ಐರಾವತ ನಟಿ ಊರ್ವಶಿ ರೌಟೇಲಾ (Urvashi Rautela) ಗರಂ ಆಗಿದ್ದಾರೆ. ಐಶ್ವರ್ಯಾ ರೈ (Aishwarya Rai) ಜೊತೆ ಹೋಲಿಸಿ ಟ್ರೋಲ್ ಮಾಡಿದ್ದಕ್ಕೆ ನಾನು ಯಾರ ಕಾಪಿನೂ ಅಲ್ಲ ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ
ಕಾನ್ ಚಿತ್ರೋತ್ಸವದಲ್ಲಿ (Cannes 2025) ಊರ್ವಶಿ ಲುಕ್ ಅನ್ನು ಐಶ್ವರ್ಯಾ ರೈಯೊಂದಿಗೆ ಹೋಲಿಸಿ ಕೆಲ ಸುದ್ದಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ. ಜೀರೋ ವರ್ಚಸ್ಸಿನೊಂದಿಗೆ ಐಶ್ವರ್ಯಾ ರೈ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದವರಿಗೆ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಐಶ್ವಯಾ ರೈ ಐನಾನಿಕ್. ನಾನು ಅವರ ಕಾಪಿ ಆಗಲು ಬಂದಿಲ್ಲ. ನಾನೇ ಬ್ಲೂಪ್ರಿಂಟ್. ಕಾನ್ ಚಿತ್ರೋತ್ಸವದಲ್ಲಿ ನನ್ನನ್ನು ಎಲ್ಲರೊಂದಿಗೆ ಬೆರೆಯಲು ಆಹ್ವಾನಿಸಲಿಲ್ಲ. ನಾನು ಎಲ್ಲರಂತೆ ಎದ್ದು ಕಾಣಲು ಬಂದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಕೂಲಿ’ ಮಾಡಿದ ತಲೈವಾಗೆ 150 ಕೋಟಿ, ನಿರ್ದೇಶಕನಿಗೆ 20 ಕೋಟಿ!
ನಾನು ಎಲ್ಲರಿಗೂ ಸಿಗುವವಳಲ್ಲ. ನಾನು ಪಟಾಕಿಯೊಂದಿಗಿರುವ ಶಾಂಪೇನ್‌ನಂತೆ. ನೀವು ವರ್ಚಸ್ಸು ಅಳೆಯಲು ಸಾಧ್ಯವಾದರೆ, ನಾನು ಅದರ ಮಾಪಕವನ್ನು ಮುರಿಯಬಲ್ಲೆ ಎಂದಿದ್ದಾರೆ. ಸದ್ಯ ನಟಿಯ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಊರ್ವಶಿ ರೌಟೇಲಾ ಅವರು ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹುಭಾಷೆಗಳಲ್ಲಿ ನಟಿಗೆ ಭಾರೀ ಬೇಡಿಕೆಯಿದೆ.




78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಕುಡ್ಲದ ಬೆಡಗಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.
ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.
ಈ ಸಿನಿಮಾ ಹಬ್ಬದಲ್ಲಿ ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
ಬಾಲಿವುಡ್ ಚಿತ್ರರಂಗದ ಸೌಂದರ್ಯದ ಗಣಿ ಐಶ್ವರ್ಯಾ ರೈ ಅವರು ಕಳೆದ ವರ್ಷ ತೆರೆಕಂಡ ‘ಪೊನ್ನಿಯನ್ ಸೆಲ್ವನ್ 2’ರಲ್ಲಿ ನಟಿಸಿದ್ದರು. ಇದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದರು.
78ನೇ ಕಾನ್ ಫಿಲ್ಮ್ ಫೆಸ್ಟಿವಲ್ (78th Cannes Film Festival) ಮೇ 13ರಿಂದ ಆರಂಭಗೊಂಡಿದ್ದು, 24ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಟಿ ಐಶ್ವರ್ಯಾ ರೈ ಕೂಡ ಭಾಗಿಯಾಗಿದ್ದಾರೆ.
ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಹಣೆಗೆ ಸಿಂಧೂರವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಐಶ್ವರ್ಯಾ ಮಿಂಚಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವಾಗ ನಗುತ್ತಾ ಕೈ ಮುಗಿದು ನಟಿ ನಮಸ್ಕರಿಸಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ. ಅಭಿಷೇಕ್ ಬಚ್ಚನ್ ಜೊತೆಗಿನ ನಟಿಯ ದಾಂಪತ್ಯ ಸರಿಯಿಲ್ಲ ಎಂದು ಗಾಸಿಪ್ ಹಬ್ಬಿಸುವವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಈ ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್, ಪ್ರಣಿತಾ ಸುಭಾಷ್, ಜಾನ್ವಿ ಕಪೂರ್, ರುಚಿ ಗುಜ್ಜರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:
ಐಶ್ವರ್ಯಾ ರೈ ಭಾಗಿಯಾಗ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ನಟಿ ಭಾಗಿಯಾಗಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.












