Tag: aishwarya pissay

  • ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿದುಕೊಳ್ಳುತ್ತೀರಾ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ ಸುದೀಪ್

    ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿದುಕೊಳ್ಳುತ್ತೀರಾ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ ಸುದೀಪ್

    ಪ್ರೇಕ್ಷಕರ ಬಾಯಲ್ಲಿ ಸದ್ಯ ಮನೆಮಾತರಾಗಿರುವ ಶೋ ಅಂದ್ರೆ ಬಿಗ್ ಬಾಸ್, ಕಳೆದ ಒಂಭತ್ತು ಸೀಸನ್‌ನಿಂದ ಬಿಗ್ ಬಾಸ್ ಸಖತ್ ಮೋಡಿ ಮಾಡುತ್ತಲೇ ಬರುತ್ತಿದೆ. ಇದೀಗ ಟಿವಿ ಬಿಗ್ ಬಾಸ್(Bigg Boss) ಹೊಸ ಸೀಸನ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಒಂದು ವಾರ ಕಳೆದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ದಿವ್ಯಾ ಉರುಡುಗ (Divya Uruduga) ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.

     

    View this post on Instagram

     

    A post shared by DU✨ (@divya_uruduga)

    ಸ್ಯಾಂಡಲ್‌ವುಡ್ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8ರಲ್ಲಿ ಮೋಡಿ ಮಾಡಿದ್ದರು. ಎರಡನೇ ಬಾರಿ ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೆಟ್ ಆಗುತ್ತಿದ್ದಾರೆ. ಕಳೆದ ಬಾರಿ ಬೈಕ್ ರೇಸರ್ ಅರವಿಂದ್ ಜೊತೆ ದಿವ್ಯಾ ಹೆಸರು ಸಖತ್ ಸುದ್ದಿ ಮಾಡಿತ್ತು. ಬಳಿಕ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಮದುವೆಯ ಹಂತಕ್ಕೂ ಹೋಗಿದೆ ಎನ್ನಲಾಗಿತ್ತು. ಇದೀಗ ಈ ಸೀಸನ್ ದಿವ್ಯಾ ತಮ್ಮ ಪಾರ್ಟರ್ ಆಗಿ ಬೈಕ್ ರೇಸರ್ ಐಶ್ವರ್ಯಾ(Aishwarya) ಅವರನ್ನೇ ಸೆಲೆಕ್ಟ್ ಮಾಡಿರೋದನ್ನ ನೋಡಿ ಸುದೀಪ್ (Sudeep), ದಿವ್ಯಾ ಉರುಡುಗ ಅವರ ಕಾಲೆಳೆದಿದ್ದಾರೆ. ಇದನ್ನೂ ಓದಿ:ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

    ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿಕೊತ್ತೀರಾ. ನೀವು ಬೈಕರ್‌ನ್ನೇ ಹುಡುಕುತ್ತೀರಾ ಹಂಗೆ ಅದು. ನೀವು ತಾನೇ ಐಶ್ವರ್ಯ ಅವರನ್ನ ಆಯ್ಕೆ ಮಾಡಿದ್ದು, ನೀವು ಕಳೆದ ಸೀಸನ್ ಯಾರನ್ನು ಬೈಕರ್ ಅಂತಾ ಅಂದುಕೊಂಡಿಲ್ಲಾ ಅಲ್ವಾ. ಅವರು ಬೈಕರ್ ಆದರು ಎಂದು ಪರೋಕ್ಷವಾಗಿ ಅರವಿಂದ್ ಹೆಸರು ಹೇಳದೇ ಕಿಚ್ಚ ಸುದೀಪ್ ದಿವ್ಯಾಗೆ ತಮಾಷೆ ಮಾಡಿದ್ದಾರೆ. ಕಿಚ್ಚ ಮತ್ತು ದಿವ್ಯಾ ಮಾತುಕಥೆ ನೋಡಿ ಮನೆ ಮಂದಿಯೆಲ್ಲಾ ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್

    ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್

    ಟಿವಿ ಪರದೆಯ ಬಿಗ್‌ ಬಾಸ್ ಸಾಕಷ್ಟು ವಿಷ್ಯವಾಗಿ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 9 (Bigg Boss Kannada Season 9)  ಶುರುವಾಗಿ ಕೇವಲ ಒಂದು ವಾರವಷ್ಟೇ ಕಳೆದಿದೆ. ವಾರ ಕಳೆದಂತೆ ದೊಡ್ಮನೆಯಿಂದ ಯಾರು ಹೊರ ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ (Aishwarya Pissay) ಔಟ್ ಆಗಿದ್ದಾರೆ.

    ಈ ವಾರ ಬೈಕ್ ರೇಸರ್ ಐಶ್ವರ್ಯಾ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ವೋಟ್ ಕಡಿಮೆ ಬಂದ ಹಿನ್ನೆಲೆ ಐಶ್ವರ್ಯ ಮನೆಯಿಂದ ಹೊರ ಹೋಗಿದ್ದಾರೆ. ಇದನ್ನೂ ಓದಿ: BREAKING: ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ

    ಬೆಂಗಳೂರು ಮೂಲದ ಐಶ್ವರ್ಯಾ ಅವರು ಮೋಟಾರ್ ಸ್ಪೋರ್ಟ್ಸ್ ಮಹಿಳಾ ಕ್ಯಾಟಗರಿಯಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಕೂಡ ಪಡೆದಿದ್ದಾರೆ. ಇದನ್ನೂ ಓದಿ: ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    Live Tv
    [brid partner=56869869 player=32851 video=960834 autoplay=true]

  • ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    ಟಿವಿ ಬಿಗ್ ಬಾಸ್‌ನಲ್ಲಿ(Bigg Boss Kannada) ಈ ಬಾರಿ ಸಾಕಷ್ಟು ಪ್ರೇಮ ಕಥೆಗಳು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ರೇಸರ್ ಐಶ್ವರ್ಯಗೆ ಪ್ರೀತ್ಸೆ ಎಂದು ಪ್ರಪೋಸ್ ಮಾಡಿದ್ದ ಸೈಕ್ ನವಾಜ್ ಈಗ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದು ಹೇಳಿ ಮನೆಯವರೆಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

    ದೊಡ್ಮನೆಯಲ್ಲಿ ಮನೆ ಮಂದಿ ಎಲ್ಲರೂ ಟ್ರೂತ್ ಆ್ಯಂಡ್ ಡೇರ್ ಆಡುತ್ತಿದ್ದರು. ಈ ವೇಳೆ ದೀಪಿಕಾ ದಾಸ್(Deepika Das) ಅವರಿಗೆ ಟಾಸ್ಕ್‌ವೊಂದು ಎದುರಾಗಿದೆ. ನವಾಜ್ ಕಡೆಯಿಂದ ದೀಪಿಕಾ ಅಂದ್ರೆ ನನಗೆ ತುಂಬಾ ಇಷ್ಟ ಎಂದು ಕ್ಯಾಮೆರಾ ಮುಂದೆ ಹೇಳಿಸಬೇಕು ಎಂದು ಇದು ದೀಪಿಕಾ ಅವರ ಟಾಸ್ಕ್ ಆಗಿತ್ತು. ಅದರಂತೆಯೇ ದೀಪಿಕಾ ಕೂಡ ನವಾಜ್ ಬಳಿ ಹೇಳಿಸಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ನಿಮಗೆ ಐಶ್ವರ್ಯ (Aishwarya) ಮಾತ್ರ ಇಷ್ಟ ಆಗುತ್ತಾರಾ, ನಾನು ಕೂಡ ಮೇಕಪ್ ಮಾಡಿಕೊಳ್ಳುವುದಿಲ್ಲ. ನಾನು ಅಂದ್ರೆ ಇಷ್ಟ ಇಲ್ವಾ. ಹೋಗಲಿ ನೀವು ಇಷ್ಟಪಡುವ ರೀತಿಯಲ್ಲಿ ಆದ್ರೂ ಇದ್ದೀನಾ ಎಂದು ಕೇಳಿದ್ದಾರೆ. ಹಾಗಲ್ಲ, ನೀವೆಂದ್ರೆ ನನಗೆ ಇಷ್ಟ ಆದರೆ ನೀವು ನನಗಿಂತ ದೊಡ್ಡವರು ಎಂದು ನವಾಜ್ ಹೇಳಿದ್ದಾರೆ. ಹಾಗೇ ಇಷ್ಟಪಡಲು ವಯಸ್ಸ್ಯಾಕೆ ಎಂದು ದೀಪಿಕಾ ಹೇಳಿದ್ದಾರೆ. ಬಳಿಕ ನವಾಜ್(Nawaz) ಬಳಿ ಮಾತನಾಡಿ ಕ್ಯಾಮೆರಾ ಮುಂದೆ ದೀಪಿಕಾ ಅಂದ್ರೆ ನನಗೆ ತುಂಬಾ ಇಷ್ಟ ಎಂದು ನವಾಜ್ ಹೇಳಿದ್ದಾರೆ. ಮನೆಮಂದಿ ಕೊಟ್ಟ ಟ್ರೂತ್ ಆ್ಯಂಡ್ ಡೇರ್ ಟಾಸ್ಕ್‌ನಲ್ಲಿ ದೀಪಿಕಾ ದಾಸ್ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಾವ್ಯಶ್ರೀ ಔಟ್: ರೂಪೇಶ್ ಶೆಟ್ಟಿ ಮೇಲೆ‌ ಶುರುವಾಯ್ತು `ಪುಟ್ಟಗೌರಿ’ಗೆ ಪ್ಯಾರ್

    ಒಟ್ನಲ್ಲಿ ಬಿಗ್ ಬಾಸ್ ಪ್ರೇಕ್ಷಕರು ಐಶ್ವರ್ಯ ಮತ್ತು ನವಾಜ್ ಜೊತೆ ದೀಪಿಕಾ ದಾಸ್ ಜೊತೆಗಿನ ಫ್ರೆಂಡ್‌ಶಿಪ್ ನೋಡಿ ಏಂಜಾಯ್ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

    ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

    ಬಿಗ್ ಬಾಸ್ (Bigg Boss House) ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಪ್ರೇಮ ಕಥೆಗಳು ಶುರುವಾಗುತ್ತೆ. ಓಟಿಟಿಯಲ್ಲಿ ಶುರುವಾಗಿದ್ದ ಸಾನ್ಯ ಅಯ್ಯರ್ ಮತ್ತು ರೂಪೇಶ್ ಫ್ರೆಂಡ್ ಶಿಪ್ ಕಾವ್ಯಶ್ರೀ ಎಂಟ್ರಿಯಿಂದ ಕೊಂಚ ಬದಲಾಗಿದೆ. ಈ ಬೆನ್ನಲ್ಲೇ ಹೊಸ ಲವ್ ಸ್ಟೋರಿಯೊಂದು ಸದ್ದು ಮಾಡುತ್ತಿದೆ. ಐಶ್ವರ್ಯ ಪಿಸ್ಸೆಗೆ(Aishwarya Pissay) ಪ್ರೀತ್ಸೆ ಅಂತಾ ನವಾಜ್ (Nawaz) ಎಲ್ಲರ ಎದುರೇ ಪ್ರಪೋಸ್ ಮಾಡಿದ್ದಾರೆ.

    ಎಲ್ಲರಿಗೂ ಹೊಡೆಯುತ್ತೀನಿ ಎಂದು ರಾಂಗ್ ಆಗಿ ಮಾತನಾಡುತ್ತಿದ್ದ ನವಾಜ್(Nawaz) ಬಾಯಲ್ಲಿ ಕ್ಯೂಟ್ ಪ್ರಪೋಸಲ್ ಕೇಳಿ ಮನೆಮಂದಿ ಅಚ್ಚರಿ ಪಟ್ಟಿದ್ದಾರೆ. ದೊಡ್ಮನೆಗೆ ಬಂದ ಸಮಯದಲ್ಲಿ ನವಾಜ್ ಅವರು ಐಶ್ವರ್ಯಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ನನಗೆ ಹಾಲಿವುಡ್ ಹೀರೋಯಿನ್‌ಗಳು ಎಂದರೆ ಇಷ್ಟ. ಐಶ್ವರ್ಯಾ ಅವರು ನೋಡೋಕೆ ಹಾಲಿವುಡ್ ಹೀರೋಯಿನ್ ತರಹವೇ ಇದ್ದಾರೆ. ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದರು ನವಾಜ್. ಇದೀಗ ಸೈಕ್‌ ನವಾಜ್ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಯಶ್‌ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ ಕೋಡಿ ಬಿತ್ತು – ಗ್ರಾಮಸ್ಥರಿಗೆ ಸಂತಸ

    ನೋಡಿ ಐಶ್ವರ್ಯಾ ಪಿಸ್ಸೆ ಅವರೇ, ನಿಮ್ಮನ್ನು ನೋಡಿದಾಗಲೇ ಫಿದಾ ಆದೆ. ನಿಮ್ಮ ರೀತಿ ಇಂಗ್ಲಿಷ್‌ ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು, ಆದರೆ ಮನಸ್ಸು ದೊಡ್ಡದು. ಚಿಕ್ಕದಾಗಿ ಸೇರಿಕೊಂಡು, ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡದಾಗಿ ಪ್ರೀತಿ ಮಾಡಿ, ಚಿಕ್ಕದಾಗಿ ಖುಷಿಪಡೋಣ. ಚಿಕ್ಕ ಖುಷಿಯಲ್ಲಿ ಮಕ್ಕಳಿಗೆ ಜನ್ಮ ಕೊಡೋಣ. ಆ ಚಿಕ್ಕ ಮಕ್ಕಳನ್ನು ದೊಡ್ಡವರಾಗಿ ಬೆಳೆಸೋಣ. ದೊಡ್ಡವರಾಗಿ ಸಾಯುವಾಗ ಚಿಕ್ಕದಾಗಿ ನಗೋಣ. ನಮ್ಮ ಮಕ್ಕಳು ದೊಡ್ಡದಾಗಿ ಸಮಾಧಿ ಕಟ್ಟಿಸುತ್ತಾರೆ, ಅವರ ಮನದಲ್ಲಿ ಚಿಕ್ಕ ಜಾಗದಲ್ಲಿರೋಣ ಎಂದು ಮುದ್ದಾಗಿ ಪ್ರಿತ್ಸೆ ಅಂತಾ ನವಾಜ್ (Nawaz) ಪ್ರಪೋಸ್ ಮಾಡಿದ್ದಾರೆ.

    ಇದಕ್ಕೆ ಪ್ರತಿಯುತ್ತರವಾಗಿ ಐಶ್ವರ್ಯ ಕೂಡ ನಿನಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ ಎಂದು ಹೇಳಿದ್ದಾರೆ. ಯಾಕೆ ನೀವು ಸಿಗಲ್ವಾ ಎಂದು ಮತ್ತೆ ನವಾಜ್ ಐಶ್ವರ್ಯಗೆ ಕಿಚ್ಚಾಯಿಸಿದ್ದಾರೆ. ಒಂದ್ ಕಡೆ ರೂಪೇಶ್ ಕಾವ್ಯಶ್ರೀ, ಅಮೂಲ್ಯ ಮತ್ತು ರಾಕೇಶ್ ವಿಚಾರವೇ ಸಖತ್ ಸದ್ದು ಮಾಡುತ್ತಿರಬೇಕಾದರೆ, ಇದೀಗ ಐಶ್ವರ್ಯ ನವಾಜ್ ಜೋಡಿಯ ಪ್ರಪೋಸ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ

    Live Tv
    [brid partner=56869869 player=32851 video=960834 autoplay=true]