Tag: Airplane

  • ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ಪ್ಯಾರಿಸ್‌: ಭಾರತದ ಕಂಪನಿ ನಿರ್ಮಿಸಿದ ವಿಶ್ವದಾಖಲೆಯನ್ನು ಭಾರತದ (India) ಕಂಪನಿ ಮುರಿಯವುದು ಬಹಳ ಅಪರೂಪ. ಈಗ ಇಂಡಿಗೋ ಕಂಪನಿ ಏರ್‌ ಇಂಡಿಯಾ (Air India) ನಿರ್ಮಿಸಿದ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

    ಹೌದು. ಬಜೆಟ್‌ ಕ್ಯಾರಿಯರ್‌ ವಿಮಾನ ಕಂಪನಿ ಇಂಡಿಗೋ ಫ್ರಾನ್ಸಿನ ಏರ್‌ಬಸ್‌ (Airbus) ಕಂಪನಿಯ ಜೊತೆ 500 A320 ಮಾದರಿಯ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಅತಿ ಹೆಚ್ಚು ವಿಮಾನ ಖರೀದಿ ಒಪ್ಪಂದ ಮತ್ತು ಒಂದೇ ಕಂಪನಿಯ ಜೊತೆ ಅತಿ ಹೆಚ್ಚು ವಿಮಾನ ಖರೀದಿ ನಡೆಸುತ್ತಿರುವ ವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಇಂಡಿಗೋ ಪಾತ್ರವಾಗಿದೆ.

    ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಏರ್‌ಶೋದ (Paris Air Show) ಮೊದಲ ದಿನವೇ ಏರ್‌ಬಸ್‌ ಕಂಪನಿ ಇಂಡಿಗೋ ಜೊತೆಗಿನ ವ್ಯವಹಾರದ ಡೀಲ್‌ ಘೋಷಣೆ ಮಾಡಿದೆ. ಇದನ್ನೂ ಓದಿ: ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ಹಲವು ಸುತ್ತಿನ ಮಾತುಕತೆಯ ಬಳಿಕ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಖರೀದಿ ಒಪ್ಪಂದದ ಮೊತ್ತ ಎಷ್ಟು ಎನ್ನುವುದು ಅಧಿಕೃತವಾಗಿ ತಿಳಿಸದೇ ಇದ್ದರೂ 55 ಶತಕೋಟಿ ಡಾಲರ್‌ ಡೀಲ್‌ ಎಂದು ವರದಿಯಾಗಿದೆ.

    ಈ ಐತಿಹಾಸಿಕ ಒಪ್ಪಂದಕ್ಕೆ ಇಂಡಿಗೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಭಾಟೀಯಾ ಮತ್ತು ಏರ್‌ಬಸ್‌ ಸಿಇಒ ಗುಯಿಲೌಮ್ ಫೌರಿ ಸಹಿ ಹಾಕಿದರು. ಇದನ್ನೂ ಓದಿ: ಏರ್‌ಬಸ್‌-ಬೋಯಿಂಗ್‌ ಜೊತೆ ಮೆಗಾ ಡೀಲ್‌: ವಿಶ್ವದಾಖಲೆ ನಿರ್ಮಿಸಿದ ಏರ್‌ ಇಂಡಿಯಾ

    2030 ಮತ್ತು 2035ರ ಸಮಯದಲ್ಲಿ ವಿಮಾನವನ್ನು ಏರ್‌ಬಸ್‌ ಕಂಪನಿ ಇಂಡಿಗೋಗೆ ವಿತರಣೆ ಮಾಡಲಿದೆ. ಇದು ಕೇವಲ ಪ್ರಾರಂಭ ಅಷ್ಟೇ. ಭಾರತ ಬೆಳವಣಿಗೆ ಮತ್ತು ಭಾರತೀಯ ವಾಯುಯಾನ ಮಾರುಕಟ್ಟೆಯ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ನಮಗೆ ನೀಡಲು ಇದು ಸರಿಯಾದ ಸಮಯ ಎಂದು ಏರ್‌ಬಸ್‌ ತಿಳಿಸಿದೆ.

    2006 ರಿಂದ ಇಲ್ಲಿಯವರೆಗೆ ಏರ್‌ಬಸ್‌ ಕಂಪನಿ ಜೊತೆ ಒಟ್ಟು 1,330 ವಿಮಾನ ಖರೀದಿಗೆ ಇಂಡಿಗೋ ಆರ್ಡರ್‌ ನೀಡಿದೆ. ಈ ದಶಕದ ಅಂತ್ಯಕ್ಕೆ ವಿಮಾನಗಳು ವಿತರಣೆಯಾಗುವ ಸಾಧ್ಯತೆಯಿದೆ.

    ಈ ಫೆಬ್ರವರಿಯಲ್ಲಿ ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 470 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿತ್ತು. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದು ಎಂದು ಬಣ್ಣಿಸಲಾಗಿತ್ತು.

    ಫ್ರಾನ್ಸಿನ ಏರ್‌ಬಸ್‌ನಿಂದ 250 ಮತ್ತು ಅಮೆರಿಕದ ಬೋಯಿಂಗ್‌ನಿಂದ (Boeing) 220 ವಿಮಾನಗಳನ್ನು ಏರ್‌ ಇಂಡಿಯಾದಿಂದ ಖರೀದಿಸಲಿದೆ. ಒಟ್ಟು 420 ಸಣ್ಣ, ಮಧ್ಯಮ ಗಾತ್ರ ಮತ್ತು 40 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ (Air India) ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್‌ ಇಂಡಿಯಾವನ್ನು ಸೇರಲಿದೆ.

  • ರನ್‌ವೇಯಲ್ಲಿ ಅಗ್ನಿಶಾಮಕ ಟ್ರಕ್‌ಗೆ ಪ್ಯಾಸೆಂಜರ್ ವಿಮಾನ ಡಿಕ್ಕಿ- ಇಬ್ಬರು ಸಿಬ್ಬಂದಿ ಸಾವು

    ರನ್‌ವೇಯಲ್ಲಿ ಅಗ್ನಿಶಾಮಕ ಟ್ರಕ್‌ಗೆ ಪ್ಯಾಸೆಂಜರ್ ವಿಮಾನ ಡಿಕ್ಕಿ- ಇಬ್ಬರು ಸಿಬ್ಬಂದಿ ಸಾವು

    ಲಿಮಾ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Airport) ರನ್‌ವೇಯಲ್ಲಿ (Runway) ಟೇಕ್ ಆಫ್ ಆಗುತ್ತಿದ್ದ ಪ್ಯಾಸೆಂಜರ್ ವಿಮಾನವೊಂದು (plane) ಅಗ್ನಿಶಾಮಕ ಟ್ರಕ್‌ಗೆ (Firefighter) ಡಿಕ್ಕಿ ಹೊಡೆದು, ಇಬ್ಬರು ಸಿಬ್ಬಂದಿ ಸಾವಾಗೀಡಾಗಿರುವ ಘಟನೆ ಪೆರುವಿನ (Peru) ಜಾರ್ಜ್ ಚಾವೆಜ್‌ನಲ್ಲಿ ನಡೆದಿದೆ. ದುರ್ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವೀಡಿಯೋದಲ್ಲಿ ಅಗ್ನಿಶಾಮಕ ಟ್ರಕ್ ರನ್‌ವೇಯಲ್ಲಿ ವೇಗವಾಗಿ ಸಾಗುತ್ತಿರುವುದು ಕಂಡುಬಂದಿದ್ದು, ಎದುರುಗಡೆ ಲ್ಯಾಂಡ್ ಆಗುತ್ತಿದ್ದ ವಿಮಾನವನ್ನು ಕಂಡ ಅಗ್ನಿಶಾಮಕ ಟ್ರಕ್‌ನಲ್ಲಿದ್ದವರು ಅಪಘಾತವನ್ನು ತಪ್ಪಿಸಲು ವಾಹನವನ್ನು ಯೂ ಟರ್ನ್ ಹೊಡೆದಿದ್ದಾರೆ. ಆದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗದೇ ವಿಮಾನ ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳು ರಿಲೀಸ್

    ಅಪಘಾತಕ್ಕೊಳಗಾದ ಲತಮ್ ಏರ್‌ಲೈನ್ಸ್‌ನ ಎ320 ಏರ್‌ಬಸ್‌ನಲ್ಲಿ 102 ಪ್ರಯಾಣಿಕರಿದ್ದರು. ಡಿಕ್ಕಿ ಸಂಭವಿಸಿದ ಪರಿಣಾಮ ವಿಮಾನದ ರೆಕ್ಕೆ, ಹಿಂಭಾಗಕ್ಕೆ ಬೆಂಕಿ ತಗುಲಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಘಟನೆಯ ಬಳಿಕ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿ ಸಾರ್ವಜನಿಕವಾಗಿ ಮಗಳೊಂದಿಗೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್

    Live Tv
    [brid partner=56869869 player=32851 video=960834 autoplay=true]

  • ಇಮ್ರಾನ್ ಖಾನ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

    ಇಮ್ರಾನ್ ಖಾನ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

    ಇಸ್ಲಾಮಾಬಾದ್: ಪಾಕಿಸ್ತಾನದ(Pakistan) ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್(PTI) ಮುಖ್ಯಸ್ಥ ಇಮ್ರಾನ್ ಖಾನ್(Imran Khan) ಅವರು ಶನಿವಾರ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ(Airplane) ತಾಂತ್ರಿಕ ದೋಷ ಉಂಟಾಗಿ ತುರ್ತು ಭೂಸ್ಪರ್ಶ(Emergency Landing) ಮಾಡಿರುವುದಾಗಿ ವರದಿಯಾಗಿದೆ.

    ಇಮ್ರಾನ್ ಖಾನ್ ಇದ್ದ ವಿಮಾನ ಟೇಕ್ ಆಫ್ ಆದ ತಕ್ಷಣವೇ ತಾಂತ್ರಿಕ ದೋಷವನ್ನು ಅನುಭವಿಸಿ ಇಸ್ಲಾಮಾಬಾದ್‌ಗೆ ವಾಪಸ್ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪಿಟಿಐ ನಾಯಕ ಅಜರ್ ಮಶ್ವಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ನೋ ಅಗ್ನಿ ದುರಂತ – ನಿರ್ಲಕ್ಷ್ಯವಹಿಸಿದ 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ

    ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪಂಜಾಬ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಹೊರಟಿದ್ದರು. ಆದರೆ ವಿಮಾನ ಹಾರಾಟ ಪ್ರಾರಂಭಿಸುತ್ತಿದ್ದಂತೆಯೇ ಅದರಲ್ಲಿ ಕೆಲವು ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗಿದೆ. ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದರಿಂದ ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ- ಸುನಾಮಿ ಎಚ್ಚರಿಕೆ

    ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಇಮ್ರಾನ್ ಖಾನ್ ಅವರು ರಸ್ತೆಯ ಮೂಲಕ ಪಂಜಾಬ್‌ಗೆ ತೆರಳಿದರು ಎಂದು ಮಶ್ವಾನಿ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ಇಮ್ರಾನ್ ಖಾನ್ ಅವರ ಭದ್ರತಾ ಬೆಂಗಾವಲು ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದಾಗಿ ವರದಿಯಾಗಿತ್ತು. ಸದ್ಯ ಘಟನೆಯಲ್ಲಿ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ವಿಮಾನದಲ್ಲಿ ಪ್ರಯಾಣಿಸಲು ಬಂದ ಪೋಷಕರಿಗೆ ಸರ್‌ಪ್ರೈಸ್‌ ಕೊಟ್ಟ ಪೈಲಟ್

    ವಿಮಾನದಲ್ಲಿ ಪ್ರಯಾಣಿಸಲು ಬಂದ ಪೋಷಕರಿಗೆ ಸರ್‌ಪ್ರೈಸ್‌ ಕೊಟ್ಟ ಪೈಲಟ್

    ಜೈಪುರ: ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ತಂದೆ, ತಾಯಿಯನ್ನು ಖುಷಿಯಿಂದ ನೋಡಿಕೊಳ್ಳಬೇಕು ಮತ್ತು ಅವರಿಗೆ ಕೀರ್ತಿ ತರಬೇಕು ಎಂಬ ಕನಸು ಇರುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಪೈಲಟ್ ಓರ್ವ ವಿಮಾನವನ್ನು ಚಲಾಯಿಸುವ ಮೂಲಕ ತನ್ನ ತಂದೆ, ತಾಯಿಯನ್ನು ರಾಜಸ್ಥಾನದ ಜೈಪುರಕ್ಕೆ ಬಿಟ್ಟು, ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಆದರೆ ವಿಮಾನ ಹತ್ತಿದ ಪೋಷಕರಿಗೆ ವಿಮಾನ ಚಲಾಯಿಸಲು ಹೊರಟಿರುವುದು ತಮ್ಮ ಮಗ ಎಂಬ ವಿಚಾರ ತಿಳಿಯದೇ ಕೊನೆಗೆ ಶಾಕ್ ಆಗಿದ್ದಾರೆ.

    ಪೈಲಟ್ ಕಮಲ್ ಕುಮಾರ್ ಅವರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಪೋಷಕರು ವಿಮಾನವನ್ನು ಹತ್ತುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ತಮ್ಮ ಮಗನನ್ನು ಪ್ರವೇಶದ್ವಾರದಲ್ಲಿ ನೋಡಿ ಆಶ್ಚರ್ಯಗೊಳ್ಳುತ್ತಾರೆ. ನಂತರ ಮಗನ ಕೈ ಹಿಡಿದು ತಾಯಿ ನಗುತ್ತಾರೆ. ಅಲ್ಲದೇ ಕಾಕ್‍ಪಿಟ್‍ನಲ್ಲಿ ಕಮಲ್ ತನ್ನ ಪೋಷಕರೊಂದಿಗೆ ಕುಳಿತಿರುವ ದೃಶ್ಯವನ್ನು ಸಹ ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ವ್ಯಕ್ತಿಯಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ

     

    View this post on Instagram

     

    A post shared by Kamal Kumar (@desipilot11_)

    ನಾನು ಚಲಾಯಿಸುವುದನ್ನು ಪ್ರಾರಂಭಿಸಿದಾಗಿನಿಂದಲೂ ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ ಮತ್ತು ಕೊನೆಗೂ ಜೈಪುರದಲ್ಲಿರುವ ನಮ್ಮ ಮನೆಗೆ ತಂದೆ, ತಾಯಿಯನ್ನು ತಲುಪಿಸಲು ನನಗೆ ಅವಕಾಶ ಸಿಕ್ಕಿತು. ಈ ಅನುಭವವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವೀಡಿಯೋ ಜೊತೆಗೆ ಕಮಲ್ ಕುಮಾರ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿಯನ್ನು ತೆಗಳಿ, ಖರ್ಗೆ, ಹರಿಪ್ರಸಾದ್‌ರನ್ನು ಹೊಗಳಿದ ಈಶ್ವರಪ್ಪ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ. ಅಲ್ಲದೇ ಕಾಮೆಂಟ್ ಮಾಡುವ ಮೂಲಕ ಕಮಲ್ ಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

    ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿವಾಸದ ಮೇಲೆ ವಿಮಾನವೊಂದು ಹಾರಾಟ ನಡೆಸಿದ್ದು, ದಾಳಿಯ ಭೀತಿಗೆ ಅವರನ್ನು ಹಾಗೂ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

    ಬೈಡನ್ ಅವರ ರೆಹೋಬೋತ್ ಬೀಚ್ ಬಳಿಯ ನಿವಾಸದ ಮೇಲೆ ನಿರ್ಬಂಧಿತ ವಾಯು ಪ್ರದೇಶದಲ್ಲಿ ಸಣ್ಣ ಖಾಸಗಿ ವಿಮಾನವೊಂದು ಹಾರಾಟ ನಡೆಸಿರುವುದು ಕಂಡುಬಂದಿದೆ. ಈ ಹಿನ್ನೆಲೆ ದಾಳಿ ಭೀತಿಯಿಂದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    joe biden

    ಅಮೆರಿಕ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡನ್ ಸುರಕ್ಷಿತವಾಗಿದ್ದಾರೆ. ಸದ್ಯ ಯಾವುದೇ ದಾಳಿ ನಡೆದಿಲ್ಲ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಖಾಸಗಿ ವಿಮಾನ ತಪ್ಪಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿತು. ಬಳಿಕ ಅದನ್ನು ತಕ್ಷಣವೇ ಬೇರೆಡೆಗೆ ಕೊಂಡೊಯ್ಯಲಾಯಿತು. ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗೆ ರೇಡಿಯೋ ಚಾನೆಲ್‌ನಲ್ಲಿ ದೋಷವಿದ್ದು, ಮಾರ್ಗದರ್ಶನವನ್ನು ಅನುಸರಿಸಲು ಸಾಧ್ಯವಾಗಿಲ್ಲ ಎಂದು ರಹಸ್ಯ ಸೇವೆಯ ವಕ್ತಾರ ಅಂಥೋನಿ ಗುಗ್ಲಿಲ್ಮಿ ತಿಳಿಸಿದ್ದಾರೆ.

  • ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

    ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

    ನವದೆಹಲಿ: ಕೇಂದ್ರ ಸರ್ಕಾರವು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತದೆ. ಆದರೆ ಈ ಮಧ್ಯೆ ಭಾರತದಲ್ಲಿ ಅನೇಕ ಮಂದಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

    ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹಲವಾರು ಪ್ರಸಿದ್ಧ ಸ್ಮಾರಕಗಳ ಸುತ್ತಮುತ್ತ ಗುಟ್ಕಾ ಮತ್ತು ವೀಳ್ಯದೆಲೆ ಕಲೆಗಳನ್ನು ನೀವು ಬಹುಶಃ ನೋಡಿರಬಹುದು. ಆದರೆ ಈಗ ವಿಮಾನದಲ್ಲಿ ಉಗುಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:  ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ

    ಛತ್ತೀಸ್‍ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು, ತಮ್ಮ ಟ್ವಿಟ್ಟರ್‌ನಲ್ಲಿ ವಿಮಾನದ ಕಿಟಕಿಯ ಕೆಳಗೆ ಗುಟ್ಕಾವನ್ನು ಉಗುಳಿರುವ ಕಲೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ವೈರಲ್ ಆಗುತ್ತಿರುವ ಈ ಫೋಟೋ ಹಿಂದಿರುವ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ. ಈ ಪೋಸ್ಟ್‌ಗೆ 16,000 ಕ್ಕೂ ಹೆಚ್ಚು ಲೈಕ್‍ಗಳು ಬಂದಿದ್ದು, ಕೆಲವು ಟ್ವಿಟ್ಟರ್ ಬಳಕೆದಾರರು ಸೂಪರ್‌ಸ್ಟಾರ್‌ಗಳ ತಂಬಾಕು ಸೇವನೆಯ ಜಾಹೀರಾತುಗಳನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ

    ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನಗಳು ತಿಳಿಸಿದೆ. ಹಲವಾರು ಕಂಪನಿಗಳು ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಪ್ಯಾಕ್‌ ಮೇಲೆ ನಮೂದಿಸಿರುತ್ತದೆ. ಜೊತೆಗೆ  ಚಲನಚಿತ್ರಗಳು ಪ್ರಾರಂಭವಾಗುವ ಮುನ್ನ ಚಿತ್ರಮಂದಿರಗಳಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು  ಪ್ರಸಾರ ಮಾಡುವ ಮೂಲಕ ಸಂದೇಶ ಸಾರಲಾಗುತ್ತದೆ.

  • ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ

    ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ

    ನವದೆಹಲಿ: ಭಾರತದ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ದೇಸಿ ಸಂಗೀತವನ್ನು ಬಳಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. ಈ ಬಗ್ಗೆ ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯ ಮನವಿಯನ್ನು ಉಲ್ಲೇಖಿಸಿ ಈ ಪತ್ರ ಬರೆದಿದೆ.

    ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯು ಭಾರತದಲ್ಲಿ ಸಂಚರಿಸುವ ವಿಮಾನಗಳು ಮತ್ತು ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಬಳಕೆ ಮಾಡಲು ಸೂಚಿಸುವಂತೆ ಮನವಿ ಮಾಡಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿತ್ತು.

    ಈ ಪತ್ರ ಆಧರಿಸಿ ಸೂಚನೆ ನೀಡಿರುವ ಸಚಿವಾಲಯ, ಭಾರತದಲ್ಲಿ ಸಂಗೀತವು ಸಾಮಾಜಿಕ-ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿ ಪ್ರಾರಂಭವಾಯಿತು. ವಿದೇಶಿ ವಿಮಾನಗಳು ಬಳಸುವ ಸಂಗೀತ ಆಯಾ ದೇಶಗಳ ಸಂಗೀತವಾಗಿದೆ. ಅಮೇರಿಕನ್ ಏರ್‌ಲೈನ್ಸ್ನಲ್ಲಿ ಜಾಝ್, ಆಸ್ಟಿçಯನ್ ಏರ್‌ಲೈನ್ಸ್ ನಲ್ಲಿ ಮೊಜಾರ್ಟ್ ಮತ್ತು ಮಧ್ಯಪ್ರಾಚ್ಯದ ವಿಮಾನಯಾನದಲ್ಲಿ ಅರಬ್ ಸಂಗೀತ ಪ್ರಸಾರ ಮಾಡಲಾಗುತ್ತಿದೆ. ಅದರಂತೆ ಭಾರತದ ವಿಮಾನಗಳಲ್ಲಿ ಭಾರತೀಯ ಸಂಗೀತ ಬಳಕೆ ಮಾಡಬೇಕು ಎಂದು ಪತ್ರದ ಮೂಲಕ ಸೂಚಿಸಿದೆ. ಇದನ್ನೂ ಓದಿ: ಮಾಜಿ ಸಿಎಂ ಎಚ್‌ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ

    ಭಾರತೀಯ ವಿಮಾನಯಾನ ಸಂಸ್ಥೆಗಳು ವಿಮಾನದಲ್ಲಿ ಭಾರತೀಯ ಸಂಗೀತವನ್ನು ಅಪರೂಪವಾಗಿ ಬಳಕೆ ಮಾಡುತ್ತಿವೆ. ನಮ್ಮ ಭಾರತೀಯ ಸಂಗೀತವು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವ ಅನೇಕ ವಿಷಯಗಳಲ್ಲಿ ಇದು ಕೂಡ ಒಂದಾಗಿದೆ. ಹೀಗಾಗಿ ಭಾರತೀಯ ಸಂಗೀತಕ್ಕೆ ಆದ್ಯತೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣ’

  • ಸಿಎಂ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

    ಸಿಎಂ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

    ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಬೇಕಿದ್ದ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.

    ಇಂದು ಸಿಎಂ ಇದ್ದ ವಿಮಾನ ಬೆಳಗ್ಗೆ 8.45ಕ್ಕೆ ಎಚ್‌ಎಎಲ್‌ನಿಂದ ಟೇಕ್ ಆಫ್ ಆಗಿ 9:45ರ ಸುಮಾರಿಗೆ ಹುಬ್ಬಳ್ಳಿಗೆ ಆಗಮಿಸಬೇಕಿತ್ತು. ಆದರೆ ಸಿಎಂ ವಿಮಾನದಲ್ಲಿ ಬೆಳಗ್ಗೆ ತಾಂತ್ರಿಕ ದೋಷ ಕಂಡು ಬಂದ ಕಾರಣ ಕ್ಲಿಯರೆನ್ಸ್ ಸಿಗಲಿಲ್ಲ. ಹೀಗಾಗಿ ಪ್ರಯಾಣ ವಿಳಂಬವಾಗಿದೆ. ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್‌, ಎಸ್‌.ಟಿ.ಸೋಮಶೇಖರ್‌ ನಿಲ್ದಾಣದಲ್ಲೇ ಕಾಯುವಂತಾಯಿತು. ಇದನ್ನೂ ಓದಿ: ಲ್ಯಾಂಡಿಂಗ್ ಸಮಸ್ಯೆಯಾದ ಸಿಎಂ ಬೊಮ್ಮಾಯಿ ಇದ್ದ ವಿಮಾನ

    Basavaraj bommai

    ಬಿಜೆಪಿ ಕಾರ್ಯಕಾರಿಣಿಯ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಸಚಿವರು ತೆರಳಬೇಕಿತ್ತು. ಆದರೆ ತಾಂತ್ರಿಕ ದೋಷ ಕಾರಣ ವಿಳಂಬವಾದ್ದರಿಂದ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್, ಎಸ್.ಟಿ.ಸೋಮಶೇಖರ್ ಪಾಲ್ಗೊಂಡರು. ಸಿಎಂ ಹಾಗೂ ಸಚಿವರ ಪ್ರಯಾಣಕ್ಕೆ ಬದಲಿ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 12:45 ಗಂಟೆಗೆ ಪ್ರಯಾಣ ಬೆಳೆಸಲಿದ್ದಾರೆ.

    ಸಿಎಂ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ರೀತಿ ತಾಂತ್ರಿಕ ದೋಷ ಕಂಡು ಬಂದಿದ್ದು, ಇದು ಎರಡನೇ ಬಾರಿಯಾಗಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

    ಹಿಂದೊಮ್ಮೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಇದ್ದ ವಿಮಾನ ಲ್ಯಾಂಡಿಂಗ್‌ಗೆ ಸಮಸ್ಯೆ ಉಂಟಾಗಿತ್ತು. ಆದರೆ ಈಗ ಟೆಕ್ ಆಫ್ ಆಗುವಾಗ ಸಮಸ್ಯೆ ಕಂಡು ಬಂದಿದೆ. ಇದನ್ನೂ ಓದಿ: ಮದ್ಯ ಸೇವಿಸಬೇಕು ಅನ್ನೋರು ಬಿಹಾರಕ್ಕೆ ಬರಲೇಬೇಡಿ: ನಿತೀಶ್ ಕುಮಾರ್

  • ಲ್ಯಾಂಡಿಂಗ್ ಸಮಸ್ಯೆಯಾದ ಸಿಎಂ ಬೊಮ್ಮಾಯಿ ಇದ್ದ ವಿಮಾನ

    ಲ್ಯಾಂಡಿಂಗ್ ಸಮಸ್ಯೆಯಾದ ಸಿಎಂ ಬೊಮ್ಮಾಯಿ ಇದ್ದ ವಿಮಾನ

    ಹುಬ್ಬಳ್ಳಿ: ಪ್ರತಿಕೂಲ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ  ಲ್ಯಾಂಡಿಂಗ್ ಗೆ ಸಮಸ್ಯೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂಡಿಗೊ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು. ಆದರೆ ಹುಬ್ಬಳ್ಳಿಯಲ್ಲಿ  ಹವಾಮಾನ ವೈಪರೀತ್ಯ ಕಂಡುಬಂದಿದೆ. ಇದರಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿದೆ.  ಹುಬ್ಬಳ್ಳಿಯಲ್ಲೇ ಮೂರು ಸುತ್ತುತ್ತಾ ಆಕಾಶದಲ್ಲೆ ವಿಮಾನ ಹಾರಾಡಿದೆ.

    ಇಂಡಿಗೊ 6ಇ-7227 ವಿಮಾನದ ಮೂಲಕ ಸಿಎಂ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದರು. ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ಸಮಸ್ಯೆಯಾಗಿ ವಿಮಾನ 15 ನಿಮಿಷಗಳ ಕಾಲ ಆಕಾಶದಲ್ಲೇ ಹಾರುವ ಪರಿಸ್ಥಿತಿ ಒದಗಿತು. ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 7:30ಕ್ಕೆ ಲ್ಯಾಡಿಂಗ್ ಆಗಬೇಕಿದ್ದ ಅರ್ಧ ಗಂಟೆ ತಡವಾಗಿ ಲ್ಯಾಂಡಿಂಗ್ ಆಯಿತು. ಇದನ್ನೂ ಓದಿ: ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

    ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಶಿಗ್ಗಾಂವನಲ್ಲಿ ಮತಚಲಾವಣೆ ಮಾಡಲು ಆಗಮಿಸಿದ್ದೇನೆ. ಆದರೆ ಹವಾಮಾನ ವೈಪ್ಯರಿತ್ಯರಿಂದ ವಿಮಾನ ತಡವಾಗಿ ಲ್ಯಾಂಡಿಂಗ್ ಆಗಿದೆ ಎಂದರು. ಇದನ್ನೂ ಓದಿ: ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ

    ಓಮಿಕ್ರಾನ್ ಬಗ್ಗೆ ಮಾತನಾಡಿದ ಅವರು, ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಯಾವುದೆ ನಿರ್ಬಂಧನೆ ಸದ್ಯಕ್ಕಿಲ್ಲ. ಈ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಹೇಳಿದರು. ಇದೇ ವೇಳೆ ಮಹದಾಯಿ ವಿಚಾರವಾಗಿ ಮತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ. ಮಹದಾಯಿ ಕಾಮಗಾರಿ ಆರಂಭಿಸಲು ಏನೂ ಮಾಡಬೇಕು ಅದನ್ನು ಮಾಡುತ್ತೇವೆ ಎಂದ ಅವರು, ಬೆಳೆ ಹಾನಿ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ಆರಂಭವಾಗಿದೆ. ಪರಿಹಾರ ಆ್ಯಪ್ ಮೂಲಕ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್

  • ವಿಮಾನ ತಳ್ಳುತ್ತಿರುವ ಜನರು- ವೀಡಿಯೋ ವೈರಲ್

    ವಿಮಾನ ತಳ್ಳುತ್ತಿರುವ ಜನರು- ವೀಡಿಯೋ ವೈರಲ್

    ಕಠ್ಮಂಡು: ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನಗಳನ್ನು ತಳ್ಳುವುದನ್ನು ನೋಡಿದ್ದೇವೆ. ಆದರೆ ವಿಚಿತ್ರ ಎನ್ನುವಂತೆ ವಿಮಾನವೊಂದನ್ನು ಅದೇ ರೀತಿ ತಳ್ಳುತ್ತಿರುವ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಈ ಘಟನೆ ನೇಪಾಳದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ವೀಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಹೆಚ್ಚು ಲೈಕ್ ಮತ್ತು ಕಾಮೆಂಟ್‌ನ್ನು ಪಡೆದುಕೊಂಡಿದೆ.

    ವೀಡಿಯೋದಲ್ಲಿ ಏನಿದೆ?: ವಿಮಾನದ ರನ್‌ವೇ ಟೈರ್ ಸಿಡಿದಿದ್ದರಿಂದ, ಅದು ರನ್‌ವೇದಲ್ಲೇ ನಿಂತುಕೊಂಡಿತ್ತು. ಇದರಿಂದ ಇತರೇ ವಿಮಾನಗಳಿಗೆ ತೊಂದರೆ ಆಗಬಾರದು ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪ್ರಯಾಣಿಕರು ತಳ್ಳಲು ಪ್ರಾರಂಭಿಸಿದ್ದಾರೆ. ಇದನ್ನು ಅಲ್ಲಿರುವ ಪ್ರಯಾಣಿಕರೆಲ್ಲರೂ ಸೇರಿ ವಿಮಾನವನ್ನು ತಳ್ಳುವುದನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಚಿತ್ರಿಕರಿಸಿಕೊಂಡಿದ್ದಾರೆ. ಇದನ್ನೂ ಓದಿ:  ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ

    ಕೆಟ್ಟು ನಿಂತ ವಿಮಾನವನ್ನು ಬೇರೆ ಕಡೆಗೆ ಎಳೆಯಲು ಯಾವುದೇ ಸೌಲಭ್ಯವಿಲ್ಲದ ಕಾರಣ ಪ್ರಯಾಣಿಕರ ಸಹಾಯ ಪಡೆದು ವಿಮಾನವನ್ನು ತಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.