Tag: airport road

  • ಏರ್‌ಪೋರ್ಟ್ ರಸ್ತೆಯಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ – ಟ್ರಾಫಿಕ್ ಜಾಮ್

    ಏರ್‌ಪೋರ್ಟ್ ರಸ್ತೆಯಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ – ಟ್ರಾಫಿಕ್ ಜಾಮ್

    – 3-4 ಕಿ.ಮೀವರೆಗೆ ಸಾಲುಗಟ್ಟಿ ನಿಂತಿರೋ ವಾಹನಗಳು

    ಬೆಂಗಳೂರು: ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೆಂಗಳೂರಿನ (Bengaluru) ಏರ್‌ಪೋರ್ಟ್ ರಸ್ತೆಯಲ್ಲಿ (Airport Road) ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

    ಬೆಂಗಳೂರಿನಿಂದ ಏರ್‌ಪೋರ್ಟ್ ಕಡೆಗೆ ಸಾಗುವ ಮಾರ್ಗದಲ್ಲಿ ಸರಣಿ ಅಪಘಾತ ನಡೆದಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಅಪಘಾತದ ಪರಿಣಾಮ ಟ್ರಾಫಿಕ್ ಜಾಮ್ (Traffic Jam) ಉಂಟಾಗಿ ಮೂರರಿಂದ ನಾಲ್ಕು ಕಿ.ಮೀವರೆಗೆ ವಾಹನಗಳು ರಸ್ತೆಯಲ್ಲೇ ನಿಂತಿವೆ. ಇದನ್ನೂ ಓದಿ:  ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ – ದೆಹಲಿಗೆ ಬಂದ ನಂತ್ರ ಕಳಪೆ ಬಸ್ಸು ನೀಡಿದ್ದಕ್ಕೆ ಆಕ್ರೋಶ

    ಸದ್ಯ ಸಂಚಾರಿ ಪೊಲೀಸರು ಅಪಘಾತವಾಗಿರುವ ವಾಹನಗಳನ್ನು ಕ್ಲಿಯರ್ ಮಾಡುತ್ತಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

  • ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು

    ಏರ್‌ಪೋರ್ಟ್ ರಸ್ತೆ ಸವಾರರಿಗೆ ಗುಡ್‌ನ್ಯೂಸ್ – ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜು

    ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿರುವ ಹಿನ್ನೆಲೆ ಇದೀಗ ಬಿಬಿಎಂಪಿ (BBMP) ಏರ್‌ಪೋರ್ಟ್ ರಸ್ತೆ (Airport Road) ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ.

    ಸಿಲಿಕಾನ್ ಸಿಟಿಯಲ್ಲಿ (Silicon City) ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ರಸ್ತೆಗಳ ಪೈಕಿ ಏರ್‌ಪೋರ್ಟ್ ರಸ್ತೆ ಕೂಡ ಒಂದು. ಹೀಗಾಗಿ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ.ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌ ಭೇಟಿ

    ಈ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಹೆಣ್ಣೂರು, ಬಾಗಲೂರು ಮಾರ್ಗದಲ್ಲಿ ಹೆಚ್ಚು ಟ್ರಾಫಿಕ್ ಇರುತ್ತದೆ. ಹೀಗಾಗಿ ಟ್ರಾಪಿಕ್ ನಿಯಂತ್ರಣಕ್ಕೆ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಹೆಣ್ಣೂರು ಜಂಕ್ಷನ್‌ನಿಂದ ಬಾಗಲೂರುವರೆಗೂ ಎಲಿವೇಟೆಡ್ ಕಾರಿಡಾರ್ ಮಾಡಲಿದ್ದಾರೆ. ಎಲಿವೆಟೆಡ್ ಕಾರಿಡಾರ್ ಆದರೆ ಚಿಕ್ಕಗುಬ್ಬಿ, ಕೊತ್ನೂರು, ಹೆಣ್ಣೂರು, ಬಾಗಲೂರು, ಔಟರ್ ರಿಂಗ್ ರೋಡ್, ಬೈರತಿ ಭಾಗಗಳಲ್ಲಿ ಟ್ರಾಫಿಕ್ ಕಡಿಮೆ ಆಗುತ್ತದೆ.

    ಇನ್ನೂ ಏರ್‌ಪೋರ್ಟ್ಗೆ ಕನೆಕ್ಟ್ ಆಗುವ ಮಾರ್ಗಕ್ಕೆ ತುಂಬಾ ಅನುಕೂಲಕರ ಆಗಿರಲಿದೆ. ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆ ಇಟ್ಟಿದ್ದು, ಈ ವರ್ಷದಲ್ಲೇ ಮುಗಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ ಕೇಸ್‌ಗೆ ಟ್ವಿಸ್ಟ್ – ನಮ್ಮಿಬ್ಬರಿಗೂ ಮದುವೆಯಾಗಿದೆ ಅಂತ ಪೊಲೀಸರಿಗೆ ತಿಳಿಸಿದ ಯುವತಿ

  • KSRTC ಬಸ್, ಕಾರು, ಟ್ರ್ಯಾಕ್ಟರ್ ಒಂದಕ್ಕೊಂದು ಡಿಕ್ಕಿ – ಭೀಕರ ಅಪಘಾತದಲ್ಲಿ ಡಿಸಿಪಿ ಕುಟುಂಬ ಪಾರು

    KSRTC ಬಸ್, ಕಾರು, ಟ್ರ್ಯಾಕ್ಟರ್ ಒಂದಕ್ಕೊಂದು ಡಿಕ್ಕಿ – ಭೀಕರ ಅಪಘಾತದಲ್ಲಿ ಡಿಸಿಪಿ ಕುಟುಂಬ ಪಾರು

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್, ಕಾರು ಹಾಗೂ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

    ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದಾಗ ದೇವನಹಳ್ಳಿ ಸಮೀಪದ ಚಿಕ್ಕಸಣ್ಣೆ ಬಳಿ ಕಲ್ಲು ಸಾಗಿಸುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬಸ್, ಟ್ರ್ಯಾಕ್ಟರ್‌ನಿಂದ ತಪ್ಪಿಸಿಕೊಳ್ಳಲು ಹೋಗಿ ಕಾರಿಗೆ ಡಿಕ್ಕಿ ಹೊಡೆದು, ಟ್ರಾಕ್ಟರ್ ಮೇಲೆ ಹರಿದಿದೆ. ಅಲ್ಲದೇ ಬ್ಯಾರಿಕೇಡ್ ಭೇದಿಸಿಕೊಂಡು ರಸ್ತೆ ಬದಿಗೆ ಬಂದು ನಿಂತಿದೆ. ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

    ಸದ್ಯ ಕಾರಿನಲ್ಲಿದ್ದವರು ತೆಲಂಗಾಣ ಮೂಲದ ಗುಪ್ತಚರ ಇಲಾಖೆಯ ಡಿಸಿಪಿ ಹಾಗೂ ಅವರ ಕುಟುಂಬದವರು ಎಂದು ತಿಳಿದುಬಂದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರಿಗೆ ಡ್ಯಾಮೇಜ್ ಆಗಿದ್ದು, ಜೊತೆಗೆ ಬಸ್‍ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಚಿಕ್ಕಪುಟ್ಟ ಗಾಯಗಳಾಗಿದೆ. ಇದೀಗ ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ  ಪೊಲೀಸರು ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್‍ ಠಾಕ್ರೆ ಆಸ್ಪತ್ರೆಗೆ ದಾಖಲು- ನಾಳೆ ಶಸ್ತ್ರಚಿಕಿತ್ಸೆ

  • ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ – ಕಾರಿನಲ್ಲಿದ್ದ ಇಬ್ಬರು ಗ್ರೇಟ್ ಎಸ್ಕೇಪ್

    ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ – ಕಾರಿನಲ್ಲಿದ್ದ ಇಬ್ಬರು ಗ್ರೇಟ್ ಎಸ್ಕೇಪ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಪವಾಡ ರೀತಿ ಬದುಕುಳಿದ ಘಟನೆ ನಡೆದಿದೆ.

    ಏರ್ ಪೋರ್ಟ್ ರಸ್ತೆಯಲ್ಲಿರುವ ಸೆಂಟ್‍ಜಾನ್ ಆಸ್ಪತ್ರೆ ಸಿಗ್ನಲ್ ಬಳಿ ಓವರ್ ಸ್ಪೀಡ್ ನಿಂದ ಈ ಅಪಘಾತ ಸಂಭವಿಸಿದೆ. ಅತಿವೇಗವಾಗಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು, ರಸ್ತೆಯ ಪಕ್ಕದಲ್ಲಿರುವ ಡಿವೈಡರ್ ಬ್ಯಾರಿಕೇಡ್ ಗೆ ಗುದ್ದಿಕೊಂಡು, ಪಕ್ಕದ ಮೋರಿಯಲ್ಲಿ ಲಾಕ್ ಆಗಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಫ್ರೀಯಾಗಿ ಕೋಳಿ ಕೊಡಲಿಲ್ಲ- ಹಿಗ್ಗಾಮುಗ್ಗ ಥಳಿಸಿದ್ರು

    ಅಪಘಾತದ ರಭಸಕ್ಕೆ ಕಾರಿನ ಚಾಸಿ, ಟೈಯರ್ 30 ಮೀಟರ್ ದೂರ ಬಿದ್ದಿದೆ. ಭೀಕರ ರಸ್ತೆ ಅಪಘಾತವಾದ್ರೂ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಒಂಚೂರು ಗಾಯಗಳಾಗಿಲ್ಲ. ಕಾರಿನಲ್ಲಿದ್ದ ಏರ್ ಬ್ಯಾಗ್ ನಿಂದ ಪಾರಾಗಿದ್ದಾರೆ. ರಸ್ತೆ ಅಪಘಾತದಿಂದ ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅಪಘಾತ ಸಂಬಂಧ ರಿಷಬ್ ಸೇರಿ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

    ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

    ಬೆಂಗಳೂರು: ಜನರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು. ಹೌದು. ಈ ಪ್ರಕರಣದಲ್ಲಿ ಹಾಗೆ ಅನಿಸುತ್ತೆ. ಯಾಕಂದ್ರೆ ಬೆಂಗಳೂರಿನ ಏರ್‍ಪೋರ್ಟ್ ರಸ್ತೆಯಲ್ಲಿರುವ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ಎಲ್.ಕೆ ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್‍ನಲ್ಲಿ ಅಕ್ರಮವಾಗಿ ಮದ್ಯ ಪೂರೈಕೆಯಾಗ್ತಿದೆ.

    ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟ ಮಾಡೋ ಹಾಗಿಲ್ಲ ಎಂಬ ನಿಯಮವಿದ್ದರೂ ಮದ್ಯ ಪೂರೈಕೆಯಾಗ್ತಿದೆ. ಈ ರೆಸ್ಟೋರೆಂಟ್ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತೆ. ರೆಸ್ಟೋರೆಂಟ್ ನಡೆಸುವುದಕ್ಕೆ ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿಲ್ಲ. ಈ ರೆಸ್ಟೋರೆಂಟ್ ಉದ್ಘಾಟನೆಯಾಗಿ ಇದೀಗ ಇಪ್ಪತ್ತೆರೆಡು ದಿನಗಳೇ ಕಳೆದಿದೆ. ಶಾಸಕರ ಮಾಲೀಕತ್ವದ್ದು ಯಾರೂ ಕೇಳೋರಿಲ್ಲ ಅಂತ ನಂಬಿದ್ದಾರೆ.

    ಈ ಕುರಿತು ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲು ನಿರ್ಧರಿಸಿದ್ದು, ಲೈಸೆನ್ಸ್ ಪಡೆಯದ ಬಗ್ಗೆ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳೋ ಭರವಸೆ ನೀಡಿದೆ.

  • ಅಪಘಾತದ ರಭಸಕ್ಕೆ ಇನ್ನೊಂದು ರಸ್ತೆಗೆ ಜಂಪ್ ಮಾಡ್ದ ಸ್ಕಾರ್ಪಿಯೋ, ಲಾರಿಗೆ ಡಿಕ್ಕಿ: ಬೆಂಗ್ಳೂರಲ್ಲಿ ಇಬ್ಬರ ದುರ್ಮರಣ

    ಅಪಘಾತದ ರಭಸಕ್ಕೆ ಇನ್ನೊಂದು ರಸ್ತೆಗೆ ಜಂಪ್ ಮಾಡ್ದ ಸ್ಕಾರ್ಪಿಯೋ, ಲಾರಿಗೆ ಡಿಕ್ಕಿ: ಬೆಂಗ್ಳೂರಲ್ಲಿ ಇಬ್ಬರ ದುರ್ಮರಣ

    ಬೆಂಗಳೂರು: ಸ್ಕಾರ್ಪಿಯೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

    ಮೃತರನ್ನು ಅಶ್ವತ್ ಬಾಬು ಹಾಗೂ ರಾಜು ಎಂಬುವುದಾಗಿ ಗುರುತಿಸಲಾಗಿದ್ದು, ಇವರಿಬ್ಬರೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನವರು ಎಂದು ಹೇಳಲಾಗುತ್ತಿದೆ

    ಬೆಂಗಳೂರು ಏರ್‍ ಪೋರ್ಟ್ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ಹುಣಸಮಾರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕಾರ್ಪಿಯೋ ಇನ್ನೊಂದು ರಸ್ತೆಗೆ ಜಂಪ್ ಆಗಿ, ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ ಸಂಪೂರ್ಣ ಜಖಂ ಆಗಿದ್ದು, ಕಾರ್ ನ ಮುಂಭಾಗದಲ್ಲಿ ಕುಳಿತಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಿಂದ ಹಿಂಬದಿ ಕುಳಿತಿದ್ದ ಮೂವರಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪರಿಣಾಮ ಮೃತದೇಹಗಳನ್ನು ಹೊರತೆಗೆಯುವಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಹರಸಾಹಸಪಟ್ಟರು. ಸದ್ಯ ಇಬ್ಬರು ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ್ಲಲಿರೋ ಶವಾಗಾರಕ್ಕೆ ರವಾನಿಸಲಾಗಿದೆ.

    ನಜ್ಜುಗುಜ್ಜಾದ ಕಾರನ್ನು ಕ್ರೇನ್ ಮೂಲಕ ಬೇರೆಡೆ ಸ್ಥಳಾಂತರಿಸಲಾಗಿದೆ. ಭಾಷಾ ಅನ್ನೊರಿಗೆ ಸೇರಿದ ಕ್ಯಾಂಟರ್ ಲಾರಿಯನ್ನು ಬ್ಲೂಡಾರ್ಟ್ ಕಂಪನಿಗೆ ಗಾಡಿ ಅಟೆಚ್ ಮಾಡಿದ್ದರು ಎಂಬುವುದಾಗಿ ತಿಳಿದುಬಂದಿದೆ.