Tag: Aishwarya Gowda Fraud Case

  • ಇಡಿ ಯಾಕೆ ನೋಟಿಸ್ ಕೊಟ್ಟಿದೆ ಎನ್ನುವುದೆ ನನಗೆ ಪ್ರಶ್ನೆಯಾಗಿದೆ: ಡಿ.ಕೆ.ಸುರೇಶ್

    ಇಡಿ ಯಾಕೆ ನೋಟಿಸ್ ಕೊಟ್ಟಿದೆ ಎನ್ನುವುದೆ ನನಗೆ ಪ್ರಶ್ನೆಯಾಗಿದೆ: ಡಿ.ಕೆ.ಸುರೇಶ್

    ಬೆಂಗಳೂರು: ನನಗೆ ಇಡಿ (ED) ಯಾಕೆ ನೋಟಿಸ್ ಕೊಟ್ಟಿದೆ ಎನ್ನುವುದೇ ಪ್ರಶ್ನೆಯಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್  (DK Suresh) ಹೇಳಿದ್ದಾರೆ.

    ಇಡಿ ವಿಚಾರಣೆಗೆ ತೆರಳುವ ಮುನ್ನ ಸದಾಶಿವಗರ ನಿವಾಸದಲ್ಲಿ ಮಾತನಾಡಿದ ಅವರು, ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ನೋಟಿಸ್ ಜಾರಿ ಮಾಡಿದ್ದರು. ಕೆಲ ಮಾಹಿತಿಗಳನ್ನು ಕೇಳಿದ್ದರು. ನಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ವಿಷಯಕ್ಕೆ ಸಂಬಂಧ ಇಲ್ಲದ್ದು ನನಗೆ ಕನೆಕ್ಟೆಡ್ ಇಲ್ಲದೇ ಇರೋ ವಿಚಾರಗಳು ಇದ್ದವು. ಯಾಕೆ ನೋಟಿಸ್ ಕೊಟ್ಟರು ಅನ್ನೋದು ಗೊತ್ತಿಲ್ಲ. ನನ್ನ ಸಹೋದರಿ ಅಂತ ಮೌಖಿಕವಾಗಿ ಹೇಳಿ ಮೋಸ ಮಾಡಿದ್ದಾರೆ ಅವರು ಮಾಡಿರುವ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಯಾಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ವಿಚಾರಣೆಗೆ ಹೋದ ಮೇಲೆ ಗೊತ್ತಾಗುತ್ತೆ ಎಂದರು. ಇದನ್ನೂ ಓದಿ: ಆನೇಕಲ್‌ | ಹಾಡಹಗಲೇ ಮೈಕೈ ಮುಟ್ಟಿ ಯುವತಿಗೆ ಲೈಂಗಿಕ ಕಿರುಕುಳ – ಐವರ ವಿರುದ್ಧ ದೂರು

    ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಇಡಿ ನೋಟಿಸ್ ರಾಜಕೀಯ ಪ್ರೇರಿತ ಹೌದ ಇಲ್ವಾ ಅನ್ನೋದು ಅಲ್ಲಿ ಹೋದ ಮೇಲೆ ಗೊತ್ತಾಗುತ್ತದೆ. ಅವರು ಕೇಳುವ ಪ್ರಶ್ನೆಗಳ ಮೇಲೆ ಇದಕ್ಕೆ ಸಂಬಂಧ ಇದೆಯಾ ಇಲ್ವಾ ಅನ್ನೋದು ಗೊತ್ತಾಗುತ್ತದೆ. ಯಾವುದಕ್ಕೆ ಸಂಬಧ ಇದೆ ಯಾವುದು ಅಸಂಬದ್ಧ ಇದೆ ಅಂತ ವಿಚಾರಣೆ ಮುಗಿದಮೇಲೆ ಚರ್ಚೆ ಮಾಡಬೇಕಾಗುತ್ತದೆ. ನನಗಾಗಲಿ ಆಯಮ್ಮನಿಗಾಗಲಿ ಯಾವುದೇ ಹಣಕಾಸಿನ ವ್ಯವಹಾರ ಏನು ಇಲ್ಲ. ಈ ಹಿಂದೆ ಕೂಡ ನಾನು ಅದನ್ನ ತಿಳಿಸಿದ್ದೇನೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಇದನ್ನ ಹೊರತುಪಡಿಸಿದರೆ ಬೇರೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕದನ ಭೂಮಿಯಿಂದ ಓಡಿಹೋಗಲ್ಲ, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ: ಬಿಆರ್ ಪಾಟೀಲ್

    ಅವರು ನನ್ನ ಗೃಹ ಕಚೇರಿಯಲ್ಲಿ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದರು. ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದರು. ನನ್ನ ಕ್ಷೇತ್ರದಲ್ಲಿ ಇದ್ದರು ಎನ್ನುವ ಕಾರಣಕ್ಕೆ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲ ವಿಚಾರಗಳನ್ನು ಅಧಿಕಾರಿಗಳು ಕೇಳುತ್ತಾರೆ, ಅವರಿಗೆ ಹೇಳುತ್ತೇನೆ. ನನ್ನ ಧ್ವನಿಯನ್ನ ಮಿಮಿಕ್ರಿ ಮಾಡಿ ಬೇರೆಯವರಿಗೆಲ್ಲ ಮೋಸ ಮಾಡಿದ್ದಾರೆ. ಅದು ಪೊಲೀಸ್ ತನಿಖೆ ಕೂಡ ಮಾಡಿದ್ದಾರೆ. ಸುಮಾರು ಪ್ರಕರಣಗಳು ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿದೆ. ಆ ವಿಚಾರ ಏನಾಯಿತು ಅಂತ ನನಗೆ ಗೊತ್ತಿಲ್ಲ. ಇ.ಡಿ ಎಂಟ್ರಿ ಆಗಿದೆ, ಯಾವ ಮಾನದಂಡ ಇಟ್ಟುಕೊಂಡು ನನ್ನನ್ನು ಕರೆದಿದ್ದಾರೆ ಗೊತ್ತಿಲ್ಲ. ಇಡಿ ನೋಟಿಸ್ ನನಗೆ ಪ್ರಶ್ನೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

    ಸುಪ್ರೀಂಕೋರ್ಟ್, ಹೈಕೋರ್ಟ್ ಅನೇಕ ಬಾರಿ ಇಡಿ ಬಗ್ಗೆ ಹೇಳಿದೆ. ವ್ಯಾಪ್ತಿ ಮೀರಿ ಇ.ಡಿ ನಡಿತಾ ಇದೆ ಅಂತ ಹೇಳಿದೆ. ಅದಾಗ್ಯೂ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ ಎಂದು ಅರ್ಥ. ಅವರ ವ್ಯಾಪ್ತಿಯನ್ನು ಹೊರತುಪಡಿಸಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿದೆ. ಏನು ಮಾಡುತ್ತಾರೆ ನೋಡೋಣ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ – ಸಿಎಂ, ಜಮೀರ್‌ ರಾಜೀನಾಮೆಗೆ ರವಿಕುಮಾರ್ ಆಗ್ರಹ

  • ಬಹುಕೋಟಿ ವಂಚನೆ ಪ್ರಕರಣ – ಐಶ್ವರ್ಯಗೌಡಗೆ ಜಾಮೀನು

    ಬಹುಕೋಟಿ ವಂಚನೆ ಪ್ರಕರಣ – ಐಶ್ವರ್ಯಗೌಡಗೆ ಜಾಮೀನು

    ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಐಶ್ವರ್ಯಗೌಡಗೆ (Aishwarya Gowda Fraud Case) ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.

    ಕಳೆದ 40 ದಿನದ ಹಿಂದೆ ಇಡಿ (Directorate of Enforcement) ಅಧಿಕಾರಿಗಳು ಐಶ್ವರ್ಯ ಮನೆಯ ಮೇಲೆ ದಾಳಿ ಮಾಡಿ, ಐಶ್ವರ್ಯಗೌಡಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸರಿ ಸುಮಾರು 70 ಕೋಟಿ ರೂ. ಹಣದ ವಹಿವಾಟು ಮಾಡಿದ್ದಾರೆ ಎಂದು ಇಡಿ ಆರೋಪಿಸಿತ್ತು. CCH 1 ಇಡಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದ ಐಶ್ವರ್ಯಗೆ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ: ಇಡಿ ತನಿಖೆಗೆ ನನ್ನ ಸಹೋದರ ಡಿ.ಕೆ ಸುರೇಶ್ ಸಹಕಾರ ಕೊಡ್ತಾರೆ: ಡಿಕೆಶಿ

    ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯ ಕೆಲವೊಂದು ಷರತ್ತು ವಿಧಿಸಿದೆ. 5 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ಮತ್ತು ಮನೆಯ ವಿಳಾಸ ಬದಲು ಮಾಡದಂತೆ ಸೂಚನೆ ನೀಡಲಾಗಿದೆ.

    ಐಶ್ವರ್ಯಗೌಡ ಪರವಾಗಿ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಂಡಿಸಿದ್ದರು. ಇದನ್ನೂ ಓದಿ: ಗುರುವಾರ ವಿಚಾರಣೆಗೆ ಇಡಿ ಸಮನ್ಸ್ ಬಂದಿದೆ: ಡಿ.ಕೆ ಸುರೇಶ್