Tag: airline

  • ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

    ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ (Air India) ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ವಸ್ತ್ರಸಂಹಿತೆ ಜಾರಿ ಮಾಡಿದೆ.

    ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು (Women’s) ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ

    ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು-ಬೋಳಾಗಿ ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದಲನ್ನು ಪ್ರತಿನಿತ್ಯ ಶೇವ್ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯ ವರ್ತನೆ ನಿಲ್ಲಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    ಮಹಿಳಾ ಸಿಬ್ಬಂದಿ ಕೇವಲ ಚಿನ್ನ (Gold) ಮತ್ತು ವಜ್ರದ ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ. ಗಿಂತ ಹೆಚ್ಚು ಅಗಲವಿಲ್ಲದ ಉಂಗುರ ಧರಿಸಬೇಕು. 1 ಕೈಗೆ 1 ಉಂಗುರ ಮಾತ್ರ ಧರಿಸಬೇಕು. ಡಿಸೈನ್‌ಗಳಿಲ್ಲದ 1 ಬಳೆ ಮಾತ್ರ ಧರಿಸಬೇಕು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಇಸ್ಲಾಮಾಬಾದ್: ಇನ್ಮುಂದೆ ವಿಮಾನದ (AirCraft) ಕ್ಯಾಬಿನ್ ಸಿಬ್ಬಂದಿ ಸೂಕ್ತವಾದ ಒಳಉಡುಪುಗಳನ್ನು ಧರಿಸಲೇಬೇಕು ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯು (PIA) ಆದೇಶಿಸಿದೆ.

    ಈ ಆದೇಶವು ವಿಚಿತ್ರ ಹಾಗೂ ವಿಲಕ್ಷಣ ಎಂದೇ ಅನ್ನಿಸಬಹುದು. ಆದರೆ ಕ್ಯಾಬಿನ್ ಸಿಬ್ಬಂದಿಗೆ ಡ್ರೆಸ್ಸಿಂಗ್ (Dress) ಸೆನ್ಸ್ ತುಂಬಾನೇ ಮುಖ್ಯ. ಇಲ್ಲವಾದಲ್ಲಿ ಸಂಸ್ಥೆಯ ಬಗ್ಗೆ ಪ್ರಯಾಣಿಕರು ನಕಾರಾತ್ಮಕ ಧೋರಣೆ ತಾಳುತ್ತಾರೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಿದೆ. ಈ ಹೊಸ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ವಿಮಾನ ಸಿಬ್ಬಂದಿಗೆ ಕೇಳಿಕೊಂಡಿದೆ. ಇದನ್ನೂ ಓದಿ: ಕಿಡ್ನಿ ಕಸಿ ಮಾಡಿಸಿಕೊಂಡು 4 ವರ್ಷದ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆ

    ಕೆಲ ಕ್ಯಾಬಿನ್ ಸಿಬ್ಬಂದಿ ಇಂಟರ್‌ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ವಿವಿಧ ಭೇಟಿಗಳ ಸಂದರ್ಭದಲ್ಲಿ ತಮ್ಮಿಚ್ಛೆಯಂತೆ ಉಡುಗೆ ಧರಿಸುತ್ತಾರೆ. ಇಂತಹ ಡ್ರೆಸ್ಸಿಂಗ್ ಸೆನ್ಸ್ ನೋಡುಗರಲ್ಲಿ ಮುಜುಗರ ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಬಗ್ಗೆ ಪ್ರಯಾಣಿಕರಲ್ಲಿ ತಪ್ಪು ಗ್ರಹಿಕೆಗೆ ಈಡುಮಾಡುತ್ತದೆ. ಆದ್ದರಿಂದ ಪುರುಷರೇ ಆಗಲಿ ಮಹಿಳೆಯರೇ ಆಗಲಿ ಸೂಕ್ತ ಒಳಉಡುಪು ಮತ್ತು ಸರಳವಾದ ಉಡುಪುಗಳನ್ನು ಧರಿಸಬೇಕು. ಈ ಧರಿಸುವಿಕೆ ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ನೈತಿಕತೆಗೆ ಅನುಗುಣವಾಗಿರಬೇಕು. ಈ ಕುರಿತು ಅಧಿಕಾರಿಗಳು ಗಮನಿಸಬೇಕು ಎಂದು ಪಿಐಎ ಪ್ರಧಾನ ವ್ಯವಸ್ಥಾಪಕ ಅಮೀರ್ ಬಶೀರ್ (Aamir Bashir) ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಪಿಐಎ ಪಾಕಿಸ್ತಾನದ (Pakistan) ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, 30 ವಿಮಾನಗಳನ್ನ ಲಾಂಚ್ ಮಾಡಿದೆ. ಪ್ರತಿದಿನ 100 ವಿಮಾನಗಳು ಕಾರ್ಯಾಚರಣೆ ನಡೆಸಲಿದ್ದು, ಏಷ್ಯಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕಾ ಸೇರಿದಂತೆ 18 ದೇಶೀಯ ಸ್ಥಳಗಳು ಹಾಗೂ 25 ಅಂತರರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಮುಂಬೈ: ಸ್ಪೈಸ್ ಜೆಟ್ (SpiceJet) ಏರ್‌ಲೈನ್ (AirLine) ಇಂದು ಏಕಾ ಏಕಿ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ದೀರ್ಘ ರಜೆಯಲ್ಲಿರುವಂತೆ (Leave Without Pay) ಸೂಚಿಸಿದೆ.

    ಸ್ಪೈಸ್‌ಜೆಟ್ ಹೆಚ್ಚಿನ ಸಂಖ್ಯೆಯ ಪೈಲಟ್‌ಗಳನ್ನು (Pilots) ಹೊಂದಿದ್ದು, ನಿರ್ವಹಣಾ ವೆಚ್ಚ ಸರಿದೂಗಿಸಲು ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯ ವಿಮಾನಯಾನ (AirLine) ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಬೋಯಿಂಗ್-737 ವಿಭಾಗದ 40 ಪೈಲಟ್‌ಗಳು ಹಾಗೂ ಕ್ಯೂ-400 ವಿಭಾಗದ 40 ಪೈಲಟ್‌ಗಳು (Pilots) ಸೇರಿ ಒಟ್ಟು 80 ಪೈಲಟ್‌ಗಳನ್ನು ಧೀರ್ಘ ರಜೆ ಮೇಲೆ ಮನೆಗೆ ತೆರಳುವಂತೆ ಸೂಚಿಸಿದೆ. ಡಿಸೆಂಬರ್‌ನಲ್ಲಿ 7 ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    2021ರ ಆರಂಭದಲ್ಲಿ ಸ್ಪೈಸ್ ಜೆಟ್ (Spice Jet) 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ 50 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ವಿಮಾನಗಳನ್ನು ಲೀಸ್‌ಗೆ ನೀಡಿದೆ. ಇನ್ನೂ ಕೆಲವು ನಿರ್ವಹಣಾ ಸಮಸ್ಯೆಯಿಂದ ಹಾರಾಟ ನಡೆಸುತ್ತಿಲ್ಲ. ಜೊತೆಗೆ ಸಂಸ್ಥೆಯು ಆರ್ಥಿಕತೆಯ (Economy Problem) ಒತ್ತಡದಲ್ಲಿದೆ. ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆ ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ ಎಂದು ಈ ನಿರ್ಧಾರ ಕೈಗೊಂಡಿದೆ. ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ

    ನವದೆಹಲಿ: ಕಳೆದ ಕೆಲವು ದಿನಗಳಿಂದ ಸ್ಪೈಸ್‌ಜೆಟ್ ವಿಮಾನಗಳು ಪ್ರಯಾಣದ ಸಂದರ್ಭದಲ್ಲಿ ಹಲವು ಬಾರಿ ತಾಂತ್ರಿಕ ದೋಷಗಳನ್ನು ಎದುರಿಸಿವೆ. ಘಟನೆಗಳು ಒಂದೊಂದಾಗಿ ವರದಿಯಾಗುತ್ತಿದ್ದಂತೆ ಪ್ರಯಾಣಿಕರಲ್ಲಿ ನಡುಕವೂ ಉಂಟಾಗಿದೆ. ಈ ಹಿನ್ನೆಲೆ ಸ್ಪೈಸ್‌ಜೆಟ್ ವಿಮಾನ ಹಾರಾಟವನ್ನು ನಿಲ್ಲಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

    ಇತ್ತೀಚೆಗೆ ಸ್ಪೈಸ್‌ಜೆಟ್ ವಿಮಾನಗಳಲ್ಲಿ ಅನೇಕ ಅಹಿತಕರ ಘಟನೆಗಳು ಸಂಭವಿಸಿವೆ. ವಿಮಾನ ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸಲು ಆಯೋಗ ರಚಿಸಲು ಮನವಿಯಲ್ಲಿ ಕೋರಲಾಗಿದೆ ಎಂದು ವಕೀಲ ರಾಹುಲ್ ಭಾರದ್ವಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವಾ ಆಯ್ಕೆ

    ಜೂನ್ 19 ರಿಂದ ಇಲ್ಲಿಯವರೆಗೆ 9 ಬಾರಿ ಸ್ಪೈಸ್‌ಜೆಟ್ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಈ ಹಿನ್ನೆಲೆ ಜುಲೈ 6 ರಂದು ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟೀಸ್ ನೀಡಿತ್ತು. ಇದೀಗ ಹೆಚ್ಚುತ್ತಿರುವ ಭೀತಿಯ ನಡುವೆ ಸ್ಪೈಸ್‌ಜೆಟ್ ವಿಮಾನ ಹಾರಾಟವನ್ನು ನಿಲ್ಲಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್‌ ಹಾಕಿದ ಬಿಜೆಪಿ

    ಸುರಕ್ಷಿತ, ದಕ್ಷ ಹಾಗೂ ವಿಶ್ವಾಸಾರ್ಹ ವಿಮಾನ ಸೇವೆಗಳನ್ನು ನೀಡುವಲ್ಲಿ ಸ್ಪೈಸ್‌ಜೆಟ್ ವಿಫಲವಾಗಿದೆ ಎಂದು ಡಿಜಿಸಿಎ ಹೇಳಿದೆ. ಡಿಜಿಸಿಎ ಶೋಕಾಸ್ ನೋಟೀಸ್‌ಗೆ ಪ್ರತಿಕ್ರಿಯೆ ನೀಡಲು ಸ್ಪೈಸ್‌ಜೆಟ್‌ಗೆ 3 ವಾರಗಳ ಕಾಲಾವಕಾಶವನ್ನು ನೀಡಿದೆ. ಡಿಜಿಸಿಎ ಶೋಕಾಸ್ ನೋಟಿಸ್ ಬಳಿಕ ಸ್ಪೈಸ್‌ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಸ್ಪೈಸ್‌ಜೆಟ್‌ನಲ್ಲಿ ಪ್ರಯಾಣ ಮಾಡಲು ಶೇ.100 ರಷ್ಟು ಸುರಕ್ಷಿತವಾಗಿದೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • 16 ವರ್ಷದ ಬಳಿಕ 200 ಹೊಸ ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ

    16 ವರ್ಷದ ಬಳಿಕ 200 ಹೊಸ ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ

    ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 200ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಅವುಗಳಲ್ಲಿ ಶೇ.70 ರಷ್ಟು ಸಣ್ಣ ದೇಹವುಳ್ಳ ವಿಮಾನಗಳನ್ನು ಖರೀದಿಸಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

    ಏರ್‌ಬಸ್ ಎ350 ಅಗಲ ದೇಹದ ಏರ್‌ಕ್ರಾಫ್ಟ್ ಖರೀದಿಗೆ ಏರ್‌ಇಂಡಿಯಾ ಯೋಜನೆ ನಡೆಸಿದ್ದರೂ ಇಲ್ಲಿಯವರೆಗೆ ಖರೀದಿಸಲಾಗಿಲ್ಲ. ಇದೀಗ ಚಿಕ್ಕ ಗಾತ್ರದ ವಿಮಾನಗಳನ್ನು ಕೊಳ್ಳಲು ಏರ್ ಇಂಡಿಯಾ ವಿಮಾನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿವೆ. ಇದನ್ನೂ ಓದಿ: ಮತದಾನಕ್ಕೆ ಅನುಮತಿ ನೀಡಿ- ಸುಪ್ರೀಂ ಮೊರೆ ಹೋದ ಮಲಿಕ್, ದೇಶಮುಖ್

    ಏರ್ ಇಂಡಿಯಾ 2006ರಲ್ಲಿ ಕೊನೆಯದಾಗಿ 111 ವಿಮಾನಗಳನ್ನು ಖರೀದಿಸಿತ್ತು. ಅಮೆರಿಕ ಮೂಲದ ಬೋಯಿಂಗ್ ಕಂಪನಿಯಿಂದ 86 ವಿಮಾನಗಳು ಹಾಗೂ ಏರ್‌ಬಸ್‌ನಿಂದ 43 ವಿಮಾನಗಳನ್ನು ಖರೀದಿಸಿತ್ತು. ಇದೀಗ 16 ವರ್ಷಗಳ ಬಳಿಕ ಮೊದಲ ಬಾರಿ ವಿಮಾನಗಳನ್ನು ಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್

    ಕಳೆದ ವರ್ಷ ಅಕ್ಟೋಬರ್ 8 ರಂದು ಏರ್‌ಲೈನ್ಸ್ ಬಿಡ್ ಅನ್ನು ಟಾಟಾ ಗ್ರೂಪ್ ಯಶಸ್ವಿಯಾಗಿ ಗೆದ್ದು, ಈ ವರ್ಷ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದೀಗ 200 ಹೊಸ ವಿಮಾನಗಳನ್ನು ಕೊಳ್ಳಲು ಮುಂದಾಗಿದ್ದು, ಅದರಲ್ಲಿ ಶೇ.70 ರಷ್ಟು ಚಿಕ್ಕ ವಿಮಾನಗಳು ಹಾಗೂ ಶೇ.30 ರಷ್ಟು ದೊಡ್ಡ ವಿಮಾನಗಳನ್ನು ಕೊಳ್ಳುವುದಾಗಿ ತಿಳಿಸಿದೆ.

    Live Tv

  • ಟಿಕೆಟ್ ಇದ್ದೂ ಪ್ರವೇಶ ನಿರಾಕರಿಸಿದ ಏರ್‌ಇಂಡಿಯಾಕ್ಕೆ 10 ಲಕ್ಷ ದಂಡ

    ಟಿಕೆಟ್ ಇದ್ದೂ ಪ್ರವೇಶ ನಿರಾಕರಿಸಿದ ಏರ್‌ಇಂಡಿಯಾಕ್ಕೆ 10 ಲಕ್ಷ ದಂಡ

    ನವದೆಹಲಿ: ಟಿಕೆಟ್ ಇದ್ದರೂ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಹಾಗೂ ಮಾರ್ಗಸೂಚಿ ಉಲ್ಲಂಘಿಸಿ ಪರಿಹಾರ ಕೊಡಲು ನಿರಾಕರಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

    ಬೆಂಗಳೂರು, ಹೈದರಾಬಾದ್ ಹಾಗೂ ದೆಹಲಿಯಲ್ಲಿ ನಮ್ಮ ಕಣ್ಗಾವಲು ಘಟಕವು ಪರಿಶೀಲನೆ ನಡೆಸಿದಾಗ, ಏರ್ ಇಂಡಿಯಾ ಸಂಸ್ಥೆ ಮಾರ್ಗಸೂಚಿ (ಪ್ರಯಾಣಿಕರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ್ದು) ಉಲ್ಲಂಘಿಸಿರುವುದು ಕಂಡುಬಂದಿದೆ. ಈ ಕುರಿತು ಶೋಕಾಸ್ ನೋಟಿಸ್ ನೀಡಿ ವಿಚಾರಣೆಯನ್ನೂ ನಡೆಸಲಾಗಿತ್ತು ಎಂದು ಡಿಜಿಸಿಎ ತಿಳಿಸಿದೆ. ಇದನ್ನೂ ಓದಿ: ಅಂದು ಜಯಾ ಜೈಲಿಗೆ, ಇಂದು ಸಂಕಷ್ಟದಲ್ಲಿ ಸೋನಿಯಾ, ರಾಹುಲ್‌ – ಇದು ಸ್ವಾಮಿ ದೂರಿನ ಕರಾಮತ್ತು

    ಈ ವಿಚಾರಕ್ಕೆ ಸಂಬಂಧಿಸಿ ಏರ್ ಇಂಡಿಯಾವು ನೀತಿ ಹೊಂದಿಲ್ಲದಿರಬಹುದು. ಹೀಗಾಗಿ ಪರಿಹಾರ ನೀಡದೇ ಇದ್ದಿರಬಹುದು. ಆದರೆ ಇದು ಗಂಭೀರ ಮತ್ತು ಸ್ವೀಕಾರಾರ್ಹವಲ್ಲದ ಪ್ರಕರಣ. ನಿರ್ದಿಷ್ಟ ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೋರಲಾಗಿದೆ. ಏರ್ ಇಂಡಿಯಾ ನೀಡಿರುವ ವಿವರಣೆಯನ್ನು ಪರಿಶೀಲಿಸಿದ ಬಳಿಕ 10 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಮುಂದಿನ ಕ್ರಮ ಕೈಗೊಳ್ಳುವುದಕ್ಕೂ ಮುನ್ನವೇ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಡಿಜಿಸಿಎ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ʼಸೂಪರ್‌ ಚೀಫ್‌ ಜಸ್ಟಿಸ್‌ʼನಂತೆ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ

    ಸಾಂದರ್ಭಿಕ ಚಿತ್ರ

    ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಬಾಲಕನಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ ಇಂಡಿಗೊ ಏರ್‌ಲೈನ್ಸ್ಗೆ ಡಿಜಿಸಿಎ 5 ಲಕ್ಷ ರೂ. ದಂಡ ವಿಧಿಸಿತ್ತು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಕೆಲ ದಿನಗಳ ನಂತರ ಏರ್‌ಇಂಡಿಯಾಗೆ 10 ಲಕ್ಷ ರೂ. ದಂಡ ವಿಧಿಸಿದೆ.

  • 3 ವರ್ಷಗಳ ಬಳಿಕ ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್

    3 ವರ್ಷಗಳ ಬಳಿಕ ಮತ್ತೆ ಹಾರಾಟ ಪ್ರಾರಂಭಿಸಲಿವೆ ಜೆಟ್ ಏರ್‌ವೇಸ್

    ನವದೆಹಲಿ: ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ 3 ವರ್ಷಗಳ ಬಳಿಕ ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಜೆಟ್ ಏರ್‌ವೇಸ್‌ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಪರವಾನಗಿ ನೀಡಿದೆ.

    2019ನೇ ಇಸವಿಯಲ್ಲಿ ಜೆಟ್ ಏರ್‌ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಇದೀಗ ಜೆಟ್ ಆಪರೇಟರ್ ಪ್ರಮಾಣಪತ್ರ ಲಭಿಸಿರುವುದರಿಂದ ಜೆಟ್ ಏರ್‌ವೇಸ್ ಸಂಸ್ಥೆಗೆ ವಾಣಿಜ್ಯ ವಿಮಾನಯಾನ ಪುನರಾರಂಭಿಸಲು ಅನುಮತಿ ಸಿಕ್ಕಂತಾಗಿದೆ. ಇದನ್ನೂ ಓದಿ: ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದ ಬ್ರೆಂಡನ್ ಮೆಕಲಮ್

    ಜೆಟ್ ಏರ್‌ವೇಸ್ ಈ ವರ್ಷ ಜುಲೈ ನಿಂದ ಸೆಪ್ಟೆಂಬರ್ ತಿಂಗಳ ಒಳಗಾಗಿ ವಾಣಿಜ್ಯ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 95 ಕೇಸ್ – ಇಂದು 20,444 ಕೋವಿಡ್ ಟೆಸ್ಟ್

    ನರೇಶ್ ಗೋಯಲ್ ಒಡೆತನದಲ್ಲಿದ್ದ ಜೆಟ್ ಏರ್‌ವೇಸ್ 2019ರ ಏಪ್ರಿಲ್ 17ರಂದು ಕೊನೆಯ ಬಾರಿ ಹಾರಾಟ ನಡೆಸಿತ್ತು. ಪ್ರಸ್ತುತ ಜಲನ್-ಕಾಲ್‌ರಾಕ್ ಒಕ್ಕೂಟ ಜೆಟ್ ಏರ್‌ವೇಸ್‌ಅನ್ನು ಮುನ್ನಡೆಸುತ್ತಿದೆ.

  • ತನ್ನ ಲಗೇಜ್ ಹುಡುಕಲು ಇಂಡಿಗೋ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರು ಟೆಕ್ಕಿ

    ತನ್ನ ಲಗೇಜ್ ಹುಡುಕಲು ಇಂಡಿಗೋ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರು ಟೆಕ್ಕಿ

    ನವದೆಹಲಿ: ವಿಮಾನಯಾನ ಕೆಲವರಿಗೆ ನೆಚ್ಚಿನ ಪ್ರಯಾಣ. ಅದರಲ್ಲೂ ಮೆಟ್ರೋ ನಗರದಲ್ಲಿನ ಉದ್ಯಮಿಗಳು, ಉದ್ಯೋಗಿಗಳು ಹಾಗೂ ವಿವಿಧ ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ.

    ಪ್ರಯಾಣದ ವೇಳೆ ಕೆಲವೊಮ್ಮೆ ಸಣ್ಣಪುಟ್ಟ ಗೊಂದಲಗಳಿಂದ ತಮ್ಮ ವಸ್ತುಗಳು (ಲಗೇಜ್) ಮಿಸ್ ಆಗಿಬಿಡುತ್ತದೆ. ಕೆಲವರು ಬದಲಾದ ವಸ್ತುವನ್ನು ಹುಡುಕಲು ವಾರಗಟ್ಟಲೇ ಸಮಯ ಕಾಯುತ್ತಾರೆ. ಇನ್ನೂ ಕೆಲವರು ಹೋಗಿದ್ದು ಹೋಯ್ತೆಂದು ಸುಮ್ಮನಾಗುತ್ತಾರೆ. ಆದರೆ ಕನ್ವೇಯರ್ ಬೆಲ್ಟ್‌ನಲ್ಲಿ ಲಗೇಜ್‌ಗಳನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಅದಕ್ಕೆ ವಿಮಾನಯಾನ ಸಂಸ್ಥೆಗಳೂ ಅಷ್ಟಾಗಿ ಸಹಾಯ ನೀಡುವುದಿಲ್ಲ. ಹೀಗೆಂದು ಬೆಂಗಳೂರಿನ ಯುವಕನೊಬ್ಬ ಇಂಡಿಗೋ ಏರ್‌ಲೈನ್ಸ್ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡುವ ಮೂಲಕ ತನ್ನ ಕಳೆದುಹೋದ ವಸ್ತುಗಳನ್ನು ಸ್ವಪ್ರಯತ್ನದಿಂದ ಪಡೆಯುವ ಪ್ರಯತ್ನ ಮಾಡಿದ್ದು, ಅದರಲ್ಲಿ ಯಶಸ್ಸೂ ಕಂಡಿದ್ದಾರೆ. ಇದನ್ನೂ ಓದಿ: 10ನೇ ದಿನದಲ್ಲಿ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ 

    INDIGO

    ಹೌದು. ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ನಾದನ್ ಕುಮಾರ್ ಅವರ ವಸ್ತುಗಳು ಸಹ ಪ್ರಯಾಣಿಕರೊಬ್ಬರಿಗೆ ಬದಲಾಗಿತ್ತು. ಇದು ಕುಮಾರ್ ಅವರ ಕೌಶಲವನ್ನು ಉತ್ತಮವಾಗಿ ಬಳಸಿಕೊಳ್ಳುವುದಕ್ಕೆ ಪ್ರೇರೇಪಿಸಿತು. ಏರ್‌ಲೈನ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುವ ಮೂಲಕ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುವುದಕ್ಕೂ ಸಾಧ್ಯವಾಯಿತು.

    ಈ ಕುರಿತು ಟ್ವೀಟ್ ಸಹ ಮಾಡಿರುವ ಕುಮಾರ್, ಇಂಡಿಗೋ ಏರ್‌ಲೈನ್‌ನ ವೆಬ್‌ಸೈಟ್‌ನ ಭದ್ರತೆಯಲ್ಲಿನ ನ್ಯೂನತೆಗಳಿಂದಾಗಿ ತಮ್ಮ ಲಗೇಜ್ ಅನ್ನು ಹೇಗೆ ಹಿಂಪಡೆದರು ಎಂಬ ಇಂಟರೆಸ್ಟಿಂಗ್‌ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್

    AIRLINE

    ನಾನು ನಿನ್ನೆ ಇಂಡಿಗೋ (SIC) 6E-185 ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಈ ವೇಳೆ ನನ್ನ ಲಗೇಜ್ ಬ್ಯಾಗ್ ಹಾಗೂ ಸಹ ಪ್ರಯಾಣಿಕರೊಬ್ಬರ ಲಗೇಜ್‌ಬ್ಯಾಗ್ ಒಂದೇ ರೀತಿಯಲ್ಲಿ ಬಣ್ಣ ಹೋಲುವುದಾಗಿದ್ದರಿಂದ ಅದಲು ಬದಲಾಗಿಬಿಟ್ಟಿತು. ಅದನ್ನು ಮರಳಿ ಪಡೆಯುವ ಸಲುವಾಗಿ ಗ್ರಾಹಕಸೇವಾ ಸಂಖ್ಯೆಗೆ ಕರೆ ಮಾಡಿ, ಲಗೇಜ್ ಅನ್ನು ಪತ್ತಹಚ್ಚಲು ಸಾಧ್ಯವಾಗುವ ಎಲ್ಲ ಪ್ರೋಟೋಕಾಲ್‌ಗಳನ್ನು ಅನುಸರಿಸಿದೆ. ಆದರೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಗ್ರಾಹಕಸೇವಾ ತಂಡವು ಗೌಪ್ಯತೆ ಮತ್ತು ಮಾಹಿತಿ ಭದ್ರತಾ ದೃಷ್ಟಿಯಿಂದ ವ್ಯಕ್ತಿಯ ಸಂಪರ್ಕವನ್ನೂ ಸಹ ನನಗೆ ತಿಳಿಸಲಿಲ್ಲ. ಮರುದಿನ ಕರೆ ಮಾಡಿದರೂ ಗ್ರಾಹಕ ಸೇವಾ ಏಜೆಂಟ್ ನನ್ನ ಕರೆಗಳನ್ನು ಸ್ವೀಕರಿಸಲೇ ಇಲ್ಲ. ಎಷ್ಟೇ ಪ್ರಯತ್ನಿಸಿದರೂ ಲಗೇಜ್ ಸಹ ಪ್ರಯಾಣಿಕನನ್ನು ಪತ್ತೆಹಚ್ಚುವ ಎಲ್ಲ ಕಾರ್ಯಗಳು ವಿಫಲಗೊಂಡವು ಎಂದು ಹೇಳಿದ್ದಾರೆ.

    ನಂತರ ನಾನು ಸ್ವ ಪ್ರಯತ್ನದಿಂದಲೇ ಸಹ ಪ್ರಯಾಣಿಕನನ್ನು ಪತ್ತೆಹಚ್ಚಲು ಮುಂದಾಗಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರಿಂದ ಹ್ಯಾಕಿಂಗ್ ವಿಧಾನವನ್ನು ಬಳಸಿಕೊಂಡೆ. @INDIGO-6E ವೆಬ್‌ಸೈಟ್‌ನಲ್ಲಿ ಡೆವಲಪರ್ ಕನ್ಸೋಲ್ ಅನ್ನು ತೆರೆದು ನೆಟ್‌ವರ್ಕ್ ಲಾಗ್ ರೆಕಾರ್ಡ್ ಆನ್(SIC) ನಲ್ಲಿ ಸಂಪೂರ್ಣ ಚೆಕ್-ಇನ್ ಫ್ಲೋ ಪ್ರಾರಂಭಿಸಿದೆ. ಇದೇ ವೇಳೆ ಡೆವಲಪರ್ ಪರಿಕರಗಳ ಮೂಲಕ ಸಹ-ಪ್ರಯಾಣಿಕನನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ. ನನ್ನ ಬ್ಯಾಗ್ ಸಹ ಮರಳಿ ಪಡೆದುಕೊಂಡೆ ಎಂದು ವಿವರಿಸಿದ್ದಾರೆ.

    ಇದಾದ ನಂತರ ತಮ್ಮ ಗ್ರಾಹಕ ಸೇವೆಯನ್ನು ಸುಧಾರಿಸುವಂತೆ ಇಂಡಿಗೋಗೆ ಸಲಹೆಗಳನ್ನು ನೀಡಿದ್ದಾರೆ. ನಾದನ್ ಅವರ ಸನ್ನಿವೇಶ ಗಮನಿಸಿದ ಇಂಡಿಗೋ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ. ಇದೇ ವೇಳೆ ವೆಬ್‌ಸೈಟ್‌ಗೆ ಯಾವುದೇ ಭದ್ರತಾ ಲೋಪಗಳಿಲ್ಲ ಎನ್ನುವ ಭರವಸೆಯನ್ನೂ ನೀಡಿದೆ.

     

  • 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾದಲ್ಲಿ ಮಾರ್ದನಿಸಿದ ಟಾಟಾ ವೈಭವ

    67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾದಲ್ಲಿ ಮಾರ್ದನಿಸಿದ ಟಾಟಾ ವೈಭವ

    ನವದೆಹಲಿ: 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದುಕೊಂಡ ಬಳಿಕ ಇಂದು ವಿಮಾನ ಹೊರಡುವ ಮುನ್ನ ವಿಶೇಷ ಪ್ರಕಟನೆಯನ್ನು ಪೈಲಟ್ ಹೊರಡಿಸುವ ಮೂಲಕ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

    ಭಾರತ ಸರ್ಕಾರದ ಕೈಯಲ್ಲಿದ್ದ ಏರ್ ಇಂಡಿಯಾದ ನಿಯಂತ್ರಣವನ್ನು ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್ ಪಡೆದುಕೊಂಡಿತ್ತು. ಇಂದು ವಿಮಾನ ಹೊರಡುವ ಮುನ್ನ ಪ್ರಯಾಣಿಕರಲ್ಲಿ, ಆತ್ಮೀಯ ಅತಿಥಿಗಳೇ, ನಾನು ನಿಮ್ಮ ಕ್ಯಾಪ್ಟನ್… ಎಲ್ಲರಿಗೂ ಇತಿಹಾಸ ಪ್ರಸಿದ್ಧ ವಿಮಾನಕ್ಕೆ ಆಧಾರದ ಸ್ವಾಗತ ಇದು ತುಂಬಾ ವಿಶೇಷವಾದ ಪ್ರಯಾಣ. ಇದೀಗ ಏರ್ ಇಂಡಿಯಾ ಟಾಟಾ ಗ್ರೊಪ್‍ಗೆ 7 ದಶಕಗಳ ಬಳಿಕ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ನೀವೆಲ್ಲರೂ ಈ ಪ್ರಯಾಣವನ್ನು ಎಂಜಾಯ್ ಮಾಡುತ್ತೀರಿ ಅಂದುಕೊಂಡಿದ್ದೇವೆ ಥ್ಯಾಂಕ್ಯೂ ಎಂದು ಎಲ್ಲಾ ಏರ್ ಇಂಡಿಯಾ ವಿಮಾನ ಹೊರಡುವ ಮುನ್ನ ಪೈಲಟ್‍ಗಳು ಪ್ರಕಟನೆ ಹೊರಡಿಸಿದ್ದಾರೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದಕ್ಕೆ 1946ರಲ್ಲಿ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಸರ್ಕಾರವು 1,953 ರಲ್ಲಿ ಏರ್‌ಲೈನ್ಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಜೆಆರ್‌ಡಿ ಟಾಟಾ 1977ರವರೆಗೆ ಅದರ ಅಧ್ಯಕ್ಷರಾಗಿ ಮುಂದುವರಿದರು. ಸುಮಾರು 67 ವರ್ಷಗಳ ನಂತರ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ಪಡೆದುಕೊಂಡಿದೆ. ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರವು ಟಾಟಾ ಸನ್ಸ್‌ಗೆ ಮಾರಾಟ ಮಾಡಿದೆ. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು 18,000 ಕೋಟಿಗೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಿತ್ತು. ಅದಾದ ನಂತರ ವಿಮಾನಯಾನ ಸಂಸ್ಥೆಯಲ್ಲಿನ ತನ್ನ ಶೇ.100 ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಲು ಟಾಟಾ ಗ್ರೂಪ್ಸ್‌ಗೆ ಲೆಟರ್ ಆಫ್ ಇಂಟೆಂಟ್ (ಎನ್‍ಒಐ) ನೀಡಲಾಯಿತು. ನಂತರ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್‍ಗೆ ಸರ್ಕಾರ ಏರ್ ಇಂಡಿಯಾವನ್ನು ಒಪ್ಪಿಸಿದೆ. ಇದನ್ನೂ ಓದಿ: ಸೇನಾ ವಿಮಾನ ಪತನ – ಅಪಾಯದಿಂದ ಪಾರಾದ ಪೈಲಟ್‌ಗಳು

  • ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ

    ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ

    ನವದೆಹಲಿ: ಕೋವಿಡ್-19ನಿಂದಾಗಿ ಭಾರತದಲ್ಲಿ ಸಿಲುಕಿರುವ ಎಲ್ಲಾ ವಿದೇಶಿಗರ ವೀಸಾವನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.

    ಮಾರ್ಚ್ 2020ರಲ್ಲಿ ವಿವಿಧ ರೀತಿಯ ವೀಸಾ ಮೂಲಕ ಭಾರತಕ್ಕೆ ಬಂದ ಹಲವಾರು ವಿದೇಶಿಗರು ಕೊರೊನಾ ವೈರಸ್‍ನಿಂದಾಗಿ ತಮ್ಮ ದೇಶಗಳಿಗೆ ತಲುಪಲು ವಿಮಾನಗಳ ಅನುಪಸ್ಥಿತಿ ಕಾರಣ ಭಾರತದಲ್ಲಿಯೇ ಸಿಲುಕಿಕೊಂಡಿದ್ದರಿಂದ ವೀಸಾವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

    ಸೆಪ್ಟೆಂಬರ್ 30ರವರೆಗೂ ವೀಸಾ ವಿಸ್ತರಣೆಗಾಗಿ ಸಂಬಂಧಿಸಿದ ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಅರ್ಜಿಯನ್ನು ವಿದೇಶಿಗರು ಸಲ್ಲಿಸುವ ಅಗತ್ಯವಿಲ್ಲ. ಆದರೆ ನಿರ್ಗಮಿಸುವ ಮೊದಲು ಇ-ಎಫ್‌ಆರ್‌ಆರ್‌ಒ ಪೋರ್ಟಲ್‍ನಲ್ಲಿ ನಿರ್ಗಮನ ಅನುಮತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಶುಲ್ಕವನ್ನು ವಿಧಿಸದೇ ಉಚಿತವಾಗಿ ಆಧಾರದ ಮೇಲೆ ಸಂಬಂಧಿಸಿದ ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಅರ್ಜಿಯನ್ನು ನೀಡಲಾಗುವುದು ಮತ್ತು ಸೆಪ್ಟೆಂಬರ್ 30ರ ನಂತರ ವೀಸಾ ವಿಸ್ತರಣೆಯ ಅಗತ್ಯವಿದ್ದಲ್ಲಿ, ವಿದೇಶಿಗರು ಆನ್‍ಲೈನ್ ಇ-ಎಫ್‌ಆರ್‌ಆರ್‌ಒ ಪೋರ್ಟಲ್‍ನಲ್ಲಿ ವೀಸಾ ವಿಸ್ತರಣೆಗೆ ಪಾವತಿ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಇದನ್ನು ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಪರಿಗಣಿಸುತ್ತದೆ. ಇದನ್ನೂ ಓದಿ:ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

    ಈಗಾಗಲೇ ಭಾರತದಲ್ಲಿರುವ ಅಫ್ಘಾನಿಸ್ತಾನ ಪ್ರಜೆಗಳಿಗೆ ಪ್ರತ್ಯೇಕವಾಗಿ ನೀಡಲಾಗಿರುವ ಮಾರ್ಗ ಸೂಚಿಗಳ ಅಡಿಯಲ್ಲಿ ವೀಸಾ ವಿಸ್ತರಣೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ