Tag: aishu

  • ಐಶು ನಯಾ ಫೋಟೋಶೂಟ್: ಅಮ್ಮು ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ

    ಐಶು ನಯಾ ಫೋಟೋಶೂಟ್: ಅಮ್ಮು ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ

    ಸ್ಯಾಂಡಲ್‌ವುಡ್‌ನ ಮುದ್ದು ಬೆಡಗಿ ಅಮೂಲ್ಯ ಮದುವೆ ಆದ್ಮೇಲೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ನಟಿ ಅಮೂಲ್ಯ ಒಂದಲ್ಲಾ ಒಂದು ವಿಚಾರದಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಅವಳಿ ಮಕ್ಕಳ ತಾಯಿಯಾಗಿರುವ ನಟಿ, ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಐಶು ಹೊಸ ಲುಕ್ ನೋಡಿ, ಫ್ಯಾನ್ಸ್ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಆಗಿ ಅಂತಿದ್ದಾರೆ.

    `ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಾಯಕಿಯಾಗಿ ಸಿನಿಪ್ರೇಕ್ಷಕರ ಗಮನ ಸೆಳೆದ ನಟಿ ಅಮೂಲ್ಯ, ನಂತರ ಕನ್ನಡ ಸಾಕಷ್ಟು ಸಿನಿಮಾಗಳಿಗೆ ಸೂಪರ್ ಸ್ಟಾರ್‌ಗಳ ಜತೆ ತೆರೆ ಹಂಚಿಕೊಂಡರು. ಬಳಿಕ ಗುರು ಹಿರಿಯರ ಸಮ್ಮುಖದಲ್ಲಿ ಜಗದೀಶ್ ಚಂದ್ರ ಜತೆ ಹಸೆಮಣೆ ಏರಿದ್ದರು. ಈಗ ಅವಳಿ ಮಕ್ಕಳ ತಾಯಿಯಾಗಿ ಅವರ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಮತ್ತೆ ಬೋಲ್ಡ್ ಅವತಾರದಲ್ಲಿ ಮಿಂಚಿದ ಪೂಜಾ ಹೆಗ್ಡೆ

    View this post on Instagram

     

    A post shared by Amulya (@nimmaamulya)

    ಇದೀಗ ಅಮೂಲ್ಯ ಚೆಂದದ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಗ್ರೀನ್ ಕಲರ್ ಗೌನ್ ತೊಟ್ಟು ಇನ್ನಷ್ಟು ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಮ್ಮು ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಂತೂರ್ ಮಮ್ಮಿ ಅಂತಾ ಕಮೆಂಟ್ ಹಾಕಿದ್ದಾರೆ. ನಟಿಯ ಹೊಸ ಲುಕ್ ನೋಡಿ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಆಗಿ ಸಿನಿಮಾದಲ್ಲಿ ನಟಿಸಬೇಕು ಅಂತಾ ಫ್ಯಾನ್ಸ್ ಕೇಳಿಕೊಂಡಿದ್ದಾರೆ.

    Live Tv