Tag: Airstrike

  • ಏರ್ ಸ್ಟ್ರೈಕ್‍ನಲ್ಲಿ ಹೆಚ್ಚಿನ ಹಾನಿ ಆಗಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ

    ಏರ್ ಸ್ಟ್ರೈಕ್‍ನಲ್ಲಿ ಹೆಚ್ಚಿನ ಹಾನಿ ಆಗಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ

    ನವದೆಹಲಿ: ಬಾಲಕೋಟ್‍ನಲ್ಲಿ ನಡೆದ ವಾಯುದಾಳಿಯಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಎಸ್.ಎಸ್ ಅಹ್ಲುವಾಲಿಯಾ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಕೇಂದ್ರ ಸರ್ಕಾರ ವಾಯುದಾಳಿಯಲ್ಲಿ ಯಾವುದೇ ಸಾವನ್ನು ಬಯಸಲಿಲ್ಲ. ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿ ಉಗ್ರರ ನೆಲಗಳನ್ನು ಧ್ವಂಸ ಮಾಡಲು ನಾವು ಸಮರ್ಥರಿದ್ದಾರೆ ಎಂದು ತೋರಿಸಿಕೊಡಲು ಏರ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ನಮ್ಮ  ಶಕ್ತಿ, ಸಾಮರ್ಥ್ಯದ ಪ್ರದರ್ಶನಕ್ಕೆ ಈ ದಾಳಿ ಮಾಡಲಾಗಿದೆ. ನಾನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮವನ್ನು ನೋಡಿದ್ದೇನೆ. ಏರ್ ಸ್ಟ್ರೈಕ್ ನಡೆದ ಬಳಿಕ ನರೇಂದ್ರ ಮೋದಿ ಅವರು ರಾಜಸ್ಥಾನದ ಚುರುವಿನಲ್ಲಿ ಮಾಡಿದ ಭಾಷಣವನ್ನು ಕೇಳಿದ್ದೇನೆ. ಈ ವೇಳೆ 300 ಮಂದಿ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರಾ? ಯಾರಾದರೂ ವಕ್ತಾರರು ಹೇಳಿದ್ದಾರಾ? ಅಮಿತ್ ಶಾ ಹೇಳಿದ್ದಾರಾ ಎಂದು ಅಹ್ಲುವಾಲಿಯಾ ಪ್ರಶ್ನಿಸಿದರು.

    ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್ ಸ್ಟ್ರೈಕ್  ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸಿದ್ದರು.

    ಜೈಷ್ ಉಗ್ರರ ನೆಲೆಯಾದ ಬಾಲಕೋಟ್ ನಲ್ಲಿ ನಡೆದ ವಾಯು ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.

  • ಭಾರತದಿಂದ ಪರಿಸರ ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ದೂರು ನೀಡಲಿದೆ ಪಾಕ್

    ಭಾರತದಿಂದ ಪರಿಸರ ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ದೂರು ನೀಡಲಿದೆ ಪಾಕ್

    ಇಸ್ಲಾಮಾಬಾದ್: ಭಾರತ ನಮ್ಮ ನೆಲದಲ್ಲಿ ಪರಿಸರ ಭಯೋತ್ಪಾದನೆ ಮಾಡಿದೆ. ಭಾರತದ ಯುದ್ಧ ವಿಮಾನಗಳು ಬಾಂಬ್ ಎಸೆದು ಅರಣ್ಯ ಪರಿಸರವನ್ನು ಹಾಳು ಮಾಡಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ನೀಡಲು ಪಾಕಿಸ್ತಾನ ಮುಂದಾಗಿದೆ.

    ಭಾರತದ ಯುದ್ಧ ವಿಮಾನಗಳು ಅಕ್ರಮವಾಗಿ ನಮ್ಮ ವಾಯುನೆಲೆಯನ್ನು ಬಳಸಿಕೊಂಡು ಬಾಂಬ್ ದಾಳಿ ಮಾಡಿವೆ. ಇದರಿಂದ 15 ಪೈನ್ ಮರಗಳು ನಾಶವಾಗಿದೆ ಎಂದು ಪಾಕಿಸ್ತಾನದ ಆರೋಪಿಸಿದೆ.

    ಹವಾಮಾನ ಬದಲಾವಣೆ ಖಾತೆಯ ಸಚಿವ ಮಲಿಕ್ ಅಮಿನ್ ಮಾಧ್ಯಮದ ಜೊತೆ ಮಾತನಾಡಿ, ನಮ್ಮ ಅರಣ್ಯದಲ್ಲಿ ಬಾಂಬ್ ಹಾಕಿದ್ದಾರೆ. ಸರ್ಕಾರ ಈ ಬಾಂಬ್ ದಾಳಿಯಿಂದ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲಿದೆ. ಅಧ್ಯಯನದಿಂದ ಬಂದ ಫಲಿತಾಂಶವನ್ನು ಇಟ್ಟುಕೊಂಡು ವಿಶ್ವಸಂಸ್ಥೆ ಮತ್ತು ಇತರ ಒಕ್ಕೂಟಗಳಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಬಾಲಕೋಟ್ ನಲ್ಲಿ ಜೈಷ್ ಉಗ್ರಗಾಮಿಗಳ ನೆಲೆ ಇಲ್ಲ. ಅರಣ್ಯ ಪ್ರದೇಶದ ಮೇಲೆ ದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನ ಹತ್ಯೆ ಮಾಡಿದೆ ಎಂದು ಭಾರತ ಸುಳ್ಳು ಹೇಳುತ್ತಿದೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡಿ: ಮಮತಾ ಬ್ಯಾನರ್ಜಿ

    ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡಿ: ಮಮತಾ ಬ್ಯಾನರ್ಜಿ

    ನವದೆಹಲಿ: ಏರ್‌ಸ್ಟ್ರೈಕ್ ನಡೆದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯನ್ನು ಕರೆದಿಲ್ಲ. ಯಾವ ಪಕ್ಷಕ್ಕೂ ಮಾಹಿತಿ ನೀಡಿಲ್ಲ. ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್‌ಸ್ಟ್ರೈಕ್ ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ವಿದೇಶಿ ಮಾಧ್ಯಮಗಳಲ್ಲಿ ಏರ್‌ಸ್ಟ್ರೈಕ್  ನಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿ ಬರುತ್ತಿದೆ. ಇನ್ನೊಂದೆಡೆ ಕೆಲವು ಮಾಧ್ಯಮಗಳಲ್ಲಿ ಒಬ್ಬ ಮೃತ ಪಟ್ಟಿದ್ದಾನೆ ಎಂದು ಉಲ್ಲೇಖಿಸಲಾಗುತ್ತಿದೆ. ಇದರಲ್ಲಿ ಯಾವುದು ಸತ್ಯವೆಂದು ಕೇಂದ್ರ ಸರ್ಕಾರವೇ ತಿಳಿಸಬೇಕು. ನಮಗೆ ಈಗ ಏರ್‌ಸ್ಟ್ರೈಕ್ ಬಗ್ಗೆ ಮಾಹಿತಿ ಕೊಡಿ ಎಂದು ಮಮತಾ ಬ್ಯಾನರ್ಜಿ ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಗಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ : ಅರುಣ್ ಜೇಟ್ಲಿ

    ಈಗಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ : ಅರುಣ್ ಜೇಟ್ಲಿ

    ನವದೆಹಲಿ: ಈಗಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ. ದೂರದ ಅಮೇರಿಕವೇ ಪಾಕ್‍ಗೆ ನುಗ್ಗಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿದೆ. ಇಂತಹ ಕೆಲಸ ನಮ್ಮಿಂದ ಆಗುವುದಿಲ್ಲವೇ? ನೆರೆಯ ದೇಶಕ್ಕೆ ನುಗ್ಗಿ ಉಗ್ರರನ್ನು ಮಟ್ಟ ಹಾಕುವ ತಾಕತ್ತು ಭಾರತಕ್ಕೂ ಇದೆ ಎನ್ನುವ ಮೂಲಕ ಏರ್‌ಸ್ಟ್ರೈಕ್ ಸಾಹಸನವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶ್ಲಾಘಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2011ರಲ್ಲಿ ಅಮೇರಿಕ ಪಡೆ ಪಾಕಿಸ್ತಾನದಲ್ಲಿ ಸೇನಾ ಕಾರ್ಯಚರಣೆ ನಡೆಸಿ ವರ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿತ್ತು. ಹಾಗೆಯೇ ನಾವು ಎಲ್‍ಒಸಿ ದಾಟಿ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿ ನೆಲಸಮ ಮಾಡಿದ್ದೇವೆ. ದೂರದ ಅಮೇರಿಕವೇ ಪಾಕ್‍ಗೆ ಬಂದು ಉಗ್ರನನ್ನು ಮಟ್ಟ ಹಾಕಿರುವಾಗ, ನಮ್ಮಿಂದ ಈ ಕೆಲಸ ಆಗುವುದಿಲ್ಲವೇ? ಈಗ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ಭಾರತೀಯ ಸೇನೆ ಬಲಿಷ್ಠವಾಗಿದೆ, ಇಲ್ಲಿ ವಾಯುಪಡೆ, ನೌಕಾಪಡೆ, ಭೂ ಸೇನೆ ಮೂರು ಶತ್ರುಗಳನ್ನು ಎದುರಿಸಿ, ಅವರನ್ನು ಮಟ್ಟಹಾಕುವ ಶಕ್ತಿಯನ್ನು ಹೊಂದಿದೆ. ಅಲ್ಲದೆ ಗಾರ್ಡ್ಸ್ , ಪ್ಯಾರಾ ಮಿಲಿಟರಿ ಪಡೆ ನಮ್ಮಲ್ಲಿ ಇದೆ. ಎಲ್ಲರು ಶತ್ರುಗಳನ್ನು ಹೊಸಕಿ ಹಾಕಲು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್ – ಕೇಂದ್ರ, ಮೋದಿ ವಿರುದ್ಧ ರಮೇಶ್ ಕುಮಾರ್ ಪರೋಕ್ಷ ಟಾಂಗ್

    ಏರ್ ಸ್ಟ್ರೈಕ್ – ಕೇಂದ್ರ, ಮೋದಿ ವಿರುದ್ಧ ರಮೇಶ್ ಕುಮಾರ್ ಪರೋಕ್ಷ ಟಾಂಗ್

    ಕೋಲಾರ: ದೇಶಭಕ್ತಿ ಹಾಗೂ ದೇಶ ಕಾಯುವ ಸೈನ್ಯದ ಹೆಸರಿನಲ್ಲಿ ರಾಜಕೀಯ ಮಾಡಬಾರದು ಅದು ಶುದ್ಧ ಅವಿವೇಕಿತನ ಎಂದು ಕೇಂದ್ರ ಸರ್ಕಾರ ಹಾಗೂ ಮೋದಿಗೆ ಸ್ಪೀಕರ್ ರಮೇಶ್ ಕುಮಾರ್ ಕೋಲಾರದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ರು.

    ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಭಾರತೀಯ ಸೈನಿಕರಿಂದ ಉಗ್ರರ ಮೇಲೆ ನಡೆದ ಏರ್ ಸ್ಟ್ರೈಕ್‍ಗೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರ ಯೋಧರಿಗೆ ಇಡೀ ದೇಶ ಗೌರವ ಸಮರ್ಪಣೆ ಮಾಡಬೇಕು. ಅವರ ಕುಟುಂಬಗಳಿಗೆ ನಾವೆಲ್ಲ ಋಣ ಹೊಂದಿದ್ದೇವೆ. ಸೈನಿಕರು ಮಾಡಿರುವಂತಹ ಒಳ್ಳೆಯ ಕೆಲಸವನ್ನ ನಾವೇ ಮಾಡಿದಂತೆ ತೋರಿಸುವುದು ಸರಿಯಲ್ಲ. ಅವರು ದೇಶ ಕಾಯೋ ಸೈನಿಕರು, ನಾವು ಓಟು ಕೇಳುವವವರು ಹೀಗಾಗಿ ಅವರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದರು.

    ಫೈಟ್ ಮಾಡುವವರು ಯೋಧರು, ವೋಟು ಕೇಳುವವರು ನಾವು. ಅವರು ಅಲ್ಲಿ ಪ್ರಾಣ ಬಿಟ್ಟು ಫೈಟ್ ಮಾಡುವುದಕ್ಕೆ ನಾವು ಇಲ್ಲಿ ಅದನ್ನು ವೋಟ್ ಗೆ ಉಪಯೋಗಿಸಿಕೊಳ್ಳಬಾರದು. ಅದನ್ನು ಯಾರು ಮಾಡಿದರೂ ಅಪರಾಧ. ವೀರ ಯೋಧರಿಗೆ ಇಡೀ ದೇಶ ನಮನ ಅರ್ಪಣೆ ಮಾಡಬೇಕು. ಯೋಧರ ಕುಟುಂಬಗಳಿಗೆ ನಾವೆಲ್ಲರೂ ತಲೆಬಾಗಿ ಅಭಿನಂದನೆ ಸಲ್ಲಿಸಬೇಕು. ಅವರು ಪ್ರಾಣದ ಮೇಲೆ ಆಸೆ ಬಿಟ್ಟು ಬಂದೂಕು ಇಟ್ಟುಕೊಂಡು ಬಾರ್ಡರ್ ನಲ್ಲಿ ನಿಂತುಕೊಂಡಿದ್ದರೆ ನಮ್ಮ ಬೇಳೆ-ಕಾಳು ಬೇಯಿಸಿಕೊಳ್ಳುವುದಕ್ಕೆ ಹೋಗಬಾರದು. ಅದು ಶುದ್ಧ ಅವಿವೇಕಿತನ ಎಂದು ಅವರು ತಿಳಿಸಿದ್ರು.

    ಯಾರೇ ಆಗಲಿ, ಎಷ್ಟು ದೊಡ್ಡವರೇ ಆಗಲಿ. ವೀರ ಯೋಧರು ದೇಶಪ್ರೇಮಕ್ಕಾಗಿ ಪ್ರಾಣದ ಮೇಲೆ ಆಸೆ ತೊರೆದು ಅಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಅದು ನಾವಿದ್ದರೂ ಮಾಡುತ್ತಾರೆ. ನೀವಿದ್ದರೂ ಅಥವಾ ಇನ್ನೊಬ್ಬರು ಇದ್ರೂ ಮಾಡ್ತಾರೆ. ಅದಕ್ಕೆ ನಾನು ಅಲ್ಲಿಗೆ ಹೋಗಿ ಬಟ್ಟೆ ಬಿಚ್ಚಿ ಫೈಟ್ ಮಾಡುತ್ತೇನೆ ಎಂದು ಹೇಳಿ ವೋಟ್ ಕೇಳುವ ಪ್ರಯತ್ನ ಮಾಡೋದು ತಪ್ಪು ಎಂದು ಗರಂ ಆದ್ರು.

     

    ದೇಶ ಕಾಯುತ್ತಿರುವವರಿಗೆ ಎಲ್ಲವನ್ನೂ ತ್ಯಾಗ ಮಾಡಬೇಕು. ಯೋಧರಿಗೆ ನೈತಿಕ ಬೆಂಬಲ ಕೊಡಬೇಕು. ಅವರ ವಿಚಾರದಲ್ಲಿ ಹಗುರವಾದ ರಾಜಕಾರಣ ಮಾಡಬಾರದು ಎಂದು ರಮೇಶ್ ಕುಮಾರ್ ಹೇಳಿದ್ರು.

    https://www.youtube.com/watch?v=3hPj01mD1og

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ನವದೆಹಲಿ: ಲಂಕೆಯನ್ನು ಸುಟ್ಟು ಹನುಮಂತ ಬಂದಂತೆ ಭಾರತೀಯ ವಾಯುಪಡೆ ಪಾಕಿಸ್ತಾನ ಉಗ್ರರ ಕ್ಯಾಂಪ್‍ಗಳನ್ನು ಸುಟ್ಟು ನೆಲಸಮ ಮಾಡಿದೆ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಏರ್‌ಸ್ಟ್ರೈಕ್‌ ಶೌರ್ಯವನ್ನು ಹೊಗಳಿದ್ದಾರೆ.

    ಭಾರತೀಯ ವಾಯುಪಡೆಗೆ ಇಂತಹ ಅದ್ಭುತ ಏರ್‌ಸ್ಟ್ರೈಕ್‌ ನಡೆಸಲು ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೂ ಧನ್ಯವಾದಗಳು. ಈ ಮೂಲಕ ಪಾಕಿಸ್ತಾನ ಮತ್ತೆ ಭಾರತದತ್ತ ತನ್ನ ಕೆಟ್ಟ ದೃಷ್ಟಿ ಹಾಕಲು ಹೆದರುವಂತೆ ವಾಯುಸೇನೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

    ಪವನ ಪುತ್ರ ಹನುಮಂತ ಲಂಕೆಯನ್ನು ಧ್ವಂಸ ಮಾಡಿ ವಾಪಸ್ ಆದಂತೆ ವಾಯುಪಡೆ ಉಗ್ರರನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ದೇಶಕ್ಕೆ ಮರಳಿದೆ. ಒಂದೇ ಒಂದು ಸಣ್ಣ ಗಾಯವಾದಂತೆ ಚಾಣಾಕ್ಯತನದಿಂದ ಕೆಲಸ ಮುಗಿಸಿ ವಾಯುಪಡೆ ವಾಪಸ್ ಬಂದಿದೆ. ಈ ಮೂಲಕ ಪ್ರಜೆಗಳಲ್ಲಿ ದೇಶದಲ್ಲಿ ಭಯೋತ್ಪದನೆ ನೆಲಸಮವಾಗುತ್ತದೆ ಎಂಬ ನಂಬಿಕೆ ಮೂಡುತ್ತಿದೆ. ಇಷ್ಟೆಲ್ಲ ನಡೆದರೂ, ನೂರಾರು ಉಗ್ರರು ಮಣ್ಣಾದರೂ ಪಾಕ್ ಸೇನೆಗೆ ಮಾತ್ರ ಕಿಂಚಿತ್ತು ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದು ಭಾರತೀಯ ಸೇನೆಯ ಶಕ್ತಿ ಎಂದು ಸುಮಿತ್ರಾ ಮಹಾಜನ್ ಹೆಮ್ಮೆಯಿಂದ ವಾಯುಪಡೆಯ ಏರ್‌ಸ್ಟ್ರೈಕ್‌ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv