Tag: Aishwarya Gowda Case

  • ಮಾಜಿ ಸಂಸದ ಡಿಕೆ ಸುರೇಶ್‌ಗೆ ಇಡಿ ಡ್ರಿಲ್ – ಜು.8ಕ್ಕೆ ಮತ್ತೆ ಬುಲಾವ್

    ಮಾಜಿ ಸಂಸದ ಡಿಕೆ ಸುರೇಶ್‌ಗೆ ಇಡಿ ಡ್ರಿಲ್ – ಜು.8ಕ್ಕೆ ಮತ್ತೆ ಬುಲಾವ್

    – ಅಕ್ರಮ ಹಣ ವರ್ಗಾವಣೆಯಲ್ಲಿ ಇಡೀ ದಿನ ವಿಚಾರಣೆ

    ಬೆಂಗಳೂರು: ಐಶ್ವರ್ಯ ಗೌಡ ವಂಚನೆ (Aishwarya Gowda Case) ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಡೀ ದಿನ ಮಾಜಿ ಸಂಸದ ಡಿಕೆ ಸುರೇಶ್ (DK Suresh) ವಿಚಾರಣೆ ನಡೆಸಿದ್ದಾರೆ.

    ಅಕ್ರಮ ಹಣ ವರ್ಗಾವಣೆಯಲ್ಲಿ ಅರೆಸ್ಟ್ ಆಗಿದ್ದ ಐಶ್ವರ್ಯಗೌಡ ವಿಚಾರಣೆಯಲ್ಲಿ ಡಿಕೆ ಸುರೇಶ್ ಜೊತೆಗಿನ ವ್ಯವಹಾರದ ಬಗ್ಗೆ ಬಾಯ್ಬಿಟ್ಟಿದ್ದರು. ಇದೇ ಪ್ರಕರಣದಲ್ಲಿ ಇಂದು ಡಿಕೆ ಸುರೇಶ್ ಇ.ಡಿ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 6:30 ಗಂಟೆ ಇ.ಡಿ ವಿಚಾರಣೆ ಬಳಿಕ ಮಾತನಾಡಿದ ಡಿಕೆ ಸುರೇಶ್, ಇ.ಡಿಯವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಜೂನ್ 8ರಂದು ಹಾಜರಾಗಲು ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

    ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಐಶ್ವರ್ಯ ಪರಿಚಯ ಇದೆ ಅಂತ ಹೇಳಿ ಕೆಲವರು ಹಣ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡವರು ಕೂಡ ವಿಚಾರಣೆ ವೇಳೆ ನನ್ನ ಹೆಸರು ಹೇಳಿ ಹಣ ಪಡೆದ ಬಗ್ಗೆ ದಾಖಲೆ ಕೊಟ್ಟಿದ್ದರು. ಈ ಬಗ್ಗೆ ಎಲ್ಲಾ ಪ್ರಶ್ನೆಗಳು ಕೇಳಿದರು. ಅದಕ್ಕೆ ತಡ ಆಗಿದೆ. ಆಕೆಗೂ ನನಗೂ ಪರಿಚಯ ಇರಲಿಲ್ಲ. ಕನ್ನಡ ರಾಜ್ಯೋತ್ಸವ ಸೇರಿದಂತೆ ಕಾರ್ಯಕ್ರಮಕ್ಕೆ ಕರೆದಿದ್ದರು, ಹೋಗಿದ್ದೆ. ಯಾವುದೇ ವ್ಯವಹಾರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ

  • ಕಾಂಗ್ರೆಸ್ ಸರ್ಕಾರದಲ್ಲಿ ಯಾರನ್ನು ಯಾವಾಗ ಏನ್ ಬೇಕಾದ್ರು ಮಾಡ್ತಾರೆ: ಹೆಚ್‌ಡಿಕೆ

    ಕಾಂಗ್ರೆಸ್ ಸರ್ಕಾರದಲ್ಲಿ ಯಾರನ್ನು ಯಾವಾಗ ಏನ್ ಬೇಕಾದ್ರು ಮಾಡ್ತಾರೆ: ಹೆಚ್‌ಡಿಕೆ

    ಬೆಂಗಳೂರು: ಐಶ್ವರ್ಯ ಗೌಡ ಕೇಸ್‌ನಲ್ಲಿ (Aishwarya Gowda Case) ನಿಖಿಲ್, ಅನಿತಾ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಆಗುತ್ತಿರುವ ವಿಚಾರಕ್ಕೆ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಚಿನ್ನ, ಬೆಳ್ಳಿ ಕೇಸ್ ನಡೆಯುತ್ತಿದೆ. ನಿಖಿಲ್, ಅನಿತಾ ಕುಮಾರಸ್ವಾಮಿ ಪರಿಚಯ ಅಂತ ಹೇಳಿ ನಿನ್ನೆ ಮೊನ್ನೆಯಿಂದ ಸುದ್ದಿ ಬರುತ್ತಿದೆ. ಐಶ್ವರ್ಯ ಗೌಡ ನಿಖಿಲ್, ಅನಿತಾ ಅವರನ್ನ ಯಾವಾಗ ಭೇಟಿ ಮಾಡಿದ್ರು? ಈ ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ತನಿಖೆ ನಡೆಯುತ್ತಿದೆ ಅನ್ನೋದು ಗೊತ್ತಿದೆ. ಮಾಧ್ಯಮಗಳಲ್ಲಿ ಬಂದ ಮೇಲೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಕೇಸ್ ಹಿನ್ನೆಲೆ ತಿಳಿದಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನ; 2 ಸಾವು

    2016ರಲ್ಲಿ ದೂರು ಕೊಟ್ಟಿರೋದು, ವ್ಯವಹಾರ ನಡೆದಿರೋದು. ನಿಖಿಲ್, ಅನಿತಾ ಹೆಸರನ್ನು ಇದರಲ್ಲಿ ಎಳೆದಿದ್ದಾರೆ ಅಂತ ಮಾಹಿತಿ ತರಿಸಿದ್ದೇನೆ. ಈ ಸರ್ಕಾರ ಯಾರನ್ನು, ಯಾವಾಗ, ಏನು ಬೇಕಾದ್ರು ಮಾಡುತ್ತಾರೆ. ಸರ್ಕಾರದಲ್ಲಿ ಅಧಿಕಾರ ವರ್ಗವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. 2016ರಲ್ಲಿ ಪ್ರಕರಣ ಆಗಿರೋದು. 2018ರಲ್ಲಿ ನಾನೇ ಸಿಎಂ ಇದ್ದೆ. ಆಗ ಯಾಕೆ ನನ್ನ ಬಳಿ ಅನ್ಯಾಯ ಅಂತ ಇವರು ಬರಲಿಲ್ಲ ದೂರು ಕೊಡಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟವಾದ ಮಂಜು – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

    ನಿಖಿಲ್, ಅನಿತಾ ಕುಮಾರಸ್ವಾಮಿ ಅವರ ಮುಖಗಳನ್ನೇ ನೊಡಿಲ್ಲ. ಹೇಗೆ ಅವರ ಪರಿಚಯ ಅಂತ ಸುದ್ದಿ ಮಾಡಿಸುತ್ತಿದ್ದೀರಿ? ಇದರ ಹಿಂದೆ ಯಾರಿದ್ದಾರೆ? ನಿಖಿಲ್, ಅನಿತಾ ಕುಮಾರಸ್ವಾಮಿಯವರನ್ನ ಯಾಕೆ ಈ ಪ್ರಕರಣದಲ್ಲಿ ತಂದ್ರಿ? ಇದನ್ನ ಸರ್ಕಾರ ಅಂತ ಕರೆಯುತ್ತೀರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ