ಕೆ ಕಾರಣ ನಾನಲ್ಲ : ನಟಿ ಶ್ರುತಿ ಹಾಸನ್

    ಧನುಷ್ ವಿಚ್ಛೇದನಕ್ಕೆ ಕಾರಣ ನಾನಲ್ಲ : ನಟಿ ಶ್ರುತಿ ಹಾಸನ್

    ಮಿಳಿನ ಖ್ಯಾತ ನಟ ಧನುಷ್ (Dhanush) ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಡುವಿನ ಮನಸ್ತಾಪ ಹಾಗೂ ಡಿವೋರ್ಸ್ (Divorced) ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಜೋಡಿಯು ದೂರ ಆಗುವುದಕ್ಕೆ ಧನುಷ್ ಜೊತೆ ನಟಿಸಿದ ಒಬ್ಬ ನಟಿಯು ಕಾರಣ ಎಂದು ಸುದ್ದಿ ಆಗಿತ್ತು. ಆ ನಟಿ ಬೇರೆ ಯಾರೂ ಅಲ್ಲ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಶ್ರುತಿ ಟ್ರೋಲ್ ಕೂಡ ಆಗಿದ್ದರು. ಇದೀಗ ಈ ಕುರಿತು ಶ್ರುತಿ ಮಾತನಾಡಿದ್ದಾರೆ.

    ಧನುಷ್ ಮತ್ತು ಐಶ್ವರ್ಯ ಡಿವೋರ್ಸ್  ಕುರಿತಾಗಿ ಮಾತನಾಡಿರುವ ಶ್ರುತಿ ಹಾಸನ್, ‘ಅವರ ಬದುಕಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕಾರಣದಿಂದಾಗಿ ದೂರವಾಗಿಲ್ಲ. ನಾನು ಮತ್ತು ಧನುಷ್ ಒಳ್ಳೆಯ ಸ್ನೇಹಿತರು ನಿಜ. ಅದು ಕೇವಲ ವೃತ್ತಿ ಸ್ನೇಹವಾಗಿತ್ತು. ನನ್ನ ಕಷ್ಟದ ದಿನಗಳಲ್ಲಿ ಅವರು ಸಹಾಯ ಮಾಡಿದ್ದಾರೆ. ಅದರಾಚೆ ಯಾವುದೇ ಸಂಬಂಧವಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಧನುಷ್ ಅತ್ಯುತ್ತಮ ನಟನಾದರೆ, ಐಶ್ವರ್ಯ ರಜನಿಕಾಂತ್ ಹೊಸ ಆಲೋಚನೆಯ ನಿರ್ದೇಶಕಿ. ಈ ಜೋಡಿಗೆ ಎರಡು ಮಕ್ಕಳು ಕೂಡ ಇವೆ. ಖುಷಿ ಖುಷಿಯಾಗಿಯೇ ಇದ್ದ ಸಂಬಂಧದಲ್ಲಿ ಬಿರುಕು ಮೂಡಿತು. ಆನಂತರ ಇಬ್ಬರೂ ದೂರವಾಗಲು ನಿರ್ಧರಿಸಿದರು. ಸ್ವತಃ ರಜನಿಕಾಂತ್ ಅವರೇ ಇಬ್ಬರನ್ನೂ ಸರಿ ಮಾಡಲು ಪ್ರಯತ್ನಪಟ್ಟರು ಅದು ಸಾಧ್ಯವಾಗಲಿಲ್ಲ. ಹಾಗಾಗಿ ಇಬ್ಬರೂ ದೂರವಾಗಿದ್ದಾರೆ.

    ಐಶ್ವರ್ಯ ಹೊಸ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಧನುಷ್ ಕೂಡ ಹಲವು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರ ಡಿವೋರ್ಸ್ ವಿಚಾರ ಮಾತ್ರ ಎರಡೂ ಕುಟುಂಬಕ್ಕೆ ನೋವು ತಂದಿದ್ದು ಸುಳ್ಳಲ್ಲ.

  • ಅಪ್ಪನಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ರಜನಿಕಾಂತ್ ಪುತ್ರಿ ಐಶ್ವರ್ಯ: ಲಾಲ್ ಸಲಾಮ್ ಚಿತ್ರದಲ್ಲಿ ರಜನಿ

    ಅಪ್ಪನಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ರಜನಿಕಾಂತ್ ಪುತ್ರಿ ಐಶ್ವರ್ಯ: ಲಾಲ್ ಸಲಾಮ್ ಚಿತ್ರದಲ್ಲಿ ರಜನಿ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajinikanth) ಇದೀಗ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಲಾಲ್ ಸಲಾಮ್ (Lal Salaam) ಹೆಸರಿನಲ್ಲಿ ಇವರು ಚಿತ್ರ ಮಾಡುತ್ತಿದ್ದು, ಈ ಸಿನಿಮಾದಲ್ಲಿ ರಜನಿಕಾಂತ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸಿನಿಮಾದ ನಿರ್ಮಾಪಕರೇ ಘೋಷಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

    ಲಾಲ್ ಸಲಾಮ್ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ನಟಿಸುತ್ತಿದ್ದು, ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶ್ರೀಧರ್ ಪಿಲ್ಲೈ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ. ಅವರೇ ಟ್ವಿಟ್ ಮೂಲಕ ತಮ್ಮ ಸಿನಿಮಾದಲ್ಲಿ ರಜನಿಕಾಂತ್ (Rajinikanth) ವಿಶೇಷ ಪಾತ್ರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ಇದೊಂದು ಕ್ರಿಕೆಟ್ ಹಿನ್ನೆಲೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಕ್ರಿಕೆಟ್ ಬಲ್ಲಂತಹ ನಟರಾದ ವಿಕ್ರಾಂತ್ (Vikrant) ಮತ್ತು ವಿಷ್ಣು ವಿಶಾಲ್ (Vishnu Vishal) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಇಬ್ಬರೂ ಕಲಾವಿದರು ಉತ್ತಮ ಕ್ರಿಕೆಟ್ ಪಟುಗಳು ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಇನ್ನೂ ಹಲವು ಅಚ್ಚರಿಯ ವಿಷಯಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿಯೂ ನಿರ್ಮಾಣ ಸಂಸ್ಥೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್ ವಾಪಸ್ ಪಡೆದು ಮತ್ತೆ ಒಂದಾಗಲಿದ್ದಾರಂತೆ ಧನುಷ್ – ಐಶ್ವರ್ಯ ರಜನಿಕಾಂತ್

    ಡಿವೋರ್ಸ್ ವಾಪಸ್ ಪಡೆದು ಮತ್ತೆ ಒಂದಾಗಲಿದ್ದಾರಂತೆ ಧನುಷ್ – ಐಶ್ವರ್ಯ ರಜನಿಕಾಂತ್

    ತಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು ತಮಿಳಿನ ಖ್ಯಾತ ನಟ ಧನುಷ್ (Dhanush) ಮತ್ತು ರಜನಿಕಾಂತ್ ಪುತ್ರಿ, ಧನುಷ್ ಪತ್ನಿ ಐಶ್ವರ್ಯ ರಜನಿಕಾಂತ್. ತಾವಿಬ್ಬರೂ ದೂರ ಆಗುತ್ತಿರುವ ವಿಷಯವನ್ನು ಒಂಬತ್ತು ತಿಂಗಳ ಹಿಂದೆಯೇ ಸೋಷಿಯಲ್ ಮೀಡಿಯಾದಲ್ಲಿ ಇವರು ಖಚಿತ ಪಡಿಸಿದ್ದರು. ಇಂತಹ ಜೋಡಿಯು ದೂರ ಆಗುತ್ತಿರುವುದಕ್ಕೆ ಅಭಿಮಾನಿಗಳು ಮಾತ್ರವಲ್ಲ, ಎರಡೂ ಕುಟುಂಬಗಳು ನೊಂದುಕೊಂಡಿದ್ದವು.

    ಧನುಷ್ ಮತ್ತು ಐಶ್ವರ್ಯ (Aishwarya Rajinikanth) ಅವರನ್ನು ಮತ್ತೆ ಒಂದು ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನ ಪಡಲಾಯಿತು. ಆದರೆ, ಇವರಿಬ್ಬರೂ ಒಪ್ಪುತ್ತಿಲ್ಲ ಎನ್ನುವ ಮಾತೂ ಕೇಳಿ ಬಂತು. ಇದೀಗ ಈ ಜೋಡಿ ಡಿವೋರ್ಸ್ ವಾಪಸ್ಸು ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆಗಿದ್ದಲ್ಲವನ್ನೂ ಮರೆತು ಮತ್ತೆ ಒಂದಾಗುವ ಸಂಕಲ್ಪವನ್ನು ಈ ಜೋಡಿ ಮಾಡಿದೆ ಎನ್ನಲಾಗಿದ್ದು, ಮಗಳನ್ನು ಮತ್ತು ಅಳಿಯನನ್ನು ಒಪ್ಪಿಸಲು ರಜನಿಕಾಂತ್ ಕಾರಣ ಎನ್ನುವುದು ಗೊತ್ತಾಗಿದೆ. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ

    ರಜನಿಕಾಂತ್ (Rajinikanth) ಇಬ್ಬರನ್ನೂ ಕೂರಿಸಿಕೊಂಡು ಹಲವು ಸಲಹೆಗಳನ್ನು ನೀಡಿದ್ದಾರಂತೆ. ಅಲ್ಲದೇ, ಮಕ್ಕಳ ಭವಿಷ್ಯ ಸೇರಿದಂತೆ ಹಲವು ವಿಷಯಗಳನ್ನು ತಿಳಿಸಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ರಜನಿ ಸಂಧಾನಕ್ಕೆ ಇಬ್ಬರೂ ಒಪ್ಪಿಕೊಂಡು ಮತ್ತೆ ಒಂದಾಗುವ ಮಾತುಗಳನ್ನು ಆಡಿದ್ದಾರಂತೆ. ಇಂಥದ್ದೊಂದು ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ. ಆದಷ್ಟು ಬೇಗ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳಲಿ ಎಂದು ಹಲವರು ಶುಭ ಹಾರೈಸಿದ್ದಾರೆ.

    ಇಬ್ಬರೂ ವಿಚ್ಛೇದನ (Divorce) ಪಡೆದ ನಂತರ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಸಂದರ್ಭ ಬಂದಿದ್ದರೂ, ಒಟ್ಟಿಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕಿತ್ತು ಈ ಜೋಡಿ. ಆದರೆ, ಸಿನಿಮಾ ಸಂಬಂಧಿ ಕೆಲಸಗಳಿಗೆ ಒಬ್ಬರಿಗೊಬ್ಬರು ಶುಭ ಹಾರೈಸಿಕೊಂಡಿದ್ದರು. ಮಕ್ಕಳ ಜೊತೆಯೂ ಧನುಷ್ ಹಲವು ಬಾರಿ ಕಾಣಿಸಿಕೊಂಡಿದ್ದರು. ಐಶ್ವರ್ಯ ಸಿನಿಮಾ ಮಾಡುವಲ್ಲಿ ಬ್ಯುಸಿಯಾಗಿದ್ದರೆ, ಧನುಷ್ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಫ್ರೆಂಡ್’ ಎಂದಿದ್ದೇ ನಟ ಧನುಷ್ ಗೆ ಮುಳುವಾಯ್ತು: ಅನ್ ಫ್ರೆಂಡ್ ಮಾಡಿ ಹೊರಟೇ ಬಿಟ್ಟ ರಜನಿಕಾಂತ್ ಪುತ್ರಿ

    ‘ಫ್ರೆಂಡ್’ ಎಂದಿದ್ದೇ ನಟ ಧನುಷ್ ಗೆ ಮುಳುವಾಯ್ತು: ಅನ್ ಫ್ರೆಂಡ್ ಮಾಡಿ ಹೊರಟೇ ಬಿಟ್ಟ ರಜನಿಕಾಂತ್ ಪುತ್ರಿ

    ಳೆದ ವಾರವಷ್ಟೇ ತಮ್ಮಿಂದ ದೂರವಿರುವ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದ ಖ್ಯಾತ ನಟ ಧನುಷ್, ಇವತ್ತು ಪೇಚಿಗೆ ಸಿಲುಕಿದ್ದಾರೆ. ಐಶ್ವರ್ಯಾ ನಿರ್ದೇಶನದಲ್ಲಿ ಮೂಡಿ ಬಂದ ವಿಡಿಯೋ ಆಲ್ಬಂ ಮೆಚ್ಚಿಕೊಂಡಿದ್ದ ಧನುಷ್, ‘ಶುಭ ಹಾರೈಕೆಗಳು ಫ್ರೆಂಡ್’ ಎಂದು ಟ್ವಿಟ್ ಮಾಡಿದ್ದರು. ಅಧಿಕೃತವಾಗಿ ಡಿವೋರ್ಸ್ ಆಗದ ಗಂಡನು ‘ಫ್ರೆಂಡ್’ ಅಂದನು ಎನ್ನುವ ಕಾರಣಕ್ಕಾಗಿ ಇವತ್ತು ಐಶ್ವರ್ಯಾ ರಜನಿಕಾಂತ್ ತಮ್ಮ ಸೋಷಿಯಲ್ ಮೀಡಿಯಾದ ಖಾತೆಗಳಿಂದ ಧನುಷ್ ನನ್ನು ತಗೆದುಹಾಕಿದ್ದಾರೆ. ಧನುಷ್ಯ ಅವರ ಯಾವೆಲ್ಲ ಪೇಜ್ ಗಳನ್ನು ಫಾಲೋ ಮಾಡುತ್ತಿದ್ದರೋ, ಅಷ್ಟೂ ಪೇಜ್ ಗಳಿಂದ ಹೊರ ನಡೆದಿದ್ದಾರೆ.

    ನಟ ಧನುಷ್ ಮತ್ತು ಪತ್ನಿ, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್, ಹಲವು ದಿನಗಳಿಂದ ದೂರವಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯುವುದಾಗಿ ಹೇಳಿಕೊಂಡಿದ್ದರು. ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು ಎಂದು ವಿನಂತಿಸಿದ್ದರು. ಇಬ್ಬರೂ ದೂರವಿದ್ದರೂ, ಒಬ್ಬರಿಗೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಕನೆಕ್ಟ್ ಆಗುತ್ತಿದ್ದರು. ಧನುಷ್ ಹಾರೈಸಿದರೆ, ಅದಕ್ಕೆ ಉತ್ತರವಾಗಿ ಐಶ್ವರ್ಯಾ ಥ್ಯಾಂಕ್ಸ್ ಹೇಳಿದ್ದರು. ಇದೀಗ ಏಕಾಏಕಿಯಾಗಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲೂ ಒಂದಾಗುವುದು ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

    ಹದಿಮೂರು ವರ್ಷಗಳ ದಾಂಪತ್ಯ ಜೀವನದಲ್ಲಿ ಇಬ್ಬರೂ ಯಶಸ್ಸು ಕಂಡವರು. ಎರಡು ಮಕ್ಕಳ ಪಾಲಕರು. ಆದರೂ, ಇಬ್ಬರ ಜೀವನ ಹೊಂದಾಣಿಕೆ ಆಗದೇ ಇರುವ ಕಾರಣಕ್ಕಾಗಿ ದೂರ ಆಗಲು ನಿರ್ಧರಿಸಿದ್ದಾರೆ. ಇವರ ಈ ನಡೆ ಕುಟುಂಬಕ್ಕೆ ಆಘಾತ ತಂದಿದ್ದರೂ, ಎಲ್ಲರೂ ಮೌನವಹಿಸುವಂತಾಗಿದೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಮತ್ತೆ ಇಬ್ಬರನ್ನೂ ಒಂದಾಗಿಸಲು ಖ್ಯಾತ ನಟ ರಜನಿಕಾಂತ್ ಪ್ರಯತ್ನ ಪಟ್ಟರು. ಮಗಳು ಮತ್ತು ಅಳಿಯನನ್ನು ಕೂರಿಸಿಕೊಂಡು ಮಾತನಾಡಿದರು. ಅಲ್ಲದೇ, ಧನುಷ್ ತಂದೆ ಕೂಡ ಇಬ್ಬರೂ ಸರಿ ಹೋಗುತ್ತಾರೆ ಎಂದೇ ಹೇಳಿಕೆ ನೀಡಿದ್ದರು. ಆದರೆ, ಅಂತಹ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಅವರ ಬದುಕು ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಈ ನಡೆಯೇ ಸಾಕ್ಷಿ.

  • ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

    ಸ್ಟಾರ್ ನಟ ಧನುಷ್ ಅವರ ಮಾಜಿಪತ್ನಿ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಮೊನ್ನೆಷ್ಟೇ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈಗಾಗಲೂ ಮೂರು ಚಿತ್ರಗಳನ್ನು ತಮಿಳಿನಲ್ಲೇ ನಿರ್ದೇಶನ ಮಾಡಿರುವ ಅವರು, ಮುಂದಿನ ಚಿತ್ರವನ್ನು ಅದೇ ಭಾಷೆಯಲ್ಲೇ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈಗ ಅಂದಾಜ ಸುಳ್ಳಾಗಿದೆ. ಇದೇ ಮೊದಲ ಬಾರಿಗೆ ಅವರು ಬಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

    ‘ನಾನೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದೇನೆ. ನನ್ನ ಮೊದಲ ಬಾಲಿವುಡ್ ಸಿನಿಮಾದ ಟೈಟಲ್ ಘೋಷಣೆ ಮಾಡುವುದಕ್ಕೆ ಹೆಮ್ಮೆ ಆಗುತ್ತಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಚೊಚ್ಚಲು ಹಿಂದಿ ನಿರ್ದೇಶನದ ಚಿತ್ರಕ್ಕೆ ಅವರು ‘ಓ ಸಾತಿ ಚಲ್’ ಎಂದು ಟೈಟಲ್ ಇಟ್ಟಿದ್ದಾರೆ. ಇದು ಅವರ ಬಾಲಿವುಡ್ ನ ಮೊದಲ ಸಿನಿಮಾವಾಗಿದ್ದರಿಂದ ಎಲ್ಲರ ಹಾರೈಕೆಯನ್ನೂ ಅವರು ಕೇಳಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಪತಿ ಧನುಷ್ ಮತ್ತು ಶ್ರುತಿ ಹಾಸನ್ ಕಾಂಬಿನೇಷನ್ ನ ‘3’ ಸಿನಿಮಾದ ಮೂಲಕ ನಿರ್ದೇಶಕಿಯಾಗಿ ತಮಿಳು ಸಿನಿಮಾ ರಂಗಕ್ಕೆ ಪ್ರವೇಶ ಪಡೆದವರು ಐಶ್ವರ್ಯ. ಆನಂತರ ಅವರು ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸ್ವಲ್ಪ ವರ್ಷಗಳ ಬಿಡುಗಡೆ ತಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಐಶ್ವರ್ಯ ಮುಂದಾಗಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಮೊನ್ನೆಯಷ್ಟೇ ಇವರ ನಿರ್ದೇಶನದಲ್ಲಿ ಸಿಂಗಲ್ ವಿಡಿಯೋ ಆಲ್ಬಂ ಒಂದು ಮೂಡಿ ಬಂದಿತ್ತು. ಅದು ರಿಲೀಸ್ ಆದ ವೇಳೆಯಲ್ಲಿ ಧನುಷ್ ವಿಶ್ ಮಾಡಿದ್ದರು. ‘ಸ್ನೇಹಿತೆ ನಿಮಗೆ ಒಳ್ಳೆಯದಾಗಲಿ’ ಎಂದು ಸಂದೇಶ ಹಾಕಿ ಅಚ್ಚರಿ ಮೂಡಿಸಿದ್ದರು. ಧನುಷ್ ಅವರ ವಿಶ್ ಗೂ ಐಶ್ವರ್ಯ ಪ್ರತಿಕ್ರಿಯೆ ನೀಡಿದ್ದರು.

  • ಧನುಷ್ ಜೊತೆಗಿನ ವಿಚ್ಛೇದನದ ಬಳಿಕ ಪ್ರೀತಿ ಬಗ್ಗೆ ಐಶ್ವರ್ಯಾ ಮಾತು

    ಧನುಷ್ ಜೊತೆಗಿನ ವಿಚ್ಛೇದನದ ಬಳಿಕ ಪ್ರೀತಿ ಬಗ್ಗೆ ಐಶ್ವರ್ಯಾ ಮಾತು

    ಚೆನ್ನೈ: ಸೌತ್ ಸೂಪರ್ ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಕೆಲವು ದಿನಗಳ ಹಿಂದಷ್ಟೇ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಈ ಸುದ್ದಿ ಅನೇಕ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಐಶ್ವರ್ಯಾ ರಜನಿಕಾಂತ್ ಅವರು ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ಹಲವು ದಿನಗಳ ಬಳಿಕ ಐಶ್ವರ್ಯಾ ರಜನಿಕಾಂತ್ ಜೀವನ ಮತ್ತು ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾವು ಜೀವನದಲ್ಲಿ ಎಲ್ಲವನ್ನು ನಿಭಾಯಿಸಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮ ದಾರಿಯಲ್ಲಿ ನಮಗೆ ಏನು ಎದುರಾಗುತ್ತದೆಯೋ ಅದನ್ನು ನಾವು ಎದುರಿಸಬೇಕಾಗಿದೆ. ಅಂತಿಮವಾಗಿ, ನಮಗೆ ಏನು ಸಿಗಬೇಕೋ ಅದು ನಮಗೆ ಸಿಗುತ್ತದೆ. ನಾನು ಈ ಹಿಂದೆಯೇ ಹೇಳಿದ್ದೇನೆ. ನಾನು ಕಲಿಯುತ್ತಿದ್ದೇನೆ ಮತ್ತು ನನ್ನನ್ನು ಕಲಿಯಲು ಬಿಡಬೇಕೆಂದು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ಪ್ರೀತಿ ಎಂಬುವುದು ಸಾಮಾನ್ಯವಾದ ಭಾವನೆಯಾಗಿದೆ. ಇದು ಒಬ್ಬ ಮನುಷ್ಯ ಅಥವಾ ಒಂದು ವೈಯಕ್ತಿಕ ವಿಷಯದೊಂದಿಗೆ ಸಂಬಂಧಿಸಿಲ್ಲ. ನಾನು ವಿಕಸನಗೊಳ್ಳುತ್ತಿದ್ದಂತೆ, ಪ್ರೀತಿಯ ವ್ಯಾಖ್ಯಾನವು ನನ್ನೊಂದಿಗೆ ವಿಕಸನಗೊಳ್ಳುತ್ತಿದೆ. ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ನಾನು ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ನಾನು ನನ್ನ ಮಕ್ಕಳನ್ನು ಪ್ರೀತಿಸುತ್ತೇನೆ. ಹಾಗಾಗಿ ಪ್ರೀತಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗುವುದಿಲ ಎಂದು ನಾನು ಭಾವಿಸುತ್ತೇನೆ. ಹೌದು, ನಾನು ಎಲ್ಲರನ್ನು ಪ್ರೀತಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಐಶ್ವರ್ಯಾ ರಜನಿಕಾಂತ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಅದರಿಂದ ಹೊರಬರುವುದು ಎಷ್ಟು ಕಷ್ಟ ಎಂದು ತಿಳಿಸಿದ್ದಾರೆ ಮತ್ತು ತಮ್ಮ ಸಂಕಷ್ಟದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದಕ್ಕಾಗಿ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?

    ರಜನಿಕಾಂತ್ ಅವರ ಹಿರಿಯ ಮಗಳಾಗಿರುವ ಐಶ್ವರ್ಯಾ ಅವರು 2004 ರಲ್ಲಿ ಧನುಷ್ ಅವರೊಂದಿಗೆ ವಿವಾಹವಾದರು. ಸದ್ಯ ಇವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ.