Tag: Aishwarya Gowda

  • ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

    ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

    ಬೆಂಗಳೂರು: ಡಿಕೆ ಬ್ರದರ್ಸ್ ಹೆಸರಿನಲ್ಲಿ ಕೋಟಿ ಕೋಟಿ ರೂ. ವಂಚನೆ ಮಾಡಿದ ಐಶ್ವರ್ಯ ಗೌಡ (Aishwarya Gowda) ಪ್ರಕರಣ ಸಂಬಂಧ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಡಿ.ಕೆ.ಸುರೇಶ್ (D K Suresh) ಹಾಗೂ ಡಿ.ಕೆ.ಶಿವಕುಮಾರ್ (D K Shivakumar) ಅವರು ನನ್ನ ಅಣ್ಣಂದಿರು, ನಾನು ಅವರ ತಂಗಿ ಅಂತಾ ಹೇಳಿಕೊಂಡು ವಂಚನೆ ಮಾಡಿರುವ ಐಶ್ವರ್ಯ ಗೌಡ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ತನಿಖೆ ವೇಳೆ ಬಂಗಾರಿ ಗೌಡ ಸಿನಿಮಾ ನಿರ್ಮಾಣ ಮಾಡೋದಕ್ಕೆ ತಯಾರಿ ನಡೆಸಿದ್ದಳು ಅನ್ನೋ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಕಳ್ಳ ಸಂಬಂಧ ಆರೋಪ – ಯುವಕನನ್ನ ಥಳಿಸಿ ಚಿಕ್ಕಮ್ಮನೊಂದಿಗೆ ಮದುವೆ ಮಾಡಿಸಿದ ಗ್ಯಾಂಗ್‌

    ಐಶ್ವರ್ಯ ಗೌಡ, ಎಸ್‌ಎಲ್‌ವಿ ಪ್ರೊಡಕ್ಷನ್ಸ್ ಅನ್ನೋ ಸಂಸ್ಥೆಯನ್ನ ನೊಂದಾಯಿಸಿ ಆ ಮೂಲಕ ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದಳು ಎಂಬ ವಿಚಾರ ಬಯಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ಫಿಲ್ಮ್ ಚೇಂಬರ್‌ಗೆ (Film Chamber) ಸಿಐಡಿ ಡಿವೈಎಸ್‌ಪಿ ಅಂಜುಮಾಲ ನಾಯಕ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿಯಲ್ಲಿ ಭಯಾನಕ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್‌ – ಪ್ರಮುಖ ಆರೋಪಿ ಅರೆಸ್ಟ್‌

    ಇನ್ನು ಈ ವಿಚಾರವಾಗಿ ವಾಣಿಜ್ಯ ಮಂಡಳಿಯಿಂದಲೂ ಪ್ರತಿಕ್ರಿಯೆ ಸಿಕ್ಕಿದ್ದು, ಈ ಹೆಸರಿನಲ್ಲಿ ಯಾವ ಪ್ರೊಡಕ್ಷನ್ ರಿಜಿಸ್ಟರ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಇಡಿಯಿಂದ ಎರಡನೇ ಬಾರಿ ವಿಚಾರಣೆ – ಆಸ್ತಿಯ ಲೆಕ್ಕ ಕೊಟ್ಟ ಡಿ.ಕೆ ಸುರೇಶ್

    ಇಡಿಯಿಂದ ಎರಡನೇ ಬಾರಿ ವಿಚಾರಣೆ – ಆಸ್ತಿಯ ಲೆಕ್ಕ ಕೊಟ್ಟ ಡಿ.ಕೆ ಸುರೇಶ್

    ಬೆಂಗಳೂರು: ಐಶ್ವರ್ಯ ಗೌಡಳಿಂದ (Aishwarya Gowda) ವಂಚನೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಂಸದ ಡಿ.ಕೆ ಸುರೇಶ್‌ರನ್ನ (D K Suresh) ಎರಡನೇ ಬಾರಿಗೆ ವಿಚಾರಣೆ ನಡೆಸಿದ್ದಾರೆ.

    10 ದಿನಗಳ ಹಿಂದೆ ವಿಚಾರಣೆ ಎದರುಸಿದ ಬಳಿಕ ಜುಲೈ 8ಕ್ಕೆ ಹೆಚ್ಚುವರಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಮಂಗಳವಾರ 11 ಗಂಟೆ ವೇಳೆಗೆ ವಿಚಾರಣೆಗೆ ಹಾಜರಾಗಿ ಮಧ್ಯಾಹ್ನ 2 ಗಂಟೆವರೆಗೂ ವಿಚಾರಣೆ ಎದುರಿಸಿದರು. ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

    ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾಗಿದ್ದವರು ಏನು ಮಾಹಿತಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ. ನನ್ನನ್ನು ಕರೆದಿದ್ದಾರೆ ಅದಕ್ಕೆ ಬಂದು ಹೇಳಿಕೆ ಕೊಟ್ಟಿದ್ದೇನೆ. ಅವರು ಕೇಳಿದ ದಾಖಲೆ ನೀಡಿದ್ದೇನೆ. ವೈಯಕ್ತಿಕ ಆಸ್ತಿ ಹಾಗೂ ಅದರ ದಾಖಲೆಗಳನ್ನು ಕೇಳಿದರು ಅದನ್ನೂ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಶೂ ಒಳಗೆ, ಮನೆ ಎದುರು ಕೀ ಮುಚ್ಚಿಡುವವರೇ ಹುಷಾರ್ – 65 ಲಕ್ಷ ರೂ. ಕನ್ನ ಹಾಕಿದ್ದವ ಅರೆಸ್ಟ್

    ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಅದು ಹೇಗೆ ಈ ಕೇಸ್‌ಗೆ ಲಿಂಕ್ ಮಾಡಿದ್ರೋ ಗೊತ್ತಿಲ್ಲ. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ. ಅವರು ಪರಿಶೀಲನೆ ನಡೆಸಲಿ. ಮತ್ತೆ ವಿಚಾರಣೆಗೆ ಬನ್ನಿ ಎಂದು ಕರೆದಿಲ್ಲ. ಐಟಿಗೂ, ಲೋಕಾಯುಕ್ತಕ್ಕೂ ಸಹ ಮಾಹಿತಿ ಮತ್ತು ದಾಖಲಾತಿ ಕೊಟ್ಟಿದ್ದೇವೆ. ಅದೇ ರೀತಿ ಇಲ್ಲಿಯೂ ಕೊಟ್ಟಿದ್ದು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಹೇಳಿದರು.

  • 2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

    2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

    ಬೆಂಗಳೂರು: ಐಶ್ವರ್ಯಗೌಡ ವಂಚನೆ ಪ್ರಕರಣದಲ್ಲಿ (Fraud Case) ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ (DK Suresh) ಇಂದು ಇಡಿ ತನಿಖೆ ಎದುರಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸುದೀರ್ಘ 7 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ. ಜುಲೈ 8ಕ್ಕೆ ಮತ್ತೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.

    ಈ ನಡುವೆ ಐಶ್ವರ್ಯಗೌಡಗೆ (Aishwarya Gowda) ಸೇರಿದ್ದ 3.98 ಕೋಟಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಇದರಲ್ಲಿ 2.01 ಕೋಟಿ ಮೌಲ್ಯದ ಫ್ಲ್ಯಾಟ್, 1.97 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಸೇರಿದೆ. ಆಸ್ತಿ ಸೀಜ್ ಆಗಿರೊ ಬಗ್ಗೆ ಇಡಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

    ಐಶ್ವರ್ಯಗೌಡಳ ಮೇಲೆ ರಾಜ್ಯದಲ್ಲಿ ವಂಚನೆ ಸಂಬಂಧ ಹಲವು ಎಫ್‌ಐಆರ್‌ಗಳಾಗಿದ್ವು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇದೀಗ ಇಡಿ ಐಶ್ವರ್ಯಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

    ಇನ್ನೂ ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಸುರೇಶ್, ಇಡಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಜುಲೈ 8ಕ್ಕೆ ವಿಚಾರಣೆಗೆ ಕರೆದಿದ್ದಾರೆ. ಸಹಕಾರ ಕೊಡ್ತೇನೆ ಅಂದಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

  • ನಾವು, ನಮ್ಮ ಕುಟುಂಬ ಇ.ಡಿ ಎದುರಿಸಲು ರೆಡಿ ಇದ್ದೇವೆ: ಡಿಕೆಶಿ

    ನಾವು, ನಮ್ಮ ಕುಟುಂಬ ಇ.ಡಿ ಎದುರಿಸಲು ರೆಡಿ ಇದ್ದೇವೆ: ಡಿಕೆಶಿ

    ಬೆಂಗಳೂರು: ಇ.ಡಿ (ED) ವಿಚಾರಣೆ ಎದುರಿಸಲು ನಮ್ಮ ಕುಟುಂಬ ರೆಡಿ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಡಿಕೆ ಸುರೇಶ್ (DK Suresh) ಇ.ಡಿ ತನಿಖೆಗೆ ಹೋಗಿರುವ ವಿಚಾರದ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು, ನಮ್ಮ ಕುಟುಂಬ ಇ.ಡಿ ಫೇಸ್ ಮಾಡೋಕೆ ರೆಡಿ ಇದ್ದೇವೆ. ಇಡಿ ಕೇಸ್ ಆಯ್ತು, ಯಾರೂ ನಮ್ಮ ರಕ್ಷಣೆಗೆ ಬಂದಿಲ್ಲ. ಕೊನೆಗೆ ನ್ಯಾಯಾಲಯ ರಕ್ಷಣೆಗೆ ಬಂದಿದ್ದು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ. ಜನಪ್ರತಿನಿಧಿಗಳನ್ನ ಯಾರು ಬೇಕಿದ್ರು ಭೇಟಿ ಮಾಡಬಹುದು. ಅದನ್ನ ಯಾಕೆ ನೀವು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದರು. ಇದನ್ನೂ ಓದಿ: `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    ಗ್ರಾಮ ಸಭೆಯಲ್ಲಿ ಕಮಿಷನ್ ಕೊಟ್ಟು ಮನೆ ಪಡೆಯುವ ಬಿಆರ್ ಪಾಟೀಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರ ನಾನು ಏನು ಹೇಳಬೇಕೋ ಹೇಳಿದ್ದೀನಿ. ಸಿಎಂ ಮತ್ತು ವಸತಿ ಸಚಿವರು ಅದಕ್ಕೆ ಉತ್ತರ ಕೊಡುತ್ತಾರೆ. ಶಾಸಕರ ಗಮನಕ್ಕೆ ಬರದೇ ಅನುದಾನ ತೆಗೆದುಕೊಂಡು ಹೋಗುವ, ರಾಜೀನಾಮೆ ಕೊಡುವ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

  • ಬಹುಕೋಟಿ ವಂಚನೆ ಕೇಸ್‌ – ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು

    ಬಹುಕೋಟಿ ವಂಚನೆ ಕೇಸ್‌ – ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು

    ಬೆಂಗಳೂರು: ಐಶ್ವರ್ಯಗೌಡ (Aishwarya Gowda) ಬಹುಕೋಟಿ ವಂಚನೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ.

    ಎರಡು ದಿನಗಳ ಹಿಂದಷ್ಟೇ ಮಾಜಿ ಸಂಸದ ಡಿ.ಕೆ ಸುರೇಶ್‌ಗೆ (DK Suresh) ಇಡಿ ಸಮನ್ಸ್ ನೀಡಿದ್ದು, ಗುರುವಾರ (ಇಂದು) ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಈಗ ತ‌ನಿಖೆ ಮತ್ತೊಂದು ಮಜಲಿಗೆ ಹೋಗಿದೆ. ಇಡಿ (ED) ಅಧಿಕಾರಿಗಳು ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಶುರು ಮಾಡಿದೆ.

    ಐಶ್ವರ್ಯಗೌಡ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದು, ಅಕ್ರಮ ಹಣ ವರ್ಗಾವಣೆಯಿಂದ ಎಷ್ಟು ಹಣ ಸಂಪಾದನೆ ಮಾಡಿದ್ದಾಳೆ? ಎಲ್ಲೆಲ್ಲಿಗೆ ಹಣ ವರ್ಗಾವಣೆ ಮಾಡಲಾಗಿದೆ? ಯಾರ‍್ಯಾರ ಸಂಪರ್ಕ ಮಾಡಿದ್ದಾಳೆ? ಅನ್ನೋದನ್ನ ಬಯಲಿಗೆಳೆಯಲು ಇಡಿ ತನಿಖೆ ಮುಂದುವರಿಸಿದೆ. ಡಿ.ಕೆ ಸುರೇಶ್‌ ಅವರಿಗೂ ಆಸ್ತಿ ಮುಟ್ಟುಗೋಲು ಬಿಸಿ ತಟ್ಟುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

    ಈಗ ಡಿಕೆಸು ಸರದಿ
    ಐಶ್ವರ್ಯಗೌಡ ಬಹುಕೋಟಿ ಹಗರಣದಲ್ಲಿ ಈಗ ಮಾಜಿ ಸಂಸದ ಡಿಕೆ ಸುರೇಶ್ ಸರದಿ. ಐಶ್ವರ್ಯಗೌಡ ಪ್ರತಿ ಕಾರ್ಯಕ್ರಮದಲ್ಲಿ ನಾನು ಡಿಕೆ ಸುರೇಶ್ ಸಹೋದರಿ ಅಂತ ಹೇಳಿಕೊಂಡು ಓಡಾಡ್ತಾ ಇದ್ರು. ಇಡಿ ಐಶ್ವರ್ಯಳನ್ನ ಬಂಧಿಸಿದ ಬಳಿಕ ದಾಖಲಾತಿ, ಹಣದ ವರ್ಗಾವಣೆ ಎಲ್ಲವನ್ನೂ ಪರಿಶೀಲಿಸಿ ಒಂದಷ್ಟು ಬಲವಾದ ಸಾಕ್ಷ್ಯಗಳನ್ನು ಇಟ್ಟುಕೊಂಡು ಡಿಕೆಸುಗೆ ಸಮನ್ಸ್ ನೀಡಿದೆ.

    ಮೂಲಗಳ ಪ್ರಕಾರ, ಒಂದೆರಡು ವರ್ಷದಲ್ಲಿ ಐಶ್ವರ್ಯ ಮತ್ತು ಡಿಕೆ ಸುರೇಶ್ ನಡುವೆ ಹಣಕಾಸಿನ ವಹಿವಾಟು ನಡೆದಿದೆ ಅನ್ನೋದು ಇಡಿ ವಾದ. ಹೀಗಾಗಿಯೇ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.

  • ಐಶ್ವರ್ಯ ಗೌಡ ವಂಚನೆ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

    ಐಶ್ವರ್ಯ ಗೌಡ ವಂಚನೆ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ಐಶ್ವರ್ಯ ಗೌಡ (Aishwarya Gowda) ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಐಶ್ವರ್ಯ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ರಾಜರಾಜೇಶ್ವರಿ ನಗರ, ಚಂದ್ರಾಲೇಔಟ್, ಮಂಡ್ಯ ಸೇರಿ ಹಲವಾರು ಕಡೆ ಕೇಸ್ ದಾಖಲಾಗಿತ್ತು. ಈಗ ಐಶ್ವರ್ಯ ಗೌಡ ವಂಚನೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಸಿಡಿಆರ್ ಪ್ರಕರಣ ಹೊರತು ಪಡಿಸಿ ಉಳಿದ ಪ್ರಕರಣದ ತನಿಖೆ ನಡೆಸಲು ಸಿಐಡಿಗೆ ವರ್ಗಾಣೆ ಮಾಡಲಾಗಿದೆ. ಇದನ್ನೂ ಓದಿ: ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ಕೇಸ್ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಬ್ಯಾಟರಾಯನಪುರ ಉಪವಿಭಾಗದ ಪೊಲೀಸರು ಕೇಸ್‌ನ ತನಿಖೆ ನಡೆಸಿದ್ದರು. ಇದೀಗ ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಮತ್ತೊಂದು ಕಡೆ ಇಡಿಯಿಂದ ಕೂಡ ವಂಚನೆ ಕೇಸ್ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಐಶ್ವರ್ಯ ಗೌಡಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಆದಾದ ಬಳಿಕ ಮಾಜಿ ಸಂಸದ ಡಿ.ಕೆ ಸುರೇಶ್ ಕೂಡ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಇಡಿ ನೋಟಿಸ್ ಕೊಟ್ಟಿದ್ದು, ತನಿಖೆ ಮುಂದುವರಿಸಿದೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

  • ಗುರುವಾರ ವಿಚಾರಣೆಗೆ ಇಡಿ ಸಮನ್ಸ್ ಬಂದಿದೆ: ಡಿ.ಕೆ ಸುರೇಶ್

    ಗುರುವಾರ ವಿಚಾರಣೆಗೆ ಇಡಿ ಸಮನ್ಸ್ ಬಂದಿದೆ: ಡಿ.ಕೆ ಸುರೇಶ್

    ಬೆಂಗಳೂರು: ಐಶ್ವರ್ಯ ಗೌಡ (Aishwarya Gowda) ಪ್ರಕರಣದಲ್ಲಿ ಇಡಿ ಸಮನ್ಸ್ ಬಂದಿದ್ದು, ಗುರುವಾರ ವಿಚಾರಣೆಗೆ ಬರಲು ಹೇಳಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ (DK Suresh) ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮಧ್ಯಾಹ್ನ 12:30ಕ್ಕೆ ಇಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ. ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ ಅವರು ಸಮನ್ಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಶ್ವರ್ಯಗೌಡ ವಂಚನೆ ಕೇಸ್ – ಡಿ.ಕೆ.ಸುರೇಶ್‌ಗೆ ED ಸಮನ್ಸ್

    ಸಮನ್ಸ್‌ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ ದಾಖಲಾತಿ ನೋಡಿದಾಗ ಈ ಪ್ರಕರಣ ಅಂತ ಗೊತ್ತಾಯ್ತು. ಗುರುವಾರ ವಿಚಾರಣೆಗೆ ಬನ್ನಿ ಅಂದಿದ್ದಾರೆ. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. ಅದಕ್ಕೆ ಸೋಮವಾರ ಬರುತ್ತೇನೆ ಎಂದು ಮೌಖಿಕವಾಗಿ ತಿಳಿಸಿದ್ದೇನೆ. ಈಗ ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದ್ವೇಷ ಭಾಷಣದ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಖಾದರ್ ಅಸಮಾಧಾನ – ಗೃಹ ಸಚಿವರಿಗೆ ಪತ್ರ

    ನಾನು ಯಾವುದೇ ಅಕೌಂಟ್ ಟ್ರಾನ್ಸಾಕ್ಷನ್ ನಡೆಸಿರಲಿಲ್ಲ. ಅವರು ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅನ್ನೋ ಹೆಸರಲ್ಲಿ ಹೀಗೆಲ್ಲ ಮಾಡಿದ್ದಾರೆ ಎಂದು ಗೊತ್ತಾದಾಗ ನಾನೇ ದೂರು ಕೊಟ್ಟಿದ್ದೇನೆ. ಇಡಿಯವರು 7 ರಿಂದ 8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಅದನ್ನ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

  • ಐಶ್ವರ್ಯಗೌಡ ವಂಚನೆ ಕೇಸ್ – ಡಿ.ಕೆ.ಸುರೇಶ್‌ಗೆ ED ಸಮನ್ಸ್

    ಐಶ್ವರ್ಯಗೌಡ ವಂಚನೆ ಕೇಸ್ – ಡಿ.ಕೆ.ಸುರೇಶ್‌ಗೆ ED ಸಮನ್ಸ್

    ಬೆಂಗಳೂರು: ಐಶ್ವರ್ಯಗೌಡ (Aishwarya Gowda) ವಂಚನೆ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ (D.K.Suresh) ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ.

    ಐಶ್ವರ್ಯಗೌಡ ಕೇಸ್‌ನಲ್ಲಿ ಈಗಾಗಲೇ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್‌ಗೆ ಇ.ಡಿ ಶಾಕ್ ಕೊಟ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ RCB ಸಂಭ್ರಮ ಕಾರ್ಯಕ್ರಮ ಮಾಡಿದ್ರಾ?: ಸಿ.ಟಿ.ರವಿ ವಾಗ್ದಾಳಿ

    ಈ ಕುರಿತು ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಮಧ್ಯಾಹ್ನ 12-30 ಗಂಟೆಗೆ ಇ.ಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ. ಅವರು ಸಮನ್ಸ್ ಕೊಟ್ಟಿದ್ದಾರೆ. ಸಮನ್ಸ್ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ, ದಾಖಲಾತಿ ನೋಡಿದಾಗ ಈ ಪ್ರಕರಣ ಅಂತ ಗೊತ್ತಾಯ್ತು ಎಂದು ತಿಳಿಸಿದ್ದಾರೆ.

    ಗುರುವಾರ ಬನ್ನಿ ಅಂದಿದ್ದಾರೆ. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. ಅದಕ್ಕೆ ಸೋಮವಾರ ಬರುತ್ತೇನೆ ಎಂದು ಮೌಕಿಕವಾಗಿ ತಿಳಿಸಿದ್ದೇನೆ. ಈಗ ಇ-ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ

    ನಾನು ಯಾವುದೇ ವ್ಯವಹಾರ ನಡೆಸಿಲ್ಲ. ಅವರು (ಐಶ್ವರ್ಯಗೌಡ) ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅಂತಾ ಹೇಳಿಕೊಂಡು ಒಡಾಡುವುದರ ಬಗ್ಗೆ ನಾನೇ ದೂರು ಕೊಟ್ಟಿದ್ದೇನೆ. ಇ.ಡಿಯವರು 7-8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಇ.ಡಿ ವಿಚಾರಣೆಗೆ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

  • ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

    ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

    ಬೆಂಗಳೂರು/ಮಂಡ್ಯ: ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡ ಮನೆ ಮೇಲೆ ಎರಡು ದಿನಗಳ ಹಿಂದೆ ಇಡಿ ದಾಳಿ ನಡೆಸಿತ್ತು. ದಾಳಿ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿರುವುದಾಗಿ ಇಡಿ ಪ್ರಕಟಣೆ ಮೂಲಕ ತಿಳಿಸಿದೆ.

    ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಸಹೋದರಿ ಎಂದು ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಐಶ್ವರ್ಯಗೌಡ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ತನಿಖೆಯ ಮುಂದುವರೆದ ಭಾಗವಾಗಿ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಮನೆ, ಕಚೇರಿ, ಶಾಸಕ ವಿನಯ್ ಕುಲಕರ್ಣಿ ಮನೆ ಸೇರಿ ಒಟ್ಟು 14 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದನ್ನೂ ಓದಿ: ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಯಕ್ಷಗಾನ ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

    ಗುರುವಾರ ಬೆಳಗ್ಗೆ ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಕಿರುಗಾವಲಿನಲ್ಲಿರುವ ಐಶ್ವರ್ಯಗೌಡ ನಿವಾಸಕ್ಕೆ ಐವರು ಇಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿತ್ತು. ಜೊತೆಗೆ ಭದ್ರತೆಗೆ ಸಿಆರ್‌ಪಿಎಫ್ (CRPF) ಯೋಧರನ್ನ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದರು. ಇಡಿ ದಾಳಿಯ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿದ್ದು, ಅಕ್ರಮ ಹಣ ವರ್ಗಾವಣೆ ಸಂಬಂಧ ಒಂದಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿರುವ ಬಗ್ಗೆ ಇಡಿ ಸ್ಪಷ್ಟಪಡಿಸಿದೆ.

    ದಾಳಿ ಬಳಿಕ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯಗೌಡಳನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. 14 ದಿನ ಕಸ್ಟಡಿಗೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ

  • `ಬಂಗಾರಿ’ಗೌಡಗೆ ED ಶಾಕ್: ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್

    `ಬಂಗಾರಿ’ಗೌಡಗೆ ED ಶಾಕ್: ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್

    ಮಂಡ್ಯ: ಚಿನ್ನ ಸೇರಿದಂತೆ ಹಲವು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಐಶ್ವರ್ಯ ಗೌಡಗೆ (Aishwarya Gowda) ಇದೀಗ ಇಡಿ ಶಾಕ್ (ED Raid) ನೀಡಿದೆ. ಮಂಡ್ಯದ (Mandya) ನಿವಾಸಕ್ಕೆ ಬೆಳ್ಳಂಬೆಳಗ್ಗೆ ಎಂಟ್ರಿಕೊಟ್ಟ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಹಲವು ಮಹತ್ವದ ದಾಖಲೆ ವಸಪಡಿಸಿಕೊಂಡಿದ್ದಾರೆ.

    ಐಶ್ವರ್ಯಗೌಡ ಹೆಸರು ಕೆಲದಿನಗಳಿಂದ ರಾಜ್ಯದ್ಯಂತ ಬಾರಿ ಸದ್ದು ಮಾಡುತ್ತಿದೆ. ಚಿನ್ನ ವಂಚನೆ ಪ್ರಕರಣದಿಂದ ಹೊರ ಬಂದ ಈ ಹೆಸರು ರಾಜಕಾರಣಿಗಳು ಹಾಗೂ ಸಿನಿಮಾ ನಟರ ಬುಡವನ್ನ ಅಲ್ಲಾಡಿಸಿತ್ತು. ಅದಾದ ಬಳಿಕ ಈಕೆಯ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇದೇ ವಿಚಾರ ಇಟ್ಟುಕೊಂಡು ಇದೀಗ ಇಡಿ ಕೂಡ ಈಕೆಯ ಬೆನ್ನು ಬಿದ್ದಿದೆ.ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

    ಇಂದು ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲಿನಲ್ಲಿರುವ ಐಶ್ವರ್ಯಗೌಡ ನಿವಾಸಕ್ಕೆ ಐವರು ಇಡಿ ಅಧಿಕಾರಿಗಳ ತಂಡ ಎರಡು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಭದ್ರತೆಗೆ ಸಿಆರ್‌ಪಿಎಫ್ ಯೋಧರನ್ನ ಕರೆತಂದು ಇಡೀ ಮನೆ ತಲಾಶ್ ಮಾಡಿದ್ದಾರೆ.

    ಚಿನ್ನ ವಂಚನೆ, ಮನಿ ಡಬ್ಲಿಂಗ್, ಸೈಟ್ ವಂಚನೆ ಸೇರಿ ಐಶ್ವರ್ಯಗೌಡ ಮೇಲೆ ಹಲವು ಆರೋಪಗಳಿವೆ. ಈ ಎಲ್ಲಾ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುವ ಕಾರಣ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಷ್ಟೇ ಅಲ್ಲದೆ ಈಕೆಗೆ ಹಲವು ರಾಜಕಾರಣಿ ಹಾಗೂ ಸಿನಿಮಾ ನಟರ ಸಂಪರ್ಕ ಇದೆ ಎನ್ನುವ ಆರೋಪ ಇರುವ ಕಾರಣ, ಐಶ್ವರ್ಯ ಗೌಡಳ ವ್ಯವಹಾರದ ಇಂಚಿಂಚು ಮಾಹಿತಿಯನ್ನು ಇಡಿ ಅಧಿಕಾರಿಗಳು ಕಲೆಯಾಕಿದ್ದು, ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

    ಸದ್ಯ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ