Tag: airspace

  • ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್‌

    ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್‌

    ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ (Israel Iran Conflict) ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಭಾರತೀಯರ ರಕ್ಷಣೆಗಾಗಿ ಇರಾನ್‌ ತನ್ನ ವಾಯುನೆಲೆಯನ್ನು ತೆರೆದಿದೆ.

    ಇರಾನ್ ತನ್ನ ಮುಚ್ಚಿದ ವಾಯುನೆಲೆಯನ್ನು ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳಿಗಾಗಿ ತೆರೆದಿದೆ. ಸಂಘರ್ಷ ಪೀಡಿತ ಇರಾನಿನ ನಗರಗಳಲ್ಲಿ ಸಿಲುಕಿರುವ ಕನಿಷ್ಠ 1,000 ಭಾರತೀಯ ವಿದ್ಯಾರ್ಥಿಗಳನ್ನು ‘ಆಪರೇಷನ್‌ ಸಿಂಧು’ ಹೆಸರಲ್ಲಿ ಸರ್ಕಾರ ಸ್ಥಳಾಂತರಿಸಲು ಮುಂದಾಗಿದ್ದು, ಇನ್ನೆರಡು ದಿನದಲ್ಲಿ ವಿಮಾನವು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಇರಾನ್‌ – ಇಸ್ರೇಲ್‌ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ

    ಮೊದಲ ವಿಮಾನ ಇಂದು ರಾತ್ರಿ 11 ಗಂಟೆಗೆ ಇಳಿಯಲಿದೆ. ಎರಡನೇ ಮತ್ತು ಮೂರನೇ ವಿಮಾನಗಳು ಶನಿವಾರ ಬೆಳಗ್ಗೆ ಒಂದು ಮತ್ತು ಸಂಜೆ ಇನ್ನೊಂದು ವಿಮಾನಗಳು ಹಾರಾಟ ನಡೆಸಲಿವೆ.

    ಇಸ್ರೇಲ್‌ ಮತ್ತು ಇರಾನ್‌ ಪರಸ್ಪರರ ಮೇಲೆ ಕ್ಷಿಪಣಿ, ಡ್ರೋನ್‌ ದಾಳಿಗಳನ್ನು ನಡೆಸುತ್ತಿವೆ. ಪರಿಣಾಮವಾಗಿ ಇರಾನಿನ ವಾಯುಪ್ರದೇಶವು ಹೆಚ್ಚಿನ ಅಂತರರಾಷ್ಟ್ರೀಯ ವಿಮಾನಗಳಿಗೆ ಮುಚ್ಚಿವೆ. ಭಾರತವು ತನ್ನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಇರಾನ್ ವಿಶೇಷ ಕಾರಿಡಾರ್ ಅನ್ನು ನೀಡಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್‌

    ಇಸ್ರೇಲ್ ಜೊತೆಗಿನ ಪರ್ಷಿಯನ್ ಕೊಲ್ಲಿ ರಾಷ್ಟ್ರದ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಬುಧವಾರ ‘ಆಪರೇಷನ್ ಸಿಂಧು’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕೆಲವು ವಿದ್ಯಾರ್ಥಿಗಳು ಗಾಯಗೊಂಡ ನಂತರ ದೆಹಲಿಯಲ್ಲಿರುವ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಭಾರತದ ವಾಯುಸೀಮೆ ಬಂದ್‌ – ಪಾಕ್‌ಗೆ ಮತ್ತೊಂದು ಶಾಕ್‌

    ಭಾರತದ ವಾಯುಸೀಮೆ ಬಂದ್‌ – ಪಾಕ್‌ಗೆ ಮತ್ತೊಂದು ಶಾಕ್‌

    ನವದೆಹಲಿ: ಪಾಕಿಸ್ತಾನ (Pakistan) ವಿಮಾನಗಳಿಗೆ ಭಾರತ ತನ್ನ ವಾಯುಸೀಮೆ (Airspace) ಬಂದ್‌ ಮಾಡಿದೆ. ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ಬಳಸದಂತೆ ಪಾಕ್‌ ನಿರ್ಬಂಧ ಹೇರಿದ 6 ದಿನಗಳ ನಂತರ ಭಾರತ ಈ ಕ್ರಮವನ್ನು ಕೈಗೊಂಡಿದೆ.

    ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ರಾತ್ರಿ 11:59 ರವರೆಗೆ ಪರಸ್ಪರ ತನ್ನ ವಾಯುಸೀಮೆಯನ್ನು ಬಳಕೆ ಮಾಡುವುದನ್ನು ನಿರ್ಬಂಧಿಸಿದೆ. ಎರಡು ದೇಶಗಳ ನಡುವಿನ ಪರಿಸ್ಥಿತಿ ಸುಧಾರಣೆಯಾಗದೇ ಇದ್ದರೆ ನಿರ್ಬಂಧ ಮತ್ತೆ ಮುಂದುವರಿಯಲಿದೆ.

     

    ಈ ನಿರ್ಧಾರದಿಂದ ಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಅಥವಾ ಗುತ್ತಿಗೆ ಪಡೆದ ವಿಮಾನಗಳು, ಮಿಲಿಟರಿ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸುವಂತಿಲ್ಲ.

    ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನಕ್ಕೆ ಇದು ದೊಡ್ಡ ಪೆಟ್ಟು ಬೀಳಲಿದೆ. ಪಾಕ್‌ ವಿಮಾನಗಳು ಇನ್ನು ಮುಂದೆ ಮಲೇಷ್ಯಾದ ಕೌಲಾಲಂಪುರಕ್ಕೆ ಹೋಗಬೇಕಾದರೆ ಚೀನಾ ವಾಯುಸೀಮೆಯನ್ನು ಬಳಸಿ ಥಾಯ್ಲೆಂಡ್‌ ಮೂಲಕ ಸಂಚರಿಸಬೇಕಾಗುತ್ತದೆ.

  • ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

    ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

    ನವದೆಹಲಿ: ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಸಿದ ಬಳಿಕ ಪಾಕಿಸ್ತಾನ ಎಂದಿಗೂ ಭಾರತದ ಗಡಿ ನಿಯಂತ್ರಣಾ ರೇಖೆಯನ್ನು ದಾಟಿಲ್ಲ ಎಂದು ಐಎಎಫ್ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ತಿಳಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಮುಚ್ಚಿರುವುದು ನೆರೆಯ ದೇಶಗಳಿಗೆ ತೊಂದರೆಯಾಗಿದೆಯೇ ಹೊರೆತು ಭಾರತಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಪಾಕಿಸ್ತಾನ ಹಾಗೂ ಭಾರತ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಆದರೆ ಪಾಕ್‍ನ ಈ ನಿರ್ಣಯ ದೇಶದ ಒಳಗಡೆ ಇರುವ ನಾಗರಿಕಾ ವಿಮಾನಯಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದರು.

    ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಐಎಎಫ್ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿರುವ ಜೈಶ್ ಉಗ್ರರ ಅಡಗು ತಾಣದ ಮೇಲೆ ಏರ್‌ಸ್ಟ್ರೈಕ್ ಮಾಡಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಬಂದಿತ್ತು. ಆದರೆ ಉತ್ತರ ಕೊಡುವಲ್ಲಿ ವಿಫಲವಾಯ್ತು. ಭಾರತ ತನ್ನ ಕಾರ್ಯಾಚರಣೆಯಲ್ಲಿ ವಿಫಲವಾಗಿಲ್ಲ. ಹೀಗಾಗಿ ಏರ್‌ಸ್ಟ್ರೈಕ್ ಬಳಿಕ ಪಾಕಿಸ್ತಾನ ಎಂದಿಗೂ ಗಡಿ ನಿಯಂತ್ರಣಾ ರೇಖೆ ದಾಟಿ ಬಂದಿಲ್ಲ ಎಂದು ಐಎಎಫ್ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು.

    ಪಾಕ್ ನಮ್ಮ ವಾಯು ನೆಲೆಯ ಮೇಲೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಸೈನ್ಯದ ಕಾರ್ಯವೈಕರಿ. ನಾವು ಬಾಲಕೋಟ್‍ನಲ್ಲಿ ಏರ್‌ಸ್ಟ್ರೈಕ್ ಮಾಡಲು ಕಾರ್ಯಾಚರಣೆ ನಡೆಸಿದೆವು. ಅದನ್ನು ಸಾಧಿಸಿ ತೋರಿಸಿದೆವು. ಹಾಗೆಯೇ ಪಾಕಿಸ್ತಾನ ಕೂಡ ನಮ್ಮ ಸೈನ್ಯದ ಮೇಲೆ ದಾಳಿ ನಡೆಸಲು ಬಂದಿತ್ತು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಹೇಗೆ ಕಾರ್ಯಾಚರಣೆ ನಡೆಸಿದ್ದೇವೆ? ಎಷ್ಟು ಜೆಟ್ ಉಪಯೋಗಿಸಿದ್ದೇವೆ ಎನ್ನುವುದಕ್ಕಿಂತ ನೀವು ನಿಮ್ಮ ಸೈನ್ಯದ ಗುರಿಯನ್ನು ತಲುಪಿದ್ದೀರಾ ಎನ್ನುವುದೇ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ನಾವು ನಿರೀಕ್ಷಿತ ಸಾಧನೆ ಮಾಡಿದ್ದೇವೆ ಎಂದರು.

    ಈ ವೇಳೆ ಕಾರ್ಗಿಲ್ ಯುದ್ಧವಾಗಿ 20 ವರ್ಷ ಕಳೆದಿರುವ ಬಗ್ಗೆ ಮಾತನಾಡಿ, ಈವೆರೆಗೆ ಭಾರತ ನಡೆಸಿದ ಎಲ್ಲಾ ದಾಳಿಯಲ್ಲೂ ನಾವು ನಮ್ಮ ಸಂಕಲ್ಪ ಹಾಗೂ ಸಾಮರ್ಥ್ಯವನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

    ಭಾರತ ವಾಯು ಮಾರ್ಗ ಮುಚ್ಚುವ ಬಗ್ಗೆ ಪ್ರಶ್ನಿಸಿದಾಗ, ನಾವು ಫೆ.27ರಂದು ಶ್ರೀನಗರದ ವಾಯು ಮಾರ್ಗವನ್ನು ಮುಚ್ಚಿದ್ದೆವು. ಅದು ಕೇವಲ 2ರಿಂದ 3 ಗಂಟೆಗಳ ಕಾಲ ಮಾತ್ರ ಅಷ್ಟೇ ಎಂದು ಹೇಳಿದರು.

    ಪಾಕಿಸ್ತಾನದ ಜೊತೆ ಇರುವ ಉದ್ವಿಗ್ನ ಸ್ಥಿತಿಯಿಂದ ಭಾರತದ ವಿಮಾನಯಾನಕ್ಕೆ ಯಾವುದೇ ತೊಂದರೆಯಾಗಿಲ್ಲ. ಯಾಕೆಂದರೆ ನಮ್ಮ ಆರ್ಥಿಕತೆ ಅವರಿಗಿಂತ ಬಹಳ ದೊಡ್ಡದು. ಪಾಕಿಸ್ತಾನ ಅವರ ವಾಯು ಮಾರ್ಗವನ್ನು ಮುಚ್ಚಿದ್ದಾರೆ ಎಂದರೆ ಅದು ಅವರ ಸಮಸ್ಯೆ. ಆದರೆ ನಮ್ಮ ಆರ್ಥಿಕತೆಯಲ್ಲಿ ವಾಯು ಸಂಚಾರವು ಮುಖ್ಯ ಭಾಗವಾಗಿದೆ. ಹೀಗಾಗಿ ವಾಯುಪಡೆ ಕೂಡ ಎಂದಿಗೂ ನಾಗರಿಕ ವಿಮಾನಗಳನ್ನು ತಡೆಯುವುದಿಲ್ಲ ಎಂದು ಉತ್ತರಿಸಿದರು.